ಸಿಮೆಂಟ್ ತಯಾರಾಗದು ಹೇಗೆ ಸಣ್ಣ ಪುಟ್ಟ ಮನೆಗಳಿಂದ ಹಿಡಿದು ದೊಡ್ಡ ದೊಡ್ಡ ಅಣೆಕಟ್ಟು ಸೇತುವೆಗಳವರೆಗೆ ಪ್ರತಿಯೊಂದನ್ನು ಕಟ್ಟೋಕೆ ಮುಖ್ಯವಾಗಿ ಬೇಕಾಗಿರೋದು ಸಿಮೆಂಟ್ ನಿಮಗೆ ಆಶ್ಚರ್ಯ ಆಗಬಹುದು ವಿಶ್ವದಲ್ಲಿ ನೀರು ಬಿಟ್ಟರೆ ಅತಿ ಹೆಚ್ಚು ಬಳಕೆಯಾಗುವ ಮತ್ತೊಂದು ವಸ್ತು ಅಂದ್ರೆ ಅದು ಸಿಮೆಂಟ್ ಅಷ್ಟರ ಮಟ್ಟಿಗೆ ಜಗತ್ತು ಸಿಮೆಂಟಿನ ಮೇಲೆ ಡಿಪೆಂಡ್ ಆಗಿದೆ ಇಂತ ಸಿಮೆಂಟ್ ತಯಾರಿಕೆಯಲ್ಲಿ ಭಾರತ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ರಾಷ್ಟ್ರ ವರ್ಷಕ್ಕೆ 427 ದಶಲಕ್ಷ ಟನ್ ಸಿಮೆಂಟ್ ತಯಾರಿಸುತ್ತೇವೆ ಆದರೆ ಈ ಸಿಮೆಂಟ್ ಹೇಗೆ ತಯಾರಾಗುತ್ತೆ ಯಾವತ್ತಾದರೂ ಯೋಚನೆ ಮಾಡಿದ್ದೀರಾ ಆಧುನಿಕ ಜಗತ್ತಿನ ಫೌಂಡೇಶನ್ ಆಗಿರೋ ಪ್ರತಿಯೊಬ್ಬರು ನೋಡಿರೋ ಬಳಸೋ ಕೆಲವರು ಟಚ್ ಕೂಡ ಮಾಡಿರಬಹುದಾದ ಸಿಮೆಂಟ್ ಆಕ್ಚುಲಿ ಏನು ಎಲ್ಲಿಂದ ಬರುತ್ತೆ ಹೆಂಗೆ ತಯಾರಾಗುತ್ತೆ ಅಷ್ಟು ಗಟ್ಟಿ ಅಂಟ್ಕೊಳ್ಳೋದು ಹೇಗೆ ಅದನ್ನ ಯೂಸ್ ಮಾಡಿದಾಗ ಗೋಡೆಗಳೆಲ್ಲ ಎಲ್ಲವನ್ನ ಡೀಟೇಲ್ ಆಗಿ ಎಕ್ಸ್ಪ್ಲೈನ್ ಮಾಡ್ತೀವಿ.
ಅಚಾನಕ್ಕಾಗಿ ಸೃಷ್ಟಿಯಾದ ಸಿಮೆಂಟ್ ಗಾರೆ ಕೆಲಸದವನಿಂದ ಬದಲಾಯಿತು ಜಗತ್ತು ಇವತ್ತು ಸಿಮೆಂಟ್ ಇಲ್ಲದೆ ಸಣ್ಣ ಕಾಂಪೌಂಡ್ ಕಟ್ಟೋದನ್ನ ಕೂಡ ಊಹಿಸೋಕಾಗಲ್ಲ ಆದರೆ ಇಂತ ಸಿಮೆಂಟ್ ಇತ್ತೀಚಿನ ಆವಿಷ್ಕಾರ ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದು 19ನೇ ಶತಮಾನದ ಮಧ್ಯ ಭಾಗದವರೆಗೂ ಜನರಿಗೆ ಸಿಮೆಂಟ್ ಅಂದ್ರೆ ಏನು ಅಂತನೆ ಗೊತ್ತಿರಲಿಲ್ಲ ಅದಕ್ಕೂ ಮೊದಲು ಅನೇಕ ನಾಗರಿಕತೆಗಳು ಕಟ್ಟಡ ಕಟ್ಟೋಕೆ ನಾನಾತರದ ಅಂಟನ್ನ ಬಳಸ್ತಾ ಇದ್ರು ಈಜಿಪ್ಷಿಯನ್ ಜಿಪ್ಸಮ ಜೊತೆಗೆ ಸುಣ್ಣದ ಕಲ್ಲನ್ನ ಅರಿದು ಸಿಮೆಂಟ್ ತರದೇನೋ ಮಾಡ್ಕೊಂಡು ಯೂಸ್ ಮಾಡ್ತಾ ಇದ್ರು. ರೋಮನ್ನರು ಸುಣ್ಣದ ಕಲ್ಲಿನ ಜೊತೆಗೆ ಜ್ವಾಲಾಮುಖಿಯ ಬೂದಿಯನ್ನ ಬೆರೆಸಿ ಬಳಸ್ತಾ ಇದ್ರು. 1824 ರಲ್ಲಿ ಅಚಾನಕ್ಕಾಗಿ ಸಿಮೆಂಟ್ ಆವಿಷ್ಕಾರ ಆಯ್ತು ಅದಾದ್ಮೇಲೆ. ನಾವೇನ್ ಈಗ ಬಳಸೋ ಸಿಮೆಂಟ್ ಇದೆಯಲ್ಲ ಇದ ಯಾವುದೋ ಲ್ಯಾಬ್ ಅಥವಾ ಫ್ಯಾಕ್ಟರಿಯಲ್ಲಿ ಕಂಡುಹಿಡಿದಿರೋದಲ್ಲ. 19ನೇ ಶತಮಾನದ ಮಧ್ಯಭಾಗದಲ್ಲಿ ಕೈಗಾರಿಕಾ ಕ್ರಾಂತಿಯ ಕಾರಣ ದಿಡೀರಂತ ವಿಶ್ವದಲ್ಲೆಡೆ ಕಟ್ಟಡ ನಿರ್ಮಾಣ ಜೋರಾಯಿತು. ಕಲ್ಲು ಇಟ್ಟಿಗೆಗಳನ್ನ ಹಿಡಿದಿಡೋಕೆ ಗಟ್ಟಿಯಾದ ಅಂಟ್ ಯಾವುದು ಅಂತ ತಲೆ ಕೆಡಿಸಿಕೊಂಡಿದ್ರು ಆಗ ಇಂತ ಟೈಮ್ನಲ್ಲಿ ಇಂಗ್ಲೆಂಡಿನ ಲೀಡ್ಸ್ ನಲ್ಲಿ ಜೋಸೆಫ್ ಅಸ್ಫುದೀನ್ ಅನ್ನೋ ಗಾರೆ ಕೆಲಸದವನೊಬ್ಬ ಎಕ್ಸ್ಪೆರಿಮೆಂಟ್ ಮಾಡಿದ ಯಜಮಾನ ಕೊಟ್ಟ ಕೆಲಸವನ್ನ ಅಷ್ಟೇ ಮಾಡೋದು ಬಿಟ್ಟು ತರ ತರದ ಅಂಟು ತಯಾರಿಸೋಕೆ ಪ್ರಯತ್ನ ಪಡ್ತಾನೆ ಇದ್ದ ಯಾಕೋ ಪರ್ಫೆಕ್ಟ್ ಆಗ್ತಿಲ್ವಲ್ಲ ಅಂತ ಐಡಿಯಾ ಇತ್ತು ಆತಂದು ತಲೆಲ್ಲಿ ಕೊರಿತಾ ಇತ್ತು ಹೀಗೆ ಹುಡುಕ್ತಾನೆ ಇದ್ದ ಪ್ರಯತ್ನ ಪಡ್ತಾನೆ ಇದ್ದ.
ಒಂದು ದಿನ ಸುಣ್ಣದ ಕಲ್ಲಿನ ಜೊತೆಗೆ ಮಣ್ಣನ್ನ ಮಿಕ್ಸ್ ಮಾಡಿ ಬಿಸಿ ಮಾಡಿಬಿಡ್ತಾನೆ ಅದನ್ನ ಹೀಟ್ ಮಾಡ್ತಾನೆ ಆಗ ಕ್ಲಿಂಕರ್ ಅಂದ್ರೆ ಸಣ್ಣ ಉಂಡೆ ತರಹದ ವಿಶಿಷ್ಟ ವಸ್ತು ತಯಾರಾಗುತ್ತೆ ಅದಾದಮೇಲೆ ಅದನ್ನ ಗ್ರೈಂಡ್ ಮಾಡಿ ನೀರಿನ ಜೊತೆ ಬೆರೆಸಿದಾಗ ವಿಶಿಷ್ಟ ಅಂಟು ತಯಾರಾಗುತ್ತೆ ಇದು ಉಳಿದೆಲ್ಲ ಅಂಟುಗಳಿಗಿಂತ ಗಟ್ಟಿಯಾಗಿ ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಇಟ್ಟಿಕೆಗಳನ್ನ ಹಿಡಿದಿಡುತ್ತೆ ಮುಗಿತು ಅವತ್ತು ಆವಿಷ್ಕಾರ ಆಗಿದ್ದೆ ಆಗಿದ್ದು ಈ ಸಿಮೆಂಟ್ ವ್ಯಾಪಕವಾಗಿ ಎಲ್ಲಾ ಕಡೆ ಹರಡಿತು ಬಳಿಕ ಜೋಸೆಫ್ ಮಗ ವಿಲಿಯಂ ಅಸ್ಫೀದಿನ್ ಈ ಸಿಮೆಂಟ್ ರೆಡಿ ಮಾಡೋ ಪ್ರಾಸೆಸ್ ನ ಇನ್ನಷ್ಟು ರಿಫೈನ್ ಮಾಡಿದ ಪೋರ್ಟ್ಲ್ಯಾಂಡ್ ಸಿಮೆಂಟ್ ಅಂತ ಹೊಸ ಸಿಮೆಂಟ್ಗೆ ನಾಮಕರಣ ಕೂಡ ಮಾಡಿದ ಯಾಕಂದ್ರೆ ಸುಣ್ಣದ ಕಲ್ಲಿನ ಜೊತೆಗೆ ಮಣ್ಣನ್ನ ಬಿಸಿ ಮಾಡಿದಾಗ ಉಂಡೆ ಬಂದಿತ್ತಲ್ಲ ಅದು ತೇಟ್ ಬ್ರಿಟನ್ ನಲ್ಲಿ ಸಿಗೋ ಪೋರ್ಟ್ ಲ್ಯಾಂಡ್ ಕಲ್ಲಿನ ಹಾಗೆ ಕಾಣಿಸ್ತಾ ಇರುತ್ತೆ ಹೇಗೆ ಗಾರೆ ಕೆಲಸದವನ ಕುತುಹಲಕ್ಕೆ ಸೃಷ್ಟಿಯಾದ ಸಿಮೆಂಟ್ ಇವತ್ತು ಜಗತ್ತನ್ನೇ ಆಳ್ತಾ ಇದೆ ಹಾಗಿದ್ರೆ ಈ ಮಾಡರ್ನ್ ಸಿಮೆಂಟ್ ಹೇಗೆ ತಯಾರಾಗುತ್ತೆ
ಈ ಸಿಮೆಂಟ್ನ ರಹಸ್ಯವನ್ನ ಪೂರ್ತಿ ಅರ್ಥ ಮಾಡಿಕೊಳ್ಳೋಣ ಸಿಮೆಂಟ್ ಹೇಗೆ ತಯಾರಾಗುತ್ತೆ ಈ ಆವಿಷ್ಕಾರದ ಕಥೆ ಕೇಳಿದಾಗ ನಿಮಗೆ ಸಿಮೆಂಟ್ ಹೇಗೆ ತಯಾರಾಗುತ್ತೆ ಅನ್ನೋದರ ಸುಳಿವು ಸಿಕ್ಕಿರುತ್ತೆ ಸಿಮೆಂಟ್ನಲ್ಲಿ ಬಳಕೆಯಾಗುವ ಪ್ರಮುಖ ಕಚ್ಚ ವಸ್ತು ಅಂದ್ರೆ ಸುಣ್ಣದ ಕಲ್ಲು ಮತ್ತು ಮಣ್ಣು ಲಕ್ಷ ಲಕ್ಷ ಟನ್ಗಳಷ್ಟು ತೂಕ ಎತ್ತಿ ಹಿಡಿಯುವ ಈ ಸಿಮೆಂಟ್ ತಯಾರಾಗೋದು ಮಾಮೂಲಿ ಕಲ್ಲು ಮತ್ತು ಮಣ್ಣಿನಿಂದ ಸಾಮಾನ್ಯವಾಗಿ ಈ ಸುಣ್ಣದ ಕಲ್ಲು ಅಥವಾ ಲೈಮ್ ಸ್ಟೋನ್ ಗಳನ್ನ ಕ್ವಾರಿಗಳಲ್ಲಿ ಸ್ಪೋಟಕಗಳನ್ನ ಇಟ್ಟು ಸ್ಪೋಟಿಸುವ ಮೂಲಕ ಹೊರತೆಗಿತಾರೆ ಇಲ್ಲ ದೊಡ್ಡ ಯಂತ್ರ ಬಳಸಿ ಭೂಮಿಯಿಂದ ಎಕ್ಸ್ಟ್ರಾಕ್ಟ್ ಮಾಡ್ತಾರೆ ಎಕ್ಸ್ಟ್ರಾಕ್ಟ್ ಮಾಡಿದ ನಂತರ ಸುಣ್ಣದ ಕಲ್ಲನ್ನ ಕ್ರಶಿಂಗ್ ಪ್ಲಾಂಟ್ಗೆ ಸೇರಿಸಲಾಗುತ್ತೆ ಇಲ್ಲಿ ದೊಡ್ಡ ದೊಡ್ಡ ಬಂಡೆಯಆಕಾರದ ಈ ಕಲ್ಲುಗಳನ್ನ ಸಣ್ಣ ಸಣ್ಣ ತುಣುಕುಗಳಾಗಿ ಬಹುತೇಕ ಪುಡಿಯಾಗುವಂತೆ ಕ್ರಶ್ ಮಾಡಲಾಗುತ್ತೆ ಇದಿಷ್ಟು ಆದ ನಂತರ ಮಣ್ಣಿನ ಜೊತೆ ಈ ಸುಣ್ಣದ ಕಲ್ಲಿನ ಪುಡಿಯನ್ನ ಬೆರೆಸೋ ಪ್ರಕ್ರಿಯೆ ಇರುತ್ತೆ ಇದು ಸಿಮೆಂಟ್ ತಯಾರಿಕೆಯಲ್ಲಿ ಅತ್ಯಂತ ಮಹತ್ವದ ಹಂತ ಯಾಕಂದ್ರೆ ಸರಿಯಾದ ಪ್ರಮಾಣದಲ್ಲಿ ಎರಡನ್ನ ಮಿಕ್ಸ್ ಮಾಡಬೇಕು ಸ್ವಲ್ಪ ಹೆಚ್ಚು ಕಮ್ಮಿ ಆದ್ರೂ ಕೂಡ ಸಿಮೆಂಟ್ನ ಕ್ವಾಲಿಟಿ ಬಿದ್ದುಹೋಗುತ್ತೆ ಸಾಮಾನ್ಯವಾಗಿ 75% ಸುಣ್ಣದ ಕಲ್ಲಿನ ಜೊತೆಗೆ 25% ಕ್ಲೇ ಮಣ್ಣನ್ನ ಬೆರೆಸಬೇಕು ಇವೆರಡರ ಮಿಶ್ರಣದಿಂದ ಸಿದ್ಧವಾದ ವಸ್ತುವನ್ನ ರಾ ಮೀಲ್ ಅಂತ ಕರೀತಾರೆ ಅಂದ್ರೆ ಬಹುತೇಕ ಕಚ್ಚ ಸಿಮೆಂಟ್ ಅಂತ ಅರ್ಥ ಈ ರಾ ಮೀಲ್ನ್ನ ನ್ನ ಬೆಳಿಕ ಕನ್ವೇಯರ್ ಬೆಲ್ಟ್ ಮೂಲಕ ದೊಡ್ಡ ದೊಡ್ಡ ಮಿಲ್ಗಳಿಗೆ ಸಾಗಿಸುತ್ತಾರೆ ಇಲ್ಲಿ ಬೃಹತ್ತಾದ ತಿರುಗುವ ಸಿಲಿಂಡರ್ ಗಳಇರುತ್ತವೆ ಇದರಲ್ಲಿ ರಾ ಮೀಲ್ನ್ನ ಹದವಾಗಿ ಬೆರೆಯುವಂತೆ ಜೊತೆಗೆ ಪೌಡರ್ ತರ ನುಣುಪಾದ ಪುಡಿಯಾಗುವಂತೆ ಮಾಡಲಾಗುತ್ತೆ.
ಮುಂದಿನ ರಸಾಯನಿಕ ಪ್ರಕ್ರಿಯೆಗಳಿಗೆ ಈ ಹಂತ ತುಂಬಾ ಮುಖ್ಯ ಇಲ್ಲಿ ತಯಾರಾದ ಪೌಡರ್ನಂತಹ ಸಿಮೆಂಟಿನ ಪುಡಿಯನ್ನ ನಂತರ ದೊಡ್ಡ ದೊಡ್ಡ ಟವರ್ಗಳಿಗೆ ವರ್ಗಾಯಿಸಲಾಗುತ್ತೆ 120 ಮೀಟರ್ ಎತ್ತರದ ಈ ಟವರ್ಗಳು ಒಂತರ ನೇರವಾಗಿ ನಿಲ್ಲಿಸಿದ ಒಲೆಗಳ ತರ ಇಲ್ಲಿ 800ರಿಂದ 900 ಡಿಗ್ರಿ ಸೆಲ್ಸಿಯಸ್ ನಷ್ಟು ತೀವ್ರ ಬಿಸಿಗಾಳಿಯಿಂದ ಈ ಪುಡಿಯನ್ನ ಹೀಟ್ ಮಾಡಲಾಗುತ್ತೆ ತಾಪಮಾನ ಹೆಚ್ಚಾದಂತ ಈ ಪುಡಿ ಕ್ಯಾಲ್ಸಿನೇಷನ್ ಅನ್ನೋ ರಸಾಯನಿಕ ಪ್ರಕ್ರಿಯೆಗೆ ಒಳಪಡುತ್ತೆ ಅಂದ್ರೆ ಸುಣ್ಣದ ಕಲ್ಲಿನಲ್ಲಿದ್ದ ಸುಣ್ಣ ಕ್ಯಾಲ್ಸಿಯಂ ಆಕ್ಸೈಡ್ ಕಾರ್ಬನ್ ಡೈಯಾಕ್ಸೈಡ್ ನ ರಿಲೀಸ್ ಮಾಡುತ್ತೆ ಇಲ್ಲಿಂದ ಅಲ್ಲಿವರೆಗೂ ಮಾಮೂಲಿ ಪುಡಿಯಾಗಿದ್ದ ಸಿಮೆಂಟ್ ಗಟ್ಟಿಯಾದ ಅಂಟ ಆಗುವ ಪ್ರಕ್ರಿಯೆ ಆರಂಭ ಆಗುತ್ತೆ ಆದರೆ ದುರದೃಷ್ಟ ವಶಾತ ಇದರಿಂದ ವಾತಾವರಣಕ್ಕೆ ದೊಡ್ಡ ಪ್ರಮಾಣದ ಕಾರ್ಬನ್ ಡೈ ಡೈಆಕ್ಸೈಡ್ ಕೂಡ ಸೇರುತ್ತೆ ಬರೋಬರಿ 8% ಕಾರ್ಬನ್ ಡೈಾಕ್ಸೈಡ್ ಗಾಳಿ ಸೇರುತಿರೋದು ಈ ಕಾರಣದಿಂದಾಗಿನೆ ಇನ್ನು ಈತರ ಹೀಟ್ ಮಾಡಿದ ಸಿಮೆಂಟ್ ಪುಡಿಯನ್ನ ಮತ್ತೆ ಉದ್ದನೆಯ ರೋಟರ್ ಒಂದಕ್ಕೆ ಹಾಕಲಾಗುತ್ತೆ ಇದೊಂತರ ಅಡ್ಡಡ್ಡ ನಿಲ್ಲಿಸಿದ ಒಲೆ ಇದ್ದ ಹಾಗೆ ಬರೋಬರಿ 60ಮೀಟರ್ ಉದ್ದನಾಲ್ಕುಮೀಟರ್ ಅಗಲದ ಸಿಲಿಂಡ್ರಿಕಲ್ ಒಲೆ ಇದರಲ್ಲಿ ಮತ್ತೆ ಸಿಮೆಂಟ್ ಪುಡಿಯನ್ನ 1450 ಡಿಗ್ರಿ ಸೆಲ್ಸಿಯಸ್ ನಷ್ಟು ಶಾಖ ಕೊಟ್ಟು ಹೀಟ್ ಮಾಡಲಾಗುತ್ತೆ ಈ ವೇಳೆ ಸಿಮೆಂಟಿನ ಪುಡಿ ಮತ್ತೆ ಹಲವು ಕೆಮಿಕಲ್ ರಿಯಾಕ್ಷನ್ಗೆ ಒಳಗಾಗುತ್ತೆ ಕೊನೆಗೆ ಕ್ಲಿಂಕರ್ ಅಂದ್ರೆ ಗೋಲಿಯ ಆಕಾರದ ಸಣ್ಣ ಸಣ್ಣ ಉಂಡೆಗಳಾಗಿ ಹೊರ ಬರುತ್ತೆ.
ಈ ಉಂಡೆಗಳನ್ನ ತಣ್ಣನೆಯ ಗಾಳಿ ಮೂಲಕ ಕೂಲ್ ಮಾಡಲಾಗುತ್ತೆ ಬಳಕ ಜಿಪ್ಸಂ ಬೂದಿಯಂತಹ ಮತ್ತಷ್ಟು ಪುಡಿಗಳೊಂದಿಗೆ ಬೆರೆಸ್ತಾರೆ ಅದರಲ್ಲೂ ಈ ಜಿಪ್ಸಂ ಸೇರಿಸುವುದು ತುಂಬಾ ಇಂಪಾರ್ಟೆಂಟ್ ಯಾಕಂದ್ರೆ ಇದು ಸಿಮೆಂಟ್ನ ಕ್ಯೂರಿಂಗ್ ಟೈಮ್ ಅನ್ನ ಡಿಸೈಡ್ ಮಾಡುತ್ತೆ ಜಿಪ್ಸಂ ಹೆಚ್ಚು ಬೆರೆಸಿದಷ್ಟು ಸಿಮೆಂಟ್ ಗಟ್ಟಿಯಾಗೋಕೆ ಹೆಚ್ಚು ಟೈಮ್ ತಗೊಳ್ಳುತ್ತೆ ಸುಮಾರು ಮೂರರಿಂದ 5% ಜಿಪ್ಸಂ ಸೇರಿಸ್ತಾರೆ ಅಲ್ಲಗೆ ಸಿಮೆಂಟ್ ತಯಾರಾಗುತ್ತೆ ಆಮೇಲೆ ಈ ರೀತಿ ದೊಡ್ಡ ದೊಡ್ಡ ಬ್ಯಾಗ್ಲ್ಲಿ ತುಂಬಿ ಮಾರಾಟ ಮಾಡ್ತಾರೆ ಕರೆಂಟ್ಗೆ ಹೆಚ್ಚು ಖರ್ಚು ಸಾಮಾನ್ಯವಾಗಿ ಒಂದು 50ಕೆಜಿ ಸಿಮೆಂಟ್ ಚೀಲಕ್ಕೆ 350 ರಿಂದ 400 ರೂಪಾಯ ತಗಲುತ್ತೆ ಆದರೆ ಇದರಲ್ಲಿ 120 ರಿಂದ 140 ರೂಪಾಯಿ ಕೇವಲ ಕರೆಂಟ್ಗೆ ಹೋಗುತ್ತೆ ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದು ಸಿಮೆಂಟ್ ತಯಾರಿಕೆನಲ್ಲಿ ಮುಖ್ಯವಾಗಿ ಮೂರು ಖರ್ಚಿದೆ ಕಚ್ಚ ವಸ್ತುಗಳ ಬೆಲೆ ವಿದ್ಯುತ್ ಖರ್ಚು ಮತ್ತು ಲಾಜಿಸ್ಟಿಕಲ್ ಕಾಸ್ಟ್ ಆದರೆ ಇದರಲ್ಲಿ ಅತಿ ಹೆಚ್ಚು 30 ರಿಂದ 35% ಬರಿ ಕರೆಂಟ್ಗೆ ಹೋಗುತ್ತೆ ಯಾಕಂದ್ರೆ ಈಗ ಆಲ್ರೆಡಿ ಹೇಳಿದಂತೆ ಸಿಮೆಂಟ್ ತಯಾರಿಸುವಾಗ ಸುಣ್ಣದ ಕಲ್ಲು ಮತ್ತು ಮಣ್ಣನ್ನ ಅತ್ಯಂತ ಹೆಚ್ಚಿನ ತಾಪಮಾನದಲ್ಲಿ ಹೀಟ್ ಮಾಡಬೇಕಾಗುತ್ತೆ ಇದಕ್ಕೆ ಸಿಕ್ಕಬಟ ಕರೆಂಟ್ ಬೇಕು ಹೀಗಾಗಿನೇ ಬಹುತೇಕ ಸಿಮೆಂಟ್ ಕಂಪನಿಗಳು ಸ್ವಂತ ಪವರ್ ಪ್ಲಾಂಟ್ ಅನ್ನೇ ಕ್ಯಾಪ್ಟಿವ್ ಪವರ್ ಪ್ಲಾಂಟ್ ನ್ನೇ ಸೆಟ್ಪ್ ಮಾಡ್ಕೊಂಡಿರ್ತಾರೆ ಅವರಿಗೋಸ್ಕರನೇ ಕೇವಲ ವಿದ್ಯುತ್ ಅಷ್ಟೇ ಅಂತಲ್ಲ ಸಿಮೆಂಟ್ ಸಾಗಾಣಿಕೆಗೂ ಕೂಡ ಹೆವಿ ಕಾಸ್ಟ್ ಆಗುತ್ತೆ.
ಲಾಜಿಸ್ಟಿಕ್ಸ್ ಗೆ ಸಿಮೆಂಟ್ ಕಂಪನಿಗಳು 25ರಿಂದ 30% ಖರ್ಚು ಮಾಡಬೇಕಾಗುತ್ತೆ ಯಾಕಂದ್ರೆ ಸಿಮೆಂಟ್ ಲೋ ವ್ಯಾಲ್ಯೂ ಹೈ ವಾಲ್ಯೂಮ್ ವಸ್ತು ಪ್ರತಿ ಕೆಜಿ ಸಿಮೆಂಟ್ಗೆ ಬರಿ ಏಳರಿಂದಎ ರೂಪಾಯಿ ಆದ್ರೆ ತೂಕ ಬರುತ್ತಲ್ವಾ ದೊಡ್ಡ ಪ್ರಮಾಣದಲ್ಲಿ ಸಾಗಾಟ ಮಾಡಬೇಕಾಗುತ್ತೆ ಹೀಗಾಗಿ ಇದರ ವಾಲ್ಯೂಮ್ ಟು ಫ್ರೈಟ್ ರೇಷಿಯೋ ಕೂಡ ಜಾಸ್ತಿ ಇರುತ್ತೆ ಅಲ್ದೆ ಸಿಮೆಂಟ್ ಪೆರಿಶಬಲ್ ಗೂಡ್ಸ್ ಇದರ ಶೆಲ್ಫ್ ಲೈಫ್ 90 ಡೇಸ್ ಹೀಗಾಗಿ ಬೇಗ ಸಾಗಿಸಿ ಅದನ್ನ ಯೂಸ್ ಮಾಡಬೇಕಾಗುತ್ತೆ ಲಾಜಿಸ್ಟಿಕ್ಸ್ ಖರ್ಚು ಜಾಸ್ತಿ ಆಗುತ್ತೆ ಉಳಿದಂತೆ ಲೈಮ್ ಸ್ಟೋನ್ ಮತ್ತು ಕ್ಲೇ ಮಣ್ಣಿನಂತಹ ರಾ ಮೆಟೀರಿಯಲ್ ಗೆ ಸುಮಾರು 15ರಿಂದ 20% ಖರ್ಚಾಗುತ್ತೆ ಆದರೆ ಈ ಖರ್ಚುಗಳನ್ನ ತಪ್ಪಿಸಕ್ಕೆ ಆಗಲ್ಲ ಜೊತೆಗೆ ಪೇಂಟ್ ಐಸ್ ಕ್ರೀಮ್ ನಂತೆ ಸಿಮೆಂಟ್ನ ಬೇರೆ ಬೇರೆ ವೇರಿಯೇಷನ್ ಗಳಲ್ಲೂ ಕೂಡ ತರಕ ಆಗಲ್ಲ ಜಾಸ್ತಿ ಎಲ್ಲ ವೈಟ್ ಸಿಮೆಂಟ್ ಎಲ್ಲ ಬಿಟ್ಟರೆ ಎಲ್ಲರೂ ಉಳಿದಿದೆಲ್ಲ ಒಂದೇ ತರದ ಸಿಮೆಂಟ್ ನ ಮಾರಾಟ ಮಾಡ್ತಾರೆ ಬಹುತೇಕ ಎಲ್ಲಾ ಕಂಪನಿಗಳು ಹೆಚ್ಚು ಕಮ್ಮಿ ಒಂದೇ ರೇಟ್ನಲ್ಲಿ ಮಾರಾಟ ಮಾಡ್ತಾರೆ. ಬ್ಯಾಗ್ ಅಲ್ಲಿ ಸ್ವಲ್ಪ 20 ರೂಪಾಯ ವ್ಯತ್ಯಾಸ ಇರಬಹುದು ಅಷ್ಟೇ ಪ್ರೀಮಿಯಂ ಅಂತ ಹೇಳಿ. ಬಹಳ ವ್ಯತ್ಯಾಸ ಇಡೋಕ್ಕೆ ಬರೋದಿಲ್ಲ. ಹಾಗಾಗಿ ಏನು ಮಾಡ್ತಾ ಿದ್ದಾರೆ ಇತಿಚಿನ ದಿನಗಳಲ್ಲಿ ಕಂಪನಿಗಳು ಸಿಮೆಂಟ್ ಕಂಪನಿಗಳು ಆದಾಯ ಹೆಚ್ಚಿಸಿಕೊಳ್ಳೋಕೆ ವ್ಯಾಲ್ಯೂ ಅಡಿಷನ್ ಮಾಡ್ತಾ ಇದ್ದಾರೆ. ಏನು ಬರೀ ಸಿಮೆಂಟ್ ಅಲ್ಲ ವೈಟ್ ಟಾಪಿಂಗ್ ಮಾಡೋ ಕೆಲಸಗಳಿಗೂ ಕೂಡ ಕಾಂಕ್ರೀಟ್ ಮಾಡಿಕೊಡ್ತೀವಿ ನಾವು ಅಂತ ಹೇಳಿ ಬರ್ತಾ ಇದ್ದಾರೆ. ಕೈ ಜೋಡಿಸ್ತಾ ಇದ್ದಾರೆ. ಸ್ವಲ್ಪ ಎಕ್ಸ್ಟ್ರಾ ಅರ್ನಿಂಗ್ ಸಿಗುತ್ತೆ ಅಂತ. ಸಿಮೆಂಟ್ ಕಿಂಗ್ ಭಾರತ. ಇಷ್ಟೆಲ್ಲಾ ಖರ್ಚುಗಳಿದ್ದರೂ ಭಾರತ ಟಾಪ್ ಸಿಮೆಂಟ್ ತಯಾರಿಕ ರಾಷ್ಟ್ರ.
ಚೀನಾ ಬಿಟ್ಟರೆ ಅತಿ ಹೆಚ್ಚು ಸಿಮೆಂಟ್ ತಯಾರಾಗೋದು ಭಾರತದಲ್ಲಿ. ವರ್ಷಕ್ಕೆ 427 ದಶಲಕ್ಷ ಟನ್ ಸಿಮೆಂಟ್ ತಯಾರಿಸ್ತೇವೆ. ಇಷ್ಟು ಸಿಮೆಂಟ್ನ ಸಾಗಿಸಬೇಕು ಅಂದ್ರೆ ನಮಗೆ 15 ದಶಲಕ್ಷ ಟ್ರಕ್ ಗಳು ಬೇಕಾಗ್ತವೆ. ಈ ಟ್ರಕ್ ಗಳನ್ನ ಒಂದರ ಹಿಂದೆ ಒಂದು ನಿಲ್ಲಿಸಿದರೆ ಇಡೀ ಭೂಮಿಯನ್ನ ಎರಡು ಸುತ್ತು ಹಾಕಬೇಕಾಗುತ್ತೆ. ಅಂತಹ ಸಿಮೆಂಟ್ನ ಪವರ್ ಹೌಸ್ ಭಾರತ. ನಮ್ಮಲ್ಲಿ ಒಟ್ಟು 210 ದೊಡ್ಡ ಸಿಮೆಂಟ್ ಫ್ಯಾಕ್ಟರಿಗಳಿವೆ. ಆದರೆ ಇತೀಚಿನ ದಿನಗಳಲ್ಲಿ ಎರಡು ದೊಡ್ಡ ಗ್ರೂಪ್ ಗಳಲ್ಲೆಲ್ಲ ಮಿಕ್ಸ್ ಆಗ್ತಿದ್ದಾವೆ ಇವು ಸೇರ್ಕೊಂತಿದ್ದಾವೆ ಅಕ್ವಿಸಿಷನ್ಸ್ ಆಗ್ತಾ ಇದೆ. ಯಾವುದು ಎರಡು ದೊಡ್ಡ ಗ್ರೂಪ್ ಆದಿತ್ಯ ಬಿರ್ಲಾ ಗ್ರೂಪ್ ಅವರ ಅಲ್ಟ್ರಾಟೆಕ್ ಸಿಮೆಂಟ್ ಮೇನ್ ಬ್ರಾಂಡ್ ಉಳಿದಿದ್ದು ಸುಮಾರು ತಗೊಂಡಿದ್ದಾರೆ. ಹಾಗೆ ಇನ್ನೊಂದು ಕಡೆ ಅದಾನಿ ಸಿಮೆಂಟ್ ಅವರು ಸುಮಾರು ತಗೊಂಡಿದ್ದಾರೆ. ಎಸಿಸಿ ಅಂಬುಜ ಎಲ್ಲ ಅದು ಬಿಟ್ರೆ ಶ್ರೀ ಡಾಲ್ಮಿಯ ಈ ತರದ ಕಂಪನಿಗಳು ಕೂಡ ಇದಾವೆ ಆದ್ರೂ ಕೂಡ ಸಾಕಾಗ್ತಿಲ್ಲ ನಾವು ಸಿಕ್ಕಾಪಟ್ಟೆ ಸಿಮೆಂಟ್ ಬಳಸ್ತೀವಿ ಇನ್ಫ್ಯಾಕ್ಟ್ ತಾನು ತಯಾರಿಸೋದಕ್ಕಿಂತ ಜಾಸ್ತಿ ಸಿಮೆಂಟ್ನ ಭಾರತ ಬಳಸುತ್ತೆ ವರ್ಷಕ್ಕೆ 444 ಮಿಲಿಯನ್ ಟನ್ ಸಿಮೆಂಟ್ ಬೇಕು ಹೀಗಾಗಿ ಸಿಮೆಂಟ್ ಕ್ಷೇತ್ರದಲ್ಲಿ ಅಷ್ಟೊಂದು ಸ್ಪರ್ಧ.


