Thursday, November 20, 2025
HomeStartups and Businessಕನ್ನಡದ ನಂದಿನಿ ಬ್ರಾಂಡ್‌ನ ಅದ್ಭುತ ಬೆಳವಣಿಗೆ | ಕೋಟ್ಯಂತರದ ಸಾಮ್ರಾಜ್ಯ ಹೇಗೆ ನಿರ್ಮಾಣವಾಯಿತು?

ಕನ್ನಡದ ನಂದಿನಿ ಬ್ರಾಂಡ್‌ನ ಅದ್ಭುತ ಬೆಳವಣಿಗೆ | ಕೋಟ್ಯಂತರದ ಸಾಮ್ರಾಜ್ಯ ಹೇಗೆ ನಿರ್ಮಾಣವಾಯಿತು?

ಕರ್ನಾಟಕದ ಒಂದು ಪುಟ್ಟ ಹಳ್ಳಿಯ ಮೂಲದಿಂದ ಪ್ರಾರಂಭವಾದ ಒಂದು ಹಾಲು ಸಹಕಾರ ಸಂಸ್ಥೆ ಇಂದು ಜಾಗತಿಕ ಕ್ರಿಕೆಟ್ ತಂಡಗಳ ಬೆನ್ನಿಗೆ ನಿಂತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಯೋಜಕತ್ವ ನೀಡ್ತಾ ಇದೆ ಅಷ್ಟೇ ಅಲ್ಲ ಅದು ಸುಮಾರು 2000 ಕಿಲೋಮೀಟರ್ಗಳಷ್ಟು ದೂರವಿರುವ ರಾಜಧಾನಿ ದೆಹಲಿ ಲಿಯಂತಹ ಮಹಾನಗರಗಳಿಗೂ ತಾಜಾ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನ ಪ್ರತಿದಿನ ವಿಶ್ವಾಸಾರ್ಹವಾಗಿ ಪೂರೈಸುತ್ತಾ ಇದೆ ಕೇಳಲು ಸ್ವಲ್ಪ ಕಷ್ಟವಾದರೂ ಇದು ಸಂಪೂರ್ಣ ಸತ್ಯ ಇದೆ ನಮ್ಮ ಹೆಮ್ಮೆಯ ನಂದಿನಿಯ ಕಥೆ ನಂದಿನಿ ಎಂದರೆ ಕೇವಲ ಹಾಲು ಮಾತ್ರವಲ್ಲ ಅದು ಗುಣಮಟ್ಟ ಹಾಗೂ ವಿಶ್ವಾಸದ ಸಂಕೇತ ಕರ್ನಾಟಕದ ಪ್ರತಿಯೊಂದು ಮನೆಯಲ್ಲೂ ಕೇಳಿ ಬರುವ ಒಂದು ಪ್ರತಿಧ್ವನಿಸುವ ಹೆಸರು ಆದರೆ ಇಲ್ಲಿ ಪ್ರಶ್ನೆ ಏನಂದ್ರೆ ಕೇವಲ ಒಂದು ರಾಜ್ಯಮಟ್ಟದ ಸಹಕಾರಿ ಸಂಸ್ಥೆಯು ಖಾಸಗಿ ಕಂಪನಿಗಳ ಪೈಪೋಟಿಯ ನಡುವೆಯು ಇಷ್ಟು ದೊಡ್ಡ ಅಂತರಾಷ್ಟ್ರೀಯ ಖ್ಯಾತಿಯನ್ನ ಹೇಗೆ ಗಳಿಸಿತು ಖಾಸಗಿ ಮಾಲಿಕತ್ವದ ಕಂಪನಿಯಲ್ಲದೆ ಕೇವಲ ಸಹಕಾರ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತ ಹೇಗೆ ಈ ಮಟ್ಟದ ಅದ್ಭುತ ಯಶಸ್ಸನ್ನ ಸಾಧಿಸಿತು ಇಂದು ಭಾರತದ ಎರಡನೇ ಅತಿ ದೊಡ್ಡ ಹಾಲು ಸಹಕಾರಿ ಸಂಸ್ಥೆಯಾಗಲು ಇದರ ಹಿಂದೆ ಇರುವ ಕ್ರಾಂತಿಕಾರಿ ತಂತ್ರವಾದರು ಏನು ಸ್ಥಳೀಯ ಹಳ್ಳಿಗಳಲ್ಲಿ ಹಾಲು ಸಂಗ್ರಹಣೆಯಿಂದ ಹಿಡಿದು ಅಂತರಾಷ್ಟ್ರೀಯ ಕ್ರೀಡಾವೇದಿಕೆಯವರೆಗಿನ .

ಕರ್ನಾಟಕ ಮಿಲ್ಕ್ ಫೆಡರೇಶನ್ ನಂದಿನಿಯು ಇಂದು ಭಾರತದ ಎರಡನೇ ಅತಿ ದೊಡ್ಡ ಹಾಲು ಸಹಕಾರಿ ಸಂಸ್ಥೆಯಾಗಿದೆ ಇದು ಪ್ರತಿದಿನ ಸರಾಸರಿ 8.4 ಮಿಲಿಯನ್ ಲೀಟರ್ಗಳಷ್ಟು ಹಾಲು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ ನಂದಿನಿಯ ಉತ್ಪನ್ನ ಶ್ರೇಣಿಯು 65ಕ್ಕೂ ಹೆಚ್ಚು ವೈವಿಧ್ಯಮಯ ಹಾಲು ಹಾಗೂ ಬೆಣ್ಣೆ ತುಪ್ಪ ಸಿಹಿತಿಗಳು ಐಸ್ಕ್ರೀಮ್ ಹಾಗೂ ಪಾನೀಯಗಳು ಸೇರಿದಂತೆ ಹಾಲು ಆಧಾರಿತ ಉತ್ಪನ್ನಗಳನ್ನ ಒಳಗೊಂಡಿದೆ ಆದರೆ ಈ ಯಶಸ್ಸಿನ ಅಂಕಿ ಅಂಶಗಳು ಕೇವಲ ವ್ಯವಹಾರದ ದಾಖಲೆಗಳಲ್ಲ ಇವು 13ಸಾವಿರಕ್ಕೂ ಹೆಚ್ಚು ಗ್ರಾಮೀಣ ಹಾಲು ಸಹಕಾರ ಸಂಘಗಳು ಹಾಗೂ ಲಕ್ಷಾಂತರ ರೈತ ಕುಟುಂಬಗಳ ಜೀವ ಜೀವನದ ನಾಡಿ ಈ ರೈತರು ಪ್ರತಿದಿನ ಹಾಲನ್ನ ಪೂರೈಸುವ ಮೂಲಕ ತಮ್ಮ ಜೀವನೋಪಾಯವನ್ನ ಕಾಪಾಡಿಕೊಂಡಿದ್ದಾರೆ ನಂದಿನಿ ಅವರ ಶ್ರಮಕ್ಕೆ ನ್ಯಾಯ ಹಾಗೂ ಉತ್ತಮ ಬೆಲೆ ನೀಡುವ ವಿಶ್ವಾಸಾರ್ಹ ವೇದಿಕೆಯಾಗಿ ನಿಂತಿದೆ ಅನ್ನೋದು ಹೆಮ್ಮೆಯ ಸಂಗತಿ ನಂದಿನಿಯ ಮಾತೃಸಂಸ್ಥೆಯಾದ ಕೆಎಂಎಫ್ 2024ರ ಹಣಕಾಸು ವರ್ಷದಲ್ಲಿ ಸುಮಾರು 25ಸಾವಿರ ಕೋಟಿ ಟರ್ನ್ಓವರ್ ಗುರಿ ಸಾಧನೆಯತ್ತ ಸ್ಥಿರವಾಗಿ ಮುನ್ನಡೆಯುತ್ತಿದೆ ಆದರೆ ಈ ಯಸಸ್ಸು ಕೇವಲ ಆರಂಭವಷ್ಟೇ ನಂದಿನಿಯ ಮುಂದಿನ ಮಹತ್ವಾಕಾಂಕ್ಷೆಯ ಗುರಿ ಕೇಳಿದರೆ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ ಅದುವೇ ವಾರ್ಷಿಕ ಟರ್ನ್ಓವರನ್ನ 80ಸಾವಿರ ಕೋಟಿಗೆ ಏರಿಸುವುದು ಇದರರ್ಥ ಕೇವಲ ಹಾಲು ಮಾರಾಟವಲ್ಲ ಇದು ಒಂದು ರಾಜ್ಯದ ಸಹಕಾರ ಶಕ್ತಿ ಜಾಗತಿಕ ವೇದಿಕೆಯಲ್ಲಿ ಹೆಜ್ಜೆ ಇಡುವ ಮಹತ್ವಾಕಾಂಕ್ಷೆಯ ಗುರಿ ಈ ಮಹಾ ಯೋಜನೆಯ ಪ್ರಮುಖ ಅಂಶವೆಂದರೆ ದೆಹಲಿ ಎನ್ಸಿಆರ್ ವಿಸ್ತರಣೆ ಪ್ರಸ್ತುತ ಪ್ರತಿದಿನ 1 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದ್ದು ಶೀಘ್ರದಲ್ಲೇ ಅದನ್ನ 10 ಲಕ್ಷ ಲೀಟರ್ಗೆ ಹೆಚ್ಚಿಸುವ ಗುರಿ ಇದೆ ಇದರೊಂದಿಗೆ ನಂದಿನಿ ಈಗ ಮಧ್ಯಪ್ರದೇಶ ರಾಜಸ್ಥಾನ ಹಾಗೂ ಈಶಾನ್ಯ ರಾಜ್ಯಗಳಲ್ಲಿಯೂ ತನ್ನ ಉತ್ಪನ್ನಗಳನ್ನ ವಿಸ್ತರಿಸುತ್ತಾ ಇದೆ.

ನಂದಿನಿಯ ಹಾದಿ ಈಗ ಸ್ಪಷ್ಟವಾಗಿ ಕರ್ನಾಟಕದಿಂದ ಭಾರತದ ಪ್ರತಿ ಮನೆತನದವರೆಗೂ ತಲುಪುವುದಾಗಿದೆ. ಕೆಎಂಎಫ್ ಪ್ರಸ್ತುತ ಸುಮಾರು 25ಸಾವಿರ ಕೋಟಿ ವಾರ್ಷಿಕ ವ್ಯವಹಾರದತ್ತ ಮುನ್ನುಗತಾ ಇದೆ. ಈ ಅದ್ಭುತ ಯಶಸ್ಸಿನ ಹಿಂದೆ ನಿಂತಿರುವುದು ಅದರ ಬಲಿಷ್ಟವಾದ ಸಹಕಾರದ ಮೂಲ ಸೌಕರ್ಯ ಈ ಬೃಹತ್ ಜಾಲವು 26.76 76 ಲಕ್ಷ ಹಾಲು ಉತ್ಪಾದಕರು 15737 ಹಾಲು ಸಹಕಾರ ಸಂಘಗಳು ಹಾಗೂ 15 ಜಿಲ್ಲಾ ಹಾಲು ಒಕ್ಕೂಟಗಳನ್ನ ಒಳಗೊಂಡಿದೆ ಇಂತಹ ದೈತ್ಯ ವ್ಯವಸ್ಥೆಯೊಳಗಡೆ ಪ್ರತಿದಿನದ ಹಾಲು ಸಂಗ್ರಹಣೆ ಸಂಸ್ಕರಣೆ ಹಾಗೂ ವಿತರಣೆಯು ರೈತರಿಂದ ಹಿಡಿದು ಗ್ರಾಹಕರವರೆಗೆ ಅತ್ಯಂತ ಸರಾಗವಾಗಿ ಸಾಗುತ್ತದೆ ಇದೇ ಕಾರಣದಿಂದ ನಂದಿನಿ ಕೇವಲ ರಾಜ್ಯ ಅಥವಾ ದೇಶಕ್ಕೆ ಸೀಮಿತವಾಗದೆ ತನ್ನ ಹಾಲು ಹಾಗೂ ಹಾಲು ಉತ್ಪನ್ನಗಳನ್ನ 25ಕ್ಕೂ ಹೆಚ್ಚು ದೇಶಗಳಿಗೆ ಯಶಸ್ವಿಯಾಗಿ ರಫ್ತು ಮಾಡ್ತಾ ಇದೆ ಅಬುದಾಬಿ ಸಿಂಗಾಪುರ ಭೂತಾನ್ ಮಯನ್ಮಾರ್ ಅಮೆರಿಕಾದಂತಹ ಜಾಗತಿಕ ವೇದಿಕೆಗಳಲ್ಲಿ ನಂದಿನಿ ಅನ್ನುವ ಹೆಸರು ಇಂದು ಗುಣಮಟ್ಟ ಹಾಗೂ ವಿಶ್ವಾಸದ ಸಂಕೇತವಾಗಿ ಗುರುತಿಸಿಕೊಂಡಿದೆ ಆದರೆ ಈ ನಂದಿನಿಯ ಈ ಅದ್ಭುತ ಯಶಸ್ಸಿನ ಹಿಂದೆ ಇರುವ ನಿಜವಾದ ಕಥೆ ಅತ್ಯಂತ ಪ್ರೇರಣಾದಾಯಕವಾಗಿದೆ ಅದಕ್ಕಾಗಿ ನಾವು ನಂದಿನಿಯ ಇತಿಹಾಸದ ಪಯಣದ ಕಡೆಗೆ ಸ್ವಲ್ಪ ಹಿಂತುರುಗಿ ನೋಡಬೇಕು ಸ್ನೇಹಿತರೆ ಕರ್ನಾಟಕದ ಕೊಡಗು ಜಿಲ್ಲೆ ಯಲ್ಲಿ ಈ ಹಾಲು ಸಹಕಾರಿಯ ಬಿತ್ತನೆ ನಡೆದಾಗ ಆ ಕಾಲದಲ್ಲಿ ಪ್ಯಾಕ್ಡ್ ಹಾಲು ಅನ್ನುವ ಕಲ್ಪನೆ ಯಾರಿಗೂ ತಿಳಿದಿರಲಿಲ್ಲ 1970ರ ದಶಕದವರೆಗೆ ಹಾಲು ಉತ್ಪಾದನೆಯ ಕೊರತೆ ಸಂಗ್ರಹಣೆಯ ತೊಂದರೆ ಹಾಗೂ ಶೀತಾಗ್ರಹ ವ್ಯವಸ್ಥೆಗಳ ಕೊರತೆಯು ಕರ್ನಾಟಕ ಹಾಗೂ ಭಾರತದಲ್ಲಿ ಒಂದು ದೊಡ್ಡ ಸವಾಲಾಗಿತ್ತು ನಗರದ ಜನರಿಗೆ ಹಾಲು ದೊರೆಯುವುದು ಕಷ್ಟಕರವಾಗಿತ್ತು ಇದೇ ವಿಷಮ ಪರಿಸ್ಥಿತಿಯಲ್ಲಿ ಹುಟ್ಟಿದ ಒಂದು ದಾರ್ಶನಿಕ ಚಿಂತನೆಯೇ ಎಂದು ನಾವು ನೋಡುತ್ತಿರುವ.

ನಂದಿನಿ ಸಮಸ್ಯೆಗಳಿಗೆ ಪರಿಹಾರವಾಗಿ 1970ರ ಜನವರಿಯಲ್ಲಿ ಡಾಕ್ಟರ್ ವರ್ಗೀಸ್ ಕುರಿಯನ್ ಅವರ ನಾಯಕತ್ವದಲ್ಲಿ ಮಹತ್ವದ ಶ್ವೇತ ಕ್ರಾಂತಿ ಆರಂಭವಾಯಿತು. ಅಮುಲ್ನ ಸ್ಥಾಪಕರು ಹಾಗೂ ರಾಷ್ಟ್ರೀಯ ಹಾಲು ಅಭಿವೃದ್ಧಿ ಮಂಡಳಿಯ ಸಂಸ್ಥಾಪಕರಾದ ಡಾಕ್ಟರ್ ಕುರಿಯನ್ ಅವರ ದೃಷ್ಟಿ ಒಂದೇ ಆಗಿತ್ತು ಭಾರತದ ಹಳ್ಳಿಯ ರೈತರು ಹಾಲಿನ ಮೂಲಕ ಸ್ವಾವಲಂಬಿಗಳಾಗಬೇಕು ಈ ಮಹಾನ್ ಮಿಷನ್ಗೆ ವಿಶ್ವ ಬ್ಯಾಂಕ್ ಕೂಡ ಆರ್ಥಿಕ ಹಾಗೂ ತಾಂತ್ರಿಕ ಸಹಾಯ ನೀಡಿತ್ತು ಅದರ ಫಲವಾಗಿ ಇಂದು ಭಾರತವು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ ಶ್ವೇತ ಕ್ರಾಂತಿಯ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನ ಆಪರೇಷನ್ ಫ್ಲಡ್ ಅಂತ ಕರೆಯಲಾಯಿತು ಇದರ ಮೂರು ಮುಖ್ಯ ಗುರಿಗಳೆಂದರೆ ಮೊದಲನೆದಾಗಿ ಹಾಲಿನ ಉತ್ಪಾದನೆಯನ್ನ ಗಣನೀಯವಾಗಿ ಹೆಚ್ಚಿಸುವುದು ಎರಡನೆದಾಗಿ ಹಳ್ಳಿಯ ಹಾಲು ಉತ್ಪಾದಕರ ಆದಾಯವನ್ನ ಸುಧಾರಿಸುವುದು ಹಾಗೂ ಮೂರನೆಯದಾಗಿ ನಗರ ಪ್ರದೇಶದ ಜನರಿಗೆ ಕಡಿಮೆ ಬೆಲೆಯಲ್ಲಿ ಹಾಲು ಲಭ್ಯವಾಗುವಂತೆ ಮಾಡುವುದು ಈ ಕ್ರಾಂತಿಯ ನೇರ ಪರಿಣಾಮದಿಂದಾಗಿ ಹಳ್ಳಿಯ ರೈತರ ಜೀವನ ಸಂಪೂರ್ಣವಾಗಿ ಬದಲಾಯಿತು ಯಶಸ್ವಿ ಕ್ರಾಂತಿಯ ಹಾದಿಯಲ್ಲೇ ಕರ್ನಾಟಕ ರಾಜ್ಯದಲ್ಲಿ ಹೈನುಗಾರಿಕೆಯನ್ನ ಬಲಪಡಿಸಲು ಸರ್ಕಾರವು 19 74ರಲ್ಲಿ ಕರ್ನಾಟಕ ಡೈರಿ ಡೆವಲಪ್ಮೆಂಟ್ ಕಮಿಷನ್ ಅನ್ನ ರಚಿಸಿತು ನಂತರ 1984 ರಲ್ಲಿ ಅದೇ ಸಂಸ್ಥೆಯನ್ನ ಇಡೀ ಭಾರತಕ್ಕೆ ಪರಿಚಿತವಾದ ಕರ್ನಾಟಕ ಮಿಲ್ಕ್ ಫೆಡರೇಶನ್ ಅಂತ ಮರುನಾಮಕರಣ ಮಾಡಲಾಯಿತು ಸ್ನೇಹಿತರೆ ಆಪರೇಷನ್ ಫ್ಲಡ್ ಕೇವಲ ಒಂದು ಯೋಜನೆ ಮಾತ್ರವಾಗಿರಲಿಲ್ಲ ಇದು ಗ್ರಾಮೀಣ ರೈತರ ಜೀವನವನ್ನ ಸಮಗ್ರವಾಗಿ ಬದಲಾಯಿಸಿದ ಒಂದು ಬೃಹತ್ ಚಳವಳಿಯಾಗಿತ್ತು ಇದರೊಂದಿಗೆ ಹಾಲಿನ ಹೊಸ ಯುಗವು ಪ್ರಾರಂಭವಾಯಿತು ಈಯುಗ ದಲ್ಲಿ ನಂದಿನಿ ಅನ್ನುವ ಹೆಸರು ಪ್ರತಿಯೊಬ್ಬರ ಮನೆಗೂ ತಾಜಾ ಹಾಲು ಹಾಗು ವಿಶ್ವಾಸವನ್ನ ತಂದುಕೊಡುತ್ತ.

ಕ್ರಮೇಣ ನಂದಿನಿ ಕರ್ನಾಟಕದ ಹೆಮ್ಮೆಯಾಗಿ ಜನಮಾನಸದಲ್ಲಿ ನೆಲೆಸಿದ ಸಾರ್ವಕಾಲಿಕ ಹಾಲು ಬ್ರಾಂಡ್ ಆಗಿ ಬೆಳೆಯಿತು ಶುದ್ಧತೆ ಹಾಗೂ ತಾಜತ್ವದ ಪ್ರತೀಕವಾಗಿರುವ ನಂದಿನಿ ಇಂದಿನ ದಿನದಲ್ಲಿ ವಿಶ್ವಾಸದ ಮತ್ತೊಂದು ಹೆಸರಾಗಿದೆ ಇಂದು ಕೆಎಂಎಫ್ ದಕ್ಷಿಣ ಭಾರತದ ಅತಿ ದೊಡ್ಡ ಹಾಲು ಸಹಕಾರಿ ಸಂಸ್ಥೆ ಮಾತ್ರವಲ್ಲದೆ ಭಾರತದ ಮಟ್ಟದಲ್ಲಿ ಎರಡನೇ ಅತಿ ದೊಡ್ಡ ಹಾಲು ಸಂಸ್ಥೆಯಾಗಿ ಹೆಮ್ಮೆಯಿಂದ ಮೆರೆಯುತ್ತಿದೆ ನಂದಿನಿಯು ತನ್ನ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ವಿಸ್ತರಣೆಯ ಭಾಗವಾಗಿ 2024ರ ನವೆಂಬರ್ 22ರಂದು ದೆಹಲಿ ಎನ್ಸಿಆರ್ ಮಾರುಕಟ್ಟೆಯಲ್ಲಿ ತನ್ನ ಹಾಲು ಉತ್ಪನ್ನಗಳನ್ನ ಅಧಿಕೃತವಾಗಿ ಬಿಡುಗಡೆ ಮಾಡಿತು ಈ ಮಾರುಕಟ್ಟೆಯಲ್ಲಿ ಈಗಾಗಲೇ ಅಮೂಲ್ ಹಾಗೂ ಮದರ್ ಡೈರಿಯಂತಹ ಬಲವಾದ ರಾಷ್ಟ್ರೀಯ ಬ್ರಾಂಡ್ಗಳು ನೆಲೆಸಿದ್ದರು ನಂದಿನಿ ತನ್ನ ವಿಶಿಷ್ಟ ಗುಣಮಟ್ಟ ಹಾಗೂ ದಶಕಗಳ ಜನವಿಶ್ವಾಸದಿಂದ ಸ್ಪರ್ಧೆಗೆ ಸಜ್ಜಾಗಿದೆ ಪ್ರಸ್ತುತ ಕೆಎಂಎಫ್ ಪ್ರತಿದಿನ ಒಟ್ಟು 100 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಾ ಇದ್ದು ಅದರಲ್ಲಿ 60 ಲಕ್ಷ ಲೀಟರ್ ಕರ್ನಾಟಕದ ಸ್ಥಳೀಯ ಬಳಕೆಗೆ ಮೀಸಲು ಉಳಿದ ಹಾಲಿನಿಂದ ಪ್ರತಿದಿನ ಮೂರರಿಂದ ನಾಲ್ು ಲಕ್ಷ ಲೀಟರ್ ಹಾಲನ್ನ ದೆಹಲಿ ಎನ್ಸಿಆರ್ ಪ್ರದೇಶಕ್ಕೆ ಕಳಿಸುವ ಬೃಹತ್ ಯೋಜನೆ ರೂಪಿಸಲಾಗಿದೆ. ಕರ್ನಾಟಕದಿಂದ ದೆಹಲಿವರೆಗಿನ ಈ ಸುದೀರ್ಘ ಪ್ರಯಾಣಕ್ಕೆ 52 ರಿಂದ 54 ಗಂಟೆಗಳ ಕಾಲಾವಕಾಶ ಬೇಕಿದ್ದರೂ ಗುಣಮಟ್ಟವೇ ನಂದಿನಿಯ ಶಕ್ತಿ ಅನ್ನುವ ತತ್ವದ ಮೇಲೆ ಸಂಸ್ಥೆ ಕಾರ್ಯ ನಿರ್ವಹಿಸುತ್ತಾ ಇದೆ.

ಹೀಗಾಗಿ ಈ ದೀರ್ಘ ಪ್ರಯಾಣದ ನಡುವೆಯು ಹಾಲು ತಾಜಾ ಹಾಗೂ ಶುದ್ಧವಾಗಿರಲು ಅತ್ಯಾಧುನಿಕ ತಂಪು ಸರಪಳಿ ವ್ಯವಸ್ಥೆ ಅಂದರೆ ಕೋಲ್ಡ್ ಚೈನ್ ಸಿಸ್ಟಮ್ ಬಳಸಲಾಗುತ್ತಿದೆ. ದೆಹಲಿ ಎನ್ಸಿಆರ್ ನಲ್ಲಿ ಪ್ರತಿದಿನ ಐದರಿಂದಆು ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿ ಹೊಂದಿರುವ ನಂದಿನಿ ಇಂದು ಬಲವಾಗಿ ನಿಂತಿರುವ ಸ್ಪರ್ಧಿಗಳ ನಡುವೆಯು ತನ್ನ ಗುಣಮಟ್ಟ ಸ್ಪರ್ಧಾತ್ಮಕ ಬೆಲೆ ಹಾಗೂ ರೈತ ಸ್ನೇಹಿ ಸಹಕಾರಿ ತತ್ವದಿಂದ ಗ್ರಾಹಕರ ಹೃದಯ ಗೆಲ್ಲುವ ಸಂಪೂರ್ಣ ವಿಶ್ವಾಸ ಹೊಂದಿದೆ ಸ್ನೇಹಿತರೆ ಎನ್ಸಿಆರ್ ಮಾರುಕಟ್ಟೆಯಲ್ಲಿ ನಂದಿನಿಯ ಪ್ರವೇಶವು ಕೇವಲ ಒಂದು ವ್ಯವಹಾರದ ಕ್ರಮವಲ್ಲ ಇದು ಧೈರ್ಯದ ಹೆಜ್ಜೆ ಯಾಕಂದರೆ ಇದೇ ದೆಹಲಿಯ ಮಾರುಕಟ್ಟೆಯಲ್ಲಿ ಈ ಹಿಂದೆ ಬರ್ಕ ಹಾಗೂ ಸುಧಾ ಹಾಲಿನಂತಹ ಪ್ರಾದೇಶಿಕ ಬ್ರಾಂಡ್ಗಳು ಸ್ಪರ್ಧೆಯಲ್ಲಿ ಸೋತಿದ್ದವು ಆದರೆ ನಂದಿನಿಯ ಕಾರ್ಯತಂತ್ರ ಸಂಪೂರ್ಣವಾಗಿ ಭಿನ್ನವಾಗಿದೆ ಮೊದಲನೆದಾಗಿ ಅದರ ಬೆಲೆನೀತಿ ನಂದಿನಿಯ ಉತ್ಪನ್ನಗಳನ್ನ ಪ್ರಮುಖ ಸ್ಪರ್ಧೆಗಳಿಗಿಂತ ಸ್ವಲ್ಪ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದು ಇದು ಗ್ರಾಹಕರಲ್ಲಿ ಗುಣಮಟ್ಟವು ಇದೆ ಬೆಲೆಯು ನ್ಯಾಯವುತವಾಗಿದೆ ಅನ್ನುವ ಬಲವಾದ ನಂಬಿಕೆಯನ್ನ ಉಂಟುಮಾಡಿದೆ ಎರಡನೆದಾಗಿ ಇದರ ವಿತರಣ ಜಾಲ ನಂದಿನಿಯ ಪ್ರಮುಖ ತಂತ್ರವೇನೆಂದರೆ ಮೊದಲು ಪೂರೈಕೆ ವ್ಯವಸ್ಥೆಯನ್ನ ಬಲಪಡಿಸುವುದು ನಂತರವಷ್ಟೇ ಉತ್ಪನ್ನಗಳನ್ನ ಬಿಡುಗಡೆ ಮಾಡುವುದು ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ಈಗಾಗಲೇ ಬಲವಾದ ಲಾಜಿಸ್ಟಿಕ್ಸ್ ನೆಟ್ವರ್ಕ್ ನಿರ್ಮಿಸಿದ್ದು ಮುಂದಿನ ಹಂತಗಳಲ್ಲಿ ತನ್ನದೇ ಆದ ವಿತರಣ ಕೇಂದ್ರ ತೆರೆಯುವ ಯೋಜನೆಯು ಇದೆ ಮೂರನೆಯದಾಗಿ ಉತ್ಪನ್ನ ತಂತ್ರಂ ನಂದಿನಿ ಮೊದಲಿಗೆ ಹಾಲು ಹಾಗೂ ಮೊಸರಿನಂತಹ ಮೂಲಭೂತ ಉತ್ಪನ್ನದೊಂದಿಗೆ ಪ್ರವೇಶಿಸಿದೆ ಇದರ ಯಸಸ್ಸಿನ ನಂತರ ಬೆಣ್ಣೆ ಪನ್ನೀರ್ ತುಪ್ಪ ಐಸ್ಕ್ರೀಮ್ ಹಾಗೂ ಪೇಡ ಹೀಗೆ ಹಂತಹಂತವಾಗಿ ಇತರೆ ಹಾಲಿನ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ ಆಗಲಿವೆ.

ಈ ವ್ಯವಸ್ಥಿತ ತಂತ್ರ ದೊಂದಿಗೆ ನಂದಿನಿ ಎನ್ಸಿಆರ್ ಮಾರುಕಟ್ಟೆಯ ಅತ್ಯುತ್ತಮ ಮೂರು ಹಾಲು ಬ್ರಾಂಡ್ಗಳಲ್ಲಿ ಒಂದಾಗುವ ಗುರಿ ಹೊಂದಿದೆ ಪ್ರಸ್ತುತ ದೆಹಲಿಯ ಮಾರುಕಟ್ಟೆಯಲ್ಲಿ ಅಮೂಲ್ ಹಾಗೂ ಮದರ್ ಡೈರಿ ಒಟ್ಟಾಗಿ ಶೇಕಡ 70ರಷ್ಟು ಮಾರುಕಟ್ಟೆಯ ಹಂಚಿಕೆಯನ್ನ ಹಿಡಿದಿದೆ ಆದರೆ ನಂದಿನಿ ತನ್ನ ಸ್ಪರ್ಧಾತ್ಮಕ ಬೆಲೆ ಹಾಗೂ ದಶಕಗಳಿಂದ ಗಳಿಸಿರುವ ವಿಶ್ವಾಸದ ಮೂಲಕ ಈ ಪಾಲಿನಲ್ಲಿ ತನ್ನ ಸ್ಥಾನವನ್ನ ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ನಂದಿನಿ ನನಿಯ ಟರ್ನ್ಓವರ ಅನ್ನ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯ ಗುರಿ ಇದೆ ಇಂದು ನಂದಿನಿ ಕೇವಲ ಕರ್ನಾಟಕದ ಬ್ರಾಂಡ್ ಅಲ್ಲ ಅದು ಭಾರತದ ಹೆಮ್ಮೆ ಆಗ್ತಾ ಇದೆ ಟಾಪ್ ತ್ರೀ ಹಾಲು ಬ್ರಾಂಡ್ಗಳಲ್ಲಿ ಒಂದಾಗುವುದು ಇದು ನಂದಿನಿಯ ದೆಹಲಿ ಮಾರುಕಟ್ಟೆಯ ಸ್ಪಷ್ಟ ಗುರಿ ಸ್ನೇಹಿತರೆ ನಂದಿನಿ ಯಶಸ್ಸಿನ ಪಯಣದಲ್ಲಿ ಅದರ ಅಂತರಾಷ್ಟ್ರೀಯ ಪ್ರಾಯೋಜಕತ್ವ ಒಂದು ಪ್ರಮುಖ ಮೈಲಿಗಲ್ಲು ಇತ್ತೀಚಿಗೆ ನಡೆದ ಟಿ20 ವಿಶ್ವಕಪ್ನ ಪ್ರಾಯೋಜಕತ್ವ ವಹಿಸಿದ್ದು ಅಲ್ಲಿ ನಂದಿನಿ ಐರ್ಲ್ಯಾಂಡ್ ಸ್ಕ್ವಾಟ್ಲ್ಯಾಂಡ್ ಹಾಗೂ ಕೆನಡಾ ತಂಡಗಳ ಜರ್ಸಿಗಳ ಮೇಲೆ ತನ್ನಲ ಲೋಗೋವನ್ನ ಪ್ರದರ್ಶಿಸುವ ಮೂಲಕ ಜಾಗತಿಕ ಕ್ರೀಡಾ ವೇದಿಕೆಯನ್ನ ಪ್ರವೇಶಿಸಿತು. ಈ ಮೂಲಕ ಕರ್ನಾಟಕದ ಸ್ಥಳೀಯ ಬ್ರಾಂಡ್ ವಿಶ್ವದಾದ್ಯಂತ ಕೊಟ್ಯಂತರ ಕ್ರೀಡಾಭಿಮಾನಿಗಳನ್ನ ತಲುಪಿತು. ಅಷ್ಟೇ ಅಲ್ಲ ನಂದಿನಿ ಈಗಾಗಲೇ ದೇಶದ ಪ್ರಮುಖ ಕ್ರೀಡಾಕೂಟವಾದ ಇಂಡಿಯನ್ ಸೂಪರ್ ಲೀಗ್ನ ಕೇಂದ್ರ ಸಹಭಾಗಿಯಾಗಿ ಕೂಡ ಆಯ್ಕೆಯಾಗಿತ್ತು. ಐಎಸ್ಎಲ್ ನ 11ನೇ ಸೀಸನ್ ಹಾಗೂ ಈ ಸಂಪೂರ್ಣ ಟೂರ್ನಿಯ ಅವಧಿಯಲ್ಲಿ ನಂದಿನಿಯ ಬ್ರಾಂಡ್ ಸ್ಟೇಡಿಯಂ ಗಳಲ್ಲಿ ಟಿವಿ ಪ್ರಸಾರಗಳಲ್ಲಿ ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಎಲ್ಲಡೆ ದೃಶ್ಯವಾಗಿತ್ತು ಇದು ನಂದಿನಿ ಕೇವಲ ಹಾಲು ಬ್ರಾಂಡ್ ಆಗಿರದೆ ಜಾಗತಿಕವಾಗಿ ಗುರುತಿಸಲ್ಪಟ್ಟ ಒಂದು ಪ್ರಬಲ ಭಾರತೀಯ ಸಹಕಾರಿ ಶಕ್ತಿ ಅನ್ನೋದನ್ನ ಸಾಬಿತು ಪಡಿಸಿತು ಸ್ನೇಹಿತರೆ ನಂದಿನಿ ಕೇವಲ ಕ್ರೀಡಾ ಪ್ರಾಯೋಜಕತ್ವ ಬ್ರಾಂಡ್ ಮಾತ್ರವಲ್ಲ ಅದು ಭಾರತೀಯ ಸೈನ್ಯಕ್ಕೂ ಹಾಲು ಪೂರೈಸುವ ವಿಶ್ವಾಸಾರ್ಹ ಸಂಸ್ಥೆ ಇದರ ಉತ್ಪನ್ನಗಳು ಈಗ ಈಗ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ತಮ್ಮ ಚಾಪು ಮೂಡಿಸಿವೆ.

ಸಿಂಗಾಪುರ, ಮಯನ್ಮಾರ್, ಭೂತಾನ್, ಅಮೆರಿಕಾ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳಲ್ಲಿ ನಂದಿನಿ ಪಾದಾರ್ಪಣೆ ಮಾಡಿದೆ. ಅಬುದಾಬಿಯಲ್ಲಿ ಹಾಲು ಪಾರ್ಲರ್ಗಳನ್ನ ತೆರೆಯುವ ಮೂಲಕ ತನ್ನ ಅಂತರಾಷ್ಟ್ರೀಯ ಹಾದಿಯನ್ನ ಮತ್ತಷ್ಟು ವಿಸ್ತರಿಸಿದೆ. ವಿದೇಶಿ ಮಾರುಕಟ್ಟೆಯಲ್ಲಿ ನಂದಿನಿಯ ಸಿಹಿ ತಿಂಡಿಗಳಾದ ದೂದ್ ಪೇಡ ಹಾಗೂ ಮೈಸೂರು ಪಾಕಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಹೀಗೆ ನಂದಿನಿ ಕೇವಲ ಸಹಕಾರಿ ಸಂಸ್ಥೆಯಾಗಿರದೆ ದೇಶದೊಳಗೂ ಹಾಗೂ ಹೊರಗೂ ತನ್ನ ವಿಶ್ವಾಸಾರ್ಹತೆಯನ್ನ ನಿರಂತರವಾಗಿ ಸಾಬಿತು ಪಡಿಸುತ್ತಿರುವ ರಾಷ್ಟ್ರೀಯ ಹೆಮ್ಮೆಯಾಗಿದೆ. ಉತ್ಪನ್ನ ವಿಸ್ತರಣೆಗೆ ಒತ್ತು ನೀಡಿರುವ ಕೆಎಂಎಫ್ ದೇಶೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಶೀಘ್ರದಲ್ಲೇ ಎರಡು ಹೊಸ ಪಾನೀಯಗಳನ್ನ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಅಂತ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ ಅವುಗಳೆಂದರೆ ಸ್ಪ್ಲಾಶ್ ಅನ್ನು ವೇ ಆಧಾರಿತ ಪ್ರೋಟೀನ್ ಪಾನಿಯ ಹಾಗೂ ಬೌನ್ಸ್ ಅನ್ನುವ ವೇ ಆಧಾರಿತ ಕಾರ್ಬೋನೇಟೆಡ್ ಪಾನಿಯ ಇದರ ಜೊತೆಗೆ ನಂದಿನಿಯ ಅಂತರಾಷ್ಟ್ರೀಯ ಉಪಸ್ಥಿತಿಯನ್ನ ಮತ್ತಷ್ಟು ಬಲಪಡಿಸಲು ಹಾಗೂ ಕ್ರೀಡಾ ಪ್ರಚಾರಕ್ಕೆ ಪ್ರೋತ್ಸಾಹ ನೀಡಲು ಒಕ್ಕೂಟವು ಮಹತ್ವದ ಹೆಜ್ಜ ಇಡ್ತಾ ಇದೆ ಪ್ರೊ ಕಬಡ್ಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ಗೆ ಪ್ರಾಯೋಜಕತ್ವ ನೀಡಿದ ಯಶಸ್ಸಿನ ನಂತರ ಕೆಎಂಎಫ್ ಅಧ್ಯಕ್ಷರ ಹೇಳಿಕೆಯ ಪ್ರಕಾರ ಒಲಂಪಿಕ್ಸ್ ಹಾಗು ಐಪಿಎಲ್ ಪ್ರಾಯೋಜಕತ್ವದ ಯೋಜನೆಗಳು ಕೂಡ ಸಧ್ಯ ಚರ್ಚೆಯಲ್ಲಿವೆ ಈ ಮೂಲಕ ನಂದಿನಿಯ ಗೋಚರತೆ ಅಂತರಾಷ್ಟ್ರೀಯ ಕ್ರೀಡಾವೇದಿಕೆಗಳಲ್ಲಿ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ ಸ್ನೇಹಿತರೆ ನಂದಿನಿ ಕರ್ನಾಟಕದ ಅಮೂಲ್ ಅನ್ನುವ ಹೋಲಿಕೆಯು ವಿಶ್ಲೇಷಕರಿಂದ ಕೇಳಿ ಬರ್ತಾ ಇದೆ ಯಾಕಂದರೆ ನಂದಿನಿಯ ಈ ಮಹತ್ವಾಕಾಂಕ್ಷೆಯ ಯೋಜನೆಗಳು ಅಮೂಲ್ 2011ರ ಕ್ರಿಕೆಟ್ ವಿಶ್ವಕಪ್ ನಂತಹ ಅಂತರಾಷ್ಟ್ರೀಯ ಕ್ರೀಡಾಕೂಟಗಳನ್ನ ಪ್ರಾಯೋಜಿಸುವ ಮೂಲಕ ಜಾಗತಿಕ ಬ್ರಾಂಡ್ ಆಗಿ ಬೆಳೆದ ಹಾದಿಯನ್ನೇ ಹೋಲುತ್ತಿದೆ ಈ ಬೆಳವಣಿಗೆಗಳು ನಂದಿನಿ ರಾಷ್ಟ್ರೀಯ ಬ್ರಾಂಡ್ನಿಂದ ಜಾಗತಿಕ ಬ್ರಾಂಡ್ ಆಗಿ ಪರಿವರ್ತನೆಗೊಳ್ಳುತ್ತಿರುವ ಸ್ಪಷ್ಟ ಸೂಚನೆಯನ್ನ ನೀಡುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments