Thursday, November 20, 2025
HomeStartups and Businessಗೂಗಲ್‌ನ 15 ಬಿಲಿಯನ್‌ ಡಾಲರ್‌ ಹೂಡಿಕೆ! ಭಾರತದಲ್ಲಿ ವಿಶ್ವದ ಅತಿದೊಡ್ಡ AI ಹಬ್

ಗೂಗಲ್‌ನ 15 ಬಿಲಿಯನ್‌ ಡಾಲರ್‌ ಹೂಡಿಕೆ! ಭಾರತದಲ್ಲಿ ವಿಶ್ವದ ಅತಿದೊಡ್ಡ AI ಹಬ್

ಗೂಗಲ್ ನಿಂದ ಭಾರತದಲ್ಲಿ ಬಿಗ್ ಹೂಡಿಕೆ ಬರೊಬ್ಬರಿ 15 ಬಿಲಿಯನ್ ಡಾಲರ್ ಇನ್ವೆಸ್ಟ್ ಭಾರತದಲ್ಲಿ ವಿಶ್ವದ ಅತಿ ದೊಡ್ಡ ಎಐ ಹಬ್ ಭಾರತದ ಡಿಜಿಟಲ್ ಇತಿಹಾಸದಲ್ಲೇ ಹೊಸ ಅಧ್ಯಾಯ ಶುರುವಾಗಿದೆ. ಟೆಕ್ ದೈತ್ಯ ಗೂಗಲ್ ಭಾರತದಲ್ಲಿ ಭಾರಿ ಹೂಡಿಕೆಯನ್ನ ಮಾಡ್ತಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 15 ಬಿಲಿಯನ್ ಡಾಲರ್ ಅಂದ್ರೆ 1.35 5 ಲಕ್ಷ ಕೋಟಿ ರೂಪಾಯಿ ಬೃಹತ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ ಇದು ಕೇವಲ ಇನ್ವೆಸ್ಟ್ಮೆಂಟ್ ಅಲ್ಲ ಬದಲಿಗೆ ಭಾರತವನ್ನ ಕೃತಕ ಬುದ್ಧಿಮತ್ತೆಯ ಜಾಗತಿಕ ಶಕ್ತಿಯನ್ನಾಗಿ ರೂಪಿಸುವ ಒಂದು ಮಹತ್ವದ ಹೆಜ್ಜೆಯಾಗಿದೆ ಈ ದೈತ್ಯ ಯೋಜನೆಯ ಕೇಂದ್ರಬಿಂದು ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶ ವಿಶಾಖಪಟ್ಟಣಂದಲ್ಲಿ ಗೂಗಲ್ ತನ್ನ ಡೇಟಾ ಸೆಂಟರ್ ಅನ್ನ ಸ್ಥಾಪಿಸುತ್ತಾ ಇದೆ ಇದರಿಂದ ಏನೆಲ್ಲ ಆಗುತ್ತೆ ಎಷ್ಟೊಂದು ಉದ್ಯೋಗ ಸೃಷ್ಟಿಯಾಗುತ್ತೆ ಬೇರೆ ಎಲ್ಲಿ ಡೇಟಾ ಸೆಂಟರ್ಗಳು ಇವೆ ಎಂಬುದನ್ನ ನೋಡೋಣ ಹೌದು ಟೆಕ್ ಲೋಕದ ದೈತ್ಯ ಗೂಗಲ್ ಭಾರತದಲ್ಲಿ ದೊಡ್ಡ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ ಆಂಧ್ರಪ್ರದೇಶದಲ್ಲಿ ಬೃಹತ್ ಡೇಟಾ ಸೆಂಟರ್ ಮತ್ತು ಕೃತಕ ಬುದ್ಧಿಮತ್ತ ಅಥವಾ ಎಐ ಹಬ್ ನಿರ್ಮಿಸಲು ಗೂಗಲ್ 10ರಿಂದ 15 ಬಿಲಿಯನ್ ಡಾಲರ್ಗಳಷ್ಟು ಬಂಡವಾಳವನ್ನ ಹೂಡಲಿದೆ ಅಂದರೆ ಒಂದು ಲಕ್ಷ ಕೋಟಿ ರೂಪಾಯಿನಿಂದ 1.35 ಲಕ್ಷ ಕೋಟಿ ರೂಪಾಯಿ ಆಗಲಿದೆ. ದಿಲ್ಲಿಯಲ್ಲಿ ನಡೆದ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ಗೂಗಲ್ ಕ್ಲೌಡ್ ಸಿಇಓ ಥಾಮಸ್ ಕುರಿಯನ್ ಈ ವಿಷಯವನ್ನ ಖಚಿತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್ ಅಶ್ವಿನಿ ವೈಷ್ಣವ್ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯಡು ಮತ್ತು ರಾಜ್ಯ ಐಟಿ ಸಚಿವ ನಾರಾ ಲೋಕೇಶ್ ಉಪಸ್ಥಿತರಿದ್ರು ಈ ಸಂದರ್ಭದಲ್ಲಿ ಮಾತನಾಡಿದ ಥಾಮಸ್ ಕುರಿಯನ್ ಅಮೆರಿಕದ ಹೊರಗೆ ನಾವು ಜಗತ್ತಿನ ಯಾವುದೇ ಭಾಗದಲ್ಲಿ ಹೂಡಿಕೆ ಮಾಡುತ್ತಿರುವ ಅತಿ ದೊಡ್ಡ ಎಐ ಹಬ್ ಇದಾಗಲಿದೆ ಅಂತ ಸ್ಪಷ್ಟಪಡಿಸಿದ್ದಾರೆ ಆಂಧ್ರಪ್ರದೇಶದಲ್ಲಿಗೂಗಲ್ ನ ಮೆಗಾ ಪ್ರಾಜೆಕ್ಟ್ ಮೈಕ್ರೋಸಾಫ್ಟ್ amazon ಗೆ ಗೂಗಲ್ ಸೆಡ್ಡು ಆಂಧ್ರಪ್ರದೇಶದ ಬಂದರು ನಗರಿ ವಿಶಾಖಪಟ್ಟಣದಲ್ಲಿಗೂಗಲ್ ನ ಮೆಗಾ ಪ್ರಾಜೆಕ್ಟ್ ತಲೆ ಎತ್ತಲಿದೆ. ಇಲ್ಲಿಗೂಗಲ್ ಒಂದು ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಕ್ಯಾಂಪಸ್ ಅನ್ನ ನಿರ್ಮಿಸಲಿದೆ.

ಇದು ಅತ್ಯಾಧುನಿಕ ಎಐ ಮೂಲ ಸೌಕರ್ಯ ಬೃಹತ್ ಇಂಧನ ಮೂಲಗಳು ಮತ್ತು ವಿಸ್ತರಿತ ಫೈಬರ್ ಆಪ್ಟಿಕ್ ನೆಟ್ವರ್ಕ್ ಅನ್ನ ಒಳಗೊಂಡಿರುತ್ತೆ. ಒಮ್ಮೆ ಕಾರ್ಯಾರಂಭ ಮಾಡಿದ ನಂತರ ಈ ಕೇಂದ್ರವು ಭಾರತದ ವೇಗವಾಗಿ ಬೆಳೆಯುತ್ತಿರುವ ಡೇಟಾ ಅಗತ್ಯಗಳನ್ನ ಪೂರೈಸುವುದು ಮಾತ್ರವಲ್ಲದೆಗೂಗಲ್ ನ ಜಾಗತಿಕಎಐ ಎಕೋಸಿಸ್ಟಮ ನಲ್ಲಿ ಒಂದು ನಿರ್ಣಾಯಕ ಕೇಂದ್ರವಾಗಿ ಕಾರ್ಯವನ್ನ ನಿರ್ವಹಿಸಲಿದೆ. ಇನ್ನುಗೂಗಲ್ ನ ಈ ಮಹತ್ವದ ಹೂಡಿಕೆ ನಿರ್ಧಾರವು ಎಐ ಪ್ರಾಬಲ್ಯಕ್ಕಾಗಿ ಡೆಕ್ ದೈತ್ಯರಾದಮೈಕ್ರೋಸಾಫ್ಟ್ ಮತ್ತು amazon ನಡುವೆ ನಡೆಯುತ್ತಿರುವ ಗ್ಲೋಬಲ್ ಕಾಂಪಿಟೇಷನ್ನ ಭಾಗವಾಗಿದೆ. ಈಗಾಗಲೇ ಈ ಕಂಪನಿಗಳು ಭಾರತದಲ್ಲಿ ಶತಕೋಟಿ ಡಾಲರ್ಗಳನ್ನ ಹೂಡಿಕೆ ಮಾಡಿವೆ. ಸುಮಾರು ಒಂದು ಶತಕೋಟಿ ಇಂಟರ್ನೆಟ್ ಬಳಕೆದಾರರನ್ನ ಹೊಂದಿರುವ ಭಾರತ ಈ ಜಾಗತಿಕ ಟೆಕ್ ಕಂಪನಿಗಳಿಗೆ ಪ್ರಮುಖ ಎಮರ್ಜಿಂಗ್ ಮಾರ್ಕೆಟ್ ಆಗಿದೆ. ಈ ಹೂಡಿಕೆಯೊಂದಿಗೆ ಮುಂದಿನ ಪೀಳಿಗೆಯ ಎಐ ಅಪ್ಲಿಕೇಶನ್ಗಳು ಮತ್ತು ಕ್ಲೌಡ್ ಸೇವೆಗಳನ್ನ ಸಪೋರ್ಟ್ ಮಾಡುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲಿದೆ.ಗೂಗಲ್ ಗೂಗಲ್ ಡೇಟಾ ಸೆಂಟರ್ ನಿಂದ ಏನು ಉಪಯೋಗ ಸುಮಾರು 2 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ.

ಗೂಗಲ್ ಗೂಗಲ್ ಡೇಟಾ ಸೆಂಟರ್ ನಿಂದ ಏನು ಉಪಯೋಗ ಎಂಬುದನ್ನ ನೋಡುವುದಾದರೆಗೂಗಲ್ ತನ್ನ ಡೇಟಾ ಸೆಂಟರ್ ಗಳಿಗಾಗಿ ಪ್ರತ್ಯೇಕ ಪವರ್ ಗ್ರಿಡ್ ನಲ್ಲಿ ಹೂಡಿಕೆ ಮಾಡಲಿದೆ. ಇದಕ್ಕೆ ರಾಜ್ಯವು ಭಾಗಶಹ ಸಬ್ಸಿಡಿಯನ್ನ ನೀಡಲಿದೆ. ಈ ದೈತ್ಯ ಯೋಜನೆಯು ಕೇವಲ ತಂತ್ರಜ್ಞಾನ ಕ್ಷೇತ್ರಕ್ಕೆ ಮಾತ್ರವಲ್ಲ ಆರ್ಥಿಕತೆಗೂ ದೊಡ್ಡ ಉತ್ತೇಜನವನ್ನ ನೀಡಲಿದೆ. ಅಂದಾಜಿನ ಪ್ರಕಾರ ಈ ಯೋಜನೆಯಿಂದ ಸುಮಾರು 180000 ಉದ್ಯೋಗಿಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಅಷ್ಟೇ ಅಲ್ಲ 2028 ರಿಂದ 2032 ರ ಅವಧಿಯಲ್ಲಿ ಇದು ಆಂಧ್ರಪ್ರದೇಶದ ಒಟ್ಟು ರಾಜ್ಯ ದೇಶೀಯ ಉತ್ಪನ್ನಕ್ಕೆ ವಾರ್ಷಿಕವಾಗಿ 10518 ಕೋಟಿ ರೂಪಾಯಿಗಳ ಕೊಡುಗೆಯನ್ನ ನೀಡಲಿದೆ. ಇದು ಪವನ ಮತ್ತು ಸೌರಶಕ್ತಿ ಅಂತಹ ನವೀಕರಿಸಬಹುದಾದ ಇಂಧನ ಮೂಲಗಳೊಂದಿಗೆ ರಾಜ್ಯದ ವಿದ್ಯುತ್ ಮೂಲ ಸೌಕರ್ಯವನ್ನ ಬಲಪಡಿಸುತ್ತೆ. ಇದು ಸುಸ್ಥಿರತೆ ಮತ್ತು ಇಂಧನ ಭದ್ರತೆಗೂ ಸಪೋರ್ಟ್ ಮಾಡಲಿದೆ. ಇದು ದೊಡ್ಡ ಪ್ರಮಾಣದ ತಂತ್ರಜ್ಞಾನ ಹೂಡಿಕೆಗಳಿಗೆ ಅನುಕೂಲಕರವಾದ ಎಕೋ ಸಿಸ್ಟಮ ಅನ್ನ ಒದಗಿಸುವುದಲ್ಲದೆ ಭಾರತವನ್ನ ಪ್ರಮುಖ ಜಾಗತಿಕ ಡಿಜಿಟಲ್ ಮೂಲ ಸೌಕರ್ಯ ಕೇಂದ್ರವನ್ನಾಗಿ ಬಲಪಡಿಸುತ್ತೆ. ಇದರ ಜೊತೆಗೂಗಲ್ ಯೋಜನೆಯು ಆಂಧ್ರಪ್ರದೇಶದಲ್ಲಿನ ಸಿಫೈ ಡೇಟಾ ಸೆಂಟರ್ಗಳು ಆರ್ಸೆಲರ್ ಮಿತ್ತಲ್ ಉಕ್ಕಿನ ಸ್ಥಾವರ ಮತ್ತು ಬಿಪಿಸಿಎಲ್ ರಿಫೈನರ್ ಅಂತಹ ಇತರೇ ಪ್ರಮುಖ ಹುಡಿಕೆಗಳಿಗೆ ಪೂರಕವಾಗಿದೆ.

ಇವೆಲ್ಲವೂ ಒಟ್ಟಾಗಿ ಕೈಗಾರಿಕ ಬೆಳವಣಿಗೆ ಮತ್ತು ವೈವಿಧ್ಯಕರಣಕ್ಕೆ ಚಾಲನೆಯನ್ನ ನೀಡಲಿವೆ. ಆಂಧ್ರಪ್ರದೇಶ ಸರ್ಕಾರದ ಪ್ರಕಾರ ಈ ಯೋಜನೆಯ ಮೂಲ ಆಂಧ್ರ ಸರ್ಕಾರದ ಪ್ರಕಾರ ಈ ಯೋಜನೆಯ ಮೌಲ್ಯ ಸುಮಾರು 10 ಬಿಲಿಯನ್ ಡಾಲರ್ ಅಂದ್ರೆ ಆಲ್ಮೋಸ್ಟ್ ಲಕ್ಷ ಕೋಟಿ ರೂಪಾಯಿ ಹತ್ರ ಆಗುತ್ತೆ. ಈ ಬಗ್ಗೆ ಮಾತನಾಡಿದ ಆಂಧ್ರದ ಐಟಿ ಸಚಿವ ನಾರಾ ಲೋಕೇಶ್ ಇದು ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ವಿದೇಶಿ ನೇರ ಹುಡಿಕೆ ಆಗಲಿದೆ ಅಂತ ಹೇಳಿದ್ದಾರೆ. ಈ ಬೃಹತ್ ಹೂಡಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಿ ತೆರಿಗೆ ಮತ್ತು ಇತರ ಅನುಮತಿ ಪ್ರಕ್ರಿಯೆಗಳನ್ನ ಸುಗಮಗೊಳಿಸುವೆ ಅಂತ ತಿಳಿಸಿದ್ದಾರೆ. ಅಮೆರಿಕದ ಬಳಿಕ ಭಾರತದಲ್ಲೇ ದೊಡ್ಡ ಸೆಂಟರ್ ಮೈಕ್ರೋಸಾಫ್ಟ್ ನ ಬಿಗ್ ಡೇಟಾ ಸೆಂಟರ್ಗೆ ಸೆಡ್ಡು ಇನ್ನು ಭಾರತದ ವಿಶಾಖಪಟ್ಟಣಂನಲ್ಲಿ ಗೂಗಲ್ ನ 15 ಬಿಲಿಯನ್ ಡಾಲರ್ ಮೌಲ್ಯದ ಎಐ ಡೇಟಾ ಸೆಂಟರ್ ಹುಡಿಕೆಯು ಅಮೆರಿಕದ ಹೊರಗೆ ವಿಶ್ವದ ಅತಿ ದೊಡ್ಡ ಎಐ ಮೂಲ ಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ. ಇದನ್ನ ಆರಂಭಿಕವಾಗಿ ಒಂದು ಗಿಗಾವ್ಯಾಟ್ ಸಾಮರ್ಥ್ಯದ ಕ್ಯಾಂಪಸ್ ಆಗಿ ಆಯೋಜಿಸಲಾಗಿದ್ದು ಇದನ್ನ ಹಲವು ಗಿಗಾವ್ಯಾಟ್ ಗಳಿಗೆ ಹೆಚ್ಚಿಸಲಾಗುವುದು.

ಇದು ಅಮೆರಿಕದ ಸೌಲಭ್ಯಗಳನ್ನ ಹೊರತುಪಡಿಸಿದೆ ವಿಶ್ವದ ಅದ್ಯಂತ ಗೂಗಲ್ ನ ಅತಿ ದೊಡ್ಡ ಎಐ ಹಬ್ಬ ಆಗಲಿದೆ. ಒಂದೇ ಸ್ಥಳದಲ್ಲಿ ಅತಿ ದೊಡ್ಡ ಎಐ ಡಾಟಾ ಸೆಂಟರ್ ಹೂಡಿಕೆಗಳಲ್ಲಿ ಇದು ಒಂದಾಗಿದ್ದು ಆಪರೇಷನ್ಗಳನ್ನ ಸುಸ್ಥಿರವಾಗಿ ನಡೆಸಲು ದೊಡ್ಡ ಪ್ರಮಾಣದ ನವೀಕರಿಸಬಹುದಾದ ಇಂಧನವನ್ನ ಸಂಯೋಜಿಸುವುದು ಕೂಡ ಪ್ರಮುಖವಾಗಿದೆ. ಭಾರತದ ವೇಗದ ಡಿಜಿಟಲ್ ವಿಸ್ತರಣೆ ಮತ್ತುಗೂಗಲ್ ನ ಜಾಗತಿಕ ಎಐ ಸೇವಾಜಾಲ ಎರಡಕ್ಕೂ ಸೇವೆ ಸಲ್ಲಿಸಲು ಅನುಕೂಲ ಆಗುವಂತೆ ಎಐ ಹಬ್ಬ ಅನ್ನಗೂಗಲ್ ರಚಿಸುತ್ತಿದೆ. ಅಮೆರಿಕ ಮೂಲದ ಮೈಕ್ರೋಸಾಫ್ಟ್ ನ ಫೇರ್ ವಾಟರ್ ನಂತಹ ಎಐ ಡೇಟಾ ಸೆಂಟರ್ ಗಳಿಗೆ ಭಾರತದಲ್ಲಿನ ಎಐ ಹಬ್ ಸೆಟ್ಟು ಹೊಡೆಯುತ್ತೆ. ಒಟ್ಟನಲ್ಲಿಗೂಗಲ್ ನ ಈ ಬಿಗ್ ಇನ್ವೆಸ್ಟ್ಮೆಂಟ್ ಭಾರತದ ಡಿಜಿಟಲ್ ಪಯಾಣದಲ್ಲಿ ದೊಡ್ಡ ಮೈಲಿಗಲಾಗಲಿದೆ ಇದು ಕೇವಲ ಒಂದು ಡೇಟಾ ಸೆಂಟರ್ ಅಲ್ಲ ಬದಲಿಗೆ ಭಾರತದ ಯುವಕರಿಗೆ ಹೊಸ ಅವಕಾಶಗಳನ್ನ ಸೃಷ್ಟಿಸುವ ತಂತ್ರಜ್ಞಾನದಲ್ಲಿ ಭಾರತವನ್ನ ಜಾಗತಿಕ ಲೀಡರ್ ಮಾಡುವ ಮೂಲ ಸೌಕರ್ಯ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments