ಚಿನ್ನದ ಬೆಲೆ ಏಕಾಏಕಿ ಗಗನಕ್ಕೆ ನೀವೆಲ್ಲ ಗಮನಿಸಿರಬಹುದು ಹಳೆ ದಾಖಲೆಗಳನ್ನೆಲ್ಲ ಮೀರಿ ಕೈ ಗೆಟಕದ ಬೆಲೆಗೆ ಚಿನ್ನ ತಲುಪಿದೆ ಕಳೆದ ಒಂದೆರಡು ವಾರಗಳಿಂದಂತೂ ಪಟ್ಟುಬಿಡದೆ ಪ್ರತಿದಿನ ಬೆಲೆ ಏರ್ತಾ ಇದೆ 10ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ಈಗ ಬೆಲೆ ಆಲ್ಮೋಸ್ಟ್ 1.3 ಲಕ್ಷ 22 ಕ್ಯಾರೆಟ್ಗೆ ಆಲ್ಮೋಸ್ಟ್ಒ 8 ಲಕ್ಷ ಈ ಅನಿರೀಕ್ಷಿತ ಬೆಲೆಯರಿಕೆ ವಿಚಾರವಾಗಿ ಭಾರತ ಸೇರಿದಂತೆ ಜಾಗತಿಕವಾಗಿ ಮಾರ್ಕೆಟ್ ಎಕ್ಸ್ಪರ್ಟ್ಗಳು ಆತಂಕ ಹೊರಹಾಕ್ತಿದ್ದಾರೆ ಈ ಬೆಲೆಯರಿಕೆ ಜಾಗತಿಕ ಆರ್ಥಿಕತೆಗೆ ಎಚ್ಚರಿಕೆಯ ಗಂಟೆ ಎನ್ನುವ ವಿಶ್ಲೇಷಣೆ ಮಾಡಲಾಗ್ತಾ ಇದೆ ಕೆಲವರಂತೂ 1970ರ ತೈಲ ಬಿಕ್ಕಟ್ಟಿನಂತೆ ಈಗ ಚಿನ್ನದ ಬೆಲೆಯಿಂದಾಗಿ ಜಗತ್ತಿನಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ ಅಂತ ಹೇಳ್ತಿದ್ದಾರೆ ಹಾಗಿದ್ರೆ ಅಸಲಿಗೆ ಚಿನ್ನದ ಬೆಲೆ ಈಗ ಏಕಾಏಕಿ ಹೆಚ್ಚಾಗುತಿರುದಕ್ಕೆ ಕಾರಣ ಕಾರಣ ಏನು ಇತಿಹಾಸದಲ್ಲಿ ಈ ರೀತಿ ಬೆಲೆಯರಿಕೆಯ ಟ್ರೆಂಡ್ ಇದ್ದಾಗೆಲ್ಲ ಜಾಗತಿಕ ಆರ್ಥಿಕತೆ ಮೇಲೆ ಯಾವ ರೀತಿಯ ಪರಿಣಾಮ ಉಂಟುಮಾಡಿವೆ ಮಾರ್ಕೆಟ್ ಎಕ್ಸ್ಪರ್ಟ್ಗಳು ಆತಂಕ ಹೊರಹಾಕ್ತಿರೋದು.
ಒಂದೇ ವರ್ಷಕ್ಕೆ 80% ಬೆಲೆ ಏರಿಕೆ ಹೌದು ಚಿನ್ನ ಬೆಳ್ಳಿ ಹಾಗೂ ಇತರೆ ಮೌಲ್ಯಯುತ ಲೋಹಗಳ ಬೆಲೆ ಇದೊಂದೇ ವರ್ಷದಲ್ಲಿ 58 ರಿಂದ 80% ಹೆಚ್ಚಾಗಿದೆ ಅದರಲ್ಲೂ 2025ರಲ್ಲಿ ಚಿನ್ನದ ಬೆಲೆ ಶೇಕಡ 60ಕ್ಕಿಂತಲೂ ಹೆಚ್ಚು ದುಬಾರಿಯಾಗಿದೆ ಕೇವಲ ಭಾರತದ ಟ್ರೆಂಡ್ ಅಲ್ಲ ಜಾಗತಿಕವಾಗಿ ಚಿನ್ನದ ಬೆಲೆ ಪ್ರತಿ ಔನ್ಸ್ ಚಿನ್ನಕ್ಕೆ ಅಂದರೆ 28.35 ಗ್ರಾಂ ಚಿನ್ನಕ್ಕೆ 4000 ಅಮೆರಿಕನ್ ಡಾಲರ್ಗೆ ರೀಚ್ ಆಗಿದೆ ಇದೆ ಮೊದಲ ಬಾರಿಗೆ ಒಂದು ಔನ್ಸ್ ಚಿನ್ನದ ಬೆಲೆ 4000 ಡಾಲರ್ ಮೀರಿದೆ ಆದರೆ ಜಸ್ಟ್ ಬೆಲೆಯರಿಕೆ ಅಲ್ಲ ಇದರ ಜೊತೆಗೆ ಜಾಗತಿಕ ಆರ್ಥಿಕ ಎಕ್ಸ್ಪರ್ಟ್ ಗಳು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಈ ಬೆಲೆ ಏರಿಕೆಗೆ ಕೇವಲ ಚಿನ್ನದ ಡಿಮ್ಯಾಂಡ್ ಕಾರಣ ಅಲ್ಲ. ಅದರ ಜೊತೆಗೆ ಆರ್ಥಿಕ ಅನಿಶ್ಚಿತತೆ ಹಾಗೂ ಭಯ ಕೂಡ ಕಾರಣ ಅಂತ ಹೇಳಲಾಗ್ತಿದೆ. ಹಾಗಿದ್ರೆ ಏನಿದು ಭಯ. ನೀವೀಗ ರಿಪೋರ್ಟ್ ನೋಡ್ತಿರಬಹುದು ಇತ್ತೀಜಿಗೆ ಸೆಪ್ಟೆಂಬರ್ ಅಂತ್ಯದಲ್ಲಿ ಆರ್ಬಿಐನ ವಿದೇಶಿ ವಿನಿಮಯ ನಿಧಿ 2.3 3 ಬಿಲಿಯನ್ ಡಾಲರ್ ನಷ್ಟು ಕಡಿಮೆಯಾಗಿದೆ ಆದರೆ ಆಶ್ಚರ್ಯ ಅನ್ನುವ ಹಾಗೆ ಇದಕ್ಕೆ ವಿರುದ್ಧವಾಗಿ ಅದೇ ಅವಧಿಯಲ್ಲಿ ಆರ್ಬಿಐನ ಚಿನ್ನದ ನಿಧಿಯ ಮಟ್ಟ ಹೆಚ್ಚಾಗಿದೆ.
2.23 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನ ಆರ್ಬಿಐ ಹೊಸದಾಗಿ ಖರೀದಿ ಮಾಡಿದೆ ಪರಿಣಾಮ ಆರ್ಬಿಐನ ಚಿನ್ನದ ನಿಧಿ ಬರೊಬ್ಬರಿ 95.017 017 ಬಿಲಿಯನ್ ಡಾಲರ್ ತಲುಪಿ ದಾಖಲೆ ಸೃಷ್ಟಿಸಿದೆ ಕೇವಲ ಆರ್ಬಿಐ ಮಾತ್ರವಲ್ಲ ಜಗತ್ತಿನ ಹಲವು ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳು ಸವರಿನ್ ಫಂಡ್ಗಳು ಹಾಗೂ ಸಾಂಸ್ತಿಕ ಹೂಡಿಕೆದಾರರು ಸಹ ದೊಡ್ಡ ಮಟ್ಟದಲ್ಲಿ ಚಿನ್ನ ಶೇಖರಣೆ ಶುರು ಮಾಡಿದ್ದಾರೆ ಇದರ ಜೊತೆಗೆ ಚಿನ್ನಕ್ಕೆ ಸಂಬಂಧಿಸಿದ ಇಟಿಎಫ್ ಅಥವಾ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳಲ್ಲಿನ ಹೂಡಿಕೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗ್ತಾ ಇದೆ ಇದಕ್ಕೆ ಕಾರಣಗಳನ್ನ ಒಂದೊಂದಾಗಿ ಹೇಳ್ತೀವಿ ನೋಡಿ ಮೊದಲನೆದಾಗಿ ಅಮೆರಿಕ ಫೆಡರಲ್ ಬ್ಯಾಂಕ್ ಇತ್ತೀಚಿಗೆ ನಿರಂತರವಾಗಿ ಹಲವು ಬಾರಿ ಬಡ್ಡಿ ದರ ಕಡಿಮೆ ಮಾಡಿದೆ ಪರಿಣಾಮ ಜನ ಬ್ಯಾಂಕುಗಳಿಂದ ಹಣ ತೆಗೆದು ಚಿನ್ನದ ಮೇಲೆ ಹಾಕ್ತಿದ್ದಾರೆ ಜೊತೆಗೆ ಇತ್ತೀಚಿಗೆ ಅಮೆರಿಕಾ ಸರ್ಕಾರ ಪಾರ್ಷಿಯಲ್ ಶಟ್ಡೌನ್ ಆಗಿದ್ದ ವಿಚಾರ ನೀವೆಲ್ಲ ಕೇಳಿರಬಹುದು ಅಮೆರಿಕಾ ಸಂಸತ್ತು ಸರ್ಕಾರ ನಡೆಸಲು ಬೇಕಾದ ನಿಧಿಗಳ ಬಿಲ್ಗಳಿಗೆ ಅಪ್ರೂವಲ್ ಸಿಗದೆ ಸರ್ಕಾರವೇ ಶಟ್ಡೌನ್ ಆಗಿತ್ತು ಇದರಿಂದಲೂ ಜಾಗತಿಕ ಹೂಡಿಕೆದಾರರಲ್ಲಿ ಅಮೆರಿಕ ಆರ್ಥಿಕತೆ ಬಗ್ಗೆ ಆತಂಕ ಉಂಟಾಗಿ ತಮ್ಮ ಹೂಡಿಕೆಗಳನ್ನ ಚಿನ್ನ ಕೆ ಡೈವರ್ಟ್ ಮಾಡಿದ್ರು ಇವುಗಳ ಜೊತೆಗೆ ಇತ್ತೀಚಿಗೆ ಅಮೆರಿಕಾ ಚೀನಾ ಆರ್ಥಿಕ ಗುದ್ದಾಟ ಕೂಡ ಮುಂದಿನ ಹಂತಕ್ಕೆ ತಲುಪಿದೆ.
ಚೀನಾದ ಮೇಲೆ ಡೊನಾಲ್ಡ್ ಟ್ರಂಪ್ ಮತ್ತೆ 100 ಶೇಕಡದಷ್ಟು ಟ್ಯಾರಿಫ್ ಅನೌನ್ಸ್ ಮಾಡಿದ್ದಾರೆ ಈ ಟೆನ್ಶನ್ ಗಳೆಲ್ಲ ಜಾಗತಿಕ ಆರ್ಥಿಕತೆಯ ಅಸ್ಥಿರತೆಯ ಭಯ ಹುಟ್ಟಿಸಿರುವ ಪರಿಣಾಮ ತಮ್ಮ ಬಂಡವಾಳಗಳಿಗೆ ರಕ್ಷಣೆ ಕೊಡುವ ಸಲುವಾಗಿ ಆಗಲೇ ಹೇಳಿದಂತೆ ಕೇಂದ್ರ ಬ್ಯಾಂಕುಗಳು ಸಾವರೇನ್ ಫಂಡ್ಸ್ ಹಾಗೂ ಸಾಂಸ್ತಿಕ ಹೂಡಿಕೆದಾರರು ಚಿನ್ನದ ಶೇಖರಣೆ ಶುರು ಮಾಡಿದ್ದಾರೆ ಯಾಕಂದ್ರೆ ಅಂದ್ರೆ ಜಗತ್ತಿನಲ್ಲಿ ಯಾವುದಕ್ಕೆ ಬೆಲೆ ಕುಸಿದ್ರು ಅಮೆರಿಕನ್ ಡಾಲರೇ ಶೂನ್ಯವಾದರೂ ಚಿನ್ನ ಶೂನ್ಯ ಆಗಲ್ಲ ಆದರೀಗ ಬೆಲೆ ಏರಿಕೆ ಬಗ್ಗೆ ಆತಂಕ ಯಾಕೆ ಯಾವ ಆರ್ಥಿಕ ಸ್ಥಿರತೆಗೋಸ್ಕರ ಚಿನ್ನದ ಶೇಖರಣೆ ಮಾಡಲಾಗ್ತಾ ಇದೆಯೋ ಅದೇ ಆರ್ಥಿಕತೆಗೆ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಬಹುದು ಅನ್ನುವ ವಿಶ್ಲೇಷಣೆಗಳು ಯಾಕೆ ಬರ್ತಾ ಇದೆ ಎಲ್ಲದಕ್ಕೂ ಉತ್ತರ ಕೊಡ್ತೀವಿ ನೋಡಿ ಸ್ನೇಹಿತರೆ ಯಾವಾಗಲೂ ಸಹ ಚಿನ್ನದ ಬೆಲೆ ಸ್ಥಿರವಾಗಿ ನಿಧಾನವಾಗಿ ಮೇಲೇರಿದ್ರೆ ಆರ್ಥಿಕತೆ ಗಟ್ಟಿಯಾಗಿದೆ ಅಂತ ಅರ್ಥ ಆದರೆ ವೇಗವಾಗಿ ಜಾಸ್ತಿ ಆಗ್ತಿದೆ ಅಂದ್ರೆ ಆರ್ಥಿಕತೆ ದುರ್ಬಲವಾಗಿದೆ ಅಂತ ಅರ್ಥ ಸರ್ಕಾರ ಹಾಗೂ ಹೂಡಿಕೆದಾರರಲ್ಲಿ ಭಯ ಇದೆ ಅಂತ ಅರ್ಥ ಒಂದೇ ಮಾತಲ್ಲಿ ಹೇಳೋದಾದರೆ ಆರ್ಥಿಕತೆಯ ಮೇಲೆ ಕರೆನ್ಸಿ ಮೌಲ್ಯದ ಮೇಲೆ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ನಂಬಿಕೆ ಕಡಿಮೆಯಾದಾಗ ಚಿನ್ನದ ಬೆಲೆ ವೇಗವಾಗಿ ಹೆಚ್ಚಾಗುತ್ತೆ.
1970 71 ರಲ್ಲಿ ಜಗತ್ತಲ್ಲಿ ತೈಲ ಬಿಕ್ಕಟ್ಟು ಹಾಗೂ ಹಣದುಬ್ಬರದ ಬೂಮ್ ಆಗ್ತಿತ್ತು ಜೊತೆಗೆ ಅಮೆರಿಕಾ ಸರ್ಕಾರ ಗೋಲ್ಡ್ ಸ್ಟ್ಯಾಂಡರ್ಡ್ಸ್ ಅನ್ನ ಕೈಬಿಟ್ಟಿತ್ತು ಅಂದ್ರೆ ಅಮೆರಿಕನ್ ಡಾಲರ್ಗೆ ಚಿನ್ನದ ಗ್ಯಾರಂಟಿ ಇರಲಿಲ್ಲ ಪರಿಣಾಮ 10 ವರ್ಷದಲ್ಲಿ ಚಿನ್ನದ ಬೆಲೆ ಪ್ರತಿ ಓನ್ಸ್ಗೆ 85 ಡಾಲರ್ ನಿಂದ 850 ಡಾಲರ್ ತಲುಪುತ್ತೆ ಆದರೆ 80ರ ದಶಕದಲ್ಲಿ ಅಮೆರಿಕಾದ ಫೆಡರಲ್ ಬ್ಯಾಂಕ್ ನಿರಂತರವಾಗಿ ಬಡ್ಡಿ ದರ ಜಾಸ್ತಿ ಮಾಡುತ್ತೆ ಅಪ್ಟು 20% ಕೂಡ ಬಡ್ಡಿ ಇತ್ತು ಪರಿಣಾಮ ಮುಂದಿನ 20 ವರ್ಷ ಅಂದ್ರೆ 2000ನೇ ಇಸವಿವರೆಗೂ ಚಿನ್ನದ ಬೆಲೆ ವಾಪಸ್ ಕುಸಿಯುತ್ತೆ ಇನ್ನು 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಕುಸಿದಿತ್ತು ಸ್ಟಾಕ್ ಮಾರ್ಕೆಟ್ಗಳು ಕ್ರಾಶ್ ಆಗಿದ್ದವು ಪರಿಣಾಮ ಕೋಡಿಕೆದಾರರು ಚಿನ್ನದ ಕಡೆಗೆ ಮುಖಮಾಡಿ 2011ರ ಹೊತ್ತಿಗೆ ಚಿನ್ನದ ಬೆಲೆ ಪ್ರತಿ ಅನ್ಸ್ಗೆ 1900 ಡಾಲರ್ ತಲುಪಿತ್ತು ಆದರೆ ಅದರ ಬೆನ್ನಲ್ಲೇ ಜಾಗತಿಕ ಆರ್ಥಿಕತೆ ರಿಕವರ್ ಆಗೋದಕ್ಕೆ ಶುರುವಾಗಿ 2015ರ ಹೊತ್ತಿಗೆ ಚಿನ್ನದ ಬೆಲೆ ವಾಪಸ್ 1050ಕ್ಕೆ ಕುಸಿದಿತ್ತು ಅದೇ ರೀತಿ ಕೋವಿಡ್ ಲಾಕ್ಡೌನ್ ಟೈಮ್ನಲ್ಲೂ ಚಿನ್ನ ದಾಖಲೆ ಮಟ್ಟ ತಲುಪಿ ಮತ್ತೆ ಕೂಲ್ ಆಫ್ ಆಗಿತ್ತು.
ಈಗ ಮತ್ತೆ ಅಮೆರಿಕಾ ಫೆಡರಲ್ ಬ್ಯಾಂಕ್ ಬಡ್ಡಿದರ ಇಳಿಕೆ ಅಮೆರಿಕಾದ ಸಾಲದ ಭಯ ಅಮೆರಿಕಾ ರಷ್ಯಾ ಚೀನಾ ಮಿಡ್ಲ ಈಸ್ಟ್ನ ಜಿಯೋಪಾಲಿಟಿಕಲ್ ಟೆನ್ಶನ್ ಇದೆಲ್ಲದರ ಪರಿಣಾಮವಾಗಿ ಆರ್ಥಿಕತೆ ದುರ್ಬಲವಾಗುವ ಭಯದಲ್ಲಿ ಚಿನ್ನದ ಬೆಲೆ ಜಾಸ್ತಿ ಆಗ್ತಿದೆ ಆದರೆ ಜಗತ್ತು ಶಾಂತವಾಗಿ ಬ್ಯಾಂಕುಗಳು ಮತ್ತೆ ಬಡ್ಡಿದರ ಹೆಚ್ಚಿಸಿ ಹಣದ ಹರಿವಿಗೆ ಸ್ವಲ್ಪ ಬ್ರೇಕ್ ಬಿದ್ದರೆ ಮತ್ತೆ ಚಿನ್ನದ ಬೆಲೆ ಕುಸಿಯುವ ಸಾಧ್ಯ ತೆಯನ್ನ ತಳ್ಳಿ ಹಾಕುವ ಹಾಗಿಲ್ಲ ಅನ್ನೋದನ್ನ ಎಕ್ಸ್ಪರ್ಟ್ಗಳು ಹೇಳ್ತಿದ್ದಾರೆ ಇದೇ ಕಾರಣಕ್ಕೆ ಚಿನ್ನದ ಬೆಲೆ ವಿಚಾರದಲ್ಲಿ ಇತಿಹಾಸ ಮರುಕಳಿಸುತ್ತಾ ಚಿನ್ನದ ಓಟಕ್ಕೆ ಬ್ರೇಕ್ ಬೀಳುತ್ತಾ ಚಿನ್ನದ ಮೇಲಿನ ಹೂಡಿಕೆ ನಿಜಕ್ಕೂ ಸೇಫ ಅನ್ನುವ ಪ್ರಶ್ನೆಗಳು ಹೊಟ್ಟಿಕೊಳ್ಳುತ್ತಾ ಇದೆ.


