ಈಗ ಏನಿದ್ರು ಚಿನ್ನದ ಬೆಲೆಯದ್ದೆ ಚರ್ಚೆ ಕೇವಲ ಒಂದುವರೆ ತಿಂಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9000 ರೂಪಾಯಿ ಇತ್ತು ಆದರೆ ನೋಡ ನೋಡುತ್ತಿದ್ದಂತೆ ಈ ಬೆಲೆ 13000 ದಾಟಿದ್ದು ಯಾರಿಗೂ ಗೊತ್ತೇ ಆಗಿಲ್ಲ ಹಳದಿಲೋಹದ ಬೆಲೆ ರಾಕೆಟ್ ವೇಗದಲ್ಲಿ ಹೆಚ್ಚಾಗ್ತಾ ಇದ್ದು ಚಿನ್ನದ ಮೇಲೆ ಹೂಡಿಕೆ ಮಾಡಿದವರು ಫುಲ್ ಖುಷ್ ಆಗಿದ್ರೆ ಚಿನ್ನ ತೆಗೆದುಕೊಳ್ಳುವವರು ತಲೆ ಮೇಲೆ ಕೈ ಇಟ್ಟು ಕುಳಿತಿದ್ರು ಇದೇ ರೀತಿಯಾದರೆ ಚಿನ್ನ ಗಗನ ಕುಸುಮವಾಗಿ ಬಿಡುತ್ತೆ ಅಂತ ಎಲ್ಲರೂ ಅಂದುಕೊಂಡರು ಆದರೆ ಪ್ರತಿಯೊಂದಕ್ಕೂ ಒಂದು ಅಂತ್ಯ ಅನ್ನೋದು ಇರುತ್ತೆ ಆ ಅಂತ್ಯ ಈಗ ಆರಂಭವಾಗಿದೆ ಅದು ಯಾವುದೇ ಕ್ಷೇತ್ರ ಇರಲಿ ದಿಡೀರಂತ ಬೆಲೆ ಏರಿಕೆ ಆದರೆ ಅದು ತುಂಬಾನೇ ಡೇಂಜರ್ ಏರಿದ ವೇಗದಲ್ಲೇ ಇಳಿಕೆ ಕೂಡ ಆಗುತ್ತೆ ಅದೇ ರೀತಿ ಈಗ ಚಿನ್ನದ ಬೆಲೆ ಕೂಡ ಸತತವಾಗಿ ಇಳಿಕೆ ಆಗ್ತಾ ಇದೆ ಕಳೆದ ಒಂದು ವಾರದಿಂದ ಬಂಗಾರದ ಬೆಲೆ ಕುಸಿತವನ್ನೇ ಕಾಣುತ್ತಿದೆ ಚಿನ್ನದ ಮಾರ್ಕೆಟ್ನಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗ್ತಾ ಇದೆ ಅದರಲ್ಲೂ ಕಳೆದ ಆರು ದಿನಗಳ ಅಂತರದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೊಬ್ಬರಿ 7000 ರೂಪಾಯಿವರೆಗೂ ಕಡಿಮೆಯಾಗಿದೆ ಕೇವಲ ಚಿನ್ನ ಮಾತ್ರವಲ್ಲ ಬೆಳ್ಳಿ ಬೆಲೆಯಲ್ಲೂ ಕೂಡ ಇಳಿಕೆ ಆಗ್ತಾ ಇದೆ.
ಚಿನ್ನದಷ್ಟೇ ವೇಗದಲ್ಲಿ ಗಗನಕ್ಕೇರುತ್ತಿದ್ದ ಬೆಳ್ಳಿ ಬೆಲೆ ಕೂಡ ಗಣನೀಯವಾಗಿ ಇಳಿಕೆಯನ್ನ ಕಾಣುತಾ ಇದೆ ಗೊತ್ತಿರಲೇಬೇಕಾದ ಸಂಗತಿ ಅಂದರೆ ಬಂಗಾರದ ಮಾರ್ಕೆಟ್ನಲ್ಲಿ ಕಳೆದ 12 ವರ್ಷದಲ್ಲಿ ಕಂಡುಕೇ ಕೇಳರಿಯದ ರೀತಿಯ ಕ್ರಾಶ್ ಆಗಿದೆ ಕಳೆದ 12 ವರ್ಷದಲ್ಲಿ ಚಿನ್ನದ ಬೆಲೆ ಇಷ್ಟೊಂದು ವೇಗವಾಗಿ ಕುಸಿತ ಕಂಡಿರಲಿಲ್ಲ ಹೀಗೆ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗ್ತಾ ಇದ್ದಂತೆ ಹಲವು ಚರ್ಚೆಗಳು ಆರಂಭವಾಗುದಕ್ಕೆ ಶುರುವಾಗಿದೆ ನಾವು ಕಳೆದೊಂದು ವಿಡಿಯೋದಲ್ಲಿ 1979 ರಲ್ಲಿ ಆದ ಪರಿಸ್ಥಿತಿಯ ಬಗ್ಗೆ ಹೇಳಿದ್ವಿ 1979 ರಲ್ಲಿ ಆದ ಪರಿಸ್ಥಿತಿ ಮತ್ತೊಮ್ಮೆ ಮರುಕಳಿಸಬಹುದು ಅನ್ನೋದನ್ನ ಕೂಡ ಹೇಳಿದ್ವಿ ಈ ಸಂದರ್ಭದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡೋದು ಕೂಡ ಸರಿಯಲ್ಲ ಅನ್ನೋದನ್ನ ಕೂಡ ವಿವರಿಸಿದ್ವಿ. ಅದೇ ರೀತಿ ಈಗ ತಜ್ಞರು ಕೂಡ 1979ರ ಪರಿಸ್ಥಿತಿ ಬಗ್ಗೆ ಉಲ್ಲೇಖ ಮಾಡ್ತಾ ಇದ್ದಾರೆ. ಹಾಗಾದರೆ 1979 ರಲ್ಲಿ ಏನಾಗಿತ್ತು ಚಿನ್ನದ ಬೆಲೆ ಎಲ್ಲಿವರೆಗೆ ಕುಸಿತವಾಗಬಹುದು ಬಂಗಾರಕ್ಕೆ ಈ ಪರಿಸ್ಥಿತಿ ಬರೋದಕ್ಕೆ ಕಾರಣವೇನು ಎಲ್ಲವನ್ನ ತೋರಿಸ್ತೀವಿ ನೋಡಿ. ಅತಿಯಾದರೆ ಅಮೃತವು ಕೂಡ ವಿಷವಾಗುತ್ತೆ ಅನ್ನುವ ಮಾತನ್ನ ನೀವೆಲ್ಲ ಕೇಳಿರಬಹುದು ಬಂಗಾರದ ವಿಚಾರದಲ್ಲಿ ಕೂಡ ಈಗ ಅದೇ ಆಗಿದೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು ಅತಿಯಾಗಿಹೋಯಿತು ಈಗ ಬಂಗಾರಕ್ಕೆ ಅದೇ ಮುಳುವಾಗಿದೆ ಕಳೆದ ಒಂದು ವಾರದಿಂದ ಚಿನ್ನ ಬಾರಿ ಕುಸಿತವನ್ನೇ ಕಾಣುತಾ ಇದೆ ಗುರುವಾರ ಭಾರತದ ಮಾರ್ಕೆಟ್ನಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1146 65 ರೂಪಾಯಿ ಇದೆ ಅಲ್ಲಿಗೆ ಕಳೆದ ಆರು ದಿನಗಳ ಅಂತರದಲ್ಲಿ 10ಗ್ರಾಂ ಚಿನ್ನದ ಬೆಲೆಯಲ್ಲಿ 750 ರೂಪಾಯವರೆಗೆ ದರ ಇಳಿಕೆಯಾಗಿದೆ ಸಾವಿರ ಸಾವಿ ರೂಪಾಯಿ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಯಾವ ಮಟ್ಟಿಗೆ ಕುಸಿದಿದೆ ಅನ್ನೋದು ಇದರಲ್ಲಿ ಕ್ಲಿಯರ್ ಆಗಿ ಗೊತ್ತಾಗುತ್ತೆ ನೋಡಿ ಹಾಗಂತ ಕೇವಲ ಚಿನ್ನ ಮಾತ್ರವಲ್ಲ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗ್ತಾ ಇದೆ.
ನಿಮಗೆಲ್ಲ ಗೊತ್ತಿರುವ ಹಾಗೆ ಚಿನ್ನದ ರೀತಿಯಲ್ಲೇ ಬೆಳ್ಳಿ ಬೆಲೆ ಕೂಡ ಸಾರ್ವಕಾಲಿಕ ದಾಖಲೆ ಬರೆದಿತ್ತು ಚಿನ್ನದಷ್ಟೇ ವೇಗದಲ್ಲಿ ಬೆಳ್ಳಿ ಬೆಲೆ ಕೂಡ ಏರಿಕೆಯಾಗಿತ್ತು ಆದರೆ ಈಗ ಬೆಳ್ಳಿ ಬೆಲೆ ಕೂಡ ಇಳಿಮುಖದತ್ತ ಸಾಗಿದೆ ಗುರುವಾರದ ಲೆಕ್ಕ ಪ್ರಕಾರ ಬೆಳ್ಳಿ ಬೆಲೆ 10ಗ್ರಾಂ ಗೆ 1560 ರೂಪಾಯಿ ಇದೆ ಇನ್ನು 2013 ರಲ್ಲಿ ಮಾತ್ರ ಬಂಗಾರದ ಬೆಲೆಯಲ್ಲಿ ದಿನ ಒಂದರಲ್ಲಿ ದೊಡ್ಡ ಪ್ರಮಾಣದ ಕುಸಿತ ದಾಖಲ ಆಗಿತ್ತು ಅದು ಬಿಟ್ಟರೆ ಈಗಲೇ ಚಿನ್ನದ ಬೆಲೆ ಶೇಕಡ ಆರರಷ್ಟು ಕುಸಿತ ಕಂಡಿದ್ದು ಇದೆಲ್ಲ ಸರಿಯಪ್ಪ ಯಾಕೆ ಈ ರೀತಿ ಕ್ರಾಶ್ ಆಗ್ತಾ ಇದೆ ಏರುಮುಖದಲ್ಲೇ ಸಾಕ್ತಾ ಇದ್ದ ಚಿನ್ನ ಹಾಗೂ ಬೆಳ್ಳಿ ದರಗಳು ಈಗಯಾಕೆ ಇಳಿಕೆಯತ್ತ ಸಾಗುತ್ತಿದೆ ಅಂತ ಕೇಳಿದರೆ ಅದಕ್ಕೆ ಹಲವಾರು ಕಾರಣಗಳಿದೆ ಆ ಕಾರಣಗಳು ನಿಮಗೆ ಅರ್ಥವಾಗಬೇಕು ಅಂದ್ರೆ ಶೇರ್ ಮಾರ್ಕೆಟ್ನ ಬಗ್ಗೆ ನಿಮಗೆ ಸ್ವಲ್ಪ ಗೊತ್ತಿರಬೇಕು ಸ್ನೇಹಿತರೆ ಈಗ ಬೇರೆ ಶೇರುಗಳಂತೆ ಶೇರ್ ಮಾರ್ಕೆಟ್ನಲ್ಲಿ ಚಿನ್ನದ ಮೇಲೆ ಕೂಡ ಹೂಡಿಕೆ ಮಾಡಬಹುದು ತುಂಬಾ ಜನ ಈಗ ಚಿನ್ನದ ಮೇಲೆ ಕೂಡ ಹೂಡಿಕೆ ಮಾಡ್ತಾ ಇದ್ದಾರೆ ಕಳೆದ ಜನವರಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 78000 ರೂಪಾಯ ಇತ್ತು ಅಕ್ಟೋಬರ್ ಬರ್ತಾ ಇದ್ದಂತೆ ಆ ಬೆಲೆ 30 ಸಾವಿರಕ್ಕೆ ಏರಿಕೆಯಾಗಿದೆ ಅಂದ್ರೆ ಹೂಡಿಕೆ ಮಾಡಿದವರಿಗೆ ಶೇಕಡ 50 ರಿಂದ 60% ರಿಟರ್ನ್ ಬಂದಿದೆ ಇದನ್ನೇ ಪ್ರಾಫಿಟ್ ಬುಕಿಂಗ್ ಅನ್ನೋದು ಯಾವಾಗ ಬೆಲೆ ಒಂದು ಹಂತಕ್ಕೆ ಬರುತ್ತೋ ಆಗ ಲಾಭ ಮಾಡಿಕೊಂಡವರೆಲ್ಲ ಅದನ್ನ ಮಾರೋದಕ್ಕೆ ಶುರು ಮಾಡ್ತಾರೆ ಅತಿ ಆಸೆಗೆ ಹೋಗದೆ ಈಗ ಬಂದಿದ್ದೆ ಹೆಚ್ಚಾಯಿತು ಅಂತ ಚಿನ್ನದ ಶೇರುಗಳನ್ನ ಮಾರಾಟ ಮಾಡೋದಕ್ಕೆ ಶುರು ಮಾಡಿದ್ದಾರೆ ಈ ಪ್ರಾಫಿಟ್ ಸೆಲ್ಲಿಂಗ್ ಈಗ ಜಸ್ಟ್ ಸ್ಟಾರ್ಟ್ ಆಗಿದೆ ಅಷ್ಟೇ ಈಗ ಚಿನ್ನದ ಬೆಲೆಯಲ್ಲಿ ಕುಸಿತ ಆಗ್ತಾ ಇದ್ದಂತೆ ಎಲ್ಲರು ಮಾರೋದಕ್ಕೆ ಶುಮಾ ಮಾಡಿದ್ದಾರೆ ಅಲ್ಲಿಗೆ ಚಿನ್ನದ ಬೆಲೆ ಕುಸಿಯುತ್ತಾ ಹೋಗುತ್ತೆ ಇದು ಒಂದು ಕಾರಣವಾದರೆ ಜಾಗತಿಕ ಮಟ್ಟದ ಸಂಬಂಧದಲ್ಲಿ ಆಗ್ತಾ ಇರುವ ಬದಲಾವಣೆಗಳು ಕೂಡ ಚಿನ್ನದ ಬೆಲೆ ಕುಸಿಯುವಂತೆ ಮಾಡಿದೆ ನಿಮಗೆಲ್ಲ ಗೊತ್ತಿರುವ ಹಾಗೆ ಅಮೆರಿಕಾ ಹಾಗೂ ಚೀನಾ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗಿಟ್ಟಿತ್ತು ಹೀಗಾಗಿ ಚೀನಾ ಡಾಲರ್ನಿಂದ ಸಂಪೂರ್ಣವಾಗಿ ದೂರವಾಗಿ ಚಿನ್ನವನ್ನ ಖರೀದಿ ಮಾಡಿ ತನ್ನ ಬಳಿ ಇಟ್ಟುಕೊಂಡಿತ್ತು ಚೀನಾದ ಈ ನಿರ್ಧಾರ ಅಮೆರಿಕಾದ ಡಾಲರ್ಗೆ ದೊಡ್ಡ ಹೊಡತ ಕೊಟ್ಟಿತ್ತು.
ಹೀಗೆ ಮುಂದುವರೆದರೆ ಗ್ರಾಚಾರ ಕಾದಿದೆ ಅನ್ನೋದು ಗೊತ್ತಾಗುತ್ತಿದ್ದಂತೆ ಅಮೆರಿಕಾ ಈಗ ಚೀನಾದ ಜೊತೆ ಡೀಲಿಂಗ್ ಮಾಡೋದಕ್ಕೆ ಶುರು ಮಾಡಿದೆ ಒಂದುವೇಳೆ ಈ ಮಾತುಕಥೆ ಸಕ್ಸಸ್ ಆಯ್ತು ಅಂದ್ರೆ ಚಿನ್ನದ ಬೆಲೆ ಕುಸ್ತವಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ ಆ ಲಕ್ಷಣಗಳು ಗೋಚರಿಸುತ್ತಿದ್ದಂತೆ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರೆಲ್ಲ ಆ ಹಣವನ್ನ ತೆಗೆದು ಬೇರೆ ಬೇರೆ ಕ್ಷೇತ್ರಗಳಿಗೆ ಹೂಡಿಕೆ ಮಾಡೋದಕ್ಕೆ ಶುರು ಮಾಡಿದ್ದಾರೆ ಇದು ಕೂಡ ಬಂಗಾರದ ಮಾರ್ಕೆಟ್ ಬೀಳೋದಕ್ಕೆ ಕಾರಣ ಇನ್ನು ಮೂರನೇ ಕಾರಣ ಡಾಲರ್ ಸ್ವಲ್ಪ ಮಟ್ಟಿಗೆ ಸ್ಟ್ರಾಂಗ್ ಆಗೋದಕ್ಕೆ ಶುರುವಾಗಿದೆ ಸ್ನೇಹಿತರೆ ಅಮೆರಿಕಾದ ಹುಚ್ಚು ಅಧ್ಯಕ್ಷ ಟ್ರಂಪ್ ಅವರ ಕೆಲವು ನೀತಿಯಿಂದ ಡಾಲರ್ ಮೌಲ್ಯ ಶೇಕ್ ಆಗೋದಕ್ಕೆ ಶುರುವಾಗಿತ್ತು ಇದು ಕೂಡ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿತ್ತು ಆದರೆ ಟ್ರಂಪ್ ಕೆಲವೊಂದು ತಪ್ಪುಗಳನ್ನ ತಿದ್ದಿಕೊಳ್ಳುವ ಪ್ರಯತ್ನ ಮಾಡ್ತಾ ಇದ್ದಾರೆ ಹೀಗಾಗಿ ಡಾಲರ್ನ ಮೌಲ್ಯ ಸ್ವಲ್ಪ ಸ್ಟೇಬಲ್ ಆಗಿ ತನ್ನ ಮೌಲ್ಯವನ್ನ ಹೆಚ್ಚು ಮಾಡಿಕೊಳ್ಳುತ್ತಾ ಇದೆ ಹೀಗೆ ಡಾಲರ್ ಪುಟಿದೆದ್ದು ಬರ್ತಾ ಇದ್ದಂತೆ ಚಿನ್ನದ ಬೆಲೆಗೆ ಹೊಡತ ಕೊಟ್ಟಿದೆ ಇದೆಲ್ಲ ಸರಿ ನೀವು ಆರಂಭದಲ್ಲಿ ಒಂದು ಹೇಳಿದ್ರಲ್ಲ 1979ರ ಕಥೆ ಅದರ ಬಗ್ಗೆ ಸ್ವಲ್ಪ ಹೇಳಿ ಅಂತ ಕೇಳಿದ್ರೆ 1970 ರಿಂದ 71 ರಲ್ಲಿ ಜಗತ್ತಿನಲ್ಲಿ ತೈಲ ಬಿಕ್ಕಟ್ಟು ಹಾಗೂ ಹಣದುಬ್ಬರ ಭೂಮಾಗ್ತಿತ್ತು ಜೊತೆಗೆ ಅಮೆರಿಕಾ ಸರ್ಕಾರ ಗೋಲ್ಡ್ ಸ್ಟ್ಯಾಂಡರ್ಡ್ ಅನ್ನ ಕೈಬಿಟ್ಟಿತ್ತು.


