Thursday, November 20, 2025
HomeTech Newsತೈಲ ಹೇಗೆ ಸಿಕ್ಕಿತು? ಪೆಟ್ರೋಲ್–ಡೀಸೆಲ್ ಹೇಗೆ ತಯಾರಾಗುತ್ತವೆ?

ತೈಲ ಹೇಗೆ ಸಿಕ್ಕಿತು? ಪೆಟ್ರೋಲ್–ಡೀಸೆಲ್ ಹೇಗೆ ತಯಾರಾಗುತ್ತವೆ?

ಕುದುರೆಯಿಂದ ಎಳೆಯಲ್ಪಡುತ್ತಿರುವ ಮೆಟಾಡೋರ್ ವಾಹನ ಹೊಳೆಯುತ್ತಿದ್ದ ನಗರಗಳೆಲ್ಲ ಸ್ತಬ್ಧ ಎಲ್ಲಿ ನೋಡಿದ್ರು ಲವಲವಿಕೆ ಇಲ್ಲದ ನೀರಸ ಜೀವನ ಇದು 1973ರಲ್ಲಿ ಅರಬ್ ಇಸ್ರೇಲ್ ಯುದ್ಧದ ವೇಳೆ ಬಹುತೇಕ ದೇಶಗಳಲ್ಲಿ ಸಾಮಾನ್ಯವಾಗಿದ್ದ ದೃಶ್ಯ ಅಂದಹಾಗೆ ಈವೇಳೆ ಅರಬ್ ದೇಶಗಳು ಕಚ್ಚತೈಲದ ರಫ್ತಿನ ಮೇಲೆ ಜಾಗತಿಕ ನಿರ್ಬಂಧ ಹೇರಿದ್ದವು ಪರಿಣಾಮ ಬಹುತೇಕ ದೇಶಗಳ ಆರ್ಥಿಕ ಚಟುವಟಿಕೆಗಳೇ ಸ್ತಬ್ಧವಾಗಿದ್ದವು ಕಚ್ಚತೈಲದ ಬೆಲೆ ಗಗನಕ್ಕೇರಿತ್ತು ಡೀಸೆಲ್ ಪೆಟ್ರೋಲ್ ಹಾಗೂ ಗ್ಯಾಸ್ ಬೆಲೆ ಆಕಾಶವನ್ನ ದಾಟಿ ಹೋಗಿತ್ತು ಸಿರಿವಂತ ರಾಷ್ಟ್ರಗಳು ಕೂಡ ವಿಲವಿಲ ಎನ್ನುತ್ತಿದ್ದವು ಕುದ್ದು ಅಮೆರಿಕಾದ ಆರ್ಥಿಕತೆ ಕೂಡ ದಿವಾಳಿ ಏಳುವ ಹಂತಕ್ಕೆ ಬಂದಿತ್ತು ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿದ್ದವು ತೈಲ ಕಂಪನಿಗಳು ಳ ಏದುಸಿರು ಬಿಡುತ್ತಿದ್ದವು ಇನ್ನು ಜನಸಾಮಾನ್ಯರ ಬದುಕನ್ನಂತೂ ಕೇಳೋದೇ ಬೇಡ ಒಂದರ್ಥದಲ್ಲಿ ಇಡೀ ಜಗತ್ತೇ ಬೆಲೆ ಏರಿಕೆಯ ಬಾಣಲೆಗೆ ಬಿದ್ದಿತ್ತು ಈ ಸನ್ನಿವೇಶ ಕಚ್ಚಾತೈಲದ ಮಹತ್ವವನ್ನ ಸಾರಿ ಹೇಳ್ತಾ ಇತ್ತು ಜನಸಾಮಾನ್ಯರಿಗೂ ಕಚ್ಚಾತೈಲದ ಪ್ರಾಮುಖ್ಯತೆ ಅರಿವಾಗಿತ್ತು ಕಚ್ಚತೈಲವನ್ನ ಕಪ್ಪು ಬಂಗಾರ ಅಂತಲೇ ಕರೆಯುತ್ತಾರೆ ಹಾಗೆ ನೋಡಿದರೆ ಇದು ಚಿನ್ನಕ್ಕಿಂತ ಕಡಿಮೆ ಏನಿಲ್ಲ ಅಷ್ಟರ ಮಟ್ಟಿಗೆ ಕಚ್ಚಾತೈಲ ತನ್ನ ಮಹತ್ವ ಹೊಂದಿದೆ ಹಾಗಾದರೆ ಈ ಕಚ್ಚತ ತೈಲವನ್ನ ಮೊದಲು ಎಲ್ಲಿ ಹಾಗೂ ಹೇಗೆ ಕಂಡುಹಿಡಿಯಲಾಯಿತು ನೂರಾರು ವರ್ಷಗಳ ಹಿಂದೆ ತೈಲ ಸಿಗುವ ಮುನ್ನ ಜನಜೀವನ ಹೇಗಿತ್ತು ತೈಲದರವನ್ನ ನಿಯಂತ್ರಿಸುವ ಶಕ್ತಿಗಳು ಯಾವುವು.

ತೈಲದ ಇತಿಹಾಸ ದೊಡ್ಡದಿದೆ ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯಾಳ ದಲ್ಲಿ ಜಮೆಯಾದ ಸಾವಯುವ ವಸ್ತುಗಳು ಹೈಡ್ರೋಕಾರ್ಬನ್ಗಳಾಗಿ ರೂಪಾಂತರಗೊಂಡ ಪರಿಣಾಮ ಕಚ್ಚತೈಲ ರೂಪಗೊಳ್ಳುತ್ತದೆ ಚೆಲೋಮೆ ಇದು ಭೂಮಿಯಾಳದಿಂದ ಭೂಮಿಯ ಮೇಲ್ಮೈನಲ್ಲಿ ಗೋಚರಿಸುತ್ತದೆ ಇದರಿಂದಾಗಿಯೇ ಸಾವಿರಾರು ವರ್ಷಗಳ ಹಿಂದೆ ನಾಗರಿಕತೆ ಬೆಳೆದು ಬಂದ ಕಾಲದಿಂದಲೂ ಕಚ್ಚಾತೈಲದ ಉಪಯೋಗ ತಿಳಿದಿತ್ತು ಈಜಿಪ್ಟ್ನ ಮೆಸಾಪಟೋಮಿಯ ನಾಗರಿಕತೆಯಲ್ಲೂ ಕಚ್ಚಾತೈಲದ ಬಳಕೆ ಚಾಲ್ತಿಯಲ್ಲಿತ್ತು ಅವರು ಕಚ್ಚಾತೈಲವನ್ನ ಔಷಧೀಯ ರೂಪದಲ್ಲಿ ಬಳಸ್ತಾ ಇದ್ರು ಅವರ ಪ್ರಕಾರ ಯಾವುದೇ ಗಾಯಕ್ಕೆ ಭೂಮಿ ಯೊಳಗೆ ಸಿಗುವ ಕಚ್ಚ ತೈಲವನ್ನ ಸವರಿದ್ರೆ ಗಾಯ ಬೇಗ ವಾಸಿಯಾಗುತ್ತದೆ ಅನ್ನೋದು ಅವರ ನಂಬಿಕೆಯಾಗಿತ್ತು ಕ್ರಿಸ್ತಶಕ 347ರಲ್ಲೇ ಚೀನಾದಲ್ಲಿ ತೈಲ ಭಾವಿಯನ್ನ ತೋಡಲಾಗಿತ್ತು ಎನ್ನಲಾಗಿದೆ ಸರಿಸುಮಾರು 240 ಮೀಟರ್ ಆಳದವರೆಗೂ ಬಾವಿ ತೋಡಿ ಅದರಲ್ಲಿ ಬಿದುರುಗಳಿಂದ ಕೊಳವೆ ರೀತಿ ವಿನ್ಯಾಸ ರೂಪಿಸಿ ತೈಲ ಹೊರತೆಗೆಯಲಾಗಿತ್ತು ಅಂತ ಹೇಳಲಾಗುತ್ತೆ ಹೀಗೆ ಗಾಡ ಕಪ್ಪುವಣದಲ್ಲಿ ಹೊರತೆಗೆಯಲಾಗುತ್ತಿದ್ದ ತೈಲವನ್ನ ಸುಲಭವಾಗಿ ಜಲಿಸಲಾಗುತ್ತಿತ್ತು ಇದನ್ನ ಉಪಯೋಗಿಸಿಕೊ ಉಪ್ಪನ್ನ ತಯಾರಿಸಲು ಪ್ರಾರಂಭಿಸಲಾಯಿತು ಇನ್ನು ಜಪಾನ್ನಲ್ಲಿ ಏಳನೇ ಶತಮಾನದ ವೇಳೆ ತೈಲವನ್ನ ಕಂಡುಹಿಡಿಯಲಾಯಿತು ಮೊದಮೊದಲಿಗೆ ಇದನ್ನ ಉರಿಯುವ ನೀರು ಎಂದೇ ಕರೆಯಲಾಗಿತ್ತು ಇನ್ನು ಒಂಬತ್ತನೇ ಶತಮಾನದಲ್ಲಿ ಅಜರ್ಬೈಜಾನ್ ಸುತ್ತಮುತ್ತಲಿನ ಹಲವು ಸ್ಥಳಗಳಲ್ಲಿ ಕಚ್ಚತೈಲ ನೀರಿನಂತೆ ಹರಿಯುತ್ತಿತ್ತು ಕಪ್ಪು ಕಪ್ಪಾಗಿ ಕೊಳಚೆ ನೀರು ಹರಿಯುವಂತೆ ಇದು ಕಾಣ್ತಾ ಇತ್ತು ಇನ್ನು 12ನೇ ಶತಮಾನದಲ್ಲಿ ಇಟಾಲಿಯ ಪ್ರವಾಸಿಗ ಮಾರ್ಕೋಪೋಲೋ ದೇಶ ಸಂಚಾರಿಯಾಗಿ ಸುತ್ತುತ್ತಿರುವ ಸಮಯದಲ್ಲಿ ಕ್ಯಾಸ್ಪಿಯನ್ ಸಮುದ್ರದ ಬಳಿ ಬಾಕು ಎಂಬ ಸ್ಥಳದಲ್ಲಿ ಈ ಕ್ರೂಡ್ ಆಯಿಲ್ ತೊರೆಯಂತೆ ಹರಿಯುತ್ತಿರುವುದನ್ನ ಕಂಡಿದ್ದರು ತೈಲದ ಕುರಿತು ಇಷ್ಟೆಲ್ಲ ಮಾಹಿತಿ ತಿಳುವಳಿಕೆ ಇದ್ದರು 15ನೇ ಶತಮಾನದವರೆಗೂ ಇದನ್ನ ದೊಡ್ಡ ಮಟ್ಟದಲ್ಲಿ ಉಪಯೋಗಿಸುತ್ತಿರಲಿಲ್ಲ ಅಥವಾ ಅದನ್ನ ಹೊರತೆಗೆಯುವ ಪ್ರಯತ್ನವನ್ನ ಸಹ ಯಾರು ಮಾಡಿರಲಿಲ್ಲ ಅಂದಿನ ಸಮಯದಲ್ಲಿ ಕಚ್ಚತೈಲವನ್ನ ಬಳಸಿಕೊಂಡು ದೀಪ ಉರಿಸಬಹುದು ಅನ್ನೋದು ಕೂಡ ತಿಳಿದಿರಲಿಲ್ಲ ಜನರು ರಾತ್ರಿಯಾಗುತ್ತಲೇ ತಮ್ಮ ವಾಸಸ್ಥಳದಲ್ಲಿ ಬಂದಿಯಾಗುತ್ತಿದ್ದರು ಒಂದುವೇಳೆ ಅನಿವಾರ್ಯವಾಗಿ ಹೊರಹೋಗು ಪ್ರಸಂಗ ಬಂದರು ಆಯಾಯ ಪ್ರದೇಶಗಳಲ್ಲಿ ದೇಶಿ ಟೆಕ್ನಿಕ್ಗಳನ್ನ ಬಳಸಿ ಬೆಂಕಿ ಹೊತ್ತಿಸಿಕೊಂಡು ಸಾಗುತ್ತಿದ್ದರು ವಿಶೇಷ ಅಂದರೆ ಕೆಲವೊಂದು ವಿಶಿಷ್ಟ ಮೀನು ಹಾಗೂ ಪಕ್ಷಿಗಳನ್ನ ಬಿಸಿಲಿನಲ್ಲಿ ಒಣಗಿಸಿ ಅವುಗಳನ್ನ ಕಂದೀಲು ರೀತಿ ಬಳಸುವ ಪದ್ಧತಿ ಜಾರಿಯಲ್ಲಿತ್ತು ಅಮೆರಿಕಾದ ಸಾಲ್ಮೋನ್ ಫಿಶ್ ಹಾಗೂ ಸ್ಕ್ವಾಟ್ಲ್ಯಾಂಡ್ ಐರ್ಲ್ಯಾಂಡ್ನ ಪೆಟ್ರೇಲ್ಸ್ ಬರ್ಡ್ಗಳನ್ನ ಈ ರೀತಿಯಾಗಿ ಒಣಗಿಸಿ ಕ್ಯಾಂಡಲ್ ರೀತಿ ಬಳಸುತ್ತಿದ್ದರಂತೆ.

ಹೀಗೆ ಶತ ಶತಮಾನಗಳು ಉರುಳಿದ ಬಳಿಕ 1700ರ ಇಸವಿಯಲ್ಲಿ ವೇಲ್ ಫಿಶ್ ಎಂಬ ದೊಡ್ಡ ಮೀನಿಂದ ತೈಲವನ್ನ ಹೊರತೆಗೆಯಲು ಪ್ರಾರಂಭಿಸಲಾಯಿತು ಆಳ ಸಮುದ್ರದಲ್ಲಿ ಸಿಗುವ ಈ ಗಜಗಾತ್ರದ ಮೀನುಗಳನ್ನ ಹಿಡಿದು ಸಣ್ಣ ಸಣ್ಣ ಕಾರ್ಖಾನೆಗಳಲ್ಲಿ ಅವುಗಳಿಂದ ತೈಲವನ್ನ ತೆಗೆಯುವ ಕಾರ್ಯ ಪ್ರಾರಂಭಿಸಲಾಯಿತು ವಿಶೇಷವಾಗಿ ಈ ಮೀನುಗಳಿಂದ ಸಿಗುವ ತೈಲವನ್ನ ಕಂದೀಲು ಉರಿಸಲು ಪರ್ಫ್ಯೂಮ್ ಹಾಗೂ ಲ್ಯೂಬ್ರಿಕೆಂಟ್ ತಯಾರಿಸಲು ಬಳಸಲಾಗ್ತಾ ಇತ್ತು ಇನ್ನು ಈ ವೇಲ್ ಫಿಶ್ ತೈಲದ ಮೇಲೆ ಅಮೆರಿಕಾದ ಏಕ ಸೌಮ್ಯತ್ವವಿತ್ತು ಕಾರಣ ಅಮೆರಿಕಾ ದೊಡ್ಡ ಮಟ್ಟದಲ್ಲಿ ದೊಡ್ಡ ದೊಡ್ಡ ನೌಕೆಗಳ ಮೂಲಕ ವೇಲ್ ಫಿಶ್ನ ಮೀನುಗಾರಿಕೆಯಲ್ಲಿ ತೊಡಗಿತ್ತು ಆ ಸಮಯದಲ್ಲೇ ಈ ವೇಲ್ ಫಿಶಿಂಗ್ ಆಯಿಲ್ ಇಂಡಸ್ಟ್ರಿ ಅಮೆರಿಕಾದ ಐದನೇ ದೊಡ್ಡ ಉದ್ಯಮವಾಗಿ ಹೊರಹೊಮ್ಮಿತ್ತು ಇನ್ನು 1846ರಲ್ಲಿ ಕೆನಡಾದ ಭೌತ ವಿಜ್ಞಾನಿ ಅಬ್ರಹಾಂ ಗೆಸ್ನರ್ ಸುಲಭವಾಗಿ ಬೆಳಕನ್ನ ಹೊಮ್ಮಿಸುವ ಆಯಿಲ್ ಒಂದನ್ನ ಕಂಡುಹಿಡಿಯುತ್ತಾರೆ ಆಯಿಲ್ ಸೇಲ್ ಕೋಲ್ ಹಾಗೂ ಬೈಟಮಿನ್ಗಳನ್ನ ಸಂಯೋಜಿಸಿ ವಿಶಿಷ್ಟ ಎಣ್ಣೆಯೊಂದನ್ನ ತಯಾರಿಸಿದ್ರು ಇದರಿಂದಾಗಿ ಸುಲಭವಾಗಿ ಬೆಂಕಿ ಹಾಕಬಹುದಿತ್ತು ಜೊತೆಗೆ ದೀಪ ಕಂದಿಲುಗಳಿಗೂ ಇದು ಪ್ರಮುಖ ಇಂಧನವಾಗುವಂತಿತ್ತು ಈ ಆಯಿಲ್ಗೆ ಕೆರೋಸಿನ್ ಆಯಿಲ್ ಎಂದು ಹೆಸರಿಡಲಾಗಿತ್ತು ಬಹುತೇಕರಿಗೆ ಇದು ತಿಳಿದಿದೆ ನಮ್ಮಲ್ಲಿ ಇದನ್ನ ಗ್ರಾಮ್ಯ ಭಾಷೆಯಲ್ಲಿ ಚಿಮಿಣಿ ಎಣ್ಣೆ ಸೀಮೆ ಎಣ್ಣೆ ಅಂತ ಕರೀತಾರೆ ಈ ಇಂಧನದ ಸಂಶೋಧನೆ ಜಗತ್ತಿನಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯುತ್ತೆ ಇನ್ನು ಕುತೂಹಲದ ಸಂಗತಿ ಅಂದರೆ ಈ ಕೆರೋಸಿನ್ ಆಯಿಲ್ ತಯಾರಿಕೆಗೆ ಹೆಚ್ಚೇನು ಸಂಪನ್ಮೂಲಗಳ ಅಗತ್ಯವಿರಲಿಲ್ಲ ಅಲ್ಲದೆ ಇದರ ಬೆಲೆ ಕೂಡ ಜಾಸ್ತಿ ಇರಲಿಲ್ಲ ಹೀಗಾಗಿ ದಿನಗಳು ಕಳೆದಂತೆ ಇದರ ಉತ್ಪಾದನೆ ರಾಕೆಟ್ ವೇಗದಲ್ಲಿ ಹೆಚ್ಚಾಗ ತೊಡಗಿತ್ತು ಅನೇಕ ಕೆರೋಸಿನ್ ಉತ್ಪಾದಕ ಕಂಪನಿಗಳು ಹುಟ್ಟಿಕೊಂಡವು ನೋಡನೋಡುತ್ತಿದ್ದಂತೆ ಜಗತ್ತಿನ ಚಿತ್ರಣವೇ ಬದಲಾಗ ತೊಡಗಿತ್ತು ಜನರು ಹಗಲು ರಾತ್ರಿಯನ್ನದೇ ತಿರುಗಾಡಲು ಪ್ರಾರಂಭಿಸಿದ್ರು ಬೀದಿಗಳಿಗೆ ಉರಿಯುವ ಲ್ಯಾಂಪ್ಗಳು ಬಂದಿದ್ದವು.

1858ರಲ್ಲಿ ಅಮೆರಿಕಾದ ಪಶ್ಚಿಮ ಪೆನೆನ್ಸಿವೇಲಿಯಾದಲ್ಲಿ ಕೆಲವು ಆಳವಾದ ಉಪ್ಪಿನ ಗುಡ್ಡೆಗಳಿಂದ ಕಪ್ಪು ತೈಲ ಹೊರಬರುತ್ತಿರುವುದು ಕಂಡುಬರುತ್ತದೆ ಆರಂಭದಲ್ಲಿ ಈ ತೈಲದ ಕುರಿತು ಅದರ ಜಿಡ್ಡಿನ ಕಾರಣಕ್ಕಾಗಿ ಯಾರು ಅಷ್ಟು ಗಮನ ಹರಿಸಿರಲಿಲ್ಲ ಹಾಗೆ ಕಣ್ಣಿಗೆ ಬಿದ್ದ ದ್ರವರೂಪವನ್ನ ಅವರು ಪೆಟ್ರೋಲಿಯಂ ಅಂತ ಗುರುತಿಸಿದ್ದರು ಇದೇವೇಳೆ ಜೇಮ್ಸ್ ಟೌನ್ ಸೆಂಡ್ ಎಂಬ ಬ್ಯಾಂಕ್ ಉದ್ಯಮಿ ಇದರಿಂದ ಹಣಮಾಡ ಕುರಿತಂತೆ ಯೋಚಿಸಿದ್ರು ಇದಕ್ಕಾಗಿ ಯಾಲೆ ಯೂನಿವರ್ಸಿಟಿಯ ಕೆಮಿಸ್ಟ್ರಿ ಪ್ರೊಫೆಸರ್ ಬೆಂಜಮಿನ್ ಸಿಲ್ಲಿಮನ್ ಅವರನ್ನ ಸಂಪರ್ಕಿಸಿ ಉಪ್ಪಿನ ಗುಡ್ಡೆಯಲ್ಲಿ ಸಿಗುತ್ತಿದ್ದ ತೈಲದ ಬಗ್ಗೆ ವಿಶ್ಲೇಷಣೆ ನಡೆಸುವಂತೆ ಕೋರಿಕೊಂಡರು ಈ ಸಂಶೋಧನಾತ್ಮಕ ವಿಶ್ಲೇಷಣೆಯಿಂದ ಸಾಕಷ್ಟು ಅನುಕೂಲಕರ ವರದಿಗಳು ಕೈಸೇರುವಂತಾದವು ಈ ತೈಲವನ್ನ ಸಂಸ್ಕರಣೆಗೆ ಒಳಪಡಿಸಿದರೆ ಹಲವು ಪ್ರಯೋಜನಕಾರಿ ಉತ್ಪನ್ನಗಳು ಸಿಗುತ್ತವೆ ಅನ್ನೋದು ಇದರಿಂದ ಖಾತ್ರಿಯಾಯಿತು ಈ ವಿಷಯ ಗೊತ್ತಾಗುತ್ತಿದ್ದಂತೆ ಟೌನ್ ಸೆಂಡ್ ತಡ ಮಾಡಲಿಲ್ಲ ಮೊದಲೇ ಈ ಕುರಿತು ಕಲ್ಪನೆ ಹೊಂದಿದ್ದ ಅವರು ತಮ್ಮಿಬ್ಬರು ಸಹಚರರೊಂದಿಗೆ ಸೇರಿ ಪೆನ್ಸಿಲ್ವೇನಿಯಾ ರಾಕ್ ಆಯಿಲ್ ಎಂಬ ಕಂಪನಿ ಸ್ಥಾಪಿಸಿದರು ಆದರೆ ಈ ಕಂಪನಿಯ ಶೇರುಗಳು ಬಿಕರಿ ಆಗಲೇ ಇಲ್ಲ ಅಂದಿನ ಸಮಯದಲ್ಲಿ ತೈಲೋತ್ಪನ್ನದ ಮಹತ್ವ ಅದರ ಬೆಲೆಯ ಬಗ್ಗೆ ಜನರಿಗೆ ಅರಿವಿರಲಿಲ್ಲ ಹೀಗಾಗಿ ಶೇರುಗಳು ಮಾರಾಟವಾಗಲಿಲ್ಲ ಇದರಿಂದ ಟೌನ್ ಸೆಂಡ್ ಹತಾಶೆಯನ್ನೇನು ಹೊಂದಲಿಲ್ಲ ಬದಲಾಗಿ ಎಡ್ವಿನ್ ಡ್ರೇಕ್ ಎನ್ನುವ ರೈಲು ವಿಭಾಗದಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನ ಭೇಟಿಯಾಗ್ತಾರೆ ವಿಶೇಷ ಅಂದರೆ ಈ ಡ್ರೇಕ್ ಕೂಡ ತೈಲೋತ್ಪನ್ನದ ಹುಡುಕಾಟದಲ್ಲಿ ಇರುತ್ತಾರೆ ಹೀಗಾಗಿ ಟೌನ್ ಸೆಂಡ್ ಕೆಲಸ ಮತ್ತಷ್ಟು ಸುಲಭವಾಗುತ್ತೆ.

ಈ ವೇಳೆ ಸೆಂಡ್ ಎಡ್ವಿನ್ ಡ್ರೇಕ್ಗೆ ಪೆನ್ಸಿಲ್ವೇನಿಯಾದ ತೈಲ ಇರುವ ಪ್ರದೇಶಕ್ಕೆ ಭೇಟಿ ನೀಡುವಂತೆ ಮನವಿ ಮಾಡುತ್ತಾರೆ ಅದರಂತೆ ಆ ಸ್ಥಳಕ್ಕೆ ಭೇಟಿ ನೀಡಿದ ಡ್ರೇಕ್ ಇದರಿಂದ ಉತ್ತೇಜಿತರಾದ ಟೌನ್ ಸೆಂಡ್ ತಮ್ಮ ಪೆನ್ಸಿಲ್ವೇನಿಯಾ ರಾಕ್ ಆಯಿಲ್ ಕಂಪನಿಯ ಶೇರುಗಳನ್ನ ಡ್ರೇಕ್ಗೆ ನೀಡುತ್ತಾರೆ ಅಲ್ಲದೆ ಪೆನ್ಸಿಲ್ವೇನಿಯಾದಲ್ಲಿ ತೈಲ ಗಣಿಗಾರಿಕೆ ಪ್ರಾರಂಭಿಸುವಂತೆ ಹೇಳುತ್ತಾರೆ ಎಡ್ವಿನ್ ರೇಕ್ ಸೆನಿಕಾ ಆಯಿಲ್ ಕಂಪನಿ ಸ್ಥಾಪಿಸಿ ಅದರ ಮೂಲಕ ತೈಲ ತೆಗೆಯಲು ಸಿದ್ಧತೆ ಆರಂಭಿಸುತ್ತಾರೆ 1958ರ ಮೇ ತಿಂಗಳಿನಲ್ಲಿ ಕೆಲಸ ಆರಂಭವಾಗುತ್ತದೆ ಆದರೆ ಕಾರ್ಯ ಅಂದುಕೊಂಡಷ್ಟು ಸುಲಭವಿರಲಿಲ್ಲ ಜನ ಆತನ ಕಾರ್ಯವನ್ನ ಹಂಗಿಸಿ ಕ್ರೇಜಿ ಡ್ರೇಕ್ ಅಂತ ಕಾಲೆಳಳಿಯುತ್ತಾರೆ ಆದರೆ ಡ್ರೇಕ್ ಹಿಡಿದ ಕೆಲಸ ಕೈಬಿಡದೆ ಪ್ರಯತ್ನ ಮುಂದುವರಿಸುತ್ತಾರೆ ಈ ವೇಳೆ ಅವರು ಡ್ರಿಲ್ಲಿಂಗ್ ಗಾಗಿ ಒಬ್ಬ ಸಮರ್ಥ ಡಿಗ್ಗರ್ ಗಾಗಿ ಹುಡುಕಾಟದಲ್ಲಿರುತ್ತಾರೆ ಈ ಸಂದರ್ಭದಲ್ಲೇ ಅವರಿಗೆ ವಿಲಿಯಂ ಸ್ಮಿತ್ ಎನ್ನುವ ಡಿಗ್ಗರ್ ಪರಿಚಯವಾಗುತ್ತಾರೆ ಆದರೆ ತೈಲವನ್ನ ತೆಗೆಯುವಾಗ ನೀರು ಕೂಡ ಹೊರಬಂದು ಸಮಸ್ಯೆ ಉಂಟಾಗುತ್ತದೆ ಇದರಿಂದ ಸಾಕಷ್ಟು ತೊಂದರೆಯಾಗುತ್ತೆ ನೀರನ್ನ ಹೊರಹಾಕುವ ಪ್ಲಾನ್ ಕೂಡ ಸಕ್ಸಸ್ ಆಗೋದಿಲ್ಲ ಹೀಗೆ ನಿರಂತರವಾಗಿ ಪ್ರಯತ್ನ ಪಟ್ಟರು ಯಾವುದೇ ತಂತ್ರ ಬಳಸಿದರು ಸಮಸ್ಯೆ ಪೂರ್ಣವಾಗಿ ಬಗೆ ಹರಿಯೋದಿಲ್ಲ ಆದರೆ 1859ರಲ್ಲಿ ಅದೊಂದು ದಿನ ಅಂದುಕೊಂಡಿದ್ದನ್ನ ಸಾಧಿಸುತ್ತಾರೆ ಸುಮಾರು 69 ಫೀಟ್ ಅಗೆದಾಗ ಅವರಿಗೆ ಶುದ್ಧ ಕ್ರೂಡ್ ಆಯಿಲ್ ಸಿಗುತ್ತದೆ ಅಂದಿನಿಂದ ಪ್ರಥಮ ಬಾರಿಗೆ ಟೈಟಾಸ್ ವಿಲ್ಲೆಯ ಭಾಗದಲ್ಲಿ ಕಚ್ಚಾತೈಲದ ಉತ್ಪಾದನೆ ಶುರುವಾಗುತ್ತದೆ ಈ ಸುದ್ದಿ ಸುತ್ತಲಿನ ಪ್ರದೇಶಗಳಿಗೆ ಹಬ್ಬುತ್ತಿದ್ದಂತೆ ಪೆನ್ಸಿಲ್ವೇನಿಯಾದ ಟೈಟಾಸ್ ವಿಲ್ಲೆ ಹಲವೆಡೆ ಕಚ್ಚತೈಲದ ಘಟಕಗಳು ಒಂದೊಂದಾಗಿಯೇ ಶುರುವಾಗುತ್ತೆ ಕೆಲವೇ ವರ್ಷಗಳಲ್ಲಿ ಈ ನಗರ ಕ್ರೂಡ್ ಆಯಿಲ್ ಸಿಟಿ ಅಂತಾಲೇ ಕರೆಯಲ್ಪಡುತ್ತೆ ಸ್ನೇಹಿತರೆ ಆರಂಭದಲ್ಲಿ ಇಲ್ಲಿ ಕೇವಲ 4500 ಬ್ಯಾರೆಲ್ ಕಚ್ಚಾತೈಲವನ್ನ ಹೊರತೆಗೆಯಲಾಗ್ತಾ ಇತ್ತು ಆದರೆ 1862ರ ವೇಳೆಗೆ ಈ ಪ್ರಮಾಣ 30 ಲಕ್ಷ ಲಕ್ಷ ಬ್ಯಾರಲ್ಗೆ ಏರಿತು ಪೆನ್ಸಿಲ್ವೇನಿಯಾದಲ್ಲಿ ಶುರುವಾಗಿದ್ದ ಈ ತೈಲ ಕ್ರಾಂತಿ ಇಡೀ ಅಮೆರಿಕಾವನ್ನೇ ಆವರಿಸಿತು ದಿನಕಳೆದಂತೆ ಕ್ಯಾಲಿಫೋರ್ನಿಯಾ ಒಕ್ಲಹೋಮ ಟೆಕ್ಸಾಸ್ ನಲ್ಲೂ ತೈಲ ಭಾವಿಗಳನ್ನ ಕೊರೆಯಲಾಯಿತ.

ಈ ಮೂರು ಪ್ರಾಂತ್ಯಗಳಿಂದಲೇ ಅಮೆರಿಕಾದಲ್ಲಿ ಸಾರ್ವಜನಿಕವಾಗಿ ಬರೊಬ್ಬರಿ 26 ಮಿಲಿಯನ್ ಬ್ಯಾರೆಲ್ ಕಚ್ಚತೈಲ ಉತ್ಪಾದನೆಯಾಗುವಂತಾಯಿತು ಇನ್ನು 1900 ತಲುಪುವುದರಲ್ಲಿ ಈ ಪ್ರಮಾಣ 64 ಮಿಲಿಯನ್ ಬ್ಯಾರೆಲ್ಗೆ ಏರಿತು ಅಮೆರಿಕಾದಲ್ಲಿ ಶುರುವಾಗಿದ್ದ ಈ ಕಚ್ಚತೈಲ ಕ್ರಾಂತಿ ಇಷ್ಟಕ್ಕೆ ನಿಲ್ಲಲಿಲ್ಲ ಬದಲಾಗಿ ಈ ತೈಲದಿಂದ ಸುಮಾರು 200 ಉಪ ಉತ್ಪನ್ನಗಳನ್ನ ತಯಾರಿಸಿ ಮಾರಾಟ ಮಾಡುವ ವ್ಯವಸ್ಥೆ ಶುರುವಾಯಿತು ನೋಡನೋಡುತ್ತಲೆ ಅಮೆರಿಕ ವಿಶ್ವದ ಅತಿ ದೊಡ್ಡ ತೈಲೋತ್ಪನ್ನ ಉತ್ಪಾದಕ ದೇಶವಾಗಿ ಹೊರಹೊಮ್ಮಿತು ಸ್ನೇಹಿತರೆ ಅಮೆರಿಕಾದಲ್ಲಿ ಶುರುವಾಗಿದ್ದ ತೈಲ ಕ್ರಾಂತಿಯನ್ನ ನೋಡಿ ವಿಶ್ವದ ಇತರೇ ದೇಶಗಳಲ್ಲಿಯೂ ತೈಲಕ್ಕಾಗಿ ಹುಡುಕಾಟ ಬಿರಿಸುಗೊಂಡಿತು ಹೀಗಾಗಿ ಸರ್ಕಾರಗಳು ಆಳ್ವಿಕೆ ನಡೆಸುವವರು ತೈಲ ಕಂಪನಿಗಳು ತಾಮುಂದು ನಾಮುಂದು ಅಂತ ತೈಲದ ಹುಡುಕಾಟದ ಹಿಂದೆ ಬಿದ್ದಿದ್ದವು 20ನೇ ಶತಮಾನದ ವೇಳೆಗೆ ಈ ಹುಡುಕಾಟದ ಪ್ರಯೋಗ ಮಧ್ಯಪ್ರಾಚ್ಯವನ್ನ ತಲುಪುತ್ತೆ ಬ್ರಿಟನ್ನ ಖ್ಯಾತ ಭೂಗರ್ಭ ಶಾಸ್ತ್ರಜ್ಞ ಜಾರ್ಜ್ ಬರ್ನಾಂಡ್ ರೆನಾಲ್ಡ್ಸ್ ಪರ್ಷಿಯಾದ ಹಲವು ಪ್ರದೇಶಗಳಲ್ಲಿ ಸತತ 10 ವರ್ಷಗಳ ಕಾಲ ಇದಕ್ಕಾಗಿ ಸಂಶೋಧನೆ ಕೈಗೊಳ್ಳುತ್ತಾರೆ ಅಂತಿಮವಾಗಿ 1908 ರಲ್ಲಿ ಪರ್ಷಿಯಾದಲ್ಲಿ ಅಂದರೆ ಇಂದಿನ ಇರಾನ್ನಲ್ಲಿ ಕಚ್ಚತೈಲದ ನಿಕ್ಷೇಪಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗ್ತಾರೆ ಇಲ್ಲಿ ನಿಕ್ಷೇಪಗಳು ಪತ್ತೆಯಾಗುತ್ತಿದ್ದಂತೆ ಆಂಗ್ಲೋ ಪರ್ಷಿಯನ್ ಕಂಪನಿ ಈ ಪ್ರದೇಶದಲ್ಲಿ ಬೀಡುಬಿಡುತ್ತೆ ಇಡೀ ಪ್ರದೇಶ ಬ್ರಿಟನ್ ಮೂಲದ ಈ ಕಂಪನಿಯ ಏಕ ಸೌಮ್ಯತ್ವಕ್ಕೆ ಒಳಪಟ್ಟಿತು ಈ ಕಂಪನಿ ಇಲ್ಲಿ ಕಚ್ಚತೈಲವನ್ನ ಉತ್ಪಾದಿಸಿ ಜಗತ್ತಿನ ಇತರೆ ರಾಷ್ಟ್ರಗಳಿಗೆ ಪೂರೈಸುತ್ತಾ ಇತ್ತು ಅಸಲಿ ವಿಚಾರ ಅಂದರೆ ಈ ಕಂಪನಿಯ ಬಹುತೇಕ ಶೇರುಗಳನ್ನ ಬ್ರಿಟಿಷ್ ಸರ್ಕಾರ ಖರೀದಿಸಿತ್ತು ಇದರಿಂದ ಬರುವ ಲಾಭವೆಲ್ಲ ನೇರವಾಗಿ ಬ್ರಿಟನ್ ಸರ್ಕಾರಕ್ಕೆ ಸಂದಾಯವಾಗ ತೊಡಗಿತ್ತು ಈ ಲಾಭದ ದುರಾಸೆ ಎರಡು ರಾಷ್ಟ್ರಗಳ ನಡುವೆ ವಿವಾದ ಘರ್ಷಣೆಗೆ ಕಾರಣವಾಯಿತು ಆದರೆ 1933 ರಲ್ಲಿ ಇರಾನ್ ಹಾಗೂ ಬ್ರಿಟಿಷ್ ಸರ್ಕಾರ ನಡುವೆ ಒಪ್ಪಂದವಾಯಿತು ಆ ಒಪ್ಪಂದದ ಪ್ರಕಾರ ತೈಲದಿಂದ ಬರುವ ಆದಾಯದಲ್ಲಿ ಒಂದಷ್ಟು ಪಾಲನ್ನ ಇರಾನ್ ಸರ್ಕಾರಕ್ಕೆ ಕೊಡಲು ನಿರ್ಧರಿಸಲಾಯಿತು ಇದರ ಬದಲಾಗಿ ಇರಾನ್ ಮುಂದಿನ 60 ವರ್ಷಗಳ ಕಾಲ ಈ ನಿಕ್ಷೇಪಗಳನ್ನ ಬ್ರಿಟಿಷರಿಗೆ ಬಿಟ್ಟುಕೊಡಬೇಕು ಎನ್ನುವ ತೀರ್ಮಾನಕ್ಕೆ ಬರಲಾಯಿತು.

ಹೀಗೆ ಇರಾನ್ನ ಸಂಪೂರ್ಣ ತೈಲ ನಿಕ್ಷೇಪಗಳನ್ನ ಬ್ರಿಟಿಷ್ ಕಂಪನಿ ತನ್ನ ಕಬ್ಜ ಮಾಡಿಕೊಂಡಿತ್ತು ಆದರೆ ಬ್ರಿಟಿಷರ ಈ ಅನಿಯಂತ್ರಿತ ಆಟ ತುಂಬಾ ದಿನವೇನು ನಡೆಯಲಿಲ್ಲ 1951 ರಲ್ಲಿ ಇರಾನ್ ಆಡಲಿತ ದೇಶದ ಎಲ್ಲಾ ತೈಲ ನಿಕ್ಷೇಪ ಹಾಗೂ ಕೈಗಾರಿಕೆಗಳನ್ನ ರಾಷ್ಟ್ರೀಕರಣಗೊಳಿಸಿತು ಅಲ್ಲದೆ ದೇಶದಲ್ಲಿದ್ದ ಆಂಗ್ಲೋ ಪರ್ಷಿಯನ್ ಆಯಿಲ್ ಕಂಪನಿಯನ್ನ ತನ್ನ ಹಿಡಿತಕ್ಕೆ ಪಡೆಯಿತು ಸ್ನೇಹಿತರೆ ಯಾವಾಗ ಇರಾನ್ನಲ್ಲಿ ದೊಡ್ಡ ಮಟ್ಟದ ತೈಲ ನಿಕ್ಷೇಪಗಳು ಸಿಕ್ಕಿದ್ದವೋ ಅಂದಿನಿಂದಲೇ ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳಲ್ಲೂ ಕೂಡ ಕಚ್ಚ ತೈಲದ ಹುಡುಕಾಟ ನಡೆಯುತ್ತೆ ಅಂತೆಯೇ 1938 ರಲ್ಲಿ ಅಮೆರಿಕಾ ಮೂಲದ ಅಮೆರಿಕಾ ಅರೇಬಿಯನ್ ಕಂಪನಿ ಸಹ ಸೌದಿ ಅರೇಬಿಯಾದಲ್ಲಿ ತೈಲಕ್ಕಾಗಿ ಹುಡುಕಾಟ ನಡೆಸುತ್ತೆ ಅಂದು ಸೌದಿ ಅರೇಬಿಯಾ ಇಂದಿನಂತಿರಲಿಲ್ಲ ತೀರ ಬಡತನದಲ್ಲಿದ್ದ ಕಡು ಬಡ ರಾಷ್ಟ್ರವದು ಸುತ್ತಲು ಮರುಭೂಮಿ ಸಿಗದ ಉದ್ಯೋಗ ಆಹಾರಕ್ಕಾಗಿ ಗುಳೆ ಹೋಗಬೇಕಾದ ಪರಿಸ್ಥಿತಿ ಆಗಿನ ಸಮಯದಲ್ಲಿ ಸೌದಿಯ ಆದಾಯವೆಂದರೆ ಮೆಕ್ಕಾಗಿ ಬರುವ ಪ್ರವಾಸಿಗರು ಊಟಕ್ಕೆ ಸುಲಭವಾಗಿ ಸಿಗೋದೆಂದರೆ ಖರ್ಚುರ ಪರಿಸ್ಥಿತಿ ಬಹಳ ಹೀನಾಯವಾಗಿತ್ತು ಮೊದಲ ಮಹಾಯುದ್ಧ ಮುಗಿದ ಬಳಿಕ ನ್ಯೂಜಿಲ್ಯಾಂಡ್ನ ಮೈನಿಂಗ್ ಇಂಜಿನಿಯರ್ ಮೇಜರ್ ಫ್ರಾಂಕ್ ಹೊಲ್ಮೇಸ್ ಈ ಮರುಭೂಮಿಯಲ್ಲಿ ತೈಲ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ರು ಅಂತೆಯೇ ಹಲವು ವರ್ಷಗಳ ಕಾಲ ಇಲ್ಲಿೈ ತೈಲಕ್ಕಾಗಿ ಹುಡುಕಾಟ ನಡೆಯುತ್ತಲೇ ಇತ್ತು ಆದರೆ 1938ರಲ್ಲಿ ಅಮೆರಿಕನ್ ಮೂಲದ ಕಂಪನಿ ಅರಮಕೋ ಸೌದಿಯಲ್ಲಿ ತೈಲವನ್ನ ಸರ್ಚ್ ಮಾಡುವಲ್ಲಿ ಯಶಸ್ವಿಯಾಗುತ್ತೆ ಸೌದಿಯ ದಮ್ಮು ಎನ್ನುವ ಪ್ರದೇಶದಲ್ಲಿ ಕಂಪನಿ ತೈಲ ನಿಕ್ಷೇಪವನ್ನ ಕಂಡುಹಿಡಿದಿತ್ತು ಕಣ್ಣುಮುಚ್ಚಿ ಕಣ್ಣು ತೆರೆಯುದರೊಳಗೆ ಇಡೀ ಪ್ರಪಂಚದೆಲ್ಲೆಡೆ ತೈಲದ ಸರೋವರವೇ ಹರಿದು ಬಂದಂತಿತ್ತು ಎಲ್ಲಿ ಅಗೆದರು ತೈಲವೇ ಸಿಕ್ಕಿತ್ತು 1944ರ ವೇಳೆಗೆ ಈ ಪ್ರದೇಶದಲ್ಲಿ ಸಿಗುವ ಅಷ್ಟು ತೈಲವನ್ನ ಹೊರತೆಗೆಯುವ ಗುತ್ತಿಕೆಯನ್ನ ಅಮೆರಿಕಾದ ಅರಂಕೋ ಕಂಪನಿಗೆ ನೀಡಲಾಯಿತು ಆ ಸಮಯದಿಂದ ಇಡೀ ಸೌದಿ ಅರೇಬಿಯಾದ ಚಿತ್ರಣವೇ ಬದಲಾಯಿತು ಬಡತನ ಮಾಯವಾಗಿ ಸೌದಿ ಕೆಲವೇ ವರ್ಷಗಳಲ್ಲಿ ಸಿರಿವಂತ ದೇಶಗಳ ಸಾಲಿಗೆ ಬಂದು ನಿಲ್ಲುವಂತಾಯಿತು ಸ್ನೇಹಿತರೆ ನಿಮಗೆ ಗೊತ್ತಿರಲಿ ಒಂದು ವರದಿಯ ಪ್ರಕಾರ 2016ರವರೆಗೆ ಸೌದಿ ಅರೇಬಿಯಾದಲ್ಲಿ ಒಟ್ಟು 90 ಬಿಲಿಯನ್ ಬ್ಯಾರಲ್ ತೈಲವನ್ನ ಹೊರತೆಗೆಯಲಾಗಿದೆ ಮತ್ತೊಂದು ಅಚ್ಚರಿಯ ಅಂಶ ಅಂದ್ರೆ 2014ರ ವರದಿಯೊಂದರ ಪ್ರಕಾರ ಸೌದಿ ನೆಲದಲ್ಲಿ ಬರೊಬ್ಬರಿ 26 ಏಳು ಶತಕೋಟಿ ಮಿಲಿಯನ್ ಬ್ಯಾರಲ್ ತೈಲ ಸಂಪನ್ಮೂಲವಿದೆ ಅಂತ ಹೇಳಲಾಗಿದೆ 19ನೇ ಶತಮಾನದ ಅಂತ್ಯದವರೆಗೆ ರಷ್ಯಾ ಸೇರಿದಂತೆ ಹಲವು ದೇಶಗಳು ತೈಲ ಸಂಪನ್ಮೂಲವನ್ನ ಹೆಕ್ಕಿ ತೆಗೆಯುವುದರಲ್ಲಿ ಯಶಸ್ವಿಯಾಗಿದ್ದವು ತೈಲ ನಿಕ್ಷೇಪಗಳು ಸಿಕ್ಕ ರಾಷ್ಟ್ರಗಳ ಜಿಡಿಪಿ ಬೆಳವಣಿಗೆ ರಾಕೆಟ್ ವೇಗದಲ್ಲಿ ಆಗಲು ಶುರುವಾಗುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments