ಎಐ ಕ್ಷೇತ್ರದಲ್ಲಿ ಭಾರತದಲ್ಲಿ 15 ಬಿಲಿಯನ್ ಡಾಲರ್ ಹೂಡೋಕೆ ಗೂಗಲ್ ಮುಂದಾಗಿದೆ ಇದನ್ನ ಅಫಿಷಿಯಲ್ ಆಗಿ ಘೋಷಿಸಿದ್ದು ಇದುವರೆಗೆ ಭಾರತದಲ್ಲಿ ಗೂಗಲ್ ಮಾಡುತ್ತಿರೋ ಅತಿ ದೊಡ್ಡ ಹೂಡಿಕೆ ಅಷ್ಟೇ ಅಲ್ಲ ಅಮೆರಿಕದ ನಂತರ ಇದೆ ಫಸ್ಟ್ ಟೈಮ್ ಇಷ್ಟು ದೊಡ್ಡ ಮಟ್ಟದಲ್ಲಿ ಗೂಗಲ್ ತನ್ನ ಡೇಟಾ ಸೆಂಟರ್ ಅನ್ನ ಓಪನ್ ಮಾಡ್ತಾ ಇದೆ ಇದು ಭಾರತದ ಪಾಲಿಗೆ ಭಾರತದ ಟೆಕ್ ಕ್ಷೇತ್ರಕ್ಕೆ ಹೊಸ ಶಕ್ತಿ ಅಂತ ಬಣ್ಣಿಸಲಾಗ್ತಿದೆ ರಕ್ಷಣೆ ಆರೋಗ್ಯ ಹಣಕಾಸು ಎಲ್ಲಾ ಕಡೆ ಎಐ ಆವರಿಸಿಕೊಳ್ಳುತ್ತಿರೋ ಹೊತ್ತಲ್ಲೇ ಈ ಬೆಳವಣಿಗೆಯಾಗಿದೆ ಹಾಗಾದ್ರೆ ಏನಿದು ಗೂಗಲ್ ನ ಮಹಾ ಹೂಡಿಕೆ ಈ ಪ್ರಾಜೆಕ್ಟ್ ಮೂಲಕ ಗೂಗಲ್ ಮಾಡೋಕೆ ಹೊರಟಿರೋದೇನು. ಗೂಗಲ್ ನಿಂದ 15 ಬಿಲಿಯನ್ ಡಾಲರ್ ಘೋಷಣೆ ಟ್ರಂಪ್ ಧಮಕಿಗೆ ಡೋಂಟ್ ಕೇರ್ ಎಸ್ ಸ್ನೇಹಿತರೆ ಟ್ರಂಪ್ರ ಧಮಕಿ ನಡುವೆಗೂಗಲ್ ಇಂತದೊಂದು ಮಹತ್ವದ ಘೋಷಣೆಯನ್ನ ಮಾಡಿದೆ ದಿಲ್ಲಿಯಲ್ಲಿ ನಡೆದ ಇವೆಂಟ್ನಲ್ಲಿ ಈ ಘೋಷಣೆಯಾಗಿದ್ದು ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಬರೋಬರಿ 15 ಬಿಲಿಯನ್ ಡಾಲರ್ ಹಣವನ್ನ ಹೂಡಿಕೆ ಮಾಡ್ತೀವಿ ಅಂತ ಹೇಳಿದೆ ಅಂದ್ರೆ ನಮ್ಮ ಕರೆನ್ಸಿಯಲ್ಲಿ ಹೇಳ್ಬೇಕು ಅಂದ್ರೆ ಸುಮಾರು 1.33 ಲಕ್ಷ ಕೋಟಿ ಹಣವನ್ನಗೂಗಲ್ ಭಾರತದಲ್ಲಿ ಇನ್ವೆಸ್ಟ್ ಮಾಡುತ್ತೆ. ಅಲ್ದೇ ಈ ಪ್ರಾಜೆಕ್ಟ್ನಲ್ಲಿ ಅದಾನಿ ಗ್ರೂಪ್ airtel ಕೂಡ ಪಾಲುದಾರರಾಗ್ತಾರೆ. ಮೂರು ದೈತ್ಯ ಕಂಪನಿಗಳು ಸೇರಿಕೊಂಡು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಎಐ ಹಬ್ನ ನ ನಿರ್ಮಾಣ ಮಾಡ್ತಾರೆ. ಈಎಐ ಹಬ್ ಮೂಲಕ ಎಐ ವರ್ಕ್ ಲೋಡ್ ನ ಯಶಸ್ವಿಯಾಗಿ ಹ್ಯಾಂಡಲ್ ಮಾಡಬಹುದು ಅಂತ ಗೂಗಲ್ ಕಂಪನಿ ಹೇಳಿದೆ. ಅಲ್ದೆ ಭಾರತದಲ್ಲಿ ಹೆಚ್ಚಾಗ್ತಿರೋ ಡಿಜಿಟಲ್ ಬೇಡಿಕೆಗಳನ್ನ ಪೂರೈಸೋಕೆ ಇದು ಸಹಕಾರಿ ಆಗುತ್ತೆ.
ಈ ಯೋಜನೆ ಬಗ್ಗೆ ಈಗ ಆಲ್ರೆಡಿ ಪಿಎಂ ನರೇಂದ್ರ ಮೋದಿ ಅವರೊಂದಿಗೆ ನಾನು ಮಾತನಾಡಿದ್ದೀನಿ ಅಂತ ಗೂಗಲ್ ಸಿಇಓ ಸುಂದರ್ ಪಿಚಾಯಿ ಕೂಡ ಹೇಳಿದ್ದಾರೆ. ಅಲ್ದೆ ಎಐ ಹಬ್ ಪ್ರಾಜೆಕ್ಟ್ ಕುರಿತ ಒಪ್ಪಂದಕ್ಕೆ ದಿಲ್ಲಿಯಲ್ಲಿ ನಡೆದ ಸಭೆಯೊಂದರಲ್ಲಿ ಗೂಗಲ್ ಕ್ಲೌಡ್ ನ ಸಿಇಓ ಥಾಮ್ಸನ್ ಕುರಿಯನ್ ಸೈನ್ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಕುರಿಯನ್ ಇದು ನಾವು ಅಮೆರಿಕದ ಹೊರಗೆ ಎಐ ಹಬ್ ಮೇಲೆ ಮಾಡ್ತಿರೋ ಅತಿ ದೊಡ್ಡ ಇನ್ವೆಸ್ಟ್ಮೆಂಟ್ ಭಾರತದಲ್ಲಿ ಹೂಡಿಕೆ ಮಾಡ್ತಿರೋದಕ್ಕೆ ನಮಗೆ ಖುಷಿಯಆಗ್ತಾ ಇದೆ ಅಂತ ಹೇಳಿದ್ದಾರೆ. ಇನ್ನು ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ ಇಷ್ಟು ದೊಡ್ಡ ಹೂಡಿಕೆ ಮಾಡ್ತಿರೋದಕ್ಕೆ ಗೂಗಲ್ ಗೆ ಧನ್ಯವಾದ ಭಾರತದ ಎಐ ವಿಷನ್ ಗೆ ಇದು ಬಹಳ ಹೆಲ್ಪ್ ಆಗುತ್ತೆ ಅಂತ ಹೇಳಿದ್ದಾರೆ. ಇನ್ನು ಚಂದ್ರಬಾಬು ನಾಯಡು ಕೂಡ ಪ್ರತಿಕ್ರಿಯೆ ಕೊಟ್ಟಿದ್ದು ಬಹಳ ಸಂತೋಷದ ದಿನ ಈ ಪ್ರಾಜೆಕ್ಟ್ನಿಂದ ನೇರವಾಗಿ ಅಥವಾ ಪರೋಕ್ಷವಾಗಿ 1.88 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತೆ ಅನ್ನೋ ಹೇಳಿಕೆ ಕೊಟ್ಟಿದ್ದಾರೆ.
ಈ ಪ್ರಾಜೆಕ್ಟ್ನ ಭಾಗವಾಗಿ ಆಂಧ್ರದ ವಿಶಾಖಪಟ್ಟಣನಲ್ಲಿ ಒಂದು ಕಂಪ್ಲೀಟ್ ಎಐ ಇನ್ಫ್ರಾಸ್ಟ್ರಕ್ಚರ್ ನಿರ್ಮಾಣವಾಗುತ್ತೆ ಇದರಲ್ಲಿ ಮುಖ್ಯವಾಗಿ ಗೂಗಲ್ ಡೇಟಾ ಸೆಂಟರ್ ಒಂದನ್ನ ನಿರ್ಮಾಣ ಮಾಡುತ್ತೆ ಇದು ಅತಿ ದೊಡ್ಡ ಡೇಟಾ ಸೆಂಟರ್ ಆಗಿದ್ದು ಸುಮಾರು ಒಂದು ಗಿಗಾವ್ಯಾಟ್ ಸಾಮರ್ಥ್ಯ ಇರುತ್ತೆ ಈ ಡೇಟಾ ಸೆಂಟರ್ ನಿರ್ಮಾಣದಲ್ಲಿ ಅದಾನಿ ಗ್ರೂಪ್ ಕೂಡ ಕೈಜೋಡಿಸ್ತಾ ಇದೆ ಇಲ್ಲಿ ಡೇಟಾ ಸೆಂಟರ್ ಅಂದ್ರೆ ಏನು ಅಂತ ಕೆಲವರಿಗೆ ಕನ್ಫ್ಯೂಷನ್ ಇರಬಹುದು ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ದೊಡ್ಡ ಪ್ರಮಾಣದ ಡಿಜಿಟಲ್ ಡೇಟಾನ ಒಂದು ಕಡೆ ಸಂಗ್ರಹಿಸಿ ಇಡುವ ಅಥವಾ ಪ್ರೋಸೆಸ್ ಮಾಡುವ ವ್ಯವಸ್ಥೆ. ಈ ಡೇಟಾ ಸೆಂಟರ್ ಗಳಲ್ಲಿ ದೊಡ್ಡ ಪ್ರಮಾಣದ ಡೇಟಾನ ಸ್ಟೋರ್ ಪ್ರಾಸೆಸಿಂಗ್ ಮತ್ತು ಮ್ಯಾನೇಜ್ಮೆಂಟ್ ಮಾಡಲಾಗುತ್ತೆ. ಉದಾಹರಣೆಗೆ ನೀವು ನೋಡ್ತಿರೋ ಈ ವಿಡಿಯೋ ಕೂಡ ಒಂದು ಆಡಿಯೋ ವಿಶುವಲ್ ಡೇಟಾ ಈ ಡೇಟಾ ಅಪ್ಲೋಡ್ ಆದ ನಂತರ ಇದನ್ನ YouTube ಅನ್ನ ಡೇಟಾ ಸೆಂಟರ್ ನಲ್ಲಿ ಸ್ಟೋರ್ ಮಾಡಿಟ್ಟಿರುತ್ತೆ.
ಪ್ಲೇ ಮಾಡೋಕೆ ಕ್ಲಿಕ್ ಮಾಡಿದ ತಕ್ಷಣ ಡೇಟಾ ಸೆಂಟರ್ ನಲ್ಲಿರೋ ವಿಡಿಯೋ ಒಂದೊಂದಾಗಿ ಸಣ್ಣ ಸಣ್ಣ ಭಾಗಗಳಾಗಿ ನಿಮ್ಮ ಮೊಬೈಲ್ನಲ್ಲಿ ಡಿಸ್ಪ್ಲೇ ಆಗೋಕೆ ಶುರುವಾಗ್ತವೆ. ಈ ರೀತಿಯ ಡೇಟಾ ಸೆಂಟರ್ ಒಂದನ್ನ ಗೂಗಲ್ ವಿಶಾಖಪಟ್ಟಣಂನಲ್ಲಿ ನಿರ್ಮಾಣ ಮಾಡುತ್ತೆ. ಇದರಿಂದ ಭಾರತದ ಅತ್ಯಂತ ಎಫೆಕ್ಟಿವ್ ಆಗಿ ಡಿಜಿಟಲ್ ಅಗತ್ಯತೆಗಳನ್ನ ಪೂರೈಸಬಹುದು. ಈ ಡೇಟಾ ಸೆಂಟರ್ ನಿಂದ ಗೂಗಲ್ ಪ್ರಾಡಕ್ಟ್ಸ್ ಆಗಿರೋ ಗೂಗಲ್ ಸರ್ಚ್ ಇಂಜಿನ್ ವರ್ಕ್ ಸ್ಪೇಸ್ ಮತ್ತು YouTube ಗಳಿಗೆ ಮತ್ತಷ್ಟು ಶಕ್ತಿ ಸಿಗುತ್ತೆ. ಈಗಿನ ಅಂದಾಜಿನ ಪ್ರಕಾರ 2026ರ ಆರಂಭಕ್ಕೆ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 100 ಕೋಟಿಗೆ ರೀಚ್ ಆಗುವ ನಿರೀಕ್ಷೆ ಇದೆ. ಅಲ್ದೆ ಭಾರತದಲ್ಲಿ ಎಐ ಬಳಕೆ ಕೂಡ ಹೆಚ್ಚಾಗ್ತಿದೆ. ಹೈ ಪರ್ಫಾರ್ಮೆನ್ಸ್ ಮತ್ತು ಲೋ ಲೆಟೆನ್ಸಿ ಇಂಟರ್ನೆಟ್ ಬೇಕು ಅಂದ್ರೆ ಡೇಟಾ ಸೆಂಟರ್ ತುಂಬಾ ಮುಖ್ಯ. ಇನ್ನುಗೂಗಲ್ ನಿರ್ಮಾಣ ಮಾಡ್ತಿರೋ ಈಎಐ ಹಬ್ ಹೈ ಪರ್ಫಾರ್ಮೆನ್ಸ್ ಜೊತೆಗೆ ಲೋ ಲೇಟೆನ್ಸಿ ಸರ್ವಿಸಸ್ ನ ಕೂಡ ಒದಗಿಸುವುದ್ರಿಂದ ಆ ಗ್ಯಾಪ್ ನ ಇದು ಫುಲ್ಫಿಲ್ ಮಾಡುತ್ತೆ. ಇದು ಟಿಸಿಎಸ್ ಮೇಶೋ ಮೇಕ್ ಮೈ ಟ್ರಿಪ್ ನಂತಹ ದೊಡ್ಡ ಸಂಸ್ಥೆಗಳಿಂದ ಹಿಡಿದು ಕೋರೋವರ್ ಗ್ಲಾನ್ಸ್ ಇನ್ ವಿಡಿಯೋ ಎಐ ಸರ್ವಾಂ ನಂತಹ ಎಐ ಸ್ಟಾರ್ಟಪ್ ಗಳಿಗೂನು ಹೆಲ್ಪ್ ಆಗುತ್ತೆ.
ಈ ಸಂಸ್ಥೆಗಳಿಗೆ ತಮ್ಮ ರಿಸರ್ಚ್ ಮತ್ತು ಡೆವಲಪ್ಮೆಂಟ್ ಜೊತೆಗೆ ತಮ್ಮದೇ ಸ್ವಂತ ಎಐ ಪವರ್ ಸೊಲ್ಯೂಷನ್ಸ್ ನ ನಿರ್ಮಾಣ ಮಾಡ್ಕೊಳ್ಳೋಕೆ ಹೆಲ್ಪ್ ಆಗುತ್ತೆ. ಅಷ್ಟೇ ಅಲ್ಲ ಭಾರತದಲ್ಲಿ ನಿರ್ಮಾಣ ಆಗ್ತಿರೋ ಈ ಹೊಸ ಡೇಟಾ ಸೆಂಟರ್ ನ 12 ರಾಷ್ಟ್ರಗಳಲ್ಲಿರೋ ಗೂಗಲ್ ನ ಡೇಟಾ ಸೆಂಟರ್ ನೆಟ್ವರ್ಕ್ ಜೊತೆಗೆ ಕನೆಕ್ಟ್ ಮಾಡಲಾಗುತ್ತೆ. ಇದರ ಉಪಯೋಗ ನಮ್ಮ ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಲ್ಲಿರೋ ಗೂಗಲ್ ನ ಆರ್ ಎಂಡಿ ಅಂದ್ರೆ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸಂಸ್ಥೆಗಳಿಗೂ ಕೂಡ ಹೆಲ್ಪ್ ಆಗುತ್ತೆ. ಇಲ್ಲಿ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಇನ್ನೋವೇಷನ್ಗೂ ಸಪೋರ್ಟ್ ಸಿಗುತ್ತೆ. ಎರಡನೆಯದಾಗಿ ಈ ಪ್ರಾಜೆಕ್ಟ್ನ ಭಾಗವಾಗಿ ವಿಶಾಖಪಟ್ಟಣಂನಲ್ಲಿ ಸಬ್ಸಿ ಕೇಬಲ್ ನ ಲ್ಯಾಂಡಿಂಗ್ ಪಾಯಿಂಟ್ ನ ನಿರ್ಮಾಣ ಮಾಡಲಾಗುತ್ತೆ. ಅಂದ್ರೆ ಅಂತರಾಷ್ಟ್ರೀಯವಾಗಿ ಇಂಟರ್ನೆಟ್ ಸಾಗಾಟ ಮಾಡೋದಕ್ಕೆ ಅಥವಾ ಡೇಟಾ ಸಾಗಾಟ ಮಾಡೋದಕ್ಕೆ ಸಮುದ್ರದ ಆಳದಲ್ಲಿ ಹಾಕಲಾಗಿರೋ ಎಫ್ಸಿ ಆಪ್ಟಿಕಲ್ ಫೈಬರ್ ಕೇಬಲ್ ಅನ್ನಗೂಗಲ್ ತನ್ನ ಎಐ ಹಬ್ ಗೆ ತಂದು ಕನೆಕ್ಟ್ ಮಾಡುತ್ತೆ. ಈ ಕೇಬಲ್ ಗಳು ಬಹಳ ಇಂಪಾರ್ಟೆಂಟ್ ಯಾಕಂದ್ರೆ ಜಗತ್ತಲ್ಲಿ ಸುಮಾರು 99% ಡೇಟಾ ಇದೆ ಓಎಫ್ಸಿ ಕೇಬಲ್ ಗಳ ಮೂಲಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಟ್ರಾನ್ಸಫರ್ ಆಗೋದು ಇಂತಹ ಸಬ್ ಸಿ ಕೇಬಲ್ ಗಳು ಹೆಚ್ಚಾಗಿ ಕನೆಕ್ಟ್ ಆಗಿರೋದು ಮುಂಬೈ ಮತ್ತು ಚೆನ್ನೈಗಳಲ್ಲಿ ಇದನ್ನ ಹೊರತುಪಡಿಸಿ ಸ್ವಲ್ಪ ಕೊಚ್ಚಿನ್ ತುತ್ತುಕುಡಿ ಅಥವಾ ಈ ಟ್ಯೂಟಿ ಕೋರಿನ್ ಮತ್ತು ತ್ರಿವೆಂಡ್ರಮ ನಲ್ಲೂ ಕೂಡ ಸಣ್ಣ ಪ್ರಮಾಣದಲ್ಲಿ ಅಂತರಾಷ್ಟ್ರೀಯ ಕೇಬಲ್ ಗಳನ್ನ ಕನೆಕ್ಟ್ ಮಾಡಲಾಗಿದೆ.
ಈಗ ಗೂಗಲ್ ವಿಶಾಖಪಟ್ಟಣಂನಲ್ಲೂ ಕೂಡ ಇನ್ನೊಂದು ಕೇಬಲ್ ಲ್ಯಾಂಡಿಂಗ್ ಪಾಯಿಂಟ್ ನ ನಿರ್ಮಾಣ ಮಾಡೋದಾಗಿ ಹೇಳಿದೆ. ಇದರಿಂದ ಭಾರತದಲ್ಲಿ ಟೆಕ್ ಮೂಲ ಸೌಕರ್ಯ ಇಂಪ್ರೂವ್ ಆಗುತ್ತೆ. ಹಾಗೆ ಗೂಗಲ್ ಭಾರತದ ಒಳಗೂ ಕೂಡ ಕೇಬಲ್ ನೆಟ್ವರ್ಕ್ ನ ವಿಸ್ತರಣೆ ಮಾಡೋ ಗುರಿಯನ್ನ ಇಟ್ಕೊಂಡಿದೆ. ಇದಕ್ಕಾಗಿ ಭಾರತಿ ಏರ್ಟೆಲ್ ಜೊತೆಗೆ ಕೈ ಜೋಡಿಸಿದ್ದಾರೆ. ಹೆಚ್ಚಿನ ಕೇಬಲ್ ಕನೆಕ್ಟಿವಿಟಿ ನಿರ್ಮಾಣ ಆದ್ರೆ ಹೈ ಪರ್ಫಾರ್ಮೆನ್ಸ್ ಮತ್ತು ಲೋ ಲೇಟೆನ್ಸಿ ಇರೋ ಹೊಸ ಆಪ್ಷನ್ ಸಿಗುತ್ತೆ. ಇದರಿಂದಗೂಗಲ್ ತನ್ನ ಬಳಕೆದಾರರಿಗೆ ಫಾಸ್ಟ್ ಎಕ್ಸ್ಪೀರಿಯನ್ಸ್ ನ ಪ್ರೊವೈಡ್ ಮಾಡೋಕ್ಕೆ ಸಾಧ್ಯ ಆಗುತ್ತೆ.ಗೂಗಲ್ ಗೂ ದೊಡ್ಡ ಅವಕಾಶ. ಎಸ್ಗೂಗಲ್ ಗೆ ಏನು ಪ್ರಾಫಿಟ್ ಅಂತ ನೋಡ್ತಾ ಹೋದ್ರೆ ಮೊದಲನೇದಾಗಿ ಮಾರ್ಕೆಟ್ ವಿಸ್ತರಣೆಗೂಗಲ್ 140 ಕೋಟಿಗೂ ಅಧಿಕ ಜನಸಂಖ್ಯೆ ಇರೋ ಭಾರತದ ಮಾರ್ಕೆಟ್ ನ ಅವರು ಬಿಡಕಾಗಲ್ಲ ಅದಕ್ಕೆ ಮಹತ್ವ ಕೊಡಬೇಕು ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗ್ತಿದೆ. ಗೂಗಲ್ ನ ಪ್ರಾಡಕ್ಟ್ಸ್ ಬಳಸುವರ ಸಂಖ್ಯೆ ಕೂಡ ವೇಗವಾಗಿ ರಾಪಿಡ್ಲಿ ಗ್ರೋ ಆಗ್ತಿದೆ. ಇದರಿಂದ ಗೂಗಲ್ ಗೆ ದೊಡ್ಡ ಪ್ರಮಾಣದ ಡೇಟಾ ಕಲೆಕ್ಟ್ ಮಾಡೋಕ್ಕೆ ಸಾಧ್ಯ ಆಗುತ್ತೆ. ಇತ್ತೀಚಿಗೆ ಡಿಜಿಟಲ್ ಡೇಟಾ ಎಷ್ಟು ಇಂಪಾರ್ಟೆಂಟ್ ಅನ್ನೋದು ನಿಮಗೆ ಗೊತ್ತು. ಅದನ್ನ ಹೊಸ ಇಂಧನ ಡೇಟಾ ಇಸ್ ಎ ನ್ಯೂ ಆಯಿಲ್ ಅಂತ ಕೂಡ ಕರೆಯಲಾಗುತ್ತೆ. ಅಷ್ಟು ಕ್ರೂಷಿಯಲ್ ಹಾಗೆ ಎಐ ಡೆವಲಪ್ಮೆಂಟ್ ಮತ್ತು ಅವುಗಳ ತರಬೇತಿಗಾಗಿ ದೊಡ್ಡ ಪ್ರಮಾಣದ ಸ್ಯಾಂಪಲ್ ಸೈಜ್ ಭಾರತದಲ್ಲಿ ಸಿಗುತ್ತೆ. ಹೀಗಾಗಿ ಭಾರತದಲ್ಲಿ ದೊಡ್ಡ ಸ್ಟ್ರಾಟಜಿಯನ್ನ ಗೂಗಲ್ ಮಾಡಿದೆ. ಅಲ್ದೇ ಅಮೆರಿಕಾ ಯೂರೋಪ್ ಗೆ ಕಂಪೇರ್ ಮಾಡಿದ್ರೆ ಭಾರತದಲ್ಲಿ ಆರ್ ಎಂಡಿ ರಿಸರ್ಚ್ ಅಂಡ್ ಡೆವಲಪ್ಮೆಂಟ್ ನ ಕಾಸ್ಟ್ ಕಮ್ಮಿ ಸ್ಕಿಲ್ ಇರೋರು ಅಲ್ಲಿಗೆಲ್ಲ ಕಂಪೇರ್ ಮಾಡಿದ್ರೆ ಕಮ್ಮಿ ಸ್ಯಾಲರಿಗೆ ಇಲ್ಲಿ ಸಿಗ್ತಾರೆ.
ಹೀಗಾಗಿ ಎಐ ಹಬ್ ಗೂಗಲ್ ನ ಹೊಸ ಅನ್ವೇಷಣೆಗಳಿಗೂನು ಹೆಲ್ಪ್ ಆಗುತ್ತೆ. ಕ್ಲೌಡ್ ಸರ್ವಿಸ್ ಮಾರ್ಕೆಟ್ ವಿಸ್ತರಣೆ. ಈ ಎಐ ಹಬ್ ಪ್ರಾಜೆಕ್ಟ್ ಮೂಲಕ ಸ್ಥಳೀಯವಾಗಿ ಡೇಟಾ ಸ್ಟೋರ್ ಮಾಡ್ತಿರೋದ್ರಿಂದ ತನ್ನ ಕ್ಲೌಡ್ ಸರ್ವಿಸ್ ಮಾರ್ಕೆಟ್ ನ ಹೆಚ್ಚಿಸಿಕೊಳ್ಳೋದಕ್ಕೂ ಗೂಗಲ್ ಗೆ ಹೆಲ್ಪ್ ಆಗುತ್ತೆ. ಕ್ಲೌಡ್ ಸರ್ವಿಸ್ ಅಂದ್ರೆ ನೀವು ಒಂದು ಫೈಲ್ ನ ಸ್ಟೋರ್ ಮಾಡೋಕೆ ಅಥವಾ ಅಪ್ಲಿಕೇಶನ್ ರನ್ ಮಾಡೋಕೆ ನಿಮ್ಮ ಕಂಪ್ಯೂಟರ್ ಬಳಸೋ ಬದಲು ಇಂಟರ್ನೆಟ್ ಮೂಲಕ ಬೇರೊಂದು ಕಂಪ್ಯೂಟರ್ ಬಳಸೋ ಸಿಸ್ಟಮ್ ಉದಾಹರಣೆಗೆ ಫೈಲ್ಸ್ ಫೋಟೋ ವಿಡಿಯೋನ ಸ್ಟೋರ್ ಮಾಡೋಕೆ ನೀವು ಬಳಸೋ ಗೂಗಲ್ ಡ್ರೈವ್ ಅದು ಕೂಡ ಕ್ಲೌಡ್ ಸರ್ವಿಸ್. ಹೀಗೆ ವಿವಿಧ ಕ್ಲೌಡ್ ಸರ್ವಿಸಸ್ ನ ಕೊಡೋಕೆ ಬೇರೆ ಬೇರೆ ವ್ಯವಸ್ಥೆ ಇದೆ. ಸೋ ಈ ರೀತಿಯ ಕ್ಲೌಡ್ ಸರ್ವಿಸ್ ಮಾರ್ಕೆಟ್ ಭಾರತದಲ್ಲಿ 2024 ರಲ್ಲಿ ಸುಮಾರು 14.4 4 ಬಿಲಿಯನ್ ಡಾಲರ್ ವ್ಯಾಲ್ಯುವೇಷನ್ ಇತ್ತು ಇದು 2032ರ ವೇಳೆಗೆ 68 ಬಿಲಿಯನ್ ಡಾಲರ್ಗೆ ಜಂಪ್ ಆಗಬಹುದು ಅನ್ನೋ ಅಂದಾಜ ಇದೆ ಹೀಗಾಗಿ ಇದ್ದರಿಂದ ಗೂಗಲ್ ಗೆ ದೊಡ್ಡ ಲಾಭದ ನಿರೀಕ್ಷೆ ಇದೆ ಭಾರತದ ಸ್ಟಾರ್ಟಪ್ ಗಳು ಮತ್ತು ಡೆಕ್ ಆರೋಗ್ಯ ರಕ್ಷಣೆ ಶಿಕ್ಷಣ ಎಲ್ಲಾ ಕ್ಷೇತ್ರದ ಕಂಪನಿಗಳು ಎಐ ಬಳಸ್ತಾ ಇದ್ದಾರೆ.
ಈ ಎಲ್ಲಾ ಕಂಪನಿಗಳಿಗೂನು ಅದಕ್ಕೆ ಬೇಕಾದ ಪ್ರಾಸೆಸಿಂಗ್ ಪವರ್ನ್ನ ತಾವೇ ಸೆಟ್ಪ್ ಮಾಡಿ ಇಟ್ಕೊಳ್ಳಕೆ ಆಗೋದಿಲ್ಲ ಎಲ್ಲರೂ ಕೂಡ ಹೈ ಎಂಡ್ ಗ್ರಾಫಿಕ್ಸ್ ಕಾರ್ಡ್ ಗಳ ಒಂದು ಸರ್ವರ್ ರೂಮ್ನ ಸೆಟ್ಪ್ ಮಾಡಿ ಇಟ್ಕೊಳ್ಳಕೆ ಆಗೋದಿಲ್ಲ ಅದೆಲ್ಲ ಇವರ ಗೂಗಲ್ ನವರು ಸೆಟ್ಪ್ ಮಾಡಿ ಇಟ್ಕೊಂಡ್ರೆ ಇಲ್ಲಿ ಇವರ ಕಂಪ್ಯೂಟರ್ ಅಲ್ಲಿ ಆಗ್ಬೇಕಾಗಿರೋ ಆ ಒಂದು ಪ್ರಾಸೆಸಿಂಗ್ ಅನ್ನ ಇಂಟರ್ನೆಟ್ ಮೂಲಕ ಈ ರೀತಿ ಡೇಟಾ ಸೆಂಟರ್ ಗಳು ಇಟ್ಕೊಂಡಿರೋರದು ಸರ್ವಿಸ್ ನ ಬಳಸಿಕೊಂಡು ಅವರ ಪ್ರಾಸೆಸಿಂಗ್ ಪವರ್ನ್ನ ಬಳಸಿಕೊಂಡು ಅಲ್ಲಿ ಪ್ರೋಸೆಸ್ ಮಾಡಿ ಇಂಟರ್ನೆಟ್ ಮೂಲಕ ಅದನ್ನ ಆಕ್ಸೆಸ್ ಮಾಡಬಹುದು. ಆ ಲೆಕ್ಕಾಚಾರ ಅಧಿಕ ದೊಡ್ಡ ಬೂಮಿಂಗ್ ಬಿಸಿನೆಸ್ ಅದನ್ನ ಸಪರೇಟ್ ಆಗಿ ನಿಮಗೆ ಎಕ್ಸ್ಪ್ಲೈನ್ ಮಾಡಬಹುದು ಸ್ನೇಹಿತರೆ. ಸೋ ಈ ಎಲ್ಲಾ ಲೆಕ್ಕಾಚಾರಗಳಿಂದ ಗೂಗಲ್ ಭಾರತದಲ್ಲಿ ಹೂಡಿಕೆ ಮಾಡ್ತಾ ಇದೆ. ಈ ಮೂಲಕ ಅಲ್ಟಿಮೇಟ್ಲಿ ಟ್ರಂಪ್ ಏನೇ ಹೇಳ್ಲಿ ಸರ್ಕಾರಗಳು ಏನೇ ಹೇಳ್ಲಿ ಕಂಪನಿಗಳಿಗೆ ಅಲ್ಟಿಮೇಟ್ಲಿ ನಾವು ಏನು ದುಡ್ಡು ಹಾಕ್ತೀವಿ ಅದಕ್ಕೆ ಏನು ರಿಟರ್ನ್ಸ್ ಸಿಗುತ್ತೆ ಫ್ಯೂಚರ್ ಗ್ರೋತ್ ನ ಪಾಸಿಬಿಲಿಟಿಸ್ ಏನು ಅದೇ ಮುಖ್ಯ ಆಗುತ್ತೆ. ಅದು ಭಾರತದಲ್ಲಿಗೂಗಲ್ ಗೆ ಕಾಣಿಸ್ತಾ ಇರೋದಕ್ಕೆ ಬರ್ತಾ ಇದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ನಿಮಗೆ ಏನ ಅನ್ಸುತ್ತೆ ಕಾಮೆಂಟ್ ಮಾಡಿ ತಿಳಿಸಿ. ಹಾಗೆ ಸ್ನೇಹಿತರೆ ನೀವು ಕೂಡಮಸ್ಮಗ ಪ್ರೀಮಿಯಂ ಮೆಂಬರ್ಶಿಪ್ ಅನ್ನ ಜಾಯಿನ್ ಆಗೋಕ್ಕೆ ಕನ್ಸಿಡರ್ ಮಾಡಬಹುದು. ವಿಡಿಯೋ ಕೆಳಗಡೆ ಜಾಯಿನ್ ಅನ್ನೋ ಬಟನ್ ಕಾಣಿಸ್ತಾ ಇದೆ. ಅದರ ಮೂಲಕ ಆಂಡ್ರಾಯ್ಡ್ ಯೂಸರ್ಸ್ ಡೈರೆಕ್ಟ್ಲಿ ಅಲ್ಲಿ ಜಾಯಿನ್ ಆಗಬಹುದು.apple ಡಿವೈಸಸ್ ನ ಯೂಸ್ ಮಾಡ್ತಿರೋರು ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಪ್ರತ್ಯೇಕ ಮೆಂಬರ್ಶಿಪ್ ಅಂತ ಮೆನ್ಷನ್ ಮಾಡಿ ಸಪರೇಟ್ ಲಿಂಕ್ ಅನ್ನ ಕೊಟ್ಟಿರ್ತೀವಿ. ಅದರ ಮೇಲೆ ಕ್ಲಿಕ್ ಮಾಡೋ ಮೂಲಕ ಬ್ರೌಸರ್ ಗೆ ಹೋಗಿ ನೀವು apple ಯೂಸರ್ಸ್ ಜಾಯಿನ್ ಆಗಬಹುದು. ಅಲ್ಲಿ ನಾವು ಮೆಂಬರ್ಸ್ ಓನ್ಲಿ ಕಾಂಟೆಂಟ್ ನ ಒಂದಷ್ಟು ವ್ಯಾಲ್ಯೂಬಲ್ ಮಾಹಿತಿಯನ್ನ ಕೊಡ್ತಾ ಬರ್ತಾ ಇದೀವಿ ಲಾಂಚ್ ಮಾಡಿದೀವಿ ಅದನ್ನ ಆಲ್ರೆಡಿ ಸುಮಾರು ವಿಡಿಯೋಸ್ ಅಲ್ಲಿ ಬರ್ತಾ ಇದ್ದಾವೆ.


