ವಿಕಿಪೀಡಿಯಾ ಸ್ಮಾರ್ಟ್ ಫೋನ್ ಇರೋ ಪ್ರತಿಯೊಬ್ಬರು ಕೂಡ ಇನ್ಫಾರ್ಮೇಷನ್ ಕಲೆಕ್ಟ್ ಮಾಡ್ತಿರೋ ಎನ್ಸೈಕ್ಲೋಪೀಡಿಯಾ ಜಗತ್ತಲ್ಲಿ ಅತಿ ಹೆಚ್ಚು ಭೇಟಿಕೊಡು ಆನ್ಲೈನ್ ಪ್ಲಾಟ್ಫಾರ್ಮ್ ಚಾಟ್ ಜಿಪಿಟಿ ಬರೋ ತನಕ ಕೂಡ ಜಗತ್ತಲ್ಲಿ ಅತಿ ಹೆಚ್ಚು ಜನ ಡೈರೆಕ್ಟಆಗಿ ಭೇಟಿ ಕೊಡ್ತಾ ಇದ್ದ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಒಂದಾಗಿತ್ತು. ಇವಾಗ ಚಾಟ್ ಜಿಪಿಟಿ ನಲ್ಲಿ ಸರ್ಚ್ ಮಾಡಿದ್ರು ಕೂಡ ವಿಕಿಪೀಡಿಯಾದಿಂದಲೂ ಎದ್ದುಕೊಂಡು ಮಾಹಿತಿಯನ್ನ ಕೊಡುತ್ತೆ ಅದು. ಈಗ ಇದೇ ಸಾಗರದಲ್ಲಿ ಸೈಕ್ಲೋನ್ ಎಬ್ಬಿಸೋ ಕೆಲಸವನ್ನ ಮಸ್ಕ್ ಮಾಡಿದ್ದಾರೆ. ಇಲಾನ್ ಮಸ್ಕ್. ವಿಕಿಪೀಡಿಯಾಗೆ ಪ್ರತಿಯಾಗಿ ಮಸ್ಕ್ ಗ್ರೋಕಿಪೀಡಿಯಾವನ್ನ ಲಾಂಚ್ ಮಾಡಿದ್ದು ಆರಂಭದಲ್ಲೇ ಭರ್ಜರಿ ರೆಸ್ಪಾನ್ಸ್ ಕೂಡ ಪಡ್ಕೊಂಡಿದೆ. ವಿಕಿಪೀಡಿಯಾ ಗಿಂತ ಇದು 10 ಪಟ್ಟು ಬೆಟರ್ ಅಂತ ಹೇಳಲಾಗ್ತಿದೆ. ಎಐ ಯನ್ನ ಕೂಡ ಅಳವಡಿಸಲಾಗಿದೆ. ಹಾಗಿದ್ರೆ ಫ್ಯೂಚರ್ ನಲ್ಲಿ ವಿಕಿಪೀಡಿಯಾವನ್ನ ಮುಗಿಸಿಬಿಡುತ್ತಾ ಗ್ರೋ ವಿಕಿಪೀಡಿಯಾ ಅಂತದ್ದು ಏನಿದೆ ಇದರಲ್ಲಿ ಹಾಗಾದ್ರೆ ಸ್ಪೆಷಾಲಿಟಿ ಏನು?.
ಗ್ರೋಕಿಪೀಡಿಯಾ ವಿಕಿಪೀಡಿಯಾ ಬಗ್ಗೆ ಸಿಕ್ಕಾಪಟ್ಟೆ ಟಾರ್ಗೆಟ್ ಮಾಡಿ ಮಸ್ಕ್ ಬೈತಾ ಇದ್ರು ಯಾವಾಗ್ಲೂ ಕೂಡ ಟೀಕೆ ಮಾಡ್ತಿದ್ರು 2023 ರಲ್ಲಿ ಇದು ಎಡಪಂತಿಯರ ಕಂಟ್ರೋಲ್ ಇರೋ ಪ್ಲಾಟ್ಫಾರ್ಮ್ ಅಂತ ಕರೆದಿದ್ರು ಅಲ್ದೆ ಕೆಲ ದಿನಗಳ ಹಿಂದೆ ಇದಕ್ಕೆ ಪಾಠ ಕಲಿಸ್ತೀನಿ ಅಂತ ಹೇಳಿ ಪೋಸ್ಟ್ ಹಾಕಿದ್ರು ವಿಕಿಪೀಡಿಯಾ ಹೆಸರನ್ನ ಡಿಕಿಪೀಡಿಯಾ ಅಂತ ಬದಲಾಯಿಸಿ ಹೀಗೆ ಮಾಡಿದ್ರೆ ಒಂದು ಬಿಲಿಯನ್ ಡಾಲರ್ ಕೊಡ್ತೀನಿ ಅಂತ ಹೇಳಿ ಕಾಲು ಹಿಡಿದಿದ್ರು ಅದಾದ ನಂತರ ಈಗ ಕಡೆಗೂ ಕೂಡ ತಮ್ಮದೇ ಹೊಸ ಎನ್ಸೈಕ್ಲೋಪೀಡಿಯಾವನ್ನ ಲಾಂಚ್ ಮಾಡಿದ್ದಾರೆ 2025ರ ಅಕ್ಟೋಬರ್ 27ನೇ ತಾರೀಕು ಇದು ಲಭ್ಯ ಆಗಿತ್ತು ಮೊದಲ ದಿನವೇ ಭರ್ಜರಿ ರೆಸ್ಪಾನ್ ಪಾಯಿಂಟ್ ಸಿಕ್ಕಿದೆ. ಒಂದೇ ದಿನಕ್ಕೆ 9 ಲಕ್ಷ ಆರ್ಟಿಕಲ್ಸ್ ಆರಂಭದಲ್ಲೇ ಕ್ರಾಶ್ ಆಯ್ತು. ಎಸ್ ಇಷ್ಟೊಂದು ಪ್ರಮಾಣದಲ್ಲಿ ಇನ್ಫಾರ್ಮೇಷನ್ ಫೀಡ್ ಆದ ಪರಿಣಾಮ ಮೊದಲ ದಿನವೇ ಕ್ರಾಶ್ ಆಯ್ತು. ಹಾಗಂತ ಹಾಗೆ ಕ್ರಾಶ್ ಆಗಿ ಉಳಿಕೊಳ್ತು ಅಂತಲ್ಲ ಸರಿಯಾಯ್ತು ಆಮೇಲೆ ಹೆಚ್ಚಿನ ಬಳಕೆದಾರರು ದಿಡೀರ ಎಂಟ್ರಿ ಆಗಿದ್ದರಿಂದ ಆ ರೀತಿ ಆಗಿತ್ತು ಅಷ್ಟೇ ಆರಂಭದಲ್ಲಿ. ಹಾಗೆ ಗ್ರೋಕಿಪೀಡಿಯಾದ ಬೀಟ ವರ್ಷನ್ 0.1 ಈಗ ಲಭ್ಯ ಇದೆ ಇದು ವಿಕಿಪೀಡಿಯಾ ಗಿಂತ ಉತ್ತಮವಾಗಿ ಕೆಲಸ ಮಾಡುತ್ತೆ ಅಂತ ಮಸ್ಕ್ ಹೇಳ್ಕೊಂಡಿದ್ದಾರೆ.ವರ್ಕ್ ಆಗೋದು ಹೇಗೆ ಇದು ಗೊತ್ತಾಗಬೇಕು ಅಂದ್ರೆ ವಿಕಿಪೀಡಿಯಾ ಹೇಗೆ ವರ್ಕ್ ಆಗುತ್ತೆ ಅಂತ ತಿಳ್ಕೊಬೇಕು. ನಿಮಗೆಲ್ಲ ಗೊತ್ತಿರೋ ಹಾಗೆ ವಿಕಿಪೀಡಿಯಾ ಒಂದು ಓಪನ್ ಸೋರ್ಸ್ ಆನ್ಲೈನ್ ಎನ್ಸೈಕ್ಲೋಪೀಡಿಯಾ ಇದಕ್ಕೆ ಇಂಟರ್ನೆಟ್ ಆಕ್ಸೆಸ್ ಇರೋ ಯಾರು ಬೇಕಾದರೂ ವಿಸಿಟ್ ಮಾಡಬಹುದು ಓದಬಹುದು ಆರ್ಟಿಕಲ್ಸ್ ನ ಕ್ರಿಯೇಟ್ ಮಾಡಬಹುದು ಎಡಿಟ್ ಮಾಡಬಹುದು ಅಪ್ಡೇಟ್ ಕೂಡ ಮಾಡಬಹುದು ಇದಕ್ಕೆ ಯಾವುದೇ ನಿರ್ಬಂಧ ಇಲ್ಲ.
ಈ ವಿಕಿಪೀಡಿಯಾವನ್ನ ವಿಕಿ ಟೆಕ್ನಾಲಜಿ ಮೇಲೆ ಡೆವಲಪ್ ಮಾಡಲಾಗಿದೆ ಹೀಗಾಗಿ ಇಲ್ಲಿ ಮಾಡೋ ಪ್ರತಿ ಎಡಿಟ್ ಕೂಡ ಸೇವ್ ಆಗುತ್ತೆ ಹಾಗೆ ಹಳೆ ವರ್ಷನ್ನ ಬೇಕಾದರೂ ರಿಸ್ಟೋರ್ ಮಾಡಬಹುದು ಇದರ ಪರಿಣಾಮ ಯಾವುದೇ ಇನ್ಫಾರ್ಮೇಷನ್ ಕೂಡ ಪರ್ಮನೆಂಟ್ ಆಗಿ ಅಳಿಸಕೆ ಆಗಲ್ಲ ಹಾಗೆ ನಿರಂತರ ಮಾಹಿತಿಗಳ ಲಭ್ಯದೆ ಇರೋದ್ರಿಂದ ವಿಕಿಪೀಡಿಯಾ ಅಪ್ಡೇಟೆಡ್ ಹಾಗೂ ಹೊಸ ಹೊಸ ಮಾಹಿತಿಯನ್ನ ಕೊಡೋಕ್ಕೆ ಸಾಧ್ಯ ಆಗ್ತಿದೆ. ಸದ್ಯಕ್ಕೆ 300ಕ್ಕೂ ಅಧಿಕ ಭಾಷೆಯಲ್ಲಿ ವಿಕಿಪೀಡಿಯಾ ಲಭ್ಯ ಇತ್ತು. ಇದೇ ತರನೇ ಈಗ ಮಸ್ಕರ ಗ್ರೋಕಿಪೀಡಿಯಾ ಕೂಡ ಕೆಲಸ ಮಾಡೋಕೆ ಸ್ಟಾರ್ಟ್ ಮಾಡಿದೆ. ಗ್ರೋಕಿಪೀಡಿಯಾದಲ್ಲಿ AI ಸರ್ವರ್ ತರನು ಕೆಲಸ. ನೋಡಿ ಈಗ ವಿಕಿಪೀಡಿಯಾಗೆ ಮ್ಯಾನುವಲ್ ಆಗಿ ಎಲ್ಲಾ ಆರ್ಟಿಕಲ್ ಪಬ್ಲಿಷ್ ಮಾಡಬೇಕು. ಆದರೆ ಇಲ್ಲಿ ಎಐ ಅಳವಡಿಸಲಾಗಿದೆ.ಎಸ್ ನ್ಯೂಸ್ ಚಾನೆಲ್ಸ್ ವೆಬ್ಸೈಟ್ ಹೀಗೆ ಬೇರೆ ಬೇರೆ ಆನ್ಲೈನ್ ಪ್ಲಾಟ್ಫಾರ್ಮ್ ಗಳಿಂದ ಇದು ಸುದ್ದಿಯನ್ನ ತಾನೇ ಸಂಗ್ರಹಿಸಿಕೊಂಡುಬಿಡುತ್ತೆ.
ಅಷ್ಟೇ ಅಲ್ಲ ಇದರಲ್ಲಿ ಮಸ್ಕರ ಗ್ರಾಕ್ ಎಐ ಚಾಟ್ ಬಾಟ್ನ್ನ ಯೂಸ್ ಮಾಡಲಾಗ್ತಾ ಇದ್ದು. ಅದು ಡೇಟಾವನ್ನ ಓದಿ ಅನಲೈಸ್ ಮಾಡಿ ಒಂದು ಪರ್ಫೆಕ್ಟ್ ಸ್ಟ್ರಕ್ಚರ್ ನಲ್ಲಿ ಅವುಗಳನ್ನ ಜೋಡಿಸಿಕೊಳ್ಳೋ ಕೆಲಸ ಮಾಡುತ್ತೆ. ಹಾಗೆ ಪ್ರತಿ ದೊಡ್ಡ ದೊಡ್ಡ ಟಾಪಿಕ್ಸ್ ಉದಾಹರಣೆಗೆ ಯುಕ್ರೇನ್ ವಾರ್, ಕ್ವಾಂಟಮ್ ಫಿಜಿಕ್ಸ್ ಇವುಗಳ ಚಿಕ್ಕ ಸಮ್ಮರಿಗಳನ್ನ ತಾನೇ AI ಮೂಲಕ ತಾನೇ ಜನರೇಟ್ ಮಾಡ್ಕೊಳ್ಳುತ್ತೆ. ಇದರಿಂದ ವಿಕಿಪೀಡಿಯಾಗೆ ಕಂಪೇರ್ ಮಾಡಿದ್ರೆ ಇದು ಒಂತರ ಸ್ವಂತ ಚಿಲುಮೆ ಇದು. ತನಗೆ ಬೇಕಾಗಿದ್ದನ್ನ ತಾನೇ ಉತ್ಪತ್ತಿ ಮಾಡ್ಕೊಂಡು ಚೆಲ್ತಾ ಇರುತ್ತೆ ಇದು ಆ ರೀತಿ ಇದು. ಜೊತೆಗೆ ಗ್ರೋಕಿಪೀಡಿಯಾ ಒಂದು ಸರ್ವರ್ ರೀತಿನು ಕೆಲಸ ಮಾಡುತ್ತೆ. ಆದರೆ ನೀವು ಗ್ರಾಕ್ ಎಐ ಬಳಸುವಾಗ ಅದಕ್ಕೆ ಪ್ರಶ್ನೆ ಕೇಳಿದಾಗ ಅದು ಗ್ರೋಕಿಪೀಡಿಯಾದಲ್ಲಿನ ವೆರಿಫೈಡ್ ಮಾಹಿತಿಯನ್ನ ಒದಗಿಸುತ್ತೆ. ಇದರಿಂದ ಗ್ರಾಕ್ ಎಐ ಕೂಡ ಇನ್ನೂ ಇಂಪ್ರೂವ್ ಆಗೋದಕ್ಕೆ ಸಾಧ್ಯ ಆಗುತ್ತೆ. ಜೊತೆಗೆ ಇದರಲ್ಲಿ ಯೂಸರ್ಸ್ ಫೀಡ್ಬ್ಯಾಕ್ ಅನ್ನ ಕೂಡ ಅಳವಡಿಸಿದ್ದಾರೆ. ಅಂದ್ರೆ ಗ್ರೋಕಿಪೀಡಿಯಾದಲ್ಲಿ ತಪ್ಪಾದ ಅಥವಾ ಪಕ್ಷಪಾತದಿಂದ ಕೂಡಿದ ಮಾಹಿತಿ ಇದೆ ಅಂತ ಅನ್ನಿಸಿದ್ರೆ ಡೈರೆಕ್ಟಆಗಿ ರಿಪೋರ್ಟ್ ಮಾಡಬಹುದು. ಇದರಿಂದ ಗ್ರೋಕಿಪೀಡಿಯಾದ ಅಕ್ಯುರೆಸಿಯನ್ನ ಇಂಪ್ರೂವ್ ಮಾಡೋಕೆ ಸಾಧ್ಯ ಆಗುತ್ತೆ. ಇನ್ನು ಮುಂದಿನ ದಿನಗಳಲ್ಲಿ ಯಾವ ಸೋರ್ಸ್ ನಂಬಿಕೆಗೆ ಅರ್ಹವಾಗಿದೆ ಅಂತ ಸಿಸ್ಟಮ್ ಇನ್ನಷ್ಟು ಕಲತುಕೊಳ್ತಾ ಹೋಗುತ್ತೆ ಇದು ಬರ್ತಾ ಬರ್ತಾ ಇಂಪ್ರೂವ್ನೇ ಆಗ್ತಾ ಹೋಗುತ್ತೆ ಚೆನ್ನಾಗೆ ಆಗ್ತಾ ಹೋಗುತ್ತೆ ಅಂತಎಐ ಕಂಪನಿ ಹೇಳಿದೆ ಮಸ್ಕರ ಕಂಪನಿ.
ವಿಕಿಪೀಡಿಯಾದಲ್ಲಿ ಮನುಷ್ಯರೇ ಎಡಿಟ್ ಮಾಡಬೇಕಾಗಿರೋದ್ರಿಂದ ಚೂರು ಡಿಲೇ ಆಗಬಹುದು ಆದರೆ ಗ್ರೋಕಿಪೀಡಿಯಾ ತನ್ನ ಎಐ ನಿಂದ ರಿಯಲ್ ಟೈಮ್ ನಲ್ಲಿ ತನಗೆ ತಾನೇ ಅಪ್ಡೇಟ್ ಹಾಕೊಳ್ತಾ ಹೋಗುತ್ತೆ ಅಲ್ದೆ ಲ್ಯಾಂಗ್ವೇಜ್ ಸ್ಟೈಲ್ ಡಿಫರೆಂಟ್ ಆಗಿ ಬೇಕು ಅಂದ್ರು ಕೂಡ ಗ್ರೋಕಿಪೀಡಿಯಾ ಉಗ್ಗಿಕೊಳ್ಳುತ್ತೆ ಅಂದ್ರೆ ವಿಕಿಪೀಡಿಯಾದಲ್ಲಿ ಮಾಹಿತಿ ಎನ್ಸೈಕ್ಲೋಪಿಡಿಕ್ ಮತ್ತು ಫಾರ್ಮಲ್ ಆಗಿರುತ್ತವೆ ಆದರೆ ಇಲ್ಲಿ ಸಂವಾದ ಮಾಡಿದ ರೀತಿ ಉತ್ತರವನ್ನ ಕೊಡುತ್ತೆ ನಿಮಗೆ ಚಾಟ್ ಜಿಬಿಟಿ ಯಲ್ಲಿ ಹೇಗೆ ಉತ್ತರ ಸಿಗತಾ ಇದೆಯೋ ಹಾಗೆ ಕೊಡುತ್ತೆ ಅಲ್ದೇ ಸಮ್ಮರೈಸ್ ಎಕ್ಸ್ಪ್ಲೇನರ್ ಈ ರೀತಿ ನಿಮಗೆ ಬೇಕಾದ ಹಾಗೆ ಅದನ್ನ ಚೇಂಜ್ ಮಾಡಿ ಕೊಡುತ್ತೆ ಈಎಐ ಬಳಕೆಯನ್ನ ಮಸ್ಕ್ ತುಂಬಾ ಹೊಗಳಿದ್ದಾರೆ ಎಐ ಗೆ ಎಡಬಲ ಸಿದ್ಧಾಂತ ಇಲ್ಲ ಅದು ಮಾಹಿತಿಯನ್ನ ಮಾಹಿತಿ ರೀತಿ ಮಾತ್ರ ಕೊಡುತ್ತೆ ಹಂಗೆ ಕೊಡಬೇಕು ನಮ್ಮ ಗ್ರೋಕಿಪೀಡಿಯಾ ಅದನ್ನ ಮಾಡುತ್ತೆ ಅಂತ ಅವರು ಹೇಳ್ಕೊಂಡಿದ್ದಾರೆ ಹಾಗಿದ್ರೆ ಚಾಲೆಂಜ್ ಏನು ಮೊದಲನೆದು ಏನು ಗೊತ್ತಾ ಫ್ಯಾಕ್ಟ್ ಇದರಲ್ಲಿನ ಮಾಹಿತಿಯನ್ನ ಬ್ಲೈಂಡ್ ಆಗಿ ನಂಬಕಾಗಲ್ಲ ಯಾಕಂದ್ರೆ ಇದು ಕೂಡ ಇಂಟರ್ನೆಟ್ ಮೂಲಕವೇ ಮಾಹಿತಿಯನ್ನ ಗ್ರಾಬ್ ಮಾಡಿ ಅದನ್ನ ಅನಲೈಸ್ ಮಾಡಿ ಕೊಡೋದ್ರಿಂದ ನೇರ ನೇರ ನಂಬೋದು ಕಷ್ಟ ಹಾಗೆ ಲಿಮಿಟೆಡ್ ಹ್ಯೂಮನ್ ರಿವ್ಯೂ ಇದೆ ಅಂದ್ರೆ ಯಾವುದೇ ಮನುಷ್ಯರು ಎಡಿಟರ್ಸ್ ಇರೋದಿಲ್ಲ ಇದರಿಂದ ಈ ಗ್ರಾಕ್ ಭ್ರಮೆಗೆ ಒಳಗಾಗೋದು ಹಲಸಿನೇಷನ್ಗೆ ಒಳಗಾಗು ಸಾಧ್ಯತೆ ಇದ್ದೆ ಇರುತ್ತೆ. ಅಂದ್ರೆ ಒಂದು ವಿಚಾರದ ಮೇಲೆ ತಪ್ಪಾದ ಇಮ್ಯಾಜಿನೇಟಿವ್ ರೀತಿಯ ಉತ್ತರವನ್ನ ತಲೆಯ ಮೇಲೆ ಹೊಡೆದಂಗೆ ಸತ್ಯ ಹೇಳೋ ರೀತಿಯಲ್ಲಿ ಸುಳ್ಳು ಮಾಹಿತಿಯನ್ನ ಕೊಡೋದಿರುತ್ತಲ್ಲ ಎಐಗಳು ಆ ರೀತಿ ಎಡವಟ್ಟನ್ನ ಮಾಡ್ತಾವ ಸಲ ಆ ರೀತಿ ಆಗೋ ಅಪಾಯ ಇರುತ್ತೆ.
ಹಾಗೆ ಗ್ರೋಕಿಪೀಡಿಯಾವನ್ನ ಸದ್ಯಕ್ಕೆ ಆಫ್ಲೈನ್ ನಲ್ಲಿ ಬಳಸಕೆ ಆಗಲ್ಲ. ವಿಕಿಪೀಡಿಯಾವನ್ನ ಬೇಕಾದ್ರೆ ಆಪ್ ಡೌನ್ಲೋಡ್ ಮಾಡಕೊಂಡು ಆಫ್ಲೈನ್ ನಲ್ಲೂ ಕೂಡ ಒಂದಷ್ಟು ಮಟ್ಟಿಗೆ ಯೂಸ್ ಮಾಡಬಹುದು ಆದರೆ ಗ್ರೋಕಿಪೀಡಿಯಾದಲ್ಲಿ ಸದ್ಯಕ್ಕೆ ಆ ಫೀಚರ್ ಇಲ್ಲ. ಸೋ ಇದೆಲ್ಲವನ್ನ ಮೈಂಡ್ ಅಲ್ಲಿ ಇಟ್ಕೊಂಡು ಸ್ಪರ್ಧಾತ್ಮಕವಾಗಿ ಇದನ್ನ ಅಪ್ಡೇಟ್ ಮಾಡ್ತಾ ಹೋಗಬೇಕಾಗುತ್ತೆ. ಸದ್ಯ ಇದರ ಬಗ್ಗೆ ಪಾಸಿಟಿವ್ ಮತ್ತು ನೆಗೆಟಿವ್ ಎರಡು ರೀತಿಯ ಒಪಿನಿಯನ್ ಗಳಿದ್ದಾವೆ. ಆದರೆ ಇವೆಲ್ಲ ಆರಂಭಿಕ ಹೆಜ್ಜೆ ಮುಂದೆ ಸರಿ ಮಾಡ್ಕೊಂಡ್ರೆ ವಿಕಿಪೀಡಿಯಾಗೆ ಚಾಲೆಂಜರ್ ಆದರೂ ಆಗಬಹುದು ಆಲ್ರೆಡಿ ಚಾಟ್ ಜಿಬಿಟಿ ಚಾಲೆಂಜರ್ ಆಗಿ ಹೋಗಿದೆ. ಜೊತೆಗೆ ಆಗ್ಲೇ ಹೇಳಿದ ಹಾಗೆ ಅದು ಕೇವಲ ವಿಕಿಪೀಡಿಯಾ ಅಲ್ಲ ಜಗತ್ತಿನ ಎಲ್ಲಾ ಸೋರ್ಸ್ ನಿಂದಲೂ ಮಾಹಿತಿಯನ್ನ ಹೇಳಲು ಆಚೆ ಹಾಕಿ ಕೊಡೋ ಪ್ರಯತ್ನವನ್ನ ಮಾಡ್ತಿರೋದ್ರಿಂದಗೂಗಲ್ ನ ಜೆಮಿನೈ ಕೂಡ ಸಿಮಿಲರ್ ಕೆಲಸವನ್ನ ಮಾಡುತ್ತೆ. ಸೋ ಗ್ರಾಕಿಪೀಡಿಯಾ ಹೇಗೆ ಕೆಲಸ ಮಾಡುತ್ತೆ ಫ್ಯೂಚರ್ ನಲ್ಲಿ ಅಂತ ನೋಡಬೇಕು. ಅಂದಹಾಗೆ ಸ್ನೇಹಿತರೆ ವಿಕಿಪೀಡಿಯಾ ಶುರುವಾಗಿ 24 ವರ್ಷ ಆಗಿದೆ. 25ನೇ ವರ್ಷಕ್ಕೆ ಕಾಲಿಡೋ ಹೊತ್ತಿಗೆ ಕಾಲು ಶತಮಾನಕ್ಕೆ ಕಾಲಿಡೋ ಹೊತ್ತಿಗೆ ದೊಡ್ಡ ಚಾಲೆಂಜ್ ಅದರ ಅಸ್ತಿತ್ವಕ್ಕೆ ಈ ಎಐ ಚಾಟ್ ಬಾಟ್ಗಳ ರೂಪದಲ್ಲಿ ಈಗ ಎದುರಾಗಿದೆ. ವಿಕಿಪೀಡಿಯಾ ಸರ್ವೈವ್ ಆಗುತ್ತಾ ಅವರು ಇದೇ ತರ ಇದ್ರೆ ಇದೇ ಫಾರ್ಮ್ಯಾಟ್ ನಲ್ಲಿ ಇದ್ರೆ ವೆರಿ ಡಿಫಿಕಲ್ಟ್ ಡೈರೆಕ್ಟಆಗಿ ಹೋಗಿ ವಿಕಿಪೀಡಿಯಾ ಸರ್ಚ್ ಮಾಡೋರ ಸಂಖ್ಯೆ ಕಮ್ಮಿ ಆಗ್ತಾ ಹೋಗಬಹುದು ಮುಂದಿನ ದಿನಗಳಲ್ಲಿ. ಅವರು ಅಪ್ಡೇಟ್ ಆಗ್ತಾರಾ ನೋಡೋಣ ಏನ್ ಮಾಡ್ತಾರೆ ಅಂತ.


