ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಎಐ ಅನ್ನುವಂತಹ ತಂತ್ರಜ್ಞಾನದ ಬಗ್ಗೆ ಎಲ್ಲೆಡೆಗೂ ಚರ್ಚೆ ಆಗ್ತಾ ಇದೆ. ಆದರೆ ಕ್ರಿಪ್ಟೋ ಕರೆನ್ಸಿ ಅಂತ ಹಿಂದಿನ ತಾಂತ್ರಿಕ ಅಲೆಗಳು ಸೃಷ್ಟಿ ಮಾಡಿದಂತ ಭಾರಿ ಹೈಪ್ ನಂತರ ಕುಸಿದು ಬಿದ್ದ ಹಾಗೇನೆ ಎಐ ಕೂಡ ಅದೇ ಹಾದಿಯಲ್ಲಿ ಇದೆಯಾ ಅನ್ನುವಂತ ಆತಂಕಕಾರಿ ಪ್ರಶ್ನೆ ಈಗ ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಹುಟ್ಟಕೊಂಡಿದೆ. ಚಾರ್ಟ್ ಜಿಪಿಟಿ ಆಗಮನದ ನಂತರ ಎಐ ಮೇಲಿನ ಕ್ರೇಜ್ ಮುಗಿಲು ಮುಟ್ಟಿದೆ. ಮತ್ತೆ ಕಂಪನಿಗಳಲ್ಲಿ ಹಣ ಹೂಡೋದಕ್ಕೆ ಎಲ್ಲರೂ ಮುಗಿ ಬೀಳ್ತಾ ಇದ್ದಾರೆ. ಆದರೆ ಇದು ನಿಜಕ್ಕೂ ತಂತ್ರಜ್ಞಾನದ ಕ್ರಾಂತಿನ ಅಥವಾ ಮುಂಬರುವ ದೊಡ್ಡ ಆರ್ಥಿಕ ಕುಸಿತಕ್ಕೆ ಮುನ್ನುಡಿನ ಈ ಎಐ ಗುಳ್ಳೆ ಎಷ್ಟು ದೊಡ್ಡದಾಗಿದೆ.
ನಮ್ಮ ಆರ್ಥಿಕತೆ ಮತ್ತೆ ಉದ್ಯೋಗಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಈ ನಿರ್ಣಾಯಕ ಪ್ರಶ್ನೆಗಳಿಗೆ ಇವತ್ತು ನಾವು ಉತ್ತರ ಹುಡುಕೋಣ.ಕೆಲವು ವರ್ಷಗಳಲ್ಲಿ ಎನ್ವಿಡಿ ಅನ್ನಂತಹ ಚಿಪ್ ತಯಾರಕ ಸಂಸ್ಥೆಗಳು ಸೇರಿದಹಾಗೆ ಎಐ ಕಂಪನಿಗಳಿಗೆ ಅದು ಎಷ್ಟೋ ಬಿಲಿಯನ್ ಡಾಲರ್ಗಳ ಹೂಡಿಕೆ ಹರೆದು ಬಂದಿದೆ ಆದರೆ ಈ ಬಾರಿ ಹೂಡಿಕೆಗೆ ತಕ್ಕ ಪ್ರತಿಫಲ ಸಿಗತಾ ಇದೆಯಾ ಅಮೆರಿಕಾದ ಮಸಾಚೆಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಒಂದು ಅಧ್ಯಯನದ ಪ್ರಕಾರ ಜನರೇಟಿವ್ ಎಐ ಸಂಬಂಧಿತ 95% ಹೂಡಿಕೆಗಳು ಯಾವುದೇ ಆದಾಯವನ್ನ ನೀಡಿಲ್ಲ ಅಂದರೆ ಇದರರ್ಥ ಎಐ ಕ್ಷೇತ್ರದಲ್ಲಿ ದಲ್ಲಿ ಹೆಚ್ಚಿನ ಬೆಳವಣಿಗೆ ಕೇವಲ ಪ್ರಚಾರದಿಂದ ನಡೀತಾ ಇದೆ ವಾಸ್ತವಿಕ ಲಾಭದಿಂದ ಅಲ್ಲ ಈ ಪ್ರಚಾರದ ಗುಳ್ಳೆ ಒಡೆದ ದಿನ ಅಂದ್ರೆ 2000ನೇ ಇಸವಿಯ ಡಾಟ್ಕಾಂ ಗುಳ್ಳೆ ಹೊಡೆದ ಹಾಗೇನೆ ಜಾಗತಿಕ ಆರ್ಥಿಕ ತತ್ತರಿಸುವಂತ ಒಂದು ಅಪಾಯ ಇದೆ ಆಗ ಇಂಟರ್ನೆಟ್ ಕಂಪನಿಗಳಲ್ಲಿ ಕಣ್ಣು ಮುಚ್ಚಿ ಹೂಡಿಕೆ ಮಾಡಿದಂತ ಅನೇಕರು ಬೀದಿಪಾಲಾದರು ಇವತ್ತು ಇತಿಹಾಸ ಮರುಕಳಿಸುವಂತ ಲಕ್ಷಣಗಳು ಕಾಣ್ತಾ ಇವೆ.
ಈ ಎಐ ಭೂಮಿನ ಹಿಂದೆ ಕೇವಲ ಹೈಪ್ ಮಾತ್ರ ಅಲ್ಲ ಒಂದು ಸಂಕೀರ್ಣವಾದ ಆರ್ಥಿಕ ಜಾಲ ಕೂಡ ಇದೆ ಅಮೆರಿಕಾದ ಕೆಲವು ಪ್ರಮುಖ ಎಐ ಕಂಪನಿಗಳ ಪರಸ್ಪರ ಹಣ ಹೂಡಿಕೆ ಮಾಡ್ತಾ ಇವೆ ಇದನ್ನ ಬಹಳ ಸರಳವಾಗಿ ಅರ್ಥ ಮಾಡಿಕೊಳ್ಳೋದಾದ್ರೆ ಒಂದು ದೊಡ್ಡ ಚಿಪ್ ತಯಾರಿಕ ಕಂಪನಿ ಎಐ ಸ್ಟಾರ್ಟಪ್ ಒಂದರಲ್ಲಿ ಬಿಲಿಯನ್ ಡಾಲರ್ ಅನ್ನ ಹುಡುತ್ತೆ ನಂತರ ಅದೇ ಎಐ ಸ್ಟಾರ್ಟಪ್ ಆ ಒಂದು ಹಣವನ್ನ ಬಳಸಿಕೊಂಡು ಚಿಪ್ ತಯಾರಕ ಕಂಪನಿಯಿಂದನೇ ಚಿಪ್ಗಳನ್ನ ಖರೀದಿ ಮಾಡುತ್ತೆ ಕಾಗದದ ಮೇಲೆ ಇದು ನಿಜವಾದ ವ್ಯಾಪಾರದ ಹಾಗೆ ಕಂಡರು ಕೂಡ ವಾಸ್ತವದಲ್ಲಿ ಇದು ಹಣದ ಒಂದು ಚಕ್ರವ್ಯೂಹ ಹಣವು ಒಂದೇ ಕಡೆ ಸುತ್ತುತ್ತಾ ಎರಡು ಕಂಪನಿಗಳ ಮೌಲ್ಯವನ್ನ ಕೃತಕವಾಗಿ ಹೆಚ್ಚಿಸುತ್ತಾ ಇದೆ ಈ ಆಟವನ್ನ ಅರ್ಥ ಮಾಡಿಕೊಳ್ಳದ ಸಾಮಾನ್ಯ ಹುಡಿಕೆದಾರರು ಕೇವಲ ಹೈಪ್ ನೋಡಿ ತಮ್ಮ ಉಳಿತಾಯವನ್ನ ಅಪಾಯಕ್ಕೆ ದೂಡ್ತಾ ಇದ್ದಾರೆ.
ಎಐ ಜಗತ್ತನ್ನ ಬದಲಾಯಿಸುತ್ತೆ ಕ್ಯಾನ್ಸರ್ ಗುಣಪಡಿಸುತ್ತೆ ಹವಾಮಾನ ಬದಲಾವಣೆಯನ್ನ ತಡೆಯುತ್ತೆ ಅನ್ನುವಂತಹ ದೊಡ್ಡ ಕಥೆಗಳನ್ನ ಕಟ್ಟಿ ಹೂಡಿಕೆ ಮಾಡದೆ ಇದ್ದರೆ ಅವಕಾಶವನ್ನ ಕಳೆದುಕೊಳ್ಳುತ್ತೀರಿ ಅನ್ನುವಂತ ಒಂದು ಭಯವನ್ನ ಸೃಷ್ಟಿ ಮಾಡಲಾಗ್ತಾ ಇದೆ ಈ ಎಐ ಗುಳ್ಳೆ ಹೊಡೆದರೆ ಏನಾಗಬಹುದು ಒಂದುವೇಳೆ ಈ ಎಐ ಗುಳ್ಳೆ ಏನಾದ್ರೂ ಒಡೆದರೆ ಅದರ ಪರಿಣಾಮ ಕೇವಲ ಟೆಕ್ ಕಂಪನಿಗಳಿಗೆ ಸೀಮಿತ ಆಗಿರೋದಿಲ್ಲ ಇವತ್ತು ಜಾಗತಿಕ ಶೇರ್ ಮಾರುಕಟ್ಟೆಯ ಬಹುಪಾಲು ಕೇವಲ ಬೆರಳೆಣಿಕೆಯ ಟೆಕ್ ದೈತರ ಹಿಡಿತದಲ್ಲಿದೆ ಇವುಗಳಲ್ಲಿ ಒಂದು ಕಂಪನಿ ಕುಸಿದರು ಕೂಡ ಇಡೀ ಆರ್ಥಿಕ ವ್ಯವಸ್ಥೆನೇ ಅಲಗಾಡುತ್ತೆ ಇದರ ಪರಿಣಾಮಗಳು ಹೇಗಿರಬಹುದು ಹಾಗಾದರೆ ಒಂದು ಮಾರುಕಟ್ಟೆ ಕುಸಿತ ಶೇರ್ ಮಾರುಕಟ್ಟೆಗಳು ತೀವ್ರವಾಗಿ ಕುಸಿದು ಹೋಗುತ್ತವೆ ಹೂಡಿಕೆದಾರರು ಶತಕೋಟಿ ಡಾಲರ್ ಸಂಪತ್ತು ಕರಗಿಹೋಗುತ್ತೆ ಇನ್ನು ಎರಡನೆದು ಯೋಜನೆಗಳು ಸ್ಥಗಿತ ಎಐಗೆ ಸಂಬಂಧಪಟ್ಟ ಹಾಗೆ ಹೊಸ ಯೋಜನೆಗಳು ಮತ್ತೆ ಸಂಶೋಧನೆಗಳು ತಕ್ಷಣನೇ ನಿಂತುಹೋಗುತ್ತವೆ ಇನ್ನು ಮೂರನೆದು ಉದ್ಯೋಗ ನಷ್ಟ ಆರ್ಥಿಕ ಕುಸಿತದ ನಡುವೆನು ಕಂಪನಿಗಳು ವೆಚ್ಚ ಕಡಿತಕ್ಕಾಗಿ ಆಟೋಮೇಷನ್ ಅನ್ನ ಇನ್ನಷ್ಟು ಹೆಚ್ಚಾಗಿ ಬಳಸುತ್ತವೆ ಇದರಿಂದಾಗಿ ಡೇಟಾ ಎಂಟ್ರಿ ಗ್ರಾಹಕ ಸೇವೆ ಮತ್ತೆ ಬೇಸಿಕ್ ಕೋಡಿಂಗ್ನಂತಹ ಕ್ಷೇತ್ರಗಳಲ್ಲಿಯೂ ಕೂಡ ಉದ್ಯೋಗ ನಷ್ಟದ ಪ್ರಮಾಣ ಹೆಚ್ಚಾಗುತ್ತೆ.
ಅಮೆರಿಕಾದಲ್ಲಿ ಎಐ ಗುಳ್ಳೆ ಏನಾದ್ರೂ ಹೊಡೆದರೆ ಅದರ ಆಘಾತದ ಅಲೆಗಳು ಭಾರತದ ತೀರಕ್ಕೂ ಕೂಡ ಅಪ್ಪಳಿಸಲಿವೆ ನಮ್ಮ ಐಟಿ ಸೇವಾ ದೈತ್ಯ ಕಂಪನಿಗಳಾದಂತಹ ಟಿಸಿಎಸ್ ಇನ್ಫೋಸಿಸ್ ವಿಪ್ರೋ ಗಳಿಗೆ ಯುಎಸ್ ಮತ್ತೆ ಯುರೋಪ್ನಿಂದ ಬರುವಂತ ಯೋಜನೆಗಳು ಕಡಿಮೆಯಾಗುತ್ತವೆ ಭಾರತದ ಎಐ ಸ್ಟಾರ್ಟಪ್ ಗಳಿಗೆ ಸಿಗತಾ ಇದ್ದಂತಹ ವಿದೇಶಿ ಹೂಡಿಕೆ ನಿಂತುಹೋಗುತ್ತೆ ಇದು ನಮ್ಮ ಐಟಿ ಮತ್ತೆ ಬಿಪಿಓ ವಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗನಷ್ಟಕ್ಕೆ ಕಾರಣ ಆಗಬಹುದು ಆದರೆ ಇದರಲ್ಲಿ ಒಂದು ಸಕಾರಾತ್ಮಕ ಅಂಶ ಕೂಡ ಇದೆ ಎಐ ಅಳವಡಿಕೆಯಲ್ಲಿ ನಾವು ಪಾಶ್ಚಿಮಾತ್ಯ ದೇಶಗಳಿಗಿಂತ ಕೆಲವು ವರ್ಷಗಳಷ್ಟು ಹಿಂದಿದ್ದೀವಿ ಈ ಅಂತರವು ನಮಗೆ ವೀಕ್ಷಿಸಿ ಮತ್ತೆ ಕಲಿಯುವಂತ ಒಂದು ಅವಕಾಶವನ್ನ ನೀಡುತ್ತೆ ಅವರ ತಪ್ಪುಗಳಿಂದ ಪಾಠವನ್ನ ಕಲಿತುಕೊಂಡು ನಿಜವಾಗಿನೂ ಉಪಯುಕ್ತವಾದಂತ ಎಐ ತಂತ್ರಜ್ಞಾನಗಳನ್ನ ನಾವು ಕಡಿಮೆ ವೆಚ್ಚದಲ್ಲಿ ಅಳವಡಿಸಿಕೊಳ್ಳಬಹುದು ಡಾಟ್ಕಾಮ ಕುಸಿತದ ನಂತರ ಭಾರತದಲ್ಲಿ ಐಟಿ ಹೊರಗುತ್ತಿಗೆ ಉದ್ಯಮವು ಹೇಗೆ ಬೆಳಿತೋ ಹಾಗೇನೇ ಎಐ ಕುಸಿತದ ನಂತರ ಕೂಡ ನಮಗೆ ಹೊಸ ಅವಕಾಶಗಳು ತೆರೆದುಕೊಳ್ಳಬಹುದು ಎಐ ಗುಳ್ಳೆಯ ಕುಸಿತ ಬಹುತೇಕ ಅನಿವಾರ್ಯದ ಹಾಗೇನೆ ಕಾಣ್ತಾ ಇದೆ ನಾವು ಕೇವಲ ಹೈಪ್ನ ಹಿಂದೆ ಹೋಗುವ ಬದಲು ವಾಸ್ತವವನ್ನ ಅರಿತು ಸಿದ್ಧರಾಗಬೇಕಾಗಿದೆ.ನಾವು ಹೊಸ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುದನ್ನ ನಿಲ್ಲಿಸಬಾರದು ಆದರೆ ಅದನ್ನ ಬಹಳ ಬುದ್ಧಿವಂತಿಕೆಯಿಂದ ಮಾಡಬೇಕಾಗಿದೆ ನಕಲಿ ಮೌಲ್ಯಮಾಪನಗಳ ಬದಲು ನಿಜವಾದ ಸಮಸ್ಯೆಗಳನ್ನ ಬಗೆಹರಿಸುದು ಸುಸ್ಥಿರವಾದ ತಂತ್ರಜ್ಞಾನಗಳನ್ನ ನಿರ್ಮಿಸುವುದರತ್ತ ಗಮನಹರಿಸಬೇಕು ಈಗ ನಾವು ಕೇಳಿಕೊಳ್ಳಬೇಕಾದಂತ ಪ್ರಶ್ನೆ ಒಂದೇ ಭಾರತ ಯಾವ ತಂತ್ರಜ್ಞಾನದಲ್ಲಿ ಜಗತ್ತನ್ನ ಮುನ್ನಡೆಸಬಲ್ದು.


