Thursday, November 20, 2025
HomeStartups and Businessಭಾರತದ ಮೊದಲ ಡಿಜಿಟಲ್ ಏರ್‌ಪೋರ್ಟ್: ಭವಿಷ್ಯದ ವಿಮಾನ ನಿಲ್ದಾಣ ಇಲ್ಲಿ ಶುರುವಾಗಿದೆ!

ಭಾರತದ ಮೊದಲ ಡಿಜಿಟಲ್ ಏರ್‌ಪೋರ್ಟ್: ಭವಿಷ್ಯದ ವಿಮಾನ ನಿಲ್ದಾಣ ಇಲ್ಲಿ ಶುರುವಾಗಿದೆ!

ಭಾರತ ಈಗ ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ ಮುಂದುವರೆದ ತಂತ್ರಜ್ಞಾನಗಳನ್ನ ಬಳಸಿಕೊಂಡು ಸಾಕಷ್ಟು ಅಭಿವೃದ್ಧಿಗೊಳ್ಳುತ್ತಾ ಇದೆ ಭಾರತವನ್ನ ಡಿಜಿಟಲ್ ಆಗಿ ಸಬಲಗೊಳಿಸುವುದಕ್ಕೆ ಡಿಜಿಟಲ್ ಇಂಡಿಯಾ ಅನ್ನುವ ಪರಿಕಲ್ಪನೆ ಇದೆ ಈ ಡಿಜಿಟಲೀಕರಣವನ್ನ ಭಾರತ ವಿಮಾನ ನಿಲ್ಧಾಣದಲ್ಲೂ ಪರಿಚಯಿಸುತ್ತಿದೆ ಇದರ ಫಲವಾಗಿ ಮುಂಬೈನಲ್ಲಿ ಸಂಪೂರ್ಣ ಡಿಜಿಟಲ್ ವಿಮಾನ ನಿಲ್ಧಾಣವಂದು ತಲೆ ಎತ್ತಿದೆ ಈ ಡಿಜಿಟಲ್ ನಿಲ್ದಾಣಕ್ಕೆ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಂತ ಹೆಸರಿಸಲಾಗಿದೆ ಭಾರತದ ಅತಿ ದೊಡ್ಡ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಅನ್ನುವ ಖ್ಯಾತಿಯು ಇದರ ಮುಡಿಗೇರಿದೆ ಈ ವಿಮಾನ ನಿಲ್ದಾಣದ ಮೊದಲ ಹಂತದ ಕಾರ್ಯಗಳು ಈಗಾಗಲೇ ಮುಗಿದಿದ್ದು ಅಕ್ಟೋಬರ್ ಎಂಟರಂದು ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ವಿಮಾನ ನಿಲ್ದಾಣವನ್ನ ಉದ್ಘಾಟಿಸಿದ್ದಾರೆ.

ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಶೇಷತೆಗಳೇನು ಈ ವಿಮಾನ ನಿಲ್ದಾಣ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿ ಅನುಕೂಲಗಳನ್ನ ಕಲ್ಪಿಸುತ್ತೆ ಮನಸೂರೆಗೊಳಿಸುವ ಈ ನಿಲ್ದಾಣದ ವಾಸ್ತು ಶಿಲ್ಪ ಯಾವ ರೀತಿ ಇದೆ ಭಾರತದ ಹೆಮ್ಮೆ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಭಾರತ ಇತ್ತೀಚಿನ ದಿನಗಳಲ್ಲಿ ಊಹೆಗೂ ಮೀರಿ ಬೆಳಿತಾ ಇದೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ವ್ಯವಸ್ಥೆಗಳನ್ನ ರೂಪಿಸುತ್ ಇದೆ ಇದೀಗ ಅದಾನಿ ಗ್ರೂಪ್ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮುಂಬೈನಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದೆ 19650 ಕೋಟಿ ರೂಪಾಯಿ ವೆಚ್ಚದಲ್ಲಿ ರೂಪಿಸಿರುವ ಈ ಗ್ರೀನ್ ಫೀಲ್ಡ್ ನಿಲ್ದಾಣ ಜಗತ್ತನ್ನ ಬೆರಗುಗೊಳಿಸುವಂತೆ ಮಾಡಿದೆ ಸ್ನೇಹಿತರೆ ಮುಂಬೈ ಕೀರ್ತಿ ಹೆಚ್ಚಿಸಿದ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ನವಿ ನಿಲ್ದಾಣವು ಕಾರ್ಯ ನಿರ್ವಹಿಸಲಿದೆ ಛತ್ರಪತಿ ನಿಲ್ದಾಣ ತನ್ನ ಸಾಮರ್ಥ್ಯ ಮೀರಿ ಕೆಲಸ ಮಾಡ್ತಾಇದ ಹಾಗಾಗಿ ದಟ್ಟಣೆ ಕಡಿಮೆ ಮಾಡೋಕೆ ಛತ್ರಪತಿ ನಿಲ್ದಾಣಕ್ಕೆ ಜೊತೆಗಾರನಾಗಿದ್ದು ನವಿ ನಿಲ್ದಾಣ ಸಹಾಯ ಮಾಡಲಿದೆ ಇದರ ಜೊತೆಗೆ ವಿದೇಶಗಳ ನಡುವೆ ಸಂಬಂಧ ಬೆಸಿಯುವ ಸೇತ್ವೆಯಾಗಿದೆ ರಿಯಲ್ ಎಸ್ಟೇಟ್ ಪ್ರವಾಸೋದ್ಯಮ ವ್ಯಾಪಾರ ಮತ್ತು ಹಸಿರು ನಾವಿನ್ಯತೆಗಳನ್ನ ಉತ್ತೇಜಿಸಲು ಹೊರಟಿದೆ ಇದಲ್ಲದೆ ವಾಯುಯಾನ ಲಾಜಿಸ್ಟಿಕ್ಸ್ ಐಟಿ ಕ್ಷೇತ್ರ ಸೇರಿದಂತೆಎು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನ ಸೃಷ್ಟಿಸುವ ಯೋಜನೆ ಸಿದ್ಧಪಡಿಸಿದೆ ಹೀಗೆ ಹಲವು ಭರವಸೆಗಳ ಕನಸಿನ ಕೂಸು ಈ ನಿಲ್ದಾಣ ಮೊದಲಿಗೆ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಒಂದನೇ ಹಂತ ಒಂದು ರನ್ವೇ ಮತ್ತು ಒಂದೇ ಟರ್ಮಿನಲ್ ಕಟ್ಟಡದೊಂದಿಗೆ ಕಾರ್ಯಾಚರಣೆಯನ್ನ ಪ್ರಾರಂಭಿಸಲಿದೆ.

ವಾರ್ಷಿಕವಾಗಿ 20 ಮಿಲಿಯನ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ ಈ ಸೌಲಭ್ಯ ಗಂಟೆಗೆ 20ರಿಂದ 22 ವಿಮಾನಯಾನವನ್ನ ನಿರ್ವಹಿಸುತ್ತದೆ ನಂತರ ದಿನಗಳಲ್ಲಿ ಸಾಮರ್ಥ್ಯ ಹೆಚ್ಚಾಗುವ ಯೋಜನೆಯನ್ನ ಮಾಡಲಾಗಿದೆ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ಧಾಣವು ಮಹಾರಾಷ್ಟ್ರದ ರಾಯಗಡ ಗ್ರಾಮದಲ್ಲಿರುವ ಪನ್ವೇಲ್ನಲ್ಲಿದೆ ಈ ಸ್ಥಳ ದೀರ್ಘ ಇತಿಹಾಸ ಹೊಂದಿದೆ. ಸುಮಾರು 300 ವರ್ಷಗಳಷ್ಟು ಹಳೆಯದಾದ ಪಟ್ಟಣ ಇದಾಗಿದೆ. ವಿವಿಧ ಕಾಲಾವಧಿಗಳಲ್ಲಿ ಮರಾಠರು, ಮೊಗಲರು, ಬ್ರಿಟಿಷರು ಮತ್ತು ಪೋರ್ಚುಗೀಸರು ಆಳ್ವಿಕೆ ಮಾಡಿದ ಚರಿತ್ರೆ ಈ ಗ್ರಾಮದ್ದು. ನವಿ ಮುಂಬೈ ವಿಮಾನ ನಿಲ್ದಾಣವು ಪನ್ವೇಲ್ನಲ್ಲಿ 1160 ಹೆಕ್ಟೇರ್ಗಳನ್ನ ವ್ಯಾಪಿಸಿದೆ. ವಿಸ್ತಾರವಾಗಿ ನಿರ್ಮಾಣಗೊಂಡ ನಿಲ್ದಾಣವು ವಾರ್ಷಿಕವಾಗಿ 90 ಮಿಲಿಯನ್ ಪ್ರಯಾಣಿಕರು ಮತ್ತು 3.25 25 ಮಿಲಿಯನ್ ಮೆಕ್ಟ್ರಿಕ್ ಟನ್ ಸರಕುಗಳನ್ನ ಸಾಗಿಸುವ ಯೋಜನೆ ಹಾಕಿಕೊಂಡಿದೆ ಇದರಿಂದಲೇ ವಿಶ್ವದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದು ಅನ್ನುವ ಹಿರಿಮೆ ಲಭಿಸಿದೆ ಸ್ನೇಹಿತರೆ ನವಿ ಮುಂಬೈ ವಿಮಾನ ನಿಲ್ದಾಣ ಭಾರತದ ಮೊದಲ ಸಂಪೂರ್ಣ ಡಿಜಿಟಲ್ ವಿಮಾನ ನಿಲ್ದಾಣ ಇದರ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದಿಂದ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುವ ಟರ್ಮಿನಲ್ಗಳನ್ನ ಹೊಂದಿರುತ್ತದೆ ಪ್ರಯಾಣಿಕರ ಮುಖ ಗುರುತಿಸುವಿಕೆ ಆಧಾರಿತ ಸಂಪರ್ಕ ರಹಿತ ಪ್ರಕ್ರಿಯೆಗಳಿರುತ್ತವೆ.

ಹಾಗಾಗಿ ಇಲ್ಲಿ ಇಲ್ಲಿ ಮ್ಯಾನ್ಯುವಲ್ ಐಡಿ ಪರಿಶೀಲನೆ ಇರಲ್ಲ ಮಾತ್ರವಲ್ಲದೆ ಅದಾನಿ ಒನ್ ಆಪ್ ಮೂಲಕ ಪ್ರಯಾಣಿಕರು ಶಾಪಿಂಗ್ ಡೈನಿಂಗ್ ಮತ್ತು ಲಾಂಚ್ ಸೇವೆಗಳಿಗೆ ಡಿಜಿಟಲ್ ಪ್ರವೇಶ ಪಡೆಯಬಹುದು ಜೊತೆಗೆ ಪಾರ್ಕಿಂಗ್ ಸ್ಥಳಗಳನ್ನ ಮತ್ತು ಬ್ಯಾಗೇಜ್ ಡ್ರಾಪ್ ಸೌಲಭ್ಯವನ್ನ ಆನ್ಲೈನ್ ನಲ್ಲಿ ಮೊದಲೇ ಬುಕ್ ಮಾಡಬಹುದು. ಒಟ್ಟರೆಯಾಗಿ ಇದು ಡಿಜಿಟಲ್ ಟ್ರಾಕಿಂಗ್ ಕಾಗದ ರಹಿತ ಮತ್ತು ನಗದು ರಹಿತ ಕಾರ್ಯಾಚರಣೆಗಳು ಔಷಧಗಳು ಹಾಳಾಗುವ ವಸ್ತುಗಳಿಗೆ ತಾಪಮಾನ ನಿಯಂತ್ರಿತ ವಲಯಗಳಂತಹ ಹಲವು ವೈಶಿಷ್ಟ್ಯಗಳನ್ನ ಹೊಂದಿರುತ್ತೆ. ಆಧುನಿಕ ಯುಗಕ್ಕೆ ತಕ್ಕುದಾಗಿ ಆಧುನಿಕವಾಗಿಯೇ ನಿರ್ಮಿಸಲಾಗಿದೆ. ಇಲ್ಲಿಯ ವ್ಯವಸ್ಥೆಗಳಲ್ಲಿಯೂ ಯಾವುದೇ ನೂಕು ನುಗ್ಗಲುಗಳಿಲ್ಲ. ಟರ್ಮಿನಲ್ 66 ಚೆಕ್ಿನ್ ಪಾಯಿಂಟ್ಗಳು 22 ಸ್ವಯಂಸೇವಾ ಲಗೇಜ್ ಡ್ರಾಪ್ ಸ್ಟೇಷನ್ಗಳು 29 ಪ್ರಯಾಣಿಕ ಬೋರ್ಡಿಂಗ್ ಸೇತ್ವೆಗಳು ಮತ್ತು ಬಸ್ ಹತ್ತಲು 10 ಗೇಟ್ಗಳು ಸೇರಿದಂತೆ ವ್ಯಾಪಕ ಸೌಲಭ್ಯಗಳನ್ನ ಒಳಗೊಂಡಿರುತ್ತದೆ. 5ಜಿ ನೆಟ್ವರ್ಕ್ಗಳು ಮೇಲ್ವಿಚಾರಣೆಗಾಗಿ ಐಓಟಿ ಸಂವೇದಕಗಳು ಸ್ವಯಂಚಾಲಿತ ಲಗೇಜ್ ವ್ಯವಸ್ಥೆಗಳು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಡಿಜಿ ಯಾತ್ರಾ ಮೂಲಕ ಸಂಪರ್ಕ ರಹಿತ ಸಂಸ್ಕರಣೆಯನ್ನ ಒಳಗೊಂಡಿರುತ್ತವೆ ಸ್ನೇಹಿತರೆ ಇವೆಲ್ಲ ವ್ಯವಸ್ಥೆಗಳ ಜೊತೆಗೆ ಹೊಸ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹೊಸದೊಂದು ಪರಿಸರ ಸಂದೇಶವನ್ನ ಹೊತ್ತು ನಿಂತಿದೆ ವಿಮಾನ ನಿಲ್ದಾಣದ ವಿನ್ಯಾಸದಿಂದಾಗಿ ಹೆಚ್ಚಿನ ಪ್ರಮಾಣದ ನೈಸರ್ಗಿಕ ಬೆಳಕು ಮತ್ತು ಗಾಳಿಯು ನಿಲ್ದಾಣವನ್ನ ಪ್ರವೇಶಿಸು ಸುತ್ತದೆ ದೊಡ್ಡ ಕಿಟಕಿಗಳು ಮತ್ತು ಸ್ಕೈ ಲೈಟ್ಗಳನ್ನ ಅಳವಡಿಸಲಾಗಿದೆ ಇದರಿಂದ ಹಗಲಲ್ಲಿ ಕೃತಕ ದೀಪಗಳ ಬಳಕೆ ಮತ್ತು ಹವಾ ನಿಯಂತ್ರಣದ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡಿದೆ ಎಲಿವೇಟರ್ಗಳು ಸ್ಕ್ಯಾನರ್ಗಳು ಮತ್ತು ಇತರ ಉಪಕರಣಗಳಿಗೆ ಎಐ ಆಧಾರಿತ ಸಂಪರ್ಕರಹಿತ ತಂತ್ರಜ್ಞಾನ ಅಳವಡಿಸಲಾಗಿದೆ ಇದು ವಿದ್ಯುತ್ ಬಳಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ವಿಮಾನ ನಿಲ್ದಾಣದ ಒಳಭಾಗದಲ್ಲಿ ಇವಿ ಬಸ್ ಸೇವೆಗಳನ್ನ ಒದಗಿಸಲಾಗಿದೆ ಇದು ಫಾಸಿಲ್ ಇಂಧನಗಳ ಬಳಕೆಯನ್ನ ಕಡಿಮೆ ಮಾಡಲು ಸಹಕಾರಿಯಾಗಿದೆ. ವಿಮಾನ ನಿಲ್ದಾಣವು ಹೆಚ್ಚು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿದೆ. ವಿಮಾನ ನಿಲ್ದಾಣದ ಕಾರ್ಯ ನಿರ್ವಹಣೆಗೆ ಬೇಕಾದ ಶಕ್ತಿಯನ್ನ ಒದಗಿಸಲು 47 ಮೆಗಾವಾಟ್ ಸಾಮರ್ಥ್ಯದ ಸೌರಶಕ್ತಿ ಘಟಕಗಳನ್ನ ನಿರ್ಮಿಸಲಾಗಿದೆ.

ಮಳೆನೀರು ಉಳಿಸಲು ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ಮಳೆನೀರು ಕೊಯ್ಯಲು ವ್ಯವಸ್ಥೆಯನ್ನ ಅಳವಡಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನ ಸಂಸ್ಕರಿಸಲಾಗುತ್ತದೆ ಮತ್ತು ಅದನ್ನ ಮರುಬಳಕೆ ಮಾಡುವ ವ್ಯವಸ್ಥೆ ಇದೆ. ಈ ರೀತಿಯ ವಿಭಿನ್ನ ವಿಶೇಷಗಳು ಈ ವಿಮಾನ ನಿಲ್ದಾಣದ್ದಾಗಿದೆ. ಈ ವಿಮಾನ ನಿಲ್ದಾಣ ಹೊಸದೊಂದು ವಿಶ್ವಾಸವನ್ನ ಮೂಡಿಸಿದಂತು ಸತ್ಯ. ನಿಲ್ದಾಣವನ್ನ ಉದ್ಘಾಟಿಸಿದ್ದ ಮೋದಿ ನಿಲ್ದಾಣದ ಬಗ್ಗೆ ಮತ್ತಷ್ಟು ಸ್ಪಷ್ಟತೆ ನೀಡಿದ್ರು ಮುಂಬೈ ಹೊಸ ವಿಮಾನ ನಿಲ್ದಾಣವನ್ನ ಹೊಂದಿದ್ದು ಇದು ಏಷ್ಯಾದ ಅತಿ ದೊಡ್ಡ ಸಂಪರ್ಕ ಕೇಂದ್ರವಾಗುದರಲ್ಲಿ ಸಂಶಯ ಇಲ್ಲ ಇಂದು ಮುಂಬೈನಾದ್ಯಂತ ಸುಲಭ ಪ್ರಯಾಣಕ್ಕೆ ಅನುಕೂಲವಾಗುವಂತೆ ಸಂಪೂರ್ಣ ಭೂಗತ ಮೆಟ್ರೋವನ್ನ ಹೊಂದಿದೆ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಆ ವೇಗ ಮತ್ತು ಪ್ರಗತಿಯನ್ನ ಹೊಂದಿರುವ ವಿಕಸಿತ ಭಾರತ ಸಂಕಲ್ಪದ ಅಂಗವಾಗಿದೆ ಈ ನಿಲ್ದಾಣದಿಂದಾಗಿ ಮಹಾರಾಷ್ಟ್ರದ ರೈತರಿಗೆ ಮಧ್ಯಪ್ರಾಚ್ಯ ಮತ್ತು ಯುರೋಪಿನ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ಸುಲಭ ದಾರಿ ಲಭಿಸಿದೆ ಇದು ಈ ಪ್ರದೇಶಕ್ಕೆ ಹೂಡಿಕೆ ಮತ್ತು ಹೊಸ ವ್ಯವಹಾರ ಮಾಡಲು ಉತ್ತೇಜಿಸುತ್ತದೆ ಎಂದು ಮೋದಿ ನುಡಿದಿದ್ದರು ಭಾರತದಲ್ಲಿ 2014 ರಲ್ಲಿ 74 ವಿಮಾನ ನಿಲ್ದಾಣಗಳಿದ್ದವು ಇಂದು 160ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ನಿರ್ಮಾಣಗೊಂಡಿದೆ ಸ್ನೇಹಿತರೆ ಭಾರತ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿಲ್ಲ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಪ್ರಗತಿಯನ್ನ ಕಾಣುತ್ತಲೆ ಇದೆ ಅನ್ನೋದು ಇದರಿಂದಲೇ ಸರಿಯಾಗಿ ಅರ್ಥವಾಗುತ್ತೆ ಹೊಸ ವಿಮಾನ ನಿಲ್ದಾಣದಿಂದಾಗಿ ಪ್ರಯಾಣಿಕರಿಗೆ ಮಾತ್ರವಲ್ಲ ಇನ್ನು ಹತ್ತು ಹಲವು ಪ್ರಯೋಜನಗಳಿವೆ ನವಿ ಮುಂಬೈನಲ್ಲಿರುವ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸಂಪರ್ಕವನ್ನ ಹೆಚ್ಚಿಸುತ್ತದೆ.

ಭಾರತದ ಆರ್ಥಿಕತೆಗೆ ಗಣನೀಯವಾಗಿ ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳನ್ನ ನೀಡುತ್ತದೆ ಎಂದು ಅಂತರಾಷ್ಟ್ರೀಯ ವಾಯುಸಾರಿಗೆ ಸಂಸ್ಥೆ ಹೇಳಿಕೆ ನೀಡಿದೆ ಭಾರತದ ಭರವಸೆಯ ಭವಿಷ್ಯ ಇಲ್ಲಿದೆ ಜಿಡಿಪಿಯಲ್ಲಿ ಏರಿಕೆಯಾಗಲು ಅಂತರಾಷ್ಟ್ರೀಯ ಸಂಬಂಧಗಳನ್ನ ವೃದ್ಧಿಸ ಈ ನಿಲ್ದಾಣ ಮುಖ್ಯ ಸೇತುವೆಯಾಗುತ್ತೆ ಸ್ನೇಹಿತರೆ ಈ ನಿಲ್ದಾಣವು ವ್ಯವಸ್ಥೆಗಳ ಮೂಲಕ ಮನಸ್ಸನ್ನ ಸೋರೆಗೊಳಿಸುತ್ತೆ ನಿಲ್ದಾಣದ ವಿಭಿನ್ನ ಶೈಲಿಯು ಕಣ್ಣುಗಳಿಗೆ ಹಬ್ಬ ನೀಡುತ್ತೆ ರಾಷ್ಟ್ರೀಯ ಹೂವು ಕಮಲವನ್ನೇ ಹೋಲುವ ರಚನಾ ಶೈಲಿ ಈ ನಿಲ್ದಾಣದ್ದಾಗಿದೆ ನಿಲ್ದಾಣದ ಮೇಲ್ಚಾವಣಿಯು ಅರಳಿದ ಕಮಲದ ದಳಗಳ ಆಕಾರವನ್ನ ಹೊಂದಿದೆ ವಿನ್ಯಾಸದಲ್ಲಿ ಬಳಸಲಾದ ವಕ್ರರೇಖೆಗಳಿಂದಾಗಿ ನೈಸರ್ಗಿಕ ಬೆಳಕು ಒಳಸುತ್ತೆ ಇಂತಹ ಕ್ರಿಯೇಟಿವ್ ವಾಸ್ತುಶಿಲ್ಪವನ್ನ ದಿವಂಗತ ಜಾಹ ಹದೀದ್ ಅವರ ಸಂಸ್ಥೆಯಾದ ಜಾಹಾ ಹದೀದ್ ಆರ್ಕಿಟೆಕ್ಟ್ ವಿನ್ಯಾಸಗೊಳಿಸಿದೆ ಸ್ನೇಹಿತರೆ ವಿಮಾನ ನಿಲ್ದಾಣವು ಭಾರತೀಯತೆಯ ಪ್ರತೀಕ ಟರ್ಮಿನಲ್ ಒಳಗೆ ಭಾರತೀಯ ಕಲೆಯ ವೈವಿಧ್ಯತೆಯನ್ನ ತೋರಿಸುವ ಶಿಲ್ಪಗಳು ಹಾಗೂ ಸ್ಥಳೀಯ ಕಲಾವಿದರ ಕಲಾಕೃತಿಗಳನ್ನ ಪ್ರದರ್ಶಿಸಲಾಗಿದೆ ಈ ಮೂಲಕ ನಿಲ್ದಾಣ ವಿದೇಶಿಗರಿಗೆ ಭಾರತದ ಕಲಾ ಶ್ರೀಮಂತಿಕೆಯನ್ನ ತೋರಿಸಲಿರುವ ಮಾಧ್ಯಮವಾಗಲಿದೆ ಮಲ್ಟಿಪ್ಲೆಕ್ಸ್ ಮಾಲ್ಗಳಂತೆ ಎಲ್ಲಾ ವ್ಯವಸ್ಥೆಗಳನ್ನ ವಿಮಾನ ನಿಲ್ದಾಣವು ಹೊಂದಿದೆ ಪ್ರಯಾಣಿಕರಿಗೆ ವಿಶ್ರಾಂತಿ ಕೋಣೆಗಳು ಮಕ್ಕಳ ಆಟದ ವ್ಯವಸ್ಥೆಯನ್ನ ಹೊಂದಿದೆ ಇದರ ಜೊತೆಗೆ ಭಾರತವನ್ನ ವಿಶ್ವದೆಲ್ಲಡೆ ಪರಿಚಯಿಸಿದ ಯೋಗಕ್ಕೆ ಮಹತ್ವ ನೀಡಲಾಗಿದೆ ವಿಮಾನ ನಿಲ್ದಾಣದೊಳಗೆ ಯೋಗ ಹಾಗೂ ಧ್ಯಾನ ಮಾಡಲು ನಿರ್ದಿಷ್ಟ ವಲಯಗಳನ್ನ ಕಲ್ಪಿಸಲಾಗಿದೆ ಈ ರೀತಿ ಭಾರತೀಯತೆಯನ್ನ ಪ್ರತಿನಿಧಿಸುವ ಈ ವಿಮಾನ ನಿಲ್ದಾಣ ಭಾರತಕ್ಕೆ ಗರಿಮೆ ನಿಲ್ದಾಣದ ನಿರ್ಮಾಪಕ ಸಂಸ್ಥೆಯಾಗಿರುವ ಅದಾನಿ ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ ವಿಮಾನ ನಿಲ್ದಾಣದ ಸಿಬ್ಬಂದಿಗಳಲ್ಲಿ ಶೇಕಡ 40ಕ್ಕೂ ಹೆಚ್ಚು ಮಹಿಳೆಯರನ್ನ ನೇಮಕ ಮಾಡುವ ಗುರಿ ಹೊಂದಿದೆ ಲೋಕಲ್ ಟು ಗ್ಲೋಬಲ್ ಅಂಗವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮದಾರರಿಗೆ ಅವಕಾಶವನ್ನ ನೀಡಲಾಗಿದೆ ಹೌದು ಈ ನಿಲ್ದಾಣ ಅದೆಷ್ಟು ಮಂದಿಗೆ ಉದ್ಯೋಗವನ್ನ ಕೊಟ್ಟು ಪೊರೆಯಲಿದೆ ಈ ಮೂಲಕ ನಿರುದ್ಯೋಗ ಮಟ್ಟ ಕಡಿಮೆಯಾಗುತ್ತೆ ದೇಶ ಅಭಿವೃದ್ಧಿಯತ್ತ ಮತ್ತೊಂದು ಹೆಜ್ಜೆ ಇಡಲು ಸಹಕಾರ ನೀಡುತ್ತೆ ಸ್ನೇಹಿತರೆ ಹೊಸದಾದ ನವಿ ಮುಂಬೈ ವಿಮಾನ ನಿಲ್ದಾಣ ಭಾರತದ ಭವಿಷ್ಯವನ್ನ ಬೆಳಗಲಿದೆ ಭಾರತದ ಮೊದಲ ಸಂಪೂರ್ಣ ಡಿಜಿಟಲ್ ನಿಲ್ದಾಣ ಅನ್ನುವ ಖ್ಯಾತಿಗೆ ಪಾತ್ರವಾದ ನಿಲ್ದಾಣ ಅದೆಷ್ಟೋ ಜನರಿಗೆ ಬದುಕು ಕಟ್ಟಿಕೊಡುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments