Thursday, November 20, 2025
HomeTech Newsಒಮ್ಮೆ ಮಾರುಕಟ್ಟೆ ಆಳಿದ ಫಿಲಿಪ್ಸ್, ಇಂದು ಯಾಕೆ ಹಿನ್ನಡೆಯಲ್ಲಿದೆ?

ಒಮ್ಮೆ ಮಾರುಕಟ್ಟೆ ಆಳಿದ ಫಿಲಿಪ್ಸ್, ಇಂದು ಯಾಕೆ ಹಿನ್ನಡೆಯಲ್ಲಿದೆ?

ಫಲಿಪ್ಸ್ ಕಂಪನಿ ಒಂದು ಕಾಲದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಂತ ಎಲೆಕ್ಟ್ರಾನಿಕ್ ಬ್ರಾಂಡ್ ಇದರ ಯಾವುದಾದ್ರೂ ಕನಿಷ್ಠ ಒಂದು ಪ್ರಾಡಕ್ಟ್ ನ್ನಾದರೂ ನೀವು ಖಂಡಿತ ಬಳಸೆ ಇರ್ತೀರಾ ಫಲಿಪ್ಸ್ ಎಂಬ ಹೆಸರನ್ನ ಕೇಳಿದ ತಕ್ಷಣ ನಮ್ಮಲ್ಲಿ ಬಹುತೇಕರು ಮನಸಲ್ಲಿ ಒಂದು ವಿಷಯ ಸ್ಪಷ್ಟವಾಗಿರುತ್ತೆ ಅದೇನಪ್ಪಾ ಅಂದ್ರೆ ಫಿಲಿಪ್ಸ್ ನ ಪ್ರಾಡಕ್ಟ್ ಅಂದ್ರೆ ಅದು ಖಂಡಿತವಾಗಿ ಗಟ್ಟಿ ಮುಟ್ಟಾಗಿರುತ್ತೆ ಮತ್ತು ವರ್ಷಗಳವರೆಗೂ ಅದು ಬಾಳಿಕೆ ಬರುತ್ತೆ ಅನ್ನೋದು ನೀವು ಕೂಡ ಫಿಲಿಪ್ಸ್ ಸಂಸ್ಥೆ ವಸ್ತುಗಳ ಅಭಿಮಾನಿಯಾಗಿದ್ದರೆ ನಿಮಗೆಲ್ಲ ಖಂಡಿತ ಅದರ ಕುರಿತು ಒಂದು ಶಾಕಿಂಗ್ ಸುದ್ದಿ ಇದೆ ಅದೇನಪ್ಪ ಅಂದ್ರೆ ಇಲ್ಲಿ ಇಲ್ಲಿಂದ ಸುಮಾರು 10ರಿಂದ 12 ವರ್ಷಗಳ ನಂತರ ನಿಮಗೆ ಫಲಿಪ್ಸ್ ನ ಯಾವುದೇ ಎಲೆಕ್ಟ್ರಾನಿಕ್ಸ್ನ ಸಾಧನಗಳು ಮಾರುಕಟ್ಟೆಯಲ್ಲಿ ನೋಡೋದಕ್ಕೆ ಸಿಗೋದಿಲ್ಲ ಹಾಗೆ ನೋಡಿದ್ರೆ ವಾಸ್ತವವಾಗಿ ಈಗ ನೀವು ಬಳಸ್ತಿರುವಂತ ಯಾವುದೇ ಫಿಲಿಪ್ಸ್ ನ ಉತ್ಪನ್ನಗಳನ್ನ ಈಗ ಫಿಲಿಪ್ಸ್ ಕಂಪನಿ ತಯಾರಿಸ್ತಾನೆ ಇಲ್ಲ ಎಂಬ ವಿಷಯ ನಿಮಗೆ ಆಶ್ಚರ್ಯವನ್ನ ಉಂಟು ಮಾಡಬಹುದು ಇದರ ಜೊತೆ ಫಲಿಪ್ಸ್ ಕಂಪನಿ ಶೀಘ್ರದಲ್ಲಿ ಬ್ಯಾಂಕ್ರಪ್ಟ್ ಆಗುವಂತ ಸಾಧ್ಯತೆ ಇದೆ ಎಂಬ ಸುದ್ದಿ ಕೂಡ ಈಗ ಇನ್ನೊಂದು ಪ್ರಶ್ನೆ ಉದ್ಭವ ಆಗುತ್ತೆ ವಿಶ್ವದ ಮೊದಲ ಎಲೆಕ್ಟ್ರಾನಿಕ್ ರೈಸರ್ ನ್ನ ತಯಾರು ಮಾಡಿದಂತ ಮತ್ತು ಅತಿ ಹೆಚ್ಚು ಬಲ್ಬ್ಗಳನ್ನ ತಯಾರು ಮಾಡಿದಂತ ಕಂಪನಿ ಇದು ಇಷ್ಟೊಂದು ದೊಡ್ಡ ಕಸ್ಟಮರ್ ಬೇಸ್ ಹೊಂದಿದ್ರೂ ಕೂಡ ಅದು ದಿವಾ ದಿವಾಳಿ ಆಗುವಂತ ಹಂಚಿಗೆ ಯಾಕೆ ಬಂದು ನಿಂತಿದೆ ಮತ್ತೆ ಫಿಲಿಪ್ಸ್ ಯಾಕೆ ತನ್ನ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನ.

ಮೊದಲಿಗೆ ನಾವಿಲ್ಲಿ ಈ ಫಿಲಿಪ್ಸ್ ಕಂಪನಿ ಹೇಗೆ ಶುರುವಾಯಿತು ಅಂತ ನೋಡೋಣ ಈ ಫಿಲಿಪ್ಸ್ ಕಂಪನಿಯನ್ನ ಗೆರಾರ್ಡ್ ಫಿಲಿಪ್ಸ್ ಅನ್ನೋವರು 1891 ರಲ್ಲಿ ತಮ್ಮ ತಂದೆಯೊಂದಿಗೆ ಸೇರಿ ನೆದರ್ಲ್ಯಾಂಡ್ನಲ್ಲಿ ಶುರು ಮಾಡ್ತಾರೆ ಕಂಪನಿಯ ಪೂರ್ಣ ಹೆಸರು ಕೋನಿನ್ಕ್ಲಿಜೆ ಫಿಲಿಪ್ಸ್ ಎನ್ವಿ ಇಲ್ಲಿ ಕೋನಿನ್ಕ್ಲಿಜೆ ಅಂದ್ರೆ ರಾಯಲ್ ಅಂದ್ರೆ ಅಂದ್ರೆ ರಾಜ ಮನೆತನ ಅಂತ ಅರ್ಥ ಆದ್ದರಿಂದ ಇದನ್ನ ರಾಯಲ್ ಫಲಿಪ್ಸ್ ಕಂಪನಿ ಅದನ್ನು ಕೂಡ ಕರೆಯಲಾಗುತ್ತೆ. ಈ ಒಂದು ಕಂಪನಿ ಮೊದಲು ತನ್ನದೇ ಆದಂತ ಒಂದು ಲೈಟ್ ಬಲ್ಬ್ ಅನ್ನ ತಯಾರು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೆ. ಇದಕ್ಕಾಗಿ ಕಂಪನಿ ಅನೇಕ ರೀತಿಯ ಸಂಶೋಧನೆಗಳನ್ನು ಕೂಡ ನಡೆಸಿತ್ತು. ಮತ್ತೆ ವಿವಿಧ ರೀತಿಯ ಬಲ್ಪ್ ಗಳನ್ನು ಕೂಡ ಅದು ಮಾರುಕಟ್ಟೆಗೆ ಬಿಡುಗಡೆಯನ್ನ ಮಾಡಿತ್ತು. ಈ ಫಿಲಿಪ್ಸ್ ಕಂಪನಿ ಆ ಒಂದು ಟೈಮಲ್ಲಿ ಇದ್ದಂತ ಏಕೈಕ ಎಲೆಕ್ಟ್ರಾನಿಕ್ ಕಂಪನಿಯಾಗಿತ್ತು. ಅದರ ಬಲ್ಬ್ನ ಜೀವಿತಾವಧಿ ಕನಿಷ್ಠ ಸಾವಿರ ಗಂಟೆಗಳಷ್ಟು ಇತ್ತು. ಅಂದ್ರೆ ಆಗ ಇದರ ಬಲ್ಪ್ ಒಂದು ಗರಿಷ್ಠ 42 ದಿವಸದವರೆಗೂನು ರನ್ ಆಗ್ತಿತ್ತು. ಈ ಒಂದು ಕಂಪನಿಯ ಬಲ್ಪ್ಗಳು ಆಗ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯ ಆಗಿದ್ದವು. ಮತ್ತೆ ಆಗಾಗಲೇ ಅಸ್ತಿತ್ವದಲ್ಲಿ ಇದ್ದಂತ ಇತರೆ ಕೆಲ ಬಲ್ಬ್ ತಯಾರಿಕ ಕಂಪನಿಗಳಿಗೆ ಇದು ದೊಡ್ಡ ಸ್ಪರ್ಧೆಯಾಗಿ ಬೆಳೆಯಿತು. Philips ತನ್ನ ಬಿಸಿನೆಸ್ ಟೆಕ್ನಿಕ್ ಮತ್ತು ಮಾರ್ಕೆಟಿಂಗ್ ನ ಬಲ್ದಿಂದ ಬಹಳ ವೇಗವಾಗಿ ಬೆಳೆಯಿತು. ನಂತರ ಫಿಲಿಪ್ಸ್ ಮತ್ತಷ್ಟು ಹೊಸ ಹಾಗೂ ವಿವಿಧ ಬಗೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನ ತಯಾರು ಮಾಡೋದಕ್ಕೆ ಶುರು ಮಾಡಿತ್ತು.

ಕೆಲವು ವರ್ಷಗಳವರೆಗೆ ಇವರ ಬಲ್ಬ್ ವ್ಯವಹಾರ ತುಂಬಾ ಉತ್ತಮವಾಗಿನೇ ರನ್ ಆಯ್ತು. ಆದರೆ 1895ರ ನಂತರ ಅನೇಕ ಕಂಪನಿಗಳು ಫಿಲಿಪ್ಸ್ ನಂತೆ ಬಲ್ಪ್ಗಳನ್ನ ತಯಾರು ಮಾಡೋದಕ್ಕೆ ಶುರು ಮಾಡಿದ್ವು. ಇದರಿಂದ ಫಲಿಪ್ಸ್ ನ ಮಾರಾಟ ಕಡಿಮೆ ಆಯ್ತು. ಮತ್ತೆ ಕಂಪನಿಗೂ ಕೂಡ ನಷ್ಟ ಆಗೋದಕ್ಕೆ ಶುರುವಾಯಿತು. ಈ ಒಂದು ಪರಿಸ್ಥಿತಿಯಲ್ಲಿ ಗೆರಾಲ್ಡ್ ಫಿಲಿಪ್ಸ್ ರವರು ತಮ್ಮ ಕಿರಿಯ ಸಹೋದರಾಗಿದ್ದಂತ ಆಂಟನ್ ಫಿಲಿಪ್ಸ್ ರವರನ್ನ ವ್ಯವಹಾರಕ್ಕೆ ಸೇರಿಸಿಕೊಳ್ಳುತ್ತಾರೆ. ಈ ಆಂಟನ್ ಕೇವಲ 16ನೇ ವಯಸ್ಸಿನಲ್ಲಿಯೇ ಇಂಜಿನಿಯರಿಂಗ್ ಪದವಿಯನ್ನ ಪಡೆದಿದ್ದ ಈ ಸೋದರರು ಇಬ್ಬರು ಸೇರಿ 1920 ರಲ್ಲಿ ತಮ್ಮ ವ್ಯವಹಾರವನ್ನ ಬಹುರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪನೆ ಮಾಡ್ತಾರೆ ಮತ್ತು ವ್ಯಾಕ್ಯೂಮ್ ಟ್ಯೂಬ್ ಗಳಂತ ಹಲವಾರು ಎಲೆಕ್ಟ್ರಾನಿಕ್ ಸಾಧನಗಳನ್ನು ಕೂಡ ತಯಾರು ಮಾಡಿ ಭಾರತ ತಂದರು. ಈ ವ್ಯಾಕ್ಯೂಮ್ ಟ್ಯೂಬ್ ಗಳ ಕ್ವಾಲಿಟಿ ಹೆಚ್ಚೋದಕ್ಕೆ ಅವರು ಮಲ್ನಾಡ್ ಮತ್ತು ಎಂಬ ವಾರ್ಡ್ ತಯಾರಿಸುವಂತಹ ಎರಡು ಕಂಪನಿಗಳ ಜೊತೆ ಕೈ ಜೋಡಿಸುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಈಗಾಗಲೇ ಇದ್ದಂತ ಅವರ ಸ್ಕೋಪ್ ಹೆಚ್ಚಾಯಿತು. 1922 ರಲ್ಲಿ ಈ ಕಂಪನಿ ತನ್ನ ಮೊದಲ ಶಾರ್ಟ್ ವೇವ್ ರೇಡಿಯೋ ಸ್ಟೇಷನ್ ಅನ್ನ ಸಿದ್ಧಪಡಿಸುತ್ತೆ. ಅಲ್ಲಿ 1928 ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳು ಪ್ರಸಾರ ಆಗೋದಕ್ಕೆ ಶುರುವಾದವು. ನಂತರ ಹ್ಯಾಪಿ ಸ್ಟೇಷನ್ ಎಂಬ ಹೊಸ ಕಾರ್ಯಕ್ರಮವನ್ನ ಇವರು ಶುರು ಮಾಡ್ತಾರೆ. ಇದು ಆಗ ವಿಶ್ವದ ಅತಿ ಹೆಚ್ಚು ಕಾಲ ನಡೆದಂತಹ ಶಾರ್ಟ್ ವೇವ್ ಕಾರ್ಯಕ್ರಮ ಅನ್ನುವಂತ ಹೆಗ್ಗಳಿಕೆಯನ್ನ ಪಡೆದಿತ್ತು.

1930 ರಲ್ಲಿ ಫಿನಿಕ್ಸ್ ಚಾಂಪಿಯನ್ ಎಂಬ ಹೆಸರಿನ ದೊಡ್ಡ ಶಬ್ದ ಹೊಂದಿದಂತಹ ರೇಡಿಯೋ ಉಪಕರಣ ಒಂದನ್ನ ತಯಾರು ಮಾಡಿ ಇವರು ಬಿಡುಗಡೆ ಮಾಡ್ತಾರೆ. ಇದು ಪ್ರತ್ಯೇಕವಾಗಿ ಎರಡು ಲೋಡ್ ಸ್ಪೀಕರ್ ಗಳನ್ನ ಹೊಂದಿದಂತ ರೇಡಿಯೋ ಆಗಿತ್ತು. ಮತ್ತೆ ಈ ಒಂದು ಉತ್ಪನ್ನವನ್ನು ಕೂಡ ಆಗ ತುಂಬಾ ಜನ ಇಷ್ಟ ಪಟ್ಟರು. ಈ ರೀತಿಯಾಗಿ 1933ರ ಹೊತ್ತಿಗೆ ಫಿಲಿಪ್ಸ್ ಸಂಸ್ಥೆ ರೇಡಿಯೋ ತಯಾರಿಸುವಂತ ಅತಿ ದೊಡ್ಡ ಕಂಪನಿಯಾಗಿ ಹೊರಹೊಮ್ತು. ವೀಕ್ಷಕರೇ ಒಂದು ಟೈಮ್ಲ್ಲಿ ಭೂಮಿಯಲ್ಲಿ ಹೋಡಿಕೆ ಮಾಡಿದ್ರೆ ಮಾತ್ರ ಲಾಭ ಸಿಗುತ್ತೆ ಅಂತ ನಂಬುತಾ ಇದ್ದೀವಿ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಉತ್ತಮ ಕಂಪನಿಗಳ ಶೇರುಗಳಲ್ಲಿ ಹೂಡಿಕೆಯನ್ನ ಮಾಡಿದ್ರೆ ನಿಮಗೆ ಸಾಕಷ್ಟು ಲಾಭ ಸಿಗುತ್ತೆ. ಉದಾಹರಣೆಗೆ ನೀವು ಐದು ವರ್ಷಗಳ ಹಿಂದೆ ಟಾಟಾ ಮೋಟಾರ್ಸ್ ನಲ್ಲಿ ಒ ಲಕ್ಷ ರೂಪಾಯ ಹೂಡಿಕೆಯನ್ನ ಮಾಡಿದ್ದಿದ್ರೆ ಇವತ್ತಿಗೆ ಅದು 7 ಲಕ್ಷ ರೂಪಾಯ ಆಗ್ತಾ ಇತ್ತು. ಅಂದ್ರೆ ಸುಮಾರು 700% ರಿಟರ್ನ್ ಸಿಗ್ತಾ ಇತ್ತು. ಇಂತ ಲಾಭಗಳು ಚಿನ್ನ ಫಿಕ್ಸಡ್ ಡೆಪಾಸಿಟ್ ಅಥವಾ ರಿಯಲ್ ಎಸ್ಟೇಟ್ ನಲ್ಲಿ ಸಾಧ್ಯ ಇಲ್ಲ. ನೀವು ಶೇರು ಮಾರುಕಟ್ಟೆಯಲ್ಲಿ ಸರಿಯಾದ ತಿಳುವಳಿಕೆಯನ್ನ ಹೊಂದಿದ್ರೆ ಉತ್ತಮ ಲಾಭವನ್ನ ಗಳಿಸಬಹುದು. ನೀವು ಕೂಡ ಹೂಡಿಕೆ ಮಾಡಿ ಲಾಭವನ್ನ ಗಳಿಸೋದಕ್ಕೆ ಇಚ್ಚಿಸ್ತಾ ಇದ್ರೆ ಡಿಸ್ಕ್ರಿಪ್ಷನ್ ಬಾಕ್ಸ್ ಅಲ್ಲಿ ಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಏಂಜೆಲ್ ಒನ್ ನಲ್ಲಿ ಉಚಿತ ಡಿಮ್ಯಾಟ್ ಖಾತೆಯನ್ನ ತೆರೆಯಿರಿ. ನೀವೇನಾದ್ರೂ ಹೊಸಬರಾಗಿದ್ರೆ ನಿಮಗೆ ಸಲಹೆ ಕೊಡೋದಕ್ಕೆ ಅಲ್ಲಿ ಅಡ್ವೈಸರ್ ಗಳು ಕೂಡ ಸಿಕ್ತಾರೆ. ನೀವು ಕೇವಲ 100 ರೂಪಾಯಿ ಯಿಂದನು ಕೂಡ ಹೂಡಿಕೆಯನ್ನ ಶುರು ಮಾಡಬಹುದು.

1939 ರಲ್ಲಿ ಫಿಲಿಪ್ಸ್ ವಿಶ್ವದ ಮೊದಲ ಎಲೆಕ್ಟ್ರಾನಿಕ್ ರೇಸರ್ ಅನ್ನು ಕೂಡ ಪರಿಚಯ ಮಾಡುತ್ತೆ. ಇದು ಫಿಲಿಪ್ಸ್ ನ ಹೊಸ ಅವಿಷ್ಕಾರವಾಗಿದ್ದು ಈ ಒಂದು ರೇಸರ್ ಹೆಸರು ಫಿಲಿಶೇವ್ ಅಂತ ಇದು ಕೂಡ ಜನರಿಗೆ ತುಂಬಾ ಇಷ್ಟವಾಯ್ತಲ್ಲದೆ ಇದರಿಂದ ಕಂಪನಿಯ ಬೆಳವಣಿಗೆಯ ಗ್ರಾಫ್ ಮತ್ತಷ್ಟು ವೇಗವಾಗಿ ಏರಿಕೆಯನ್ನ ಕಾಣ್ತು ನಂತರ 1939 ರಲ್ಲಿ ಎರಡನೇ ಮಹಾಯುದ್ಧ ಶುರುವಾಗುತ್ತೆ 1940 ರಲ್ಲಿ ಹಿಟ್ಲರ್ ನೆದರ್ಲ್ಯಾಂಡ್ಸ್ ಮೇಲೆ ದಾಳಿ ಮಾಡುವಂತ ಸುದ್ದಿ ಆಗ ಎಲ್ಲಾ ಕಡೆ ಹರಡುತ್ತೆ ಈ ಒಂದು ಪರಿಸ್ಥಿತಿಯಲ್ಲಿ ಕಂಪನಿಯನ್ನ ಉಳಿಸಿಕೊಳ್ಳುದಕ್ಕೆ ಅವರಿಗೆ ಇದ್ದಂತ ಏಕೈಕ ಮಾರ್ಗ ಅಂದ್ರೆ ಅದು ನೆದರ್ಲ್ಯಾಂಡ್ ದೇಶವನ್ನೇ ತೊರೆದು ಬೇರೆ ಕಡೆ ಹೋಗೋದು ಆದ್ದರಿಂದ ಈ ಒಂದು ಒತ್ತಡದ ಬೆನ್ನಲೆ ಆಗ ಫಿನಿಕ್ಸ್ ಕಂಪನಿಯ ಸದಸ್ಯರು ಮತ್ತು ಎಲ್ಲಾ ಹಣ ಮತ್ತು ಯಂತ್ರೋಪಕರಣಗಳನ್ನು ಕೂಡ ತಗೊಂಡು ಉತ್ತರ ಅಮೆರಿಕಾಗೆ ಸ್ಥಳಾಂತರ ಆಗ್ತಾರೆ. ಅಲ್ಲಿ ಅವರ ಕಂಪನಿ ಹೆಸರನ್ನ ನಾರ್ತ್ ಅಮೆರಿಕನ್ ಫಿಲಿಪ್ಸ್ ಕಂಪನಿ ಅಂತ ಇಡಲಾಯಿತು. 1945 ರ ಹೊತ್ತಿಗೆ ವಿಶ್ವ ಯುದ್ಧ ಮುಗಿದ ನಂತರ ಕಂಪನಿ ಮತ್ತೆ ತನ್ನ ಪ್ರಧಾನ ಕಚೇರಿಯನ್ನ ನೆದರ್ಲ್ಯಾಂಡ್ಸ್ ಗೆನೆ ವರ್ಗಾವಣೆ ಮಾಡಿ ತನ್ನ ಕೆಲಸವನ್ನ ಮುಂದುವರಿಸುತ್ತೆ.

1950 ರಲ್ಲಿ ಫಿಲಿಪ್ಸ್ ಸಂಸ್ಥೆ ತನ್ನದೇ ಆದಂತಹ ಫಿಲಿಪ್ಸ್ ರೆಕಾರ್ಡ್ ಗಳನ್ನು ಕೂಡ ತಯಾರು ಮಾಡುತ್ತೆ. ಇವು ಸಿಡಿಗಳ ದೊಡ್ಡ ರೂಪ ಆಗಿದ್ದು ಇವು ಕೂಡ ಆಗ ಹೆಚ್ಚು ಪ್ರಚಾರ ಪಡೆದು ಮಾರುಕಟ್ಟೆಯಲ್ಲಿ ಚೆನ್ನಾಗಿ ಸೇಲ್ ಆದವು. ನಂತರ philips ಟೆಲಿವಿಷನ್ ಮತ್ತು ಗೃಹೋಪಯೋಗಿ ಉಪಕರಣಗಳನ್ನು ಕೂಡ ಅಂದ್ರೆ ಹೋಂ ಅಪ್ಲೈಯನ್ಸಸ್ ಅನ್ನು ಕೂಡ ತಯಾರು ಮಾಡೋದಕ್ಕೆ ಶುರು ಮಾಡ್ತು. ಬಳಸೋದಕ್ಕೆ ತುಂಬಾ ಸುಲಭವಾಗಿದ್ದಂತಹ ಈ ಉತ್ಪನ್ನಗಳನ್ನ ಜನ ಮೆಚ್ಚಿಕೊಂಡರು. 1955 ರಲ್ಲಿ ಇವರ ಕಂಪನಿ ಹೊಸ ಸೆಮಿಕಂಡಕ್ಟರ್ ಗಳನ್ನು ಕೂಡ ತಯಾರು ಮಾಡೋದಕ್ಕೆ ಪ್ರಾರಂಭಿಸಿತು. ಆದರೆ ಫಿಲಿಪ್ಸ್ ನ ಈ ಹೊಸ ಬಿಸಿನೆಸ್ ಸಂಪೂರ್ಣವಾಗಿ ವಿಫಲವಾಯಿತು. ಯಾಕೆಂದ್ರೆ ಇವರು ತಯಾರು ಮಾಡಿದಂತ ಸೆಮಿಕಂಡಕ್ಟರ್ಗಳು ಸರಿಯಾಗಿ ಕೆಲಸ ಮಾಡಿದಂತ ಕಾರಣ ಅವೆಲ್ಲವೂ ಕೂಡ ಕಂಪನಿಗೆ ವಾಪಸ್ ಬಂದವು. ಇದರಿಂದ ಕಂಪನಿ ದೊಡ್ಡ ನಷ್ಟವನ್ನ ಅನುಭವಿಸಬೇಕಾಗಿ ಬಂತು. ನಂತರ ಇವರು 1963 ರಲ್ಲಿ ಮತ್ತೊಮ್ಮೆ ಬಿಸಿನೆಸ್ ಅನ್ನ ಶುರು ಮಾಡ್ತಾರೆ. ಅದೇ ಆಡಿಯೋ ಕಾಂಪ್ಯಾಕ್ಟ್ ಕ್ಯಾಸೆಟ್ ಗಳು ಮತ್ತು ಟೇಪ್ ರೆಕಾರ್ಡರ್ ಗಳ ಬಿಡುಗಡೆ ಹಾಗೂ ಮಾರಾಟ. ಈ ಒಂದು ಕಂಪನಿ ಅನೇಕ ರೀತಿಯ ಕ್ಯಾಸೆಟ್ ಟೇಪ್ ಗಳು ಮತ್ತು ಟೇಪ್ ರೆಕಾರ್ಡ್ ಗಳನ್ನ ತಯಾರು ಮಾಡ್ತು. ಇದು ಸ್ವಲ್ಪ ಸಮಯದಲ್ಲೇ ಮಾರುಕಟ್ಟೆಯಲ್ಲಿ ಯಶಸ್ವಿ ಆದ್ರೂ ಕೂಡ ಕ್ರಮೇಣ ಆ ಒಂದು ಬಿಸಿನೆಸ್ ಕೂಡ ಡಲ್ ಆಗಿ ಕೊನೆಗೆ ನಿಂತು ಹೋಯ್ತು. 1960 ರಲ್ಲಿ LG ಮತ್ತು 1969 ರಲ್ಲಿಸ್ Samsung ಬ್ರಾಂಡ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟವು. ಇವೆರಡು ಕೂಡ ಕೊರಿಯನ್ ಕಂಪನಿಗಳಾಗಿದ್ದು. ಇವು Philips ನ ಗೃಹೋಪಯೋಗಿ ಉಪಕರಣಗಳ ಮಾರ್ಕೆಟ್ ಅನ್ನ ಕಬ್ಜಾ ಮಾಡೋದಕ್ಕೆ ಶುರು ಮಾಡ್ತವೆ. ಈ ಎರಡು ಕಂಪನಿಗಳು ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ತಂತ್ರಜ್ಞಾನ ಮತ್ತು ಸಂಬಂಧಪಟ್ಟಂತ ಪ್ರಾಡಕ್ಟ್ ಗಳನ್ನ ಒದಗಿಸೋದಕ್ಕೆ ಶುರು ಮಾಡ್ತಾವೆ. ಇದರ ಜೊತೆಗೆ ಈ ಎರಡು ಕಂಪನಿಗಳ ಮಾರ್ಕೆಟಿಂಗ್ ನಂತರ ಆ ಕಾಲಿಕೆ ಅತ್ಯಂತ ಮುಂದುವರೆದಂತ ಹಂತದಲ್ಲಿತ್ತು.

ಆ ಮಾರ್ಕೆಟ್ ಸ್ಟ್ರಾಟಜಿಯ ಮೂಲಕ ಇವರು ಹೊಸ ಯುಗದ ಟೆಕ್ನಾಲಜಿ ಮೈಂಡೆಡ್ ಯುವ ಯುವತಿಯರ ಸಮೂಹವನ್ನ ಹೆಚ್ಚಾಗಿ ತಮ್ಮ ಬ್ರಾಂಡ್ ಗಳಿಗೆ ಸೆಳಿತ ಮುಂದುವರೆಯುತ್ತಾರೆ. ಈ ಒಂದು ಪರಿಸ್ಥಿತಿಯಲ್ಲಿ ಫಿಲಿಪ್ಸ್ ಹೊಸದಾನ ಏನಾದ್ರೂ ಮಾಡಬೇಕು ಅಂತ ಯೋಚನೆ ಮಾಡ್ತಿತ್ತು. ಇದರ ಪರಿಣಾಮ 1970 ಮತ್ತು 80ರ ದಶಕದಲ್ಲಿ ಪರ್ಸನಲ್ ಕಂಪ್ಯೂಟರ್ ಬಳಸುವರಿಗೆ ಅವರು ಸಿ ಕ್ಯಾಸೆಟ್ ಗಳನ್ನ ತಯಾರು ಮಾಡೋದಕ್ಕೆ ಶುರು ಮಾಡಿದರು. ಇದನ್ನ ಜನರ ಅಗತ್ಯಕ್ಕೆ ಅನುಗುಣವಾಗಿ ಚಿಕ್ಕ ಪೋರ್ಟಬಲ್ ಗಾತ್ರಕ್ಕೆ ತಂದು ಅಭಿವೃದ್ಧಿಯನ್ನ ಪಡಿಸಲಾಯಿತು. ಅವರು ಮೊದಲು ಮೆನಿ ಕ್ಯಾಸೆಟ್ಗಳು ಮತ್ತು ನಂತರ ಮೈಕ್ರೋ ಕ್ಯಾಸೆಟ್ ಗಳನ್ನ ತಯಾರು ಮಾಡ್ತಾರೆ. ಈ ಕ್ಯಾಸೆಟ್ ಗಳು ಹೆಚ್ಚಿನ ಡೇಟಾವನ್ನ ಸಂಗ್ರಹಿಸಬಲವಾಗಿದ್ದು ಇವುಗಳನ್ನ ಹೆಚ್ಚಾಗಿ ಮದುವೆಗಳು ಅಥವಾ ದೊಡ್ಡ ಸಮಾರಂಭಗಳ ವಿಡಿಯೋಗಳ ರೆಕಾರ್ಡ್ ಮಾಡೋದಕ್ಕೆ ಬಳಸಲಾಗ್ತಿತ್ತು. ಆದರೆ ಫಿಲಿಪ್ಸ್ ನ ಈ ಒಂದು ಬಿಸಿನೆಸ್ ಕೂಡ ವಿಶೇಷವಾಗಿ ಹೆಚ್ಚು ಸಮಯದವರೆಗೂನು ಯಶಸ್ವಿಯಾಗಿ ನಡೆಯಲಿಲ್ಲ. ಇದರ ನಂತರ ಕಂಪನಿ ಹೊಸ ಕಾರ್ಖಾನೆಯೊಂದನ್ನ ಶುರು ಮಾಡುತ್ತೆ. ಅಲ್ಲಿ ವಿವಿಧ ರೀತಿಯ ಆರೋಗ್ಯ ರಕ್ಷಣಾ ವಸ್ತುಗಳನ್ನ ತಯಾರು ಮಾಡೋದಕ್ಕೆ ಮತ್ತು ಸಂಶೋಧನೆಯನ್ನ ನಡೆಸ್ತಾ ಇತ್ತು. ಮತ್ತೆ ವಿಭಿನ್ನ ತರಹದ ರೋಗಿಗಳಿಗೆ ಹಲವು ಆರೋಗ್ಯ ರಕ್ಷಣಾ ಸಾಧನೆಗಳನ್ನ ಇವರು ತಮ್ಮದೇ ಶೈಲಿಯಲ್ಲಿ ಡಿಸೈನ್ ಮಾಡಿ ಹೊರತರುತ್ತಾರೆ. ಫಿಲಿಪ್ಸ್ ತನ್ನ ಈ ಒಂದು ಕಾರ್ಖಾನೆಗೆ ಫಿಲಿಪ್ಸ್ ಹೆಲ್ತ್ ಕೇರ್ ಇನ್ನೋವೇಷನ್ ಸೆಂಟರ್ ಅಂತ ಹೆಸರಿಡುತ್ತಾರೆ.

ನೀವು ಒಂದು ವಿಷಯವನ್ನ ನೆನಪಲ್ಲಿ ಇಟ್ಕೋಬೇಕು. ಅದೇನಪ್ಪಾ ಅಂದ್ರೆ ಇವತ್ತು ಈ ಕ್ಷೇತ್ರದಲ್ಲಿ Philips ಸಂಸ್ಥೆ Samsung ಮತ್ತು LG ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ಕಂಪನಿಗಳಿಗಿಂತ ಹೆಚ್ಚು ಮುಂದಿದೆ. ಇವತ್ತು ಶುಗರ್ ಟೆಸ್ಟ್ ಗಳ ಸಾಧನೆಗಳಿಂದ ಹಿಡಿದು MR ಆರ್ ಯಂತ್ರಗಳವರೆಗೂನು ಈ Philips ಕಂಪನಿಯ ಉತ್ಪನ್ನಗಳು ಎಲ್ಲಾ ಕಡೆ ದಟ್ಟವಾಗಿ ಲಭ್ಯ ಇದ್ದಾವೆ. ಈ ಒಂದು ಗುಣಮಟ್ಟದ ಆವಿಷ್ಕಾರಗಳಿಂದಾಗಿ ಇವತ್ತಿಗೂನು Philips ಅನ್ನ ಜಗತ್ತಿನಾದ್ಯಂತ ಪ್ರಶಂಸೆ ಮಾಡಲಾಗುತ್ತೆ. ಈ ಹೊಸ ವ್ಯವಹಾರದ ಜೊತೆ ಫಿಲಿಪ್ಸ್ ತನ್ನ ಮೊದಲ ಹೋಂ್ ವಿಡಿಯೋ ಕ್ಯಾಸೆಟ್ ರೆಕಾರ್ಡರ್ ಆದಂತ N500 ವನ್ನ ತಯಾರು ಮಾಡ್ತು. ಇದರಲ್ಲಿ ಯಾವುದೇ ಹಾಡಿನ ದೃಶ್ಯವನ್ನ 30 ನಿಮಿಷಗಳಿಂದ 45 ನಿಮಿಷದವರೆಗೂನು ರೆಕಾರ್ಡಿಂಗ್ ಮಾಡಬಹುದಾದಂತ ಅನುಕೂಲತೆ ಇತ್ತು. ನಂತರ sonಿಯ ಬೆeಟಾಮ್ಯಾಕ್ಸ್ ಮತ್ತು ವಿಎಚ್ಎಸ್ ನಿಂದ ಸೂಕ್ತ ಕಾಂಪಿಟೇಷನ್ ಸಿಕ್ಕ ನಂತರ ಕೂಡ ಫಲಿಪ್ಸ್ ತನ್ನ N700 ವನ್ನ ಬಿಡುಗಡೆ ಮಾಡುತ್ತೆ. ಇದು ಎರಡು ಗಂಟೆವರೆಗೂ ವಿಡಿಯೋ ರೆಕಾರ್ಡಿಂಗ್ ಅನ್ನ ಮಾಡಬಹುದಾದಂತ ಕೆಪ್ಯಾಸಿಟಿಯನ್ನ ಹೊಂದಿತ್ತು ಆದರೆ ಕ್ರಮೇಣ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಕೂಡ ಕಡಿಮೆಯಾಗುದಕ್ಕೆ ಶುರುವಾಯಿತು. ಈ ಎಲ್ಲಾ ವ್ಯವಹಾರಗಳನ್ನು ಕೂಡ ನಡೆಸುವದಕ್ಕೆ ಫಿಲಿಪ್ಸ್ ಅನೇಕ ಕಡೆಗಳಿಂದ ಹೆಚ್ಚಿನ ಸಾಲವನ್ನ ತಗೊಂಡಿತ್ತು. ಮತ್ತೆ ಅದರ ಎಲೆಕ್ಟ್ರಾನಿಕ್ ಟೈಪ್ ರೆಕಾರ್ಡ್ ಗಳಾದಂತಹ ಅನೇಕ ಬಿಸಿನೆಸ್ ಗಳು ಕೂಡ ಕೇವಲ ಸೀಮಿತ ಸಮಯದವರೆಗೂನು ಮಾತ್ರ ನಡೆದವು. ಇನ್ನು ಅದರ ಸೆಮಿಕಂಡಕ್ಟರ್ಗಳ ವ್ಯವಹಾರವಂತು ಸಂಪೂರ್ಣವಾಗಿ ವಿಫಲ ಆಗಿತ್ತು. ಇದರೊಂದಿಗೆ ಈಕಡೆ ಫಿಲಿಪ್ ಸಂಸ್ಥೆ ಮೇಲಿನ ಸಾಲದ ಬಡ್ಡಿ ಕೂಡ ಹೆಚ್ಚಾಗ್ತಾನೆ ಇತ್ತು. ಆದ್ದರಿಂದ ಅದಕ್ಕೆ ಈಗ ಆ ಸಾಲದ ಬಾಪ್ತನ ತೀರಿಸುವದಕ್ಕೆ ತನ್ನ ಎಲ್ಲಾ ತರದ ಬಿಸಿನೆಸ್ ಗಳನ್ನ ಹೋದಷ್ಟ ಲಾಭದ ಬೆಲೆಗೆ ಮಾರಾಟ ಮಾಡದ ಹೊರತು ಬೇರೆ ದಾರಿ ಇರಲಿಲ್ಲ.

ಈ ಹೊತ್ತಿಗೆ ಫಿಲಿಪ್ಸ್ ನ ಕೇವಲ ಎರಡು ವ್ಯವಹಾರಗಳು ಮಾತ್ರ ಉತ್ತಮವಾಗಿ ನಡೀತಾ ಇದ್ವು. ಒಂದು ಅದರ ಲೈಟಿಂಗ್ ಬಿಸಿನೆಸ್ ಮತ್ತು ಇನ್ನೊಂದು ಆರೋಗ್ಯ ರಕ್ಷಣಾ ಉಪಕರಣಗಳ ವ್ಯವಹಾರ. ಆದ್ದರಿಂದ ಫಿಲಿಪ್ಸ್ ಈ ಎರಡು ಬಿಸಿನೆಸ್ ಗಳನ್ನ ತನ್ನ ಬಳಿ ಇಟ್ಟುಕೊಂಡು ಅದರ ಉಳಿದಂತ ಎಲ್ಲಾ ಬಿಸಿನೆಸ್ ಅನ್ನು ಕೂಡ ಇತರ ಕಂಪನಿಗಳಿಗೆ ಮಾರಾಟ ಮಾಡ್ತು. ಮೊದಲನೆಯದಾಗಿ ಅದು 2006 ರಲ್ಲಿ ತನ್ನ ಸೆಮಿಕಂಡಕ್ಟರ್ ವ್ಯವಹಾರವನ್ನ ಎನ್ ಎಕ್ಸ್ಪಿ ಎಂಬ ಸ್ವತಂತ್ರ ಕಂಪನಿಯೊಂದಕ್ಕೆ ಮಾರಾಟ ಮಾಡ್ತು. ಎರಡನೆಯದಾಗಿ 2011 ರಲ್ಲಿ ಫಿಲಿಪ್ಸ್ ಹಾಂಕಾಂಗ್ ಮೂಲದ ಟಿಪಿವಿ ಟೆಕ್ನಾಲಜಿಯೊಂದಿಗೆ ಸೇರಿ ನೆದರ್ಲ್ಯಾಂಡ್ ನಲ್ಲಿ ಟಿವಿಗಳ ಉತ್ಪಾದನೆಗೆ ಜಂಟಿ ಉದ್ಯಮವನ್ನ ಅಂದ್ರೆ ಜಾಂಟ್ ವೆಂಚರ್ ಅನ್ನ ಶುರು ಮಾಡ್ತಾರೆ. ಅದರ ಹೆಸರು ಟಿಪಿ ವಿಷನ್ ಇದರಲ್ಲಿ ಫಿಲಿಪ್ಸ್ 30% ಪಾಲನ್ನ ಹೊಂದಿತ್ತು ಮತ್ತೆ ಟಿಪಿವಿ ಟೆಕ್ನಾಲಜಿ 70% ಪಾಲನ್ನ ಹೊಂದಿತ್ತು. 2014 ರಲ್ಲಿ ಫಿಲಿಪ್ಸ್ ತನ್ನ ಒಡತನದಲ್ಲಿ ಇದ್ದಂತಹ ಆ 30% ಪಾಲನ್ನು ಕೂಡ ಟಿಪಿವಿ ಟೆಕ್ನಾಲಜಿಗೆನೆ ಮಾರಾಟ ಮಾಡುತ್ತೆ. ಇದರಿಂದಾಗಿ ಅದರ ಟೆಲಿವಿಷನ್ನ ಸಂಪೂರ್ಣ ವ್ಯವಹಾರ ಟಿಪಿವಿ ಟೆಕ್ನಾಲಜಿ ಅವರದ್ದೇ ಆಯ್ತು. ಇನ್ನು 2013 ರಲ್ಲಿ ಫಿಲಿಪ್ಸ್ ತನ್ನ ಆಡಿಯೋ ವಿಡಿಯೋ ಬಿಸಿನೆಸ್ ಅನ್ನು ಕೂಡ ಜಪಾನ್ ಕಂಪನಿ ಆದಂತ ಪುನಗೆ 202 ಮಿಲಿಯನ್ ಡಾಲರ್ ಗೆ ಮಾರಾಟ ಮಾಡುತ್ತೆ. ಇದರ ಜೊತೆಗೆ ಮುಂದಿನ ಐದು ವರ್ಷದವರೆಗೂನು ಜಪಾನಿನ ಕಂಪನಿ ಫಿಲಿಪ್ಸ್ ಸಂಸ್ಥೆಯ ಹೆಸರಲ್ಲಿ ಅದರ ಉತ್ಪನ್ನಗಳನ್ನ ಮಾರಾಟ ಮಾಡಬೇಕು ಎಂಬ ಒಪ್ಪಂದವನ್ನ ಮಾಡಿಕೊಳ್ಳಾಯಿತು. ಹಾಗೂ 2018ರಲ್ಲಿ ಫಿಲಿಪ್ಸ್ ತನ್ನ ಲೈಟಿಂಗ್ ಬಿಸಿನೆಸ್ ನ ಅದರ ಗೃಹೋಪಯೋಗಿ ಉಪಕರಣಗಳಿಂದ ಪ್ರತ್ಯೇಕಗೊಳಿಸಿ ಫಿಲಿಪ್ಸ್ ಎಲೆಕ್ಟ್ರಾನಿಕ್ಸ್ ಇಂದ ಬದಲಾಯಿಸಿ ಸಿಗ್ನಿಫೈ ಎನ್ವಿ ಅಂತ ಚೇಂಜ್ ಮಾಡುತ್ತೆ. ಇದರಲ್ಲಿಯೇ ಇವತ್ತಿಗೂ ಕೂಡ ಅದರ ಎಲ್ಲಾ ರೀತಿಯ ಬಲ್ಬ್ಗಳನ್ನು ಕೂಡ ತಯಾರು ಮಾಡಲಾಗುತ್ತೆ.

ಇದಾಗಿ ಈಚೆಗೆ ಅಂದ್ರೆ 2021 ರಲ್ಲಿ ಫಿಲಿಪ್ಸ್ ತನ್ನ ಗೃಹೋಪಯೋಗಿ ಉಪಕರಣಗಳ ವ್ಯವಹಾರವನ್ನು ಕೂಡ ಪೂರ್ವ ಏಷ್ಯಾದ ಕಂಪನಿ ಆದಂತ ಹಿಲ್ ಹೌಸ್ ಗೆ ಮಾರಾಟ ಮಾಡ್ತು. ಇದರಿಂದ ಫಿಲಿಪ್ಸ್ ಡೊಮೆಸ್ಟಿಕ್ ಹೆಸರು ಬದಲಾಗಿ ವರ್ಸೋನಿಂದ ಚೇಂಜ್ ಆಯ್ತು. ಈ ಫಿಲಿಪ್ಸ್ ಕಂಪನಿ ಹಿಲ್ ಹೌಸ್ ಗೆ ತನ್ನ ಗೃಹೋಪಯೋಗಿ ಉಪಕರಣಗಳ ವ್ಯವಹಾರವನ್ನ ಮಾರಾಟ ಮಾಡಿದ ನಂತರ ಕೂಡ ಮಾರುಕಟ್ಟೆಯಲ್ಲಿ ಫಲಿಪ್ಸ್ ಬ್ರಾಂಡ್ ನ ಹೆಸರಲ್ಲೇ ಉತ್ಪನ್ನಗಳು ಯಾಕೆ ಇನ್ನೂ ಕೂಡ ಸಿಗತಿವೆ ಅಂತ ನೀವು ಯೋಚಿಸಬಹುದು. ಇದರ ಹಿಂದಿನ ಕಾರಣ ಏನು ಅಂದ್ರೆ ಹಿಲ್ ಹೌಸ್ ಮತ್ತು ಫಿಲಿಪ್ಸ್ ನಡುವೆ ಉಂಟಾದಂತ ಒಂದು ಒಪ್ಪಂದ. ಈ ಒಂದು ಒಪ್ಪಂದದ ಪ್ರಕಾರ 15 ವರ್ಷದವರೆಗೂನು ಹಿಲ್ ಹೌಸ್ ತನ್ನ ಉತ್ಪನ್ನಗಳ ಮೇಲೆ ಫಿಲಿಪ್ಸ್ ಹೆಸರನ್ನ ಬಳಸಬಹುದು ಅಂತ ಇದೆ. ಅಂದ್ರೆ ಮುಂದಿನ 10ರಿಂದ 12 ವರ್ಷದವರೆಗೂ ಮಾತ್ರ ನಿಮಗೆ ಫಲಿಪ್ಸ್ ನ ಲೇಬಲ್ ಇರುವಂತ ಆ ಪ್ರಾಡಕ್ಟ್ ಸಿಗ್ತವೆ ಅಂತ. ಆದರೆ ಅದರ ನಂತರ ನಿಮಗೆ ಫಿಲಿಪ್ಸ್ ನ ಎಲೆಕ್ಟ್ರಾನಿಕ್ ಉತ್ಪನ್ನಗಳು ನೋಡೋದಕ್ಕೆ ಸಿಗದೆ ಹೋಗಬಹುದು. ಪ್ರೆಸೆಂಟ್ ಈಗ ಈ ಒಂದು ಕಂಪನಿ ಕೇವಲ ವೈದ್ಯಕೀಯ ಉಪಕರಣಗಳ ವ್ಯವಹಾರದ ಮೇಲೆ ಮಾತ್ರ ಅವಲಂಬಿತವಾಗಿದೆ. ಆದರೆ ಈ ಒಂದು ಬಿಸಿನೆಸ್ ಅಲ್ಲೂ ಕೂಡ ಫಿಲಿಪ್ಸ್ ಗೆ ಈಗ ಹೆಚ್ಚಿನ ಲಾಭ ಏನು ಸಿಗತಿಲ್ಲ. ಇದು ನೇರವಾಗಿ ಅವರ ಶೇರುಗಳ ಮೇಲೆ ಪರಿಣಾಮವನ್ನ ಬೀರ್ತಾ ಇದೆ. ಆದರೆ 2020ರ ವರ್ಷದಲ್ಲಿ ಮಾತ್ರ ಅದಕ್ಕೆ ಲಾಭ ಉಂಟಾಗಿತ್ತು. ಅದಕ್ಕೆ ಕಾರಣ ಏನು ಅಂದ್ರೆ ಆ ಒಂದು ಸಮಯದಲ್ಲಿ ಜಗತ್ತಿನ ಅದ್ಯಂತ ಕೋವಿಡ್ ತನ್ನ ಭೀಕರ ಹಾವಳಿಯನ್ನ ಸೃಷ್ಟಿ ಮಾಡಿತ್ತು. ಹೀಗಾಗಿ ಆ ಒಂದು ಸಮಯದಲ್ಲಿ ಇವರ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments