ಭಾರತವು ಆರನೇ ತಲೆಮಾರಿನ ಯುದ್ಧ ವಿಮಾನಗಳನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಡೈರೆಕ್ಟೆಡ್ ಎನರ್ಜಿ ವೆಪನ್ಸ್ ಮತ್ತು ಹೈಪರ್ಸೋನಿಕ್ ಶಸ್ತ್ರಾಸ್ತ್ರಗಳೊಂದಿಗೆ ಅಭಿವೃದ್ಧಿ ಪಡಿಸಲು ಸಂಪೂರ್ಣ ಸಜ್ಜಾಗಿದೆ ಎಂದು ಡಿಆರ್ಡಿಓನ ಏರೋನಾಟಿಕಲ್ ಸಿಸ್ಟಮ್ಸ್ ವಿಭಾಗದ ಡೈರೆಕ್ಟರ್ ಜನರಲ್ ಕೆ ರಾಜಲಕ್ಷ್ಮಿ ಮೆನನ್ ಅವರು ಇತ್ತೀಚೆಗೆ ಘೋಷಿಸಿದ್ದಾರೆ ಅವರು ನೀಡಿದ ಹೇಳಿಕೆಯು ಭಾರತದ ಏರೋಸ್ಪೇಸ್ ವಿನ್ಯಾಸ ಹಾಗೂ ತಯಾರಿಕಾ ಸಾಮರ್ಥ್ಯದ ಮೇಲೆ ರಾಷ್ಟ್ರಕ್ಕೆ ಹೆಚ್ಚುತ್ತಿರುವ ಆತ್ಮವಿಶ್ವಾಸ ಸವನ್ನು ತೋರಿಸುತ್ತದೆ.
ಜೊತೆಗೆ ಇಂತಹ ಅತಿ ಆಧುನಿಕ ಯುದ್ಧ ವಿಮಾನಗಳನ್ನು ತಯಾರು ಮಾಡಬಲ್ಲ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಭಾರತ ಕೂಡ ಸೇರುವ ಗುರಿಯನ್ನು ಹೊಂದಿದೆ ಆರನೇ ತಲೆಮಾರಗಿನ ಯುದ್ಧ ವಿಮಾನಗಳು ಭವಿಷ್ಯದ ಯುದ್ಧ ವಿಮಾನ ತಂತ್ರಜ್ಞಾನಗಳ ಮುಂದಿನ ಹಂತವಾಗಿದೆ ಇವು ಅತ್ಯಾಧುನಿಕ ಸ್ಟೆಲ್ತ್ ಸಾಮರ್ಥ್ಯ ಹೈಪರ್ಸೋನಿಕ್ ವೇಗದಲ್ಲಿ ಹಾರಬಲ್ಲ ಸಾಮರ್ಥ್ಯ ಮತ್ತು ಲೇಸರ್ ಗಳಂತಹ ಡೈರೆಕ್ಟೆಡ್ ಎನರ್ಜಿ ವೆಪನ್ಸ್ ಗಳನ್ನು ಹೊಂದಿರಲಿವೆ ಇದಲ್ಲದೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಸ್ವಯಂಚಾಲಿತ ಕಾರ್ಯ ನಿರ್ವಹಣೆ ಮತ್ತು ಲಾಯಲ್ ವಿಂಗ್ ಮ್ಯಾನ್ ಎಂದು ಕರೆಯಲಾಗುವ ಡ್ರೋನ್ಗಳ ಗುಂಪನ್ನು ನಿಯಂತ್ರಿಸುವ ಸಾಮರ್ಥ್ಯ ಕೂಡ ಇವುಗಳ ಪ್ರಮುಖ ಅವಶಿಷ್ಟ್ಯವಾಗಿರುತ್ತದೆ ಇವು ಐದನೇ ತಲೆಮಾರಿನ ಯುದ್ಧ ವಿಮಾನಗಳಿಂದ ಒಂದು ಹೆಜ್ಜೆ ಮುಂದೆ ಹೋಗಿ ಮಾನವ ಯಂತ್ರ ಸಹಯೋಗದ ಹೊಸ ಹಂತವನ್ನು ತಲುಪಲಿವೆ ಮೆನನ್ ಅವರು ಭಾರತ ಈಗಾಗಲೇ ಲಘು ಯುದ್ಧ ವಿಮಾನ ಎಲ್ಸಿಎ ತೇಜಸ್ ಅಭಿವೃದ್ಧಿ ಮೂಲಕ ಅಮೂಲ್ಯ ಅನುಭವ ಗಳಿಸಿವೆ ತೇಜಸ್ ಯಶಸ್ವಿಯಾಗಿ ವಾಯುಪಡೆಯಲ್ಲಿಗೆ ಸೇರಿರುವುದು ಭಾರತ ಸಂಪೂರ್ಣವಾಗಿ ಸ್ವಂತ ಯುದ್ಧ ವಿಮಾನವನ್ನು ವಿನ್ಯಾಸ ಮಾಡಿ ತಯಾರು ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಾಬಿತು ಮಾಡಿದೆ.
ಇದೇವೇಳೆ ನಡೆಯುತ್ತಿರುವ ಎಎಂಸಿಎ ಅಡ್ವಾನ್ಸ್ಡ್ ಮೀಡಿಯಂ ಕಂಬ್ಯಾಟ್ ಏರ್ ಕ್ರಾಫ್ಟ್ ಆಂಕಾ ಯೋಜನೆ ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನ ನಿರ್ಮಾಣದತ ದಾರಿ ಮಾಡಿಕೊಡುತ್ತಿದೆ ಈ ಎಲ್ಲಾ ಯೋಜನೆಗಳಿಂದ ಸಿಕ್ಕ ಅನುಭವ ಏರೋಡೈನಾಮಿಕ್ಸ್ ಅಡ್ವಾನ್ಸ್ ಮೆಟೀರಿಯಲ್ಸ್ ಎವಿನಿಕ್ ಹಾಗೂ ಸೆನ್ಸಾರ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಭಾರತದ ಪರಿಣಿತಿ ಜೊತೆಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಲ್ಲಿ ಸಾಧಿಸಿರುವ ಪ್ರಗತಿ ಇವುಗಳೆಲ್ಲವೂ ಆರನೇ ತಲೆಮಾರಿನ ಯುದ್ಧ ವಿಮಾನದ ಅಭಿವೃದ್ಧಿಗೆ ಬೇಕಾದ ಗಟ್ಟಿಯಾದ ನೆಲೆ ನೀಡುತ್ತಿವೆ ಎಂದು ಅವರು ಹೇಳಿದರು ಅದರ ಜೊತೆಗೆ ಖಾಸಾಗಿ ಕಂಪನಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವವು ಈ ಮಹತ್ವಾಕಾಂಕ್ಷಿ ಯೋಜನೆಗೆ ಇನ್ನಷ್ಟು ಬಲ ನೀಡಲಿವೆ ಡಿಆರ್ಡಿಓ ತಂತ್ರಗಾರಿಕೆಯಲ್ಲಿ ಈಗ ಮೇಕ್ ಇನ್ ಇಂಡಿಯಾ ಅಭಿಯಾನ ಪ್ರಮುಖ ಪಾತ್ರ ವಹಿಸುತ್ತಿದೆ.
ಅಸೆಂಬ್ಲಿ ಮಟ್ಟದ ಕೆಲಸದಿಂದ ಹೊರಬಂದು ಮೂಲ ತಂತ್ರಜ್ಞಾನಗಳನ್ನು ಸ್ವತಃ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸುವತ್ತ ಗಮನಹರಿಸಲಾಗಿದೆ. ಇದರಲ್ಲಿ ಜಟ್ ಇಂಜಿನ್ಗಳು, ಎಈಎಸ್ಎ ರಡಾರ್ಗಳು ಮತ್ತು ಎಲೆಕ್ಟ್ರಾನಿಕ್ ವಾರ್ಫೇರ್ ಸಿಸ್ಟಮ್ಸ್ ಗಳಂತಹ ಅತ್ಯಗತ್ಯ ತಂತ್ರಜ್ಞಾನಗಳು ಸೇರಿವೆ. ಆದರೆ ಆರನೇ ತಲೆಮಾರಿನ ಯುದ್ಧ ವಿಮಾನ ನಿರ್ಮಾಣ ಬಹಳ ಸಂಕೀರ್ಣ ಹಾಗೂ ದುಬಾರಿ ಕಾರ್ಯ. ದೀರ್ಘಕಾಲದ ಹೂಡಿಕೆ ಮತ್ತು ವಿಶ್ವದ ಇತರ ರಾಷ್ಟ್ರಗಳ ವೇಗದ ಅಭಿವೃದ್ಧಿಯೊಂದಿಗೆ ಸ್ಪರ್ಧಿಸುವುದು ಭಾರತಕ್ಕೆ ದೊಡ್ಡ ಸವಾಲಾಗಲಿದೆ. ಈಗಾಗಲೇ ಅಮೆರಿಕಾ ತನ್ನ ಎನ್ಜಿಎಡಿ ನೆಕ್ಸ್ಟ್ ಜನರೇಷನ್ ಏರ್ ಡಾಮಿನೆನ್ಸ್ ಯೋಜನೆಗೆ ಮುಂದಾಗಿದೆ ಯುರೋಪಿಯನ್ ರಾಷ್ಟ್ರಗಳು ಸೇರಿ ಎಫ್ಸಿಎಸ್ ಫ್ಯೂಚರ್ ಕಂಬ್ಯಾಟ್ ಏರ್ ಸಿಸ್ಟಂ ಮೇಲೆ ಕೆಲಸ ಮಾಡುತ್ತಿವೆ ಜೊತೆಗೆ ಬ್ರಿಟನ್ ಇಟಲಿ ಜಪಾನ್ ಒಟ್ಟಾಗಿ ಜಿ ಕ್ಯಾಪ್ ಗ್ಲೋಬಲ್ ಕಂಬ್ಯಾಟ್ ಏರ್ ಪ್ರೋಗ್ರಾಮ್ ಯೋಜನೆಯನ್ನು ಮುಂದುವರಿಸುತ್ತಿವೆ ಇಂತಹ ಜಾಗತಿಕ ಸ್ಪರ್ಧೆಯ ನಡುವೆಯು ಭಾರತ ಯಶಸ್ವಿಯಾಗಲು ತಕ್ಕ ಸಾಮರ್ಥ್ಯ ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಭಾರತದ ಪ್ರತಿಭಾವಂತ ಯುವಶಕ್ತಿ ಮತ್ತು ಎಚ್ಎಎಲ್ ಟಾಟಾ ಮುಂತಾದ ಖಾಸಾಗಿ ಕಂಪನಿಗಳ ಪಾತ್ರವು ಇದರಲ್ಲಿ ಮುಖ್ಯವಾಗಲಿದೆ ಎಂದು ಹೇಳಿದರು.
ಸರ್ಕಾರದ ನಿರಂತರ ಬೆಂಬಲ ಮತ್ತು ಸೂಕ್ಷ್ಮ ತಂತ್ರಜ್ಞಾನಗಳ ಯೋಜನೆಯೊಂದಿಗೆ ಮುಂದಿನ 10 ವರ್ಷಗಳೊಳಗೆ ಭಾರತ ಆರನೇ ತಲೆಮಾರಿನ ಯುದ್ಧ ವಿಮಾನ ನಿರ್ಮಾಣದ ಗುರಿಯನ್ನು ತಲುಪಬಹುದು ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.