ಬೆಂಗಳೂರು ಮಾತ್ರನ ಐಟಿಬಿಟಿ ಅಂದ್ರೆ ಎಲ್ಲವೂ ರಾಜಧಾನಿಯಲ್ಲೇ ಇರಬೇಕಾ ಈ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಈಗ ತನ್ನ ಕೆಲಸದ ಮೂಲಕವೇ ಉತ್ತರ ನೀಡುತ್ತಿದೆ ಬಿಯಾಂಡ್ ಬೆಂಗಳೂರು ಅನ್ನೋ ಮಹತ್ವಾಕಾಂಕ್ಷಿ ಯೋಜನೆಗೆ ಈಗ ನಿಜವಾದ ಶಕ್ತಿ ಬಂದಿದ್ದು ಕರಾವಳಿ ನಗರಿ ಮಂಗಳೂರನ್ನ ರಾಜ್ಯದ ಮುಂದಿನ ಟೆಕ್ ಹಬ್ಬಾಗಿ ರೂಪಿಸಲು ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ ಸುಮಾರು 135 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಟೆಕ್ ಪಾರ್ಕ್ ನಿರ್ಮಿಸಲು ಸರ್ಕಾರ ಮುಂದಾಗಿದ್ದು ಇದರಿಂದ ಬರೊಬ್ಬರಿ 11000ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಅದಲ್ಲದೆ 11 ಸಂಸ್ಥೆಗಳಿಗೆ ರಾಜ್ಯದಲ್ಲಿ ಹೂಡಿಕೆಗೆ ಗ್ರೀನ್ ಸಿಗ್ನಲ್ ನೀಡಿದ್ದು ಸುಮಾರುಒ 9000 ಉದ್ಯೋಗಗಳು ಸೃಷ್ಟಿಯಾಗಲಿವೆ. ಹಾಗಾದರೆ ಎಲ್ಲಿದೆ ಈ ಟೆಕ್ ಪಾರ್ಕ್ ಇದರ ವಿಶೇಷತೆಗಳೇನು ರಾಜ್ಯದ ಬೇರೆ ಬೇರೆ ಕಡೆ ಎಲ್ಲೆಲ್ಲಿ ಹೂಡಿಕೆ ಆಗುತ್ತದೆ ಎಂಬುದನ್ನ ನೋಡೋಣ ಬನ್ನಿ ಹೌದು ರಾಜ್ಯದ ಟೆಕ್ ಬೆಳವಣಿಗೆಯನ್ನ ರಾಜಧಾನಿ ಆಚೆಗೂ ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ ಬಿಯಾಂಡ್ ಬೆಂಗಳೂರು ಉಪಕ್ರಮದ ಅಡಿಯಲ್ಲಿ ಮಂಗಳೂರಿನಲ್ಲಿ ಟೆಕ್ ಪಾರ್ಕನ್ನ ನಿರ್ಮಿಸಲು ಸಾರ್ವಜನಿಕವಾಗಿ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಬಿಡ್ಗಳನ್ನ ಆಹ್ವಾನಿಸಿದೆ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ಅಂದರೆ ಕಿಯೋನಿಕ್ಸ್ ಈ ಯೋಜನೆಯ ಟೆಂಡರ್ ಅನ್ನ ಆಹ್ವಾನಿಸಿದ್ದು ಡಿಸೆಂಬರ್ನೊಳಗೆ ಟೆಂಡರ್ ಪ್ರಕ್ರಿಯೆ ಫೈನಲ್ ಆಗುವ ನಿರೀಕ್ಷೆ ಇದೆ.
ಈ ಯೋಜನೆಯನ್ನ ವಿನ್ಯಾಸ ನಿರ್ಮಾಣ ಹಣಕಾಸು ಕಾರ್ಯಾಚರಣೆ ಮತ್ತು ವರ್ಗಾವಣೆ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿದೆ ಇದರಿಂದ 11000 ಉದ್ಯೋಗಗಳು ಸೃಷ್ಟಿಯಾಗಲಿ ದ್ದು ಮಂಗಳೂರು ಕರ್ನಾಟಕದ ಮತ್ತೊಂದು ಟೆಕ್ ಸಿಟಿ ಆಗಲಿದೆ ಇದರ ಜೊತೆ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಹೂಡಿಕೆ ಮಾಡಲು 11 ಕಂಪನಿಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಇದು ಸಾಮಾನ್ಯ ಟೆಕ್ ಪಾರ್ಕ್ ಅಲ್ಲವೇ ಅಲ್ಲ ಗ್ರೇಡ್ ಎ ಕ್ಯಾಟಗರಿಯ ಆಫೀಸ್ ವರ್ಕ್ ಸ್ಪೇಸ್ ಉದ್ದೇಶಿತ ಟೆಕ್ ಪಾರ್ಕ್ಗಾಗಿ ಮಂಗಳೂರಿನ ಡೇರಬೈಲ್ನಲ್ಲಿರುವ ಬ್ಲೂಹೇರಿ ಹಿಲ್ಸ್ ರಸ್ತೆಯ ಬಳಿ 3.28 85 ಎಕರೆ ಜಾಗವನ್ನ ಗುರುತಿಸಲಾಗಿದೆ ಈ ಸ್ಥಳವು ರಾಷ್ಟ್ರೀಯ ಹೆದ್ದಾರಿ 66ರಿಂದ ಕೇವಲ ಒಂದು ಕಿಲೋಮೀಟ ಗಿಂತಲೂ ಕಮ್ಮಿ ದೂರದಲ್ಲಿದೆ ಇದು ಅತ್ಯಂತ ಆಯ ಕಠಿಣ ಸ್ಥಳವಾಗಿದ್ದು ಈಗಾಗಲೇ ಇಲ್ಲಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಕ್ಯಾಂಪಸ್ ಕೂಡ ಇದೆ ಇನ್ನು ಇಲ್ಲಿ ನಿರ್ಮಾಣವಾಗಲಿರುವುದು ಸಾಮಾನ್ಯ ಟೆಕ್ ಪಾರ್ಕ್ ಅಲ್ಲ ಬದಲಾಗಿ ಗ್ರೇಡ್ ಎ ಕ್ಯಾಟಗರಿಯ ಆಫೀಸ್ ವರ್ಕ್ ಸ್ಪೇಸ್ ಸಿಗಲಿದೆ ಇಲ್ಲಿ ಮೀಟಿಂಗ್ ರೂಮ್ಗಳು ಕಚೇರಿಗಳು ಮನರಂಜನ ವಲಯಗಳು ಮತ್ತು ಕಾನ್ಫರೆನ್ಸ್ ಹಾಲ್ಗಳಂತಹ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ ಪಾರ್ಕಿಂಗ್ ಸೇರಿ ಒಟ್ಟು ನಿರ್ಮಾಣ ಪ್ರದೇಶ ಶೇಕಡ 75ರಷ್ಟು ಭಾಗವನ್ನ ವಾಣಿಜ್ಯ ಕಚೇರಿಗಳಿಗಾಗಿ ಮೀಸಲಿಡಲಾಗುವುದು ಉಳಿದ ಶೇಕಡ 25ರಷ್ಟು ಜಾಗದಲ್ಲಿ ಫುಡ್ ಕೋರ್ಟ್ಗಳು ರಿಟೇಲ್ ಅಂಗಡಿಗಳು ಹೋಟೆಲ್ಗಳು ಮತ್ತು ಸರ್ವಿಸ್ ಅಪಾರ್ಟ್ಮೆಂಟ್ ಗಳಂತಹ ಮೂಲ ಸೌಕರ್ಯಗಳನ್ನ ನಿರ್ಮಿಸಲಾಗುವುದು.
ಟೆಂಡರ್ ದಾಖಲೆಗಳ ಪ್ರಕಾರ ಎಫ್ಎಆರ್ ಅಡಿಯಲ್ಲಿ ಸುಮಾರು 352156 ಚದುರಡಿ ನಿರ್ಮಾಣಕ್ಕೆ ಅವಕಾಶವಿದೆ ಅಲ್ಲದೆ ಪ್ರೀಮಿಯಂ ಎಫ್ಎಆರ್ ಮತ್ತು ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳು ಅಂದರೆ ಟಿಡಿಆರ್ ಮೂಲಕ ಅದನ್ನ ಇನ್ನಷ್ಟು ಹೆಚ್ಚಿಸಲು ಡೆವಲಪರ್ಗಳಿಗೆ ಅವಕಾಶ ನೀಡಲಾಗಿದೆ ಕನಿಷ್ಠ ಅಭಿವೃದ್ಧಿ ಪ್ರದೇಶದ ನಿರ್ಮಾಣಕ್ಕೆ ಸುಮಾರು ಮೂರು ವರ್ಷಗಳು ಆಗಬಹುದು ಎಂದು ಅಂದಾಜಿಸಲಾಗಿದೆ ಈ ಬಗ್ಗೆ ಮಾತನಾಡಿರುವ ಐಟಿಬಿಟಿ ಸಚಿವ ಪ್ರಿಯಂ ಕರ್ಗೆ ರಾಜ್ಯಾದ್ಯಂತ ದೃಢವಾದ ನಾವೀನ್ಯತ ಪರಿಸರ ವ್ಯವಸ್ಥೆಯನ್ನ ನಿರ್ಮಿಸುವ ಸರ್ಕಾರದ ಬದ್ಧತೆಯನ್ನ ಈ ಯೋಜನೆ ತೋರಿಸುತ್ತದೆ ಮಂಗಳೂರಿನ ಬ್ಲೂಬೆರಿ ಹಿಲ್ಸ್ ನಲ್ಲಿ ಹೊಸ ಟೆಕ್ ಪಾರ್ಕ್ ನಿರ್ಮಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಇದು 11000ಕ್ಕೂ ಹೆಚ್ಚು ಉದ್ಯೋಗ ಗಳನ್ನ ಸೃಷ್ಟಿಸಲಿದೆ ಎಂದಿದ್ದಾರೆ ಲೀಪ್ ಅಡಿಯಲ್ಲಿ ಮಂಗಳೂರು ಟೆಕ್ ಹಬ್ ಕೈಗಾರಿಕ ಕೇಂದ್ರ ಮಾತ್ರವಲ್ಲ ಜ್ಞಾನದ ಕೇಂದ್ರ ಇನ್ನು ಮಂಗಳೂರು ಈಗಾಗಲೇ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಅಂದರೆ ಜಿಎಸ್ಡಿಪಿಗೆ ಸುಮಾರು ಶೇಕಡ 5.5ರಷ್ಟು ರಷ್ಟು ಕೊಡುಗೆ ನೀಡುತ್ತಿದೆ ಇದು ಐಟಿ ಫಿನ್ಟೆಕ್ ಮತ್ತು ಸಾಗರ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಬಲವಾಗಿ ಬೆಳೆಯುತ್ತಿರುವ ಕೇಂದ್ರವಾಗಿದೆ ಸರ್ಕಾರದ ಲೋಕಲ್ ಎಕನಾಮಿಕ್ ಆಕ್ಸಿಲರೇಷನ್ ಪ್ರೋಗ್ರಾಮ್ ಅಂದ್ರೆ ಲೀಪ್ ಅಡಿಯಲ್ಲಿ ಈ ಟೆಕ್ ಪಾರ್ಕ್ ಮಂಗಳೂರನ್ನ ಮುಂದಿನ ಉನ್ನತ ಬೆಳವಣಿಗೆಯ ಕಾರಿಡರ್ ಆಗಿ ಪರಿವರ್ತಿಸಲಿದೆ ಎಂದು ಸರ್ಕಾರ ವಿಶ್ವಾಸವನ್ನ ವ್ಯಕ್ತಪಡಿಸಿದೆ.
ಮಂಗಳೂರು ಕೇವಲ ಕೈಗಾರಿಕ ಕೇಂದ್ರವಲ್ಲ ಜ್ಞಾನದ ಕೇಂದ್ರವು ಹೌದು ಇಲ್ಲಿ ಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಮಣಿಪಾಲದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕಸ್ತೂರಿಬಾ ಮೆಡಿಕಲ್ ಕಾಲೇಜ್ನಂತಹ ಉನ್ನತ ಶಿಕ್ಷಣ ಸಂಸ್ಥೆಗಳಿವೆ ಇದು ನುರಿತ ಮಾನವ ಸಂಪನ್ಮೂಲವನ್ನ ಒದಗಿಸಲು ಸಹಕರಿಯಾಗಿದೆ ಪ್ರಮುಖ ಬಂದರು ತೈಲ ಸಂಸ್ಕರಣಗಾರ ಐದು ರಾಷ್ಟ್ರೀಯ ಹೆದ್ದಾರಿಗಳು ಎರಡು ರೈಲು ನಿಲ್ದಾಣಗಳು ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಂತಹ ಅತ್ಯುತ್ತಮ ಸಂಪರ್ಕ ಜಾಲವನ್ನ ಮಂಗಳೂರು ಹೊಂದಿದೆ ವಿಮಾನ ನಿಲ್ದಾಣದ ರನ್ವೇ ವಿಸ್ತರಣೆ ಉದ್ದೇಶಿತ ರಿಂಗ್ ರೋಡ್ ಮತ್ತು ಬೆಂಗಳೂರು ಮಂಗಳೂರು ಎಕ್ಸ್ಪ್ರೆಸ್ ವೇ ಯೋಜನೆಗಳಿಂದಾಗಿ ಈ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ ಈ ಎಲ್ಲಾ ಅಂಶಗಳು ಮಂಗಳೂರು ಟೆಕ್ ಪಾರ್ಕ್ಗೆ ಸೂಕ್ತ ಸ್ಥಳವನ್ನಾಗಿಸಿವೆ ಕರ್ನಾಟಕದಾದ್ಯಂತ 11 ಸಂಸ್ಥೆಗಳ ಹೂಡಿಕೆ 27000 ಕೋಟಿ ರೂಪಾಯಿ 9ಸ000 ಜಾಬ್ ಇದು ಮಂಗಳೂರಿನ ಟೆಕ್ ಪಾರ್ಕ್ ಕಥೆ ಆದರೆ ಈಗ ಮತ್ತೊಂದು ಕಥೆ ನೋಡೋಣ ಇತ್ತೀಚಿಗೆ ಕರ್ನಾಟಕ ಸರ್ಕಾರ 11 ಸಂಸ್ಥೆಗಳಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಿದೆ.
ಬರೋಬ್ಬರಿ 27000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಯಾಗಲಿದ್ದು ಸುಮಾರು 9ಸ000 ಉದ್ಯೋಗಗಳು ಸೃಷ್ಟಿಯಾಗಲಿವೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಎಸ್ಎಫ್ಎಕ್ಸ್ ಇಂಡಿಯಾ ಬರೋಬ್ಬರಿ 9298 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು 806 ಉದ್ಯೋಗಗಳು ಸೃಷ್ಟಿಯಾಗಲಿವೆ ಕ್ಯುಪಿಐಎಐ ಇಂಡಿಯಾ 1136 ಕೋಟಿ ರೂಪಾ ಹೂಡಿಕೆ ಮಾಡಿ 200 ಜಾಬ್ ಕ್ರಿಯೇಟ್ ಮಾಡಲಿದೆ ಬಳ್ಳಾರಿ ಜಿಲ್ಲೆಯಲ್ಲಿ ಜೆಎಸ್ಡಬಲ್ ಅನ್ನೋ ಎರಡು ಸಂಸ್ಥೆಗಳು 8402 ಕೋಟಿ ರೂಪಾಯಿಯನ್ನ ಹೂಡಿಕೆ ಮಾಡುತ್ತಿದ್ದು ಇದರಿಂದ 1171 ಉದ್ಯೋಗಗಳು ಸೃಷ್ಟಿಯಾಗಲಿವೆ ವಿಜಯಪುರದಲ್ಲಿರಿಲಯನ್ಸ್ ಕಂಪನಿಯು 1622 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು 1200 ಜಾಬ್ ಕ್ರಿಯೇಟ್ ಆಗಲಿವೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಸ್ಪೈಡ್ನರ್ ಎಲೆಕ್ಟ್ರಿಕಲ್ ಟೊಯಟೋ ಇಂಡಸ್ಟ್ರೀಸ್ ತೇಜಸ್ ನೆಟ್ವರ್ಕ್ ಕಂಪನಿ 3392 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು. 2412 ಉದ್ಯೋಗಗಳು ಸೃಷ್ಟಿಯಾಗಲಿವೆ ಚಾಮರಾಜನಗರದಲ್ಲಿ ವಾಯು ಅಸೆಟ್ಸ್ 1251 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು 1912 ಜಾಬ್ ಸೃಷ್ಟಿಯಾಗುತ್ತದೆ ಹಾವೇರಿಯಲ್ಲಿ ಗ್ರೇಸಿ 1386 ಕೋಟಿ ರೂಪಾಯಿ ಹೂಡಿದ್ದು 203 ಉದ್ಯೋಗಗಳು ಸೃಷ್ಟಿಯಾಗಲಿವೆ ಶಿವಮೊಗ್ಗದಲ್ಲಿ ಹೆಚ್ಎಸ್ಎಸ್ ಟೆಕ್ಟೈಲ್ಸ್ 740 ಕೋಟಿ ರೂಪಾಯಿ ಇನ್ವೆಸ್ಟ್ ಮಾಡಿದ್ದು 800 ಕೆಲಸಗಳು ಸೃಷ್ಟಿಯಾಗಲಿವೆ ಒಟ್ಟಿನಲ್ಲಿ ಈ ಎಲ್ಲ ಯೋಜನೆಗಳು ರಾಜ್ಯದಲ್ಲಿ ಅಭಿವೃದ್ಧಿ ಪರ್ವವನ್ನ ಶುರು ಮಾಡಲಿದ್ದು ಬೆಂಗಳೂರು ಹೊರತುಪಡಿಸಿದ ಪ್ರಗತಿಗೆ ನಾಂದಿಯಾಡಿದಂತಾಗಿದೆ. ಮಂಗಳೂರು ಟೆಕ್ ಪಾರ್ಕ್ ಬೇರೆ ಬೇರೆ ಜಿಲ್ಲೆಗಳಲ್ಲಿನ ಬೃಹತ್ ಹೂಡಿಕೆಯಿಂದ 20ಸಾಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.


