Thursday, November 20, 2025
HomeLatest Newsಎನ್‌ಆರ್‌ಐಗಳಿಗೆ ಸೆಬಿಯಿಂದ ಹೊಸ ಸೌಲಭ್ಯಗಳ ಘೋಷಣೆ

ಎನ್‌ಆರ್‌ಐಗಳಿಗೆ ಸೆಬಿಯಿಂದ ಹೊಸ ಸೌಲಭ್ಯಗಳ ಘೋಷಣೆ

paytm ಜೊತೆ ಯಾವುದೇ ಕಮರ್ಷಿಯಲ್ ಕಲ್ಯಾಬರೇಷನ್ ಇಲ್ಲ. ಬಟ್ ಎನ್ಆರ್ಐ ಗಳಿಗೆ ಯೂಸ್ಫುಲ್ ಆಗಬೇಕಾಗಿರೋ ಒಂದು ಸುದ್ದಿ ಅಂತ ಕಾಣುತ್ತೆ. ಅದಕ್ಕೆ ಗಮನಕ್ಕೆ ತರ್ತಾ ಇದೀವಿ. ಮೊದಲನೇ ಸುದ್ದಿನೆ ಇಟ್ಟಿದೀವಿ. ಯಾಕಂದ್ರೆ ಎಲ್ಲಾ ಕಡೆ ಇರೋ ಎನ್ಆರ್ಐ ಗಳಿಗೆ ಒಟ್ಟು 12 ರಾಷ್ಟ್ರಗಳಲ್ಲಿರೋ ಎನ್ಆರ್ಐ ಗಳಿಗೆ ಇದು ಅಪ್ಲೈ ಆಗಬಹುದು. ಭಾರತದ ಡಿಜಿಟಲ್ ಪೇಮೆಂಟ್ಸ್ ಪ್ಲಾಟ್ಫಾರ್ಮ್ paytm ಸುಮಾರು 12 ರಾಷ್ಟ್ರಗಳಲ್ಲಿರೋ ಎನ್ಆರ್ಐ ಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಅಲ್ಲಿ ನೆಲೆಸಿರೋ ಎನ್ಆರ್ಐ ಗಳು ಇನ್ಮುಂದೆ ತಮ್ಮ ಅಂತರಾಷ್ಟ್ರೀಯ ಮೊಬೈಲ್ ನಂಬರ್ ಬಳಸಿ ಯುಪಿಐ ಪೇಮೆಂಟ್ಸ್ ಮಾಡಬಹುದು ಅಂತ ಹೇಳಿದೆ. ಎನ್ಆರ್ಐ ಗಳು ತಮ್ಮ ಅಂತರಾಷ್ಟ್ರೀಯ ಮೊಬೈಲ್ ನಂಬರ್ ಭಾರತದ ಎನ್ಆರ್ಐ ಬ್ಯಾಂಕ್ ಅಕೌಂಟ್ ಅಥವಾ ಎನ್ಆರ್ಓ ಬ್ಯಾಂಕ್ ಅಕೌಂಟ್ ಗಳಿಗೆ ಲಿಂಕ್ ಆಗಿದ್ರೆ paytm ನಲ್ಲಿ ರಿಜಿಸ್ಟರ್ ಆಗಿ ಯುಪಿಐ ಮಾಡೋ ಆಪ್ಷನ್ ಕೆಲವೇ ದಿನಗಳಲ್ಲಿ ಬರ್ತಾ ಇದೆ. paytm ಆಪ್ ಬಳಸಿ ಭಾರತದಲ್ಲಿರೋ ತಮ್ಮ ಕುಟುಂಬ ಹಾಗೂ ಯುಪಿಐ ಮೂಲಕ ಪೇಮೆಂಟ್ ಮಾಡಬಹುದು. ಜೊತೆಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪೇಮೆಂಟ್ಸ್ ಮಾಡಬಹುದು. ಭಾರತದ ಆನ್ಲೈನ್ ಶಾಪಿಂಗ್ ಆಪ್ ಹಾಗೂ ವೆಬ್ಸೈಟ್ ಗಳಲ್ಲೂ ಕೂಡ ಇದನ್ನ ಯೂಸ್ ಮಾಡಬಹುದು. ಕೇವಲ paytm ಅಂತಲ್ಲ ಇನ್ನು ಹಲವಾರು ಮುಂದೆ ಹೋಗ್ತಾ ಹೋಗ್ತಾ ಇರುತ್ತೆ ಯುಪಿಐ ಆಪ್ಷನ್ಸ್ ಬರ್ತಾ ಹೋಗುತ್ತೆ. ಇದರಿಂದ ಎನ್ಆರ್ಐ ಗಳು ಒಂದಷ್ಟು ವಿದೇಶಿ ಪೇಮೆಂಟ್ ಗಳಿಗೆ ಹಾಗೆ ಕರೆನ್ಸಿ ಕನ್ವರ್ಟ್ ಮಾಡೋದಕ್ಕೆ ಬೇರೆ ಅಂತರಾಷ್ಟ್ರೀಯ ಪೇಮೆಂಟ್ ಸಿಸ್ಟಮ್ ಗಳ ಮೇಲೆ ಡಿಪೆಂಡ್ ಆಗೋದು ತಪ್ಪುತ್ತೆ.

ಜೊತೆಗೆ ಅವುಗಳಿಗೆ ತಗೊಳ್ತಾ ಇದ್ದ ಚಾರ್ಜಸ್ ಕೂಡ ಉಳಿತಾಯ ಆಗಬಹುದು. ಅಲ್ದೇ ರೆಮಿಟೆನ್ಸ್ ಟ್ರಾನ್ಸ್ಫರ್ ಕೂಡ ಮೊದಲಿಗಿಂತ ಸ್ವಲ್ಪ ಈಸಿ ಆಗಬಹುದು ಸಣ್ಣ ಪುಟ್ಟ ಟ್ರಾನ್ಸ್ಫರ್ಸ್ ಆದರೆ ಬ್ಯಾಂಕ್ಗಳ ಮೇಲೂ ಕೂಡ ಇದು ಡಿಪೆಂಡ್ ಆಗುತ್ತೆ ನೋಡ್ಕೊಳ್ಳಿ ಚೆಕ್ ಮಾಡ್ಕೊಳ್ಳಿ ಹಾಗಿದ್ರೆ ಆ 12 ರಾಷ್ಟ್ರಗಳು ಯಾವುದು ಅಂತ ಕೇಳಿದ್ರೆ ಸಿಂಗಪೂರ್ ಆಸ್ಟ್ರೇಲಿಯಾ ಕೆನಡಾ ಹಾಂಗ್ಕಾಂಗ್ ಒಮಾನ್ ಕತರ್ ಅಮೆರಿಕಾ ಸೌದಿ ಅರೇಬಿಯಾ ಯುಎಈ ಯುಕೆ ಫ್ರಾನ್ಸ್ ಹಾಗೂ ಮಲೇಷಿಯಾದಲ್ಲಿರೋ ಎನ್ಆರ್ಐ ಗಳು ಶೀಘ್ರದಲ್ಲಿ paytm ನಲ್ಲಿ ಯುಪಿಐ ಮಾಡಬಹುದು. ದುಬೈನಲ್ಲಿ ಪಾಸ್ಪೋರ್ಟ್ ಸೇವಾ 2.0 ಎರಡನೇ ಸುದ್ದಿ ದುಬಾೈ ಕನ್ನಡಿಗರಿಗೆ ದುಬೈನಲ್ಲಿರೋ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಇತೀಚಿಗೆ ಗ್ಲೋಬಲ್ ಪಾಸ್ಪೋರ್ಟ್ ಸೇವಾ ಪ್ರೋಗ್ರಾಮ್ ಅಥವಾ ಜಿಪಿಎಸ್ಪಿ 2.0 ಪ್ರೋಗ್ರಾಮ್ ಲಾಂಚ್ ಮಾಡಿದೆ ಈ ಪ್ರೋಗ್ರಾಮ್ ಅಡಿಯಲ್ಲಿ ಹೊಸ ಅಪ್ಡೇಟೆಡ್ ಈ ಪಾಸ್ಪೋರ್ಟ್ ಲಾಂಚ್ ಮಾಡಲಾಗ್ತಿದೆ ಸಾಕಷ್ಟು ಹೊಸ ಫೀಚರ್ಗಳು ಈ ಪಾಸ್ಪೋರ್ಟ್ ನಲ್ಲಿ ಬರ್ತಿವೆ ಉದಾಹರಣೆಗೆ ಎಂಬೆಡೆಡ್ ಎಲೆಕ್ಟ್ರಾನಿಕ್ ಚಿಪ್ ಈ ಪಾಸ್ಪೋರ್ಟ್ ನಲ್ಲಿ ಇರುತ್ತೆ ಅದರಲ್ಲಿ ಪಾಸ್ಪೋರ್ಟ್ ಹೋಲ್ಡರ್ಗಳ ಡಿಜಿಟೈಸ್ಡ್ ಡೇಟಾ ಇರುತ್ತೆ ಸೋ ಇನ್ ಮುಂದೆ ಇಮಿಗ್ರೇಷನ್ ಪಾಯಿಂಟ್ ಗಳಲ್ಲಿ ಈ ಹಿಂದಿಗಿಂತ ಬೇಗ ಕ್ಲಿಯರೆನ್ಸ್ ಪಡ್ಕೊಬಹುದು ಇನ್ನು ಈ ಪಾಸ್ಪೋರ್ಟ್ ಬಳಸಿ ಪಾಸ್ಪೋರ್ಟ್ ಸೇವಾ ಪ್ರೋಗ್ರಾಮ್ ಪೋರ್ಟಲ್ ಮೂಲಕ ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡಬಹುದು ಐಸಿಎಓ ಅಥವಾ ಇಂಟರ್ನ್ಯಾಷನಲ್ ಸಿವಿಲ್ ಏವಿಯೇಶನ್ ಆರ್ಗನೈಸೇಶನ್ ಅಪ್ರೂವ್ ಮಾಡಿರೋ ಡಾಕ್ಯುಮೆಂಟ್ಸ್ ನ ಆನ್ಲೈನ್ ನಲ್ಲೇ ಅಪ್ಲೋಡ್ ಮಾಡಬಹುದು.

ಈ ಹೊಸ ಈ ಪಾಸ್ಪೋರ್ಟ್ ನಿಂದ ಈಗ ಆಲ್ರೆಡಿ ಸಬ್ಮಿಟ್ ಮಾಡಿರೋ ಪಾಸ್ಪೋರ್ಟ್ ಅಪ್ಲಿಕೇಶನ್ ಅಲ್ಲಿ ಏನಾದ್ರೂ ತಪ್ಪಿದ್ರೆ ಎರರ್ಸ್ ಇದ್ರೆ ಅದನ್ನ ಸರಿಪಡಿಸಿಕೊಳ್ಬಹುದು. ಅದನ್ನ ರಿಟೈಪ್ ಮಾಡಿಸೋಕೆ ಬಿಎಲ್ಎಸ್ ಸೆಂಟರ್ ಗಳಿಗೆ ಹೋಗೋ ಅವಶ್ಯಕತೆ ಇರೋದಿಲ್ಲ. ಬಿಎಲ್ಎಸ್ ಇಂಟರ್ನ್ಯಾಷನಲ್ ಸೆಂಟರ್ಸ್ ಅಂದ್ರೆ ಸರ್ಕಾರದ ಪರವಾಗಿ ಕೌನ್ಸಿಲರ್ ಸೇವೆಗಳನ್ನ ಕೊಡೋ ಕಂಪನಿಯ ಕಚೇರಿಗಳು ಈ ಹೊಸ ಪಾಸ್ಪೋರ್ಟ್ ಅಪ್ಲಿಕೇಶನ್ ಹಾಕೋದು ಹೇಗೆ ಅಂತ ನೀವೀಗ ಸ್ಕ್ರೀನ್ ಮೇಲೂ ಕೂಡ ನೋಡ್ತಾ ಇದೀರಿ. ವಿಡಿಯೋನ ಪಾಸ್ ಮಾಡಿ ನೀವು ಈ ಸ್ಟೆಪ್ಸ್ ನ ನೋಟ್ ಮಾಡ್ಕೋಬಹುದು. ಸೌದಿ ಕಫಾಲ ಸಿಸ್ಟಮ್ ರದ್ದು ಏನು ಪಕ್ಕದಲ್ಲೇರೋ ಸೌದಿ ಅರೇಬಿಯಾ ಇವರು ಎನ್ಆರ್ಐ ಗಳಿಗೆ ಅದರಲ್ಲೂ ಕೂಡ ಸೌದಿಯಲ್ಲಿ ಕೆಲಸ ಹುಡುಕಿ ಹೋಗುವರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸೌದಿ ಸರ್ಕಾರ 50 ವರ್ಷಗಳ ಹಳೆಯ ಕಫಾಲಾ ಸಿಸ್ಟಮ್ ಅನ್ನ ಸ್ಟಾಪ್ ಮಾಡಿದೆ. ಏನಿದು ಕಫಾಲ ಅಥವಾ ಕೆಫಾಲ ಸಿಸ್ಟಮ್ ಇದೊಂದು ಸ್ಪಾನ್ಸರ್ಶಿಪ್ ಸಿಸ್ಟಮ್ ಅಂದ್ರೆ ವಿದೇಶಗಳಿಂದ ಸೌದಿಗೆ ಕೆಲಸಕ್ಕೆ ಹೋಗೋ ವರ್ಕರ್ಸ್ ಗೆ ಅಲ್ಲಿನ ಕಂಪನಿಗಳು ಅಥವಾ ವ್ಯಕ್ತಿಗಳು ಸ್ಪಾನ್ಸರ್ ಮಾಡಬೇಕಾಗಿತ್ತು. ಆ ಸ್ಪಾನ್ಸರ್ಶಿಪ್ ಪ್ರಕಾರ ಆ ಕಂಪನಿ ಅಥವಾ ವ್ಯಕ್ತಿಗಳ ಪರ್ಮಿಷನ್ ಇಲ್ದೆ ವರ್ಕರ್ ಗಳು ಕೆಲಸ ಚೇಂಜ್ ಮಾಡೋಕ್ಕೆ ಆಗ್ತಿರ್ಲಿಲ್ಲ ವಾಪಸ್ ಬರೋಕೆ ಆಗ್ತಿರ್ಲಿಲ್ಲ ಜೀತದಾಳ ರೀತಿ ಆಗ್ತಾ ಇತ್ತು. ಎಕ್ಸಿಟ್ ವಿಸಾ ಅಪ್ರೂವ್ ಮಾಡ್ತಿರ್ಲಿಲ್ಲ ದೇಶ ಬಿಟ್ಟು ವಾಪಸ್ ಬರೋಕ್ಕು ಆಗ್ತಿರ್ಲಿಲ್ಲ ಭಾರತಕ್ಕವರಿಗೆ ಕಂಪನಿಗಳು ಅಥವಾ ಆ ವ್ಯಕ್ತಿಗಳು ಕೆಲಸ ಕೊಟ್ಟವರು ಸ್ಪಾನ್ಸರ್ ಮಾಡಿದವರು ಸಹಕಾರ ಕೊಡದೆ ವರ್ಕರ್ಸ್ ತಮ್ಮ ಸೌದಿ ರೆಸಿಡೆನ್ಸಿಯನ್ನ ಕೂಡ ರಿನ್ಯೂವಲ್ ಮಾಡೋಕ್ಕೆ ಆಗ್ತಾ ಇರ್ಲಿಲ್ಲ ಒಂದು ರೀತಿ ಕೆಲಸಗಾರರ ಮೇಲೆ ಕಂಪ್ಲೀಟ್ ಕಂಟ್ರೋಲ್ ಅವರು ಹೊಂದಿರ್ತಾ ಇದ್ರು ಆದರೆ ಈಗ ಈ ಕಫಾಲ ಸಿಸ್ಟಮ್ ನ ಅಧಿಕೃತವಾಗಿ ತೆಗೆದು ಬಿಸಾಗ್ತಾ ಇದ್ದಾರೆ.

ದೊಡ್ಡ ಖುಷಿ ವಿಚಾರ ಇದು ಸೌದಿಯಲ್ಲಿ ಜಾಬ್ ಮಾಡ್ತಿರೋ ಭಾರತೀಯರಿಗೆ ಹೋಗಬೇಕು ಅಂತ ಅನ್ಕೊಳ್ಳೋವರಿಗೂ ಕೂಡ ಸಾಕಷ್ಟು ವರ್ಷಗಳಿಂದ ಹ್ಯೂಮನ್ ರೈಟ್ಸ್ ಸಂಸ್ಥೆಗಳು ಕಾರ್ಮಿಕರ ಹಕ್ಕುಗಳಿಗೆ ಸಂಬಂಧಪಟ್ಟ ಸಂಸ್ಥೆಗಳು ಈ ಸಿಸ್ಟಮ್ ಅನ್ನ ವಿರೋಧಿಸುತ್ತಾ ಬಂದಿದ್ರು ಇದರಿಂದ ಕಾರ್ಮಿಕರ ವಿರುದ್ಧ ಶೋಷಣೆ ಆಗ್ತಾ ಇದೆ ಅವರನ್ನ ಗಲ್ಫ್ ರಾಷ್ಟ್ರಗಳಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗ್ತಿದೆ ಸ್ವಾತಂತ್ರ್ಯನೇ ಇರೋದಿಲ್ಲ ಅನ್ನೋ ಆರೋಪಗಳೆಲ್ಲ ಇದ್ವು ಆದರೀಗ ಆ ಸಿಸ್ಟಮ್ ನ ಅಧಿಕೃತವಾಗಿ ತೆಗೆದು ಹಾಕಲಾಗಿದೆ. ಐಸ್ಲ್ಯಾಂಡ್ ನಲ್ಲಿ ಪರ್ಮನೆಂಟ್ ರೆಸಿಡೆನ್ಸಿ ಏನೋ ಎನ್ಆರ್ಐ ಗಳಿಗೆ ಮಾತ್ರ ಅಲ್ಲ ಪ್ರತಿ ಭಾರತೀಯರು ಕೂಡ ಯುರೋಪಿಯನ್ ರಾಷ್ಟ್ರ ಐಸ್ಲ್ಯಾಂಡ್ ನಲ್ಲಿ ಪರ್ಮನೆಂಟ್ ರೆಸಿಡೆನ್ಸಿ ಅಥವಾ ಶಾಶ್ವತವಾಗಿ ನೆಲೆಸುದಕ್ಕೆ ಈಗ ಬಹಳ ಕಮ್ಮಿ ಬೆಲೆಯಲ್ಲಿ ಅಪ್ಲಿಕೇಶನ್ ಹಾಕಬಹುದು. ಐಸ್ಲ್ಯಾಂಡ್ ಪರ್ಮನೆಂಟ್ ರೆಸಿಡೆನ್ಸಿ ಅಪ್ಲಿಕೇಶನ್ ಫೀಸ್ ಈಗ ಕೇವಲ 12000 ರೂಪಾಯಿಗೆ ಇಳಿಸಿದ್ದಾರೆ. ಹಾಗೆ ಪರ್ಮನೆಂಟ್ ರೆಸಿಡೆನ್ಸಿಗೆ ಎಲಿಜಿಬಿಲಿಟಿ ಕ್ರೈಟೀರಿಯಾವನ್ನ ಕೂಡ ಐಸ್ಲ್ಯಾಂಡ್ ಸರ್ಕಾರ ಇನ್ನಷ್ಟು ಈಸಿ ಮಾಡಿದೆ. ಏನೇನು ರಿಕ್ವೈರ್ಮೆಂಟ್ಸ್ ಇರುತ್ತೆ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಾ ಈ ವಿಡಿಯೋನ ಪಾಸ್ ಮಾಡಿ ನೀವು ಕೂಡ ಅದರ ಡೀಟೇಲ್ ಅನ್ನ ಪಡ್ಕೊಳ್ಳಬಹುದು ಸ್ನೇಹಿತರೆ. ಇನ್ನು ಐಸ್ಲ್ಯಾಂಡ್ ಜಗತ್ತಿನ ಹ್ಯಾಪಿಯಸ್ಟ್ ಕಂಟ್ರೀಸ್ ಅಲ್ಲಿ ಒಂದು ನಿರಂತರ 17 ವರ್ಷಗಳಿಂದ ಜಗತ್ತಿನ ಸೇಫೆಸ್ಟ್ ದೇಶ ಅಂತ ಕೂಡ ಕರೆಸಿಕೊಳ್ತಾ ಇದೆ. ಶಂಗೆನ್ ಏರಿಯಾದಲ್ಲಿ ಬರುತ್ತೆ. ಇಷ್ಟು ದಿನ ಸೊಳ್ಳೆಗಳೇ ಇಲ್ಲದ ರಾಷ್ಟ್ರ ಅಂತ ಕೂಡ ಕರಿಸಿಕೊಳ್ತಾ ಇತ್ತು. ಆದ್ರೆ ಮೊನ್ನೆ ಮೊನ್ನೆ ಅಷ್ಟೇ ಒಂದೆರಡು ಸೊಳ್ಳೆ ಸಿಕ್ಕಿರೋ ರಿಪೋರ್ಟ್ಸ್ ಇವೆ. ಇದು ಗ್ಲೋಬಲ್ ವಾರ್ಮಿಂಗ್ನ ಪರಿಣಾಮ. ಸೋ ನಾವಂತೂ ನಮ್ಮ ಸುಂದರವಾದ ಭವ್ಯ ಭಾರತ ಬಿಟ್ಟುಹೋಗಿ ಅಂತ ರೆಕಮೆಂಡ್ ಮಾಡಲ್ಲ ಯಾರಿಗೂ ಕೂಡ ಭಾರತಕ್ಕಿಂತ ಬ್ಯೂಟಿಫುಲ್ ರಾಷ್ಟ್ರ ಇನ್ನೊಂದಿಲ್ಲ. ಹಾಗಂತ ದೇಶ ಬಿಟ್ಟು ಹೊರಗೆ ಹೋಗಲೇಬಾರದು ಅಂತಲ್ಲ ದೇಶದಿಂದ ಹೊರ ಹೋಗಿ ದೊಡ್ಡ ದೊಡ್ಡ ಸಾಧನೆಯನ್ನ ಮಾಡಿ ಭಾರತಕ್ಕೆ ಕೀರ್ತಿ ತರತಿದ್ದಾರೆ.

ನಮ್ಮ ಎನ್ಆರ್ಐಗಳು ಭಾರತದಲ್ಲಿರೋ ತಮ್ಮ ಫ್ಯಾಮಿಲಿಗೆ ದುಡ್ಡನ್ನ ಕಳಿಸ್ತಾ ಇದ್ದಾರೆ ರೆಮಿಟೆನ್ಸ್ ಕಳಿಸ್ತಾ ಇದ್ದಾರೆ ಭಾರತಕ್ಕೆ ಫಾರೆಕ್ಸ್ ಆ ಮೂಲಕ ಕಳಿಸ್ತಾ ಇದ್ದಾರೆ ಅವರು ಸೋ ಎಲ್ಲಾ ರೀತಿದು ಬೇಕು ಬ್ಯಾಲೆನ್ಸ್ ಬೇಕು ನಮಗೆ ಚ್ಒಬಿ ವೀಸಾ ಹೋಲ್ಡರ್ಸ್ ಗೆ ಕೆನಡಾ ಭರ್ಜರಿ ಆಫರ್ ಇನ್ನು ಸ್ನೇಹಿತರೆ ವಿದೇಶಿ ಎಂಪ್ಲಾಯಿಗಳನ್ನ ಹೈರ್ ಮಾಡಿಕೊಳ್ಳೋಕ್ಕೆ ಅಮೆರಿಕಾ ಸರ್ಕಾರ ಬಳಸೋ ಹೋಲ್ಡರ್ಸ್ ವೀಸಾಗೆ ಪಕ್ಕದ ಕೆನಡಾ ಕೌಂಟರ್ ಕೊಟ್ಟಿದೆ ಭಾರತೀಯ ಹೋಲ್ಡರ್ಸ್ ವೀಸಾ ಹೋಲ್ಡರ್ಸ್ ಗೆ ಭರ್ಜರಿ ಆಫರ್ ಕೊಟ್ಟಿದೆ. ಅದೇನು ಅಂತ ನೋಡೋಕ್ಕಿಂತ ಮುಂಚೆ ಅಕ್ಟೋಬರ್ ನಲ್ಲಿ ಟ್ರಂಪ್ ಹೋಲ್ಡರ್ಸ್ ವೀಸಾಗೆ ಫೀಸ್ ನಒ ಲಕ್ಷ ಅಮೆರಿಕನ್ ಡಾಲರ್ ಗೆ ಏರಿಸಿದ್ರಲ್ಲ ಅಂದ್ರೆ ಎಲ್ಲರಿಗೂ ಅಲ್ಲ ಇದರ ಬಗ್ಗೆ ಅಮೆರಿಕಾ ಈಗ ಕ್ಲಾರಿಫಿಕೇಶನ್ ಕೊಡ್ತು ಆಮೇಲೆ ಮೊದಲು ಅದೇನು ಅಂತ ನೋಡೋಣ ಈಒ ಲಕ್ಷ ಅಮೆರಿಕನ್ ಡಾಲರ್ ಫೀಸ್ ಏನಿದೆ ಹತ್ತ್ರ ಒದು ಕೋಟಿ ರೂಪಾಯಿ 2025ರ ಸೆಪ್ಟೆಂಬರ್ 21ರ ಮಧ್ಯರಾತ್ರಿ ನಂತರ ಯಾರೆಲ್ಲ ಹೆಚ್ಒಬಿ ವೀಸಾಗೆ ಅಪ್ಲಿಕೇಶನ್ ಹಾಕಿರ್ತಾರೆ ಅದರಲ್ಲೂ ಅವರು ಆ ಟೈಮ್ನಲ್ಲಿ ಅಮೆರಿಕದಲ್ಲಿ ಇಲ್ದೆ ಅವರ ಪರವಾಗಿ ಬೇರೆಯವರು ಅಪ್ಲಿಕೇಶನ್ ಹಾಕಿದ್ರೆ ಆ ಫೀಸ್ ಅಪ್ಲೈ ಆಗುತ್ತೆ ಅದರ ಜೊತೆಗೆ ಒಂದುವೇಳೆ ವೀಸಾ ಫಲಾನುಭವಿ ಅಮೆರಿಕದಲ್ಲೇ ಇದ್ದು ಅವರು ಆ ಟೈಮ್ನಲ್ಲಿ ಕೌನ್ಸಿಲರ್ ಎಂಟ್ರಿ ಪ್ರಾಸೆಸಿಂಗ್ ಅಥವಾ ಪೋರ್ಟ್ ಆಫ್ ಎಂಟ್ರಿ ಪ್ರಾಸೆಸಿಂಗ್ಗೆ ಅಪ್ಲೈ ಮಾಡಿದ್ರೆ ಅಂತವರಿಗೂಒ ಲಕ್ಷ ಡಾಲರ್ನ ಫೀಸ್ ಅಪ್ಲೈ ಆಗುತ್ತೆ ಅಂತ ಅಮೆರಿಕಾ ಸರ್ಕಾರ ಹೇಳುತ್ತೆ ಓಕೆ ಈಗ ಕೆನಡ ಸರ್ಕಾರ ಒಬಿ ವೀಸಾ ಹೋಲ್ಡರ್ಸ್ಗೆ ಕೊಟ್ಟಿರೋ ಗುಡ್ ನ್ಯೂಸ್ ಏನು ಅಂತ ಹೇಳಿದೆ ಅದನ್ನ ನಾವು ನೋಡ್ತಾ ಹೋದ್ರೆ ಈಗ ಕೆನಡ ಸರ್ಕಾರ ಈಗ ಹೋಲ್ಡರ್ಸ್ ವೀಸಾ ಹೋಲ್ಡರ್ಸ್ ಗೆ ಪ್ರತ್ಯೇಕ ಇಮಿಗ್ರೇಷನ್ ಗೇಟ್ ಓಪನ್ ಮಾಡಿದೆ ಆ ಮೂಲಕ ವೀಸಾ ಸಮಸ್ಯೆಯಿಂದ ಅಮೆರಿಕಾ ಸಹವಾಸ ಸಾಕು ಅಂತ ಯಾರಾದ್ರೂ ಯೋಚನೆ ಮಾಡ್ತಾ ಇದ್ರೆ ಭಾರತೀಯ ಟ್ಯಾಲೆಂಟ್ ಪೂಲ್ನ ಬಾಚಿಕೊಳ್ಳೋಕ್ಕೆ ಅಂತವರನ್ನ ಸೆಳಿಯೋಕ್ಕೆ ಕೆನಡ ರೆಡಿ ಆಗಿದೆ ಈಗ ಬನ್ನಿ ನಿಮಗೆ ನಾವು ಮುಕ್ತವಾಗಿ ಆಹ್ವಾನ ಕೊಡ್ತೀವಿ ಅಂತ ಹೇಳಿ ಪ್ರೋಗ್ರಾಮ್ ಶುರು ಮಾಡಿದ್ದಾರೆ. ಎನ್ಆರ್ಐ ಗಳ ಮಾರ್ಕೆಟ್ ದಾರಿ ಸುಗಮ.ಭಾರತದಲ್ಲಿ ಹೂಡಿಕೆ ಮಾಡೋಕೆ ಎನ್ಆರ್ಐ ಗಳಿಗೆ ಏನ್ು ಮಾಡಿದ್ದಾರೆ ಅಂತ ಹೇಳಿದ್ರೆ ಸೆಬಿ ಅಥವಾ ಸೆಕ್ಯೂರಿಟಿಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಮುಖ್ಯಸ್ಥ ತುಹಿನ್ಕಾಂತ್ ಪಾಂಡೆ ಎನ್ಆರ್ಐ ಗಳ ಮಾರ್ಕೆಟ್ ಇನ್ವೆಸ್ಟ್ಮೆಂಟ್ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಸದ್ಯ ಭಾರತದ ಸೆಕ್ಯೂರಿಟಿಸ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡೋದಕ್ಕೆ ಎನ್ಆರ್ಐ ಗಳಿಗೆ ಕೆವೈಸಿ ಆಗಬೇಕಲ್ವಾ ಆ ಪ್ರೊಸೀಜರ್ ಸದ್ಯ ಕಾಂಪ್ಲೆಕ್ಸ್ ಆಗಿದೆ. ಅದನ್ನ ಸಿಂಪ್ಲಿಫೈ ಮಾಡೋಕೆ ಮತ್ತು ಸೆಕ್ಯೂರ್ಡ್ ಮಾಡೋಕೆ ಅದು ನಮ್ಮ ಅರ್ಜೆಂಟ್ ಗೋಲ್ ಹೆಜ್ಜೆ ಇಡ್ತಾ ಇದೀವಿ ನಾವು ಅಂತ ಸೆಬಿಯ ಮುಖ್ಯಸ್ಥರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments