ರಾಜ್ಯಕ್ಕೆ ಭರ್ಜರಿ ರೈಲು ಬೆಂಗಳೂರು ಟು ಮುಂಬೈ ಹೊಸ ಸೂಪರ್ ಫಾಸ್ಟ್ ಉತ್ತರ ಕರ್ನಾಟಕಕ್ಕೆ ಮತ್ತೊಂದು ಬಂಪರ್ ಅಂತೂ ಇಂತೂ ಕರ್ನಾಟಕಕ್ಕೆ ಈಗ ಮತ್ತೊಂದು ಕ್ರೂಷಿಯಲ್ ರೈಲಿನ ಆಗಮನ ಆಗ್ತಾ ಇದೆ ಅದರಲ್ಲೂ ಕೂಡ ಉತ್ತರ ಕರ್ನಾಟಕದ ಜನರ 40 ವರ್ಷಗಳ ಬೇಡಿಕೆಯೊಂದು ಈಗ ಈಡೇರಿದೆ ಕೇಂದ್ರ ಸರ್ಕಾರ ಬೆಂಗಳೂರು ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ಟ್ರೈನ್ ಆರಂಭಿಸುತ್ತಿದ್ದೀವಿ ಅಂತ ಘೋಷಿಸಿದ್ದು ಎಲ್ಲಾ ಕಡೆ ಬಹಳ ಸಂತೋಷ ವ್ಯಕ್ತವಾಗ್ತಿದೆ ಅದರಲ್ಲೂ ಕೂಡ ಬೆಂಗಳೂರಿಂದ ಬೇಗ ತಮ್ಮ ಊರು ಸೇರ್ಬೇಕು ಅನ್ನೋರಿಗೆ ಟ್ರಿಪ್ ಬಿಸಿನೆಸ್ ಅಂತ ಮುಂಬೈಗೆ ಹೋಗಬೇಕು ಅನ್ನೋರಿಗೂ ಕೂಡ ಇದರಿಂದ ಸಾಕಷ್ಟು ಅನುಕೂಲ ಆಗುತ್ತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದನ್ನ ಕನ್ಫರ್ಮ್ ಮಾಡಿದ್ದು ಬಹು ದಿನಗಳ ಕನಸು ನನಸಾಗ್ತಾ ಇದೆ ಕೇವಲ ಮುಂಬೈಗಲ್ಲ ಉತ್ತರ ಕರ್ನಾಟಕದ ಭಾಗಕ್ಕೆ ಬೆಳಗಾವಿ ಭಾಗಕ್ಕೆ ಕ್ವಿಕ್ ಆಗಿ ತಲುಪೋಕ್ಕು ಕೂಡ ಇದರಿಂದ ಬಹಳ ಹೆಲ್ಪ್ ಆಗುತ್ತೆ ಈ ಮೂಲಕ ಉದ್ಯಾನ್ ರೈಲಿಗೆ ಸೆಡ್ಡು ಹೊಡಿೆಯೋಕೆ ಈಗ ಹೊಸ ಟ್ರೈನ್ ಆಗಮನ ಆಗ್ತಿದೆ.
ಬರ್ತಿದೆ ಸೂಪರ್ ಫಾಸ್ಟ್ ಟ್ರೈನ್. ದಶಕಗಳ ಕೊರಗಿಗೆ ಕೊನೆಗೂ ಮುಕ್ತಿ. ಬೆಂಗಳೂರು ಮತ್ತು ಮುಂಬೈ ನಡುವೆ ಇಷ್ಟು ದಿನ ಉದ್ಯಾನ್ ಎಕ್ಸ್ಪ್ರೆಸ್ ಮಾತ್ರ ಸಂಚಾರ ಮಾಡ್ತಾ ಇತ್ತು. ಆಂಧ್ರವನ್ನ ದಾಟಿ ಮತ್ತೆ ಕರ್ನಾಟಕಕ್ಕೆ ಬಂದು ಮಹಾರಾಷ್ಟ್ರಕ್ಕೆ ಹೋಗಬೇಕಿತ್ತು. ಭರ್ತಿ ಒಂದೂವರೆ ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿ 24 ಗಂಟೆ ಜರ್ನಿ ಮಾಡಬೇಕಾಗಿತ್ತು. ಆದರೆ ಈಗ ಅದಕ್ಕೆ ಸ್ವಲ್ಪ ಮುಕ್ತಿ ಸಿಗುತ್ತೆ. ಇಲ್ಲಿ ಒಂದೇ ಒಂದು ರೈಲ್ ಇದ್ದ ಕಾರಣಕ್ಕೆ ಈ ರೈಲಿನ ಮೇಲೆ ಭಯಾನಕ ಪ್ರೆಷರ್ ಇತ್ತು. ರಶ್ ಇರ್ತಾ ಇತ್ತು. ತುಂಬಾ ಸಲ ಟಿಕೆಟ್ಗಳು ಸಿಗತಾ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇದು ನಮ್ಮ ರಾಜ್ಯದಲ್ಲಿ ಹೆಚ್ಚು ಪ್ರಯಾಣ ಮಾಡ್ತಾ ಇರಲಿಲ್ಲ. ಹೀಗಾಗಿ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಜನರಿಗೆ ಇದರಿಂದ ನಿರಾಸೆ ಆಗ್ತಾ ಇತ್ತು. ಈ ಕಡೆಯಿಂದಲೂ ಹೊಸ ರೈಲು ಬಿಡಿ ಸೂಪರ್ ಫಾಸ್ಟ್ ರೈಲು ಬೇಕು ಅಂತ ಜನ ಬೇಡಿಕೆ ಇಡ್ತಾ ಇದ್ದಾರೆ. ಇಡ್ತಾ ಇದ್ರೂ ಕೂಡ ಮುಂಚಿನಿಂದಲೂ ಅದರಂತೆ ಸುಮಾರು 40 ವರ್ಷಗಳ ನಂತರ ಮುಂಬೈ ಮತ್ತು ಬೆಂಗಳೂರು ನಡುವೆ ಹೊಸ ಟ್ರೈನ್ ಬರ್ತಾ ಇದೆ. ವಿಶೇಷ ಅಂದ್ರೆ ನಮ್ಮ ಕರ್ನಾಟಕದಿಂದಲೇ ಈ ಸಲ ನೇರ ಮುಂಬೈ ತಲುಪೋ ರೀತಿ ಟ್ರೈನ್. ಕೇಂದ್ರ ಸರ್ಕಾರ ಇದಕ್ಕೆ ಅಪ್ರೂವಲ್ ಕೊಟ್ಟಿದ್ದು ಅನುಮೋದನೆ ಪತ್ರವನ್ನ ಸಚಿವ ಪ್ರಹಲಾದ್ ಜೋಶಿ ಶೇರ್ ಮಾಡಿದ್ದಾರೆ. ತುಂಬಾ ದೊಡ್ಡ ಹೆಜ್ಜೆ ಇದರಿಂದ ಲಕ್ಷಾಂತರ ಜನರಿಗೆ ಅನುಕೂಲ ಆಗುತ್ತೆ. ವ್ಯಾಪಾರ ವಹಿವಾಟು ವೃದ್ಧಿಯಾಗುತ್ತೆ. ಪಿಎಂ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಅಂತ ಹೇಳಿದ್ದಾರೆ. ಸಿಎಂ ಗೋ ಪಿಎಂ ಗೋ ಈ ರೀತಿ ಕೆಲಸ ಮಾಡಿದಾಗ ಧನ್ಯವಾದ ಯಾಕೆ ಹೇಳಬೇಕು. ಧನ್ಯವಾದ ಹೇಳೋ ಅವಶ್ಯಕತೆ ಇಲ್ಲ. ಅದೇ ಅದಕ್ಕಿಂತನೇ ಆಯ್ಕೆ ಮಾಡೋದು ನಾವು ಅಭಿನಂದನೆ ತಿಳಿಸಬಹುದು ವೆಲ್ ಡನ್ ಅಂತ ಹೇಳಬಹುದು. ಜೊತೆಗೆ ಇದು ಯಾವ ಯಾವ ಕಡೆ ಸಂಚಾರ ಮಾಡುತ್ತೆ ಅಂತಲೂ ಕೇಂದ್ರ ಸಚಿವರೇ ರಿವೀಲ್ ಮಾಡಿದ್ದಾರೆ.
ತುಮಕೂರಿನಿಂದ ಬೆಳಗಾವಿ ರಾಜ್ಯದಲ್ಲೇ 600 ಕಿಲೋಮೀಟರ್ ಇನ್ನು ಈ ಹೊಸ ಸೂಪರ್ ಫಾಸ್ಟ್ ರೈಲು ರಾಜ್ಯದಲ್ಲೇ ಹೆಚ್ಚು ಸಂಚಾರ ಮಾಡಲಿದ್ದು ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಮಹಾನಗರಗಳನ್ನ ದಾಟಿ ಹೋಗುತ್ತೆ. ರೈಲ್ವೆ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ ನಮ್ಮ ಸ್ಟೇಟಲ್ಲಿ ಸುಮಾರು 600 ಕಿಲೋಮೀಟ ನಷ್ಟು ಪ್ರಯಾಣ ಮಾಡುತ್ತೆ. ಬೆಂಗಳೂರಿಂದ ಶುರುವಾದರೆ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳಿ, ಧಾರವಾಡ್ ಮತ್ತು ಬೆಳಗಾವಿ ತನಕವೂ ಈ ರೈಲು ಹೋಗುತ್ತೆ. ಈ ಎಲ್ಲಾ ಮಹಾನಗರಗಳಲ್ಲಿ ಸ್ಟಾಪ್ ಕೊಡ್ತಾರೆ. ಸದ್ಯಕ್ಕೆ ಇನ್ನುಳಿದ ಯಾವ ಯಾವ ಕಡೆ ಸ್ಟಾಪ್ ಇರುತ್ತೆ ಅಂತ ಗೊತ್ತಾಗಿಲ್ಲ. ಅಧಿಕೃತ ನೋಟಿಫಿಕೇಶನ್ ಅಲ್ಲಿ ಇದನ್ನ ಉಲ್ಲೇಖ ಮಾಡ್ತಾರೆ. ಆದರೆ ಕೇಂದ್ರ ಸಚಿವರು ಹೇಳಿರುವ ಪ್ರಕಾರ ಈ ನಗರಗಳಲ್ಲೂ ಕೂಡ ನಿಲುಗಡೆ ಇರುತ್ತೆ. ಹಾಗೆ ಸರಾಸರಿ ವೇಗ ಗಂಟೆಗೆ 55 ಕಿಲೋಮೀಟರ್ ಇರಲಿದ್ದು ಪ್ರತಿ ಸ್ಟಾಪ್ ಅಲ್ಲೂ ಏಳರಿಂದ ಎಂಟು ನಿಮಿಷ ನಿಲ್ಲುತ್ತೆ. ಹೊಸ ಟ್ರೈನ್ನಲ್ಲಿ ಉತ್ತಮ ಗುಣಮಟ್ಟದ ಸೌಕರ್ಯಗಳು ಹೊಸ ಫೀಚರ್ಸ್ ಕೂಡ ಇರಲಿವೆ. 18 ಗಂಟೆ ಒಳಗೆ ಮುಂಬೈ ರಾಜ್ಯದ ನಗರಗಳು ಇನ್ನೂ ಹತ್ತಿರ ಈ ಟ್ರೈನ್ ನ ಮಹತ್ವದ ವಿಚಾರ ಅಂದ್ರೆ ಈಗಿರೋ ಉದ್ಯಾನ್ ರೈಲ್ಗಿಂತ ವೇಗವಾಗಿ ಮುಂಬೈ ತಲ್ಪತ್ತೆ. ನಿಮಗೆ ಗೊತ್ತಿರಲಿ ಈ ಹೀಗಿರೋ ಉದ್ಯಾನ್ ಎಕ್ಸ್ಪ್ರೆಸ್ ಎರಡು ನಗರಗಳ ಮಧ್ಯೆ ತಲುಪೋಕೆ ಹೆಚ್ಚು ಕಮ್ಮಿ ಒನ್ ಡೇ ತಗೊಳ್ಳುತ್ತೆ. ಮುಂಬೈನಿಂದ ಬೆಂಗಳೂರಿಗೆ ಬರುವಾಗ 32 ಸ್ಟಾಪ್ ಕೊಟ್ಟು ಬರುತ್ತೆ. 21:00 ಗಂಟೆ ಪ್ರಯಾಣ ಮಾಡುತ್ತೆ. ಹಾಗೆ ಬೆಂಗಳೂರಿನಿಂದ ಮುಂಬೈಗೆ ಹೋಗುವಾಗ 23 ಗಂಟೆ 35 ನಿಮಿಷ ಜರ್ನಿ 32 ಸ್ಟಾಪ್. ಒಟ್ಟು 153 ಕಿಲೋಮೀಟರ್ ಟ್ರಾವೆಲ್ ಮಾಡಬೇಕಾಗುತ್ತೆ.
ಈ ಟ್ರೈನ್ ಗರಿಷ್ಠ ವೇಗ 130 km ಗಂಟೆಗೆ ಹಾಲ್ಟ್ ಎಲ್ಲ ಸೇರಿ ಆವರೇಜ್ 52 km ವೇಗ ಹೊಂದಿದೆ. ಮಹಾರಾಷ್ಟ್ರ, ಆಂಧ್ರ ಕರ್ನಾಟಕವನ್ನ ದಾಟಿ ಸಿಲಿಕಾನ್ ಸಿಟಿಗೆ ಬರ್ತಾ ಇತ್ತು ಆದರೆ ಈಗ ಈ ಹೊಸ ರೇರ್ ಇದಕ್ಕಿಂತ ಹೆಚ್ಚಿನ ವೇಗವನ್ನ ಹೊಂದಿರುತ್ತೆ. ಗರಿಷ್ಠ ವೇಗ 130 ಕಿಲೋಮೀಟ ಆದರೂ ಕೂಡ ಆವರೇಜ್ ಸ್ಪೀಡ್ನ್ನ ಜಾಸ್ತಿ ಮಾಡೋ ಪ್ರಯತ್ನವನ್ನ ನಡೆಸ್ತಾ ಇದ್ದಾರೆ ಸೋ 18 ಗಂಟೆ ಅಥವಾ ಅದಕ್ಕಿಂತ ಕಮ್ಮಿ ಅವಧಿಯಲ್ಲೇ ಮುಂಬೈ ರೀಚ್ ಆಗಬಹುದು ಏನಿಲ್ಲ ಅಂದ್ರೂ ಕೂಡ ಒಂದು ಐದು ಗಂಟೆ ಸೇವ್ ಆಗುತ್ತೆ ಸಂಪರ್ಕದಲ್ಲಿ ಇದು ಗೇಮ್ ಚೇಂಜರ್ ಆಗುತ್ತೆ ಅಂತ ಹೇಳ್ತಿದ್ದಾರೆ. ಸಣ್ಣ ಪುಟ್ಟ ಜ್ವರದಿಂದ ಹಿಡಿದು ಯಾವುದೇ ಮೆಡಿಕಲ್ ಕಂಡಿೀಷನ್ ಗಳಿಂದ ನೀವು ಹಣಕಾಸಿನ ಸಮಸ್ಯೆ ಸಿಕ್ಕ ಹಾಕೊಳ್ಳಬಾರದು ಅಂದ್ರೆ ಹೆಲ್ತ್ ಇನ್ಶೂರೆನ್ಸ್ ಮಾಡಿಸಿರಬೇಕು. ನೀವು 10 15 ಲಕ್ಷ ರೂಪಾಯಿಗೋ 20 ಲಕ್ಷ ರೂಪಾಯಿಗೋ ಅಥವಾ ಒಂದು ಕೋಟಿ ರೂಪಾಯಿಗೋ ನಿಮ್ಮ ಸಾಮರ್ಥ್ಯ ಅನುಸಾರ ಮತ್ತು ಅವಶ್ಯಕತೆಗೆ ಅನುಸಾರವಾಗಿ ಎಷ್ಟರದಾದ್ರೂ ಹೆಲ್ತ್ ಇನ್ಶೂರೆನ್ಸ್ ಮಾಡಿಸ್ಕೊಬಹುದು. ಕಾಯಿಲೆಗಳು ಅಪಘಾತಗಳು ಹೇಗಿದ್ರೂ ಕೂಡ ಹೇಳಿಬಿಟ್ಟೇನು ಬರಲ್ಲ. ಆದರೆ ಬಂದಾಗ ನಿಮ್ಮ ಹತ್ರ ಆತರ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಇದ್ರೆ ಆಸ್ಪತ್ರೆ ಬಿಲ್ ಕಟ್ಟೋ ಪರಿಸ್ಥಿತಿ ಬರೋದಿಲ್ಲ. ಬೆಸ್ಟ್ ಆಫ್ ದಿ ಬೆಸ್ಟ್ ಟ್ರೀಟ್ಮೆಂಟ್ ನೀವು ತಗೋಬಹುದು. ಓ ಡಾಕ್ಟರ್ ಚಾರ್ಜಸ್ ಎಷ್ಟಪ್ಪ ಬೆಡ್ ಚಾರ್ಜಸ್ ಎಷ್ಟಪ್ಪಾ ರೂಮ್ ಚಾರ್ಜಸ್ ಎಷ್ಟಪ್ಪಾ ಈ ಆಸ್ಪತ್ರೆಯಲ್ಲಿ ಎಷ್ಟು ಆಸ್ಪತ್ರೆಯಲ್ಲಿ ಎಷ್ಟು ಕಮ್ಮಿಗೆ ಮಾಡ್ತಾರಾ ಅಂತೆಲ್ಲ ಚರ್ಚೆ ಮಾಡೋ ಪರಿಸ್ಥಿತಿ ಬರೋದಿಲ್ಲ ಅಥವಾ ಸಾಲ ಮಾಡೋ ಪರಿಸ್ಥಿತಿ ಬರೋದಿಲ್ಲ ಭಾರತದಲ್ಲಿ ಹೆಚ್ಚಿನ ಭಾರತೀಯರು ಬ್ಯಾಂಕ್ರಪ್ಟ್ ಅಥವಾ ದಿವಾಳಿ ಆಗೋದಕ್ಕಿಂತ ಒಂದು ಹಾಸ್ಪಿಟಲ್ ವಿಸಿಟ್ ದೂರ ಇದ್ದಾರೆ ಅಷ್ಟೇ ಒಂದು ಅನಾರೋಗ್ಯ ಆರೋಗ್ಯ ಸಮಸ್ಯೆ ಯಾರಿಗಾದರೂ ಬಂತು ಮನೇಲಿ ಅಂತ ಹೇಳಿದ್ರೆ ಫ್ಯಾಮಿಲಿ ದಿವಾಳಿ ಸಾಲ ಈ ರೀತಿ ಆಘಾತಕಾರಿ ಪರಿಸ್ಥಿತಿ ಇದೆ ಅದು ಬರಬಾರದು ಅಂದ್ರೆ ಸ್ನೇಹಿತರೆ ಪ್ರತಿಯೊಬ್ಬರಿಗೂ ಹೆಲ್ತ್ ಇನ್ಶೂರೆನ್ಸ್ ತುಂಬಾ ಇಂಪಾರ್ಟೆಂಟ್ ಹೆಲ್ತ್ ಇನ್ಶೂರೆನ್ಸ್ ಟೇಕ್ ಕೇರ್ ಮಾಡುತ್ತೆ.
ಈ ಹಾಸ್ಪಿಟಲ್ ಬಿಲ್ ಅನ್ನ ಹಾಗಾಗಿ ಪ್ರತಿಯೊಬ್ಬ ಫೈನಾನ್ಸಿಯಲ್ ಎಕ್ಸ್ಪರ್ಟ್ ಕೂಡ ಮೊದಲು ಅಡ್ವೈಸ್ ಮಾಡೋ ಈ ಪ್ರೊಟೆಕ್ಷನ್ ಪ್ಲಾನ್ಗಳ ಲಿಂಕ್ ಅನ್ನ ಹೆಲ್ತ್ ಇನ್ಶೂರೆನ್ಸ್ ಕೊಟ್ಟಿರ್ತೀವಿ ಹಾಗೆ ಕೆಳಗಡೆ ಟರ್ಮ್ ಇನ್ಶೂರೆನ್ಸ್ ಕೂಡ ಕೊಟ್ಟಿರ್ತೀವಿ ಅದು ಕೂಡ ತುಂಬಾ ಇಂಪಾರ್ಟೆಂಟ್ ಅದು ದುಡಿತಾ ಇರೋ ವ್ಯಕ್ತಿಯ ಆಬ್ಸೆನ್ಸ್ ನಲ್ಲಿ ಅವರಿಗೇನಾದ್ರೂ ಹೆಚ್ಚು ಕಮ್ಮಿಯಾಗಿ ಅವರ ಇಲ್ಲ ಅಂತಆದ್ರೆ ಫ್ಯಾಮಿಲಿ ಆರ್ಥಿಕವಾಗಿ ದಿವಾಳಿ ಆಗಬಾರದು ಅಂದ್ರೆ ಅದಕ್ಕಿರೋ ಪ್ರೊಟೆಕ್ಷನ್ ಪ್ಲಾನ್ ಅದು ಸೋ ಹೆಲ್ತ್ ಇನ್ಶೂರೆನ್ಸ್ ಕೆಳಗಡೆ ಟರ್ಮ್ ಇನ್ಶೂರೆನ್ಸ್ ಎರಡರ ಲಿಂಕ್ನ್ನ ಕೂಡ ನಾವು ಕೊಟ್ಟಿರ್ತೀವಿ ಸ್ನೇಹಿತರೆ ಇನ್ನು ಯಾರು ಮಾಡ್ಸಿಲ್ಲ ಅವರು ಮಿಸ್ ಮಾಡದೆ ಇವುಗಳನ್ನ ಚೆಕ್ ಮಾಡಿ ಭಾರತದ ಟಾಪ್ ಪ್ರೊವೈಡರ್ ಗಳ ಪ್ಲಾನ್ ಗಳನ್ನ ಕಂಪೇರ್ ಮಾಡಿ ಇವಾಗ ಆನ್ಲೈನ್ ಡಿಸ್ಕೌಂಟ್ ಕೂಡ ಇದೆ. ಜಿಎಸ್ಟಿ ಕೂಡ ಜೀರೋ ಆಗಿದೆ. ಸೋ ಇದು ಹೈ ಟೈಮ್ ರೈಟ್ ಟೈಮ್ ಮಿಸ್ ಮಾಡದೆ ಚೆಕ್ ಮಾಡಿ ಇನ್ನು ಯಾರು ಮಾಡ್ಸಿಲ್ಲ ಅವರು ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ. ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ. ಲಾಭ ಏನು? ಈ ಹೊಸ ರೈಲು ನಾನಾ ಕಾರಣಗಳಿಂದ ಇಂಪಾರ್ಟೆನ್ಸ್ ಪಡ್ಕೊಳ್ತಾ ಇದೆ. ಮೊದಲಿಗೆ ಸಂಪರ್ಕ ಕ್ಷೇತ್ರ. ಇಷ್ಟು ದಿನ ಉದ್ಯಾನ್ ರೈಲಿನ ಮೇಲಷ್ಟೇ ಎರಡು ನಗರ ಜನ ಅವಲಂಬಿತವಾಗಬೇಕಾಗಿತ್ತು. ಅದು ಸಿಗಲಿಲ್ಲ ಅಂದ್ರೆ ಬಸ್ ಮತ್ತು ವಿಮಾನದ ಮೂಲಕವೇ ಹೋಗಬೇಕಾಗಿತ್ತು. ಆದರೆ ಇದು ಎಲ್ಲರಿಗೂ ಸಿಗುವಂತದ್ದಲ್ಲ ದುಬಾರಿ ಆಗ್ತಾ ಇತ್ತು. ಎಷ್ಟೋ ಸಲ ರಶ್ ಕಾರಣ ಕೊಟ್ಟು ಜನ ತಮ್ಮ ಟ್ರಿಪ್ ಅನ್ನೇ ಕ್ಯಾನ್ಸಲ್ ಮಾಡ್ತಾ ಇದ್ರು. ಟಾಯ್ಲೆಟ್ ನ ಪಕ್ಕದಲ್ಲಿ ನೆಲದಲ್ಲಿ ಹೀಗೆ ರೈಲಲ್ಲಿ ಎಲ್ಲೆಲ್ಲಿ ಜಾಗ ಇದೆಯಲ್ಲ ನುಕ್ಕೊಂಡು ನೇತಾಡ್ಕೊಂಡು ಬರ್ತಾ ಇದ್ರು. ಇದನ್ನ ನೆನಪಿಸಿಕೊಂಡೆ ಜನ ಈ ರೈಲಿಗೆ ಹತ್ತೋಕೆ ಹೆದರುತಾ ಇದ್ರು. ಆದರೆ ಬೇರೆ ಆಯ್ಕೆ ಇಲ್ಲ ಅನ್ನೋರು ಬೇರೆ ರೀತಿ ಟ್ರಾನ್ಸ್ಪೋರ್ಟೇಷನ್ ಕಾಸ್ಟ್ಲಿ ಆಗುತ್ತೆ ಅಂತ ಹೇಳಿ ಕಷ್ಟ ಪಟ್ಟಿದ್ರಲ್ಲಿ ಹೋಗ್ತಾ ಇದ್ರು. ಮುಂಬೈ ಮತ್ತು ಬೆಂಗಳೂರು ನಡುವಿನ ಪ್ರಯಾಣ ಕಷ್ಟ ಆಗ್ತಿತ್ತು. ಆದರೆ ಈಗ ಒಂದೇ ರೈಲಿಗೆ ಬೀಳೋ ಪ್ರೆಷರ್ ಕಮ್ಮಿ ಆಗುತ್ತೆ. ಇನ್ನೊಂದು ರೈಲಿಗೂ ಜನ ಶೇರ್ ಆಗ್ತಾರೆ ಆ ಕಡೆ ಈ ಕಡೆ ಹಂಚಿ ಹೋಗ್ತಾರೆ.
ಎರಡನೇದು ವ್ಯಾಪಾರ ಮತ್ತು ಎಕಾನಮಿ. ಟೆಕ್ ಕ್ಯಾಪಿಟಲ್, ಐಟಿಸಿಟಿ, ಸ್ಟಾರ್ಟಪ್ ಗಳ ಹಬ್ಬ ಆಗಿರೋ ಬೆಂಗಳೂರು. ಸೀದಾ ದೇಶದ ಕಮರ್ಷಿಯಲ್ ಕ್ಯಾಪಿಟಲ್ ವಾಣಿಜ್ಯ ನಗರಿ ಮುಂಬೈಗೆ ಇನ್ನಷ್ಟು ಫಾಸ್ಟ್ ಆಗಿ ಕನೆಕ್ಟ್ ಆಗುತ್ತೆ. ಮಹಾರಾಷ್ಟ್ರ ಭಾಗದಿಂದಲೂ ಸಾಕಷ್ಟು ಜನ ಬೆಂಗಳೂರಿಗೆ ಬರೋರಿದ್ದಾರೆ. ರೈತರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ವ್ಯಾಪಾರಿಗಳು ಒಟ್ಟಾರೆ ಸಂಘಟಿತ ಅಸಂಘಟಿತ ವಲಯ ಎಲ್ಲಾ ಕಡೆಯಿಂದ ಬರ್ತಾರೆ. ಹಾಗೆ ದೇಶದ ಆರ್ಥಿಕ ರಾಜಧಾನಿಯಾಗಿರೋ ಮುಂಬೈಗೂ ಇಲ್ಲಿಂದಲೂ ಸಾವಿರಾರು ಜನ ಪ್ರಯಾಣ ಮಾಡ್ತಾರೆ ಅಲ್ವಾ ವ್ಯಾಪಾರ, ಶಿಕ್ಷಣ, ಪ್ರವಾಸ, ಉದ್ಯೋಗದ ಕಾರಣದಿಂದ ಜನ ಹೋಗ್ತಾ ಇರ್ತಾರೆ, ಬರ್ತಿರ್ತಾರೆ ಅವರಿಗೆ ಇನ್ನಷ್ಟು ಅನುಕೂಲ ಆಗುತ್ತೆ. ಅಂತರಾಜ್ಯ ಸಹಕಾರ ಸ್ಟ್ರಾಂಗ್ ಆಗುತ್ತೆ ಪ್ರವಾಸೋದ್ಯಮವು ಇಂಪ್ರೂವ್ ಆಗುತ್ತೆ. ಮೂರನೆಯದಾಗಿ ನಮ್ಮ ಮಧ್ಯ ಉತ್ತರ ಕರ್ನಾಟಕದ ಭಾಗಕ್ಕೆ ಕನೆಕ್ಟಿವಿಟಿ ಜಾಸ್ತಿ ಆಗುತ್ತೆ. ಸ್ನೇಹಿತರೆ ಬೆಳಗಾವಿ ಹುಬ್ಬಳ್ಳಿ ಮತ್ತು ದಾವಣಗೆರೆ ಭಾಗದಿಂದ ದೊಡ್ಡ ಪ್ರಮಾಣದ ಜನ ವಲಸೆ ಹೋಗ್ತಾರೆ ಶಿಕ್ಷಣಕ್ಕೋಸ್ಕರ ವ್ಯಾಪಾರಕ್ಕೋಸ್ಕರ ಅಥವಾ ಇನ್ನಿತರ ಕಾರಣಗಳಿಂದಾಗಿ ಮಹಾನಗರಗಳಿಗೆ ಬರ್ತಾರೆ ಬೆಂಗಳೂರಿಗಂತೂ ನಿತ್ಯ ಸಾವಿರ ಜನ ಬರ್ತಾ ಇರ್ತಾರೆ ಆದರೆ ಸರಿಯಾದ ಸಂಪರ್ಕ ಇಲ್ಲ ಹುಬ್ಬಳ್ಳಿ ಬೆಳಗಾವಿಗಂತೂ ಎಷ್ಟು ರೈಲ್ ಬಿಟ್ರು ಸಾಕಾಗಲ್ಲ ಅಷ್ಟು ಜನ ಪ್ರಯಾಣ ಮಾಡ್ತಾರೆ ಇದೇ ಕಾರಣಕ್ಕಾಗಿನೇ ಹೆಚ್ಚಿನ ಖಾಸಗಿ ಬಸ್ಸುಗಳು ಕೂಡ ದುಬಾರಿಯಾಗಿ ಟಿಕೆಟ್ ಇಟ್ಟು ಓಡಿಸ್ತಾ ಇದ್ದಾರೆ ವಿಮಾನ ಪ್ರಯಾಣ ಕೂಡ ಕೈಗೆಟ್ಕೊ ಲೆವೆಲ್ನಲ್ಲಿ ಇಲ್ಲ ಸಾಮಾನ್ಯ ಜನರಿಗೆ ಕಷ್ಟ ಇದರಿಂದ ಈ ಭಾಗದಲ್ಲಿ ಓಡಾಡೋ ಇತರ ರೈಲುಗಳ ಮೇಲು ಕೂಡ ಪ್ರೆಷರ್ ಇದೆ ಸೋ ಆ ಒತ್ತಡ ನ್ನ ಈ ಹೊಸ ರೈಲು ಕೂಡ ಒಂದಷ್ಟು ಕಮ್ಮಿ ಮಾಡುತ್ತೆ. ಹೊಸ ಕೈಗಾರಿಕ ನಗರಗಳಿಗೆ ಅಂದ್ರೆ ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಭಾಗದ ಜನರಿಗೂ ಇದರಿಂದ ಅನುಕೂಲ ಆಗುತ್ತೆ. ತುಮಕೂರಿಗೆ ಬಿಡಿ ಸ್ನೇಹಿತರೆ ಬೆಂಗಳೂರಿಂದ ಸಾಕಷ್ಟು ಸಂಪರ್ಕ ವ್ಯವಸ್ಥೆ ಇದೆ ಆದರೆ ಉತ್ತರ ಕರ್ನಾಟಕಕ್ಕೆ ಇದರಿಂದ ಸಂಪರ್ಕ ಕ್ರಾಂತಿಗೆ ಹೆಲ್ಪ್ ಆಗುತ್ತೆ. ಕೈಗಾರಿಕೆಗಳ ವಿಸ್ತರಣೆ ಕೃಷಿ ಉತ್ಪನ್ನಗಳ ಸಾಗಣಿಕೆಗೆ ಬಟ್ಟೆ ಉದ್ಯಮಕ್ಕೆ ಇದರಿಂದ ಸುಲಭ ಆಗುತ್ತೆ. ಹಾಗೆ ಜಿಲ್ಲೆ ಜಿಲ್ಲೆಗಳ ನಡುವಿನ ವ್ಯವಹಾರ ಈಸಿಯಾಗುತ್ತೆ. ಹಾಗೆ ಉತ್ತರ ಕರ್ನಾಟಕದ ರೈತರಿಗೆ ಮುಂಬೈ ಅನ್ನೋ ಮತ್ತೊಂದು ಮಾರ್ಕೆಟ್ ಓಪನ್ ಆಗಬಹುದು.
ಆ ಭಾಗದಲ್ಲಿ ಬೆಳೆದ ಹಣ್ಣು ತರಕಾರಿಗಳನ್ನ ಕೈಗಾರಿಕ ವಸ್ತುಗಳನ್ನ ಮುಂಬೈ ಮಾರ್ಕೆಟ್ ಗೆ ಕ್ವಿಕ್ ಆಗಿ ಸಾಗಿಸಲಿಕ್ಕೆ ಹೆಲ್ಪ್ ಆಗಬಹುದು ಪ್ರವಾಸೋದ್ಯಮ ಕೂಡ ಇಂಪ್ರೂವ್ ಆಗುತ್ತೆ ಎರಡು ಸೈಡ್ ಮುಂಬೈ ಭಾಗದಲ್ಲಿ ಕೆಲಸ ಮಾಡ್ತಿರೋರಿಗೂ ಬೇಗ ಅವರ ಕುಟುಂಬಗಳ ಹತ್ತಿರ ಬರೋಕೆ ಈಸಿ ಆಗುತ್ತೆ ಉತ್ತರ ಕರ್ನಾಟಕ ಭಾಗದಲ್ಲಿ ಹೀಗಾಗಿ ಈ ಹೊಸ ರೈಲಿನ ಘೋಷಣೆ ತುಂಬಾ ಮಹತ್ವ ಪಡ್ಕೊಳ್ತಾ ಇದೆ ಉದ್ಯಾನ್ ಕೂಡ ಇರುತ್ತೆ ಉದ್ಯಾನ ಏನು ಸ್ಟಾಪ್ ಆಗಲ್ಲ ಅದಿರುತ್ತೆ ಟೈಮಿಂಗ್ಸ್ ಚೇಂಜ್ ಆಗುತ್ತಾ ಅಂತ ಕೆಲವರು ಕೇಳಬಹುದು ಟೈಮಿಂಗ್ಸ್ ಬಗ್ಗೆ ರೈಲ್ವೆ ಇಲಾಖೆ ಇನ್ನಷ್ಟೇ ಹೇಳಬೇಕು ಆದ್ರೆ ರೈಲ್ ಅಂತೂ ಇರುತ್ತೆ ಅದು ಯಾಕಂದ್ರೆ ಉದ್ಯಾನ್ ರೈಲು ಇಂಪಾರ್ಟೆಂಟ್ ಈ ಭಾಗದ ಸಂಪರ್ಕ ನಾಡಿ ಇದನ್ನ ಬಿಟ್ಟು ಅದನ್ನ ತೆಗೆಯದರಲ್ಲಿ ಏನು ಲಾಜಿಕ್ ಇಲ್ಲ ಅದಿರುತ್ತೆ ಈ ಉದ್ಯಾನ್ ಎಕ್ಸ್ಪ್ರೆಸ್ ಮೆಜೆಸ್ಟಿಕ್ ನಲ್ಲಿ ಶುರುವಾಗುತ್ತೆ ಪ್ರಯಾಣವನ್ನ ಅದು ಬೆಂಗಳೂರು ಕಂಟೋನ್ಮೆಂಟ್ ಯಲಹಂಕ ದೊಡ್ಡಬಳ್ಳಾಪುರ ಗೌರಿಬಿದ್ನೂರು ಹಿಂದೂಪುರ ಪೆನುಗುಂಡ ಸಾಯಿಪಿ ನಿಲಯಂ ಧರ್ಮಾಂ ಅನಂತಪುರಂ ಗುಂತ್ಕಲ್ ಅಧೋನಿ ಮಂತ್ರಾಲಯ ರಾಯಚೂರು ಕೃಷ್ಣ ಸೈದಾಪುರ್ ಯಾದಗಿರಿ ನಾಲ್ವಾರ್ ವಾಡಿ ಶಹಬಾದ್ ಕಲಬುರ್ಗಿ ಗಂಗಾಪುರ್ ರೋಡ್ ದುದಾನಿ ಅಕಲ್ಕೋಟೆ ಸೋಲಾಪುರ ಕುರ್ದ್ವಾಡಿ ದೌನ್ ಉರುಲಿ ಪುಣೆ ಲೋನವಲ ಕಲ್ಯಾಣ ಮತ್ತು ದಾದರನ್ನ ತರಪುತ್ತೆ ಹಾಗೆ 1984 ರಲ್ಲೇ ಅಂದ್ರೆ 41 ವರ್ಷಗಳ ಹಿಂದೆನೆ ಅದನ್ನ ಶುರು ಮಾಡಲಾಗಿತ್ತು. ಲೋನವಾಲ ಸಮೀಪ ಸೈಹಾದ್ರಿ ಬೆಟ್ಟಗಳನ್ನ ದಾಟಿ ಬ್ಯೂಟಿಫುಲ್ ಜಾಗದಲ್ಲಿ ಪಾಸ್ ಆಗಿಹೋಗುತ್ತೆ. ಮಾಕಳಿ ದುರ್ಗ ಸೇರಿ ಅನೇಕ ಸುಂದರ ತಾಣಗಳನ್ನ ಇದು ತೋರಿಸ್ತಾ ಹೋಗುತ್ತೆ. ಸೋ ಫ್ರೆಂಡ್ಸ್ ಇದಾಗಿತ್ತು ಬೆಂಗಳೂರು ಮತ್ತು ಮುಂಬೈ ನಡುವೆ ಬರ್ತಾ ಇರುವ ಹೊಸ ಟ್ರೈನ್ ಬಗ್ಗೆ ನಮಗೆ ಮಾಹಿತಿ ಕೊಡುವಂತ ಪ್ರಯತ್ನ ಈ ವರದಿಯನ್ನ ಎಲ್ಲರಿಗೂ ಶೇರ್ ಮಾಡಿ ಅನುಕೂಲ ಆಗಲಿ ಈ ಭಾಗದಲ್ಲಿ ಓಡಾಡುವಂತವರಿಗೆ ಹೆಲ್ಪ್ ಆಗಬಹುದು.


