Thursday, November 20, 2025
HomeLatest Newsಚಿನ್ನದ ಬೆಲೆ ಕುಸಿತದ ಕಾರಣವೇನು?

ಚಿನ್ನದ ಬೆಲೆ ಕುಸಿತದ ಕಾರಣವೇನು?

ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಉಂಟಾಗಿದೆ ದೀಪಾವಳಿ ಹಬ್ಬದ ವೇಳೆ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1.33 ಲಕ್ಷ ರೂಪಾಯ ತಲುಪಿತ್ತು ಆದರೆ ಈಗ ಹಬ್ಬದ ಬಳಿಕ ಚಿನ್ನಕ್ಕೆ ಬೇಡಿಕೆ ಡೌನ್ ಆಗಿದೆ ಡಿಮಾಂಡ್ ನಲ್ಲಿ ಕುಸಿತ ಕಂಡಿರೋದು ಗೋಲ್ಡ್ ರೇಟ್ನಲ್ಲೂ ಕೂಡ ಕಾಣಿಸ್ತಾ ಇದೆ. ಕಳೆದ ಒಂದು ವರ್ಷದಲ್ಲಿ ತನ್ನ ಹೈಯೆಸ್ಟ್ ಪಾಯಿಂಟ್ ಮುಟ್ಟಿದ್ದ ಚಿನ್ನ ಈಗ 10 ಗ್ರಾಂ ಗೆ 1.27 ಲಕ್ಷ ರೂಪಾಯಿ ಆಗಿದೆ. ಅಂದರೆ ಒಂದೇ ವಾರದಲ್ಲಿ ಸುಮಾರು 5% ಅಥವಾ 6.500 ಸಾವ ರೂಪಾ ಡೌನ್ ಆಗಿದೆ ಇದೇನು ಕೇವಲ 6000 ರೂಪಾಯಿನ ಅಂತ ಅನ್ಕೋಬೇಡಿ ಈ ಗ್ರಾಫ್ ಒಂಚೂರು ನೋಡಿ ಕಳೆದ ಎರಡು ವರ್ಷದಲ್ಲಿ ಬಿದ್ದಿರೋ ರೆಕಾರ್ಡೇ ಇಲ್ಲ ಆದರೀಗ ಸಡನ್ಆಗಿ ಶಾರ್ಪ್ ಡಿಕ್ಲೈನ್ ವರ್ಟಿಕಲ್ ಡಿಕ್ಲೈನ್ 5% ಡೌನ್ ಹಾಗಿದ್ರೆ ಚಿನ್ನದ ಓಟಕ್ಕೆ ಬ್ರೇಕ್ ಹಾಕಿದ್ದು ಯಾರು ಇದ್ದಕ್ಕಿದ್ದಂತೆ ಚಿನ್ನ ಕುಸಿತಿದ್ದು ಯಾಕೆ ಇದು ಸಣ್ಣ ಕರೆಕ್ಷನ್ ಅಷ್ಟೇನ ಅಥವಾ ಚಿನ್ನದ ಬೆಲೆ ಇನ್ನು ಡೌನ್ ಆಗುತ್ತಾ ಆರ್ಥಿಕ ತಜ್ಞರ ಪ್ರೆಡಿಕ್ಷನ್ ಪ್ರಕಾರ ಬಬಲ್ ಬಸ್ಟ್ ಆಗುತ್ತಾ.

ಜಾಗತಿಕ ಮಾರ್ಕೆಟ್ ನಲ್ಲೂ ಕಮ್ಮಿ. ಬೆಳ್ಳಿಗೂ ಬಿತ್ತು ಬ್ರೇಕ್. ಚಿನ್ನ ಕೇವಲ ಭಾರತದ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲ ಜಾಗತಿಕ ಮಾರ್ಕೆಟ್ನಲ್ಲೂ ಕೂಡ ಡೌನ್ ಆಗಿದೆ. ನೀವಿಲ್ಲಿ ನೋಡ್ತಾ ಇರಬಹುದು ಅಕ್ಟೋಬರ್ 18 19 ರ ಟೈಮ್ನಲ್ಲಿ ಒಂದು ಔನ್ಸ್ ಅಂದ್ರೆ 30ಗ್ರಾಂ ಚಿನ್ನದ ಬೆಲೆ 4247ಡಾ ಇತ್ತು. ಆದರೆ 10 ದಿನ ಕಳೆಯುವಷ್ಟರಲ್ಲಿ 3943 ಡಾಲರ್ ಪರ್ ಔನ್ಸ್ ಆಗಿದೆ ಅಂದ್ರೆ ಒಂದುವರೆ ವಾರದಲ್ಲಿ 7% ಡೌನ್ ಅಥವಾ 300 ಡಾಲರ್ ಕಮ್ಮಿಯಾಗಿದೆ ಕೇವಲ ಚಿನ್ನ ಅಂತಲ್ಲ ಇತ್ತೀಚಿಗೆ ಚಿನ್ನವನ್ನ ಮೀರಿಸಿ ಸುದ್ದಿಯಾಗಿದ್ದ ಬೆಳ್ಳಿ ಕೂಡ ಬೀಳ್ತಾ ಇದೆ ಅಕ್ಟೋಬರ್ 20ಕ್ಕೆ 1ಕೆಜಿ ಬೆಳ್ಳಿ ಬೆಲೆ 163000 ರೂಪಾಯ ಇತ್ತು ಈಗ ಅದು 145000 ರೂಪಾಯಿಗೆ ಇಳಿದಿದೆ ಏಳೆಂಟು ದಿನದಲ್ಲಿ 18000 ಕಮ್ಮಿಯಾಗಿದೆ ಜಾಗತಿಕ ಮಾರ್ಕೆಟ್ನಲ್ಲೂ ಕೂಡ ಬೆಳ್ಳಿ 54 ಡಾಲರ್ ಪರ್ ಔನ್ಸ್ ನಿಂದ 46 ಡಾಲರ್ಗೆ ಇಳಿದಿದೆ. ಪ್ರೆಶಿಯಸ್ ಮೆಟಲ್ ಅಂತ ಕರೆಸಿಕೊಳ್ಳು ಎರಡು ಲೋಹಗಳು ಬೆಲೆ ಕಳೆದುಕೊಳ್ಳುತ್ತಿವೆ. ಹಾಗಿದ್ರೆ ಇದಕ್ಕೆ ಕಾರಣ ಏನು? ತಣ್ಣಗಾದ ಟ್ರಂಪ್ ಸ್ನೇಹಿತರೆ ಚಿನ್ನ ಆಗ್ಲಿ ಬೆಳ್ಳಿ ಆಗ್ಲಿ ಅಥವಾ ಯಾವುದೇ ಸ್ಟಾಕ್ ಆಗಲಿ ದರದಲ್ಲಿ ವ್ಯತ್ಯಾಸ ಆದ್ರೆ ಅದಕ್ಕೆ ಒಂದು ಕಾರಣ ಅಲ್ಲ ಹಲವಾರು ಕಾರಣ ಇರುತ್ತೆ. ಚಿನ್ನದ ವಿಚಾರದಲ್ಲೂ ಕೂಡ ಹಲವು ಕಾರಣಗಳಿದೆ. ಅದರಲ್ಲಿ ಟ್ರಂಪ್ ಸೈಲೆಂಟ್ ಆಗ್ತಿರೋದು ಕೂಡ ಒಂದು ದೊಡ್ಡ ಕಾರಣ. ಈಗಂತೂ ಜಗತ್ತಿನ ಆಗು ಹೋಗುಗಳಿಗೆಲ್ಲ ಟ್ರಂಪೇ ಕಾರಣ ಆಗ್ತಾ ಇದ್ದಾರೆ.

ಈ ಮನುಷ್ಯ ಇವತ್ತು ಏನು ಮಾಡ್ತಾನಪ್ಪ ಅಂತ ಹೇಳಿ ಜಗತ್ತುಹೆದುರಿಕೆಯಿಂದ ನೋಡೋ ರೀತಿಯಾಗಿದೆ ಬೆಳಗ್ಗೆ ಬೆಳಗ್ಗೆ ಎದ್ದು ಈತನ ಕಡೆಗೆ ಅದೇ ರೀತಿ ಚಿನ್ನದ ಬೆಲೆ ಏರಿಕೆ ಆಗೋದಕ್ಕೂ ಟ್ರಂಪ್ ಕಾರಣ ಆಗಿದ್ರು ಕಳೆದ ಏಪ್ರಿಲ್ ನಲ್ಲಿ ಚೀನಾ ಮೇಲೆ ಟ್ಯಾರಿಫ್ ಹಾಕಿದ್ದೆ ತಡ ಜಗತ್ತಲ್ಲಿ ಸುಂಕ ಸಮರ ಶುರುವಾಯಿತು ಪರಿಣಾಮ ಜಗತ್ತಿನ ವ್ಯಾಪಾರದಲ್ಲಿ ಅಸ್ಥಿರತೆ ಉಂಟಾಗಿ ಆರ್ಥಿಕತೆ ಅಲುಗಾಡೋಕೆ ಶುರುವಾಯ್ತು ಹೀಗಿದ್ದಾಗ ಗೋಲ್ಡ್ ರೇಟ್ ಕೂಡ ಹೆಚ್ಚಾಯ್ತು ಯಾಕಂದ್ರೆ ಆಗ ಹೂಡಿಕೆದಾರರು ಜಾಗತಿಕ ಸೆಂಟ್ರಲ್ ಬ್ಯಾಂಕ್ಗಳು ಸಾಮಾನ್ಯ ಜನರು ಎಲ್ಲರಿಗೂ ಕೂಡ ಸೇಫ್ ಇನ್ವೆಸ್ಟ್ಮೆಂಟ್ ಅಂತ ಕಂಡಿದ್ದು ಈ ಎಲ್ಲೋ ಮೆಟಲ್ ಗೋಲ್ಡ್ ಜನ ಮುಗಿಬಿದ್ರು ಪರಿಣಾಮ ಏಪ್ರಿಲ್ ತಿಂಗಳಲ್ಲಿ ಚಿನ್ನ ಭಾರತದಲ್ಲಿ ಒಂದು ಲಕ್ಷದ ಗಡಿಯನ್ನ ದಾಟಿತ್ತು ಆದರೆ ಈಗ ಸ್ವಲ್ಪ ಅಮೆರಿಕದ ತೆರಿಗೆ ಕಾರ್ಮೋಡ ಕಮ್ಮಿ ಆಗ್ತಾ ಬರ್ತಾ ಇದೆ ಹಾಗಂತ ಟ್ರಂಪ್ ಕಂಪ್ಲೀಟ್ ಸೈಲೆಂಟ್ ಆಗಿದ್ದಾರೆ ಅಂತಲ್ಲ ಅವರ ಬಾಯಿ ಯಾವತ್ತೂ ಮುಚ್ಚಲ್ಲ ಆದರೆ ಟ್ಯಾರಿಫ್ ವಿಚಾರದಲ್ಲಿ ಹಾರಾಡೋದು ಕಿರಚಾಡೋ ಚೂರು ಕಮ್ಮಿ ಮಾಡ್ತಾ ಇದ್ದಾರೆ ಹಲವು ರಾಫ್ಟರ್ಗಳ ಟ್ಯಾರಿಫ್ ಕಮ್ಮಿ ಮಾಡ್ತಿದ್ದೀವಿ ಅಂತ ಅಮೆರಿಕ ಹೇಳ್ತಾ ಇದೆ ಜಾಗತಿಕ ಆರ್ಥಿಕತೆ ಚಿನ್ನದ ವಿಚಾರದಲ್ಲಿ ದೊಡ್ಡ ಪ್ರಭಾವ ಬೀರುವ ಚೀನಾ ಜೊತೆಗೆ ಮಾತುಕಥೆ ನಡೆಸ್ತಾ ಇದ್ದಾರೆ ಇಬ್ಬರು ಒಬ್ಬರ ಮೇಲೊಬ್ಬರು 100% 150% ಸುಂಕ ಹಾಕ್ತೀವಿ ಅಂತ ಬಡಿದಾಡ್ತಾ ಇದ್ದಾರೆ ಆದ್ರೆ ಈಗ ಅಮೆರಿಕಾ ಚೀನಾ ಮೇಲಿನ ಟ್ಯಾರಿಫ್ ಇಳಿಸಬಹುದು ಅಂತ ಹೇಳಲಾಗ್ತಿದೆ. ಚೀನಾ ಜೊತೆ ಟ್ರೇಡ್ ಡೀಲ್ ಮಾಡ್ಕೊತಿದ್ದೀವಿ ಅಂತ ಕುದ್ದು ಟ್ರಂಪೇ ಹೇಳಿದ್ದಾರೆ.

ಚಿನ್ನದ ವಿಚಾರದಲ್ಲಿ ಮತ್ತೊಂದು ದೊಡ್ಡ ರಾಷ್ಟ್ರ ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕತೆ ಭಾರತ ಈ ಭಾರತದ ವಿಚಾರದಲ್ಲೂ ಕೂಡ ಪಾಸಿಟಿವಿಟಿ ಕಾಣಿಸ್ತಾ ಇದೆ. ಭಾರತ ಟ್ರಂಪ್ ತೆರಿಗೆ ಹುಚ್ಚಾಟಕ್ಕೆ ಸೊಪ್ಪು ಹಾಕ್ತಾ ಇಲ್ಲ ಆದ್ರೆ ಬ್ಯಾಕ್ ಚಾನೆಲ್ ನಲ್ಲಿ ಮಾತುಕಥೆ ನಡೆಸ್ತಾ ಇದೆ. ಶೀಘ್ರದಲ್ಲಿ ಅಮೆರಿಕ ಭಾರತದ ಮೇಲಿನ ಟ್ಯಾರಿಫ್ ನ ಈಗಿರೋ 50% ನಿಂದ 15 ರಿಂದ 16% ಗೆ ಡೌನ್ ಮಾಡಬಹುದು ಅಂತ ಹೇಳಲಾಗ್ತಿದೆ. ಈಗ ಆಲ್ರೆಡಿ ಈ ಒಪ್ಪಂದದ ಸನಿಹದಲ್ಲಿ ಎರಡು ರಾಷ್ಟ್ರಗಳು ಇವೆ ಅಂತ ರಾಯಟರ್ಸ್ ಮಿಂಟ್ ನಂತಹ ಪ್ರತಿಷ್ಠಿತ ಪತ್ರಿಕೆಗಳು ರಿಪೋರ್ಟ್ ಮಾಡಿವೆ. ಅಂದಹಾಗೆ ಚಿನ್ನದ ದರ ಕುಸಿಯೋದರ ಬಗ್ಗೆ ಒಂದು ವಾರದ ಹಿಂದೆನೇ ವರದಿಗಳು ಬರೋಕೆ ಶುರುವಾಗಿದ್ದು. ಇಳಿಯುತ್ತೆ ಸದ್ಯ ಡೌನ್ ಆಗೋ ಚಾನ್ಸಸ್ ಜಾಸ್ತಿ ಇದೆ ಯಾಕೆ.

ಮಾರ್ಕೆಟ್ ಕರೆಕ್ಷನ್ ಆಯ್ತಾ ಈ ಟ್ರಂಪ್ ಹುಚ್ಚಾಟದಿಂದ ಕಳೆದ ಒಂದು ವರ್ಷದಲ್ಲಿ ಚಿನ್ನ ವಿಪರೀತ ಏರಿಕೆ ಕಂಡಿತ್ತು 45 50% ಎದ್ದಿತ್ತು ಆದರೆ ಈಗ ನಿಧಾನಕ್ಕೆ ಮಾರ್ಕೆಟ್ ನಲ್ಲಿ ಕರೆಕ್ಷನ್ ಆಗ್ತಾ ಇದೆ ತಜ್ಞರ ಪ್ರಕಾರ ಚಿನ್ನದ ರೇಟ್ ಅನಗತ್ಯವಾಗಿ ಹೆಚ್ಚಾಗಿತ್ತು ಅಂದ್ರೆ ಚಿನ್ನದ ರೇಟ್ ಆಕ್ಚುವಲ್ ಎಷ್ಟಿರಬೇಕಾಗಿತ್ತು ಅದಕ್ಕಿಂತ ಹೆಚ್ಚಾಗಿತ್ತು ಬಬಲ್ ಕ್ರಿಯೇಟ್ ಆಗಿತ್ತು ನಿಜವಾಗಲೂ ಚಿನ್ನದ ಬೇಡಿಕೆಯಲ್ಲಿ ಏರಿಕೆ ಏನು ಆಗಿರಲಿಲ್ಲ ಆತಂಕದಲ್ಲಿ ಎಲ್ಲರೂ ಇನ್ವೆಸ್ಟ್ಮೆಂಟ್ಗೆ ಚಿನ್ನದ ಕಡೆ ಮುಖ ಮಾಡಿದ್ದರಿಂದ ಸೆಂಟ್ರಲ್ ಬ್ಯಾಂಕ್ಗಳು ಗೆಬಿರಿ ಗೆವರಿ ರಾಶಿ ಹಾಕೊಂಡಿದ್ದರಿಂದ ಆರ್ಟಿಫಿಷಿಯಲ್ ಅಭಾವ ಸೃಷ್ಟಿಯಾಗಿತ್ತು ಕೃತಕವಾಗಿ ಆದೀಗ ನ್ಯಾಚುರಲ್ ಆಗಿ ಕರೆಕ್ಷನ್ ಆಗ್ತಾ ಇದೆ ಅಂತ ತಜ್ಞರು ಹೇಳ್ತಿದ್ದಾರೆ. ಸ್ನೇಹಿತರೆ ಇದೊಂದು ಮಾರ್ಕೆಟ್ನ ಮೂಲ ಸ್ವರೂಪ ಸ್ಟಾಕ್ ಇರಲಿ ಕಮಾಡಿಟಿ ಇರಲಿ ಅಥವಾ ಯಾವುದೇ ಆಸೆಟ್ ಆಗಿರಲಿ ಆರ್ಟಿಫಿಷಿಯಲ್ ಕಾರಣಗಳಿಂದ ಬೆಲೆ ಹೆಚ್ಚಾಗಿದ್ರೆ ಸಮಯ ಸಾಗದಂತೆ ಮಾರ್ಕೆಟ್ ಆ ತಪ್ಪನ್ನ ಸರಿಪಡಿಸಿಕೊಳ್ಳುತ್ತೆ. ಅದೇ ರೀತಿ ಈಗ ಗೋಲ್ಡ್ ಕೂಡ ಕರೆಕ್ಟ್ ಆಗ್ತಾ ಇದೆ. ಪ್ರಾಫಿಟ್ ಬುಕಿಂಗ್ ಸ್ನೇಹಿತರೆ ಸಾಮಾನ್ಯವಾಗಿ ಜನರು ಚಿನ್ನದ ರೇಟ್ ಹೆಚ್ಚಾಗುತ್ತೆ ಅಂತ ಗೋಲ್ಡ್ ಖರೀದಿ ಮಾಡ್ತಾರೆ. ಮಕ್ಕಳ ಮದುವೆಗೆ ಅಂತ ಈಗಲೇ ಚಿನ್ನ ಖರೀದಿ ಮಾಡೋಣ ಅನ್ನೋರು ಹೆಚ್ಚಿನ ಸಂಖ್ಯೆನಲ್ಲಿ ಇರ್ತಾರೆ. ಆದರೆ ದೊಡ್ಡ ದೊಡ್ಡ ಕಂಪನಿಗಳು, ಬ್ಯಾಂಕ್ಗಳು, ಇನ್ವೆಸ್ಟರ್ಸ್ ಹೂಡಿಕೆಗಂತ ಗೋಲ್ಡ್ ಮೇಲೆ ಹಾಕ್ತಾರೆ.

ಅದೇ ರೀತಿ ದೊಡ್ಡ ಸಂಖ್ಯೆಯ ಜನ ಕಳೆದೆರಡು ವರ್ಷದಲ್ಲಿ ಚಿನ್ನಕ್ಕೆ ಮುಗಿ ಬಿತ್ತಿದ್ರು. ಈಗ ಗೋಲ್ಡ್ ಇಟಿಎಫ್ ಗಳಿಂದಾಗಿ ಎಲ್ಲರೂ ಕೂಡ ದಿನನು ಇಷ್ಟಿಷ್ಟು ಗೋಲ್ಡ್ ಇಟಿಎಫ್ ಗಳನ್ನ ತಗೊಳೋದ ಅಭ್ಯಾಸ ಶುರುವಾಗ್ತಿದೆ ಭಾರತದಲ್ಲೂ ಕೂಡ ಸೋ ಏನಾಯ್ತು ಎಲ್ಲರಿಗೂ ಕೂಡ ಲಾಭ ಬಂತು ಅದರಲ್ಲಿ ಈಗ ಸಿಕ್ಕಾಪಟ್ಟೆ ಚಿನ್ನದ ಹೂಡಿಕೆ ಮಾಡಿ ಪ್ರಾಫಿಟ್ ಕೂಡ ಮಾಡ್ಕೊಂಡಿದ್ದಾರೆ ಅದನ್ನ ಬುಕ್ ಮಾಡಬೇಕಲ್ಲ ಪ್ರಾಫಿಟ್ ನ ರಿಯಲೈಸ್ ಮಾಡ್ಕೋಬೇಕಲ್ಲ ಸೋ ಒಂದಷ್ಟು ಸೇಲ್ ಮಾಡೋಕು ಕೂಡ ಶುರು ಮಾಡಿದ್ದಾರೆ ಈ ಒಂದು ವರ್ಷದಲ್ಲಿ ಚಿನ್ನದ ಇನ್ವೆಸ್ಟ್ಮೆಂಟ್ ವ್ಯಾಲ್ಯೂ 60 ರಿಂದ 65% ಜಂಪ್ ಆಗಿತ್ತು ಇನ್ನು ಏರಿಕೆ ಆಗುತ್ತಾ ಅಂತ ಕಾಯ್ತಾ ಹೋದ್ರೆ ಹೇಳೋಕೆ ಆಗಲ್ಲ ಕರೆಕ್ಷನ್ ಶುರುವಾಗಿದೆ ಹಾಗಾಗಿ ಎಲ್ಲರೂ ಕೂಡ ಒಂದ ಸಲಿ ಡೌನ್ವರ್ಡ್ ಟ್ರೆಂಡ್ ಶುರು ಆಯ್ತು ಅಂದ್ರೆ ಎಲ್ಲರೂ ಕೂಡ ಮಾರ್ಕೊಂಡು ಪ್ರಾಫಿಟ್ ಬುಕ್ ಮಾಡ್ಕೊಳೋಕೆ ಶುರು ಮಾಡ್ತಾರೆ ಅದರಿಂದ ಇನ್ನಷ್ಟು ಕುಸಿ ಸಿತ ಆಗ್ತಾ ಹೋಗುತ್ತೆ ಚಿನ್ನ ಬೆಳ್ಳಿ ಮೇಲೆ ದೀಪಾವಳಿ ಎಫೆಕ್ಟ್ ಹಬ್ಬ ಬಂದ್ರೆ ಸಾಕು ನಾವು ಭಾರತೀಯರು ಚಿನ್ನದ ಅಂಗಡಿ ಮೇಲೆ ಮುಗಿ ಬೀಳ್ತೀವಿ ಮೊತ್ತಿಗೆ ಹಾಕ್ತೀವಿ ಅಷ್ಟಿಷ್ಟು ಅಂತಲ್ಲ ಗ್ರಾಮ ಚಿನ್ನ ಆದರೂ ಕೂಡ ಖರೀದಿ ಮಾಡಬೇಕು ಅಂತ ಹಾಡಿತೀವಿ ಯಾವಾಗ ಭಾರತದಲ್ಲಿ ಹಬ್ಬದ ಸೀಸನ್ ಶುರುವಾಗುತ್ತೋ ಅಲ್ಲಿಗೆ ಚಿನ್ನದ ಬೇಡಿಕೆ ಕೂಡ ಹೆಚ್ಚಾಗುತ್ತೆ.

ದಸರಾ ದೀಪಾವಳಿ ಅಂತಹ ಸಾಲು ಸಾಲು ಹಬ್ಬ ಬಂದಾಗ ಚಿನ್ನ ಖರೀದಿಯ ಬರಾಟೆ ಜೋರಾಗಿರುತ್ತೆ ಆದರೆ ಈಗ ಹಬ್ಬ ಮುಗಿದಿರೋದ್ರಿಂದ ಖರೀದಿ ಕೂಡ ಕಮ್ಮಿಯಾಗಿದೆ ಹೀಗಾಗಿ ಹಬ್ಬದ ಟೈಮ್ನಲ್ಲಿ ಕ್ರಿಯೇಟ್ ಆದ ಡಿಮ್ಯಾಂಡ್ ಕೂಡ ಕುಸ್ತಿದೆ ಸಪ್ಲೈ ಜಾಸ್ತಿ ಆಗ್ತಿದೆ ಸೇಲ್ ಮಾಡ್ತಿರೋರಿಂದ ಚಿನ್ನ ಬೆಳ್ಳಿ ದರಗಳು ಕೂಡ ಸಹಜ ಸ್ಥಿತಿಗೆ ಮರಳುತಾ ಇವೆ ಅಂತ ತಜ್ಞವರು ಹೇಳ್ತಾ ಇದ್ದಾರೆ. ಇನ್ನು ಕುಸಿಯುತ ಎಲ್ಲರ ಕಣ್ಣು ಜಾಗತಿಕ ಸೆಂಟ್ರಲ್ ಬ್ಯಾಂಕ್ ಗಳ ಮೇಲಿವೆ ಯಾಕಂದ್ರೆ ಈ ಬ್ಯಾಂಕ್ ಗಳು ಏನು ಮಾಡ್ತಾವೆ ಅನ್ನೋದರ ಮೇಲೆ ಚಿನ್ನದ ರೇಟ್ ಮುಂದಿನ ದಿನಗಳಲ್ಲಿ ಏನಾಗುತ್ತೆ ಅನ್ನೋದು ಡಿಸೈಡ್ ಆಗುತ್ತೆ. ಅದರಲ್ಲೂ ಅಮೆರಿಕದ ಫೆಡರಲ್ ಬ್ಯಾಂಕ್ ಏನು ಮಾಡುತ್ತೆ ಅನ್ನೋದು ಕೂಡ ಇಂಪಾರ್ಟೆಂಟ್. ಒಂದು ವೇಳೆ ಅಮೆರಿಕ ಏನಾದ್ರು ಇಂಟರೆಸ್ಟ್ ರೇಟ್ ಕಟ್ ಮಾಡಿದ್ರೆ ಮತ್ತೆ ಚಿನ್ನದ ರೇಟ್ ಏರಿಕೆ ಆಗೋ ಸಾಧ್ಯತೆ ಇರುತ್ತೆ ಅಂತ ಕೆಲವರು ಹೇಳ್ತಿದ್ದಾರೆ ಯಾಕಂದ್ರೆ ಇಂಟರೆಸ್ಟ್ ರೇಟ್ ಇಳಿಸೋದ್ರಿಂದ ಅಮೆರಿಕದ ಬಾಂಡ್ಗಳು ಜಾಸ್ತಿ ಲಾಭ ತಂದುಕೊಡಲ್ಲ ಅಟ್ರಾಕ್ಟಿವ್ ಆಗಲ್ಲ ಆಗ ಜನ ಗೋಲ್ಡ್ ಕಡೆ ಬರಬಹುದು ಅಂತ ಆದ್ರೆ ಯಾವುದರಲ್ಲಾದರೂ ಗೋಲ್ಡ್ ಆಗ್ಲಿ ಯಾವುದರಲ್ಲಾದರೂ ಜನ ಯಾವಾಗ ಬರ್ತಾರೆ ಓಕೆ ಇಂಟರೆಸ್ಟ್ ರೇಟ್ ಕಮ್ಮಿ ಅಮೆರಿಕದಲ್ಲಿ ಅಂತ ಹೇಳಿ ಗೋಲ್ಡ್ ಕಡೆ ಬರಬೇಕು ಅಂದ್ರೆ ಗೋಲ್ಡ್ ಅಲ್ಲಿ ಜಾಸ್ತಿ ರಿಟರ್ನ್ಸ್ನ ಎಕ್ಸ್ಪೆಕ್ಟೇಷನ್ ಇರಬೇಕು ಗೋಲ್ಡ್ ಡೌನ್ವರ್ಡ್ ಹೋಗ್ತಾ ಇದೆ ಅಂತ ಹೇಳಿದ್ರೆ ನೀವು ಎಂಟರ್ ಆಗ್ತಿರೋ ಪಾಯಿಂಟ್ ಆಲ್ರೆಡಿ ಪೀಕ್ ಅಂತ ಹೇಳಿದ್ರೆ ಇನ್ನ ಮುಂದೆ ಇನ್ನು ಎಷ್ಟಕ್ಕೆ ಇರುತ್ತಪ್ಪ ಅನ್ನೋದರ ಕ್ಲಾರಿಟಿ ಇಲ್ಲ ಇನ್ ಡೌನೇ ಆಗ್ತಾ ಹೋಗಬಹುದು ಅನ್ನೋ ಆತಂಕ ಇದ್ರೆ ಅವಾಗ ಗೋಲ್ಡ್ ಕಡೆ ಹೋಗದೆ ಇರೋ ಚಾನ್ಸಸ್ ಇರುತ್ತೆ.

ನಾರ್ಮಲ್ ಕಂಡೀಷನ್ ಅಲ್ಲಿ ಆಗಿದ್ರೆ ಅಮೆರಿಕದ ಫೆಡರಲ್ ಬ್ಯಾಂಕ್ ಕಟ್ ಮಾಡಿದಾಗ ಇಂಟರೆಸ್ಟ್ ರೇಟ್ ಕಟ್ ಮಾಡಿದಾಗ ಯುಶುವಲ್ಲಿ ಚಿನ್ನ ಜಾಸ್ತಿ ಆಗಬೇಕು ಅನ್ನೋ ನಿರೀಕ್ಷೆ ಇಟ್ಕೊಳ್ಳಲಾಗ್ತಿತ್ತು ಆದರೆ ಈಗಿನ ಸಿಚುವೇಶನ್ ಆಲ್ರೆಡಿ ಪೀಕ್ ಅಲ್ಲಿ ಇರೋದ್ರಿಂದ ಆ ಸಾಧ್ಯತೆ ಕೂಡ ಕಷ್ಟ ಗೋಲ್ಡ್ ಮತ್ತೆ ಸಿಕ್ಕಾಪಟ್ಟೆ ಏರಿಕೆ ಆಗುತ್ತಿದ್ದರಿಂದ ಅಂತ ಈ ಕ್ಷಣಕ್ಕೆ ಅನಿಸ್ತಾ ಇಲ್ಲ ಆದರೆ ಮತ್ತೆ ಜಗತ್ತಲ್ಲಿ ಯುದ್ಧಗಳು ಸ್ಪೋಟ ಆಗೋದು ಟ್ರಂಪ್ ಟ್ರೇಡ್ ವಾರ್ ಹುಚ್ಚಬಟ್ಟೆ ಜಾಸ್ತಿ ಮಾಡೋದು ಯುಕ್ರೇನ್ ಯುದ್ಧ ಕಮ್ಮಿ ಆಗೋದರ ಬದಲಿ ಜಾಸ್ತಿ ಆಗೋದು ಇಸ್ರೇಲ್ ಇನ್ನೊಂದು ಯುದ್ಧವನ್ನ ಶುರು ಮಾಡೋದು ಭಾರತ ಪಾಕಿಸ್ತಾನ್ ನಡುವೆ ಸಂಘರ್ಷ ಶುರುವಾಗೋದು ಅಮೆರಿಕಾ ವೆನಿಸುವೆಲಾ ಯುದ್ಧ ಶುರುವಾಗೋದು ಇಂತದ್ದು ಏನಾದ್ರೂ ಆಯ್ತು ಅಂತ ಹೇಳಿದ್ರೆ ಅವಾಗ ಚಿನ್ನದ ರೇಟ್ ಮತ್ತೆ ಜಾಸ್ತಿ ಆಗೋ ಸಾಧ್ಯತೆ ಇರುತ್ತೆ ಇಲ್ಲ ಅಂತ ಹೇಳಿದ್ರೆ ಎಲ್ಲ ಉಲ್ಟಾ ಆಗ್ತಿದೆ ಇದರದ್ದು ಅಂತ ಹೇಳಿದ್ರೆ ಅಂದ್ರೆ ಯುದ್ಧಗಳ ಆಗ್ತಿಲ್ಲ ಬದಲಿಗೆ ಶಾಂತಿ ಸ್ಥಾಪನೆ ಆಗ್ತಾ ಇದೆ ಯುದ್ಧಗಳು ಕಮ್ಮಿ ಆಗ್ತಿದೆ ಇರೋ ಯುದ್ಧಗಳು ಕೂಡ ಕೂಲ್ ಡೌನ್ ಆಗ್ತಿದ್ದಾವೆ ಟ್ರಂಪ್ ಹುಚ್ಚಾಟ ಕಮ್ಮಿ ಆಗ್ತಿದೆ ಟ್ಯಾರಿಫ್ ವಾರ್ ಕಮ್ಮಿ ಆಗ್ತಾ ಇದೆ ಜಾಗತಿಕವಾಗಿ ಆರ್ಥಿಕ ಚಟುವಟಿಕೆ ಗರಿಗಿದರುತಾ ಇದೆ ಅಂತ ಹೇಳಿದ್ರೆ ಅವಾಗ ಚಿನ್ನದ ಬೆಲೆ ಡೌನ್ ಆಗ್ತಾ ಹೋಗೋ ಸಾಧ್ಯತೆನೇ ಜಾಸ್ತಿ ಅಂತ ತಜ್ಞರು ಹೇಳ್ತಾ ಇದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments