Thursday, November 20, 2025
HomeLatest Newsರಿಲಯನ್ಸ್‌ನಿಂದ ಮನೆ ಉಪಕರಣಗಳ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ!

ರಿಲಯನ್ಸ್‌ನಿಂದ ಮನೆ ಉಪಕರಣಗಳ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ!

ರಿಲಯನ್ಸ್ ತರಕಾರಿಯಿಂದ ಹಿಡಿದು ತೈಲದವರೆಗೆ ಇಡ ದೇಶ ಆಳ್ತಿರೋ ದೈತ್ಯ ಕಂಪನಿ ಸದಾ ಹೊಸ ಹೊಸ ಮಾರ್ಕೆಟ್ಗಾಗಿ ಏನಾದ್ರೂ ಒಂದು ಮಾಡ್ತಾನೆ ಇರುತ್ತೆ ಇಂತ ರಿಲಯನ್ಸ್ ಈಗ ಮತ್ತೊಂದು ಕೋಟೆಗೆ ನುಗ್ಗೋಕೆ ಸಜ್ಜಾಗಿದೆ ಟಿವಿ ಫ್ರಿಡ್ಜ್ಗಳ ಹೋಂ ಅಪ್ಲೈಯನ್ಸಸ್ ಕ್ಯಾಪ್ಚರ್ ಮಾಡೋಕೆ ಅಂಬಾನಿ ಮತ್ತೊಂದು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಕ್ಯಾಂಪ ಮೂಲಕ ಕೋಲ್ಡ್ ಡ್ರಿಂಕ್ಸ್ ಮಾರ್ಕೆಟ್ ಕೈವಶ ಮಾಡಿಕೊಂಡಂತೆ ಮತ್ತೊಂದು ಹೊಸ ಕಂಪನಿ ಮೂಲಕ ಎಲೆಕ್ಟ್ರಾನಿಕ್ಸ್ ಕ್ಷೇತ್ರ ಅಲ್ಲಾಡಿಸೋಕೆ ನೋಡ್ತಿದ್ದಾರೆ. ಈಗಾಗಲೇ ಅದಕ್ಕಾಗಿ ಸರ್ವ ತಯಾರಿ ನಡೆಸಿದ್ದಾರೆ. ಹಾಗಿದ್ರೆ ಏನಿದು ಅಂಬಾನಿ ಹೊಸ ಆಟ. ಕ್ಯಾಂಪಸ್ ಸ್ಟ್ರಾಟಜಿನ ಎಲೆಕ್ಟ್ರಾನಿಕ್ಸ್ ಮಾರ್ಕೆಟ್ಗೆ ಹೇಗೆ ಅಪ್ಲೈ ಮಾಡಲಿದ್ದಾರೆ ಅಷ್ಟಕ್ಕೂ ಅಂಬಾನಿ ಎಲೆಕ್ಟ್ರಾನಿಕ್ಸ್ ಮಾರ್ಕೆಟ್ ಮೇಲೆ ಕಣ್ಣು ಹಾಕಿರೋದುಕೆ ಸದ್ಯ ಭಾರತದ ಎಲೆಕ್ಟ್ರಾನಿಕ್ಸ್ ಮಾರ್ಕೆಟ್ ಎಷ್ಟಿದೆ. ರಿಲಯನ್ಸ್ ಗೆ ಇದರಿಂದ ಹೇಗೆ ಲಾಭ ಆಗಲಿದೆ.

ಅಂಬಾನಿ ಭರ್ಜರಿ ಪ್ಲಾನ್ ಎಲೆಕ್ಟ್ರಾನಿಕ್ಸ್ ಮಾರ್ಕೆಟ್ಗೆ ನುಗ್ಗಿದ ರಿಲಯನ್ಸ್ ಸ್ನೇಹಿತರೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೇಡಿಕೆ ಭಾರಿ ವೇಗದಲ್ಲಿ ಹೆಚ್ಚಾಗಿದೆ ಟಿವಿ ಫ್ರಿಡ್ಜ್ ಏರ್ ಕಂಡಿೀಷನರ್ ವಾಷಿಂಗ್ ಮೆಷಿನ್ ಎಲ್ಲಕ್ಕೂ ಡಿಮ್ಯಾಂಡ್ ರಾಕೆಟ್ ನಂತೆ ಏರ್ತಿದೆ ಡೇಟಾ ಪ್ರಕಾರ 2024 ರಲ್ಲಿ ಭಾರತದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಮಾರ್ಕೆಟ್ 84 ಬಿಲಿಯನ್ ಡಾಲರ್ ಮೌಲ್ಯದಲ್ಲಿತ್ತು ಆದರೆ ಮುಂದಿನ ಐದು ವರ್ಷಗಳಲ್ಲಿ ಇದು 125 ರಿಂದ 192 ಬಿಲಿಯನ್ ಡಾಲರ್ ತನಕ ಏರಬಹುದು ಅನ್ನೋ ಅಂದಾಜಿದೆ ಹೀಗಾಗಿ ಅಂಬಾನಿ ಕಣ್ಣು ಈಗ ಈ ಬೃಹತ್ ಮಾರ್ಕೆಟ್ ಮೇಲೆ ಬಿದ್ದಿದೆ.ಎಲ್ಜಿಸ್ ನಂತೆ ತಾವು ಕೂಡ ಹೋಂ್ ಅಪ್ಲಯನ್ಸಸ್ ಕಿಂಗ್ ಆಗಬೇಕು ಅಂತ ಅಂಬಾನಿ ಟ್ರೈ ಮಾಡ್ತಿದ್ದಾರೆ ಅದಕ್ಕಾಗಿ ಜುಲೈ 18 ರಂದು 160 ಕೋಟಿ ರೂಪಾಯಿ ನೀಡಿ ಕೆಲ್ವಿನೇಟರ್ ಅನ್ನು ಗೃಹೋಪಯೋಗಿ ವಸ್ತು ತಯಾರಿಕ ಕಂಪನಿ ಖರೀದಿಸಿದ್ದಾರೆ ಅಲ್ದೆ ಮ್ಯಾನುಫ್ಯಾಕ್ಚರಿಂಗ್ ಮತ್ತು ಡಿಸ್ಟ್ರಿಬ್ಯೂಷನ್ ಗೋಸ್ಕರ ಬಿಪಿಎಲ್ ಲಿಮಿಟೆಡ್ ಅನ್ನೋ ಮತ್ತೊಂದು ಕಂಪನಿ ಜೊತೆಗೆ ಲೈಸೆನ್ಸ್ ಒಪ್ಪಂದ ಕೂಡ ಮಾಡಿಕೊಂಡಿದ್ದಾರೆ. ಈ ಎರಡು ಕಂಪನಿಗಳು ಅಂಬಾನಿಗೆ ಎಲೆಕ್ಟ್ರಾನಿಕ್ಸ್ ಮಾರ್ಕೆಟ್ ಗೆ ನುಗ್ಗೋಕೆ ಎರಡು ಅಶ್ವರಥಗಳ ಹಾಗೆ ಕೆಲಸ ಮಾಡಲಿವೆ. ಯಾಕಂದ್ರೆ ಬಿಪಿಎಲ್ ಗೆ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ 60 ವರ್ಷಗಳ ಅನುಭವ ಇದೆ. ಮೆಡಿಕಲ್ ಉಪಕರಣಗಳಿಂದ ಹಿಡಿದು ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ತನಕ ಎಲ್ಲವನ್ನ ತಯಾರಿಸುತ್ತೆ. ಕೆಲ್ವಿನೇಟರ್ ಕೂಡ ರೆಫ್ರಿಜೆರೇಟರ್ ಮತ್ತು ಹೋಂ ಅಪ್ಲೈಯನ್ಸ್ ಕ್ಷೇತ್ರದಲ್ಲಿ ವಿಶ್ವಾಸಹಾರ ಹೆಸರು. ಸೋ ಎರಡು ಬ್ರಾಂಡ್ಗಳ ಶಕ್ತಿ ಮತ್ತು ತಮ್ಮ ಸಕ್ಸಸ್ ಫುಲ್ ಕ್ಯಾಂಪಸ್ ಸ್ಟ್ರಾಟಜಿ. ಇವೆರಡನ್ನ ಮುಂದಿಟ್ಟುಕೊಂಡು ಅಂಬಾನಿ LG Samsung ಎದ್ರು ನುಗ್ತಿದ್ದಾರೆ.

ಏನಿದು ಕ್ಯಾಂಪೋಲ ಸ್ಟ್ರಾಟಜಿ ಅಂಬಾನಿ ಭಾರತದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಮಾರ್ಕೆಟ್ನ ಹೇಗೆ ದೂಳೆಬಿಸಲಿದ್ದಾರೆ ಅಂತ ಗೊತ್ತಾಗಬೇಕು ಅಂದ್ರೆ ಅವರ ಕ್ಯಾಂಪಕೋಲಾ ಸ್ಟ್ರಾಟಜಿ ಬಗ್ಗೆ ತಿಳ್ಕೊಬೇಕು ಸಾಫ್ಟ್ ಡ್ರಿಂಕ್ಸ್ ಮಾರ್ಕೆಟ್ನ ದಶಕಗಳ ಕಾಲ ಅಮೆರಿಕಾದ ಕೋಕೋಲಾ ಮತ್ತು ಪೆಪ್ಸಿ ಸೇರಿಕೊಂಡು ರೂಲ್ ಮಾಡ್ತಿದ್ರು ಕ್ಯಾಂಪಕೋಲ ಅವರಿಗೆ ಎದುರಾಗಿ ಬಂದು ಸೋತು ಹೋದ ಬ್ರಾಂಡ್ ಆದರೆ ಅಂಬಾನಿ ಅದೇ ಕ್ಯಾಂಪಾನ ಜಸ್ಟ್ 22 ಕೋಟಿಗೆ ಖರೀದಿಸಿ ಮ್ಯಾಜಿಕ್ ಮಾಡಿದ್ರುಎರಡುವರೆ ಬಿಲಿಯನ್ ಡಾಲರ್ ಇಂಡಸ್ಟ್ರಿನ ಅಲ್ಲಾಡಿಸಿದ್ರು ಅವರ ಸ್ಟ್ರಾಟಜಿ ಸಿಂಪಲ್ ಬೆಲೆ ಕಮ್ಮಿ ಮಾಡೋದು ಸೇಲ್ ಹೆಚ್ಚು ಮಾಡೋದು ಕೋಕೋಕೋಲಾ ಗಿಂತ ಸಿಕ್ಕಾಪಟ್ಟೆ ಕಡಿಮೆ ಬೆಲೆಯಲ್ಲಿ ಕ್ಯಾಂಪ ಬಾಟಲ್ ಗಳನ್ನ ಮಾರಿದ್ರು ಗ್ರಾಹಕರು ಕೂಡ ಸ್ವದೇಶಿ ಬ್ರಾಂಡ್ ಜೊತೆಗೆ ಕಮ್ಮಿಗೆ ಸಿಗ್ತಿದೆ ಅಂತ ಹೇಳಿ ಮುಗಿಬಿದ್ದು ಖರೀದಿಸಿದ್ರು ಫಲಿತಾಂಶ ಕೋಲಾ ಪೆಪ್ಸಿ ನಡುವೆ ಸಾಫ್ಟ್ ಡ್ರಿಂಕ್ಸ್ ಕ್ಷೇತ್ರದಲ್ಲಿ ರಿಲಯನ್ಸ್ ಇವತ್ತು 14% ಮಾರ್ಕೆಟ್ ಶೇರ್ ಪಡ್ಕೊಂಡಿದೆ ವರ್ಷಕ್ಕೆ 50 ಕೋಟಿಗೂ ಹೆಚ್ಚು ಕ್ಯಾಂಪ ಬಾಟಲ್ಗಳನ್ನ ಮಾರಿ 1000 ಕೋಟಿಗೂ ಅಧಿಕ ಆದಾಯ ಗಳಿಸುತ್ತಿದೆ. ಇದೇ ಮಾದರಿಯ ಸ್ಟ್ರಾಟಜಿನ ಅಂಬಾನಿ ಈಗ ಎಲೆಕ್ಟ್ರಾನಿಕ್ಸ್ಗು ಅಳವಡಿಸೋಕೆ ನೋಡ್ತಿದ್ದಾರೆ. ಬರಲಿವೆ ಚೀಪ್ ಎಸಿ, ಟಿವಿ, ಫ್ರಿಡ್ಜ್. ಸ್ನೇಹಿತರೆ ನಿಮಗೆಲ್ಲ ಗೊತ್ತಿರೋ ಹಾಗೆ ಅಂಬಾನಿ ಯಾವುದೇ ಹೊಸ ಪ್ರಾಡಕ್ಟ್ ಲಾಂಚ್ ಮಾಡಿದ್ರು ಒಂದು ರೂಲ್ ಇರುತ್ತೆ. ಸ್ಟಾರ್ಟ್ ಚೀಪ್ ಸ್ಕೇಲ್ ಫಾಸ್ಟ್. Jio ಆರಂಭದಲ್ಲೂ ಇದೇ ಮಾದರಿ ಅನುಸರಿಸಿದ್ರು. ಕಡಿಮೆ ಬೆಲೆಗೆ ಸಿಮ್ ಉಚಿತ ಡೇಟಾ ಕೊಟ್ಟು ನಂತರ 10 ಪಟ್ಟು ಗ್ರಾಹಕರ ಸೇರ್ಪಡೆಯಾಯಿತು. ಕ್ಯಾಂಪದಲ್ಲೂ ಇದೇ ಸ್ಟ್ರಾಟಜಿ ಹೋಡಿದ್ರು. ಈಗ ಅದೇ ರೀತಿಯಲ್ಲಿ ರಿಲಯನ್ಸ್ ನ ಎಲೆಕ್ಟ್ರಾನಿಕ್ಸ್ ವಿಭಾಗ ಕೂಡ ಪ್ರಾರಂಭವಾಗಲಿದೆ. ವರದಿಗಳ ಪ್ರಕಾರ LG, Samsung, ಕಂಪನಿಗಳಿಗಿಂತ 20 ರಿಂದ 25% ಕಡಿಮೆ ಬೆಲೆಗೆ ರಿಲಯನ್ಸ್ ತಮ್ಮ ಪ್ರಾಡಕ್ಟ್ ಗಳನ್ನ ನೀಡಲಿದೆ. ಆದರೆ ಕಡಿಮೆ ಬೆಲೆ ಅಂದ್ರೆ ಕೇಳು ಗುಣಮಟ್ಟದ ಪ್ರಾಡಕ್ಟ್ಸ್ ಅಲ್ಲ. ಎಂಟ್ರಿ ಲೆವೆಲ್ ನಿಂದ ಪ್ರೀಮಿಯಂ ಸೆಗ್ಮೆಂಟ್ ತನಕ ಎಲ್ಲಾ ಮಾದರಿಯ ಪ್ರಾಡಕ್ಟ್ ತರೋ ಪ್ಲಾನ್ ಇದೆ.

ಬಿಪಿಎಲ್ ಲಿಮಿಟೆಡ್ ಅಡಿ ಎಲ್ಲಾ ಸೆಗ್ಮೆಂಟ್ ನ ಎಸಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಸ್ಮಾಲ್ ಅಪ್ಲಿಯನ್ಸ್ ಗಳು ಬರಲಿವೆ. ಕೆಲ್ವಿನೇಟರ್ ಅಡಿ, ಪ್ರೀಮಿಯಂ ಸೈಡ್ ಬೈ ಸೈಡ್ ಫ್ರಿಡ್ಜ್, ಫ್ರಂಟ್ ಲೋಡ್ ವಾಷಿಂಗ್ ಮಿಷಿನ್, ಏರ್ ಕೂಲರ್ ಹೀಗೆ ಹಲವಾರು ಉತ್ಪನ್ನಗಳು ಲಾಂಚ್ ಆಗಲಿವೆ.ರಿಲಯನ್ಸ್ ಯಶಸ್ಸಿನ ಮತ್ತೊಂದು ಬಲ ಅದರ ಡಿಸ್ಟ್ರಿಬ್ಯೂಷನ್ ಪವರ್ ಸ್ಟ್ರಾಂಗ್ ಡಿಸ್ಟ್ರಿಬ್ಯೂಟರ್ ನೆಟ್ವರ್ಕ್ ಮೂಲಕ ರಿಲಯನ್ಸ್ ಆಡುತ್ತೆ ಈ ಬಾರಿ ಕೂಡ ವ್ಯಾಪಾರಿಗಳಿಗೆ 8% ಇಂದ 15% ಸೇಲ್ಸ್ ಮಾರ್ಜಿನ್ ಕೊಡಲಿದೆ ಇದು ಉಳಿದ ಬ್ರಾಂಡ್ ಗಳಿಗಿಂತ ಹೆಚ್ಚು ಹೀಗಾಗಿ ವ್ಯಾಪಾರಿಗಳು ಸ್ವತಹ ಈ ಪ್ರಾಡಕ್ಟ್ ಗಳನ್ನ ಗ್ರಾಹಕರಿಗೆ ರೆಕಮೆಂಡ್ ಮಾಡೋ ಸಾಧ್ಯತೆ ಇದೆ ಆದರೆ ಕೆಲವರಿಗೆ ಹೀಗೆ ಹೆಚ್ಚು ಮಾರ್ಜಿನ್ ಕೊಟ್ಟರೆ ಲಾಸ್ ಆಗಲ್ವಾ ಅನ್ನೋ ಡೌಟ್ ಬರಬಹುದು ಹೌದು ಆರಂಭದಲ್ಲಿ ಲಾಭ ಕಡಿಮೆ ಆಗಬಹುದು ಆದರೆ ರಿಲಯನ್ಸ್ ನ ಲೆಕ್ಕಾಚಾರ ಸಿಂಪಲ್ ಮೊದಲು ಗ್ರಾಹಕರ ಹೃದಯ ಗೆಲ್ಬೇಕು ಲಾಭ ತನ್ನಿಂತಾನೆ ಬರುತ್ತೆ ಒಮ್ಮೆ ಗ್ರಾಹಕರಿಗೆ ವಸ್ತುಗಳು ಪರಿಚಯ ಆದಮೇಲೆ ಪ್ರಾಡಕ್ಟ್ಸ್ ರೇಟ್ ಜಾಸ್ತಿ ಮಾಡಿದ್ರೆ ಹಾಗೂ ದೊಡ್ಡ ಪ್ರಮಾಣದಲ್ಲಿ ಸೇಲ್ ಮಾಡಿದ್ರೆ ಲಾಸ್ ರಿಕವರ್ ಮಾಡೋದು ಸುಲಭ ಇಲ್ಲಿವರೆಗೆ ಕೆಲ್ವಿನೇಟರ್ ಮತ್ತು ಬಿಪಿಎಲ್ ತಮ್ಮ ಬ್ರಾಂಡ್ಸ್ ನ ತಮ್ಮದೇ ಸ್ಟೋರ್ಗಳಲ್ಲಿ ಮಾತ್ರ ಮಾರಾಟ ಮಾಡ್ತಿದ್ವು ಆದರೀಗ ರಿಲಯನ್ಸ್ ತನ್ನ ಡಿಜಿಟಲ್ ಮಲ್ಟಿ ಬ್ರಾಂಡ್ ಸ್ಟೋರ್ಸ್ ಮತ್ತು ಆನ್ಲೈನ್ ಪ್ಲಾಟ್ಫಾರ್ಮ್ ಗಳ ಮೂಲಕ ದೇಶದ ಪ್ರತಿಯೊಂದು ಪಟ್ಟಣಕ್ಕೂ ತಲುಪಿಸಲಿದೆ.

ರಿಲಯನ್ಸ್ ನ ಅನೇಕ ಪ್ರಾಡಕ್ಟ್ಗಳ ಸ್ಟ್ರಾಂಗ್ ಡಿಸ್ಟ್ರಿಬ್ಯೂಷನ್ ನೆಟ್ವರ್ಕ್ ಇಲ್ಲಿ ಯೂಸ್ ಆಗಲಿದೆ ಹಾಗೆ ಕೆಲ್ವಿನೇಟರ್ ಮತ್ತು ಬಿಪಿಎಲ್ ಎರಡು ಟ್ರಸ್ಟೆಡ್ ಬ್ರಾಂಡ್ ಇದರ ಜೊತೆಗೆ ಈಗ ಸ್ವದೇಶಿ ಅನ್ನೋ ಟ್ಯಾಗ್ಲೈನ್ ಸೇರಿಕೊಂಡ್ರೆ ಸೇಲ್ಸ್ ಸರ್ ಅಂತ ಏರುತ್ತೆ ಅನ್ನೋದು ಅಂಬಾನಿ ಲೆಕ್ಕಾಚಾರ ವಿದೇಶದಲ್ಲೂ ಸಿಗಲಿವೆ ರಿಲಯನ್ಸ್ ಪ್ರಾಡಕ್ಟ್ ಅಂಬಾನಿ ಕೇವಲ ಭಾರತದ ಮಾರ್ಕೆಟ್ ಮೇಲಷ್ಟೇ ಫೋಕಸ್ ಮಾಡ್ತಿಲ್ಲ ವಿದೇಶಿ ಮಾರುಕಟ್ಟೆನು ಟಾರ್ಗೆಟ್ ಮಾಡಿಕೊಂಡಿದ್ದಾರೆ ಪಕ್ಕದ ನೇಪಾಳ ಭೂತಾನ್ ಮತ್ತು ಶ್ರೀಲಂಕದಲ್ಲಿ ಕೂಡ ರಿಲಯನ್ಸ್ ತನ್ನ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟ ಆರಂಭಿಸೋಕೆ ಸಜ್ಜಾಗಿದೆ ಆಫ್ರಿಕಾ ದೇಶಗಳು ಕೂಡ ಅಂಬಾನಿ ಟಾರ್ಗೆಟ್ ನಲ್ಲಿ ಭಾರತದಂತೆ ಈ ದೇಶಗಳಲ್ಲಿ ಸಹ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಬೇಡಿಕೆ ವೇಗವಾಗಿ ಹೆಸತಿದೆ ಹೀಗಾಗಿ ಅಂಬಾನಿ ಇಂಟರ್ನ್ಯಾಷನಲ್ ಮಾರ್ಕೆಟ್ನಲ್ಲಿ ಕೂಡ ಸ್ಪರ್ಧೆ ಮಾಡೋಕೆ ನೋಡ್ತಿದ್ದಾರೆ ಮಾರ್ಕೆಟ್ನಲ್ಲಿ ರಿಲಯನ್ಸ್ ಗೆ ಇರೋ ಸಮಸ್ಯೆ ಆದರೆ ಸ್ನೇಹಿತರೆ ಈ ಯಶಸ್ಸಿನ ಮಾರ್ಗ ಸಂಪೂರ್ಣ ಸುಲಭವಾಗಿಲ್ಲ ಇದೀಗ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಮಾರ್ಕೆಟ್ ಸ್ಯಾಮ್ಸಂಗ್ LG Xiaomi Sony ಹೀಗೆ ದೊಡ್ಡ ಬ್ರಾಂಡ್ಗಳ ವಶದಲ್ಲಿದೆ ಟಿವಿ ಮಾರ್ಕೆಟ್ನಲ್ಲಿ Samsung 16% LG 15% Xiaomi 12% ಕಂಟ್ರೋಲ್ ಮಾಡ್ತಿವೆ ಉಳಿದ ಉಳಿದ 40% ಅನ್ನು ಟಿಸಿಎಲ್ ಸೋನಿ ಮುಂತಾದವು ಹಂಚಿಕೊಂಡಿವೆ ರೆಫ್ರಿಜರೇಟರ್ ವಾಷಿಂಗ್ ಮಿಷಿನ್ ಎಸಿ ಮಾರ್ಕೆಟ್ನ ಕೂಡ ಆಲ್ರೆಡಿ ದೊಡ್ಡ ದೊಡ್ಡ ಕಂಪನಿಗಳು ಕಂಟ್ರೋಲ್ ಮಾಡ್ತೇವೆ ಓವರಾಲ್ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಮಾರ್ಕೆಟ್ ಕೂಡ 20 ರಿಂದ 22% ಸ್ಯಾಮ್ಸಂಗ್ ಹಿಡಿತದಲ್ಲಿ 18 ರಿಂದ 20% ಎಲ್ಜಿ ಉಳಿದದ್ದು Xiaomi ಮತ್ತು ವರ್ಲ್ಡ್ ವೂಲ್ ಹತ್ರ ಇದೆ ಇವರ ನಡುವೆ ನುಗ್ಗಿ ರಿಲಯನ್ಸ್ ನ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್ಸ್ ಸ್ಪರ್ಧೆ ಮಾಡಬೇಕು ಅಫ್ಕೋರ್ಸ್ ರಿಲಯನ್ಸ್ ಕಂಪನಿ ತನ್ನ ಪ್ರಾಡಕ್ಟ್ ನ ಇವರಿಗಿಂತ ಕಡಿಮೆ ಬೆಲೆಗೆ ಲಾಂಚ್ ಮಾಡುತ್ತೆ ನಿಜ ಆದರೆ ಇವರು ಕೂಡ ರಿಲಯನ್ಸ್ ನ ನೋಡ್ಕೊಂಡು ತಮ್ಮ ಪ್ರಾಡಕ್ಟ್ ಬೆಲೆನ ಸ್ವಲ್ಪ ಕಡಿಮೆ ಮಾಡೋ ಸಾಧ್ಯತೆ ಇರುತ್ತೆ. ಜೊತೆಗೆ ಎಲ್ಲಕ್ಕಿಂತ ಇಂಪಾರ್ಟೆಂಟ್ ಆಗಿ ಸ್ಯಾಮ್ಸಂಗ್ ಮತ್ತು LG ಕಂಪನಿಗಳು ವರ್ಷಕ್ಕೊಮ್ಮೆ ಹೊಸ ತಂತ್ರಜ್ಞಾನ ಪರಿಚಯಿಸುತ್ತವೆ. ರಿಸರ್ಚ್ ಅಂಡ್ ಡೆವಲಪ್ಮೆಂಟ್ ಮೇಲೆ ಹೆವಿ ಹೂಡಿಕೆ ಮಾಡುತ್ತವೆ. ಹೊಸ ಹೊಸ ಫೀಚರ್ಸ್ ನ ಕೊಡುತ್ತವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments