ರಾಜ್ಯದ ಹಳ್ಳಿ ಜನರಿಗೆ ಒಂದು ಶಾಕಿಂಗ್ ಸುದ್ದಿ ಇಷ್ಟು ದಿನ ತೆರಿಗೆಯಿಂದ ಹೊರಗೊಳಿದಿದ್ದ ಸಾವಿರಾರು ಆಸ್ತಿಗಳಿಗೆ ಬಲೆ ಬೀಸೋಕೆ ರಾಜ್ಯ ಸರ್ಕಾರ ಸಜ್ಜಾಗಿದೆ ಗ್ರಾಮ ಪಂಚಾಯಿತಿಗಳ ಆದಾಯನ ಮೂರು ಪಟ್ಟು ಹೆಚ್ಚಿಸೋಕೆ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಗ್ರಾಮ ಪಂಚಾಯಿತಿಗಳ ತೆರಿಗೆ ದರ ಮತ್ತು ಫೀಸ್ ನಿಯಮ 2025 ನ್ನ ಅಧಿಕೃತವಾಗಿ ಪ್ರಕಟಿಸಿದ ಇದರಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ ಬರೋ ಅನೇಕ ಆಸ್ತಿಗಳಿಗೆ ಹೊಸದಾಗಿ ತೆರಿಗೆ ಹೇರಲಿದೆ ಹೀಗಾಗಿ ಇದರಿಂದ ಹಳ್ಳಿ ಭಾಗದ ಆರ್ಥಿಕ ಚಿತ್ರಣನೇ ಬದಲಾಗುತ್ತೆ ಅಂತ ಹೇಳಲಾಗ್ತಿದೆ ಹಾಗಿದ್ರೆ ಏನಿದು ಹೊಸ ನಿಯಮ ಯಾರಿಗೆಲ್ಲ ಇದು ಅನ್ವಯ ಆಗುತ್ತೆ ಯಾರು ಹೊಸದಾಗಿ ತೆರಿಗೆ ಕಟ್ಟಬೇಕಾಗುತ್ತೆ ಯಾರಿಗೆಲ್ಲ ವಿನಾಯಿತಿ ಇದೆ ತೆರಿಗೆ ಕಟ್ಟಲಿಲ್ಲ ಅಂದ್ರೆ ಏನಾಗುತ್ತೆ ಎಲ್ಲವನ್ನ ಹೇಳ್ತೀವಿ ವಿಡಿಯೋನ ಕಡೆತನಕ ನೋಡಿ ಆದ್ರೆ ಅದಕ್ಕೂ ಮುನ್ನ ಯಾರಾದರೂ ಇದುವರೆಗೂ ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಶುಲ್ಕಗಳ ಮೂಲಕ ವಾರ್ಷಿಕವಾಗಿ ಕೇವಲ 1500 ಕೋಟಿ ರೂಪಾಯಿ ಆದಾಯ ಸಂಗ್ರಹವಾಗ್ತಾ ಇತ್ತು ಆದರೆ ಇನ್ನು ಮುಂದೆ ಈ ಲೆಕ್ಕಾಚಾರ ಸಂಪೂರ್ಣ ಬದಲಾಗಲಿದೆ ಸರ್ಕಾರ ಈ ಆದಾಯನ ಬರೋಬರಿ 4500 ಕೋಟಿ ರೂಪಾಯಿಗಳಿಗೆ ಹೆಚ್ಚಿಸೋ ಬೃಹತ್ ಗುರಿ ಇಟ್ಟಕೊಂಡಿದೆ ಇದಕ್ಕಾಗಿ ಈ ಹಿಂದೆ ಇದ್ದ ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಗ್ರಾಮ ಪಂಚಾಯಿತಿಗಳ ತೆರಿಗೆದರ ಮತ್ತು ಫೀಸ್ ನಿಯಮ 1993ರ ಕಾಯ್ದೆಯನ್ನ ತಿದ್ದುಪಡಿ ಮಾಡಿದೆ.
ಹೊಸ ಕಾನೂನು ತಂದಿದೆ ಈ ಹೊಸ ನಿಯಮದ ಪ್ರಕಾರ ಇನ್ಮೇಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರೋ ಕೃಷಿ ಏತರ ಆಸ್ತಿಗಳು ಅಂದ್ರೆ ಕೃಷಿ ಭೂಮಿನ ಹೊರತುಪಡಿಸಿ ಉಳಿದೆಲ್ಲ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರಲಿವೆ ಅಕ್ರಮ ಆಸ್ತಿಗಳಿಂದ ಕೂಡ ತೆರಿಗೆ ಸಂಗ್ರಹ ಆಗುತ್ತೆ ಇದರಲ್ಲಿ ನಿಮ್ಮ ವಸತಿ ಮನೆ ವಸತಿ ಏತರ ಕಟ್ಟಡ ವಾಣಿಜ್ಯ ಮಳಿಗೆ ಖಾಲಿ ನಿವೇಶನೆ ದೊಡ್ಡ ದೊಡ್ಡ ರೆಸಾರ್ಟ್ಗಳು ಪ್ರವಾಸಿಗರನ್ನ ಆಕರ್ಷಿಸುವಂತಹ ಹೀಗೆ ಪ್ರತಿಯೊಂದು ಆಸ್ತಿನ ಗುರುತಿಸಿ ತೆರಿಗೆ ಚೌಕಟ್ಟಿಗೆ ತರಲಾಗುತ್ತೆ ಸರ್ಕಾರ ಸರ್ಕಾರದ ಪ್ರಕಾರ ಇದರಿಂದ ಹಳ್ಳಿ ಭಾಗದ ಸುಮಾರು 95 ಲಕ್ಷ ಆಸ್ತಿಗಳು ಟ್ಯಾಕ್ಸ್ ವ್ಯವಸ್ಥೆ ಒಳಗೆ ಬರ್ತವೆ ಎನ್ನಲಾಗ್ತಿದೆ ಇದನ್ನ ಹೇಗೆ ಮಾಡ್ತಾರೆ ಅಂತ ತಿಳ್ಕೊಳ್ಳೋದಕ್ಕು.
ಈತರ ತೆರಿಗೆ ಕಟ್ಟಲಿಲ್ಲದ ಆಸ್ತಿ ಹುಡುಕೋದಕ್ಕಾಗಿನೇ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಿದೆ ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸುತ್ತಾರೆ ಇದುವರೆಗೆ ತೆರಿಗೆ ಕಟ್ಟದೆ ತಪ್ಪಿಸಿಕೊಂಡಿದ್ದ ಎಲ್ಲಾ ಆಸ್ತಿಗಳ ವಿವರ ದಾಖಲೆ ಸಂಗ್ರಹಿಸುತ್ತಾರೆ ಅವುಗಳನ್ನ ಸರ್ಕಾರದ ಡೇಟಾಬೇಸ್ಗೆ ಎಂಟ್ರಿ ಮಾಡುವ ಮೂಲಕ ಏಪ್ರಿಲ್ ಒಂದರಿಂದಲೇ ತೆರಿಗೆ ವ್ಯಾಪ್ತಿಗೆ ತರಲಾಗುತ್ತೆ ಇನ್ನು ಈಗಾಗಲೇ ಅಸ್ತಿತ್ವದಲ್ಲಿ ಇರೋ ಆದರೆ ತೆರಿಗೆ ಕಟ್ಟದ ನಿವೇಶನ ಮತ್ತು ಕಟ್ಟಡಗಳಿಗೂ ಈ ನಿಯಮ ಅನ್ವಯ ಆಗಲಿದೆ. 2016ರ ಫೆಬ್ರವರಿ ನಂತರದ ಸೇಲ್ ಡೀಡ್ ಅಥವಾ ಕಟ್ಟಡಕ್ಕೆ ಎಸ್ಕಾಮ ನಿಂದ ಶಾಶ್ವತ ವಿದ್ಯುತ್ ಸಂಪರ್ಕ ಪಡೆದ ದಿನಾಂಕ ಇವುಗಳಲ್ಲಿ ಯಾವುದು ಲೇಟೆಸ್ಟ್ ಆಗಿದೆಯೋ ಆ ಡೇಟ್ನಿಂದ ಹಿಂದಿನ ಬಾಕಿ ತೆರಿಗೆನ ಲೆಕ್ಕ ಹಾಕಿ ವಸೂಲಿ ಮಾಡಲಾಗುತ್ತೆ.
ಸಮೀಕ್ಷೆ ಮುಗಿದ ನಂತರ ಹೊಸದಾಗಿ ತೆರಿಗೆ ವ್ಯಾಪ್ತಿಗೆ ಸೇರಿಸಲಾಗುವ ಆಸ್ತಿಗಳ ಪಟ್ಟಿನ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ತಾಲೂಕು ಕಚೇರಿ ಹಾಗೂ ಗ್ರಾಮದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಲಾಗುತ್ತೆ ಸಾರ್ವಜನಿಕರು ಈ ಬಗ್ಗೆ ಆಕ್ಷೇಪಣೆ ಸಲ್ಲಿಸೋಕೆ ಏಳು ದಿನಗಳ ಟೈಮ್ ಕೂಡ ಕೊಡಲಾಗುತ್ತೆ ಆಕ್ಷೇಪಣೆ ಪರಿಶೀಲಿಸಿದ ನಂತರನೇ ಪಿಡಿಓ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅನುಮೋದನೆ ಜೊತೆಗೆ ತೆರಿಗೆ ಅಂತಿಮಗೊಳಿಸುತ್ತಾರೆ ಯಾರಿಗೆಲ್ಲ ವಿನಾಯಿತಿ ಒಂದೆಡೆ ತೆರಿಗೆ ಹೊರೆ ಹೆಚ್ಚಿಸಿದ್ರು ಸರ್ಕಾರ ಕೆಲವರ್ಗ ವರಿಗೆ ದೊಡ್ಡ ವಿನಾಯಿತಿ ಕೂಡ ನೀಡಿದೆ ಹೌದು ಗ್ರಾಮಗಳಲ್ಲಿ ಧರ್ಮಾರ್ಥವಾಗಿ ಅಂದ್ರೆ ಚಾರಿಟಿಗಾಗಿ ನಡೆಸುತ್ತಿರೋ ಆಸ್ಪತ್ರೆ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ದೇಶಕಾಯುವ ಸೈನಿಕರು ಮಾಜಿ ಸೈನಿಕರು ಹುತಾತ್ಮ ಯೋಧರ ಪತ್ನಿಯರು ಕುಷ್ಠರೋಗಿಗಳು ಹೆಚ್ಐವಿ ಸೌಂಕಿತರು ವಿಶೇಷ ಚೇತನರು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸೇರಿದ ಆಸ್ತಿಗಳಿಗೆ ಶೇಕಡ 50ರಷ್ಟು ತೆರಿಗೆ ವಿನಾಯಿತಿ ಘೋಷಿಸಲಾಗಿದೆ ಇದಲ್ಲದೆ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವಂತಹ ಪ್ರತಿಯೊಬ್ಬರಿಗೂ ಕೂಡ ಪ್ರೋತ್ಸಾಹ ನೀಡಲಾಗಿದೆ ಆರ್ಥಿಕ ವರ್ಷದ ಮೊದಲ ಮೂರು ತಿಂಗಳೊಳಗೆ ಅಂದರೆ ಜೂನ್ 30ರೊಳಗೆ ಪೂರ್ತಿ ತೆರಿಗೆ ಪಾವತಿಸಿದರೆ ಅವರಿಗೆ ಕೂಡ ಶೇಕಡ ಐದರಷ್ಟು ರಿಯಾಯಿತಿ ಸಿಗಲಿದೆ ಕಟ್ಟಲಿಲ್ಲ ಅಂದ್ರೆ ಏನಾಗುತ್ತೆ ತೆರಿಗೆ ಕಟ್ಟೋದನ್ನ ತಪ್ಪಿಸಿದರೆ ಇಲ್ಲಿ ಸರ್ಕಾರ ಯಾವುದೇ ಮುಲಾಜು ತೋರಿಲ್ಲ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗ್ತೀವಿ ಅಂತ ಹೇಳಿದೆ ಮೊದಲಿಗೆ ತೆರಿಗೆ ಪಾವತಿಸಿಲ್ಲ ಅಂದ್ರೆ ತಗಾದೆ ನೋಟೀಸ್ ನೀಡಲಾಗುತ್ತೆ ಅದಕ್ಕೂ ಬಗ್ಗದಿದ್ರೆ ತಗಾದೆ ಆದೇಶ ಜಾರಿ ಮಾಡಲಾಗುತ್ತೆ ಆದರೂ ತೆರಿಗೆ ಗೆ ಪಾವತಿಸದಿದ್ದರೆ ಅಧಿಕಾರಿಗಳು ನಿಮ್ಮ ಚರಾಸ್ತಿ ಅಂದರೆ ವಾಹನ ಪೀಠೋಪಕರಣ ಜಪ್ತಿ ಮಾಡೋ ಅಧಿಕಾರ ಹೊಂದಿದ್ದಾರೆ.
ಒಂದುವೇಳೆ ಜಪ್ತಿ ಮಾಡಿದ ಏಳು ದಿನಗಳೊಳಗೆ ನೀವು ಬಾಕಿ ತೆರಿಗೆ ಕಟ್ಟದಿದ್ದರೆ ನಿಮ್ಮ ಆಸ್ತಿನ ಸಾರ್ವಜನಿಕವಾಗಿ ಹರಾಜು ಹಾಕಿ ಅಥವಾ ಮಾರಾಟ ಮಾಡಿ ತೆರಿಗೆಯನ್ನ ವಸೂಲಿ ಮಾಡಲಾಗುತ್ತೆ ಹಾಗಾಗಿ ತೆರಿಗೆ ನಿರ್ಲಕ್ಷಿಸಿದರೆ ನಿಮ್ಮ ಆಸ್ತಿನೇ ಕಳೆದುಕೊಳ್ಳುವ ಅಪಾಯ ಇದೆ ಒಟ್ಟಿನಲ್ಲಿ ಈ ಹೊಸ ನಿಯಮ ಗ್ರಾಮ ಪಂಚಾಯಿತಿಗಳನ್ನ ಆರ್ಥಿಕವಾಗಿ ಸಬಲಗೊಳಿಸುವ ಹೆಜ್ಜೆಯಾಗಿದೆ ಇದರಿಂದ ಗ್ರಾಮಗಳಲ್ಲಿ ರಸ್ತೆ ಚರಂಡಿ ಕುಡಿಯುವ ನೀರು ಸ್ವಚ್ಛತೆಯಂತಹ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಗಲಿದೆ ಆದರೆ ಮತ್ತೊಂದೆಡೆ ಗ್ರಾಮೀಣ ಭಾಗದ ಆಸ್ತಿ ಮಾಲೀಕರ ಮೇಲೆ ತೆರಿಗೆ ಹೊರೆ ಹೆಚ್ಚಾಗುತ್ತೆ ಪ್ರಾಮಾಣಿಕರಿಗೆ ರಿಯಾಯಿತಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಅನ್ನೋ ಸಂಕೇತ ಸರ್ಕಾರ ನೀಡುತ್ತಿದೆ. ಸರ್ಕಾರ ಗ್ರಾಮೀಣ ಭಾಗದಲ್ಲಿ ತರ್ತಿರೋ ಹೊಸ ನಿಯಮದ ಬಗ್ಗೆ ತಿಳಿಸುವಂತ ಪ್ರಯತ್ನ.


