Thursday, November 20, 2025
HomeLatest Newsಚಿನ್ನದ ಕಳ್ಳಸಾಗಣೆ ರಹಸ್ಯ – ಎಲ್ಲಿಂದ ಬರುತ್ತಿದೆ ಈ ಗೋಲ್ಡ್?

ಚಿನ್ನದ ಕಳ್ಳಸಾಗಣೆ ರಹಸ್ಯ – ಎಲ್ಲಿಂದ ಬರುತ್ತಿದೆ ಈ ಗೋಲ್ಡ್?

ಸರ್ಕಾರದ ಕಣ್ಣಿಗೆ ಮಣ್ಣು ಟನ್ ಗಟ್ಟಲೆ ಚಿನ್ನ ಕಳ್ಳ ಸಾಗಾಟ ಇದು ನಿಮಗೆ ಗೊತ್ತಿ ಗೊತ್ತಿಲ್ಲದ ಭಯಾನಕ ಲೋಕ ಸ್ನೇಹಿತರೆ ಚಿನ್ನ ಚಿನ್ನ ದರ ಏರ್ತಾ ಇದೆ ಚಿನ್ನ ದರ ಬೀಳ್ತಾ ಇದೆ ಆ ಚಿನ್ನ ಕಷ್ಟು ಈ ಚಿನ್ನಕ್ಕೆ ಇಷ್ಟು ಆ ಕ್ಯಾರೆಟ್ ಈ ಕ್ಯಾರೆಟ್ ಹೀಗೆ ಹೂಡಿಕೆದಾರಿಂದ ಸಾಮಾನ್ಯ ಜನರ ತನಕ ಎಲ್ಲರ ಬಾಯಲ್ಲೂ ಈಗ ಚಿನ್ನದ್ದೇ ಮಾತು ಆದರೆ ಸ್ನೇಹಿತರೆ ಇದೇ ಚಿನ್ನ ನಮ್ಮ ನಿಮ್ಮ ನಡುವೆ ಗುಪ್ತ ಗಾಮನಿಯಾಗಿ ಟನ್ ಗಟ್ಟಲೆ ಹರಿತಾ ಇದೆ ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದು ಪ್ರತಿವರ್ಷ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಬಿಲಿಯನ್ ಬಿಲಿಯನ್ ಡಾಲರ್ ಮೋಸ ಮಾಡಿ ಚಿನ್ನವನ್ನ ಕಳ್ಳ ಸಾಗಾಣಿಕೆ ಮಾಡ್ತಾ ಇದ್ದಾರೆ ಇವತ್ತು ಈ ಇಂಪಾರ್ಟೆಂಟ್ ವಿಚಾರದ ಬಗ್ಗೆ ನಾವು ಡೀಟೇಲ್ ಆಗಿ ತಿಳ್ಕೊಳ್ಳೋಣ ೋಣ ನಾವು ನೀವು ಎಲ್ಲ ಆಗಾಗ ಕಾಲಲ್ಲಿ ಕೈಯಲ್ಲಿ ಪಾಕೆಟ್ಅಲ್ಲಿ ಜೇಬಲ್ಲಿ ಸೂಟ್ಕೇಸ್ ಅಲ್ಲಿ ಚಿನ್ನ ಕಳ್ಳ ಸಾಗಾಣಿಕೆ ಮಾಡ್ತಾ ಇರಲ್ಲ ಆಗೋದನ್ನ ಕೇಳ್ತಾ ಇರ್ತೀವಿ ಅಲ್ಲಷ್ಟು ಸೀಜ ಆಯ್ತಂತೆ ಇಲ್ಲಿಷ್ಟು ಸೀಜ ಆಯ್ತಂತೆ ಅಂತೆಲ್ಲ ಕೇಳಿರ್ತೀವಿ ಆದರೆ ಅದರ ಆಳ ಅಗಲ ನೋಡಿದ್ರೆ ಯಾವ ಲೆಕ್ಕಕ್ಕೂ ಇಲ್ಲ ನೀವೆಲ್ಲ ನ್ಯೂಸ್ ಅಲ್ಲಿ ನೋಡೋದು ಯಾಕಂದ್ರೆ ಭಾರತದಲ್ಲಿ ಪ್ರತಿವರ್ಷ ಏನಿಲ್ಲ ಅಂದ್ರೂ ಕೂಡ 200 ಟನ್ ಚಿನ್ನ ಕಳ್ಳ ಸಾಗಾಣಿಕೆ ಬರ್ತಾ ಇದೆ ಸರ್ಕಾರ ಕೊಟ್ಟಿರೋ ಡೇಟಾ ಇದು ಸ್ವಾಮಿ ವೆನೆಜುಗಲಾದಿಂದ ದುಬಾೈ ತನಕ ಲಂಕಾದಿಂದ ಲಂಡನ್ ತನಕ ಎಲ್ಲಾ ಕಡೆಯಿಂದ ಭಾರತಕ್ಕೆ ಚಿನ್ನ ಹರಿತಾ ಇದೆ.

ದೀಪಾವಳಿ ಹಬ್ಬದ ಕಾರಣದಿಂದ ಡಿಮಾಂಡ್ ಜಾಸ್ತಿ ಆಗಿದ್ದಾಗಲೂ ಕೂಡ ಕಳ್ಳರು ಟನ್ ಗಟ್ಟಲೆ ಚಿನ್ನವನ್ನ ಸಾಗಾಟ ಮಾಡಿದ್ದಾರೆ. ಭಾರತದ ಭದ್ರತೆಯೊಂದಿಗೆ ದೊಡ್ಡ ಆಟ ಆಡ್ತಿದ್ದಾರೆ. ಹಾಗಿದ್ರೆ ಗೋಲ್ಡ್ ಸ್ಮಗ್ಲಿಂಗ್ ರಿಯಲ್ ಸ್ಟೋರಿ ಏನು? ಯಾಕೆ ಕದ್ದು ತರಿಸಿಕೊಳ್ತಾ ಇದ್ದಾರೆ ಭಾರತಕ್ಕೆ ಎಲ್ಲೆಲ್ಲಿಂದ ಗುಪ್ತವಾಗಿ ಚಿನ್ನ ಹರಿತಾ ಇದೆ ಬನ್ನಿ ಈ ಹಳದಿ ಲೋಹದ ಭಯಾನಕ ಲೋಹದ ಬಗ್ಗೆ ಭಾರತ ವಿಶ್ವದಲ್ಲಿ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳು ಎರಡನೇ ರಾಷ್ಟ್ರ ಜಗತ್ತಲ್ಲಿ ಯಾರಿಗೂ ಇಲ್ಲದಷ್ಟು ಚಿನ್ನದ ಮೋಹ ಭಾರತೀಯರಿಗಿದೆ ಹೀಗಾಗಿನೇ ನಮ್ಮ ವಿದೇಶಿ ವಿನಿಮಯದ ದೊಡ್ಡ ಮೊತ್ತವನ್ನ ನಾವು ಚಿನ್ನಕ್ಕೆ ಖರ್ಚು ಮಾಡ್ತೇವೆ ತೈಲದ ನಂತರ ನಾವು ಚಿನ್ನಕ್ಕೆ ಹೆಚ್ಚು ಹಣವನ್ನ ಸುರಿತಾ ಇದ್ದೇವೆ 2024ರ ಲೆಕ್ಕ ತಗೊಂಡ್ರೆ ಭಾರತದಲ್ಲಿ ಸುಮಾರು 802.8 ಟನ್ ನಷ್ಟು ಚಿನ್ನದ ಬೇಡಿಕೆ ಇತ್ತು ವರ್ಷಕ್ಕೆ 59 ಬಿಲಿಯನ್ ಡಾಲರ್ ಬೆಲೆಬಾಳುವಷ್ಟು ಆದರೆ ಈ ಪೈಕಿ 712.1 ಟನ್ ಅಷ್ಟು ಚಿನ್ನವನ್ನ ನಾವು ಹೊರಗಿಂದ ತರಿಸಿಕೊಳ್ತಾ ಇದ್ದೇವೆ ನಮ್ಮ 10% ಟೋಟಲ್ ಆಮದಲ್ಲಿ ಇದೆ ಇದೆ ಆದರೆ ಆಘಾತಕಾರಿ ವಿಚಾರ ಏನು ಅಂದ್ರೆ ಭಾರತಕ್ಕೆ ಆಮದಾಗು ಚಿನ್ನದ ಪೈಕಿ 200 ಟನ್ ಅಷ್ಟು ಚಿನ್ನಕ್ಕೆ ಲೆಕ್ಕನೇ ಇಲ್ಲ ಕಳ್ಳ ಮಾರ್ಗದಲ್ಲಿ ಸರ್ಕಾರದ ಕಣ್ಣು ತಪ್ಪಿಸಿ ಇಷ್ಟು ಚಿನ್ನ ಸಾಗಾಟ ಮಾಡಲಾಗ್ತಿದೆ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ವರದಿ ಪ್ರಕಾರ ಹಿಡಿದು ಹಾಕಿದ್ರಲ್ಲ ಈ ನಟಿಯನ್ನ ಹಿಡಿದು ಹಾಕಿದ್ರಲ್ಲ ರಣ್ಯ ಎಲ್ಲಿ ನಿನ್ನ ರನ್ನ ಚಿನ್ನ ಅಂತ ಹೇಳಿ ಸೋ ಅದೇ ಡಿಆರ್ಐ ಅವರ ರಿಪೋರ್ಟ್ ಪ್ರಕಾರಭಾರತ ಭಾರತಕ್ಕೆ ವಾರ್ಷಿಕವಾಗಿ 150 ರಿಂದ 200 ಟನ್ ಕಳ್ಳ ಚಿನ್ನ ಬರ್ತಾ ಇದೆ ಆದರೆ ಇದರಲ್ಲಿ ಸರ್ಕಾರದ ಕೈಗೆ ಸಿಕ್ಕಿರೋದು 106ಕೆಜಿಗಳು ಮಾತ್ರ ನಾವು ನೀವು ಊಹೆ ಮಾಡಿದಷ್ಟು ದೊಡ್ಡ ಮಟ್ಟದಲ್ಲಿ ಚಿನ್ನ ಭಾರತಕ್ಕೆ ಕಳ್ಳ ಮಾರ್ಗದಲ್ಲಿ ಬರ್ತಾ ಇದೆ ಹಾಗಿದ್ರೆ ಆ ಚಿನ್ನ ಎಲ್ಲ ಎಲ್ಲಿಗೆ ಹೋಗುತ್ತೆ ಇಲ್ಲಿ ಚಿನ್ನವನ್ನ ಹೇಗೆ ತರ್ತಾ ಇದ್ದಾರೆ ಅದನ್ನೇನು ಮಾಡ್ತಿದ್ದಾರೆ ಅದನ್ನೆಲ್ಲ ಆಮೇಲೆ ನೋಡೋಣ.

ಇಲ್ಲಿ ಚಿನ್ನವನ್ನ ಭಾರತಕ್ಕೆ ಯಾಕೆ ಕಳ್ಳ ಸಾಗಾಣಿಕೆ ಮಾಡ್ತಿದ್ದಾರೆ ಅದಕ್ಕೆ ಕಾರಣ ಏನು ಅದನ್ನ ಎಕ್ಸ್ಪ್ಲೈನ್ ಮಾಡಿಬಿಡ್ತೀವಿ ಭಾರತದಲ್ಲಿ ಅನೇಕ ಅಕ್ರಮ ಚಟುವಟಿಕೆಗಳು ನಡೀತಿವೆ ಅದು ನಿಮಗೆ ಗೊತ್ತು ಉಗ್ರವಾದ ಭ್ರಷ್ಟಾಚಾರ ನಶಾದಂಧೆ ತೆರಿಗೆ ವಂಚನೆ ಎಲ್ಲ ನಡೆಯುತ್ತೆ ಇದೆಲ್ಲ ನಡಬೇಕು ಅಂದ್ರೆ ಅವರಿಗೆ ಒಂದು ಮಾಧ್ಯಮ ಬೇಕು ಆ ಮಾಧ್ಯಮವಾಗಿ ಚಿನ್ನ ಯೂಸ್ ಆಗ್ತಿದೆ ಚಿನ್ನಕ್ಕೆ ನಮ್ಮಲ್ಲಿ ದೊಡ್ಡ ಪ್ರಮಾಣದ ಕಸ್ಟಮ್ಸ್ ಡ್ಯೂಟಿ ಇದೆ ಹೊರಗಿಂದ ಆಮದು ಮಾಡಿಕೊಳ್ಳೋಕೆ ತೆರಿಗೆ ಕೋಟೆಗಳನ್ನ ದಾಟಿ ಬರಬೇಕು ಲೀಗಲ್ ಆಗಿ ತರೋದಾದ್ರೆ ಹೀಗಾಗಿ ಕಳ್ಳ ಮಾರ್ಗದ ಮೂಲಕ ಚಿನ್ನವನ್ನ ಹೊತ್ಕೊಂಡು ಬರ್ತಾ ಇದ್ದಾರೆ ಹಾಗೆ ನೋಡಿದ್ರೆ 1990ಕ್ಕೂ ಮುಂಚೆ ನಮ್ಮಲ್ಲಿ ಹೊರಗಿಂದ ಚಿನ್ನ ತರಿಸಿಕೊಳ್ಳುವಂತೆನೆ ಇರಲಿಲ್ಲ ಕೇಳೋಕೆ ಆಶ್ಚರ್ಯ ಅನಿಸಬಹುದು ಆದರೆ ಇದು ಸತ್ಯ ದಿ ಗೋಲ್ಡ್ ಕಂಟ್ರೋಲ್ ಆಕ್ಟ್ 1968 ಪ್ರಕಾರ ಭಾರತೀಯರು ಹೊರಗಿನಿಂದ ಗೋಲ್ಡ್ ಆಮದು ಮಾಡಿಕೊಳ್ಳೋಕೆ ನಿರ್ಬಂಧ ಇತ್ತು ಗೋಲ್ಡ್ ಬಾರ್ಗಳು ಮತ್ತು ನಾಣ್ಯದ ರೂಪದಲ್ಲೂ ಕೂಡ ಚಿನ್ನವನ್ನ ಇಟ್ಕೊಳ್ಳುಂಗೆ ಇರಲಿಲ್ಲ ಇದ್ದ ಚಿನ್ನವನ್ನೆಲ್ಲ ಜ್ವೆಲ್ರಿ ಮಾಡಿಸಿ ಅಂತ ಅವತ್ತಿನ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅಪ್ಪಣೆ ಹೊರಡಿಸಿದ್ರು ಅವಾಗ ಮೊರಾರ್ಜಿ ದೇಸಾಯಿ ಅವರ ಬಾಸ್ ಆಗಿದ್ದಿದ್ದು ಜವಹರ್ಲಾಲ್ ನೆಹರು ಅವರು ಪ್ರಧಾನಿಯಾಗಿದ್ರು ಏನಕ್ಕೆ ಕಾರಣ ಏನು ಅಂದ್ರೆ 1962 ರಲ್ಲಿ ಚೀನಾ ವಿರುದ್ಧ ಯುದ್ಧ ಆದಾಗ ಭಾರತ ಆರ್ಥಿಕ ಸಂಕಷ್ಟಕ್ಕೆ ಸಿಲುಕ್ತು ಜನ ಹೆಚ್ಚು ಚಿನ್ನದ ಮೇಲೆ ಹೂಡಿಕೆ ಮಾಡಿ ಅದನ್ನ ಖರೀದಿ ಮಾಡೋಕ್ಕೆ ಶುರು ಮಾಡಿದ್ರು ಹೀಗಾಗಿ ಭಾರತ ಹೊರಗಿಂದ ಚಿನ್ನ ಆಮದಿಕೆ ಮುಂದಾಯಿತು ಆದರೆ ಇದು ಸರ್ಕಾರಕ್ಕೆ ಹೊರೆ ಆಯ್ತು ವಿದೇಶಿ ವಿನಿಮಯ ಪೋಲಾಗ್ ಹೊರಗೆ ಹೋಗ್ತಿದೆ ಅಂತ ಅನ್ಕೊಂಡು ಆ ವ್ಯವಸ್ಥೆಯನ್ನ ಬ್ಯಾನ್ ಮಾಡಿದ್ರು ಕಂಟ್ರೋಲ್ ಆಕ್ಟ್ ತಂದ್ರು ಆದರೆ ಇಲ್ಲಿ ಅವರು ಅಂದುಕೊಂಡಿದ್ದೇನು ನಡೆಲೇ ಇಲ್ಲ ಈ ರೀತಿ ಮಾಡಿದ ಪರಿಣಾಮ ಭಾರತದಲ್ಲಿ ತುಂಬಾ ಜನ ಏನು ಮಾಡಿದ್ರು ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನ ಕಳ್ಳ ಸಾಗಾಣಿಕೆ ಮಾಡೋಕೆ ಶುರು ಮಾಡಿದ್ರು ವ್ಯಾಪಾರಿಗಳು ರಾಜಕಾರಣಿಗಳು ಶ್ರೀಮಂತರು ಎಲ್ಲರೂ ಕೂಡ ಹೊರಗಿಂದ ಚಿನ್ನ ತರಿಸಿಕೊಂಡ್ರು ಈ ಕಾಯ್ದೆ ಬಂದಾಗ ಗಿನಿಂದ 1991ರ ತನಕವು ಇದು ಹೀಗೆ ಇತ್ತು 1990 ಹಾಗೂ 80ರ ದಶಕದಲ್ಲಂತೂ ಯುಎಈಗೆ ಹೋಗ್ತಾ ಇದ್ದ ಭಾರತೀಯರು ದಂಡಿ ದಂಡಿಯಾಗಿ ಚಿನ್ನವನ್ನ ಹೊತ್ಕೊಂಡು ಬರೋಕೆ ಶುರು ಮಾಡಿದ್ರು ಆದರೆ ನರಸಿಂಹರಾವ್ ಸರ್ಕಾರ ಬಂದಾಗ ಇದನ್ನ ಬದಲಾವಣೆ ಮಾಡಲಾಯಿತು.

ಅಷ್ಟೊತ್ತಿಗೆ ಈ ನಿರ್ಬಂಧ ಕಾರಣದಿಂದ ದೇಶದಲ್ಲಿ ಅನೇಕ ಸಮಸ್ಯೆಗಳು ಹಣದು ಬರ ಉಂಟಾಗಿತ್ತು ನಿರ್ಬಂಧ ಅನ್ನೋ ಭೂತ ದೇಶವನ್ನ ಮುಳುಗಿಸ್ತಾ ಇತ್ತು ಹೀಗಾಗಿ ಎಲ್ಲವನ್ನ ಓಪನ್ ಮಾಡ್ತೀವಿ ಎಲ್ಲವನ್ನ ಮಾರ್ಕೆಟ್ಗೆ ಬಿಡ್ತೀವಿ ಅಂತ ಅನ್ಕೊಂಡು ನರಸಿಂಹರಾವ್ ಅವರು ಮತ್ತು ಅವರ ಹಣಕಾಸು ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರ ಜೊತೆ ಮಾತಾಡಿ ಡಿಸ್ಕಸ್ ಮಾಡ್ಕೊಂಡು ಇಬ್ಬರೂ ಕೂಡ ಈ ಜೋಡಿ ಚಿನ್ನವನ್ನ ಆಮದು ಮಾಡಿಕೊಳ್ಳೋಕೆ ದೊಡ್ಡ ದೊಡ್ಡ ಹೆಜ್ಜೆಗಳನ್ನ ಇಟ್ರು. 2011 ರ ತನಕ ಕೂಡ ಏನು ಸಮಸ್ಯೆ ಇರಲಿಲ್ಲ ಆಮೇಲೆ ಹಾಗೆ ಕಂಟಿನ್ಯೂ ಆಗಿತ್ತು. ಚಿನ್ನ ಕಳ್ಳ ಸಾಗಾಣಿಕೆ ಅನ್ನೋದು ದೊಡ್ಡ ಸಮಸ್ಯೆ ಆಗಿರಲಿಲ್ಲ. ಆದರೆ 2012 ರ ನಂತರ ಇದು ಮತ್ತೆ ಕಂಪ್ಲೀಟ್ ಚೇಂಜ್ ಆಗಿದೆ. ಭಾರತ ಚಿನ್ನ ಕಳ್ಳ ಸಾಗಾಣಿಕೆಯ ರಾಜಧಾನಿಯಾಗಿ ಮಾರ್ಪಾಡಾಗಿದೆ. ಏರ್ತಲೆ ಇದೆ ಚಿನ್ನದ ಸ್ಮಗ್ಲಿಂಗ್. ಸ್ನೇಹಿತರೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಅಧ್ಯಯನ ಮಾಡುವ ಫೆಂಟಲೆಕ್ಟ್ ಕೊಟ್ಟಿರೋ ಮಾಹಿತಿ ಪ್ರಕಾರ ಪ್ರತಿದಿನ ಭಾರತದಲ್ಲಿ 700 kg ಚಿನ್ನ ಕಳ್ಳ ಸಾಗಾಣಿಕೆ ಆಗ್ತಿದೆ. ಇದರಿಂದ ಭಾರತಕ್ಕೆ ಪ್ರತಿವರ್ಷ 9.8 ಬಿಲಿಯನ್ ಡಾಲರ್ ನಷ್ಟು ಲಾಸ್ ಆಗ್ತಿದೆ. ದೀಪಾವಳಿ ಹಬ್ಬದ ಟೈಮ್ನಲ್ಲೂ ಇದು ಗಣನೀಯವಾಗಿ ಸ್ಮಗ್ಲಿಂಗ್ ಆಯ್ತು ಅಂತ ಅಧಿಕಾರಿಗಳು ಹೇಳಿದ್ರು. ಸರ್ಕಾರಿ ಡೇಟಾ ಪ್ರಕಾರವೇ ನೋಡಿದ್ರು 202425 ರಲ್ಲಿ 2.6 6 ಮೆಟ್ರಿಕ್ ಟನ್ ನಷ್ಟು ಅಕ್ರಮ ಚಿನ್ನ ವಶಕ್ಕೆ ಸಿಕ್ಕಿದೆ ಸೀಜ ಆಗಿರೋದು 3000ಕ್ಕೂ ಅಧಿಕ ಗೋಲ್ಡ್ ಸ್ಮಗ್ಲಿಂಗ್ ಕೇಸಸ್ ದಾಖಲ ಆಗಿವೆ ಗೋಲ್ಡ್ ಸ್ಮಗ್ಲಿಂಗ್ ವರ್ಷದಿಂದ ವರ್ಷಕ್ಕೆ ಡಬಲ್ ಡಿಜಿಟ್ನಲ್ಲಿ ಕೆಲವೊಮ್ಮೆ ಟ್ರಿಪಲ್ ಡಿಜಿಟ್ನಲ್ಲಿ ಏರ್ತಾ ಇದೆಆರ್ಐ ಡೇಟಾ ಪ್ರಕಾರವೇ 2023 ರಲ್ಲಿ 20% ಏರಿಕೆಯಾಗಿದೆ 2012ರ ನಂತರ ಇದು ದೊಡ್ಡ ಮಟ್ಟದಲ್ಲಿ ಸಮಸ್ಯೆ ತಂದಿದೆ ಇಲ್ಲಿ 2012 ಕ್ಕೆ ದಿಡೀರ್ ಏನಾಯ್ತು ಅಂತ ನಿಮಗೆ ಪ್ರಶ್ನೆ ಮೂಡಬಹುದು ಅದನ್ನ ನೋಡ್ಕೊಂಡೆ ಮುಂದಕ್ಕೆ ಹೋಗೋಣ ಸ್ನೇಹಿತರೆ 201 11ರ ತನಕ ಚಿನ್ನದ ಮೇಲೆ ನಮ್ಮಲ್ಲಿ ಹೆಚ್ಚು ತೆರಿಗೆ ಇರಲಿಲ್ಲ. ಹೀಗಾಗಿ ಚಿನ್ನ ಸರಾಗವಾಗಿ ಬಂದು ಸರಾಗವಾಗಿ ಮಾರುಕಟ್ಟೆ ತಲುಪುತಾ ಇತ್ತು.

ನರಸಿಂಹ ರಾವ್ ಕಾಲದಿಂದ ಮನಮೋಹನ್ ಸಿಂಗ್ ತನಕವು ಹೀಗೆ ಇತ್ತು. ಆದರೆ 2012 ರಲ್ಲಿ ಆಗಿನ ಫೈನಾನ್ಸ್ ಮಿನಿಸ್ಟರ್ ಪ್ರಣವ್ ಮುಖರ್ಜಿ ಇದಕ್ಕೆ ಅಂಕುಶ ಹಾಕಿದ್ರು. ವಿದೇಶಿ ವಿನಿಮಯ ಕಾಪಾಡಬೇಕು ಮಾರುಕಟ್ಟೆ ಚೆನ್ನಾಗಿರಬೇಕು ಅನ್ನೋ ಕಾರಣ ಕೊಟ್ಟು ಚಿನ್ನದ ಮೇಲೆ 2% ತೆರಿಗೆ ಹಾಕಿದ್ರು. ಬರಿ 2% ಅಂತ ಕೇಳಬೇಡಿ ಅದು ಚಿನ್ನ ಅದು ಅಷ್ಟಕ್ಕೆ ನಿಲ್ಲಿಸಲಿಲ್ಲ ಆಮೇಲೆ ಅದೇ ವರ್ಷ ಸೀದಾ 4% ಗೆ ಏರಿಸಿದ್ರು ಸುಂಖವನ್ನ 2013 ಬರುವಷ್ಟರಲ್ಲಿ 6% ಗೆ ಏರಿಸಿದ್ರು ಅದೇ ವರ್ಷ ಜೂನ್ ನಲ್ಲಿ 8% ಅದೇ ವರ್ಷ ಆಗಸ್ಟ್ ನಲ್ಲಿ 10% ಗೆ ಮನ ಬಂದಂತೆ ಚಿನ್ನದ ಮೇಲೆ ಸುಂಖವನ್ನ ಏರಿಸ್ತಾ ಹೋದ್ರು ಇನ್ನು ಅದಾದಮೇಲೆ ಮೋದಿ ಸರ್ಕಾರ ಕೂಡ ಕಮ್ಮಿ ಮಾಡಲಿಲ್ಲ 2019 ರಲ್ಲಿ ಸಿದ 11% ಗೆ ತಗೊಂಡು ಹೋದ್ರು 2021 ರಲ್ಲಿ ಸ್ವಲ್ಪ ಕಮ್ಮಿ ಮಾಡಿ 10% ಗೆ ಬಂದ್ರು 2022 ರಲ್ಲಿ ಕೊರೋನಾ ಆದ ನಂತರ 15% ಗೆ ತಗೊಂಡು ಹೋದ್ರು ಇದು ಕಳ್ಳ ಸಾಗಾಣಿಕೆ ದಾರಿ ಅವರಿಗೆ ಇನ್ನಷ್ಟು ಪ್ರೋತ್ಸಾಹ ಕೊಡುತ್ತೆ ಇಷ್ಟೊಂದು ಟ್ಯಾಕ್ಸ್ ಯಾವನು ಕಡ್ತಾನೆ ಕಳ ಸಾಗಣಿಕೆ ಮಾಡೋಣ ಸಿಕ್ಕಿದ್ರೆ ಆಮೇಲೆ ನೋಡ್ಕೊಂಡ್ರೆ ಆಯ್ತು 100 ಸಲಿ ಟ್ರೈ ಮಾಡಿದಾಗ ಎರಡು ಸಲಿ ಸಿಕ್ಕಾಕೊಂತೀವಾ 98 ಟೈಮ್ಸ್ ಬಂದಿರ್ತೀವಲ್ಲ ಅದರಲ್ಲಿ ಸಿಕ್ಕಾಕೊಂಡಿರೋ ಗೋಲ್ಡ್ದು ಕೂಡ ರಿಕವರ್ ಆಗಿರುತ್ತೆ ಅಷ್ಟೊಂದು ಟ್ಯಾಕ್ಸ್ ಇದೆ ಇಲ್ಲಿ ಅಂತ ಅನ್ಕೊಂಡು ಕಳಸಗಾಣಿಕೆ ಜಾಸ್ತಿ ಆಯ್ತು ಚಿನ್ನದ ಕಳರು ಬೂಟ್ಗಳಲ್ಲಿ ಮಕ್ಕಳ ಡೈಪರ್ ಅಲ್ಲಿ ಫೋನ್ ನಲ್ಲಿ ಕಳಗೆ ಎಲ್ಲ ಬಿಟ್ಟು ಹಾಕೊಂಡು ಚಿನ್ನವನ್ನ ಸ್ಮಗಲ್ ಮಾಡ್ಕೊಂಡು ಭಾರತಕ್ಕೆ ಬಂದ್ರು ಅದು ಈಗಲೂ ಕೂಡ ಮುಂದುವರೆದಿದೆ ಸ್ನೇಹಿತರೆ ಈಗ ಈ ಸ್ಮಗ್ಲಿಂಗ್ ಎಷ್ಟು ಅಡ್ವಾನ್ಸ್ಡ್ ಆಗಿದೆ ಅಂದ್ರೆ ಮುಂಚೆ ಬಿಸ್ಕೆಟ್ ಬ್ರಿಕ್ ಅಂತ ಘನ ರೂಪದಲ್ಲಿ ತರ್ತಾ ಇದ್ರು ಆದರೆಈಗ ಚಿನ್ನದ ಧೂಳು ಚಿನ್ನದ ಪೇಸ್ಟ್ ಈ ರೀತಿ ನಾನಾ ರೂಪದಲ್ಲಿ ಸಾಗಾಟ ಮಾಡ್ತಿದ್ದಾರೆ ಅಲ್ದೆ ಸಮುದ್ರ ಭೂಮಾರ್ಗ ಮತ್ತು ವಾಯುಮಾರ್ಗ ಎಲ್ಲವನ್ನ ಬಳಸ್ತಾ ಇದ್ದಾರೆ ಜೊತೆಗೆ ಮುಂಚೆ ಏಜೆಂಟ್ಗಳು ಸ್ವಲ್ಪ ಆರ್ಥಿಕವಾಗಿ ವೀಕ್ ಇರೋರನ್ನ ಇದಕ್ಕೆ ಬಳಸ್ತಾ ಇದ್ರು ಈಗ ಕಂಪ್ಲೀಟ್ ಚೇಂಜ್ ಆಗಿದೆ ಸೆಲೆಬ್ರಿಟಿಗಳು ವಿದೇಶಿಗರು ಎಜುಕೇಟೆಡ್ಗಳು ಸೋ ಸೋ ಕಾಲ್ಡ್ ಪ್ರಭಾವಿಗಳು ಈ ದಂದೆಯಲ್ಲಿ ಭಾಗಿಯಾಗ್ತಿದ್ದಾರೆ ಕಸ್ಟಮ್ಸ್ ಅಧಿಕಾರಿಗಳಿಗೆ ಡೌಟೇ ಬರೆದ ರೀತಿ ನೋಡ್ಕೊತಿದ್ದಾರೆ ರಣ್ಯ ರಾವ್ ಕೇಸ್ ನಾವು ಆಲ್ರೆಡಿ ಮೆನ್ಷನ್ ಮಾಡಿದ್ವಿ ಅಪ್ಪ ಪೊಲೀಸ್ ಅಂತ ಹೇಳ್ಕೊಂಡು ಯಾವ ಲೆವೆಲ್ಗೆ ಆ ಇನ್ಫ್ಲುಯೆನ್ಸ್ ಎಲ್ಲ ಬಳಸಿಕೊಂಡು ತನ್ನ ಫೇಮ್ ಅನ್ನ ಬಳಸಿಕೊಂಡು ಈಕೆ ಚಿನ್ನವನ್ನ ಹೇರಿಕೊಂಡು ಬಂದು ಭಾರತಕ್ಕೆ ಸಾಗಿಸ್ತಾ ಇದ್ಲು ಅನ್ನೋದು ಡಿಆರ್ಐ ಬೆಳಕಿಗೆ ತಂದಿತ್ತು.

ಚಿನ್ನ ಕಳ್ಳ ಸಾಗಾಣಿಕೆ ಮಾಡೋನು ತನ್ನ ಮೂಮೆಂಟ್ ಅನ್ನ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಪ್ರತಿಬಿಂಬಿಸ್ತಾನೆ ಬಂದೆ ಇಲ್ಲಿದೀನಿ ಅಂತ ಹೇಳಿ ಮಾಮೂಲಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕ್ತಾರಲ್ಲ ಆ ರೀತಿ ಪೋಸ್ಟ್ ಹಾಕ್ತಾರೆ Instagram ಸ್ಟೋರಿಗಳನ್ನ ಹಾಕ್ತಾರೆ WhatsApp ನಲ್ಲಿ ಅಪ್ಡೇಟ್ ಮಾಡ್ತಾರೆ. ಇಂತಿಂತ ಜಾಗ ಇಂತಿಂತ ಹೋಟೆಲ್ ಇಂತಿಂತ ಕ್ಯಾಫೆ ಅಂತ ಹೇಳ್ತಾರೆ. ಅಲ್ಲಿಗೆ ಬಂದು ಮೂರನೇ ವ್ಯಕ್ತಿಯ ಕೈಯಲ್ಲಿ ಇದನ್ನ ಪಾಸ್ ಮಾಡಿ ಹಾಗೆ ಹೋಗಿಬಿಡ್ತಾರೆ. ಒಂದೊಂದು ಸಲ ಏರ್ಪೋರ್ಟ್ನ ಬಾತ್ರೂಮ್ನಲ್ಲಿ ಚಿನ್ನವನ್ನ ಎಕ್ಸ್ಚೇಂಜ್ ಮಾಡಿಕೊಂಡಿರು ಉದಾಹರಣೆಗಳು ಕೂಡ ಇದೆ ಸರ್ಕಾರಿ ಮೂಲಗಳ ಪ್ರಕಾರ ಇತ್ತೀಚಿಗೆ ಚಿನ್ನದ ಕ್ಯಾಪ್ಸೂಲ್ ಗಳನ್ನ ತಮ್ಮ ದೇಹದಲ್ಲಿ ಕೆಳಭಾಗದಿಂದ ತುರಿಸಿ ಇನ್ಸರ್ಟ್ ಮಾಡಿಕೊಂಡು ತಗೊಂಡು ಬರ್ತಾ ಇದ್ದಾರೆ ಇನ್ನು ಕೆಲವರು ಅಲ್ಲಿಗೆ ಏನಕ್ಕೆ ಅಂತ ಹೇಳಿ ಬಾಯಲೇ ಹಾಕೊಂಡು ನುಂಗಿಕೊಂಡು ಕೂಡ ತಗೊಂಡು ಬರ್ತಾರೆ ಚೆಕ್ ಮಾಡಿದಾಗ ಇದು ಗೊತ್ತಾಗದೆ ಇರಲಿ ಅಂತ ಈ ರೀತಿಯಎಲ್ಲ ಸರ್ಕಸ್ ಮಾಡ್ತಾರೆ ಅಲ್ದೇ ವಿದೇಶಗಳಿಂದ ಭಾರತಕ್ಕೆ ಬರುವ ವಸ್ತುಗಳ ಜೊತೆಗೂ ಕಳ್ಳ ಸಾಕಾಣಿಕೆ ಮಾಡ್ತಾರೆ 2022ರ ಮೇ ತಿಂಗಳಲ್ಲಿ ಲ್ಲಿ ಹಾಂಗ್ಕಾಂಗ್ ನಿಂದ ಎಲೆಕ್ಟ್ರಿಕ್ ಹ್ಯಾಮರ್ ಗಳನ್ನ ತಂದ್ರು. ಇದನ್ನ ಮುಂಬೈನಲ್ಲಿ ಚೆಕ್ ಮಾಡಲಾಯಿತು. ಆಗ ಸುತ್ತಿಗೆಗಳಲ್ಲಿ 16 kg ಚಿನ್ನವನ್ನ ಇಟ್ಕೊಂಡು ಬಂದಿದ್ರು. ಹೀಗೆ ನಾವು ನೀವೆಲ್ಲ ಊಹೆನು ಮಾಡೋಕೆ ಸಾಧ್ಯವಾಗದೆ ಇರೋ ರೀತಿಯಲ್ಲಿ ಮತ್ತು ಸಾಧ್ಯ ಇರೋ ಕಡೆ ಸಾಧ್ಯ ಇಲ್ಲದ ಕಡೆ ಎಲ್ಲಾ ಕಡೆಗೂ ನುಗ್ಗಿಸಿಕೊಂಡು ಚಿನ್ನವನ್ನ ಸ್ಮಗ್ಲಿಂಗ್ ಮಾಡ್ತಿದ್ದಾರೆ. ಎಲ್ಲಿಂದ ಬರ್ತಾ ಇದೆ ಚಿನ್ನ. ಸ್ನೇಹಿತರೆ ಆಗ್ಲೇ ಹೇಳಿದ ಹಾಗೆ ಎಲ್ಲಾ ಮಾರ್ಗಗಳಿಂದ ಮಾಡ್ತಿದ್ದಾರೆ. ಅದರಲ್ಲೂ ಕೂಡ ಭಾರತದ ಈಶಾನ್ಯ ಗಡಿಗಳು ದೊಡ್ಡ ಈಗ ಸ್ಮಗ್ಲಿಂಗ್ ರೂಟ್ಸ್ ಆಗ್ಬಿಟ್ಟಿದ್ದಾವೆ. ಕಾಡು, ಬೆಟ್ಟಗುಡ್ಡ, ನದಿ, ಹೊಳೆ, ದುರ್ಗಮ ಪ್ರದೇಶ ಸೆಕ್ಯೂರಿಟಿ ಕಾಯೋದು ಕೂಡ ಕಷ್ಟ ಅಂತ ಹೇಳಿ ಅಲ್ಲಿಂದ ನುಗ್ತಾ ಇದ್ದಾರೆ. ಮುಖ್ಯವಾಗಿ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಗಡಿಯಿಂದ ಹಾರ್ತಾ ಇದ್ದಾರೆ ಚಿನ್ನವನ್ನ ಹೊತ್ಕೊಂಡು 2022 23ರ ಡಿಆರ್ಐ ವರದಿ ಪ್ರಕಾರ ಭಾರತದಲ್ಲಿ ನಡೆಸಿರುವ ಚಿನ್ನ ಕಳ್ಳ ಸಾಗಣಿಕೆ ಪೈಕಿ ಶೇಕಡ 52 ರಷ್ಟು ಚಿನ್ನ ಭೂಮಾರ್ಗದ ಮೂಲಕ ನಡೀತಾ ಇದೆ. ನಂತರ ಸ್ಥಾನದಲ್ಲಿ ವಿಮಾನಗಳ ಮೂಲಕ ಅದರ ಪ್ರಮಾಣ ಶೇಕಡ 29 ರಷ್ಟಿದೆ.

ಸಮುದ್ರ ಮಾರ್ಗದಲ್ಲಿ ಚಿನ್ನವನ್ನ ಮಧ್ಯದಲ್ಲೇ ಹಾಕಿ ಅದನ್ನ ಇಂತಿಂತ ಲೊಕೇಶನ್ ಅಲ್ಲಿ ಹಾಕಿದ್ದೀವಿ ಅಂತ ಹೇಳಿ ಮಾಹಿತಿ ಕೊಡ್ತಾರೆ. ಇನ್ನು ಕೆಲ ಸಲ ಬೋಟ್ ಮೂಲಕ ಅಥವಾ ಸಣ್ಣ ಪುಟ್ಟ ತೇಲುವ ವಸ್ತು ಮೂಲಕ ಇದನ್ನ ಕಳ್ಳ ಸಾಗಾಣಿಕೆ ಮಾಡ್ತಾರೆ. 2022 23ರ ವರದಿಯ ಪ್ರಕಾರ ಭಾರತಕ್ಕೆ ಅತಿ ಹೆಚ್ಚು ಅಂದ್ರೆ ಶೇಕಡ 42 ರಷ್ಟು ಚಿನ್ನ ಯುಎಈ ಮೂಲಕ ಕಳ್ಳ ಸಾಗಾಣಿಕೆ ಆಗ್ತಿದೆ. ಅಲ್ಲಿ ತೆರಿಗೆ ಇಲ್ಲದ ಕಾರಣ ದೊಡ್ಡ ಕಾಳ ಸಂತೆ ಆಗಿರೋ ಕಾರಣ ಅಲ್ಲಿಂದ ದೊಡ್ಡ ಪ್ರಮಾಣದಲ್ಲಿ ಸಾಗಿಸ್ತಾ ಇದ್ದಾರೆ. ಹಾಗೆ ಮಯನ್ಮಾರ್ ನಿಂದಲೂ 20% ಚಿನ್ನ ಬರ್ತಾ ಇದೆ. ಇದನ್ನು ಯಾರು ಕಂಟ್ರೋಲ್ ಮಾಡೋರು ಇಲ್ಲ ಅಲ್ಲಿ. ಮಯನ್ಮಾರ್ ಕಂಟ್ರೋಲ್ ಮಾಡೋರು ಯಾರು ಅಂತ ಗೊತ್ತಿಲ್ಲ. ಹರ್ಕೊಂಡು ತಿಂತಾ ಇದ್ದಾರೆ ಸೇನೆ ಒಂದು ತುಂಡು, ಬಂಡುಕೋರರು ಒಂದು ತುಂಡು ಅಂತ. ಇನ್ನು ಭಾರತ 7ವರಸಾವ ಕಿಲೋಮೀಟರ್ ಕರಾವಳಿಯನ್ನ ಹೊಂದಿದೆ. ಇದನ್ನ ಕೂಡ ಕಳ್ಳರು ಅಡ್ವಾಂಟೇಜ್ ಆಗಿ ತಗೊಳ್ತಿದ್ದಾರೆ. ಲಂಕಾ ಮೂಲಕವೂ 7% ಚಿನ್ನ ಬರ್ತಾ ಇದೆ. ಚೀನಾ ಗಡಿಯಲ್ಲಿ 5% ಬಾಂಗ್ಲಾ ಗಡಿಯಲ್ಲಿ 5% ಕಳ್ಳ ಸಾಗಾಣಿಕೆ ಮಾಡಲಾಗ್ತಿದೆ. ಇನ್ನು ಈ ಚಿನ್ನ ಕಳ್ಳ ಸಾಗಾಣಿಕೆ ಕೇಸ್ಗಳಲ್ಲಿ ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳೇ ಶೇಕಡ 60% ಪಾಲನ್ನ ಹೊಂದಿದೆ. 2023 ರಲ್ಲಿ ಬರಿ ಮಹಾರಾಷ್ಟ್ರದಲ್ಲಿ 997.51 51ಕೆಜಿ ಚಿನ್ನವನ್ನ ವಶಪಡಿಸಿಕೊಳ್ಳಲಾಗಿತ್ತು ಗಲ್ಫ್ ರಾಷ್ಟ್ರಗಳಿಂದ ಬರ್ತಾ ಇದ್ದ ಆರು ಭಾರತೀಯರನ್ನ ಅರೆಸ್ಟ್ ಮಾಡಲಾಗಿತ್ತು ಇವರು ಪೆನ್ನಿನ ಕಡ್ಡಿಗಳಲ್ಲಿ ಧೂಳಿನ ರೂಪದಲ್ಲಿ ಚಿನ್ನವನ್ನ ತುಂಬಿಕೊಂಡು ಬಂದಿದ್ರು ತಮಿಳುನಾಡಿನಲ್ಲಿ ಕೂಡ 498.84ಕೆಜಿ ಚಿನ್ನವನ್ನ ವಶಕ್ಕೆ ಪಡೆಯಲಾಗಿತ್ತು ಅಷ್ಟೇ ಅಲ್ಲ ಚೆನ್ನೈನಲ್ಲಿ ಅಲ್ಲಿನ ಗ್ರೌಂಡ್ ಸ್ಟಾಫ್ಗೂ ಈ ಕಳ್ಳರು ಚಿನ್ನ ಕೊಟ್ಟಿದ್ದ ಉದಾಹರಣೆ ಇದೆ. ಕೆಲವರು ಸನ್ನೆ ಮೂಲಕವೇ ಇದನ್ನೆಲ್ಲ ಮುಗಿಸಿಬಿಡ್ತಾರೆ. ಇನ್ನು ಕೇರಳದಲ್ಲೂ ಕೂಡ 2023 ರಲ್ಲಿ ಸುಮಾರು 542.36 kg ಚಿನ್ನ ಸೀಸ್ ಮಾಡಲಾಗಿತ್ತು. ಈ ಭಾಗದ ಜನರು ಗಲ್ಫ್ ಕಂಟ್ರಿಗಳಲ್ಲಿ ಹೆಚ್ಚಾಗಿ ಕೆಲಸ ಮಾಡ್ತಾರೆ. ಆಗಾಗ ತಮ್ಮ ಊರುಗಳಿಗೆ ಭೇಟಿ ಕೊಡ್ತಾರೆ. ಸೋ ಇವರನ್ನೇ ಹೈರ್ ಮಾಡಿಕೊಂಡು ಕಳ್ಳ ಸಾಗಾಣಿಕೆದಾರರು ಈ ದುಷ್ಕೃತ್ಯ ಮಾಡಿದ್ದಾರೆ. ನಿಮಗೆ ನೆನಪಿರಬಹುದು 2022 ರಲ್ಲಿ ಯುಎಈ ಕೌನ್ಸಿಲೇಟ್ ಕಚೇರಿ ಉದ್ಯೋಗಿಗಳಾಗಿದ್ದ ಸ್ವಪ್ನ ಸುರೇಶ್ ಮತ್ತು ಸರಿತ್ ಕುಮಾರ್ ಕೇರಳ ಸಿಎಂ ಪಿಣರಾಯಿ ವಿಜಯೇಂದ್ರನ್ರ ಮಾಜಿ ಪ್ರಿನ್ಸಿಪಲ್ ಸೆಕ್ರೆಟರಿ ಎಂ ಶಿವಶಂಕರನ್ನ ಕೂಡ ಕಸ್ಟಮ್ಸ್ ಅಧಿಕಾರಿಗಳು ಅರೆಸ್ಟ್ ಮಾಡಿದ್ರು ಸ್ವಪ್ನ ತಮ್ಮ ಡಿಪ್ಲೋಮಾಟಿಕ್ ಬ್ಯಾಂಕ್ಗಳಲ್ಲಿ ಈ ಚಿನ್ನವನ್ನ ಅಡಗಿಸಿಟ್ಟುಕೊಂಡು ಬಂದಿದ್ರು ಅಂತ ಆರೋಪಿಸಲಾಗಿತ್ತು ಈ ಕೇಸ್ಗೆ ಎನ್ಐಎ ಕೂಡ ಜಾಯಿನ್ ಆಗಿತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಹಣವನ್ನ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಫಂಡ್ ಮಾಡ್ತಿದೆ ಅಂತ ಹೇಳಿ ತನಿಕೆ ಶುರುವಾಗಿತ್ತು ಕಸ್ಟಮ್ಸ್ ಕಾಯ್ದೆ ಪ್ರಕಾರ ಇಂತದಕ್ಕೆ ಮೂರು ವರ್ಷ ಜೈಲ್ ಶಿಕ್ಷೆ ಇರುತ್ತೆ.

ಆ ಸರಕುಗಳ ಮೌಲ್ಯ ಒಂದು ಕೋಟಿಗಿಂತ ಹೆಚ್ಚಿದ್ರೆ ಮತ್ತು 30 ಲಕ್ಷ ಟ್ಯಾಕ್ಸ್ ಹಾಕಬಹುದಾಗಿದ್ದ ವಸ್ತುವಾಗಿದ್ರೆ ಅಂತವರಿಗೆ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡವನ್ನ ಕೂಡ ಹಾಕಬಹುದು ಇಷ್ಟಾದರೂ ಕಳರು ಬರ್ತಾ ಇಲ್ಲ ಡಿಜಿಟಲ್ ವಾಲೆಟ್ ಗಳ ಮೂಲಕ ಕ್ರಿಪ್ಟೋ ಮೂಲಕ ಈ ದಂದೆಯನ್ನು ಮಾಡ್ತಾನೆ ಇದ್ದಾರೆ ಪೇಮೆಂಟ್ಗೆ ಅದನ್ನ ಯೂಸ್ ಮಾಡ್ಕೊಳ್ತಿದ್ದಾರೆ ಈ ರೀತಿ ತಂದ ಚಿನ್ನವನ್ನ ಸರಾಗವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡ್ತಾರೆ ರಿಯಲ್ ಎಸ್ಟೇಟ್ ಅಕ್ರಮ ಹಣಕಾಸು ವ್ಯವಹಾರ ಹವಾಲ ವ್ಯವಹಾರಗಳಲ್ಲಿ ಬಳಕೆ ಮಾಡ್ತಾರೆ ತುಂಬಾ ಸಲ ಸಕ್ರಮ ಚಿನ್ನದೊಂದಿಗೆ ಮಿಶ್ರಣ ಮಾಡಿ ಇದನ್ನ ಸಾಗಿಸಿಬಿಡ್ತಾರೆ ಕರಗಿಸಿಬಿಡ್ತಾರೆ ಫೇಕ್ ಬಿಲ್ಗಳು ಫೇಕ್ ಇನ್ವಾಯ್ಸ್ ಗಳನ್ನ ತೋರಿಸಿ ಸಕ್ರಮ ಮಾಡಿಕೊಳ್ತಾರೆ. ಉದಾಹರಣೆಗೆ 50 ಕೋಟಿ ಮೌಲ್ಯದ ಚಿನ್ನ ಕಳ್ಳ ಸಾಗಾಣಿಕೆ ಮಾಡಿದ್ರೆ ಬೇರೆ ಯಾವುದೋ ಉದ್ಯಮದಲ್ಲಿ ಇದರ ಆದಾಯ ತೋರಿಸಿ ಅದಕ್ಕೆ ಒಂದಷ್ಟು ಟ್ಯಾಕ್ಸ್ ಕಟ್ಕೊಂಡು ಇಂತ ಉದ್ಯಮದಲ್ಲಿ ಎಷ್ಟು ಆದಾಯ ಬಂದಿದೆ ಅಂತ ಹೇಳಿಬಿಡ್ತಾರೆ. ಇದು ದೇಶದ ಆರ್ಥಿಕತೆಗೆ ದೊಡ್ಡ ಚಾಲೆಂಜ್. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಈ ತೆರಿಗೆಯನ್ನ ವಾಪಸ್ ಈಗ ಡಬಲ್ ಡಿಜಿಟ್ ನಿಂದ 5% ಗೆ ಇಳಿಸಿದೆ. ಇದರ ಪರಿಣಾಮ 2025ರ ಜುಲೈನಿಂದ ಆಗಸ್ಟ್ ನಡುವೆ ಚಿನ್ನದ ಆಮದು ಬರೋಬ್ಬರಿ 221% ಹೆಚ್ಚಾಗಿದೆ ಲೀಗಲ್ ಆಮದು ಅಂದ್ರೆ ಸಕ್ರಮವಾಗಿ ಹೆಚ್ಚು ಚಿನ್ನ ಬರ್ತಾ ಇದೆ ಈಗ ಟ್ಯಾಕ್ಸ್ 5% ಅಲೆಯ ರಿಸ್ಕ್ ಅಂತ ಹೇಳಿ. ಆದರೆ ಇದು ಪೂರ್ತಿ ನಿಂತಿಲ್ಲ. ಇವತ್ತಿಗೂ ಉಗ್ರರಿಗೆ ದೇಶ ವಿರೋಧಿ ಶಕ್ತಿಗಳಿಗೆ ಇದರಿಂದ ಹಣ ಹೋಗ್ತಾ ಇದೆ. ನಿಮಗೆ ಗೊತ್ತಿರಲಿ ಸ್ನೇಹಿತರೆ 1993 ಮತ್ತು 2008 ರಲ್ಲಿ ನಡೆದಂತಹ ಮುಂಬೈ ದಾಳಿಗಳ ಹಿಂದೆ ಇದೇ ಅಕ್ರಮ ಚಿನ್ನದ ದಂದೆ ಕೆಲಸ ಮಾಡಿತ್ತು. ಅವರಿಗೆ ಹಣ ಆಯುಧ ಎಲ್ಲದಕ್ಕೂ ಇದೇ ಚಿನ್ನವೇ ಸಂಪನ್ಮೂಲವಾಗಿತ್ತು. ಹೀಗಾಗಿ ನಮ್ಮ ಭದ್ರತಾ ತಂಡಗಳು ಇಂತ ಕಳ್ಳ ಸಾಗಾಣಿಕೆ ಮಾರ್ಗಗಳ ಮೇಲೆ ತೀವ್ರ ಕಣ್ಣಿಟ್ಟು ದಿನವೂ ಪ್ರಯತ್ನ ಪಡುತ್ತಿದ್ದಾರೆ. ಆದರೂ ಕೂಡ ಇಷ್ಟು ದೊಡ್ಡ ರಾಷ್ಟ್ರದಲ್ಲಿ ಎಲ್ಲವನ್ನ ತಡೆಲಿಕ್ಕೆ ಆಗ್ತಾ ಇಲ್ಲ. ಕೆಲ ಕಡೆ ಅಧಿಕಾರಿಗಳೇ ಸೇರಿಕೊಂಡಿರ್ತಾರೆ ಕಳ್ಳ ಸಾಗಣಿಕೆಗೆ ಹೆಲ್ಪ್ ಮಾಡ್ತಾ ಇದ್ದಾರೆ ಬ್ರಷ್ಟರು ಅಲ್ಲೂ ಕೂಡ ಇದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments