Thursday, November 20, 2025
HomeStartups and Businessಒಂದು ಆಸ್ಪತ್ರೆಯಿಂದ ಪ್ರಾರಂಭವಾದ ಅಪೋಲೊ ಸಂಸ್ಥೆಯ ವಿಜಯಯಾತ್ರೆ | ಯಾರು ಈ ಸಂಸ್ಥೆಯ ಸ್ಥಾಪಕರು?

ಒಂದು ಆಸ್ಪತ್ರೆಯಿಂದ ಪ್ರಾರಂಭವಾದ ಅಪೋಲೊ ಸಂಸ್ಥೆಯ ವಿಜಯಯಾತ್ರೆ | ಯಾರು ಈ ಸಂಸ್ಥೆಯ ಸ್ಥಾಪಕರು?

ವೀಕ್ಷಕರೇ 1980ರ ದಶಕದಲ್ಲಿ ನಮ್ಮ ದೇಶದಲ್ಲಿ ಸರಿಯಾದಂತ ವೈದ್ಯಕೀಯ ಮೂಲ ಸೌಕರ್ಯ ಇರಲಿಲ್ಲ ಎಷ್ಟು ಹಣ ಖರ್ಚು ಮಾಡಿದ್ರು ಕೂಡ ನಮ್ಮ ದೇಶದಲ್ಲಿ ಸರಿಯಾದ ಚಿಕಿತ್ಸೆ ಸಿಗತಿರಲಿಲ್ಲ ಹೀಗಾಗಿನೇ ದೊಡ್ಡ ದೊಡ್ಡ ಸಿನಿಮಾ ನಟರು ರಾಜಕೀಯ ನಾಯಕರುಗಳು ಬಿಸಿನೆಸ್ ಮ್ಯಾನ್ಗಳು ಇವೆರಡು ಕೂಡ ವಿದೇಶಗಳಿಗೆ ಹೋಗಿ ಅಲ್ಲಿ ಚಿಕಿತ್ಸೆಯನ್ನ ಪಡೀತಾ ಇದ್ರು ಇದನ್ನ ಗಮನಿಸಿದಂತ ಒಬ್ಬ ವೈದ್ಯರು ಭಾರತದಲ್ಲಿ ಅಂತರಾಷ್ಟ್ರೀಯ ಮಟ್ಟದ ವೈದ್ಯಕೀಯ ಮೂಲ ಸೌಕರ್ಯ ಮತ್ತು ಚಿಕಿತ್ಸೆ ಸಿಗಬೇಕು ಎಂಬ ಒಂದು ಆಲೋಚನೆಯಿಂದ ಒಂದು ಸಣ್ಣ ಸಣ್ಣ ಕ್ಲಿನಿಕ್ ಅನ್ನ ಶುರು ಮಾಡ್ತಾರೆ ಆದರೆ ಆ ಒಂದು ಸಣ್ಣ ಆಸ್ಪತ್ರೆ ಇವತ್ತು ಭಾರತದಲ್ಲೇ ಲಾರ್ಜೆಸ್ಟ್ ಪ್ರೈವೇಟ್ ಹಾಸ್ಪಿಟಲ್ ನೆಟ್ವರ್ಕ್ ಆಗಿ ಬೆಳೆದು ನಿಂತಿದೆ ಹೌದು ಅದು ಬೇರೆ ಯಾವುದು ಅಲ್ಲ ಅಪೋಲೋ ಹಾಸ್ಪಿಟಲ್ ಹಾಸ್ಪಿಟಲ್ ಮಾತ್ರ ಅಲ್ಲ ಫಾರ್ಮಸಿ ಬಿಸಿನೆಸ್ ನಲ್ಲೂ ಕೂಡ ಅಪೋಲೋ ಭಾರತದಲ್ಲೇ ಲಾರ್ಜೆಸ್ಟ್ ನೆಟ್ವರ್ಕ್ ಅನ್ನ ರನ್ ಮಾಡ್ತಿದೆ ಇಲ್ಲಿ ಮೂಡುವಂತ ಪ್ರಶ್ನೆ ಏನು ಅಂದ್ರೆ ನಮ್ಮ ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯವನ್ನ ವ್ಯವಹಾರವಾಗಿ ಅಲ್ಲದೆ ಸೇವೆಯಾಗಿ ಕೂಡ ನೋಡ್ತಾರೆ ಹಾಗಾದ್ರೆ ಅಂತ ಸೆಕ್ಟರ್ನಲ್ಲಿ ಈ ಅಪೋಲೋ ಸಂಸ್ಥೆ ಸಾವಿರಾರು ಕೋಟಿಗಳ ಬಿಸಿನೆಸ್ ಹೇಗೆ ಮಾಡ್ತಿದೆ 198 81ರಲ್ಲಿ ಅಪೋಲೋ ಫೌಂಡರ್ ಡಾಕ್ಟರ್ ಪ್ರತಾಪ್ ರೆಡ್ಡಿ ಅವರು ತಮ್ಮ ಆಸ್ಪತ್ರೆಯಲ್ಲಿ ಬಡ ಜನರಿಗೆ 15% ಹಾಸಿಕೆಗಳನ್ನ ರಿಸರ್ವ್ ಮಾಡಿ ಉಚಿತ ಚಿಕಿತ್ಸೆ ಕೊಡ್ತೀನಿ ಅಂತ ಹೇಳಿ ಆಂಧ್ರಪ್ರದೇಶದ ಸರ್ಕಾರದಿಂದ 30 ಎಕರೆ ಜಮೀನನ್ನ ಪಡ್ಕೊಂಡಿದ್ರು ಆದರೆ ಇಲ್ಲಿ ಟ್ವಿಸ್ಟ್ ಏನು ಅಂದ್ರೆ ಅಪೋಲೋ ಆಸ್ಪತ್ರೆಗಳಲ್ಲಿ ವಾಸ್ತವವಾಗಿ ಬಡಜನರಿಗೆ ಉಚಿತ ಚಿಕಿತ್ಸೆಯನ್ನ ಕೊಡ್ತಿಲ್ಲ ಅಂತ ಹೇಳಿ 2020 ರಲ್ಲಿ ತೆಲಂಗಾಣ ಹೈಕೋರ್ಟ್ನಲ್ಲಿ ಒಂದು ಪ್ರಕರಣ ದಾಖಲಾಗಿದೆ ಹಾಗಾದ್ರೆ.

ಈ ಒಂದು ಪ್ರಕರಣ ನಿಜವಾಗಿಯೂ ಯಾಕಾಗಿ ದಾಖಲಾಗಿದೆ ತೆಲಂಗಾಣ ಹೈಕೋರ್ಟ್ ಈ ಒಂದು ಪ್ರಕರಣದಲ್ಲಿ ಏನು ತೀರ್ಪನ್ನ ಕೊಡ್ತು ಕೇವಲ ಒಂದು ಆಸ್ಪತ್ರೆಯಿಂದ ಶುರುವಾದಂತ ಈ ಒಂದು ಅಪೋಲೋ ಆಸ್ಪತ್ರೆ ಇವತ್ತು ದೇಶಾದ್ಯಂತ ಸುಮಾರು 73 ಹಾಸ್ಪಿಟಲ್ಗಳು 10ಸಾ ಬೆಡ್ಗಳು 6000 ಫಾರ್ಮಸಿಗಳು 700 ಕ್ಲಿನಿಕ್ಗಳು 2300ಕ್ಕೂ ಹೆಚ್ಚು ಡಯಾಗ್ನೋಸ್ಟಿಕ್ ಸೆಂಟರ್ಗಳು ಮತ್ತೆ ವರ್ಷದಿಂದ ವರ್ಷಕ್ಕೆ ಸಾವಿರಾರು ಕೋಟಿ ಆದಾಯವನ್ನು ಗಳಿಸುತ್ತಿರುವಂತ ಈ ಅಪೋಲೋ ಸಂಸ್ಥೆ ದೇಶದ ನಂಬರ್ ಒನ್ ನೆಟ್ವರ್ಕ್ ಆಗಿ ಬೆಳೆದಿದ್ದು ಹೇಗೆ ಈ ಅಪೋಲೋ ಆಸ್ಪತ್ರೆಗಳ ಹಿಂದಿನ ಸಂಪೂರ್ಣ ಕಥೆ ಏನು ಅನ್ನೋದನ್ನ ನಾನು ನಿಮಗೆ ಈ ಒಂದು ವಿಡಿಯೋದಲ್ಲಿ ತಿಳಿಸಿಕೊಡ್ತೀನಿ ವೀಕ್ಷಕರೇ ಹೆಲ್ತ್ ಕೇರ್ ಸೆಕ್ಟರ್ ನಲ್ಲಿ ಈ ಅಪೋಲೋ ಸಂಸ್ಥೆ ಬಿಸಿನೆಸ್ ಅನ್ನ ಹೇಗೆ ಮಾಡುತ್ತೆ ಅಂತ ನೀವು ಅರ್ಥ ಮಾಡ್ಕೊಳ್ಬೇಕಾದರೆ ಮೊದಲು ನಮ್ಮ ದೇಶದ ಕಾನೂನುಗಳಲ್ಲಿ ಏನಿದೆ ಅನ್ನೋದನ್ನ ತಿಳ್ಕೊಬೇಕು ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಎಜುಕೇಶನ್ ಮತ್ತು ಹೆಲ್ತ್ ಕೇರ್ ಅನ್ನ ಸರ್ವಿಸ್ ಅಂತ ಪರಿಗಣಿಸಲಾಗುತ್ತೆ ಆದರೆ ಇಲ್ಲಿ ಒಂದು ಸಣ್ಣ ಲೂಪ್ ಹೋಲ್ ಇದೆ ಅದೇನಪ್ಪಾ ಅಂದ್ರೆ ನಮ್ಮ ದೇಶದ ಎಜುಕೇಶನ್ ಸೆಕ್ಟರ್ನಲ್ಲಿ ಬಿಸಿನೆಸ್ ಮಾಡಬಾರದು ಶಾಲೆಗಳು ಮತ್ತು ಕಾಲೇಜುಗಳನ್ನ ಚಾರಿಟಬಲ್ ಹಾಗೂ ನಾನ್ ಪ್ರಾಫಿಟಬಲ್ ಆರ್ಗನೈಸೇಶನ್ ಆಗಿ ಮಾತ್ರ ನಡೆಸಬೇಕು ಅಂತ ಅನೇಕ ಕಾನೂನುಗಳು ಮತ್ತು ನ್ಯಾಯಾಲಯ ತೀರ್ಪನ್ನ ಸ್ಪಷ್ಟವಾಗಿ ಹೇಳ್ತಾವೆ ಉದಾಹರಣೆಗೆ ಇನ್ಕಮ್ ಟ್ಯಾಕ್ಸ್ ಆಕ್ಟ್ 1961 ಸುಪ್ರೀಂ ಕೋರ್ಟ್ ಜಡ್ಜ್ಮೆಂಟ್ ಯುಜಿಸಿ ಆಕ್ಟ್ 1956 ಈ ರೀತಿ ಇತ್ಯಾದಿ ಆದರೆ ಇಂತ ಕಾನೂನುಗಳು ಹೆಲ್ತ್ ಕೇರ್ ಸೆಕ್ಟರ್ ನಲ್ಲಿ ಇಲ್ಲ ಅಂದ್ರೆ ಹೆಲ್ತ್ ಕೇರ್ ಸೆಕ್ಟರ್ನಲ್ಲಿ ಬಿಸಿನೆಸ್ ಅನ್ನ ಮಾಡಬಾರದು. ಲಾಭವನ್ನ ಗಳಿಸಬಾರದು ಅಂತ ಹೇಳುವಂತ ಯಾವುದೇ ಕಾನೂನುಗಳು ನಮ್ಮ ದೇಶದಲ್ಲಿ ಇಲ್ಲ.

ಹೀಗಾಗಿನೇ ಅನೇಕರು ಆರೋಗ್ಯ ಕ್ಷೇತ್ರದಲ್ಲಿ ಚೆನ್ನಾಗಿ ವ್ಯವಹಾರವನ್ನ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಅಪೋಲೋ ಕಂಪನಿ ಹೇಗೆ ಶುರುವಾಯ್ತು ಅಂತ ನೋಡುವುದಾದರೆ ಈ ಒಂದು ಸಂಸ್ಥೆಯನ್ನ ಪ್ರತಾಪ್ ಚಂದ್ರ ರೆಡ್ಡಿ ಅನ್ನೋವರು ಸ್ಥಾಪಿಸುತ್ತಾರೆ. ಇವರು ಜನಿಸಿದ್ದು ಚಿತ್ತೂರು ಜಿಲ್ಲೆಯಲ್ಲಿ 1952 ರಲ್ಲಿ ಚೆನ್ನೈನ ಸ್ಟಾನ್ಲಿ ಮೆಡಿಕಲ್ ಕಾಲೇಜ್ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಕ್ಕೆ ಇವರು ಹೋಗ್ತಾರೆ. ಅಲ್ಲಿ ಕಾರ್ಡಿಯಾಲಜಿಯಲ್ಲಿ ಸ್ಪೆಷಲೈಜೇಷನ್ ಮಾಡಿ ಹಲವಾರು ವರ್ಷಗಳ ಕಾಲ ಅಲ್ಲಿ ಸಕ್ಸಸ್ಫುಲ್ ಡಾಕ್ಟರ್ ಆಗಿ ಕಾರ್ಯವನ್ನ ನಿರ್ವಹಿಸುತ್ತಾರೆ. ಆದರೆ ಕೆಲವು ವರ್ಷಗಳ ನಂತರ ಪ್ರತಾಪ್ ರೆಡ್ಡಿ ಅವರ ಪೋಷಕರು ಅವರಿಗೆ ಭಾರತಕ್ಕೆ ಹಿಂದಿರಿಗೆ ಬರುವಂತೆ ಕೇಳ್ಕೊಳ್ತಾರೆ. ಹೀಗಾಗಿ 1970ರ ದಶಕದಲ್ಲಿ ಅವರು ಭಾರತಕ್ಕೆ ಮರಳಿ ಚೆನ್ನೈನಲ್ಲಿ ಒಂದು ಸಣ್ಣ ಕ್ಲಿನಿಕ್ ಅನ್ನ ಶುರು ಮಾಡ್ತಾರೆ. ಆದರೆ ಆ ಒಂದು ಸಮಯದಲ್ಲಿ ನಮ್ಮ ದೇಶದ ಹೆಲ್ತ್ ಕೇರ್ ಸೆಕ್ಟರ್ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಬಹುತೇಕ ಆಸ್ಪತ್ರೆಗಳು ಸರ್ಕಾರದ ನಿಯಂತ್ರಣದಲ್ಲಿ ಇದ್ದರೂ ಅಲ್ಲಿ ಸರಿಯಾದ ಇನ್ಫ್ರಾಸ್ಟ್ರಕ್ಚರ್ ಇರಲಿಲ್ಲ. ಇಲ್ಲಿ ಸಾಮಾನ್ಯ ಜನ ಕಷ್ಟ ಪಡ್ತಿದ್ದರೆ ಇನ್ನೊಂದು ಕಡೆ ಶ್ರೀಮಂತರು ವಿದೇಶಕ್ಕೆ ಹೋಗಿ ಅಲ್ಲಿ ಒಳ್ಳೆ ಚಿಕಿತ್ಸೆಯನ್ನ ಪಡೀತಾ ಇದ್ರು. ಇದನ್ನ ಗಮನಿಸಿದಂತ ಪ್ರತಾಪ್ ರೆಡ್ಡಿ ಅವರು ವಿದೇಶಗಳಲ್ಲಿ ಇದ್ದಂತ ಅಡ್ವಾನ್ಸ್ಡ್ ಮೆಡಿಕಲ್ ಇನ್ಫ್ರಾಸ್ಟ್ರಕ್ಚರ್ ಅನ್ನ ಭಾರತಕ್ಕೆ ತರಬೇಕು.

ಮುಂದಿನ ದಿವಸದಲ್ಲಿ ಯಾರು ಕೂಡ ಚಿಕಿತ್ಸೆಗೆ ವಿದೇಶಗಳಿಗೆ ಹೋಗಬಾರದು. ನಮ್ಮ ದೇಶದಲ್ಲೇ ವರ್ಲ್ಡ್ ಕ್ಲಾಸ್ ಮೆಡಿಕಲ್ ಇನ್ಫ್ರಾಸ್ಟ್ರಕ್ಚರ್ ಇರುವಂತ ಖಾಸಗಿ ಆಸ್ಪತ್ರೆಯನ್ನ ಕಟ್ಟಬೇಕು ಅಂತ ಅವರು ನಿರ್ಧಾರ ಮಾಡ್ತಾರೆ. ಆದರೆ ಹೀಗೆ ಮಾಡೋದಕ್ಕೆ ತುಂಬಾ ಹಣ ಬೇಕಿತ್ತು. ಆ ಒಂದು ಹಣಕ್ಕಾಗಿ ಅವರು ನಮ್ಮ ದೇಶದ ಬ್ಯಾಂಕ್ಸ್ ಗಳ ಬಳಿ ಹೋದಾಗ ಅವುಗಳು ಖಾಸಗಿ ಆಸ್ಪತ್ರೆಗಳ ಪ್ರಾಜೆಕ್ಟ್ ಗಳಿಗಾಗಿ ಕೇವಲ 15 ಲಕ್ಷ ಮಾತ್ರ ಕೊಡೋದಕ್ಕೆ ತಯಾರಾಗಿದ್ವು. ಆದರೆ ಪ್ರತಾಪ್ ರೆಡ್ಡಿ ಅವರು ಅವರ ಕನಸಿನ ಮಟ್ಟದ ಆಸ್ಪತ್ರೆ ಕಟ್ಟುವುದಕ್ಕೆ ಕೋಟ್ಯಾಂತ ರೂಪಾಯಿನ ಅವಶ್ಯಕತೆ ಇತ್ತು. ಹೀಗಾಗಿನೇ ಅವರು ಅಮೆರಿಕಾದಲ್ಲಿ ಇದ್ದಂತ ತಮ್ಮ ಸ್ನೇಹಿತರೊಂದಿಗೆ ಮಾತನಾಡಿ ಎಲ್ಲರನ್ನು ಕೂಡ ತಮ್ಮ ಆಸ್ಪತ್ರೆ ಯೋಜನೆಯಲ್ಲಿ ಇನ್ವೆಸ್ಟ್ ಮಾಡುವಂತೆ ಪ್ರೇರೇಪಿಸುತ್ತಾರೆ. ಕೊನೆಗೂ ಅವರೆಲ್ಲರನ್ನು ಕೂಡ ಒಪ್ಪಿಸಿ 1983 ರಲ್ಲಿ ಅವರು ಚೆನ್ನೈನಲ್ಲಿ ತಮ್ಮ ಮೊದಲ ಆಸ್ಪತ್ರೆಯನ್ನ ಶುರು ಮಾಡ್ತಾರೆ. ಆದರೆ ಇಲ್ಲಿ ಇನ್ನೊಂದು ಮುಖ್ಯವಾದಂತ ವಿಚಾರ ಏನು ಅಂದ್ರೆ ವಾಸ್ತವವಾಗಿ ಪ್ರತಾಪ್ ರೆಡ್ಡಿ ಅವರು ತಮ್ಮ ಮೊದಲ ಆಸ್ಪತ್ರೆಯನ್ನ ಹೈದರಾಬಾದ್ನಲ್ಲಿ ಸ್ಥಾಪಿಸೋದಕ್ಕೆ ಬಯಸಿದ್ರು. ಹೀಗಾಗಿನೇ ಅವರು ಆಂಧ್ರಪ್ರದೇಶದ ಸರ್ಕಾರದ ಬಳಿ ಹೋಗಿ ತಮ್ಮ ಯೋಜನೆ ಬಗ್ಗೆ ಹೇಳ್ತಾರೆ. ರಾಜ್ಯದಲ್ಲಿ ಮಾಡರ್ನ್ ಹೆಲ್ತ್ ಕೇರ್ ಸರ್ವಿಸ್ ಅನ್ನ ಪರಿಚಯಿಸಬೇಕು ಎಂಬ ಆಲೋಚನೆಯಿಂದ ಆ ಒಂದು ಸಮಯದ ಆಂಧ್ರಪ್ರದೇಶದ ಸರ್ಕಾರ ಹೈದರಾಬಾದ್ನ ಜೂಬ್ಲಿ ಹಿಲ್ಸ್ ಪ್ರದೇಶದಲ್ಲಿ 30 ಎಕರೆ ಜಮೀನನ್ನ ಅಪೋಲೋ ಸಂಸ್ಥೆಗೆ ಕೊಡೋದಕ್ಕೆ 1981 ರಲ್ಲಿ ಒಂದು ಗವರ್ನಮೆಂಟ್ ಆರ್ಡರ್ ಜಾರಿ ಮಾಡುತ್ತೆ ಅದೇ ಜೀವ ನಂಬರ್ 517 ಆದರೆ ಈ ಜಿಓನಲ್ಲಿ ಒಂದು ಶರತ್ತು ಇತ್ತು ಅದೇನಪ್ಪಾ ಅಂದ್ರೆ ಅವರು ಕಟ್ಟುವಂತ ಆಸ್ಪತ್ರೆಯಲ್ಲಿ 15% ಹಾಸಿಗೆಗಳನ್ನ ಬಡ ಜನಕ್ಕೆ ಮೀಸಲಿಟ್ಟು ಅವರಿಗೆ ಉಚಿತ ಚಿಕಿತ್ಸೆಯನ್ನ ಕೊಡಬೇಕು ಈ ಒಂದು ಶರತಿನ ಆಧಾರದಲ್ಲೇ ಆಂಧ್ರಪ್ರದೇಶದ ಸರ್ಕಾರ ಆ ಜಮೀನ ನ್ನ ಅಪೋಲೋ ಆಸ್ಪತ್ರೆಗಳಿಗೆ ಕೊಟ್ಟಿತ್ತು.

ಹೈದರಾಬಾದ್ನಲ್ಲಿ ಜಮೀನು ಸಿಕ್ಕಿದ್ರು ಕೂಡ ಆ ಒಂದು ಸಮಯದಲ್ಲಿ ಚೆನ್ನೈ ನಗರ ಹೈದರಾಬಾದ್ಗಿಂತ ಹೆಚ್ಚು ಅಭಿವೃದ್ಧಿಯಾಗಿದ್ದಂತ ಕಾರಣ ಪ್ರತಾಪ್ ರೆಡ್ಡಿ ಅವರು ತಮ್ಮ ಮೊದಲ ಅಪೋಲೋ ಆಸ್ಪತ್ರೆಯನ್ನ ಚೆನ್ನೈನಲ್ಲಿ ನಿರ್ಮಿಸುತ್ತಾರೆ. ನಂತರ 1988 ರಲ್ಲಿ ಅಪೋಲೋ ಸಂಸ್ಥೆ ಹೈದರಾಬಾದ್ಗೆ ವಿಸ್ತರಿಸಿತ್ತು. ಆಂಧ್ರಪ್ರದೇಶ ಸರ್ಕಾರದಿಂದ ಜಮೀನು ಪಡೆದುಕೊಂಡಂತ ರೀತಿಯಲ್ಲಿ 1996 ರಲ್ಲಿ ಅಪೋಲೋ ಸಂಸ್ಥೆ ದೆಹಲಿ ಸರ್ಕಾರದಿಂದ 15 ಎಕರೆ ಜಮೀನನ್ನ ಪಡೆದುಕೊಳ್ಳುತ್ತೆ. ಇಲ್ಲೂ ಕೂಡ ಅದೇ ಮಾದರಿಯಲ್ಲಿ ಒಂದು ಆಸ್ಪತ್ರೆಯನ್ನ ನಿರ್ಮಿಸುತ್ತಾರೆ. ಅದೇ ಇಂದ್ರಪ್ರಸ್ಥ ಅಪೋಲೋ ಹಾಸ್ಪಿಟಲ್ ಇದು ಏಷ್ಯಾದಲ್ಲಿ ಒಂದು ದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿದೆ. ಜಮೀನನ್ನು ಕೊಡುವಂತ ಮೊದಲು ದೆಹಲಿ ಸರ್ಕಾರ ಒಂದು ಶರತ್ನ್ನ ವೆದ್ದಿಸುತ್ತೆ. ಅದೇನಪ್ಪಾ ಅಂದ್ರೆ ದೆಹಲಿಯಲ್ಲಿ ಕಟ್ಟುವಂತ ಆಸ್ಪತ್ರೆಯಲ್ಲಿ 33% ಹಾಸಿಗೆಗಳನ್ನ ಬಡ ಜನರಿಗೆ ಮೀಸಲಿಟ್ಟು ಉಚಿತ ಚಿಕಿತ್ಸೆಯನ್ನ ಕೊಡಬೇಕು ಅಂತ. ಹೀಗಾಗಿ ಹೈದರಾಬಾದ್ನಲ್ಲಿ 15% ಮೀಸಲು ಹಾಸಿಗೆ ದೆಹಲಿಯಲ್ಲಿ 33% ಮೀಸಲು ಹಾಸಿಗೆ ಈ ಒಂದು ವಿಚಾರವನ್ನ ನೆನಪಲ್ಲಿ ಇಟ್ಟುಕೊಳ್ಳಿ ಮುಂದೆ ಚರ್ಚೆ ಮಾಡೋಣ ದೆಹಲಿ ನಂತರ ಈ ಕಂಪನಿ ಬೆಂಗಳೂರು ಮತ್ತು ಅಹಮದಾಬಾದ್ ಸೇರಿದಂತೆ ಭಾರತದ ಬಹುತೇಕ ಎಲ್ಲಾ ನಗರಗಳಲ್ಲೂ ಕೂಡ ತಮ್ಮ ಆಸ್ಪತ್ರೆಯನ್ನ ವಿಸ್ತರಿಸುತ್ತೆ ಇದರಿಂದ ದೇಶದ ಯಾವುದೇ ಪ್ರದೇಶದಲ್ಲೂ ಕೂಡ ಪೇಷಂಟ್ ಗಳಿಗೆ ಚಿಕಿತ್ಸೆಗಾಗಿ ವಿದೇಶಗಳಿಗೆ ಹೋಗಬೇಕಾದಂತ ಅಗತ್ಯವಿಲ್ಲದೆ ಅಪೋಲೋ ಒಂದು ಆಲ್ಟರ್ನೇಟಿವ್ ಅನ್ನ ಸೃಷ್ಟಿ ಮಾಡುತ್ತೆ ಆಸ್ಪತ್ರೆಗಳ ನಂತರ ಪ್ರತಾಪ್ ರೆಡ್ಡಿ ಅವರು ಮುಖ್ಯವಾಗಿ ಫೋಕಸ್ ಮಾಡಿದಂತ ಇನ್ನೊಂದು ಬಿಸಿನೆಸ್ ಅಂದ್ರೆ ಅದು ಫಾರ್ಮಸಿ ಇದು ಕೂಡ ಅಪೋಲೋ ಆಸ್ಪತ್ರೆಯೊಂದಿಗೆನೆ ಶುರುವಾಯ್ತು. ಇದನ್ನ ಶುರು ಮಾಡಿದಂತ ಕಾರಣ ಏನು ಅಂದ್ರೆ ಆ ಒಂದು ಸಮಯದಲ್ಲಿ ನಮ್ಮ ದೇಶದಲ್ಲಿ ಹೈ ಕ್ಲಾಸ್ ಆಸ್ಪತ್ರೆಗಳು ಮಾತ್ರವಲ್ಲ ಕ್ವಾಲಿಟಿ ಮೆಡಿಸನ್ ಮಾರುವಂತ ಮೆಡಿಕಲ್ ಶಾಪ್ ಕೂಡ ಇರಲಿಲ್ಲ.

ಹೀಗಾಗಿ ಒಬ್ಬ ರೋಗಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಕೊಡೋದು ಎಷ್ಟು ಮುಖ್ಯನೋ ಅದರಂತನೇ ಒಳ್ಳೆಯ ಔಷಧಿಯನ್ನ ಒದಗಿಸುವದು ಕೂಡ ಮುಖ್ಯ. ಈ ಒಂದು ಉದ್ದೇಶದಿಂದಲೇ ಪ್ರತಾಪ್ ರೆಡ್ಡಿ ಅವರು 1983 ರಲ್ಲಿ ಅಪೋಲೋ ಫಾರ್ಮಸಿಯನ್ನ ಶುರು ಮಾಡ್ತಾರೆ. ಇಲ್ಲಿ ಅನೇಕ ಜನ ಅಪೋಲೋ ತಾನೇ ಸ್ವಂತವಾಗಿ ಔಷಧಿಗಳನ್ನ ಉತ್ಪಾದಿಸುತ್ತೆ ಅಂತ ಭಾವಿಸಿದ್ದಾರೆ. ಆದರೆ ಅದು ಸತ್ಯ ಅಲ್ಲ. ಮುಖ್ಯವಾಗಿ ಅಪೋಲೋ ಸಂಸ್ಥೆ ಎರಡು ರೀತಿಯ ಔಷಧಿಗಳನ್ನ ಖರೀದಿ ಮಾಡುತ್ತೆ. ಮೊದಲನೆಯದು ಸನ್ ಫಾರ್ಮ, ಸಿಪ್ಲಾ ಮತ್ತು ಜೆನೆರಿಕ್ ಫಾರ್ಮ ಈ ರೀತಿ ಇತ್ಯಾದಿ ಕಂಪನಿಗಳಿಂದ ಔಷಧಿಗಳನ್ನ ಖರೀದಿ ಮಾಡಿ ಅವುಗಳನ್ನ ಈ ಅಪೋಲೋ ಫಾರ್ಮಸಿಗಳಲ್ಲಿ ಮಾರಾಟ ಮಾಡಲಾಗುತ್ತೆ. ಇನ್ನು ಎರಡನೆಯದು ಕೆಲವು ರೀತಿಯ ಪರ್ಸನಲ್ ಕೇರ್, ಬೇಬಿ ಕೇರ್, ಹರ್ಬಲ್ ಉತ್ಪನ್ನಗಳು ಮತ್ತು ಗ್ರೋಮಿಂಗ್ ಉತ್ಪನ್ನಗಳನ್ನ ತೃತೀಯ ಪಕ್ಷ ಕಂಪನಿಗಳ ಮೂಲಕ ತಯಾರಿಸಿ ಆ ಉತ್ಪನ್ನಗಳ ಮೇಲೆ ಅಪೋಲೋ ಆ ಕಂಪನಿಯ ಲೋಗೋವನ್ನ ಹಾಕಿ ಮಾರಾಟ ಮಾಡುತ್ತೆ. ಇದನ್ನ ಪ್ರೈವೇಟ್ ಲೇಬೆಲಿಂಗ್ ಅಂತ ಕರೀತಾರೆ. ಅಪೋಲೋ ಲೈಫ್ ಎಂಬ ಬ್ರಾಂಡ್ ಈ ವರ್ಗಕ್ಕೆ ಸೇರಿದವುಗಳು. ಈ ಅಪೋಲೋ ಫಾರ್ಮಸಿಯಲ್ಲಿ ಮತ್ತೊಂದು ವಿಶೇಷತೆ ಏನು ಅಂದ್ರೆ ಅವರು ಕೇವಲ ಔಷಧಿಗಳನ್ನ ಮಾರಾಟ ಮಾಡುವುದಷ್ಟಲ್ಲದೆ ಫಾರ್ಮಸಿ ಸಪ್ಲೈ ಚೈನ್ನ ವಿವಿಧ ಹಂತಗಳಲ್ಲಿ ಬಿಸಿನೆಸ್ ಅನ್ನ ಮಾಡ್ತಾರೆ. ಉದಾಹರಣೆಗೆ ಫಾರ್ಮಸಿ ಸರಪಳೆಯಲ್ಲಿ ಮ್ಯಾನುಫ್ಯಾಕ್ಚರರ್, ಡಿಸ್ಟ್ರಿಬ್ಯೂಟರ್, ರಿಟೇಲರ್ ಮತ್ತೆ ಕೊನೆಗೆ ಪೇಷಂಟ್ ಇರ್ತಾರೆ. ಸಪ್ಲೈ ಚೈನ್ ನ ಪ್ರತಿಯೊಂದು ಹಂತದಲ್ಲೂ ಅವರು ಔಷಧಿಗಳ ಮೇಲೆ ಕೆಲವು ಕಮಿಷನ್ ಅನ್ನ ಹಾಕಿ ಬಿಸಿನೆಸ್ ಅನ್ನ ಮಾಡ್ತಾರೆ. ಇದರೊಳಗೆ ರಿಟೇಲ್ ನ ಹಂತದಲ್ಲಿ ಇರುವಂತ ಅಪೋಲೋ ಫಾರ್ಮಸಿಗಳು ಮಾತ್ರ ನಮಗೆ ಗೊತ್ತಿರೋದು. ಆದರೆ ಅಪೋಲೋ ಸಂಸ್ಥೆ ಎಷ್ಟು ಸ್ಮಾರ್ಟ್ ಆಗಿ ಬಿಸಿನೆಸ್ ಮಾಡುತ್ತೆ ಅಂದ್ರೆ ಈ ಸರಪಳಿಯಲ್ಲಿ ಇರುವಂತಹ ರಿಟೇಲ್ ಬಿಸಿನೆಸ್ ಜೊತೆಗೆ ಡಿಸ್ಟ್ರಿಬ್ಯೂಷನ್ ಬಿಸಿನೆಸ್ ಅನ್ನು ಕೂಡ ಅಪೋಲೋ ಕಂಪನಿ ನೇರವಾಗಿ ನಡೆಸುತ್ತೆ. ಇದಕ್ಕೆ 2020 ರಲ್ಲಿ ಪ್ರತಾಪ್ ರೆಡ್ಡಿ ಅವರು ಕೆಸ್ಪೆಟ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯನ್ನು ಕೂಡ ಶುರು ಮಾಡ್ತಾರೆ.

ಇದು ಫಾರ್ಮ ಕಂಪನಿಗಳಿಂದ ಔಷಧಿಗಳನ್ನ ನೇರವಾಗಿ ಖರೀದಿ ಮಾಡಿ ಅವನ್ನ ಅಪೋಲೋ ಆಸ್ಪತ್ರೆಗಳು ಹಾಗೂ ಫಾರ್ಮಸಿಗಳಿಗೆ ಔಷಧಿಗಳನ್ನ ವಿತರಿಸಿ ಬಿಸಿನೆಸ್ ಮಾಡುತ್ತೆ. ಇದಲ್ಲದೇ ರಿಟೇಲ್ ಸ್ಟೋರ್ ಎರಡು ರೀತಿಯಾಗಿ ಇದೆ ಒಂದು ಆನ್ಲೈನ್ ಮತ್ತೊಂದು ಆಫ್ಲೈನ್ ಆಫ್ಲೈನ್ ಬಿಸಿನೆಸ್ ಅನ್ನ ಅಪೋಲೋ ಫಾರ್ಮಸಿಗಳು ನಡೆಸುತ್ತವೆ. ಆನ್ಲೈನ್ ಬಿಸಿನೆಸ್ ಗಾಗಿ ಅವರು ಅಪೋಲೋ 24 ಬರ್ಸ ಆಪ್ ಅನ್ನ ಶುರು ಮಾಡ್ತಾರೆ. ಇಲ್ಲಿಂದ ಪೇಷಂಟ್ ಗಳು ನೇರವಾಗಿ ಔಷಧಿಗಳನ್ನ ಆರ್ಡರ್ ಮಾಡಿ ತಮ್ಮ ಮನೆಗೆ ಡೆಲಿವರಿಯನ್ನ ಪಡಿಬಹುದು. ಇದನ್ನ ಗಮನಿಸಿದರೆ ಫಾರ್ಮಸಿ ಸರ್ಪಳಿಯಲ್ಲಿ ಇರುವಂತಹ ಮ್ಯಾನುಫ್ಯಾಕ್ಚರಿಂಗ್ ವರ್ಪಡಿಸಿ ಉಳಿದಂತ ಎಲ್ಲಾ ಹಂತಗಳಲ್ಲಿ ಅಪೋಲೋ ನೇರವಾಗಿ ಬಿಸಿನೆಸ್ ಅನ್ನ ಮಾಡುತ್ತೆ. ಮುಂದೆ ಅಪೋಲೋ ಸಂಸ್ಥೆ ತಮ್ಮ ಆಸ್ಪತ್ರೆಗಳ ವಿಸ್ತರಣೆ ಮೇಲೆ ಎಷ್ಟು ಫೋಕಸ್ ಮಾಡ್ತಾರೋ ಫಾರ್ಮಸಿ ನೆಟ್ವರ್ಕ್ ಮೇಲೂ ಕೂಡ ಅದೇ ಮಟ್ಟದ ಫೋಕಸ್ ಅನ್ನ ಮಾಡ್ತಾರೆ. ಯಾಕೆಂದ್ರೆ ಒಬ್ಬ ಪೇಷಂಟ್ ಸಾಮಾನ್ಯವಾಗಿ ತಿಂಗಳಿಗೆ ಒಮ್ಮೆ ಮಾತ್ರ ಡಾಕ್ಟರ್ನ್ನ ಭೇಟಿ ಮಾಡ್ತಾನೆ. ಆದರೆ ಮೆಡಿಕಲ್ ಶಾಪ್ ಗೆ ಅವರು ವಾರಕ್ಕೆ ಒಂದು ಸಲಿಯಾದರೂ ಭೇಟಿ ಕೊಡ್ತಾರೆ. ಆಸ್ಪತ್ರೆಗಳಿಗೆ ಹೋಲಿಸಿದ್ರೆ ಮೆಡಿಕಲ್ ಶಾಪ್ ನಲ್ಲಿ ಹೆಚ್ಚು ಬಿಸಿನೆಸ್ ಮಾಡಬಹುದು. ಹೀಗಾಗಿನೇ ಅಪೋಲೋ ಕಂಪನಿ ಫ್ರಾಂಚೈಸಿ ಮಾಡೆಲ್ ಅನ್ನ ಅಳವಡಿಸಿಕೊಂಡು ತಮ್ಮ ಫಾರ್ಮಸಿ ಬಿಸಿನೆಸ್ ಅನ್ನ ದೇಶಾದ್ಯಂತ ಬಹುವೇಗವಾಗಿ ವಿಸ್ತರಿಸಿತು 1983 ರಲ್ಲಿ ಕೇವಲ ಒಂದು ಸಿಂಗಲ್ ಸ್ಟೋರ್ನಿಂದ ಶುರುವಾದಂತ ಇದು ಇವತ್ತಿಗೆ 6000ಕ್ಕೂ ಹೆಚ್ಚು ಸ್ಟೋರ್ಗಳನ್ನ ಭಾರತದ್ಯಂತ ತೆರೆದಿದೆ ಹಾಗಾಗಿನೇ ಇದು ಭಾರತದ ಅತಿ ದೊಡ್ಡ ಫಾರ್ಮಸಿ ನೆಟ್ವರ್ಕ್ ಆಗಿ ಪರಿಣಮಿಸಿದೆ ಇದರ ಜೊತೆಗೆ ಅಪೋಲೋ ಸಂಸ್ಥೆ ಒಟ್ಟು ಆದಾಯದಲ್ಲಿ ಆಸ್ಪತ್ರೆಗಳು 54% ಕೊಡುಗೆಯನ್ನ ಕೊಟ್ಟರೆ ಫಾರ್ಮಸಿ ಬಿಸಿನೆಸ್ 38% ಕೊಡುಗೆ ಕೊಡ್ತಾ ಪ್ರತಿವರ್ಷ ಸುಮಾರು 6800 ಕೋಟಿಗಳ ಆದಾಯವನ್ನ ಸೃಷ್ಟಿ ಮಾಡ್ತೀವಿ ಇಲ್ಲಿ ಮತ್ತೊಂದು ವಿಚಾರ ಏನು ಅಂದ್ರೆ ಸಾಮಾನ್ಯವಾಗಿ ನಾವು ಅಪೋಲೋ ಅಂತ ಕೇಳಿದಾಗ ಅವರು ನಡೆಸುವಂತ ಆಸ್ಪತ್ರೆಗಳು ಮತ್ತು ಫಾರ್ಮಸಿಗಳನ್ನ ಮಾತ್ರ ನೆನಪಿಸಿಕೊಳ್ತೀವಿ.

ಆದರೆ ಅಪೋಲೋ ಅಂದ್ರೆ ಅದು ಕೇವಲ ಆಸ್ಪತ್ರೆಗಳು ಮತ್ತು ಫಾರ್ಮಸಿಗಳು ಮಾತ್ರ ಅಲ್ಲ ಈ ಕಂಪನಿ ವರ್ಟಿಕಲ್ ಇಂಟಿಗ್ರೇಷನ್ ಎಂಬ ಸ್ಟ್ರಾಟಜಿಯನ್ನ ಅನುಸರಿಸಿ ಅವರು ಹೆಲ್ತ್ ಕೇರ್ ಸೆಕ್ಟರ್ ನಲ್ಲಿ ಪೇಷಂಟ್ ಗಳನ್ನ ಹೊರಗೆ ಹೋಗದಂತೆ ಒಂದು ಎಕೋಸಿಸ್ಟಮ ಅನ್ನ ನಿರ್ಮಿಸಿದ್ದಾರೆ ಇನ್ನು ಸ್ಪಷ್ಟವಾಗಿ ಹೇಳಬೇಕು ಅಂದ್ರೆ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ವರ್ಟಿಕಲ್ ಇಂಟಿಗ್ರೇಷನ್ ಎಂಬ ಸ್ಟ್ರಾಟಜಿ ಇದೆ ಇದರ ಅರ್ಥ ಏನಪ್ಪಾ ಅಂದ್ರೆ ಒಂದು ಸಪ್ಲೈ ಚೈನ್ ನಲ್ಲಿ ಯಾವುದೇ ಒಂದು ಕಂಪನಿ ಹಲವಾರು ಹಂತಗಳಲ್ಲಿ ಇರುವಂತ ಬಿಸಿನೆಸ್ ಅನ್ನ ನಿಯಂತ್ರಣ ಮಾಡಿದ್ರೆ ಅದನ್ನ ವರ್ಟಿಕಲ್ ಇಂಟಿಗ್ರೇಷನ್ ಅಂತ ಕರೀತಾರೆ. ಅಪೋಲೋ ಸಂಸ್ಥೆ ಇದನ್ನ ಹೇಗೆ ಇಂಪ್ಲಿಮೆಂಟ್ ಮಾಡ್ತು ಅಂತ ನೋಡುವುದಾದ್ರೆ ಹೆಲ್ತ್ ಕೇರ್ ಸೆಕ್ಟರ್ ನಲ್ಲಿ ಇರುವಂತ ಸಪ್ಲೈ ಚೈನ್ ಅನ್ನ ಗಮನಿಸಿದರೆ ಮೊದಲ ಹಂತದಲ್ಲಿ ಡಾಕ್ಟರ್ ಇದ್ದಾರೆ. ನಂತರ ಸಮಸ್ಯೆಯನ್ನ ಗುರುತಿಸೋದಕ್ಕೆ ಡಯಾಗ್ನೋಸ್ಟಿಕ್ ಸೆಂಟರ್ ಇರ್ತವೆ. ಮುಂದಿನ ಹಂತದಲ್ಲಿ ಔಷಧಿಗಳಿಗಾಗಿ ಫಾರ್ಮಸಿಗಳು ಇರ್ತವೆ. ನಂತರ ಹಣವನ್ನು ಪಾವತಿ ಮಾಡೋದಕ್ಕೆ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಇರ್ತವೆ. ಕೊನೆಗೆ ಪೇಷೆಂಟ್ ಅನ್ನ ಮನೆಗೆ ಕಳಿಸಿದ ನಂತರ ಪೋಸ್ಟ್ ಟ್ರೀಟ್ಮೆಂಟ್ ಸರ್ವಿಸ್ ಇದೆ. ಆದರೆ ಅಪೋಲೋ ಸಂಸ್ಥೆ ಕೇವಲ ಆಸ್ಪತ್ರೆಗಳು ಮತ್ತು ಫಾರ್ಮಸಿಗಳಲ್ಲಿ ಮಾತ್ರವಲ್ಲ ಸಪ್ಲೈ ಚೆನ್ನ ಎಲ್ಲಾ ಹಂತದಲ್ಲೂ ಕೂಡ ಬಿಸಿನೆಸ್ ಮಾಡುತ್ತೆ. ಉದಾಹರಣೆಗೆ ರೋಗವನ್ನ ಕಂಡುಹಿಡಿಯೋದಕ್ಕೆ ಅಪೋಲೋ ಡಯಾಗ್ನೋಸ್ಟಿಕ್ ಸೆಂಟರ್ ಚಿಕಿತ್ಸೆ ಕೊಡೋದಕ್ಕೆ ಅಪೋಲೋ ಹಾಸ್ಪಿಟಲ್ ಔಷಧಿಗಾಗಿ ಅಪೋಲೋ ಫಾರ್ಮಸಿ ಒಂದು ವೇಳೆ ಪೇಷೆಂಟ್ ಏನಾದ್ರೂ ಹಣವನ್ನು ಪಾವತಿ ಮಾಡೋದಕ್ಕೆ ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ಅವರಿಗಾಗಿ ಅಪೋಲೋ ಸಂಸ್ಥೆ 2007 ರಲ್ಲಿ ಇನ್ಶೂರೆನ್ಸ್ ಬಿಸಿನೆಸ್ ಅನ್ನು ಕೂಡ ಶುರು ಮಾಡ್ತು. ಅದೇ ಅಪೋಲೋ ಮ್ಯೂನಿಕ್ ಹೆಲ್ತ್ ಇನ್ಶೂರೆನ್ಸ್. ಆದರೆ 2019 ರಲ್ಲಿ HDFC ಕಂಪನಿ ಅದನ್ನ ಖರೀದಿ ಮಾಡಿ ನಂತರ ಅದು HDFC ಅರ್ಗೋ ಹೆಲ್ತ್ ಇನ್ಶೂರೆನ್ಸ್ ಆಗಿ ಬದಲಾಗಿದೆ. ಕೇವಲ ಇನ್ಶೂರೆನ್ಸ್ ಮಾತ್ರ ಅಲ್ಲ ಪೋಸ್ಟ್ ಟ್ರೀಟ್ಮೆಂಟ್ ಕೇರ್ ಅಂದ್ರೆ ಆಸ್ಪತ್ರೆಯಿಂದ ಪೇಷೆಂಟ್ ಮನೆಗೆ ಹೋದ ನಂತರ ಅವರಿಗೆ ಸೇವೆ ಕೊಡೋದಕ್ಕೆ ಈ ಒಂದು ಸಂಸ್ಥೆ ಅಪೋಲೋ ಹೋಂ್ ಕೇರ್ ಎಂಬ ಬ್ರಾಂಡ್ ಅನ್ನು ಕೂಡ ಶುರು ಮಾಡುತ್ತೆ.

ಇದರ ಅಡಿಯಲ್ಲಿ ಸ್ಕಿಲ್ಡ್ ನರ್ಸ್ ಮತ್ತು ಫಿಸಿಯೋಥೆರಪಿಸ್ಟ್ ಪೇಷಂಟ್ ಗಳ ಮನೆಗೆ ಹೋಗಿ ಅವರಿಗೆ ಸೇವೆಯನ್ನ ಕೊಡ್ತಾರೆ. ಸರಳವಾಗಿ ಹೇಳ್ಬೇಕು ಅಂದ್ರೆ ಒಬ್ಬ ಪೇಷೆಂಟ್ ಡಾಕ್ಟರ್ನ ಭೇಟಿ ಮಾಡಿದಾಗಿಂದ ಚಿಕಿತ್ಸೆ ಕೊಡುವರೆಗೂ ಮನೆ ಕಳಿಸುವರೆಗೂ ಪ್ರತಿಯೊಂದು ಹಂತದಲ್ಲೂ ಕೂಡ ಅಪೋಲೋ ಸಂಸ್ಥೆ ತನ್ನ ಉತ್ಪನ್ನಗಳನ್ನ ಮತ್ತು ಸೇವೆಗಳನ್ನ ಮಾರ್ತಾ ಬಿಸಿನೆಸ್ ಮಾಡ್ತಿದೆ. ಇದನ್ನೇ ಹೆಲ್ತ್ ಕೇರ್ ಎಕೋಸಿಸ್ಟಮ್ ಅಂತ ಕರೀತಾರೆ. ಒಬ್ಬ ಪೇಷಂಟ್ ಗೆ ಬೇಕಾದಂತ ಎಲ್ಲಾ ವೈದ್ಯಕೀಯ ಸೇವೆಗಳು ಮತ್ತು ಉತ್ಪನ್ನಗಳನ್ನ ಒಂದೇ ಕಂಪನಿ ಒದಗಿಸುವಂತೆ ಒಂದು ನೆಟ್ವರ್ಕ್ ಅನ್ನ ನಿರ್ಮಿಸಿ ಪೇಷಂಟ್ ಯಾವುದೇ ಅಗತ್ಯಕ್ಕಾಗಿ ಈ ಒಂದು ನೆಟ್ವರ್ಕ್ ಅನ್ನ ಬಿಟ್ಟು ಹೊರಗಡೆ ಹೋಗದಂತೆ ಮಾಡೋದೇ ಈ ಹೆಲ್ತ್ ಕೇರ್ ಎಕೋ ಸಿಸ್ಟಮ್ ಈ ಎಕೋ ಸಿಸ್ಟಮ್ ನಿರ್ಮಾಣದಲ್ಲಿ ಅಪೋಲೋ ಕಂಪನಿ ಬಹಳ ಯಶಸ್ವಿಯಾಗಿದೆ. ಅದಕ್ಕೇನೆ ನಾನು ಈ ಒಂದು ವಿಡಿಯೋದಲ್ಲಿ ಅನೇಕ ಕಡೆ ಅಪೋಲೋ ಹಾಸ್ಪಿಟಲ್ ಅಂತ ಅಲ್ಲ ಅಪೋಲೋ ಕಂಪನಿ ಅಂತ ಹೇಳಿದ್ದೇನೆ. ಯಾಕೆಂದ್ರೆ ಅಪೋಲೋ ಒಂದು ಕಂಪನಿಯಾಗಿ ನೊಂದಯಿಸಲ್ಪಟ್ಟಿದೆ. ಅಂದ್ರೆ ಅಪೋಲೋ ಹಾಸ್ಪಿಟಲ್ ಎಂಟರ್ಪ್ರೈಸಸ್ ಈ ಒಂದು ಕಂಪನಿಯ ಅಡಿಯಲ್ಲಿ ಅವರ ಆಸ್ಪತ್ರೆಗಳು ಹಾಗೂ ಫಾರ್ಮಸಿಗಳು ಕಾರ್ಯವನ್ನ ನಿರ್ವಹಿಸುತ್ತವೆ. ಮತ್ತೆ ಈ ಒಂದು ಕಂಪನಿ ಸ್ಟಾಕ್ ಮಾರ್ಕೆಟ್ನಲ್ಲೂ ಕೂಡ ಲಿಸ್ಟ್ ಆಗಿದೆ. 2025ನೇ ಹಣಕಾಸು ವರ್ಷದಲ್ಲಿ ಈ ಒಂದು ಕಂಪನಿ ಸುಮಾರು 8ವರೆಸಾವ ಕೋಟಿ ರೂಪಾಯಿಗಳ ಆದಾಯ ಮತ್ತು 1300 ಕೋಟಿ ರೂಪಾಯಿಗಳ ಲಾಭವನ್ನ ಗಳಿಸಿದೆ. ಹೀಗಾಗಿನೇ ನಾನು ವಿಡಿಯೋ ಆರಂಭದಲ್ಲಿ ಹೇಳಿದ್ದೆ ನಮ್ಮ ದೇಶದಲ್ಲಿ ಮೆಡಿಕಲ್ ಸೇವೆಗಳ ಮೂಲಕ ಲಾಭ ಗಳಿಸಬಾರದು ಎಂಬ ಯಾವುದೇ ಕಾನೂನು ಇಲ್ಲ.

ಅದಕ್ಕಾಗಿನೇ ಅಪೋಲೋ ಕಂಪನಿ ತನ್ನ ಬಿಸಿನೆಸ್ ಅನ್ನ ಸ್ಟಾಕ್ ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಿ ಆದಾಯ ಮತ್ತು ಲಾಭದ ಮಾಹಿತಿಯನ್ನ ಸಾರ್ವಜನಿಕವಾಗಿ ಪ್ರಕಟ ಮಾಡುತ್ತೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಈ ರೀತಿಯ ಅವಕಾಶ ಇಲ್ಲ. ಏಕೆಂದ್ರೆ ಈ ಕ್ಷೇತ್ರದ ಮೇಲೆ ಲಾಭಗಳ ಗಳಿಸುವದಕ್ಕೆ ನಿರ್ಬಂಧ ಇರೋದ್ರಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುವಂತ ಯಾವುದೇ ಸಂಸ್ಥೆ ಸ್ಟಾಕ್ ಮಾರ್ಕೆಟ್ನಲ್ಲಿ ಲಿಸ್ಟ್ ಆಗಿರೋದಿಲ್ಲ. ಹಾಗೂ ತಮ್ಮ ಲಾಭಗಳನ್ನ ಹೊರಗಡೆ ಪ್ರಕಟ ಮಾಡೋದಿಲ್ಲ. ವೀಕ್ಷಕರೇ ಇದೆಲ್ಲ ಕೇಳಿದಮೇಲೆ ಅಪೋಲೋ ಸಂಸ್ಥೆ ಹೇಗೆ ಕೆಲಸ ಮಾಡುತ್ತೆ ಎಂಬುದರ ಬಗ್ಗೆ ನಿಮಗೆ ಗೊತ್ತಾಯಿತು. ಆದರೆ 2020ರ ಕೋವಿಡ್ ಸಮಯದಲ್ಲಿ ತೆಲಂಗಾಣ ಹೈಕೋರ್ಟ್ನಲ್ಲಿ ಅಪೋಲೋ ಆಸ್ಪತ್ರೆಗಳ ವಿರುದ್ಧ ಒಂದು ಕೇಸ್ ದಾಖಲಾಗುತ್ತೆ. ಅಪೋಲೋ ಸಂಸ್ಥೆ 1981 ರಲ್ಲಿ ಹೈದರಾಬಾದ್ ನಲ್ಲಿ ಆಸ್ಪತ್ರೆ ಕಟ್ಟಕೊಳ್ಳೋದಕ್ಕೆ ಆಂಧ್ರಪ್ರದೇಶ ಸರ್ಕಾರದಿಂದ 30 ಎಕರೆ ಭೂಮಿಯನ್ನ ಪಡೆದಿತ್ತು. ಪ್ರಸ್ತುತ ಆ ಭೂಮಿಯ ಮಾರುಕಟ್ಟೆ ಮೌಲ್ಯ ಸುಮಾರುಒಂದೂವರೆ ಸಾವಿರ ಕೋಟಿಗಿಂತನೂ ಕೂಡ ಹೆಚ್ಚು. ಆದರೆ ಆ ಭೂಮಿ ಪಡೆಯುವಂತ ಸಮಯದಲ್ಲಿ ಅಪೋಲೋ ಸಂಸ್ಥೆ ಸರ್ಕಾರದ ಒಂದು ಶರತ್ನ್ನ ಒಪ್ಪಿಕೊಂಡಿತ್ತು ಅಂದ್ರೆ ತಮ್ಮ ಆಸ್ಪತ್ರೆಯಲ್ಲಿ ಬಡ ಜನರಿಗೆ 15% ಖಾಸಿಗೆಗಳನ್ನ ಮೀಸಲಿಟ್ಟು ಉಚಿತ ಚಿಕಿತ್ಸೆಗಳನ್ನ ಕೊಡಬೇಕು ಅನ್ನೋದು ಗವರ್ನಮೆಂಟ್ನ ಆರ್ಡರ್ ಆಗಿತ್ತು. ಆದ್ರೆ ಇದನ್ನ ಅವರು ಮಾಡ್ತಾ ಇಲ್ಲ ಅಂತ ಅಪವಾದಗಳು ಕೇಳಿ ಬಂದಿದ್ವು. ಕೇವಲ ಹೈದರಾಬಾದ್ ಮಾತ್ರ ಅಲ್ಲ ದೇಹಲಿಯಲ್ಲೂ ಕೂಡ ಅವರು ಒಪ್ಪಿಕೊಂಡಿದ್ದು 33% ಮೀಸಲಾತಿ ಹಾಸಿಕೆಗಳನ್ನ ಬಡವರಿಗಾಗಿ ಮೀಸಲಿಡ್ತೀವಿ ಅಂತ. ಆದರೆ ಓಂ ಮಂಶೋ ದಿಂಬ್ರಾ ಎಂಬ ವ್ಯಕ್ತಿ ತೆಲಂಗಾಣ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಅಂದ್ರೆ ಪಿಐಎಲ್ ಅನ್ನ ಸಲ್ಲಿಸುತ್ತಾರೆ.

ಇದನ್ನ ಗಮನಿಸಿದಂತಹ ತೆಲಂಗಾಣ ಹೈಕೋರ್ಟ್ ರಾಜ್ಯ ಸರ್ಕಾರ ಈ ಒಂದು ಸಂಸ್ಥೆ ವಿರುದ್ಧ ಇಷ್ಟು ದಿನ ಯಾವುದೇ ಕ್ರಮವನ್ನ ಕೈಗೊಳ್ಳದೆ ಇರುವುದಕ್ಕೆ ಗಂಭೀರ ಅಸಮಾಧಾನವನ್ನ ವ್ಯಕ್ತಪಡಿಸಿತ್ತು. ಅದಕ್ಕೆ ಪ್ರತಿಯಾಗಿ ತೆಲಂಗಾಣ ಸರ್ಕಾರ ತಕ್ಷಣನೇ ಅಪೋಲೋ ಸಂಸ್ಥೆ 15% ಮೀಸಲಾತಿ ಹಾಸಿಕೆ ನಿಯಮವನ್ನ ತಕ್ಷಣದಿಂದಲೇ ಅನುಷ್ಠಾನಗೊಳಿಸಬೇಕು ಅಂತ ಹೇಳಿ 2022 ರಲ್ಲಿ ಒಂದು ಗವರ್ನಮೆಂಟ್ ಆರ್ಡರ್ ನಂಬರ್ 80ನ್ನ ಜಾರಿಗೆ ತರುತ್ತೆ. ಇನ್ನು ಈ ಒಂದು ಅಪೋಲೋ ಸಂಸ್ಥೆ ಮೂಲಕ ಡಾಕ್ಟರ್ ಪ್ರತಾಪ್ ರೆಡ್ಡಿ ಅವರು ಭಾರತೀಯ ಆರೋಗ್ಯ ಕ್ಷೇತ್ರದಲ್ಲಿ ತಂದಂತಹ ಬದಲಾವಣೆಗಳು ಮತ್ತು ಮಾಡಿದಂತ ಸೇವೆಗಾಗಿ ಭಾರತ ಸರ್ಕಾರ 1991 ರಲ್ಲಿ ಪದ್ಮಭೂಷಣ ಹಾಗೂ 2010 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನ ಕೊಟ್ಟು ಗೌರವಿಸಿದೆ. ಡಾಕ್ಟರ್ ಪ್ರತಾಪ್ ರೆಡ್ಡಿ ಅವರಿಗೆ ನಾಲ್ಕು ಹೆಣ್ಣುಮಕ್ಕಳು ಇದ್ದಾರೆ. ಪ್ರಸ್ತುತ ಅವರ ವಯಸ್ಸು 92 ವರ್ಷ ದಾಟಿರೋದ್ರಿಂದ ಈಗ ಅಪೋಲೋ ಸಂಸ್ಥೆಯನ್ನ ಅವರ ಪುತ್ರಿಯರೇ ನಿರ್ವಹಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments