ಇಪಿಎಫ್ಓ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಅಥವಾ ಸಿಂಪಲ್ ಲ್ಯಾಂಗ್ವೇಜ್ ನಲ್ಲಿ ಪಿಎಫ್ ಕಟ್ ಆಗುತ್ತಲ್ಲ ಅದು. ಈ ಪಿಎಫ್ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಬಹಳ ಮಹತ್ವದ ಚೇಂಜಸ್ ಮಾಡಿದೆ. ಇನ್ಮೇಲೆ ಯಾರು ಬೇಕಾದರೂ ಯಾವಾಗ ಬೇಕಾದ್ರೂ 100% ಪಿಎಫ್ ಹಣವನ್ನ ಅಂದ್ರೆ ಪೂರ್ತಿ ಪಿಎಫ್ ನ ವಿಥ್ಡ್ರಾ ಮಾಡಬಹುದು ಅಲ್ದೆ ವಿಥ್ಡ್ರಾವಲ್ ಲಿಮಿಟ್ ನ ಕೂಡ ಏರಿಕೆ ಮಾಡಿದೆ ಆದರೆ ಮಿನಿಮಮ್ ಬ್ಯಾಲೆನ್ಸ್ ಮೇಂಟೈನ್ ಮಾಡೋಕೆ ಲಿಮಿಟ್ ಹಾಕಿದೆ. ಇಪಿಎಫ್ಓ ಬಗ್ಗೆ ನಿಮ್ಮಲ್ಲಿ ಕೆಲವರಿಗೆ ಈಗಾಗಲೇ ಮಾಹಿತಿ ಇರಬಹುದು ಆದ್ರೂ ಮೊದಲು ಚಿಕ್ಕದಾಗಿ ಇಂಟ್ರೊಡಕ್ಷನ್ ನೋಡ್ಬಿಡೋಣ ಇಪಿಎಫ್ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಅಥವಾ ಸಿಂಪಲ್ ಆಗಿ ಪಿಎಫ್ ಅನ್ನೋದು ಸರ್ಕಾರದ ಸೇವಿಂಗ್ ಸ್ಕೀಮ್ ಖಾಸಗಿ ಕಂಪನಿಗಳಲ್ಲಿ ಆರ್ಗನೈಸ್ಡ್ ಸೆಕ್ಟರ್ಗಳಲ್ಲಿ ಕೆಲಸ ಮಾಡ್ತಿರುವಂತಹ ಉದ್ಯೋಗಿಗಳ ಆರ್ಥಿಕ ಭದ್ರತೆ ದೃಷ್ಟಿ ಂ ಇರುವಂತಹ ಯೋಚನೆ ನಮ್ಮ ಯುವಕರು ಗೊತ್ತಲ್ಲ ಬಂದ ಸಂಬಳವನ್ನ ಒಂದು ವಾರ ಅನ್ನುವಷ್ಟರಲ್ಲಿ ಉಡಾಯಿಸಿರ್ತಾರೆ ಹೀಗಾಗಿ ಸರ್ಕಾರನೇ ನಿಮಗೆ ಸ್ಯಾಲರಿ ಸಿಗೋಕು ಮುನ್ನ ನೀವು ಸೇವ್ ಮಾಡಬೇಕಾಗಿರೋ ಹಣವನ್ನ ಕಟ್ ಮಾಡಿ ಕೊಡುತ್ತೆ.
ಕೇವಲ ಉದ್ಯೋಗಿಗಳಿಂದ ಅಷ್ಟೇ ಅಲ್ಲ ಕಂಪನಿಗಳಿಂದ ಕೂಡ ಅಷ್ಟೇ ಪ್ರಮಾಣದ ಹಣವನ್ನ ಕಟ್ಟಿಸಿಕೊಳ್ಳುತ್ತೆ ನಂತರ ಎರಡನ್ನು ಸೇರಿ ಇನ್ವೆಸ್ಟ್ ಮಾಡಿ ಕೊನೆಗೆ ರಿಟೈರ್ಮೆಂಟ್ ಟೈಮಲ್ಲಿ ಬಡ್ಡಿ ಸಮೇತ ವಾಪಸ್ ಕೊಡುತ್ತೆ ಇದರಲ್ಲಿ ನೀವು ಒಂದೇ ಸಲ ಲಂಸಮ ಹಣವನ್ನ ತಗೋಬಹುದು ಅಥವಾ ಪೆನ್ಶನ್ ಆಗಿ ತಿಂಗಳು ತಿಂಗಳು ಬರುವಂತೆನು ಮಾಡ್ಕೊಬಹುದು ಈ ರೀತಿ ಕಡ್ಡಾಯ ಸೇವಿಂಗ್ಸ್ ನಿಂದ ಜನರಿಗೆ ಆರ್ಥಿಕ ಭದ್ರತೆ ಒದಗಿಸಿದಂತೆ ಆಗುತ್ತೆ ಅನ್ನೋದು ಸರ್ಕಾರದ ನಿಲುವು 1995 ರಿಂದ ಈಪಿಎಫ್ ಜಾರಿಯಲ್ಲಿದೆ ಕೇಂದ್ರ ಕಾರ್ಮಿಕ ಇಲಾಖೆ ಅಡಿ ಬರೋ ಇಪಿಎಫ್ಓ ಸಂಸ್ಥೆ ಇದನ್ನ ಹ್ಯಾಂಡಲ್ ಮಾಡ್ತಿದೆ ಈಗ ಇದೇ ಪಿಎಫ್ ವಿಚಾರದಲ್ಲಿ ಸರ್ಕಾರ ಮಹತ್ವದ ಚೇಂಜಸ್ ಮಾಡಿದೆ ಒಂದೊಂದಾಗಿ ನೋಡ್ತಾ ಹೋಗೋಣ ಹಣ ಹಿಂಪಡೆಯುವಿಕೆ ಸರಳೀಕರಣ ಸ್ನೇಹಿತರೆ ಪಿಎಫ್ ವಿಥ್ ಡ್ರಾ ಮಾಡೋದ್ರಲ್ಲಿ ಮೇಜರ್ ಬದಲಾವಣೆ ಈ ಮೊದಲು ಅನಾರೋಗ್ಯ ಮದುವೆ ಶಿಕ್ಷಣ ಮನೆ ನಿರ್ಮಾಣ ಹೀಗೆ ಸುಮಾರು 13 ಕಾರಣಕ್ಕೆ ಪಿಎಫ್ ಹಣನ ವಿಥ್ಡ್ರಾ ಮಾಡಬಹುದಾಗಿತ್ತು ಆದರೆ ಈ 13 ಕೆಟಗರಿಗೂ ಬೇರೆ ಬೇರೆ ನಿಯಮ ಬೇರೆ ಬೇರೆ ಅರ್ಹತೆ ಲಿಮಿಟ್ಸ್ ಇರ್ತಿತ್ತು ಇದರಿಂದ ಜನಕ್ಕೆ ಸಿಕ್ಕಾಪಟ್ಟೆ ಗೊಂದಲ ಆಗ್ತಿತ್ತು ಆದರೆ ಇಪಿಎಫ್ಓನ ಸೆಂಟ್ರಲ್ ಬೋರ್ಡ್ ಅದೆಲ್ಲವನ್ನ ತೆಗೆದು ಸಿಂಪಲ್ ಆಗಿ ಮೂರು ಕೆಟಗರಿ ಮಾಡಿದೆ.
ಅನಾರೋಗ್ಯ ಶಿಕ್ಷಣ ಮದುವೆಯಂತ ಕಾರಣಗಳಿಗೆ ಎಸೆನ್ಶಿಯಲ್ ನೀಡ್ಸ್ ಮನೆ ಖರೀದಿ ಮನೆ ಮನೆ ನಿರ್ಮಾಣ ಗೃಹಸಾಲ ಮರುಪಾವತಿ ಅಂತ ಕಾರಣಗಳಿಗೆ ಹೌಸಿಂಗ್ ನೀಡ್ಸ್ ಮತ್ತು ಉಳಿದ ತುರ್ತು ಸಂದರ್ಭಗಳಿಗಾಗಿ ಸ್ಪೆಷಲ್ ಸರ್ಕಮಸ್ಟೆನ್ಸಸ್ ಅಂತ ಒಟ್ಟು ಮೂರು ಕೆಟಗರಿ ಮಾಡಿದೆ ಈ ಮೂರಕ್ಕೂ ಸಿಂಪಲ್ ನಿಯಮಗಳನ್ನ ಇಟ್ಟಿದೆ ಅದರಲ್ಲೂ ಸ್ಪೆಷಲ್ ಸರ್ಕಮಸ್ಟೆನ್ಸ್ ನಲ್ಲಿ ನೀವು ಕಾರಣ ಏನು ಅಂತ ಮೆನ್ಷನ್ ಮಾಡೋ ಅವಶ್ಯಕತೆನು ಇಲ್ಲ ಈ ಮೊದಲು ಏನು ಕಾರಣ ಅಂತ ಬರಿಬೇಕಿತ್ತು ಕೆಲವೊಂದು ಸಲ ಇದನ್ನೇ ಇಟ್ಕೊಂಡು ಪಿಎಫ್ಓ ದವರು ಆಟ ಆಡಿಸ್ತಿದ್ರು ಕ್ಲೇಮ್ ರೀಸನ್ ಸರಿ ಇಲ್ಲ ಅಂತ ಹೇಳಿ ಹಣ ಕೊಡ್ತಿರ್ಲಿಲ್ಲ ಬಟ್ ಈಗ ಕೇಂದ್ರ ಸರ್ಕಾರ ರೀಸನ್ ಮೆನ್ಷನ್ ಮಾಡೋದೇ ಬೇಡ ಅಂದಿದೆ ನಾವಿಲ್ಲಿ ಇಪಿಎಫ್ಓ ಬೋರ್ಡ್ ಬದಲು ಕೇಂದ್ರ ಸರ್ಕಾರ ಅಂತಿದ್ದೀವಿ ಯಾಕಂದ್ರೆ ಆಫ್ಕೋರ್ಸ್ ಈ ಡಿಸಿಷನ್ ಗಳನ್ನೆಲ್ಲ ತಗೊಂಡಿರೋದು ಇಪಿಎಫ್ಓ ಬೋರ್ಡೇ ಆದರೆ ಆ ಬೋರ್ಡ್ನ ಮುಖ್ಯಸ್ಥರು ಕೇಂದ್ರ ಕಾರ್ಮಿಕ ಸಚಿವರಾಗಿರ್ತಾರೆ ಹೀಗಾಗಿ ಸರ್ಕಾರದ ಆಣತಿಯಂತೆ ಎಪಿಎಫ್ಓ ಕೆಲಸ ಮಾಡುತ್ತೆ.100% ಪಿಎಫ್ ಹಣ ವಿಥ್ಡ್ರಾ ಎಸ್ ಪಿಎಫ್ ವಿಚಾರದಲ್ಲಿ ಮಾಡಿರೋ ದೊಡ್ಡ ಬದಲಾವಣೆ ಇದು. ಈ ಮೊದಲು 13 ಕಾರಣಗಳಿಗೆ ಪಿಎಫ್ ಹಣ ವಿಥ್ ಡ್ರಾ ಮಾಡಬಹುದು ಅಂತ ಹೇಳಿದ್ವಲ್ಲ. ಆ 13 ಕೆಟಗರಿಲು ವಿಥ್ ಡ್ರಾವಲ್ ಗೆ ಒಂದೊಂದರಲ್ಲಿ ಒಂದೊಂದು ಮಿತಿ ಹೇರಲಾಗಿತ್ತು.
ಈಗ ಉದಾಹರಣೆಗೆ ಮದುವೆ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಗರಿಷ್ಠ ಎಂಪ್ಲಾಯಿ ಶೇರ್ ನಿಂದ 50% ಹಣ ವಿಥ್ ಡ್ರಾ ಮಾಡಬಹುದಿತ್ತು. ಅದೇ ಅನಾರೋಗ್ಯ ಕಾರಣಕ್ಕೆ ಮ್ಯಾಕ್ಸಿಮಮ್ ಅಂದ್ರೆ ಆರು ತಿಂಗಳ ಬೇಸಿಕ್ ಸ್ಯಾಲರಿ ಪ್ಲಸ್ ಡಿಎ ಅಥವಾ ಎಂಪ್ಲಾಯಿ ಇಂದ ಕಟ್ಟಾದ ಅಷ್ಟು ಹಣ ಬಡ್ಡಿ ಸಮೇತ ಇವೆರಡರಲ್ಲಿ ಯಾವುದು ಕಮ್ಮಿ ಇರ್ತಿತ್ತೋ ಗರಿಷ್ಠ ಅಷ್ಟು ಪಿಎಫ್ ಹಣವನ್ನ ವಿಥ್ ಡ್ರಾ ಮಾಡಬಹುದಾಗಿತ್ತು ನಿಮಗಿಲ್ಲಿ ಈ ರೂಲ್ಸ್ ಅನ್ನ ಕೇಳಿದ ತಕ್ಷಣ ಗೊತ್ತಾಗ್ತಿದೆ ಎಷ್ಟು ಕಾಂಪ್ಲೆಕ್ಸ್ ಇದೆ ಅಂತ ರಿಯಲ್ ಆಗಿ ವಿಥ್ ಡ್ರಾ ಮಾಡುವಾಗ ಇನ್ನು ಗೊಂದಲವಾಗ್ತಿತ್ತು ಹೀಗಾಗಿ ಅದೆಲ್ಲ ಬೇಡ ಅಂತ ಹೇಳಿ ಕೇಂದ್ರ ಸರ್ಕಾರ ಈಗ ಯಾವುದೇ ಸಮಯದಲ್ಲಿ 100% ಎಲಿಜಿಬಲ್ ಬ್ಯಾಲೆನ್ಸ್ ನ ವಿಥ್ ಡ್ರಾ ಮಾಡಬಹುದು ಅಂತ ಹೇಳಿದೆ ಎಲಿಜಿಬಲ್ ಬ್ಯಾಲೆನ್ಸ್ ಅಂದ್ರೆ ನಿಮ್ಮ ಖಾತೆಯಲ್ಲಿ ಎಷ್ಟಿರುತ್ತೋ ಅಷ್ಟು ಹಣ ಎಂಪ್ಲಾಯಿ ಶೇರ್ ಎಂಪ್ಲಾಯರ್ ಶೇರ್ ಅಂತಏನು ಡಿಫರೆನ್ಸ್ ಇಲ್ಲ ಬಡ್ಡಿ ಸಮೇತ ನಿಮ್ಮ ಅಕೌಂಟ್ ಅಲ್ಲಿ ಎಷ್ಟು ಹಣ ಇರುತ್ತೋ ಅಷ್ಟು ಹಿಂತೆಗಿಬಹುದು ಆದರೆ ಇಲ್ಲಿ ಒಂದು ಸಣ್ಣ ಅಮೌಂಟ್ ಬಿಡಬೇಕಾಗುತ್ತೆ ಅದನ್ನ ನೆಕ್ಸ್ಟ್ ಹೇಳ್ತೀವಿ ಆದರೆ ಅದನ್ನ ಬಿಟ್ಟು ನಿಮ್ಮ ಪಿಎಫ್ ಖಾತೆಯಲ್ಲಿರೋ ಅಷ್ಟು ಹಣವನ್ನ ನೀವೀಗ ಹಿಂಪಡಿಬಹುದು ಈ ನಿಯಮ ಮೂರು ಕೆಟಗರಿಗೆ ಸೇಮ್ ಇರುತ್ತೆ ಯಾವುದೇ ಗೊಂದಲ ಇರೋದಿಲ್ಲ.
ವಿಥ್ಡ್ರಾವಲ್ ಲಿಮಿಟ್ ಏರಿಕೆ ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ವಿಥ್ಡ್ರಾ ಮಾಡೋ ಮಿತಿಯನ್ನ ಕೂಡ ಏರಿಕೆ ಮಾಡಿದೆ ಈ ಮೊದಲು ಮದುವೆ ಮತ್ತು ಶಿಕ್ಷಣ ಎರಡಕ್ಕೂ ಸೇರಿ ಗರಿಷ್ಠ ನೀವು ಮೂರು ಸಲ ಮಾತ್ರ ಹಣ ವಿಥ್ಡ್ರಾ ಮಾಡಬಹುದಿತ್ತು ಈ ಲಿಮಿಟ್ ಮೀರ್ತು ಅಂದ್ರೆ ಒಂದು ವೇಳೆ ನಿಮ್ಮ ಪಿಎಫ್ ಅಕೌಂಟ್ ಅಲ್ಲಿ ಹಣ ಇದ್ರೂ ಕೂಡ ತೆಗೆಯೋಕೆ ಆಗ್ತಿರ್ಲಿಲ್ಲ ಬಹಳ ಜನಕ್ಕೆ ಇದರಿಂದ ತೊಂದರೆ ಆಗ್ತಿತ್ತು ಆದರೀಗ ಈಟ್ ಜಾಸ್ತಿ ಮಾಡಲಾಗಿದೆ ಶಿಕ್ಷಣಕ್ಕಾಗಿ ಗರಿಷ್ಠ 10 ಸಲ ಬೇಕಾದರೆ ನೀವು ಪಿಎಫ್ ವಿಥ್ಡ್ರಾ ಮಾಡಬಹುದು ಅದೇ ರೀತಿ ಮದುವೆ ಸಲವಾಗಿ ಬೇಕಾದ್ರೆ ಐದು ಸಲ ವಿಥ್ಡ್ರಾ ಮಾಡಬಹುದು ಸೋ ವಿಥ್ಡ್ರಾ ಮಾಡೋದನ್ನ ಕಂಪ್ಲೀಟ್ಲಿ ಇಲ್ಲಿ ಲಿಬರಲೈಸ್ ಮಾಡಲಾಗಿದೆ ಕನಿಷ್ಠ ಸೇವಾ ಅವಧಿ ಏರಿಕೆ ಸ್ನೇಹಿತರೆ ಈ ಮೊದಲು ತುರತು ಸಂದರ್ಭ ಬಿಟ್ಟು ಉಳಿದ ಕೆಲಸಕ್ಕೆ ಪಿಎಫ್ ಹಣ ಬೇಕು ಅಂದ ತಕ್ಷಣ ಸಿಗತಿರಲಿಲ್ಲ ಐದು ಆರು ಏಳು ವರ್ಷ ನೀವು ಕೆಲಸ ಮಾಡಬೇಕಾಗಿರತಿತ್ತು ಉದಾಹರಣೆಗೆ ಮನೆ ಕೆಲಸಗಳಿಗಾಗಿ ಪಿಎಫ್ ಬೇಕು ಅಂದ್ರೆ ಕನಿಷ್ಠ ಐದು ವರ್ಷ ಸರ್ವಿಸ್ ಮಾಡಬೇಕಾಗಿರ್ತಿತ್ತು. ಅದೇ ರೀತಿ ಶಿಕ್ಷಣ ಮತ್ತು ಮದುವೆಗೆ ದುಡ್ಡು ಬೇಕು ಅಂದ್ರೆ ಏಳು ವರ್ಷ ಮಿನಿಮಮ್ ಸರ್ವಿಸ್ ಆಗಿರಬೇಕಿತ್ತು. ಜನ ತಮ್ಮದೇ ಹಣ ತಾವು ಪಡೆಯೋಕೆ ಪರದಾಡಬೇಕಿತ್ತು. ಆದರೀಗ ಸರ್ಕಾರ ಈ ಅವಧಿನ ಕೇವಲ 12 ತಿಂಗಳಿಗೆ ಇಳಿಸಿದೆ. ಕೇವಲ ಒಂದು ವರ್ಷ ಕೆಲಸ ಮಾಡಿದ್ರೆ ಸಾಕು ನಿಮಗೆ ಎಜುಕೇಶನ್ ಮದುವೆ ಹೌಸಿಂಗ್ ಕಾರಣಗಳಿಗೆ ಪಿಎಫ್ ಸಿಗುತ್ತೆ. ಮಿನಿಮಮ್ ಬ್ಯಾಲೆನ್ಸ್. ಎಸ್ ಸ್ನೇಹಿತರೆ ಇಷ್ಟೆಲ್ಲಾ ಪಿಎಫ್ ವಿಥ್ ಡ್ರಾ ಮಾಡೋಕೆ ಬಿಟ್ಬಿಟ್ರೆ ಜನ ಇರ್ಬರೋದನ್ನೆಲ್ಲ ಉಜ್ಕೊಂಡು ತಗೊಳ್ತಾರೆ. ಆಮೇಲೆ ಪಿಎಫ್ ಅನ್ನೋದಕ್ಕೆ ಅರ್ಥನೇ ಇರಲ್ಲ. ಹೀಗಾಗಿ ಸರ್ಕಾರ ಬ್ಯಾಂಕ್ ಅಕೌಂಟ್ಗೆ ಮಿನಿಮಮ್ ಬ್ಯಾಲೆನ್ಸ್ ತರ ಪಿಎಫ್ ಗೂ ಮಿನಿಮಮ್ ಬ್ಯಾಲೆನ್ಸ್ ಇಟ್ಟಿದೆ. ಯಾವಾಗಲೂ ನಿಮ್ಮ ಪಿಎಫ್ ಅಕೌಂಟ್ ಅಲ್ಲಿ 25% ಹಣ ಮೇಂಟೈನ್ ಆಗ್ತಿರಬೇಕು. ಉದಾಹರಣೆಗೆ ನಿಮ್ಮಿಂದ 40,000 ನಿಮ್ಮ ಕಂಪನಿಯಿಂದ 40,000ಪ 20,000 ಬಟ್ಟಿ ಒಟ್ಟು ಪಿಎಫ್ ಅಕೌಂಟ್ ಅಲ್ಲಿ 1 ಲಕ್ಷ ಹಣ ಇದ್ರೆ ಅದರಲ್ಲಿ ನೀವು ಗರಿಷ್ಠ 80,000 ರೂಪಾಯ ಮಾತ್ರ ವಿಥ್ಡ್ರಾ ಮಾಡಬಹುದು. ಯಾಕಂದ್ರೆ ನಿಮ್ಮ ಮತ್ತು ಕಂಪನಿ ಕಾಂಟ್ರಿಬ್ಯೂಷನ್ ಸೇರಿ 80,000 ಆಗುತ್ತೆ.
ಆದರೆ 25% ಅಂದ್ರೆ 20,000. ಸೋ ಆ 20,000 ಬಿಟ್ಟು ಉಳಿದ ಹಣವನ್ನ ನೀವು ವಿಥ್ಡ್ರಾ ಮಾಡಬಹುದು. ಸೋ ಇದನ್ನೇ ಸರ್ಕಾರ ಎಲಿಜಿಬಲ್ ಬ್ಯಾಲೆನ್ಸ್ ಅಂತಿರೋದು. ಈ 25% ಬಿಟ್ಟು ಮಿಕ್ಕಿದ್ದು ತಗೋಬಹುದು. ಅಲ್ದೆ ಕೆಲಸ ಬಿಟ್ಟ ತಕ್ಷಣ ಪಿಎಫ್ ವಿಥ್ಡ್ರಾ ಮಾಡೋ ಅವಧಿನ ಕೂಡ ಸರ್ಕಾರ ಇನ್ಕ್ರೀಸ್ ಮಾಡಿದೆ. ಈ ಮೊದಲು ಕೆಲಸ ಬಿಟ್ಟ ಎರಡು ತಿಂಗಳಲ್ಲೇ ಪಿಎಫ್ ಗೆ ಅಪ್ಲೈ ಮಾಡಿ ತಗೋಬಹುದಿತ್ತು. ಆದರೀಗ ಸರ್ಕಾರ ಈ ಅವಧಿನ 12 ತಿಂಗಳಿಗೆ ಏರಿಸಿದೆ. ಜೊತೆಗೆ ಪೆನ್ಷನ್ ಹಣ ಹಿಂಪಡೆಯೋ ಅವಧಿನ ಕೂಡ ಎರಡು ತಿಂಗಳಿಂದ ಮೂರು ವರ್ಷಕ್ಕೆ ಏರಿಕೆ ಮಾಡಿದೆ. ಹೀಗಾಗಿ ಕೆಲಸ ಇಲ್ಲ ಅಂತ ಹೇಳಿ ಪಿಎಫ್ ಹಣವನ್ನೆಲ್ಲ ಖಾಲಿ ಮಾಡೋದು ತಪ್ಪತ್ತೆ. ಹೀಗೆ ಒಂದು ಕಡೆ ಅವಶ್ಯಕತೆ ಇದ್ದಾಗ ಪಿಎಫ್ ತಗೊಳೋ ಪ್ರಾಸೆಸ್ ನ ಸುಲಭ ಮಾಡಿ. ಮತ್ತೊಂದು ಕಡೆ ಕೆಲಸ ಇಲ್ಲದೆ ಇದ್ದಾಗ ಫ್ರಸ್ಟ್ರೇಷನ್ ನಲ್ಲಿ ಪಿಎಫ್ ಪೂರ್ತಿ ಖಾಲಿ ಮಾಡೋದನ್ನ ತಪ್ಪಿಸಿ ಸರ್ಕಾರ ಬ್ಯಾಲೆನ್ಸ್ಡ್ ಪಿಎಫ್ ಮೇಂಟೈನ್ ಮಾಡುವಂತೆ ಎನ್ಕರೇಜ್ ಮಾಡಿದೆ. ಮತ್ತೊಂದು ಕಡೆ ಪಿಎಫ್ ರಿಟರ್ನ್ಸ್ ನ ಈಗಿರೋ 8.25% 25% ಗಿಂತ ಜಾಸ್ತಿ ಮಾಡೋದಕ್ಕೂ ಕ್ರಮ ತಗೊಳ್ತಿದೆ ಇದಕ್ಕಾಗಿ ಇಪಿಎಫ್ಓ ಇನ್ವೆಸ್ಟ್ಮೆಂಟ್ ಸಲಹೆ ನೀಡುವುದಕ್ಕೆ ಒಂದು ಹೊಸ ಸಮಿತಿಯನ್ನ ನೇಮಕ ಮಾಡ್ತಿದೆ ಇದರಲ್ಲಿ ಆರ್ಬಿಐ ಹಣಕಾಸು ಇಲಾಖೆ ಸೇರಿದಂತೆ ದೇಶದ ಟಾಪ್ ಫೈನಾನ್ಸ್ ತಜ್ಞರು ಇರ್ತಾರೆ ಅಂತ ಹೇಳಲಾಗ್ತಿದೆ.


