Thursday, November 20, 2025
HomeLatest Newsವೈದ್ಯರ ಕೊರತೆಗೆ ಪರಿಹಾರವೇ? ಹೊಸ ಸೀಟು ಹಂಚಿಕೆ ಪ್ರಕಟ

ವೈದ್ಯರ ಕೊರತೆಗೆ ಪರಿಹಾರವೇ? ಹೊಸ ಸೀಟು ಹಂಚಿಕೆ ಪ್ರಕಟ

ಭಾರತ 140 ಕೋಟಿ ಜನಸಂಖ್ಯೆಯ ರಾಷ್ಟ್ರ ಆದರೆ ವೈದ್ಯರ ಕೊರತೆ ಎಷ್ಟೊಂದು ಗಂಭೀರ ಸಮಸ್ಯೆ ಅಂದ್ರೆ ನಂಬಕಾಗಲ್ಲ ಡಾಕ್ಟರ್ ಆಗಬೇಕು ಅನ್ನೋ ಕನಸು ಲಕ್ಷಾಂತರ ವಿದ್ಯಾರ್ಥಿಗಳಿಗಿದೆ ಆದರೆ ಸೀಟ್ಗಳ ಕೊರತೆಯಿಂದ ಅನೇಕರ ಕನಸು ಅರ್ಧದಲ್ಲೇ ನಿಂತು ಹೋಗ್ತಾ ಇದೆ ಆದರೆ ಈಗ ಪರಿಸ್ಥಿತಿ ಬದಲಾಗ್ತಾ ಇದೆ ಸರ್ಕಾರ ವೈದ್ಯಕೀಯ ಶಿಕ್ಷಣದಲ್ಲಿ ಕ್ರಾಂತಿಕಾರಿ ನಿರ್ಧಾರ ತಗೊಂಡಿದೆ ಮನೆ ಮನೆಗೂ ಡಾಕ್ಟರ್ಸ್ ಅನ್ನೋದೃಷ ದೃಷ್ಟಿಯಿಂದ ವೈದ್ಯಕೀಯ ಸೀಟುಗಳನ್ನ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸತ್ತಾ ಇದೆ. ಎಷ್ಟು ಹೊಸ ಸೀಟುಗಳು ಸೇರ್ಪಡೆ ಆಗ್ತಿದೆ ಅದರಲ್ಲಿ ಕರ್ನಾಟಕಕ್ಕೆ ಎಷ್ಟು ಸೀಟು ಸಿಕ್ಕಿದೆ ಮತ್ತು ಈ ನಿರ್ಧಾರದಿಂದ ನಿಜಕ್ಕೂ ಭಾರತ ವೈದ್ಯರ ಕೊರತೆಯಿಂದ ಮುಕ್ತವಾಗುತ್ತ ಅನ್ನೋದನ್ನ ನೋಡ್ತಾ ಹೋಗೋಣ.

ಪ್ರತಿ ಸಾವಿರ ಜನರಿಗೆ ಒಬ್ಬ ವೈದ್ಯರ ಇರಬೇಕು ಅಂತ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡ ಇದೆ ಆದರೆ ಭಾರತದಲ್ಲಿ ಪ್ರತಿ 1263 ಜನರಿಗೆ ಒಬ್ಬರು ವೈದ್ಯರಿದ್ದಾರೆ ಕನಿಷ್ಠ ಅಂತ ಹೇಳಿದ್ದೆ ಸಾವಿರ ಜನಕ್ಕೊಬ್ಬರು ಇರಬೇಕು ಅಂತ ನಮ್ಮ ಹತ್ರ 1263 ಜನಕ್ಕೊಬ್ಬರು ವೈದ್ಯರ ಇರೋದು ಗ್ರಾಮೀಣ ಪ್ರದೇಶದಲ್ಲಿ ಇನ್ನು ಭಯಾನಕ ಪರಿಸ್ಥಿತಿ 10ಸಾವಿರ ಜನಕ್ಕೆ ಒಬ್ಬರು ಡಾಕ್ಟರ್ ಸಿಗ್ತಾರೆ ಇದರಿಂದ ಸಾಮಾನ್ಯ ಜನರಿಗೆ ಒಳ್ಳೆ ವೈದ್ಯಕೀಯ ಸೇವೆ ಸಿಗೋದು ಕಷ್ಟ ಆಗ್ತಿದೆ ಶೀತ ಸಾಮಾನ್ಯ ಜ್ವರದಂತಹ ಸಣ್ಣ ಪುಟ್ಟ ಕಾಯಿಲೆಗೂ 10 20 ಕಿಲೋಮೀಟ ದೂರದ ಪಟ್ಟಣಕ್ಕೆ ಹೋಗಬೇಕು ಸ್ಪೆಷಲಿಸ್ಟ್ ಡಾಕ್ಟರ್ಸ್ ಅಂತೂ ದೂರದ ಮಾತು ದೂರದ ತಾಲೂಕು ಡಿಸ್ಟ್ರಿಕ್ಟ್ ಆಸ್ಪತ್ರೆಗಳಿಗೆ ಹೋಗಬೇಕು ಭಾರತದಲ್ಲಿ ಸ್ಪೆಷಲಿಸ್ಟ್ ಡಾಕ್ಟರ್ಸ್ ಅಗತ್ಯಕ್ಕಿಂತ 80% ಕಮ್ಮಿ ಇದ್ದಾರೆ ಅಂದ್ರೆ ಕೇವಲ 20% ವೈದ್ಯರು 140 ಕೋಟಿ ಜನರ ಆರೋಗ್ಯವನ್ನ ನೋಡ್ತಾ ಇದ್ದಾರೆ 80% ಶಾರ್ಟೇಜ್ನೊಂದಿಗೆ ಹೀಗಾಗಿ ಭಾರಿ ಸಮಸ್ಯೆ ಆಗ್ತಿದೆ ಅದಕ್ಕಾಗಿನೇ ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ಬೃಹತ್ ಬದಲಾವಣೆ ತರೋಕೆ ಹೆಜ್ಜೆ ಇಡ್ತಾ ಇದೆ 75000 ಮೆಡಿಕಲ್ ಸೀಟ್ಸ್ ಮನೆ ಮನೆಗೂ ಡಾಕ್ಟರ್ಸ್ 2024ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪಿಎಂ ನರೇಂದ್ರ ಮೋದಿ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯ ಘೋಷಣೆ ಮಾಡಿದರು ದೇಶದಲ್ಲಿ ಮುಂದಿನ ಐದು ವರ್ಷಗಳಲ್ಲಿ ಹೊಸದಾಗಿ 75000 ಮೆಡಿಕಲ್ ಸೀಟ್ಗಳನ್ನ ಆಡ್ ಮಾಡೋದಾಗಿ ಅನೌನ್ಸ್ ಮಾಡಿದ್ರು ಈ ಘೋಷಣೆ ಹಿನ್ನಲೆಯಲ್ಲಿ ನ್ಯಾಷನಲ್ ಮೆಡಿಕಲ್ ಕಮಿಷನ್ ಎನ್ಎಂಸಿ ಈಗ ಆಲ್ರೆಡಿ ಕೆಲಸ ಮಾಡೋಕೆ ಶುರು ಮಾಡಿದೆ ಮೊದಲ ಹಂತದಲ್ಲಿ 10650 ಹೊಸ ಎಂಬಿಬಿಎಸ್ ಸೀಟುಗಳಿಗೆ ಅನುಮೋದನೆ ಕೊಡಲಾಗಿದೆ.

ಹಾಗೆ 41 ಹೊಸ ಮೆಡಿಕಲ್ ಕಾಲೇಜ್ಗಳಿಗೆ ಅಪ್ರೂವಲ್ ಕೊಡಲಾಗಿದೆ ಈ ಹೊಸ ಸೀಟುಗಳು 2025 26ರ ಅಕಾಡೆಮಿಕ್ ಇಯರ್ ನಿಂದಲೇ ಸೇರ್ಪಡೆಯಾಗಲಿವೆ ಪಿಜಿ ಸೀಟುಗಳ ಹೆಚ್ಚಳ ಎಂಬಿಬಿಎಸ್ ಅಷ್ಟೇ ಅಲ್ಲ ಪೋಸ್ಟ್ ಗ್ರಾಜುಯೇಷನ್ ಪಿಜಿ ಸೀಟ್ಗಳನ್ನ ಕೂಡ ಹೆಚ್ಚಿಸೋ ಯೋಚನೆ ಸರ್ಕಾರಕ್ಕಿದೆ ಅದು ಕೂಡ ಇಂಪಾರ್ಟೆಂಟ್ ಈಗ ಆಲ್ರೆಡಿ ಸುಮಾರುಮೂರವರೆ ಸಾವಿರ ಹೊಸ ಪಿಜಿ ಸೀಟುಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟು 5000 ಹೊಸ ಪಿಜಿ ಸೀಟುಗಳು ಸಿಗಬಹುದು ಅನ್ನೋ ನಿರೀಕ್ಷೆ ಕೂಡ ಇದೆ. ಇದರಿಂದ ಭಾರತದಲ್ಲಿ ಪಿಜಿ ಸೀಟುಗಳ ಸಂಖ್ಯೆ 67000ಕ್ಕೆ ಏರಬಹುದು. ಇದು ದೊಡ್ಡ ಸುದ್ದಿ ಯಾಕಂದ್ರೆ ಈಗ ದೇಶದಲ್ಲಿ ವಿದ್ಯಾರ್ಥಿಗಳು ಎಂಬಿಬಿಎಸ್ ಆದಮೇಲೆ ವಿದೇಶಕ್ಕೆ ಹೋಗಬೇಕಾಗಿರುವಷ್ಟು ದಾರಿದ್ರ್ಯ ಇದೆ ಬಡತನ ಇದೆ ಸೀಟ್ಗಳಿಗೆ ಸಿಗತಾನೆ ಇಲ್ಲ 2025ರ ಒಂದೇ ವರ್ಷದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಎರಡು ಸೀಟುಗಳ ಸಂಖ್ಯೆ ಸೇರಿ ಸುಮಾರು 15000 ಸೀಟುಗಳನ್ನ ಈಗ ಹೆಚ್ಚಳ ಮಾಡೋ ನಿರ್ಧಾರ ಮಾಡಿರೋದ್ರಿಂದ ಒಂದಷ್ಟು ರಿಲೀಫ್ ಆರಂಭದಲ್ಲೇ ಸಿಗುತ್ತೆ ಹೋಗ್ತಾ ಹೋಗ್ತಾ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಸೀಟುಗಳನ್ನ ಜಾಸ್ತಿ ಮಾಡೋ ಗುರಿಯನ್ನ ಹಾಕೊಳ್ಳಲಾಗಿದೆ ನಿಮಗೆ ನಾವು ತರ್ತಾ ಇರುವಂತಹ ಇಂತಹ ವ್ಯಾ ವ್ಯಾಲ್ಯೂಬಲ್ ಮಾಹಿತಿ ಇಷ್ಟ ಆಗ್ತಾ ಇದ್ರೆ.

41 ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು 129 ಖಾಸಗಿ ಸಂಸ್ಥೆಗಳಿಂದ 170 ಅರ್ಜಿಗಳು ಬಂದಿದ್ದಾವೆ ಅಂತ ನ್ಯಾಷನಲ್ ಮೆಡಿಕಲ್ ಕಮಿಷನ್ ಮುಖ್ಯಸ್ಥ ಡಾಕ್ಟರ್ ಅಭಿಜಿತ್ ಸೇಟ್ ಮಾಹಿತಿ ಕೊಟ್ಟಿದ್ದಾರೆ. ಇದರಲ್ಲಿ ಬರಿ 41 ಹೊಸ ಸರ್ಕಾರಿ ಕಾಲೇಜುಗಳ ಸೇರ್ಪಡೆಯೊಂದಿಗೆನೇ ದೇಶದಲ್ಲಿ ಒಟ್ಟಾರೆ ವೈದ್ಯಕೀಯ ಸಂಸ್ಥೆಗಳ ಸಂಖ್ಯೆ 816 ಕ್ಕೆ ಏರಿಕೆಯಾಗಿದೆ. ನ್ಯಾಷನಲ್ ಮೆಡಿಕಲ್ ಕಮಿಷನ್ ಇನ್ನೊಂದು ಮಹತ್ವದ ನಿರ್ಧಾರವನ್ನ ಕೂಡ ತಗೊಳೋಕೆ ಮುಂದಾಗಿದೆ. ವೈದ್ಯಕೀಯ ಪಠ್ಯಕ್ರಮದ ಜೊತೆ ಜೊತೆಗೆನೇ ಕ್ಲಿನಿಕಲ್ ರಿಸರ್ಚ್ ನ ಕೂಡ ಇಂಟಿಗ್ರೇಟ್ ಮಾಡೋಕ್ಕೆ ಚಿಂತನೆ ನಡೆಸಲಾಗ್ತಾ ಇದೆ. ಇದಕ್ಕಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಐಸಿಎಂಆರ್ ಜೊತೆಗೆ ಕೊಲ್ಾಬರೇಷನ್ ಮಾಡಿಕೊಳ್ಳೋದಕ್ಕೆ ತಯಾರಿ ಮಾಡ್ತಾ ಇದ್ದೀವಿ ಅಂತ ಹೇಳಿದ್ದಾರೆ. ಇದರಿಂದ ವೈದ್ಯಕೀಯ ಶಿಕ್ಷಣದ ಕ್ವಾಲಿಟಿ ಹೆಚ್ಚಿಸೋಕ್ಕೆ ಸಾಧ್ಯ ಆಗುತ್ತೆ.

ಕರ್ನಾಟಕಕ್ಕೆ ಎಷ್ಟು ಸೀಟ್ ನ್ಯಾಷನಲ್ ಮೆಡಿಕಲ್ ಕಮಿಷನ್ ಈಗ ಇಮ್ಮಿಡಿಯೇಟ್ ಆಗಿ ಅನುಮೋದಿಸಿರೋ 10650 ಸೀಟುಗಳನ್ನ ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಇಲ್ಲಿ ದೇಶದ ಅತಿ ದೊಡ್ಡ ರಾಜ್ಯ ಆದರೆ ಕಡಿಮೆ ವೈದ್ಯಕೀಯ ಸೀಟನ್ನ ಹೊಂದಿದ್ದ ಉತ್ತರಪ್ರದೇಶಕ್ಕೆ ಈ ಬಾರಿ ಅತಿ ಹೆಚ್ಚು ಎಂಬಿಬಿಎಸ್ ಸೀಟ್ಗಳನ್ನ ಅಲಾಟ್ ಮಾಡಲಾಗಿದೆ. ಉತ್ತರಪ್ರದೇಶಕ್ಕೆ 1100 ಸೀಟ್ಗಳನ್ನ ಕೊಡಲಾಗಿದೆ. ಈ ಮೂಲಕ ಉತ್ತರಪ್ರದೇಶದ ಎಂಬಿಬಿಎಸ್ ಸೀಟ್ಗಳ ಸಂಖ್ಯೆ ಇವಾಗ 10300 ಕ್ಕೆ ಬಂದಂತಾಗಿದೆ. ಇನ್ನು ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ ಇಲ್ಲಿಗೆ 9 50 ಸೀಟ್ಗಳನ್ನ ಹಂಚಿಕೆ ಮಾಡಲಾಗಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಎಂಬಿಬಿಎಸ್ ಸೀಟ್ಗಳ ಸಂಖ್ಯೆ 9900 ಕ್ಕೆ ಜಂಪ್ ಆಗಿದೆ. ಇನ್ನು ತಮಿಳುನಾಡಿಗೆ 850 ಗುಜರಾತ್ಗೆ 800 ಸೀಟುಗಳನ್ನ ಹಂಚಿಕೆ ಮಾಡಲಾಗಿದೆ. ಈ ಮೂಲಕ ಈ ರಾಜ್ಯಗಳಲ್ಲಿ ಎಂಬಿಬಿಎಸ್ ಸೀಟ್ಗಳ ಸಂಖ್ಯೆ ಕ್ರಮವಾಗಿ 11950 ಮತ್ತು ಗುಜರಾತ್ನಲ್ಲಿ 9ರಸಾವಕ್ಕೆ ಏರಿಕೆಯಾಗಿದೆ. ನಂತರ ರಾಜಸ್ಥಾನಕ್ಕೆ 700 ಸೀಟ್ ರಾಜಸ್ಥಾನದ ಒಟ್ಟಾರೆ ಸೀಟ್ಗಳ ಸಂಖ್ಯೆ ಈಗ 8200 ಕ್ಕೆ ಏರಿಕೆಯಾಗಿದೆ. ಇನ್ನು ಕರ್ನಾಟಕಕ್ಕೆ 650 ಹೊಸ ಎಂಬಿಬಿಎಸ್ ಸೀಟ್ಗಳನ್ನ ಎನ್ಎಂಸಿ ಅಲೋಕೇಟ್ ಮಾಡಿದೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟಾರೆ ಎಂಬಿಬಿಎಸ್ ಸೀಟ್ಗಳ ಸಂಖ್ಯೆ ಆಲ್ರೆಡಿ ಹೈ ಬೇಸಿ ಇತ್ತು ನಮ್ಮ ಹತ್ರ ಅದೀಗ 13,645 ಕ್ಕೆ ಏರಿಕೆಯಾಗಿದೆ.

ಇಡೀ ದೇಶದಲ್ಲಿ ಅತಿ ಹೆಚ್ಚು ಎಂಬಿಬಿಎಸ್ ಸೀಟ್ಗಳನ್ನ ಹೊಂದಿರೋ ರಾಜ್ಯ ನಮ್ಮ ಕರ್ನಾಟಕ. ಇನ್ನುಳಿದ ಸೀಟನ್ನ ಉಳಿದ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ವಿದೇಶಗಳ ಮೇಲೆ ಅವಲಂಬನೆ ದೇಶದಲ್ಲಿ ವೈದ್ಯರ ಕೊರತೆ. ಮುಖ್ಯವಾಗಿರೋ ವಿಚಾರ ಏನಂದ್ರೆ ಭಾರತಕ್ಕೆ ತನ್ನ ಡಾಕ್ಟರ್ಸ್ ನ ರೆಡಿ ಮಾಡಿಕೊಂಡು ವಿಶ್ವಕ್ಕೂ ಡಾಕ್ಟರ್ಸ್ ಅನ್ನ ಕೊಡೋ ತಾಕತ್ತಿದೆ ಜಗತ್ತಲ್ಲಿ ಡಿಮಾಂಡ್ ಕೂಡ ಇದೆ ಆದರೆ ನಮ್ಮ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕಾಗಿನೇ ಬೇರೆ ದೇಶಗಳಿಗೆ ಓಡೋ ಪರಿಸ್ಥಿತಿ ಇದೆ ಎನ್ಎಂಸಿ ಡೇಟಾ ಪ್ರಕಾರ ಪ್ರತಿವರ್ಷ ಸುಮಾರು 30ಸಾ ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯೋಕೆ ರಷ್ಯಾ ಯುಕ್ರೇನ್ ಚೈನಾ ಜಾರ್ಜಿಯಾ ಬೇರೆ ಬೇರೆ ವಿದೇಶಗಳಿಗೆ ಹೋಗ್ತಿದ್ದಾರೆ ವೈದ್ಯಕೀಯ ಸೀಟುಗಳ ಕೊರತೆ ನಮ್ಮಲ್ಲಿ ಇರೋದೇ ಕಾರಣ 140 ಕೋಟಿ ಜನಸಂಖ್ಯೆ ಇಷ್ಟು ವಿಶಾಲವಾಗಿರೋ ಭಾರತದಲ್ಲಿ ಇದ್ದಿದ್ದು ಕೇವಲ 1,17,750 ಸೀಟ್ಸ್ ಮಾತ್ರ ಇದನ್ನ ಬಿಟ್ಟರೆ 52720 ಆಯುಷ್ ಸೀಟುಗಳು ಬಿಎಎಂಎಸ್ ಬಿಎಚ್ಎಂಎಸ್ ಬಿಯುಎಂಎಸ್ ಬಿಎಸ್ಎಂಎಸ್ ಬಿಎನ್ವಎಸ್ ಇದೆಲ್ಲ ಸೇರಿ ಹೀಗಾಗಿ ದೊಡ್ಡ ಪ್ರಮಾಣದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗ್ತಾ ಇದ್ರು ಹೋಗ್ತಾ ಇದ್ದಾರೆ.

ಎರಡನೆದು ವೈದ್ಯಕೀಯ ಶಿಕ್ಷಣದ ವೆಚ್ಚ ದೇಶದಲ್ಲಿ ಲಿಮಿಟೆಡ್ ಸೀಟ್ಗಳು ಇರೋದ್ರಿಂದ ಬಿಡ್ಡಿಂಗ್ ಗವರ್ಮೆಂಟ್ ಸೀಟ್ಸ್ ಯಾರ ಟಾಪ್ ಸ್ಕೋರ್ ಮಾಡೋರು ಸಿಕ್ಕಿದ್ರೆ ಓಕೆ ಪ್ರೈವೇಟ್ ಅಲ್ಲಿ ಮಾಡಬೇಕು ಮ್ಯಾನೇಜ್ಮೆಂಟ್ ಸೀಟ್ ಮಾಡಬೇಕು ಅಂತ ಹೇಳಿದ್ರೆ ಕೋಟಿ ಕೋಟಿ ಕಿತ್ಕೊಂಡು ಹೋಗುತ್ತೆ ಅಕೌಂಟ್ ಇಂದ ಶ್ರೀಮಂತರು ಇದ್ದವರು ಕೂಡ ಒಡವರಾಗಿಬಿಡ್ತಾರೆ ಆ ರೀತಿ ಲೆಕ್ಕಾಚಾರ ನೋಡಿ ಭಾರತದಲ್ಲಿ ಕೇವಲ 58 ರಿಂದ 59ಸಾವ ಸರ್ಕಾರ ಎಂಬಿಬಿಎಸ್ ಸೀಟ್ಸ್ ಇರೋದು ಪ್ರೈವೇಟ್ ಸೀಟ್ ತಗೊಂಡು ಮಾಡಬೇಕು ಮ್ಯಾನೇಜ್ಮೆಂಟ್ ಸೀಟ್ಲ್ಲಿ ಮಾಡಬೇಕು ಅಂತ ಹೇಳಿದ್ರೆ ಮೆಡಿಕಲ್ ಓದಬೇಕು ಅಂತ ಹೇಳಿದ್ರೆ ಲೋ ಅಂದ್ರೂ ಕೂಡ ಒಂದು 50 ಲಕ್ಷದಿಂದ ಒಂದೂವರೆ ಕೋಟಿ ವರೆಗೂ ಕೂಡ ಖರ್ಚಾಗಬಹುದು ಆದರೆ ರಷ್ಯಾ ಯುಕ್ರೇನ್ ಜಾರ್ಜಿಯಾದಂತ ರಾಷ್ಟ್ರದಲ್ಲಿ 25ರಿಂದ 50 ಲಕ್ಷದ ಒಳಗಡೆ ಎಂಬಿಬಿಎಸ್ ನ ಮುಗಿಸಿಬಿಡಬಹುದು. ಹಾಗೆ ಸ್ಕಾಲರ್ಶಿಪ್ ಕೂಡ ಸಿಗುತ್ತೆ. ಹೀಗಾಗಿ ಅನೇಕ ವಿದ್ಯಾರ್ಥಿಗಳು ವಿದೇಶಗಳ ಕಡೆಗೆ ಮುಖ ಮಾಡಿದ್ದಾರೆ. ಮೂರನೆದಾಗಿ ವಿದೇಶದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಹೆಚ್ಚಿನ ಅವಕಾಶಗಳು ಸಿಗತವೆ ಆಮೇಲೆ ಅಂತ ಹೇಳಿ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗ್ತಾ ಇದ್ದಾರೆ. ಸಾಕಾಗಲ್ಲ ಚೀನಾ ಪ್ರತಿವರ್ಷ 80 90ಸಾ ವೈದ್ಯರನ್ನ ರೆಡಿ ಮಾಡ್ತಾ ಇದೆ.

ರಷ್ಯಾ 70ಸಾ ವೈದ್ಯರನ್ನ ಸೇರಿಸ್ತಾ ಇದೆ. ಅಮೆರಿಕ ಕೂಡ 27,000 ಡಾಕ್ಟರ್ಸ್ ನ ಪ್ರೊಡ್ಯೂಸ್ ಮಾಡ್ತಿದೆ. ಇದೆಲ್ಲ ನೋಡಿದ್ರೆ ನಮ್ಮಲ್ಲಿ ತಯಾರಾಗ್ತಿರೋ ವೈದ್ಯರ ಸಂಖ್ಯೆ ಜಾಸ್ತಿನೇ ಅಂತ ಅನಿಸಬಹುದು. ವರ್ಷಕ್ಕೆ 1.8 ಲಕ್ಷ ವೈದ್ಯರು ಭಾರತದಲ್ಲಿ ರೆಡಿ ಆಗ್ತಿದ್ದಾರೆ. ಆದರೆ ನಮ್ಮ ಜನಸಂಖ್ಯೆಗೆ ಹೋಲಿಸಿದ್ರೆ ಇದು ಸಾಕಾಗ್ತಿಲ್ಲ. 2025 ಅಂದ್ರೆ ಇವಾಗ ಸದ್ಯ ಭಾರತದಲ್ಲಿ 13.8 ಲಕ್ಷ ವೈದ್ಯರಇದ್ದಾರೆ. ಈಗ 10ಸಾ ಆಡ್ ಆಗ್ತಿರೋದ್ರಿಂದ ಇನ್ನೊಂದು ಎಕ್ಸ್ಟ್ರಾ 10000 ಅಂದ್ರೂ ಕೂಡ ಸಾಕಾಗಲ್ಲ ಕಮ್ಮಿನೇ ಆಗ್ತಿದ್ದಾವೆ. ಹೀಗಾಗಿ ಪ್ರತಿ ವ್ಯಕ್ತಿಗೆ ತಲುಪುವ ಪ್ರಮಾಣ ತುಂಬಾ ಕಮ್ಮಿ ಇದೆ. ಈ ಹಿನ್ನಲೆಯಲ್ಲಿ ಸೀಟುಗಳ ಹೆಚ್ಚಳ ರಾಷ್ಟ್ರದ ಆರೋಗ್ಯ ಭದ್ರತೆಗೂ ತುಂಬಾ ಇಂಪಾರ್ಟೆಂಟ್ ಅದಕ್ಕೋಸ್ಕರವೇ ಐದು ವರ್ಷಗಳಲ್ಲಿ 750000 ಮೆಡಿಕಲ್ ಸೀಟ್ಸ್ ಅನ್ನ ಆಡ್ ಮಾಡೋಕೆ ಸರ್ಕಾರ ಹೆಜ್ಜೆ ಇಡ್ತಾ ಇರೋದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments