ಫ್ರಾನ್ಸ್ ನಲ್ಲಿ ಇಂತ ಒಂದು ಅದ್ಭುತವನ್ನ ಸೃಷ್ಟಿ ಮಾಡಿದ್ದಾರೆ ಪ್ರಪಂಚದಾದ್ಯಂತ ಈವಿ ವಾಹನಗಳ ಬಳಕೆ ಜಾಸ್ತಿ ಆಗ್ತಿದೆಯಲ್ಲ ನಮ್ಮಲ್ಲೂ ಪೆಟ್ರೋಲ್ ರೇಟ್ ಜಾಸ್ತಿ ಆಯ್ತು ಅಂತ ಎಲೆಕ್ಟ್ರಿಕ್ ಗಾಡಿ ತಗೊಳೋಕೆ ಶುರು ಮಾಡಿದೀವಿ ನಾವು ಆದರೆ ಚಾರ್ಜಿಂಗ್ದು ಸಿಕ್ಕಾಪಟ್ಟೆ ಆಂಗ್ಸೈಟಿ ಇತ್ತು ದಾರಿ ಮಧ್ಯದಲ್ಲಿ ಎಲ್ಲಿ ಗಾಡಿ ಖಾಲಿಯಾಗಿ ನಿಂತ್ಕೊಳ್ಳುತ್ತಪ್ಪ ಚಾರ್ಜ್ ಅನ್ನೋ ರೇಂಜ್ ಆಂಗ್ಸೈಟಿ ಇತ್ತು ಆದರೆ ಫ್ರಾನ್ಸ್ ಈ ಸಮಸ್ಯೆಗೆ ಪರಿಹಾರ ತಂದಿದೆ ಇಮ್ಯಾಜಿನ್ ಮಾಡಿ ನೀವು ಒಂದು 70 80% ಚಾರ್ಜ್ ಮಾಡಿ ರೋಡಲ್ಲಿ ಹೋಗ್ತಾ ಇರ್ತೀರಾ ಒಂದು 500 ಕಿಲೋಮೀಟರ್ ಜರ್ನಿ ಇರುತ್ತೆ ದಾರಿ ಮಧ್ಯೆ ಅಲ್ಲಲ್ಲಿ ಪ್ರತಿ 100 ಕಿಲೋಮೀಟ ಗೆ ಒಂದು ಸಲಿ ಎರಡೆರಡು ಕಿಲೋಮೀಟ ನಷ್ಟು ಉದ್ದದ ಚಾರ್ಜಿಂಗ್ ರೋಡ್ಸ್ ಇರ್ತವೆ ಸೋ ನೀವು ಜರ್ನಿ ಯುದ್ದಕ್ಕೆ ನಾಲ್ಕೈದು ಸಲಿ ಅವುಗಳ ಮೇಲೆ ಪಾಸ್ ಆಗಿ ಹೋಗೋದಿರುತ್ತೆ ಅವುಗಳ ಮೇಲೆ ಪಾಸ್ ಆಗ್ಬೇಕಾದ್ರೆ ಪ್ರತಿ ಸಲಿ ಪಾಸ್ ಆದಾಗಲೂ ಕೂಡ ಪ್ರತಿ ಸ್ಟ್ರೆಚ್ ನಲ್ಲಿ ಪಾಸ್ ಆದಾಗಲೂ ಕೂಡ ನಿಮ್ಮ ಗಾಡಿ ಒಂದು ಐದರಿಂದ 10% ಚಾರ್ಜ್ ಆಗ್ಬಿಡುತ್ತೆ ಒಂದು 25 30 ಕಿಲೋಮೀಟ ರೇಂಜ್ ಆಡ್ ಆಗ್ತಾನೆ ಇರುತ್ತೆ ಸೋ 500 ಕಿಲೋಮೀಟ ನ ಜರ್ನಿ ಮುಗಿಸಬೇಕಾದ್ರೆ ಒಂದು ನಾಲ್ಕೈದು ಸಲಿ ಈ ರೀತಿ ಚಾರ್ಜಿಂಗ್ ರೋಡ್ ಸಿಕ್ಬಿಟ್ರೆ ಒಂದಎರಡು ಕಿಲೋಮೀಟ ದು ಪ್ರತಿ ಸಲಿ ಇದಒಂದು 10% ಚಾರ್ಜ್ ಆಗ್ತಾ ಹೋಯ್ತು 25 30 ಕಿಲೋಮೀಟ ರೇಂಜ್ನ್ನ ಆಡ್ ಮಾಡ್ತಾ ಹೋಯ್ತು ಅಂತ ಹೇಳಿದ್ರೆ ನೀವು 500 km ನ ಜರ್ನಿ ಮುಗಿಸಿದಾಗ ಇವಾಗ ನಿಮ್ಮ ಗಾಡಿದ್ದು ಚಾರ್ಜ್ ಫುಲ್ ಖಾಲಿ ಆಗಿಹೋದ್ರೆ ಈ ಹೊಸ ಟೆಕ್ನಾಲಜಿಲಿ ಖಾಲಿ ಆಗೋದರ ಬದಲಾಗಿ ಚಾರ್ಜ್ ಆಗಿರುತ್ತೆ ಬ್ಯಾಟರಿ ಫುಲ್ಲೇ ಇರುತ್ತೆ ಅಥವಾ ಆಲ್ಮೋಸ್ಟ್ ಫುಲ್ ಇರುತ್ತೆ ಜರ್ನಿ ಮುಗಿದು ಹೋಗಿರುತ್ತೆ ಹೆಂಗಿದೆ ಐಡಿಯಾ ರೆವಲ್ಯೂಷನರಿ ಅಲ್ವಾ ಇದನ್ನೇ ಫ್ರೆಂಚರು ಮಾಡಿದ್ದಾರೆ.
ಫ್ರಾನ್ಸ್ ನ ಎಲೆಕ್ಟ್ರಿಕ್ ರೋಡ್ ಸ್ನೇಹಿತರೆ ಪ್ಯಾರಿಸ್ ನಿಂದ ರಾಜಧಾನಿ ಪ್ಯಾರಿಸ್ ನಿಂದ 40 ಕಿಲೋಮೀಟ ದೂರದ ಟೂರ್ಸ್ ಹಾಗೂ ಅಂಬೋಯ್ಸ್ ಅನ್ನೋ ಪಟ್ಟಣದ ನಡುವೆ ಮ್ಯಾಜಿಕ್ ರೋಡನ್ನ ಹಾಕಿದ್ದಾರೆ ಫ್ರೆಂಚರು ಪೈಲೆಟ್ ಪ್ರಾಜೆಕ್ಟ್ ಹಾಕಿ ಅಲ್ಲಿನ ಎಟೆನ್ ಮೋಟಾರ್ ವೇ ಅನ್ನೋ ಹೆದ್ದಾರಿಯಲ್ಲಿ 1.5 ಕಿಲೋಮೀಟ ಸ್ಟ್ರೆಚ್ನಲ್ಲಿ ಚಾರ್ಜಿಂಗ್ ರೋಡ್ಸ್ ಹಾಕಿದ್ದಾರೆ ವಿನ್ಸಿ ಆಟೋ ರೂಟ್ಸ್ ಅನ್ನೋ ಕಂಪನಿ ಈ ರಸ್ತೆಯ ನಿರ್ಮಾಣ ಕಾರ್ಯ ನೋಡಿಕೊಂಡಿದೆ ಇದರ ಮೇಲೆ ವಾಹನಗಳು ಓಡಾಡಿದರೆ ಸಾಕು ಬ್ಯಾಟರಿ ಚಾರ್ಜ್ ಆಗುತ್ತೆ 200 ರಿಂದ 300 ಕಿಲೋವಟ್ ಪವರ್ ಡೆಲಿವರಿ ಮಾಡೋ ಸಾಮರ್ಥ್ಯ ಈ ರಸ್ತೆಗಿದೆ ಆದರೆ ಇಲ್ಲಿ ರಸ್ತೆ ಮತ್ತು ವಾಹನದ ಕಾಂಟ್ಯಾಕ್ಟ್ ಟೈಮ್ ಮ್ಯಾಟರ್ ಆಗುತ್ತೆ ಉದಾಹರಣೆಗೆ ಒಂದು ನಾವು ಇವಿನ ನ ಎಕ್ಸಾಂಪಲ್ ತಗೊಳ್ಳೋಣ EV ಈ ರಸ್ತೆ ಮೇಲೆ ಗಂಟೆಗೆ 60 km ವೇಗದಲ್ಲಿ ಹೋಗ್ತಾ ಇದ್ರೆ ಈ ಪರ್ಟಿಕ್ಯುಲರ್ ಸ್ಟ್ರೆಚ್ ನ ಪಾಸ್ ಮಾಡೋಕೆ ಸುಮಾರು ಒಂದು ಒಂದುವರ ನಿಮಿಷ ತಗೋಬಹುದು. ಆ ಟೈಮ್ನಲ್ಲಿ ಗಾಡಿ ಸುಮಾರು 9% ಚಾರ್ಜ್ ಆಗಬಹುದು. ಈ ಹೊಸ ಟೆಕ್ನಾಲಜಿ ಪ್ರಕಾರ. ಇದರಿಂದ ಕಾರ್ ನ ರೇಂಜ್ ಸುಮಾರು 25 km ಆಡ್ ಆಗುತ್ತೆ ಎಕ್ಸ್ಟ್ರಾ ಒಂದು ವೇಳೆ ನಿಮಗೆ ಕಾರ್ ಇನ್ನು ಜಾಸ್ತಿ ಚಾರ್ಜ್ ಆಗ್ಬೇಕು ಅಂದ್ರೆ ಸ್ವಲ್ಪ ಸ್ಲೋ ಹೋಗಬೇಕಾಗುತ್ತೆ. ಫ್ರಾನ್ಸ್ನ ಈ ಈವಿ ರೋಡ್ ಇನ್ನು ಪೈಲಟ್ ಪ್ರಾಜೆಕ್ಟ್ ಇದು ಯಶಸ್ವಿಯಾದರೆ 2035ರ ಹೊತ್ತಿಗೆ 9000 ಕಿಲೋಮೀಟ ಚಾರ್ಜಿಂಗ್ ರೋಡ್ಗಳನ್ನ ಮಾಡೋಕೆ ಫ್ರಾನ್ಸ್ ಪ್ಲಾನ್ ಮಾಡ್ಕೊಂಡಿದೆ ಬರಿ 1.5 5 ಕಿಲೋಮೀಟ ನ ಚಾರ್ಜಿಂಗ್ ರೋಡ್ ಹಾಕೋಕೆ ಫ್ರಾನ್ಸ್ ಸರ್ಕಾರ 26 ಮಿಲಿಯನ್ ಯೂರೋ ಖರ್ಚು ಮಾಡಿದೆ. ಬಹಳ ದುಡ್ಡಲ್ಲ ನಮ್ಮಲ್ಲಿ ಚಾರ್ಜಿಂಗ್ ರೋಡ್ ಅಲ್ಲ ಮಾಮೂಲಿ ರೋಡ್ ಹಾಕೋಕೆ ಒಂದೊಂದು ಕಿಲೋಮೀಟರ್ ಗೆ 200 ಕೋಟಿ ರೂಪಾಯಿ ಖರ್ಚು ಮಾಡ್ತಾರೆ ಅಂತ ಮಹಾನುಭಾವರು ಇದ್ದಾರೆ.
ಈ ಫ್ರೆಂಚರು ಚಾರ್ಜಿಂಗ್ ರೋಡ್ ಅಲ್ವಾ ಅಂತ ನೀವು ಹೇಳಬಹುದು ಅದು ಬೇರೆ ಡಿಬೇಟ್ ಬಿಡಿ. ಏನು ಸ್ನೇಹಿತರೆ ವರದಿಯಲ್ಲಿ ಮುಂದುವರೆಯುವ ಮುನ್ನ ಸೆವೆನ್ ಸೈನ್ಸ್ ಟೂರಿಸಂ ಕಂಪನಿ ಅಂಡಮಾನ್ ಗೆ ಟ್ರಿಪ್ ಅನ್ನ ಆಯೋಜನೆ ಮಾಡಿದೆ. ಕೇವಲ 51,700 ರೂ. ಮಾತ್ರ ಅಂಡಮಾನ್ ಫೋರ್ ನೈಟ್ ಫೈವ್ ಡೇಸ್ ಟ್ರಿಪ್ ಇದು ಸೆಲ್ಯುಲರ್ ಜೈ ಲೈಟ್ ಅಂಡ್ ಸೌಂಡ್ ಶೋ ಸೇರಿ ಸ್ಕ್ರೀನ್ ಮೇಲೆ ಕಾಣಿಸ್ತಿರೋ ಎಲ್ಲಾ ಜಾಗಗಳಿಗೆ ಹೋಗೋದು ಕೂಡ ಇರುತ್ತೆ. ಹೊರಡೋ ದಿನ 10 ಡಿಸೆಂಬರ್ 2025 ಆಸಕ್ತರು ಈ ನಂಬರ್ಗೆ ಕಾಲ್ ಮಾಡಿ ನಿಮ್ಮ ಅಂಡಮಾನ್ ಟೂರ್ನ ಟಿಕೆಟ್ ಅನ್ನ ಬುಕ್ ಮಾಡಿ. ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ. ಇವಿ ರಸ್ತೆ ಹೇಗೆ ಕೆಲಸ ಮಾಡುತ್ತೆ. ಈ ರಸ್ತೆಯನ್ನ ಡೈನಾಮಿಕ್ ವೈರ್ಲೆಸ್ ಪವರ್ ಟ್ರಾನ್ಸ್ಫರ್ಡಿಡಬ್ಲ್ೂಪಿಟಿ ಅನ್ನೋ ವಿಶಿಷ್ಟ ಟೆಕ್ನಾಲಜಿ ಬಳಸಿ ಮಾಡಲಾಗಿದೆ. ಈ ಟೆಕ್ನಾಲಜಿಯಲ್ಲಿ ಮ್ಯಾಗ್ನೆಟ್ ಮೂಲಕ ರಸ್ತೆಯಿಂದ ವಾಹನಗಳಿಗೆ ಎನರ್ಜಿ ಟ್ರಾನ್ಸ್ಫರ್ ಮಾಡಲಾಗುತ್ತೆ. ಸ್ಕೂಲಲ್ಲಿ ನೀವು ಮೈಕಲ್ ಫ್ಯಾರಡೆನ ನಿಯಮಗಳನ್ನ ಓದಿರಬಹುದು. ಇಂಗ್ಲಿಷ್ನಲ್ಲಿ ಫ್ಯಾರಡೇಸ್ ಲಾ ಆಫ್ ಎಲೆಕ್ಟ್ರೋ ಮ್ಯಾಗ್ನೆಟಿಕ್ ಇಂಡಕ್ಷನ್ ಅಂತ ಇತ್ತು. ಫಿಸಿಕ್ಸ್ ನ ಈ ಸಿಂಪಲ್ ಸೂತ್ರವನ್ನ ಚಾರ್ಜಿಂಗ್ ರಸ್ತೆಗೆ ಅಪ್ಲೈ ಮಾಡಲಾಗಿದೆ. ಈ ಸೂತ್ರ ಏನು ಹೇಳುತ್ತೆ ಅಂದ್ರೆ ಯಾವುದಾದ್ರೂ ಒಂದು ಕಂಡಕ್ಟರ್ ಸುತ್ತ ಅಂದ್ರೆ ಕರೆಂಟ್ ನ ಪಾಸ್ ಮಾಡುವಂತ ವಸ್ತು ಸುತ್ತ ನೀವೇನಾದ್ರೂ ಮ್ಯಾಗ್ನೆಟಿಕ್ ಫೀಲ್ಡ್ ಚೇಂಜ್ ಮಾಡಿದ್ರೆ ಅದು ಎಲೆಕ್ಟ್ರಿಕ್ ಕರೆಂಟ್ ಆಗಿ ಬದಲಾಗುತ್ತೆ. ಆ ಕಂಡಕ್ಟರ್ ನಲ್ಲಿ ಎಲೆಕ್ಟ್ರಿಕ್ ಕರೆಂಟ್ ಪಾಸ್ ಆಗುತ್ತೆ. ಅದೇ ತರ ನೀವು ಉಲ್ಟಾ ಮಾಡಿದ್ರೆ ಅಂದ್ರೆ ಎಲೆಕ್ಟ್ರಿಕ್ ಫೀಲ್ಡ್ ಚೇಂಜ್ ಮಾಡಿದ್ರೆ ಅದು ಮ್ಯಾಗ್ನೆಟಿಕ್ ಫೀಲ್ಡ್ ಆಗಿ ಬದಲಾಗುತ್ತೆ ಇದು ಫ್ಯಾರಡೇನ ನಿಯಮ ನಿಮ್ಮ ಫೋನ್ ಸ್ಮಾರ್ಟ್ ವಾಚ್ ಸೇರಿದಂತೆ ಎಲ್ಲಾ ವೈರ್ಲೆಸ್ ಡಿವೈಸ್ ಗಳಲ್ಲಿ ಚಾರ್ಜ್ ಆಗೋದು ಇದೇ ಪ್ರಿನ್ಸಿಪಲ್ ಮೇಲೆನೆ ಇದನ್ನ ರಸ್ತೆಗೆ ಅಪ್ಲೈ ಮಾಡಲಾಗಿದೆ.
ಸಾಮಾನ್ಯ ಹೆದ್ದಾರಿ ರಸ್ತೆನೇ ಸ್ವಲ್ಪ ಆಗುದು ಅದರಲ್ಲಿ ಒಂದು ಮೀಟರ್ ಉದ್ದದ ತಾಮ್ರದ ಕಾಪರ್ ಕಾಯಿಲ್ಗಳನ್ನ ಹಾಕಿರ್ತಾರೆ ಕರೆಂಟ್ ಶಾಕ್ ಹೊಡಿಬಾರದು ಅನ್ನೋ ಕಾರಣಕ್ಕೆ ಇದನ್ನ ರೇಸಿನ್ ಕೋಟಿಂಗ್ ಮಾಡಿ ಸೀಲ್ ಮಾಡಿರ್ತಾರೆ ನಂತರ ರಸ್ತೆಗಳಲ್ಲಿ ಕಾಯಿಲ್ ಇಟ್ಟು ಮೇಲೆ ಎಂಟರಿಂದ 10 ಸೆಂಟಿಮೀಟರ್ ದಪ್ಪ ಆಸ್ಫಾಲ್ಟ್ ಟಾರ್ ಹಾಕ್ತಾರೆ ಆ ಕಾಯಿಲ್ನ ಕೆಳಗೂ ಕೂಡ ಕಲ್ಲು ಮಣ್ಣು ಟಾರ್ ಎಲ್ಲ ಇರುತ್ತೆ ಆದರೆ ಅದರ ಕಾಯಿಲ್ ಮೇಲೂ ಕೂಡ ಸ್ವಲ್ಪ ತೆಳುವಾದ ಟಾರ್ ಹಾಕಿರ್ತಾರೆ ಜಾಸ್ತಿ ದಪ್ಪ ಹಾಕೋಕೆ ಹೋದ್ರೆ ಮ್ಯಾಗ್ನೆಟಿಕ್ ಫೀಲ್ಡ್ ಸರಿಯಾಗಿ ಕೆಲಸ ಮಾಡಲ್ಲ ಆದರೆ ತೆಳುವಾಗಿ ಹಾಕಿದ್ರೆ ವರ್ಕ್ ಆಗುತ್ತೆ ಅಂತ ಈಗ ನಿಮ್ಮ ವೈರ್ಲೆಸ್ ಚಾರ್ಜ್ ಆಗೋ ಫೋನ್ ನೀವು ಬ್ಯಾಕ್ ಕವರ್ ಹಾಕಿದ್ರು ಕೂಡ ವೈರ್ಲೆಸ್ ಚಾರ್ಜರ್ ಮೇಲೆ ಚಾರ್ಜ್ ಆಗುತ್ತೆ ಅಲ್ವಾ ಅದೇ ರೀತಿ ಸ್ವಲ್ಪ ತೆಳುವಾಗಿ ಟಾರ್ ಹಾಕಿದ್ರೆ ಪಾಸ್ ಆಗುತ್ತೆ ಎಲೆಕ್ಟ್ರಿಕ್ ಫೀಲ್ಡ್ ಕೆಲಸ ಮಾಡುತ್ತೆ ಅನ್ನೋ ಲಾಜಿಕ್ ಬಳಿಕ ಈ ಕಾಯಿಲ್ ಗಳಿಗೆ 85 ಕಿಲೋಹ ಫ್ರಿಕ್ವೆನ್ಸಿ ಕರೆಂಟ್ನ ಕನೆಕ್ಷನ್ ಕೊಡಲಾಗುತ್ತೆ. ಆಗ ಫ್ಯಾರಡೆ ನಿಯಮದಂತೆ ಕರೆಂಟ್ ಮ್ಯಾಗ್ನೆಟಿಕ್ ಫೀಲ್ಡ್ ಆಗಿ ಕನ್ವರ್ಟ್ ಆಗುತ್ತೆ. ಇಂತ ಸಮಯದಲ್ಲಿ ಇದರ ಮೂಲಕ ಇವಿ ವಾಹನಗಳು ಪಾಸ್ ಆದ್ರೆ ಎಲ್ಲಾ ಇವಿ ಗಾಡಿಗಳು ಚಾರ್ಜ್ ಆಗಲ್ಲ ಯಾಕಂದ್ರೆ ಎಲ್ಲಾ ಫೋನ್ ತಗೊಂಡು ಹೋಗಿ ವೈರ್ಲೆಸ್ ಚಾರ್ಜ್ ಮೇಲೆ ಇಟ್ಕೊಳ್ಳ ಆಗುತ್ತಾ ವೈರ್ಲೆಸ್ ಚಾರ್ಜರ್ ಕಣಯ್ಯ ಆಗಬೇಕು ಅಂತ ಹೇಳಿದ್ರೆ ಆಗಲ್ಲ ಫೋನ್ಲ್ಲೂ ಕೂಡ ವೈರ್ಲೆಸ್ ಚಾರ್ಜಿಂಗ್ ಎಬಿಲಿಟಿ ಇರಬೇಕು ಫೋನ್ ಹಿಂದೆ ಅದಕ್ಕೊಂದು ಕಾಯಿಲ್ ಹಾಕಿರ್ತಾರಲ್ಲ ರಿಸೀವ್ ಮಾಡ್ಕೊಳ್ಳೋಕೆ ಅದು ಇರಬೇಕು.
ಮ್ಯಾಗ್ನೆಟಿಕ್ ಕರೆಂಟ್ನ್ನ ಡೈರೆಕ್ಟಆಗಿ ರಿಸೀವ್ ಮಾಡೋಕೆ ಎಲ್ಲಾ ವಾಹನಗಳಿಗೂ ಆಗಲ್ಲ ಅದಕ್ಕೆ ಗಾಡಿ ಅಂಡರ್ ಬಾಡಿ ರಿಸೀವರ್ ಪ್ಯಾಡ್ ಅಂತ ಇರುತ್ತೆ ಅದನ್ನ ವೆಹಿಕಲ್ ಗೆ ಅಟ್ಯಾಚ್ ಮಾಡಬೇಕಾಗುತ್ತೆ ಈ ರಿಸೀವರ್ ರಸ್ತೆಯಲ್ಲಿರೋ ಮ್ಯಾಗ್ನೆಟಿಕ್ ಫೀಲ್ಡ್ ನ ಕರೆಂಟ್ ಆಗಿ ಕನ್ವರ್ಟ್ ಮಾಡ್ಕೊಳ್ಳುತ್ತೆ ನಂತರ ಬ್ಯಾಟರಿ ಕಳಿಸುತ್ತೆ ಗಾಡಿ ಚಾರ್ಜ್ ಆಗುತ್ತೆ ಜೊತೆಗೆ ಯಾವಾಗ್ಲೂ ಕರೆಂಟ್ ಕೊಟ್ಟು ಚಾರ್ಜ್ ಆನ್ ಇಟ್ಕೊಂಡಿರೋದಿಲ್ಲ ಇದನ್ನ ಚಾರ್ಜಿಂಗ್ ರೋಡ್ಸ್ ಅನ್ನ ಇವಿ ಗಾಡಿಗಳು ಬಂದಾಗ ಡಿಟೆಕ್ಟ್ ಮಾಡಿ ಅವಾಗ ಮಾತ್ರ ಆನ್ ಆಗಿ ಚಾರ್ಜ್ ಮಾಡ್ತಾವೆ ಆ ರೀತಿ ವ್ಯವಸ್ಥೆ ಮಾಡ್ಕೊಳ್ಳೋಕ್ಕೆ ಸೆನ್ಸಾರ್ಸ್ ಎಲ್ಲ ಹಾಕಿದ್ದಾರೆ ಆಲ್ರೆಡಿ ರಸ್ತೆ ಮೇಲೆ ವಾಹನಗಳನ್ನ ಟೆಸ್ಟ್ ಮಾಡಿದ್ದಾರೆ ಕಾರು ಲಾರಿ ಹೆವಿ ವೆಹಿಕಲ್ಸ್ ಎಲ್ಲ ಓಡಿಸಿ ಟೆಸ್ಟ್ ಮಾಡಿದ್ದಾರೆ 80% ಎಫಿಷಿಯನ್ಸಿಯನ್ನ ಅಚೀವ್ ಮಾಡಿದ್ದಾರೆ ಕೇವಲ 20% ಕರೆಂಟ್ ವೇಸ್ಟ್ ಆಗ್ತಿದೆ ಅದನ್ನ ಇನ್ನಷ್ಟು ಚೆನ್ನಾಗಿ 90% ಮೇಲೆ ತಗೊಂಡು ಹೋಗೋ ಉದ್ದೇಶ ಕೂಡ ಇದ್ದೆ ಇರುತ್ತೆ.
ಫ್ರಾನ್ಸ್ ಗೆ ಯಾಕೆ ಇಂತ ಹುಚ್ಚು ಮೊದಲನೆದಾಗಿ ಕ್ಲೈಮೇಟ್ ಚೇಂಜ್ ಫ್ರಾನ್ಸ್ ಒಂದು ಯೂರೋಪ್ ನ ಮುಂದುವರೆದಿರೋ ರಾಷ್ಟ್ರ ಈ ಹವಮಾನ ಅನ್ನೋದು ಪ್ರಕೃತಿ ಅನ್ನೋದು ಸೆನ್ಸಿಟಿವ್ ವಿಚಾರ ಅಲ್ಲಿನ ನಾಯಕರು ಜನ ತುಂಬಾ ಸೀರಿಯಸ್ ಆಗಿ ತಗೊಳ್ತಾರೆ ಫ್ರಾನ್ಸ್ ಕಾರ್ಬನ್ ಎಮಿಷನ್ ಇಂಗಾಲ ಹೊರಸೂಸುವಿಕೆ ಕಮ್ಮಿ ಮಾಡೋ ವಿಚಾರದಲ್ಲಿ ದೊಡ್ಡ ದೊಡ್ಡ ಟಾರ್ಗೆಟ್ ನ್ನ ಹಾಕೊಂಡಿದೆ ಕಾರ್ಬನ್ ಎಮಿಷನ್ಗೆ ವಾಹನಗಳು ದೊಡ್ಡ ಕೊಡುಗೆ ಕೊಡ್ತಾ ಇದ್ದಾವೆ ಹೀಗಾಗಿ ಇಂತ ಇಂತಾಂಗ್ ಗಾಡಿಯನ್ನ ಕಮ್ಮಿ ಮಾಡಿ ಈವಿ ಸಂಖ್ಯೆಯನ್ನ ಹೆಚ್ಚು ಮಾಡಬೇಕು ಅನ್ನೋ ಗುರಿ ಇದೆ 2030ರ ಒಳಗೆ ವಾಹನಗಳಿಂದ ಉತ್ಪತ್ತಿಯಾಗು ಕಾರ್ಬನ್ ಪ್ರಮಾಣವನ್ನ 45% ಕಮ್ಮಿ ಮಾಡಬೇಕು 2035ರ ಒಳಗಡೆ 65% ಕಮ್ಮಿ ಮಾಡಬೇಕು 2040ರ ಒಳಗಡೆ 90% ಕಮ್ಮಿ ಮಾಡಬೇಕು ಅನ್ನೋ ಟಾರ್ಗೆಟ್ ಇದೆ ಆದರೆ ರೇಂಜ್ ಆಂಗಸೈಟಿ ಕಾರಣ ಜನ ಫ್ರಾನ್ಸ್ ಸರ್ಕಾರ ಅಂದುಕೊಂಡಷ್ಟು ವೇಗವಾಗಿ ಇವಿಗೆ ಶಿಫ್ಟ್ ಆಗ್ತಿಲ್ಲ ಆದರೆ ಈ ರೀತಿ ಚಾರ್ಜಿಂಗ್ ರೋಡ್ಸ್ ಬಂದ್ರೆ ಅದರ ಮೇಲೆ ಪಾಸ್ ಆದ್ರೆ ಸಾಕು ಚಾರ್ಜ್ ಆಗುತ್ತೆ ಅಂತ ಹೇಳಿದ್ರೆ ಒಂದೊಂದು ಸಲಿ ಪಾಸ್ ಆದಾಗಲೂ ಕೂಡ 10% ಚಾರ್ಜ್ ಆಡ್ ಆಗುತ್ತೆ ಅಂತ ಹೇಳಿದ್ರೆ ರೆವಲ್ಯೂಷನರಿ ಅಲ್ವಾ ದಿನ ಗಟ್ಟಲೆ ಚಾರ್ಜ್ ಮಾಡ್ಬೇಕಾಗುತ್ತೆ ಇವಾಗನ ಗಾಡಿಗಳನ್ನ ನಿಲ್ಲಿಸಿಕೊಂಡು ಅದೆಲ್ಲ ಇರೋದೇ ಇಲ್ವಲ್ಲ ಜೊತೆಗೆ ಇವಾಗ 500 km ರೇಂಜ್ ಕೊಡ್ಬೇಕು 600 km ರೇಂಜ್ ಕೊಡ್ಬೇಕು ಅಂತ ಹೇಳಿ ರೇಂಜ್ ಜಾಸ್ತಿ ಎಷ್ಟು ಮಾಡ್ತೀವೋ ಅಷ್ಟು ದೊಡ್ಡ ಬ್ಯಾಟರಿ ಹಾಕ್ಬೇಕಾಗುತ್ತೆ ಹೆವಿ ತೂಕ ಆಗುತ್ತೆ ಗಾಡಿಗೆ ಅದರಿಂದ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಲಿಥಿಯಂ ಗಣಿಗಾರಿಕೆ ಕೂಡ ಮಾಡಬೇಕಾಗುತ್ತೆ ರೇರ್ ಅರ್ಥ್ ಮಿನರಲ್ಸ್ ಮೆಟಲ್ಸ್ ಕೂಡ ಸಿಕ್ಕಪಟ್ಟೆ ಬೇಕಾಗುತ್ತೆ.
ಈಗ ಚಿಕ್ಕ ಬ್ಯಾಟರಿ ಸಾಕಾಗುತ್ತಲ್ಲ ಒಂದು 200 ಕಿಲೋಮೀಟರ್ ರೇಂಜ್ ಒಂದು ಬ್ಯಾಟರಿ ಕೊಟ್ಟುಬಿಟ್ರೆ ಸಾಕಾಗುತ್ತಲ್ಲ ಉಳಿದಂತೆ ಪ್ರತಿ 50 km 100 km ಗೆ ಒಂದು ಸಲಿ ಈ ರೀತಿ ಒಂದೆರಡು ಕಿಲೋಮೀಟ ನ ಚಾರ್ಜಿಂಗ್ ರೋಡ್ಸ್ ಹಾಕಿಬಿಟ್ಟರೆ ಪಾಸ್ ಆಗ್ತಾ ಹೋದಂಗೂ ಕೂಡ ಚಾರ್ಜ್ ಆಗ್ತಾನೆ ಇರುತ್ತಲ್ಲ ಬ್ಯಾಟರಿ ಲೋನೇ ಆಗಲ್ವಲ್ಲ ಹಾಗಾಗಿ ಇದು ಕ್ರಾಂತಿಕಾರಿ ಅಂತ ಪರಿಗಣಿಸಲಾಗ್ತಾ ಇದೆ. ಅಲ್ದೇ ದೊಡ್ಡ ಪ್ರಮಾಣದಲ್ಲಿ ಟ್ರಕ್ ಗಳು ಈವಿಗೆ ಶಿಫ್ಟ್ ಆದ್ರೆ ಲಾಜಿಸ್ಟಿಕ್ ಖರ್ಚು ಡೀಸೆಲ್ ಖರ್ಚು ಕೂಡ ಉಳಿಯುತ್ತೆ. ಹೀಗಾಗಿ ಮುಂದಿನ 10 ವರ್ಷದಲ್ಲಿ 9000 ಕಿಲೋಮೀಟ ಇಂತಹ ಚಾರ್ಜಿಂಗ್ ರಸ್ತೆಯ ಸ್ಟ್ರೆಚ್ ಗಳನ್ನ ಫ್ರಾನ್ಸ್ ನಾದ್ಯಂತ ಹಾಕೋಕೆ ಪ್ಲಾನ್ ಮಾಡ್ಕೊಂಡುಬಿಟ್ಟಿದ್ದಾರೆ ಫ್ರಾನ್ಸ್ ನವರು ಭಾರತದಲ್ಲೂ ಈವಿ ರಸ್ತೆ ಮಾಡಬಹುದಾ ಭಾರತದಲ್ಲಿ ಈ ಇವಿ ರಸ್ತೆಗಳನ್ನ ಮಾಡಬಹುದು ಆದರೆ ಇದರ ಹಿಂದೆ ಏನು ಚಾಲೆಂಜ್ ಇದೆ ಅನ್ನೋದನ್ನ ಮೊದಲು ನೋಡಬೇಕು ಈ ಇವಿ ರಸ್ತೆ ನಿರ್ಮಾಣದ ಖರ್ಚು ತುಂಬಾ ಹೆಚ್ಚಿದೆ ಫ್ರಾನ್ಸ್ 1.5 ಕಿಲೋಮೀಟಗೆ ಬರೋಬರಿ 230 ಕೋಟಿ ರೂಪಾಯಿ ಹಾಕಿದೆ ಸೋ ಇದು ದೊಡ್ಡ ಅಮೌಂಟ್ ನಮ್ಮಲ್ಲಿ ಮಾಮೂಲಿ ರಸ್ತೆ ಅಲ್ಲ ಇದರಲ್ಲಿ ಟನಲ್ ರೋಡೇ ಮಾಡಿಬಿಡಬಹುದಲ್ಲ ಅಂತಲ್ಲ ಯೋಚನೆ ಮಾಡ್ತಾರೆ ಇಷ್ಟು ದುಡ್ಡಾದ್ರೆ ಜೊತೆಗೆ ನಮ್ಮಲ್ಲಿ ಅಲ್ಲಿ 230 ಕೋಟಿಲ ಆಗಿದೆ ನಮ್ಮಲ್ಲಿ ಅಲ್ಲಿ ಅರ್ಧ ರೋಡ್ ಖರ್ಚು ಅರ್ಧ ಇವರು ಹೊಟ್ಟೆ ತುಂಬಿಸಿಕೊಳ್ಳೋದೆಲ್ಲ ಇದ್ದೆ ಇರುತ್ತಲ್ಲ ಸೋ ಅದೆಲ್ಲ ಆಸ್ಪೆಕ್ಟ್ಸ್ನ ಯೋಚನೆ ಮಾಡಬೇಕು ಇನ್ನು ಈ ಇವಿ ರಸ್ತೆಗಳಿಗೆ 24ಸ ಕರೆಂಟ್ ಬೇಕು ಮಾಮೂಲಿ ಕರೆಂಟ್ ಸಾಕಾಗಲ್ಲ ಸ್ಟೇಬಲ್ ಕರೆಂಟ್ ಸಪ್ಲೈ ಇದ್ರೆ ಮಾತ್ರ ಎಫಿಷಿಯೆಂಟ್ ಆಗಿ ಗಾಡಿ ಚಾರ್ಜ್ ಆಗುತ್ತೆ ನಮ್ಮಲ್ಲಿ ಈ ತರದ ದೊಡ್ಡ ಮಟ್ಟದ ಕರೆಂಟ್ ಸಪ್ಲೈನ್ನ ಅನ್ಇಂಟರಪ್ಟೆಡ್ ಆಗಿ ಮ್ಯಾನೇಜ್ ಮಾಡೋದು ಚಾಲೆಂಜ್ ಆಗಬಹುದು ಜೊತೆಗೆ ಇವಿ ರಸ್ತೆಗೆ ಸೂಟ್ ಆಗೋ ಗಾಡಿ ಬೇಕು ಅಂದ್ರೆ ಅವುಗಳನ್ನಎಸ್ಎಈಜೆ2954 ಅನ್ನೋ ಸ್ಟ್ಯಾಂಡರ್ಡ್ ಮೇಲೆ ಬಿಲ್ಡ್ ಮಾಡಬೇಕು ಈ ಸ್ಟ್ಯಾಂಡರ್ಡ್ ಮೇಲೆ ಗಾಡಿ ಮಾಡಬೇಕು ಅಂದ್ರೆ ಗಾಡಿಗಳಿಗೆ ಮ್ಯಾಗ್ನೆಟಿಕ್ ಕರೆಂಟ್ ರಿಸೀವರ್ ಗಳನ್ನ ಹಾಕಿರಬೇಕು ಇದರಿಂದ ಇವಿ ವೆಹಿಕಲ್ ಕಾಸ್ಟ್ ಸ್ಟ್ರಕ್ಚರ್ ಅಲ್ಲೂ ಕೂಡ ಚೇಂಜಸ್ ಆಗುತ್ತೆ.
ಬ್ಯಾಟರಿ ಚಿಕ್ಕದು ಹಾಕುದ್ರು ಕೂಡ ಸಾಕಾಗುತ್ತಲ್ಲ ಹಾಗಾಗಿ ಅಲ್ಲಿಂದಲ್ಲಿ ಮ್ಯಾನೇಜ್ ಆಗಬಹುದು ಇನ್ನು ರಸ್ತೆ ಬಾಳಿಕೆ ವಿಚಾರಕ್ಕೆ ಬಂದ್ರೆ ಭಾರತದಲ್ಲಿ ಮಳೆ ಬಿಸಿಲಿನ ಹೊಡೆತಕ್ಕೆ ರೋಡ್ ತಡ್ಕೊಳ್ಳೋದು ಕಷ್ಟ ಕಷ್ಟ ಇನ್ನು ಕಾಪರ್ ಕಾಯಿಲ್ಗಳು ಕೂಡ ಬೇಗ ಹಾಳಾಗ್ತವೆ ಕಾಯಿಲ್ ಮೇಲಿನ ರಸ್ತೆ ಕಿತ್ತು ಹೋದ್ರೆ ರಸ್ತೆ ಕೂಡ ಉಪಯೋಗಕ್ಕೆ ಬರೋದಿಲ್ಲ ಮತ್ತೆ ನಮ್ಮಲ್ಲಿ ಸರ್ಕಾರ ಯಾವುದೇ ಒಂದು ಹೂಡಿಕೆ ಮಾಡಿದ್ರೆ ರಿಟರ್ನ್ ಬರುತ್ತಾ ಅಂತ ಯೋಚನೆ ಮಾಡ್ತಾರೆ ಅಂದ್ರೆ ರಿಟರ್ನ್ ಆನ್ ಇನ್ವೆಸ್ಟ್ಮೆಂಟ್ ಬಗ್ಗೆ ಯೋಚಿಸ್ತಾರೆ ಈವಿ ರಸ್ತೆಯಲ್ಲಿ ರಿಟರ್ನ್ ಬೇಗ ಬರೋದಿಲ್ಲ ಯಾಕಂದ್ರೆ ಈವಿ ರಸ್ತೆಗಳ ಮೇಲೆ ಓಡಾಡೋ ಗಾಡಿಗಳ ಸಂಖ್ಯೆ ಸದ್ಯಕ್ಕೆ ಕಮ್ಮಿ ಭಾರತದಲ್ಲಿರೋ ಒಟ್ಟು ಗಾಡಿಗಳಲ್ಲಿ ಕೇವಲ 7% ಗಾಡಿಗಳು ಮಾತ್ರ ಈವಿಗಳು ಜೊತೆಗೆ ಗಾಡಿ ಇವಿ ಇದ್ರೆ ಸಾಕಾಗಲ್ಲ ವೆಹಿಕಲ್ಗಳಲ್ಲೂ ಕೂಡ ವೈರ್ಲೆಸ್ ರಿಸೀವರ್ ಕೂಡ ಇರಬೇಕು ಇ ವಿಶ್ವಾದ್ಯಂತ ನೋಡಿದ್ರು ಕೂಡ ನಿಮಗೆ ಬೆರಳಣಿಕೆ ಗಾಡಿಗಳಲ್ಲಿ ಮಾತ್ರ ಈ ರೀತಿ ಬಿಲ್ಟ್ ಇನ್ ವೈರ್ಲೆಸ್ ಪವರ್ ರಿಸೀವರ್ ಗಳು ಸಿಗೋದು. ಪೋರ್ಷ, ಜಿಎಂ ಹಾಗೂ ಕೆಲವೇ ಕೆಲವು Hyundai ಮಾಡೆಲ್ ಗಳಲ್ಲಿ ಆಯುಧ ಮಾಡೆಲ್ ಗಳಲ್ಲಿ ಈ ಬಿಲ್ಟ್ ಇನ್ ರಿಸೀವರ್ ಗಳನ್ನ ಕೊಡಲಾಗ್ತಾ ಇದೆ. ಸರ್ಕಾರ ಇಷ್ಟು ಚಿಕ್ಕ ಸಂಖ್ಯೆಯ ವಾಹನಗಳಿಗೆ ಸಾವಿರಾರು ಕೋಟಿ ಹೂಡಿಕೆ ಮಾಡೋದು ಲಾಸ್ ಅಂತ ಭಾವಿಸಬಹುದು. ಜನರಲ್ ಆಗಿ ಈವಿ ವಾಹನಗಳ ಚಾರ್ಜಿಂಗ್ ಬೆಳೆ 10% ಎನರ್ಜಿ ಲಾಸ್ ಆಗುತ್ತೆ.


