ಸಾವಿಲ್ಲದ ಮನೆಯ ಸಾಸಿವೆ ಸಿಗೋದು ಎಷ್ಟು ಕಷ್ಟವೋ ಹಾಗೆಯೇ ಪಿಡಿಲೈಟ್ ಉತ್ಪನ್ನಗಳನ್ನ ಬಳಸದ ಮನೆ ಸಿಗೋದು ಅಷ್ಟೇ ಕಷ್ಟ ಇಂದಿನ ಫಾಸ್ಟ್ ಯುಗದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಈ ಪಿಡಿಲೈಟ್ ಕಂಪನಿಯ ಉತ್ಪನ್ನಗಳನ್ನ ಬಳಸಿದವರೇ ಹೀಗಾಗಿ ಪಿಡಿಲೈಟ್ ಸಮಸ್ತರ ಮನೆಯ ಕಾಯಂ ಅತಿಥಿ ಬಡಗಿತನ ಮಾಡುವ ಕುಶಲ ಕರ್ಮಿಗಳು ಫೆವಿಕಾಲ್ ಉಪಯೋಗಿಸಿದ್ರೆ ನಾವು ನೀವೆಲ್ಲ ನಿತ್ಯ ಫೆವಿಕಾಲ್ ಅನ್ನ ಮನೆಯಲ್ಲಿ ಉಪಯೋಗಿಸುತ್ತೇವೆ ನಿಮಗೆ ಆಶ್ಚರ್ಯವಾಗಬಹುದು ಹೀಗೆ ಸರ್ವವ್ಯಾಪಿಯಾಗಿರುವ ಈ ಕಂಪನಿಯನ್ನ ಸ್ಥಾಪಿಸಿದ್ದು ಒಬ್ಬ ಸರ್ವಸಾಧಾರಣವಾದ ಮಾಮೂಲಿ ಜವಾನ ಅವರ ಹೆಸರೇ ಬಲವಂತ್ ಪಾರೇಕ್ ಸದ್ಯ ಮಾರುಕಟ್ಟೆಯಲ್ಲಿ ಫೆವಿಕಾಲ್ ಕಂಪನಿಗೆ ಎದುರಾಳಿಗಳೇ ಇಲ್ಲ ಆದರೆ ಈ ಕಂಪನಿ ಶುರುವಾದಾಗ ಇದರ ಉತ್ಪನ್ನಗಳನ್ನ ಕೊಳ್ಳುವವರೇ ಇರಲಿಲ್ಲ ಆದರೆ ಬದಲಾದ ಸಮಯದಲ್ಲಿ ಫೆವಿಕಾಲ್ ಕಟ್ಟಿಗೆ ವಸ್ತುಗಳನ್ನ ಜೋಡಿಸಿದಂತೆ ಮನುಷ್ಯರ ಹೃದಯಗಳನ್ನ ತನ್ನತ್ತ ಸೆಳೆಯಿತು ತನ್ನ ಗುಣಮಟ್ಟದ ಉತ್ಪನ್ನ ವಿಶ್ವಾಸಾರ್ಹ ನಡೆಯಿಂದಾಗಿ ಇಂದು ಭಾರತೀಯ ಗ್ರಾಹಕರ ಹೃದಯದಲ್ಲಿ ಸ್ಥಾನ ಪಡೆದಿದೆ ಇಂದಿನ ಈ ವಿಡಿಯೋದಲ್ಲಿ ಫೆವಿಕಾಲ್ ಕಂಪನಿಯ ಯಶಸ್ಸು ಹಾಗೂ ಅದರ ಸಾಹಸಮಯ ಜರ್ನಿಯನ್ನ ನೋಡೋಣ ಸ್ನೇಹಿತರೆ 1925ರಲ್ಲಿ ಬಲವಂತ ಪಾರೇಕ್ ಜನನದೊಂದಿಗೆ ಫೆವಿಕಾಲ್ ಸಂಸ್ಥೆಯ ಜರ್ನಿ ಶುರುವಾಯಿತು ಗುಜರಾತ್ನ ಮಹೂಬ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ್ದ ಬಲವಂತ ಪಾರೇಕ್ ಚಿಕ್ಕಂದಿನಿಂದಲೂ ಪ್ರತಿಭಾವಂತರಾಗಿದ್ದರು ಅವರ ಅಜ್ಜ ಮ್ಯಾಜಿಸ್ಟ್ರೇಟ್ ಆಗಿದ್ದರು ಹೀಗಾಗಿ ತಾನು ಅವರಂತೆ ಕಾನೂನು ಕ್ಷೇತ್ರದಲ್ಲೇ ದೊಡ್ಡ ಹುದ್ದೆಗೇರಬೇಕು ಅನ್ನೋದು ಅವರ ಕನಸಾಗಿತ್ತು ಶಾಲಾ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣದ ಬಳಿಕ ಬಲವಂತ ಪಾರೇಕ್ ಕಾನೂನು ಪದವಿ ವಿದ್ಯಾಭ್ಯಾಸಕ್ಕಾಗಿ ಮುಂಬೈನ ಸರ್ಕಾರಿ ಲಾ ಕಾಲೇಜು ಸೇರಿಕೊಂಡರು ಈ ವೇಳೆ ದೇಶದಲ್ಲಿ ಬ್ರಿಟಿಷ್ ಆಳ್ವಿಕೆ ಇತ್ತು ಬ್ರಿಟಿಷರು ತಮ್ಮ ಚಿತ್ರ ವಿಚಿತ್ರ ಕಾಯ್ದೆ ಕಾನೂನುಗಳ ಮೂಲಕ ಜನರನ್ನ ಪೀಡಿಸುತ್ತಿದ್ದರು ದೇಶದಾದ್ಯಂತ ಸ್ವತಂತ್ರೀಯ ಹೋರಾಟದ ರಣಕಹಳೆ ಮೊಳಗಿತ್ತು ಮಹಾತ್ಮಾ ಗಾಂಧೀಜಿ ಭಾರತ ಬಿಟ್ಟು ತೊಲಗಿ ಚಳುವಳಿಗೆ ಕರೆಕೊಟ್ಟಿದ್ದರು ಹೀಗೆ ಹಗೆ ಸಂದಿಗ್ದ ಸಮಯದಲ್ಲೇ ಲಾ ಕಾಲೇಜಿಗೆ ಪ್ರವೇಶ ಪಡೆದಿದ್ದ ಬಲವಂತ ಪಾರೇಕ್ ಓದನ್ನ ಅರ್ಧಕ್ಕೆ ಬಿಟ್ಟು ಈ ಚಳುವಳಿಗೆ ತುಮಕಿದ್ರು ಒಂದು ವರ್ಷದ ಬಳಿಕ ಅವರಿಗೆ ಯೋಚನೆಯೊಂದು ಬಂತು ಒಂದುವೇಳೆ ತಾನು ಓದಿ ಒಳ್ಳೆಯ ಹುದ್ದೆಯ ಕೆಲಸದಲ್ಲಿದ್ದರೆ ಜನರಿಗೆ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಬಹುದು ಅಂದುಕೊಂಡರು ಅಂತೆಯೇ ಮುಂಬೈಗೆ ವಾಪಸ್ ಆಗಿ ಮತ್ತೆ ತಮ್ಮ ಕಾನೂನು ಓದು ಮುಂದುವರಿಸಿದ್ರು ಕಾನೂನು ಪದವಿ ಓದುವ ಸಂದರ್ಭದಲ್ಲೇ ಕಾಂತ ಬಹೇಣರೊಂದಿಗೆ ಮದುವೆ ಕೂಡ ನೆರವೇರಿತು ಸಂಸಾರ ಸಾರದ ಜವಾಬ್ದಾರಿಗೆ ಬಿದ್ದ ಬಲವಂತ ಪಾರೇಕರಿಗೆ ದುಡಿಮೆ ಅನಿವಾರ್ಯವಾಯಿತು ಹೀಗಾಗಿ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದರು ಆದರೆ ಇಡೀ ತಿಂಗಳೆಲ್ಲ ದುಡಿದರು ಅವರಿಗೆ ಕುಟುಂಬದ ಪ್ರಾಥಮಿಕ ಅವಶ್ಯಕತೆ ಪೂರೈಸುವಷ್ಟು ಸಹ ಹಣ ಸಿಗುತ್ತಿರಲಿಲ್ಲ ಹೀಗಾಗಿ ಕುಟುಂಬ ನಿರ್ವಹಣೆಯೇ ದೊಡ್ಡ ಸವಾಲಾಗಿತ್ತು.
ಈ ಸಮಸ್ಯೆ ಸಂಕಟಗಳ ಮಧ್ಯೆಯೇ ಬಲವಂತ ಕಾನೂನು ಪದವಿ ಪೂರೈಸಿದರು ಅಂತೂ ಇಂತೂ ಪತಿ ಲಾ ಪದವಿ ಪಡೆದಾಯಿತು ಇನ್ನೇನು ತಮ್ಮ ಬದುಕು ಹಳಿಗೆ ಬರಲಿದೆ ಅಂತಾನೆ ಬಲವಂತ ಪತ್ನಿ ಕಾಂತ ಬೆಹೆನ್ ಅಂದುಕೊಂಡಿದ್ದರು ಆದರೆ ಆಗಿದ್ದೆ ಬೇರೆ ಬಲವಂತ ಪಾರೇಕ್ ಮೊದಲನಿಂದಲೂ ಆದರ್ಶಗಳನ್ನ ಪಾಲಿಸಿಕೊಂಡು ಬಂದಿದ್ದರು ಸುಳ್ಳು ಹೇಳುವುದು ದೊಡ್ಡ ಅಪರಾಧವೆಂದೆ ಪರಿಗಣಿಸಿದ್ದರು ಆದರೆ ವಕೀಲಿ ವೃತ್ತಿ ಮಾಡಬೇಕಾದರೆ ಕೊಂಚಮಟ್ಟಿಗೆ ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲೇಬೇಕಿತ್ತು ತಮ್ಮ ಕಾನೂನಿನ ಓದಿನ ವೇಳೆ ಈ ಸತ್ಯ ಅವರ ಅರಿವಿಗೆ ಬಂದಿತ್ತು ಹೀಗಾಗಿ ತಾವು ವಕಾಲತ್ತು ನಡೆಸುವ ಕೆಲಸ ಮಾಡಲಾರೆ ಅಂತ ಬಲವಂತ ಪಾರೇಕ ದೃಢವಾಗಿ ನಿಶ್ಚಯಿಸಿದ್ದರು ತಮ್ಮ ಜೀವನದ ಮೌಲ್ಯಗಳಿಗಾಗಿ ವಕೀಲಿಗಿರಿಯನ್ನೇ ಬಿಟ್ಟುಕೊಟ್ಟಿದ್ದರು ಬಲವಂತ್ ಪಾರೆ ಹೀಗೆ ಬದುಕಿನ ತಿರುವಿನಲ್ಲಿ ನಿಂತಿದ್ದ ಬಲವಂತಿಗೆ ಕುಟುಂಬ ನಿರ್ವಹಣೆಗೆ ಕೆಲಸ ಮಾಡುವುದು ತೀರ ಅನಿವಾರ್ಯವಾಗಿತ್ತು ಹೀಗಾಗಿ ಮತ್ತೆ ಕೆಲಸ ಹುಡುಕುವ ಯತ್ನ ಆರಂಭಿಸಿದ್ರು ಅವರಿಗೆ ಕಟ್ಟಿಗೆ ಮಾರುವ ಅಂಗಡಿಯೊಂದರಲ್ಲಿ ಜವಾನನ ಕೆಲಸ ಸಿಕ್ಕಿತ್ತು ಅವರ ಆರ್ಥಿಕ ಸ್ಥಿತಿ ಅದೆಷ್ಟು ಹದಗೆಟ್ಟಿತ್ತು ಅಂದರೆ ಮನೆಯ ಬಾಡಿಗೆ ಪಾವತಿಸುವುದು ಕೂಡ ಕಷ್ಟವಾಗಿತ್ತು ಹೀಗಾಗಿ ಈ ಕಟ್ಟಿಗೆಯ ಗೋದಾಮಿನಲ್ಲಿಯೇ ಇರಬೇಕಾದ ಸ್ಥಿತಿ ಎದುರಾಗಿತ್ತು ಈ ಗೋದಾಮಿನಲ್ಲಿ ಜೀವನ ನಡೆಸುತ್ತಿದ್ದಾಗಲೇ ಅವರಿಗೆ ಅಲ್ಲಿನ ಕೆಲಸಗಳ ಬಗ್ಗೆ ಅರಿವು ಬರಲು ಪ್ರಾರಂಭಿಸಿತು ಈ ಕಟ್ಟಿಗೆ ಉದ್ಯಮದಲ್ಲಿ ಅಂಟು ರಾಳವನ್ನ ಯತೇಚ್ಛವಾಗಿ ಬಳಸಲಾಗುತ್ತಿತ್ತು ಅಂದರೆ ಕಟ್ಟಿಗೆ ವಸ್ತುಗಳನ್ನ ಪರಸ್ಪರ ಜೋಡಿಸಲು ಇದನ್ನ ಉಪಯೋಗಿಸಲಾಗುತ್ತಿತ್ತು ಈ ಅಂಟು ರಾಳವನ್ನ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು ಹೀಗಾಗಿ ಬೆಲೆ ತುಸು ಜಾಸ್ತಿಯೇ ಇರ್ತಾ ಇತ್ತು ಜೊತೆಗೆ ಗುಣಮಟ್ಟ ಕೂಡ ಹೇಳಿಕೊಳ್ಳುವಂತಿರಲಿಲ್ಲ ಇನ್ನು ಪರ್ಯಾಯವಾಗಿ ಗೋಧಿಹಿಟ್ಟು ಅಥವಾ ಅಕ್ಕಿ ಗಂಜಿಯನ್ನ ರಾಳವಾಗಿ ಬಳಸಲಾಗ್ತಾ ಇತ್ತು ಇದು ಪೇಪರ್ ವಸ್ತುಗಳನ್ನ ಅಂಟಿಸಲು ಮಾತ್ರ ಸೀಮಿತವಾಗಿತ್ತು ಕಟ್ಟಿಗೆಯ ತುಂಡು ಅಥವಾ ಫರ್ನಿಚರ್ ಕೆಲಸಗಳಿಗೆ ಪ್ರಾಣಿಗಳ ಎಲುಬುಗಳಿಂದ ಮಾಡಲಾದ ವಿಶಿಷ್ಟ ಅಂಟು ದ್ರವಗಳನ್ನ ಬಳಸಲಾಗುತ್ತಿತ್ತು ಆದರೆ ಈ ಪ್ರಾಣಿಜನ್ಯ ದ್ರವವನ್ನ ಬಳಸುವುದು ತಯಾರಿಸುವುದು ಎರಡು ಕಷ್ಟವಿತ್ತು ಮೊದಲಿಗೆ ಇದರ ತಯಾರಿಕೆ ಪ್ರಕ್ರಿಯೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾ ಇತ್ತು ಜೊತೆಗೆ ಇದನ್ನ ಪ್ರತಿಬಾರಿ ಬಳಸುವಾಗಲೂ ಬಿಸಿ ಮಾಡಬೇಕಿತ್ತು ಇದಲ್ಲದೆ ಇದನ್ನ ತಯಾರಿಸ ಸುವಾಗ ಹಾಗೂ ಬಳಸುವಾಗ ಯಮಯಾತನೆ ತರುವ ಕೆಟ್ಟ ವಾಸನೆ ಬರುತ್ತಿತ್ತು ಮತ್ತೊಂದು ಸಂಗತಿ ಅಂದರೆ ಪ್ರಾಣಿಗಳ ಮೂಳೆಗಳಿಂದ ಇದನ್ನ ತಯಾರಿಸುತ್ತಿದ್ದರಿಂದ ಶುದ್ಧ ಶಾಖಾಹಾರಿಗಳು ಇದರ ಬಳಕೆಗೆ ಹಿಂದೇಟು ಹಾಕುತ್ತಿದ್ದರು ಹೀಗೆ ಅಂಟಿನ ಕುರಿತಂತೆ ಇಷ್ಟೊಂದು ಸಮಸ್ಯೆಗಳನ್ನ ಕಣ್ಣಾರೆ ಕಂಡ ಬಲವಂತ ಪಾರೇಕೆಗೆ ಯೋಚನೆಯೊಂದು ಹೊಳೆಯುತ್ತೆ ತಾವ್ಯಾಕೆ ಬಳಕೆಗೆ ಸುಲಭವಾದ ಸದೃಢವಾದ ಹಾಗೂ ನೈರ್ಮಲ್ಯಕ್ಕೆ ಹಿತಕರವಾದ ಅಂಟು ತಯಾರಿಸಬಾರದು ಎನ್ನುವ ಚಿಂತನೆ ಬಂದಿತು ಆದರೆ ಈ ಕೆಲಸ ಅಂದುಕೊಂಷ್ಟು ಸುಲಭವಿರಲಿಲ್ಲ ಅಸಲಿಗೆ ಈ ಉತ್ಪನ್ನದ ಬಗ್ಗೆ ಸಂಶೋಧನೆ ಮಾಡಬೇಕಿತ್ತು ಜೊತೆಗೆ ಇದರ ಉತ್ಪಾದನಾ ಘಟಕ ಸ್ಥಾಪಿಸಲು ಸಾವಿರಾರು ರೂಪಾಯಿಗಳ ಬಂಡವಾಳ ಬೇಕಿತ್ತು ಆದರೆ ಆಗಿನ ಸನ್ನಿವೇಶದಲ್ಲಿ ಬಲವಂತ ಪಾರೇಕ್ ಅವರ ಬಳಿ ಬಿಡಿಗಾಸು ಸಹ ಇರಲಿಲ್ಲ ಕೆಲ ದಿನಗಳ ಬಳಿಕ ಮೋಹನ್ ಎಂಬ ಹೂಡಿಕೆದಾರರ ಜೊತೆ ಭೇಟಿಯಾದ ಬಲವಂತ್ ಜಂಟಿಯಾಗಿ ಉದ್ಯಮವಂದನ್ನ ನಡೆಸುವ ನಿರ್ಧಾರಕ್ಕೆ ಬರ್ತಾರೆ 1950ರಲ್ಲಿ ಬಲವಂತ ಪಾರೇಕ್ ವಿದೇಶಗಳಿಂದ ಸೈಕಲ್ ರಸಾಯನಿಕ ಪದಾರ್ಥ ಅಡಿಕೆ ಹಾಗೂ ಬಣ್ಣಗಳನ್ನ ಆಮದು ಮಾಡಿಕೊಂಡು ಮಾರಾಟ ಮಾಡಲು ಪ್ರಾರಂಭಿಸಿದ್ರು ಈ ಆಮದು ಉದ್ಯಮದಿಂದ ಅವರ ಹಣಗಳಿಕೆ ಪ್ರಾರಂಭವಾಯಿತು ಅವರ ಆರ್ಥಿಕ ಸ್ಥಿತಿಯು ಸುಧಾರಿಸಿತು.
ಈ ದುಡ್ಡು ಬರುತ್ತಿದ್ದಂತೆಯೇ ಮುಂಬೈನ ಸಿಯಾನ್ ಪ್ರದೇಶದಲ್ಲಿ ಚಿಕ್ಕದಾದ ಮನೆಯೊಂದನ್ನ ಖರೀದಿ ಮಾಡುತ್ತಾರೆ ಇಲ್ಲಿಂದ ಶುರುವಾಗುತ್ತದೆ ಬಲವಂತ ಪಾರೇಕ್ ಅವರ ಅಸಲಿ ಕಹಾನಿ ಸ್ನೇಹಿತರೆ ಬಲವಂತ ಪಾರೇಕ್ ರಾಸಾಯನಿಕ ವಸ್ತುಗಳನ್ನ ಹಾಗೂ ಬಣ್ಣಗಳನ್ನ ಆಮದು ಮಾಡಿಕೊಂಡು ಮಾರಾಟ ಮಾಡುವ ಬಿಸಿನೆಸ್ ಅನ್ನ ಜೋರಾಗಿಯೇ ನಡೆಸಿದ್ದರು ಈ ವೇಳೆ ಜರ್ಮನಿಯ ಫೆಡಕೋ ಕಂಪನಿ ಜೊತೆ ಪಾಲುದಾರಿಕೆ ಒಪ್ಪಂದವನ್ನ ಮಾಡಿಕೊಳ್ಳುತ್ತಾರೆ ಅಸಲಿಗೆ ಈ ಫೆಡಕೋ ಕಂಪನಿ ಯಾವುದೇ ರಾಸಾಯನಿಕಗಳನ್ನ ಉತ್ಪಾದಿಸುತ್ತಿರಲಿಲ್ಲ ಬದಲಾಗಿ ಮಧ್ಯಸ್ಥಿಕೆ ಕಂಪನಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು ಪೋರ್ಚಸ್ಟ್ ಕಂಪನಿ ರಾಸಾಯನಿಕಗಳನ್ನ ಉತ್ಪಾದಿಸಿ ಫೆಡಕೋಗೆ ನೀಡ್ತಾ ಇತ್ತು ಈ ಫೆಡಕೋ ಕಂಪನಿ ಅವುಗಳನ್ನ ಬಲವಂತ ಪಾರೇಕ್ ಅವರಿಗೆ ಮಾರಾಟ ಮಾಡ್ತಾ ಇತ್ತು 1950ರ ಕಾಲಘಟ್ಟದಲ್ಲಿ ಭಾರತದಲ್ಲಿ ಜವಳಿ ಉದ್ಯಮ ಬಹಳ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದಿತ್ತು ಹೀಗಾಗಿ ಬಣ್ಣ ಹಾಗೂ ರಾಸಾಯನಿಕಗಳಿಗೆ ಭಾರಿ ಮಟ್ಟದ ಬೇಡಿಕೆ ಇತ್ತು. ಹೋಯಿಸ್ಟ್ ಕಂಪನಿ ಭಾರತದಿಂದ ಸಾಕಷ್ಟು ಲಾಭ ಮಾಡಿಕೊಂಡಿತ್ತು. ಇದರಿಂದ ಪ್ರಭಾವಿತರಾದ ಹೋಯೆಸ್ಟ್ ಕಂಪನಿಯ ಎಂಡಿ 1954 ರಲ್ಲಿ ಬಲವಂತ್ ಅವರನ್ನ ಜರ್ಮನಿಗೆ ಆಹ್ವಾನಿಸಿದ್ರು. ಅಂತೆಯೇ ಜರ್ಮನಿಗೆ ಹೋದ ಬಲವಂತ ಬರೋಬ್ಬರಿ ಒಂದು ತಿಂಗಳ ಕಾಲ ಅಲ್ಲೇ ಇದ್ದು ಹೋಯಿಸ್ಟ್ ಕಂಪನಿ ಉತ್ಪಾದನೆಯಲ್ಲಿ ಬಳಸುತ್ತಿದ್ದ ವಿಧಾನ ಹೊಸ ತಾಂತ್ರಿಕತೆ ಹಾಗೂ ಕಂಪನಿಯ ಉತ್ಪನ್ನಗಳ ಬಗ್ಗೆ ಪ್ರಾಯೋಗಿಕ ಅಧ್ಯಯನ ನಡೆಸಿದ್ರು ಕುದ್ದು ಪ್ರಯೋಗಾಲಯದಲ್ಲಿ ಕುಳಿತು ಆ ಕಂಪನಿ ನಡೆಸುತ್ತಿದ್ದ ಸಂಶೋಧನೆ ಎಕ್ಸ್ಪೆರಿಮೆಂಟ್ಗಳನ್ನ ನೋಡಿದ್ರು ಅದೇವೇಳೆ ಹೋಯೆಸ್ಟ್ ಕಂಪನಿ ಅಂಟಿಗೆ ಸಂಬಂಧಿಸಿದ ವಿಶಿಷ್ಟ ಉತ್ಪನ್ನ ಮೋವಿಕೋಲ್ ಅನ್ನ ತಯಾರಿಸಿತ್ತು ಇದು ಕಟ್ಟಿಗೆಗೆ ಸಂಬಂಧಿಸಿದ ವಸ್ತುಗಳನ್ನ ಸುಲಭವಾಗಿ ಜೋಡಿಸುತ್ತಿತ್ತು ಜೊತೆಗೆ ಬಳಕೆಗೂ ಬಹಳ ಸುಲಭವಿತ್ತು ಅಲ್ಲದೆ ಯಾವುದೇ ಕೆಟ್ಟ ವಾಸನೆ ಇರಲಿಲ್ಲ ಆದರೆ ಈ ಉತ್ಪನ್ನವನ್ನ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಿದರೆ ಇದರ ಬೆಲೆ ದುಪ್ಪಟ್ಟಾಗುತ್ತಿತ್ತು ಹೀಗಾಗಿ ಇದು ಜನಸಾಮಾನ್ಯರ ಕೈಗೆ ಎಟಕುತ್ತಿರಲಿಲ್ಲ ಈ ಸಮಸ್ಯೆಯನ್ನ ಮನಗಂಡ ಬಲವಂತ ಪಾರೇಕ್ ದೇಶೀಯವಾಗಿ ಇದನ್ನ ತಯಾರಿಸಿ ಮಾರಾಟ ಮಾಡಲು ಯೋಜನೆ ರೂಪಿಸುತ್ತಾರೆ 1954 ರಲ್ಲಿ ಸಹೋದರ ಸುನಿಲ್ ಪಾರೇಕ್ ಜೊತೆ ಸೇರಿಕೊಂಡು ಮುಂಬೈನ ಜಾಕೋಬ್ ಸರ್ಕಲ್ ಬಳಿ ಚಿಕ್ಕದಾದ ಕಾರ್ಖಾನೆಯನ್ನ ಆರಂಭಿಸಲಾಯಿತು ಕಂಪನಿಗೆ ಪಾರೇಕ್ ಡೈಕೆಮ್ ಇಂಡಸ್ಟ್ರೀಸ್ ಅಂತ ಹೆಸರಿಡಲಾಯಿತು ಜರ್ಮನಿಯಲ್ಲಿ ಹೋಯೆಸ್ಟ್ ಕಂಪನಿ ತಯಾರಿಸುತ್ತಿದ್ದ ಅಂಟಿನಂತೆಯೇ ಅದೇ ವಿಧಾನಗಳನ್ನ ಅನುಸರಿಸಿ ದೇಶೀಯ ಅಂಟು ಉತ್ಪಾದಿಸಲಾಯಿತು ಇದಕ್ಕೆ ಫೆವಿಕಾಲ್ ಅಂತ ಹೆಸರಿಡಲಾಯಿತು ಫೋವಿಕಾಲ್ ನಿಂದ ಪ್ರಭಾವಿತವಾಗಿ ಈ ಉತ್ಪನ್ನ ಉತ್ಪಾದಿಸಿದ್ದರಿಂದ ಈ ಬ್ರಾಂಡ್ಗೆ ಫೆವಿಕಾಲ್ ಅಂತ ಹೆಸರಿಸಲಾಗಿತ್ತು ಅಲ್ಲದೆ ಕೋಲ್ ಎಂದರೆ ಜೋಡಿಸುವುದು ಎಂದರ್ಥ ಹೀಗಾಗಿ ಈ ಹೆಸರನ್ನ ಅನ್ವರ್ತಕವಾಗಿ ಬಳಸಲಾಯಿತು ಹೀಗೆ ರೆಡಿಯಾದ ಫೆವಿಕಾಲ್ ಉತ್ಪನ್ನವನ್ನ 1959 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಅದೇವೇಳೆ ಕಂಪನಿಯ ಹೆಸರನ್ನ ಸಹ ಪೆಡಿಲೈಟ್ ಇಂಡಸ್ಟ್ರೀಸ್ ಅಂತ ಬದಲಾಯಿಸಲಾಯಿತು ಆರಂಭದಲ್ಲಿ ಮರದಿಂದ ಮಾಡಿದ ವಸ್ತುಗಳನ್ನ ಜೋಡಿಸಲು ಈ ಫೆವಿಕಾಲ್ ಗ್ಲೂ ಅನ್ನ ಪ್ರಮೋಟ್ ಮಾಡಲಾಯಿತು ವಿಶೇಷವಾಗಿ ಪೀಠೋಪಕರಣ ಉದ್ಯಮಕ್ಕೆ ಇದು ಹೇಳಿ ಮಾಡಿಸಿದಂತಿತ್ತು ಆದರೆ ಈ ಉತ್ಪನ್ನವನ್ನ ಜನಸಾಮಾನ್ಯರಿಗೆ ತಲುಪಿಸುವುದು ಬಹಳ ಕಷ್ಟದ ಕೆಲಸವಾಗಿತ್ತು ಬಹುತೇಕ ಕುಶಲ ಕರ್ಮಿಗಳು ಸ್ಥಳೀಯವಾಗಿ ತಾವೇ ತಯಾರಿಸಿದ ಅಂಟು ಬಳಸುತ್ತಿದ್ದರು ಅಲ್ಲದೆ ಈ ಹೊಸ ಫೆವಿಕಾಲ್ ಗ್ಲೂ ಅಷ್ಟು ಪರಿಣಾಮಕಾರಿಯಾಗಿರಲಿಕ್ಕಿಲ್ಲ ಎನ್ನುವ ಸಂದೇಹ ವ್ಯಕ್ತಪಡಿಸುತ್ತಿದ್ದರು ಇನ್ನು ಕೆಲ ದೊಡ್ಡ ಪೀಠೋಪಕರಣ ಉದ್ಯಮಗಳು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಗ್ಲೂ ಬಳಸುತ್ತಿದ್ದವು ಅವರ ಪ್ರಕಾರ ಫೆವಿಕಾಲ್ ಗ್ಲೂ ಲೋಕಲ್ ಬ್ರಾಂಡ್ ಆಗಿದ್ದು ಸರಿ ಇರಲ್ಲ ಎನ್ನುವ ಮನೋಭಾವನೆ ಇತ್ತು ಇನ್ನು ಈ ಉತ್ಪನ್ನದ ಕುರಿತು ಟಿವಿ ರೇಡಿಯೋಗಳಲ್ಲಿ ಜಾಹಿರಾತು ಮೂಲಕ ಪ್ರಚಾರ ಮಾಡುವಷ್ಟು ವ್ಯವಸ್ಥೆ ಇರಲಿಲ್ಲ ಇಂತಹ ಸಮಯದಲ್ಲಿ ಬಲವಂತ ಒಂದು ಹೊಸ ವಿಧಾನ ಕಂಡುಕೊಳ್ಳುತ್ತಾರೆ ಕುದ್ದು ಅಕಾಡಕ್ಕಿಳಿದು ಸಣ್ಣ ಸಣ್ಣ ಬಡಗಿತ್ತನ ಮಾಡುವ ಅಂಗಡಿಗಳಿಗೆ ಹೋಗಿ ತಮ್ಮ ಉತ್ಪನ್ನದ ಕುರಿತು ವಿವರಿಸ ತೊಡಗಿದ್ದರು ಅಲ್ಲದೆ ಉತ್ಪನ್ನದ ಸ್ಯಾಂಪಲ್ಸ್ ಕೂಡ ನೀಡಿ ಬರುತ್ತಿದ್ದರು ಅಲ್ಲದೆ ಇದನ್ನ ಹೇಗೆ ಉಪಯೋಗಿಸಬೇಕು ಎನ್ನುವುದನ್ನ ಕೂಡ ಹೇಳಿ ಬರುತ್ತಿದ್ದರು ಇದರ ಜೊತೆಗೆ ಜನಸಾಮಾನ್ಯರು ಖರೀದಿಸಲು ಅನುವಾಗುವಂತೆ ಚಿಕ್ಕ ಚಿಕ್ಕ ಫೆವಿಕಾಲ್ ಗ್ಲೂ ಡಬ್ಬಿಗಳನ್ನ ಮಾರಾಟಕ್ಕೆ ಬಿಟ್ಟರು ಇಷ್ಟೆಲ್ಲ ಪ್ರಯತ್ನಗಳ ಬಳಿಕವು ಕಂಪನಿಗೆ ಯಾವುದೇ ಲಾಭವಾಗಲಿಲ್ಲ ಹಾಗಂತ ಬಲವಂತ ಪಾರೇಕ್ ಸೋಲನ್ನ ಒಪ್ಪಿಕೊಳ್ಳಲಿಲ್ಲ ಮತ್ತಷ್ಟು ಪ್ರಯತ್ನ ಹಾಕಿದ್ರು ಕಂಪನಿವತಿಯಿಂದ ಕುಶಲ ಕರ್ಮಿಗಳಿಗೆ ಡೆಮೊನ್ಸ್ಟ್ರೇಷನ್ ವರ್ಕ್ ಶಾಪ್ಗಳನ್ನ ಆಯೋಜಿಸಿ ಫರ್ನಿಚರ್ ಮಾಡುವ ಕೆಲಸಗಾರಿಗೆ ತಿಳುವಳಿಕೆ ನೀಡಿದ್ರು ಜೊತೆಗೆ ಹೀಗೆ ತರಬೇತಿ ಶಿಬಿರಗಳಲ್ಲಿ ಭಾಗಿಯಾಗುವ ಕಾರ್ಪೆಂಟರ್ಗಳಿಗೆ ಉಚಿತವಾಗಿ ಸ್ಯಾಂಪಲ್ಸ್ ನೀಡಿದ್ರು ಬಲವಂತವರ ಈ ಟ್ರಿಕ್ಸ್ ವರ್ಕ್ೌಟ್ ಆಗಿತ್ತು ಕುಶಲ ಕರ್ಮಿಗಳು ಫೆವಿಕಾಲ್ ಗ್ಲೂ ಬಳಕೆ ಮಾಡುತ್ತಲೆ ಅದರ ಗುಣಮಟ್ಟ ಹಾಗೂ ವಿಶಿಷ್ಟತೆಗೆ ಮಾರುಹೋಗ್ತಾರೆ ಈ ಯತ್ನದ ಮೂಲಕ ಫೆವಿಕಾಲ್ ಗ್ಲೂ ಮಾರಾಟ ದಿನೇ ದಿನೆ ಹೆಚ್ಚುತ್ತಾ ಹೋಯಿತು.
ಫೆವಿಕಾಲ್ ಉತ್ಪನ್ನ ಜನಮಂಡನೆ ಗಳಿಸುತ್ತಿತ್ತು ನಿಜ ಆದರೆ ಕಂಪನಿಯ ಸಮಸ್ಯೆಗಳೇನು ಕಡಿಮೆಯಾಗಿರಲಿಲ್ಲ ಈ ಉತ್ಪನ್ನವೇನು ಕಟ್ಟಿಗೆಯ ತುಂಡುಗಳ ನಡುವೆ ಕೆಲಸ ಮಾಡುತ್ತಿತ್ತು ಆದರೆ ಲೋಹ ಪ್ಲಾಸ್ಟಿಕ್ ಅಂಟಿಸುವ ಕೆಲಸಗಳಿಗೆ ಈ ಫಾರ್ಮುಲಾ ಉಪಯೋಗಕ್ಕೆ ಬರುತ್ತಿರಲಿಲ್ಲ ಜೊತೆಗೆ ಬೇಸಿಗೆಯಲ್ಲಿ ಅತಿಯಾದ ಉಷ್ಣಾಂಶದ ಕಾರಣ ಇದು ಸರಿಯಾಗಿ ಅಂಟುತ್ತಿರಲಿಲ್ಲ ಇದು ಸಹಜವಾಗಿಯೇ ಉತ್ಪನ್ನದ ಮಾರಾಟದ ಮೇಲೂ ಕೂಡ ನಕಾರಾತ್ಮಕ ಪರಿಣಾಮ ಬೀರಲು ಶುರುವಾಯಿತು ಹೀಗಾಗಿ ಈ ಸಮಸ್ಯೆಯನ್ನ ಬಗೆಹರಿಸುವ ನಿಟ್ಟಿನಲ್ಲಿ ಬಲವಂತ ಚಿತ್ತ ನೆಟ್ಟರು ತಮ್ಮ ಉತ್ಪನ್ನವನ್ನ ಮತ್ತಷ್ಟು ಗ್ರಾಹಕ ಸ್ನೇಹಿ ಹಾಗೂ ಸರ್ವ ಉಪಯೋಗಿ ಮಾಡಲು ಮುಂದಾಗುತ್ತಾರೆ ಇದಕ್ಕಾಗಿ ಕಂಪನಿ ಉತ್ಪನ್ನದ ಮರುವಿನ್ಯಾಸ ಹಾಗೂ ಸಂಶೋಧನೆಗಾಗಿ ಸಾಕಷ್ಟು ಹಣ ಹೂಡಲಾಯಿತು ಈ ಪ್ರಯತ್ನದ ಫಲ ಎನ್ನುವಂತೆ ಸಂಸ್ಥೆ ಫೆವಿಕಾಲ್ ಗ್ಲೂನಲ್ಲಿ ಸ್ಥಿರತೆ ತಂದಿತು ಅಲ್ಲದೆ ವಿವಿಧ ಜನರ ಅಗತ್ಯಕ್ಕೆ ತಕ್ಕಂತೆ ಉತ್ಪನ್ನಗಳಲ್ಲಿ ವೈವಿಧ್ಯತೆ ತರಲಾಯಿತು 1980 ರಲ್ಲಿ ಗ್ರಾಹಕರ ದೂರಿನ ಮೇರೆಗೆ ಸುಧಾರಿಸಲ್ಪಟ್ಟು ಫೆವಿಕಾಲ್ ಎಂಆರ್ ಎನ್ನುವ ಮತ್ತೊಂದು ವೆರೈಟಿ ಉತ್ಪನ್ನವನ್ನ ಮಾರುಕಟ್ಟೆಗೆ ಬಿಡಲಾಯಿತು 1985ರಲ್ಲಿ ಸಂಸ್ಥೆ ಮತ್ತೊಂದು ವಿಶಿಷ್ಟ ಹಾಗೂ ತೀರಾ ಜನಸಾಮಾನ್ಯರಿಗೆ ಉಪಯೋಗಿ ಎನಿಸುವ ಫೆವಿಕ್ ಕ್ವಿಕ್ ಎನ್ನುವ ಉತ್ಪನ್ನವನ್ನ ಪರಿಚಯಿಸಿತು ಇದು ಕೇವಲ ಕಟ್ಟಿಗೆ ವಸ್ತುಗಳನ್ನಷ್ಟೇ ಅಲ್ಲದೆ ಲೋಹ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನ ಸಹ ಸುಲಭವಾಗಿ ಜೋಡಿಸುತ್ತಿತ್ತು ಇನ್ನು ಇದಿಷ್ಟೇ ಅಲ್ಲದೆ ಮಾಳಿಗೆಯ ನೀರು ಸೋರಿಕೆಯ ಸಮಸ್ಯೆಗಳಿಗೆ ಪರಿಹಾರ ಎನ್ನುವಂತೆ ಡಾಕ್ಟರ್ ಫಿಕ್ಸಿಟ್ ಎನ್ನುವ ಉತ್ಪನ್ನವನ್ನ ಪರಿಚಯಿಸಲಾಯಿತು ಹೀಗೆ ಸಂಸ್ಥೆ ಹಲವಾರು ವೆರೈಟಿ ಉತ್ಪನ್ನಗಳನ್ನ ಮಾರುಕಟ್ಟೆಗೆ ಪರಿಚಯಿಸಿತು ಪ್ರಸ್ತುತ ಪೆಡಿಲೈಟ್ ಸಂಸ್ಥೆ ತಮ್ಮ ಪ್ರಯೋಗಾತ್ಮಕ ನಡೆ ವಿಶಿಷ್ಟ ಹಾಗೂ ವೈವಿಧ್ಯಮಯ ಉತ್ಪನ್ನಗಳಿಂದಾಗಿ ಮಾರುಕಟ್ಟೆಯ ಶೇಕಡ 70 ರಷ್ಟು ಪಾಲನ್ನ ಹೊಂದಿದೆ ಬಲವಂತ ಪಾರೇಕರಿಗೆ ಅಂಟಿನ ಉದ್ಯಮದ ಸರಿಯಾದ ತಿಳುವಳಿಕೆ ಇತ್ತು ಬಳಗಿತನ ಮಾಡುವ ಕುಶಲ ಕರ್ಮಿಗಳೇ ತಮ್ಮ ಉದ್ಯಮಕ್ಕೆ ನಿರ್ಣಾಯಕರು ಅಂತ ಬಲವಂತ ಭಾವಿಸಿದ್ದರು ಅದಕ್ಕಾಗಿಯೇ ಕಾರ್ಪೆಂಟರ್ಸ್ ಹಾಗೂ ಕಾಂಟ್ರಾಕ್ಟರ್ಸ್ ಗಳ ಮೇಲೆಯೇ ಪೆಡಿಲೈಟ್ ಇಂಡಸ್ಟ್ರೀಸ್ ಹೆಚ್ಚಿನ ಫೋಕಸ್ ಮಾಡಿತು ಇದನ್ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದ ಕಂಪನಿ 2002ರಲ್ಲಿ ಫೆವಿಕಾಲ್ ಚಾಂಪಿಯನ್ಸ್ ಕ್ಲಬ್ ಅನ್ನುವ ತರಬೇತಿ ಕೇಂದ್ರವನ್ನ ತೆರೆಯಿತು ಇದರ ಮೂಲಕ ಕಾರ್ಪೆಂಟರ್ಸ್ ಗಳಿಗೆ ತರಬೇತಿ ಹಾಗೂ ಬೆಡ್ಲೈಟ್ ಉತ್ಪನ್ನಗಳನ್ನ ಎಲ್ಲಿ ಹೇಗೆ ಬಳಸಬೇಕು ಎನ್ನುವ ತಿಳುವಳಿಕೆಯನ್ನ ನೀಡುವುದಾಗಿತ್ತು ಸದ್ಯ ದೇಶದ 145 ನಗರಗಳಲ್ಲಿ 300ಕ್ಕೂ ಅಧಿಕ ಎಫ್ಸಿಸಿ ಕೇಂದ್ರಗಳಿವೆ ಜೊತೆಗೆ ಈ ಕ್ಲಬ್ ಗಾಗಿ ಮೊಬೈಲ್ ಆಪ್ ಕೂಡ ಅಭಿವೃದ್ಧಿ ಪಡಿಸಲಾಗಿದೆ ಸ್ನೇಹಿತರೆ ಪಿಡಿಲೈಟ್ ಇಂಡಸ್ಟ್ರೀಸ್ ಕೇವಲ ಫರ್ನಿಚರ್ ಉದ್ಯಮ ಕಾರ್ಪೆಂಟರ್ಸ್ ಗಳಿಗಷ್ಟೇ ಸೀಮಿತವಾಗಿಲ್ಲ ಈಗ ಮನೆ ಮನೆಗಳಲ್ಲೂ ಕಂಪನಿಯ ಉತ್ಪನ್ನ ಕಾಣಸಿಗುತ್ತದೆ ಶಾಲಾ ಮಕ್ಕಳಿಗೆ ಚಟುವಟಿಕೆಗೆ ಬೇಕಾಗುವ ಸಾಮಾನ್ಯ ಗಮ್ ಕ್ರಾಫ್ಟ್ ಗಳಿಗೆ ಬೇಕಾಗುವ ಉತ್ಪನ್ನ ಹೀಗೆ ಹಲವು ಚಿಕ್ಕ ಚಿಕ್ಕ ಉತ್ಪನ್ನಗಳನ್ನ ಸಹ ಮಾರಾಟಕ್ಕೆ ಪರಿಚಯಿಸಿದೆ ಪಿಡಿಲೈಟ್ ಇಂಡಸ್ಟ್ರೀಸ್ನ ಬಹುಮುಖ ಉತ್ಪನ್ನ ಸ್ಥಿರತೆ ಹಾಗೂ ಗುಣಮಟ್ಟದಿಂದಾಗಿ ಭಾರತೀಯ ಮನೆ ಮನಗಳಲ್ಲಿ ಸ್ಥಾನ ಪಡೆದಿದೆ ಕಂಪನಿಯನ್ನು ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದುತ್ತಿತ್ತು ಆದರೆ ಬೆಳೆಯುವ ಕಂಪನಿಗಳಿಗೆ ಕಂಟಕಗಳು ಜಾಸ್ತಿ ಎನ್ನುವಂತೆ ಕಂಪನಿಗೆ ಫೇಕ್ ಉತ್ಪನ್ನಗಳ ಕಾಟ ಶುರುವಾಯಿತು ತೇಟ್ ಫೆವಿಕಾಲ್ ಉತ್ಪನ್ನಗಳ ಚಿತ್ರವನ್ನೇ ಹೋಲುವ ಅನೇಕ ನಕಲಿ ಅಂಟುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗ ತೊಡಗಿದವು ಇವು ಕಂಪನಿಯ ಮಾರುಕಟ್ಟೆಯನ್ನ ಆಕ್ರಮಿಸಿಕೊಂಡವಲ್ಲದೆ ಫೆವಿಕಾಲ್ ಹೆಸರಿಗೆ ಕಳಂಕ ತರುವಂತೆಕೂ ಕೂಡ ಇವುಗಳ ಹಾವಳಿ ಹೆಚ್ಚಾಯಿತು ಹೀಗಾಗಿ ಪೆಡಿಲೈಟ್ ಇಂಡಸ್ಟ್ರೀಸ್ ನಕಲಿ ಉತ್ಪನ್ನ ತಡೆಗಟ್ಟಲು ಕಂಪನಿಯ ಉತ್ಪನ್ನಗಳ ಮೇಲೆ ವಿಶಿಷ್ಟ ಗುರುತು ಹಾಗೂ ಒರಿಜಿನಲ್ ಬ್ರಾಂಡ್ ಅನ್ನ ಗುರುತಿಸುವ ಹೋಲೋಗ್ರಾಮ ಅನ್ನ ಪರಿಚಯಿಸಿತು ಹೀಗೆ ಅನೇಕ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಲಾಯಿತು ಇದರ ಜೊತೆಗೆ ನಕಲಿ ಉತ್ಪನ್ನಗಳನ್ನ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಯಿತು ಈ ಎಲ್ಲ ಪ್ರಯತ್ನಗಳ ಬಳಿಕ ಕಂಪನಿಯ ವಿಶ್ವಾಸಾರ್ಹತೆ ಮತ್ತೊಮ್ಮೆ ಜನ ಮಣ್ಣನೆ ಪಡೆಯಿತು ಇನ್ನು ಕಂಪನಿ ತನ್ನ ಉತ್ಪನ್ನಗಳ ಪ್ರಚಾರವನ್ನ ಕೂಡ ತೀರ ಸಾಮಾನ್ಯ ಕಲಾವಿದರೊಂದಿಗೆ ತೀರ ಸಾಮಾನ್ಯ ಎನಿಸುವ ಲೊಕೇಶನ್ಗಳಲ್ಲೇ ಮಾಡುವ ಮೂಲಕ ಗ್ರಾಹಕರೊಂದಿಗೆ ಬೆಸೆಯುವ ಅದ್ಭುತ ಪ್ರಯತ್ನ ಮಾಡಿತು ಜೊತೆಗೆ ನಿಜವಾದ ಕುಶಲ ಕರ್ಮಿಗಳನ್ನ ಸಹ ತನ್ನ ಉತ್ಪನ್ನಗಳ ಪ್ರಮೋಷನ್ಗೆ ಬಳಸಿಕೊಂಡಿತ್ತು ಇನ್ನು ವೈವಿಧ್ಯಮಯ ಜಾಹಿರಾತುಗಳು ಸಹ ಗ್ರಾಹಕರ ಮನಮ ಮುಟ್ಟುವಂತೆ ಇದ್ದವು ಒಟ್ಟನಲ್ಲಿ ಮಾರುಕಟ್ಟೆಯಲ್ಲಿ ಜನರನ್ನ ಅತ್ಯಂತ ಯಶಸ್ವಿಯಾಗಿ ಮುಟ್ಟಿರುವ ಸಂಸ್ಥೆ ಹಲವಾರು ಕಂಪನಿಗಳನ್ನ ಸ್ವಾಧೀನ ಪಡಿಸಿಕೊಳ್ಳುವ ಮೂಲಕ ತನ್ನ ಸಾಮ್ರಾಜ್ಯವನ್ನ ವಿಸ್ತರಿಸಿದೆ ಕೇವಲ ಭಾರತವಲ್ಲ ಲ್ಲದೆ ವಿಶ್ವದ 80 ರಾಷ್ಟ್ರಗಳಲ್ಲಿ ಪೆಡಿಲೈಟ್ ಉತ್ಪನ್ನಗಳು ಮಾರಾಟವಾಗುತ್ತಿದೆ ಅಮೆರಿಕಾ ಬಾಂಗ್ಲಾ ಬ್ರೆಜಿಲ್ ಈಜಿಪ್ಟ್ ಶ್ರೀಲಂಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸುಧಾರಿತ ಉತ್ಪಾದನ ಘಟಕಗಳನ್ನ ಸಹ ಸ್ಥಾಪಿಸಿದೆ ಕಂಪನಿ ಒಟ್ಟು 14.6 6 ಬಿಲಿಯನ್ ಡಾಲರ್ ಮೊತ್ತದ ಸಂಪತ್ತು ಹೊಂದಿದ್ದು ಫ್ರೋಬ್ಸ್ ಪಟ್ಟಿಯ ಪ್ರಕಾರ ಪಾರೇಕ್ ಗ್ರೂಪ್ ದೇಶದ ಸಿರಿವಂತರ ಪೈಕಿ 17ನೇ ಸ್ಥಾನದಲ್ಲಿದೆ ಇನ್ನು 2013ರಲ್ಲಿ ಬಲವಂತ ಪಾರೇಕ್ ನಿಧನದ ಬಳಿಕ ಅವರ ಪುತ್ರರಾದ ಮಧುಕರ್ ಪಾರೇಕ್ ಹಾಗೂ ಅಜಯ್ ಪಾರೇಕ್ ಪೆಡಿಲೈಟ್ ಕಂಪನಿಯನ್ನ ಮುನ್ನಡೆಸುತ್ತಾ ಇದ್ದಾರೆ.