ನಿಮಗೆಲ್ಲ ಪ್ರೀತಿಯ ಸ್ವಾಗತ ಈಗ ಡಿಜಿಟಲ್ ಯುಗ ಎಲ್ಲವೂ ಡಿಜಿಟಲ್ ಆಗಿದೆ ಅದರಲ್ಲೂ ಕಳೆದ ಐದು ವರ್ಷದಲ್ಲಿ ಪೇಮೆಂಟ್ ವಿಚಾರದಲ್ಲಿ ಭಾರತ ಕಂಪ್ಲೀಟ್ ಆಗಿ ಡಿಜಿಟಲ್ ಆಗಿ ಬದಲಾಗಿದೆ ಈಗ ಕ್ಯಾಶ್ ಬಳಸೋದು ತುಂಬಾನೇ ಕಡಿಮೆ ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಹೋಟೆಲ್ಗಳವರೆಗೂ ಎಲ್ಲವೂ ಈಗ ಡಿಜಿಟಲ್ ಆಗಿ ವರ್ಕ್ ಆಗುತ್ತೆ ಈ ಡಿಜಿಟಲ್ ಪೇಮೆಂಟ್ ಯಾವ ರೀತಿ ವರ್ಕ್ ಆಗುತ್ತೆ ಅನ್ನೋದು ನಿಮಗೆಲ್ಲ ಗೊತ್ತಿರ ಬಹದು ಪೇಮೆಂಟ್ ಕಂಪ್ಲೀಟ್ ಆಗೋದಕ್ಕಿಂತ ಮುಂಚೆ ನೀವು ಪಾಸ್ವರ್ಡ್ ಹಾಕಬೇಕು ಕೆಲವೊಂದು ಸಿಸ್ಟಮ್ ಗಳಲ್ಲಿ ಓಟಿಪಿ ಸಿಸ್ಟಮ್ ಇದೆ ಆದರೆ ಈ ಓಟಿಪಿ ವಿಚಾರದಲ್ಲಿ ತುಂಬಾ ಸಮಸ್ಯೆಗಳು ಆಗ್ತಾ ಇರೋದು ನಿಮಗೆಲ್ಲ ಗೊತ್ತಿರಬಹುದು ಒಂದೇ ಒಂದು ಓಟಿಪಿ ಯಇಂದ ನಿಮ್ಮ ಅಕೌಂಟ್ ನಲ್ಲಿದ್ದ ಹಣ ಮಂಗ ಮಾಯವಾಗಿ ಬಿಡುತ್ತೆ ಹೀಗಾಗಿ ಡಿಜಿಟಲ್ ಪೇಮೆಂಟ್ ವಿಚಾರದಲ್ಲಿ ಆರ್ಬಿಐ ಹೊಸ ನಿಯಮಗಳನ್ನ ಜಾರಿಗೆ ತರೋದಕ್ಕೆ ಮುಂದಾಗಿದೆ ಡಿಜಿಟಲ್ ಪೇಮೆಂಟ್ ಸಿಸ್ಟಮ್ಗೆ ಮತ್ತಷ್ಟು ಸೆಕ್ಯೂರಿಟಿ ನೀಡುವ ನಿಟ್ಟಿನಲ್ಲಿ ಹೊಸ ಸೆಕ್ಯೂರಿಟಿ ಸಿಸ್ಟಮ ಗಳನ್ನ ಜಾರಿಗೆ ರಿಗೆ ತರುವುದಕ್ಕೆ ಆರ್ಬಿಐ ಮುಂದಾಗಿದೆ. ಮತ್ತೊಂದು ಕಡೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೂಡ ಹಲವು ಬದಲಾವಣೆಗಳನ್ನ ತರೋದಕ್ಕೆ ಆರ್ಬಿಐ ನಿರ್ಧಾರ ಮಾಡಿದೆ.
ಅಷ್ಟಕ್ಕೂ ಡಿಜಿಟಲ್ ಪೇಮೆಂಟ್ ವಿಚಾರದಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತವೆ ಓಟಿಪಿ ಸಿಸ್ಟಮ್ ನಿಂತು ಹೋಗುತ್ತಾ ಆರ್ಬಿಐ ಇದ್ದಕ್ಕಿದ್ದ ಹಾಗೆ ಹೊಸ ಬದಲಾವಣೆಗಳನ್ನ ತರುವುದಕ್ಕೆ ಕಾರಣಗಳೇನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗ್ತಾ ಇರುವ ಬದಲಾವಣೆಗಳು ಏನೇನು ಎಲ್ಲವನ್ನ ಡೀಟೇಲ್ ಆಗಿ ತೋರಿಸ್ತೀವಿ ನೋಡಿ ಓಟಿಪಿ ಅಂದ್ರೆ ಒನ್ ಟೈಮ್ ಪಾಸ್ವರ್ಡ್ ಈಗ ಎಲ್ಲದಕ್ಕೂ ಬೇಕೇ ಬೇಕು ಯಾವುದೇ ರೀತಿಯ ವೆರಿಫಿಕೇಶನ್ ಗೆ ಓಟಿಪಿಯ ಅಗತ್ಯ ಇದ್ದೆ ಇದೆ ಓಟಿಪಿ ಅಂದ್ರೆ ಈಗ ಒಂದು ರೀತಿ ವೆರಿಫಿಕೇಶನ್ ಸಿಸ್ಟಮ್ ಆಗಿ ಬದಲಾಗಿಬಿಟ್ಟಿದೆ ಡಿಜಿಟಲ್ ಪೇಮೆಂಟ್ ರೂಪದಲ್ಲಿ ಕೂಡ ಓಟಿಪಿಯ ಬಳಕೆ ಇದೆ ಸಣ್ಣ ಪುಟ್ಟ ಟ್ರಾನ್ಸಾಕ್ಷನ್ ಗೆ ನಾವು ಸ್ಕ್ಯಾನ್ ಮಾಡಿ ಪಾಸ್ವರ್ಡ್ ಹಾಕಿದ್ರೆ ಸಾಕಾಗುತ್ತೆ ಆದರೆ ದೊಡ್ಡ ಮಟ್ಟದ ಪೇಮೆಂಟ್ಗಳು ಕಾರ್ ಕಾರ್ಡ್ ಪೇಮೆಂಟ್ಗಳು ಇಂತಹ ಪೇಮೆಂಟ್ ಗಳಿಗೆ ಓಟಿಪಿಯ ಅಗತ್ಯ ಬೀಳುತ್ತೆ ಈ ಓಟಿಪಿ ಬಳಕೆ ತುಂಬಾನೇ ಒಳ್ಳೆಯದು ಒಂದು ರೀತಿಯ ವೆರಿಫಿಕೇಶನ್ ಆಗುತ್ತೆ ನಾವೇ ಹಣ ಡ್ರಾ ಮಾಡ್ತಾ ಇದ್ದೇವೆ ಅಥವಾ ಟ್ರಾನ್ಸ್ಫರ್ ಮಾಡ್ತಾ ಇದ್ದೇವೆ ಅನ್ನೋದಕ್ಕೆ ಪ್ರೂಫ್ ರೀತಿ ಇದು ವರ್ಕ್ ಆಗುತ್ತೆ ಇದನ್ನ ಜಾರಿಗೆ ತಂದಿದ್ದು ಕೂಡ ಇದೇ ಕಾರಣಕ್ಕಾಗಿ ದೊಡ್ಡ ಮಟ್ಟದ ಹಣ ಚಲಾವಣೆ ಆಗುವ ಸಂದರ್ಭದಲ್ಲಿ ಸುರಕ್ಷತೆ ಇರಲಿ ಅನ್ನುವ ನಿಟ್ಟಿನಲ್ಲಿ ಓಟಿಪಿ ಬಳಕೆಯಲ್ಲಿದೆ ಆದರೆ ನಮ್ಮ ಭಾರತದಲ್ಲಿ ಯಾವ ವಿಚಾರವನ್ನ ಸುರಕ್ಷತೆಗಾಗಿ ಇಟ್ಟಿದ್ದಾರೋ ಅದೇ ವಿಚಾರವನ್ನು ಇಟ್ಕೊಂಡು ಸ್ಕ್ಯಾಮ್ ಆಗೋದಕ್ಕೆ ಶುರುವಾಗಿದೆ ನಿಮಗೆಲ್ಲ ಗೊತ್ತಿಲ್ಲದ ಹಾಗೆ ನಿಮ್ಮ ಯುಪಿಐ ನಿಂದ ಸುಲಭದಲ್ಲೇ ಹಣ ತೆಗೆಯುವ ಕದೀಮ ಜಾಲ ಹೆಚ್ಚಾಗ್ತಾ ಇದೆ ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ಈಗ ಯುಪಿಐ ಸೇಫ್ ಆಗಿ ಇಲ್ಲ ಹೀಗಾಗಿ ಇದರ ಸೇಫ್ಟಿಯನ್ನ ಹೆಚ್ಚು ಮಾಡುವ ಉದ್ದೇಶದಿಂದ ಕೆಲವೊಂದು ನಿಯಮಗಳನ್ನ ಜಾರಿಗೆ ತರುವುದಕ್ಕೆ ಆರ್ಬಿಐ ಮುಂದಾಗಿದೆ ಕೇವಲ ಇದಿಷ್ಟೇ ಅಲ್ಲ ಯುಪಿಐ ಬಳಕೆ ಮಾಡುವಾಗ ಸುಲಭವಾಗಿ ಬಳಕೆ ಮಾಡಬೇಕು ಯೂಸರ್ ಫ್ರೆಂಡ್ಲಿ ಆಗಿರಬೇಕು ಅನ್ನುವ ಕಾರಣಕ್ಕಾಗಿ ಕೂಡ ಕೆಲವೊಂದು ಬದಲಾವಣೆಗಳನ್ನ ಮಾಡಲಾಗ್ತಾ ಇದೆ ಹಾಗಾದ್ರೆ ಏನೆಲ್ಲ ಬದಲಾವಣೆ ಮಾಡ್ತಾರೆ ಅಂತ ಕೇಳಿದ್ರೆ ಮೊದಲ ಬದಲಾವಣೆ ಟೂ ಫ್ಯಾಕ್ಟರ್ ಆಥೆಂಟಿಫಿಕೇಶನ್ ಇದನ್ನ ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು.
ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಸೇಫ್ ಆಗಿ ಇಟ್ಟಕೊಳ್ಳೋದಕ್ಕೋಸ್ಕರ ಈ ಸೆಕ್ಯೂರಿಟಿ ಸಿಸ್ಟಮ ಅನ್ನ ಬಳಕೆ ಮಾಡಲಾಗ್ತಾ ಇದೆ ಇದೇ ರೀತಿ ಈಗ ಯುಪಿಐ ಸಿಸ್ಟಮ್ ನಲ್ಲಿ ಕೂಡ ಟು ಫ್ಯಾಕ್ಟರ್ ಆಥೆಂಟಿಫಿಕೇಶನ್ ಅನ್ನ ಜಾರಿಗೆ ತರಲಾಗ್ತಾ ಇದೆ ಸಣ್ಣ ಪ್ರಮಾಣದ ಟ್ರಾನ್ಸಾಕ್ಷನ್ ಗಳಿಗೆ ವಿನಾಯಿತಿ ಕೊಟ್ಟು ದೊಡ್ಡ ಪ್ರಮಾಣದ ಟ್ರಾನ್ಸಾಕ್ಷನ್ ಗಳಿಗೆ ಈ ಸೆಕ್ಯೂರಿಟಿ ಸಿಸ್ಟಮ್ ಬಳಕೆಯಾಗುವ ಸಾಧ್ಯತೆ ಇದೆ. ಇಲ್ಲಿ ಟೂ ಫ್ಯಾಕ್ಟರ್ ಆಥೆಂಟಿಫಿಕೇಶನ್ ನಲ್ಲಿ ಓಟಿಪಿಯ ಬದಲಿಗೆ ಬೇರೆ ಬೇರೆ ಮಾರ್ಗಗಳನ್ನ ಬಳಸುವ ಸಾಧ್ಯತೆ ಇರುತ್ತೆ. ಏನೆಲ್ಲ ಬಳಕೆ ಮಾಡಬಹುದು ಅಂತ ಕೇಳಿದ್ರೆ ಕ್ರಿಪ್ಟೋಗ್ರಾಫಿಕ್ ಟೋಕನ್ ಬಯೋಮೆಟ್ರಿಕ್ ವೆರಿಫಿಕೇಶನ್ ಫೇಸ್ ಐಡಿ ಆಪ್ ಬೇಸ್ಡ್ ಟೋಕನ್ ಜನರೇಟ್ ಈ ರೀತಿಯ ಸಿಸ್ಟಮ್ ಗಳನ್ನ ಓಟಿಪಿಗೆ ಪರ್ಯಾಯವಾಗಿ ಬಳಕೆ ಮಾಡುವ ಸಾಧ್ಯತೆ ಇದೆ. ಓಟಿಪಿ ಯನ್ನ ಹೇಗೆ ಬೇಕಾದರೂ ಕದಿಬಹುದು. ನಮ್ಮ ಮೊಬೈಲ್ ಅನ್ನ ಹ್ಯಾಕ್ ಮಾಡಿಯೋ ಸಿಮ್ ಸ್ವಾಪ್ ಮಾಡಿಯೋ ಅಥವಾ ಬೇರೆ ಬೇರೆ ವಿಧಾನದಲ್ಲಿ ನಮ್ಮ ಓಟಿಪಿ ಯನ್ನ ಕದೀಮರು ಕದಿಯುವ ಸಾಧ್ಯತೆ ಇರುತ್ತೆ. ಆದರೆ ಬಯೋಮೆಟ್ರಿಕ್ ಅನ್ನ ಕದಿಯೋದಕ್ಕೆ ಆಗೋದಿಲ್ಲ. ಕ್ರಿಪ್ಟೋಗ್ರಾಫಿಕ್ ಟೋಕನ್ ಅನ್ನ ಕದಿಯೋದಕ್ಕೆ ಆಗೋದಿಲ್ಲ. ಫೇಸ್ ಐಡಿ ಮ್ಯಾಚ್ ಮಾಡೋದಕ್ಕೆ ಸಾಧ್ಯವಿಲ್ಲ. ಹೀಗಾಗಿ ಓಟಿಪಿಯ ಬದಲಿಗೆ ಈ ವ್ಯವಸ್ಥೆಗಳನ್ನ ಅಪ್ಡೇಟ್ ಮಾಡಲಾಗುತ್ತಿದೆ. ಇಲ್ಲಿ ಟು ಫ್ಯಾಕ್ಟರ್ ಆಥೆಂಟಿಫಿಕೇಶನ್ ನಲ್ಲಿ ಮೊದಲ ಭಾಗವಾಗಿ ಪಾಸ್ವರ್ಡ್ ಅನ್ನ ಬಳಕೆ ಮಾಡಬೇಕಾಗುತ್ತೆ. ಅಂದ್ರೆ ನಾವು ಈಗ ಸಾಮಾನ್ಯವಾಗಿ ಬಳಕೆ ಮಾಡುವ ಪಾಸ್ವರ್ಡ್ ಆದರೆ ಈ ಪಾಸ್ವರ್ಡ್ ಗಳು ಎಷ್ಟರ ಮಟ್ಟಿಗೆ ಸೇಫ್ ಇದೆ ಅನ್ನೋದು ನಿಮಗೆಲ್ಲ ಗೊತ್ತಿದೆ. ಇದಾದ ನಂತರ ಎರಡನೇ ಸ್ಥರದಲ್ಲಿ ಅಂದ್ರೆ ಪಾಸ್ವರ್ಡ್ ಹಾಕಿದ ನಂತರ ಇನ್ನೊಂದು ವೆರಿಫಿಕೇಶನ್ ಇರುತ್ತೆ ನಾವು ಮೇಲೆ ಹೇಳಿದ ಬಯೋಮೆಟ್ರಿಕ್ ಕ್ರಿಪ್ಟೋಗ್ರಾಫಿಕ್ ಟೋಕನ್ ಫೇಸ್ ಐಡಿ ಇದನ್ನ ಬಳಕೆ ಮಾಡಲಾಗುತ್ತೆ. ಒಂದುವೇಳೆ ಪಾಸ್ವರ್ಡ್ ಹ್ಯಾಕ್ ಆಗಿದ್ರೂ ಕೂಡ ಇದನ್ನೆಲ್ಲ ಹ್ಯಾಕ್ ಮಾಡೋದಕ್ಕೆ ಸಾಧ್ಯವೇ ಇಲ್ಲ.
ಇದಿಷ್ಟೇ ಅಲ್ಲ ಇನ್ನು ಕೆಲವು ವೆರಿಫಿಕೇಶನ್ಗಳು ಅಗತ್ಯ ಇದೆ ಅಂತ ಬ್ಯಾಂಕುಗಳಿಗೆ ಅನಿಸಿದ್ರೆ ಅದನ್ನ ಕೂಡ ಬ್ಯಾಂಕುಗಳು ಜಾರಿಗೆ ತರಬಹುದು ಈ ಸ್ವತಂತ್ರ್ಯವನ್ನ ನೀಡಲಾಗಿದೆ ಇಲ್ಲಿ ಬ್ಯಾಂಕುಗಳಿಗೆ ಎಲ್ಲವನ್ನ ಟ್ರ್ಯಾಕ್ ಮಾಡುವ ಅವಕಾಶ ನೀಡಲಾಗಿದೆ ನಿಮ್ಮ ಟ್ರಾನ್ಸಾಕ್ಷನ್ ಅನ್ನ ಮಾಡ್ತಾರೆ ಮೊಬೈಲ್ಗಳನ್ನ ಟ್ರ್ಯಾಕ್ ಮಾಡ್ತಾರೆ ಅಂದ್ರೆ ನೀವೀಗ ಒಂದೇ ಮೊಬೈಲ್ನಲ್ಲಿ ಟ್ರಾನ್ಸಾಕ್ಷನ್ ಮಾಡ್ತಾ ಇದ್ದೀರಿ ಅಂತ ಅಂದುಕೊಳ್ಳಿ ಇದ್ದಕ್ಕಿದ್ದ ಹಾಗೆ ಬೇರೆ ಮೊಬೈಲ್ ನಿಂದ ಟ್ರಾನ್ಸಾಕ್ಷನ್ ಮಾಡೋದಕ್ಕೆ ಶುರು ಮಾಡಿದ್ರೆ ಅದಕ್ಕೆ ನೀವು ಟೂ ಫ್ಯಾಕ್ಟರ್ ಆಥೆಂಟಿಫಿಕೇಶನ್ ಮಾಡಬೇಕಾಗುತ್ತೆ ಇನ್ನು ಲೊಕೇಶನ್ ನೀವು ನಾರ್ಮಲ್ ಆಗಿ ಇರುವ ಪ್ಲೇಸ್ನಿಂದ ತುಂಬಾ ದೂರದಲ್ಲಿ ದೊಡ್ಡ ಮೊತ್ತದ ಟ್ರಾನ್ಸಾಕ್ಷನ್ ಗಳನ್ನ ಮಾಡುವ ಸಂದರ್ಭದಲ್ಲಿ ಎರಡು ಲೇಯರ್ನ ಸುರಕ್ಷತೆಯ ಮಟ್ಟವನ್ನ ಪಾಲಿಸಬೇಕಾಗುತ್ತೆ ಮತ್ತೊಮ್ಮೆ ಸ್ಪಷ್ಟವಾಗಿ ಹೇಳ್ತಾ ಇದ್ದೇವೆ ಸಣ್ಣ ಪುಟ್ಟ ಪೇಮೆಂಟ್ಗಳಿಗೆ ಇದು ಅನ್ವಯವಾಗುವುದಿಲ್ಲ ಬದಲಿಗೆ ದೊಡ್ಡ ಮಟ್ಟದ ಟ್ರಾನ್ಸಾಕ್ಷನ್ ಗಳನ್ನ ಮಾಡುವ ಸಂದರ್ಭದಲ್ಲಿ ಈ ಸೆಕ್ಯೂರಿಟಿ ಸಿಸ್ಟಮ ಅನ್ನ ಪಾಲಿಸಬೇಕಾಗುತ್ತೆ ಒಂದುವೇಳೆ ಸಣ್ಣ ಪುಟ್ಟದಕ್ಕೂ ಹೀಗೆ ಮಾಡಿದರೆ ಡಿಜಿಟಲ್ ಪೇಮೆಂಟ್ ಅನ್ನೋದು ಕಿರಿಕಿರಿಯಾಗುವ ಸಾಧ್ಯತೆ ಇರುತ್ತೆ ಹೀಗಾಗಿ ದೊಡ್ಡ ಮೊತ್ತದ ಟ್ರಾನ್ಸಾಕ್ಷನ್ ಗಳಿಗೆ ಮಾತ್ರ ಇದು ಅನ್ವಯವಾಗುತ್ತೆ ಇಲ್ಲಿ ಎಲ್ಲದಕ್ಕಿಂತ ಒಂದು ಇಂಟರೆಸ್ಟಿಂಗ್ ಸಂಗತಿ ಇದೆ ಯಾವುದೇ ಡಿಜಿಟಲ್ ಪೇಮೆಂಟ್ ನಲ್ಲಿ ಫ್ರಾಡ್ ಆದರೆ ವಂಚನೆ ಆದರೆ ಇದಕ್ಕೆ ನೇರ ಹೊಣೆ ಇನ್ಮುಂದೆ ಬ್ಯಾಂಕ್ ಆಗುತ್ತೆ ಎಷ್ಟು ಫ್ರಾಡ್ ಆಗಿದೆಯೋ ಅದರ ಪರಿಹಾರವನ್ನ ಬ್ಯಾಂಕುಗಳೇ ಕೊಡಬೇಕು ಇಂತದ್ದೊಂದು ನಿಯಮವನ್ನ ಆರ್ಬಿಐ ಜಾರಿಗೆ ತರುವ ಸಾಧ್ಯತೆ ಇದೆ ಹೀಗಾಗಿ ಬ್ಯಾಂಕುಗಳು ಕೂಡ ಈ ವಿಚಾರವನ್ನ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾವೆ.
ಈ ನಿಯಮಗಳು ಯಾವಾಗ ಜಾರಿಗೆ ಬರುತ್ತೆ ಅಂತ ಕೇಳಿದ್ರೆ ಮುಂದಿನ ವರ್ಷದ ಏಪ್ರಿಲ್ ನಿಂದ ಹೊಸ ನಿಯಮಗಳು ಜಾರಿಗೆ ಬರುವಸ ಸಾಧ್ಯತೆ ಇದೆ ಇಂತಹ ಸಿಸ್ಟಮ್ ಗಳನ್ನ ರೆಡಿ ಮಾಡೋದಕ್ಕೆ ಟೈಮ್ ಬೇಕಾಗುತ್ತೆ ಹೀಗಾಗಿ ಮುಂದಿನ ಏಪ್ರಿಲ್ ತಿಂಗಳವರೆಗೆ ಆರ್ಬಿಐ ಸಮಯ ತೆಗೆದುಕೊಂಡಿದೆ ಕೊನೆಯಲ್ಲಿ ಕೆಲವೊಂದು ವಿಚಾರದಲ್ಲಿ ಕ್ಲಾರಿಫಿಕೇಶನ್ ಕೊಡ್ತ್ತೇವೆ ಕೇಳಿ ಇಲ್ಲಿ ಯಾವುದೇ ರೀತಿಯ ಓಟಿಪಿ ಸಿಸ್ಟಮ್ ಬ್ಯಾನ್ ಆಗ್ತಾ ಇಲ್ಲ ಓಟಿಪಿ ಇರುತ್ತೆ ಓಟಿಪಿಯ ಜೊತೆಗೆ ಹಲವು ಲೇಯರ್ನ ಸೆಕ್ಯೂರಿಟಿ ಇರುತ್ತೆ ಓಟಿಪಿಯ ಬದಲಿಗೆ ನೀವು ಬೇರೆ ಬೇರೆ ಸೆಕ್ಯೂರಿಟಿ ಸಿಸ್ಟಮ್ ಅನ್ನ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಕೂಡ ಇರುತ್ತೆ ಇನ್ನು ಈ ಬದಲಾವಣೆಗಳು ಆಗೋದ್ರಿಂದ ಕೆಲವೊಂದು ಚಾರ್ಜ್ಗಳು ಹೆಚ್ಚಾಗಬಹುದು ಇದು ಬಿಟ್ಟರೆ ಹೊಸ ನಿಯಮಗಳಿಂದ ಜನರಿಗೆ ತುಂಬಾನೇ ಲಾಭ ಆಗುತ್ತೆ. ಯಾವುದೇ ರೀತಿಯ ಮೋಸಗಳು ಇನ್ನಮುಂದೆ ಆಗೋದಿಲ್ಲ. ಇದು ಯುಪಿಐ ವಿಚಾರದಲ್ಲಿ ಆಗ್ತಾ ಇರುವ ಬದಲಾವಣೆಗಳು. ಇನ್ನು ಆರ್ಬಿಐ ಬ್ಯಾಂಕುಗಳ ವಿಚಾರದಲ್ಲಿ ಕೂಡ ಕೆಲವೊಂದು ಬದಲಾವಣೆಗಳನ್ನ ತರೋದಕ್ಕೆ ಹೊರಟಿದೆ. ಏನೆಲ್ಲ ಬದಲಾವಣೆ ಅಂತ ಕೇಳಿದ್ರೆ ಮೊದಲ ಬದಲಾವಣೆ ಡೆಪಾಸಿಟ್ ವಿಚಾರದಲ್ಲಿ ನೀವು ಒಂದು ಬ್ಯಾಂಕ್ನಲ್ಲಿ 4 ಲಕ್ಷ ಡೆಪಾಸಿಟ್ ಇಟ್ಟಿದ್ದೀರಿ ಅಂತ ಅಂದುಕೊಳ್ಳಿ ಆ ಬ್ಯಾಂಕ್ ಇದ್ದಕ್ಕಿದ್ದ ಹಾಗೆ ದಿವಾಳಿಯಾಗಿ ಹೋಯಿತು ಇಂತಹ ಸಂದರ್ಭದಲ್ಲಿ ಕಷ್ಟಪಟ್ಟು ಕೂಡಿಟ್ಟ ಹಣಕ್ಕೆ ಸಂಚಕಾರ ಬರುತ್ತೆ.
ಈಗ ಇರುವ ನಿಯಮದ ಪ್ರಕಾರ ಈನಾ ಲಕ್ಷ ರೂಪಾಯಿಗಳಿಗೆ ಒಂದುವೇಳೆ ಬ್ಯಾಂಕ್ ದಿವಾಳಿ ಆದರೆ 1 ಲಕ್ಷ ರೂಪಾಯಿ ಮಾತ್ರ ನಿಮಗೆ ಸಿಗುತ್ತೆ ಆದರೆ ಇನ್ನು ಮುಂದೆ ನಿಮ್ಮ ಬ್ಯಾಂಕ್ ದಿವಾಳಿ ಆದರೆ 4 ಲಕ್ಷದ ಮುಂದೆ 5 ಲಕ್ಷ ರೂಪಾಯಿ ನಿಮಗೆ ಸಿಗುತ್ತೆ ಇದು ಕಡ್ಡಾಯ ನಿಯಮ ಅಂದ್ರೆ ಗ್ರಾಹಕರಿಗೆ ಯಾವುದೇ ರೀತಿಯ ಟೆನ್ಶನ್ ಇರುವುದಿಲ್ಲ ಇದಕ್ಕಾಗಿ ಬ್ಯಾಂಕುಗಳೇ ಇನ್ಮುಂದೆ ಇನ್ಶೂರೆನ್ಸ್ ಮಾಡಿಕೊಳ್ಳಬೇಕು ತಮ್ಮ ಬಳಿ ಇರುವ ಡೆಪಾಸಿಟ್ ಹಣಕ್ಕೆ ಮೊದಲೇ ಬ್ಯಾಂಕುಗಳು ಇನ್ಶೂರೆನ್ಸ್ ಮಾಡಿಸಿಕೊಳ್ಳಬೇಕಾಗುತ್ತೆ ಇದರಿಂದ ಗ್ರಾಹಕರ ಹಣ ಸೇಫ್ ಆಗಿ ಇರುತ್ತೆ. ಇನ್ನು ಎನ್ಪಿಎ ಗಳ ವಿಚಾರಕ್ಕೆ ಬರೋಣ ಲೋನ್ ಮರುಪಾವತಿ ಆಗದೆ ಇರುವ ಸಂದರ್ಭದಲ್ಲಿ ಅದನ್ನ ನಾನ್ ಪರ್ಫಾರ್ಮಿಂಗ್ ಅಸೆಟ್ ಅಂತ ಘೋಷಣೆ ಮಾಡ್ತಾರೆ ಇದರಿಂದ ಬ್ಯಾಂಕುಗಳಿಗೆ ಲಾಸ್ ಆಗುತ್ತೆ. ಈ ಲಾಸ್ ಅನ್ನ ಸರಿದೂಗಿಸಲು ಪ್ರತಿವರ್ಷ ತಮಗೆ ಬರುವ ಲಾಭದ ಹಣದಲ್ಲಿ ಎನ್ಪಿಎ ಗೆ ಅಂತಾನೆ ಬ್ಯಾಂಕುಗಳು ವಿನಿಯೋಗ ಮಾಡುತ್ತವೆ. ಇದು ಪ್ರತಿವರ್ಷ ಮಾಡಲಾಗುತ್ತೆ ಆದರೆ ಇನ್ಮುಂದೆ ಭವಿಷ್ಯದಲ್ಲಿ ಆಗುವ ಲಾಸ್ಗಳಿಗೆ ಈಗಿನಿಂದಲೇ ತಯಾರಾಗಿರುವಂತೆ RBI ಸೂಚನೆ ಕೊಟ್ಟಿದೆ. ಅಂದ್ರೆ ಈಗ ಎಷ್ಟು ಲಾಭ ಆಗ್ತಾ ಇದೆಯಲ್ಲ ಅದರಲ್ಲಿ ಸ್ವಲ್ಪ ಹಣವನ್ನ ಭವಿಷ್ಯದ ಲಾಸ್ ಅನ್ನ ಸರಿದುಗಿಸಲು ಎತ್ತಿ ಇಡಬೇಕು ಅಂತ RBI ಸೂಚನೆ ನೀಡಿದೆ. ಹೀಗೆ ಮಾಡೋದ್ರಿಂದ ಬ್ಯಾಂಕುಗಳು ಏಕಾ ಏಕಿ ಸಂಕಷ್ಟದಲ್ಲಿ ಸಿಲ್ಕೋದಿಲ್ಲ. ಅದೇನೇ ಇರಲಿ ಆರ್ಬಿಐ ಹಲವಾರು ಬದಲಾವಣೆಗಳನ್ನ ತರ್ತಾ ಇದೆ ಇದರಿಂದ ಗ್ರಾಹಕರಿಗೂ ಕೂಡ ಒಳ್ಳೆದಾಗ್ತಾ ಇದೆ. ಬ್ಯಾಂಕುಗಳಿಗೆ ಕೂಡ ಒಳ್ಳೆದಾಗುತ್ತಿದೆ.


