ಉಡುಪಿ ಜನತೆ ಕನಸು ನನಸಾಗುತ್ತಾ ಕೃಷ್ಣನ ನಾಡಿಗೆ ಬರುತ್ತ ಏರ್ಪೋರ್ಟ್ ಮೋದಿ ಓಕೆ ಅಂದ್ರೆ ವಿಮಾನ ನಿಲ್ದಾಣ ಫಿಕ್ಸ್ ಧಾರ್ಮಿಕ ಶೈಕ್ಷಣಿಕ ಹಾಗೂ ಪ್ರವಾಸಿ ಕೇಂದ್ರವಾಗಿರುವ ಶ್ರೀಕೃಷ್ಣನ ನಾಡು ಉಡುಪಿಯ ದಶಕಗಳ ಕನಸೊಂದು ಇದೀಗ ಮತ್ತೆ ಚಿಗುರುಕೊಂಡಿದೆ. ಉಡುಪಿ ಜಿಲ್ಲೆಗೊಂದು ಸ್ವಂತ ವಿಮಾನ ನಿಲ್ದಾಣ ಬೇಕೆನ್ನುವ ಬೇಡಿಕೆಗೆ ಈಗ ರೂಪ ಸಿಗುವ ಲಕ್ಷಣಗಳು ಕೂಡ ಗೋಚರಿಸುತ್ತಾ ಇವೆ. ಪಡುಬಿದ್ರೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಿಲ್ಲಾಡಿಳಿತವು ಕೂಡ ರಾಜ್ಯ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆಯನ್ನ ಸಲ್ಲಿಸಿದ್ದು ಈ ಮಹತ್ವಾಕಾಂಕ್ಷಿ ಯೋಜನೆಗೆ ಈಗ ಹೊಸ ಬಲ ಬಂದಿದೆ ಅಲ್ಲದೆ ಪ್ರಧಾನಿ ಮೋದಿಯು ಉಡುಪಿ ಜಿಲ್ಲೆಗೆ ಮೊದಲ ಬಾರಿಗೆ ಭೇಟಿಯನ್ನ ನೀಡ್ತಾ ಇದ್ದಾರೆ ಅವರ ಮುಂದೆಯೂ ಪ್ರಸ್ತಾಪಿಸಲು ಜಿಲ್ಲಾಡಳಿತ ಅಣಿಯಾಗಿದೆ.
ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೋದಿ ತಥಾಸ್ತು ಅಂತಾರ ಇಲ್ವಾ ಅನ್ನೋದನ್ನು ಕೂಡ ಇಡೀ ಉಡುಪಿ ಜನತೆ ಈಗ ಖಾತರದಿಂದ ಕಾಯ್ತಾ ಇದ್ದಾರೆ. ಹಾಗಾದರೆ ಏನಿದು ಯೋಚನೆ? ಇದರ ಮುಂದಿರುವ ಸವಾಲುಗಳು ಏನು? ಇದರಿಂದ ಆಗುವ ಲಾಭವೇನು? ಈ ಬಗ್ಗೆ ಒಂದು ಸಂಪೂರ್ಣ ವರದಿ ಇಲ್ಲಿದೆ. ಶ್ರೀಕೃಷ್ಣನ ನಾಡು ಉಡುಪಿ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ ಶಿಕ್ಷಣ ಬ್ಯಾಂಕಿಂಗ್ ಪ್ರವಾಸೋದ್ಯಮ ಹಾಗೂ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿರುವಂತಹ ಕರಾವಳಿಯ ಪ್ರಮುಖ ಜಿಲ್ಲೆ ಆದರೆ ಇಷ್ಟೆಲ್ಲ ಅಭಿವೃದ್ಧಿ ಹೊಂದಿದ್ರು ಇಲ್ಲಿಗೊಂದು ವಿಮಾನ ನಿಲ್ದಾಣದ ಕೊರತೆ ಎರಡು ದಶಕಗಳಿಂದಲೂ ಕೂಡ ಕಾಡ್ತಾ ಇದೆ. ಇದೀಗ ಆ ಕನಸಿಗೆ ರೆಕ್ಕೆಪುಕ್ಕ ಮೂಡುವ ಸಮಯ ಬಂದಿದೆ. ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಿಸಲು ಜಿಲ್ಲಾಡಳಿತವು ಈಗ ರಾಜ್ಯ ಸರ್ಕಾರದ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಅಂದ್ರೆ ಐಡಿಡಿ ಅಧಿಕೃತ ಪ್ರಸ್ತಾವನೆಯನ್ನ ಸಲ್ಲಿಸಿದೆ. ನವೆಂಬರ್ 28 ಉಡುಪಿಗೆ ಪ್ರಧಾನಿ. ಮೋದಿ ಮುಂದೆ ಪ್ರಸ್ತಾಪಿಸಲು ಸಚ್ಚು. ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಡಿ ಈ ಪ್ರಸ್ತಾವನೆಗೆ ಇನ್ನಷ್ಟು ಬಲ ಬಂದಿದೆ.
ಸಾಮಾನ್ಯ ನಾಗರಿಕರು ವಿಮಾನದಲ್ಲಿ ಪ್ರಯಾಣಿಸಬೇಕು ಎನ್ನುವ ಆಶಯದ ಈ ಯೋಜನೆಯ ಎರಡನೇ ಹಂತದಲ್ಲಿ ಪಡುಬಿದ್ರೆ ವಿಮಾನ ನಿಲ್ದಾಣವನ್ನ ಪರಿಗಣಿಸುವಂತೆ ಕೋರಲಾಗಿದೆ. ಇದೇ ನವೆಂಬರ್ 28 ರಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವಂತಹ ಲಕ್ಷ ಕಂಠ ಗೀತ ಗಾಯನ ಹಾಗೂ ಸುವರ್ಣಮಯ ತೀರ್ಥ ಮಂಟಪ ಸಮರ್ಪಣ ಕಾರ್ಯಕ್ರಮಕ್ಕೆ ಆಗಮಿಸಲಿರುವಂತಹ ಪ್ರಧಾನಿ ಮೋದಿಯವರ ಮುಂದೆಯೂ ಕೂಡ ಈ ಬೇಡಿಕೆಯನ್ನ ಮಂಡಿಸಲು ಈಗಾಗಲೇ ಸಿದ್ಧತೆಯನ್ನ ನಡೆಸಲಾಗಿದೆ. ಯೋಜನೆಗೆ ಇದೆ ತಾಂತ್ರಿಕ ಅಡ್ಡಿ. ಇಷ್ಟೆಲ್ಲಾ ಸಿದ್ಧತೆಯ ನಡುವೆ ಈ ಯೋಜನೆಗೆ ಒಂದು ದೊಡ್ಡ ತಾಂತ್ರಿಕ ಅಡ್ಡಿಯು ಇದೆ. ಅದೇನಪ್ಪಾ ಅಂತಂದ್ರೆ ನಿಯಮಗಳ ಪ್ರಕಾರ ಎರಡು ವಿಮಾನ ನಿಲ್ದಾಣಗಳ ನಡುವೆ ಕನಿಷ್ಠ 150 ನಾಟಿಕಲ್ ಮೈಲಿ ಅಂತರವಿರಬೇಕು ಆದರೆ ಮಂಗಳೂರಿನ ಬಜ್ಬೆ ವಿಮಾನ ನಿಲ್ದಾಣಕ್ಕೂ ಪ್ರಸ್ತಾವಿತ ಪಡುಬಿದ್ರಿ ಏರ್ಪೋರ್ಟ್ಗೂ ಇರುವುದು ಕೇವಲ 30 ಕಿಲೋಮೀಟ ಅಂತರ. ಇದೇ ಕಾರಣಕ್ಕೆ ಅನುಮತಿ ಸಿಗುವುದು ಕಷ್ಟ ಎಂಬ ವಾದವು ಕೂಡ ಇದೆ. ಈ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತ ಒಂದು ವಿನೂತರ ಪರಿಹಾರವನ್ನು ಕೂಡ ಮುಂದೆ ಇಟ್ಟಿದೆ.
ಪಡುಬಿದ್ರಿಯನ್ನ ಮಂಗಳೂರಿಗೆ ಪರ್ಯಾಯವಾಗಿ ಟ್ವಿನ್ ಏರ್ಪೋರ್ಟ್ ಅಥವಾ ಮುಂಬೈ ದೆಹಲಿ ಮಾದರಿಯಲ್ಲಿ ಟರ್ಮಿನಲ್ ಟು ಅಂತ ಪರಿಗಣಿಸುವಂತೆ ಮನವೆಯನ್ನ ಮಾಡಲಾಗಿದೆ. ಮಂಗಳೂರಿನಲ್ಲಿ ರನ್ವೇ ವಿಸ್ತರಣೆ ಮಾಡುವುದು ಭೌಗೋಳಿಕವಾಗಿ ಅಸಾಧ್ಯ ಹಾಗೂ ಅತ್ಯಂತ ದುಬಾರಿ ಅನ್ನುವುದನ್ನ ಮನವರಿಕೆ ಮಾಡಿಕೊಳ್ಳುವ ಪ್ರಯತ್ನವು ಕೂಡ ನಡೆತಾ ಇದೆ 935 ಎಕರೆಯಷ್ಟು ವಿಶಾಲವಾದ ಭೂಮಿ 10ಸಾ ಕೋಟಿ ವೆಚ್ಚದಲ್ಲಿ ನಿರ್ಮಾಣ ಈ ಯೋಜನೆಗೆ ಅತ್ಯಂತ ಸಕಾರಾತ್ಮಕ ಅಂಶವೆಂದರೆ ಭೂಮಿಯ ಲಭ್ಯತೆ ಈ ಹಿಂದೆ ಅದಾನಿ ಯುಪಿಸಿಎಲ್ ತನ್ನ ಎರಡನೇ ಹಂತದ ಉಷ್ಣ ವಿದ್ಯುತ್ ಸ್ಥಾವರಕ್ಕಾಗಿ ಸ್ವಾಧೀನ ಪಡಿಸಿಕೊಂಡಿದ್ದ 546 ಎಕರೆ ಭೂಮಿ ಇದೀಗ ಕೆಐಎಡಿಬಿ ಸುಪರ್ದಿಯಲ್ಲಿ ಇದೆ. ಇದರ ಜೊತೆಗೆ ಖಾಸಗಿ ಮತ್ತು ಸರ್ಕಾರಿ ಜಮೀನು ಸೇರಿ ಒಟ್ಟು 935 ಎಕರೆಯಷ್ಟು ವಿಶಾಲವಾದ ಭೂಮಿ ಲಭ್ಯವಿದೆ. ಇದು ಅಂತರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೇಳಿ ಮಾಡಿಸಿದಂತೆ ಇದೆ. ವೆಚ್ಚದ ವಿಚಾರದಲ್ಲೂ ಕೂಡ ಪೊಡುಬಿದ್ರಿ ಪ್ರಸ್ತಾವನೆ ಹೆಚ್ಚು ಆಕರ್ಷಕವಾಗಿದೆ. ಮಂಗಳೂರು ವಿಮಾನ ನಿಲ್ದಾಣದ ರವೆ ವಿಸ್ತರಣೆಗೆ ಲ್ಯಾಂಡ್ ಫಿಲ್ಲಿಂಗ್ ಸೇರಿದಂತೆ ಬರಬ್ಬರಿ 33,000 ಕೋಟಿ ರೂಪಾಯಿ ಅಗತ್ಯವಿದೆ. ಆದರೆ ಪಡುಬಿದ್ರೆಯಲ್ಲಿ ಸುಮಾರು ಕೇವಲ 10ಸಾವ ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ವಿಮಾನ ನಿಲ್ದಾಣ ನಿರ್ಮಿಸಬಹುದು ಅಂತ ಅಂದಾಜಿಸಲಾಗಿದೆ.
ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಮಾತನಾಡಿ ಪಡುಬಿದ್ರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಇದು ಕೇವಲ ಪ್ರಯಾಣಕ್ಕೆ ಸೀಮಿತವಾಗುವುದಿಲ್ಲ ಇಲ್ಲಿಂದ ಹೆಲಿಕ್ ಟ್ಯಾಕ್ಸಿ ಸೇವೆ ಆರಂಭಿಸಿ ಪ್ರವಾಸೋದ್ಯಮವನ್ನು ಕೂಡ ದೊಡ್ಡ ಮಟ್ಟದಲ್ಲಿ ಬೆಳೆಸಬಹುದು ಕೈಗಾರಿಕೆಗಳ ಅಭಿವೃದ್ಧಿ ಉದ್ಯೋಗ ಸೃಷ್ಟಿ ಹಾಗೂ ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಉತ್ತೇಜನ ಸಿಗಲಿದೆ ಇದು ಮಂಗಳೂರಿನ ಜೊತೆಗಿನ ಸ್ಪರ್ಧೆಯಲ್ಲ ಬದಲಾಗಿ ಎರಡು ಜಿಲ್ಲೆಗಳು ಒಟ್ಟಾಗಿ ಅಭಿವೃದ್ಧಿ ಪಥದಲ್ಲಿ ಸಾಗಲು ಪೂರಕವಾಗಲಿದೆ ಅಂತ ಹೇಳಿದ್ರು ಇನ್ನು ಇನ್ನು ಮಾಜಿ ಸಂಸದ ಜಯಪ್ರಕಾಶ್ ಹೆಗಡೆ ಮಾತನಾಡಿ ಈ ಹಿಂದೆ ಸಾಸ್ಥಾನ ಒತ್ತಿನೇಣೆಯಲ್ಲಿ ಏರ್ಪೋರ್ಟ್ ನಿರ್ಮಾಣದ ಬಗ್ಗೆ ಚರ್ಚೆಗಳು ಆಗಿದ್ವು ಆದರೆ ಪೊಡುಬಿದ್ರಿ ಅತ್ಯಂತ ಸೂಕ್ತ ಸ್ಥಳ ಮಂಗಳೂರು ವಿಮಾನ ನಿಲ್ದಾಣಕ್ಕೆ ಏರ್ ಬಸ್ ನಂತಹ ದೊಡ್ಡ ವಿಮಾನಗಳು ಇಳಿಯಲು ಸಾಧ್ಯವಾಗುತಿಲ್ಲ ಹಾಗಾಗಿ ಅದು ಒಂದು ರೀತಿ ಡೊಮೆಸ್ಟಿಕ್ ಏರ್ಪೋರ್ಟ್ ನಂದಿದೆ ಪಡುಬಿದ್ರಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿದರೆ ಇಡೀ ಕರಾವಳಿ ಭಾಗದ ಚಿತ್ರಣವೇ ಬದಲಾಗಲಿದೆ ಅಂತ ಹೇಳಿದ್ರು ಒಟ್ಟನಲ್ಲಿ ದಶಕಗಳ ಬೇಡಿಕೆಯಾಗಿದ್ದ.
ಉಡುಪಿ ವಿಮಾನ ನಿಲ್ದಾಣದ ಕನಸು ಇದೀಗ ಪಡುಬಿದ್ರೆಯ ರೂಪದ ದಲ್ಲಿ ಮತ್ತೆ ಗರಿಗೆದ್ದರಿದೆ ಭೂಮಿಯ ಲಭ್ಯತೆ ಮತ್ತು ಕಡಿಮೆ ವೆಚ್ಚ ಈ ಯೋಜನೆಯ ಪ್ರಮುಖ ಪ್ಲಸ್ ಪಾಯಿಂಟ್ಗಳು ಇನ್ನು ತಾಂತ್ರಿಕ ಅಡೆತಡೆಗಳನ್ನ ನಿವಾರಿಸಿಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಸಿರು ನಿಷಾನೆ ಸಿಕ್ರೆ ಕೃಷ್ಣನಗರಿಯ ಆಗಸದಲ್ಲಿ ವಿಮಾನಗಳು ಹಾರಾಡುವ ದಿನ ದೂರವಿಲ್ಲ ಇದು ಸಾಧ್ಯವಾದರೆ ಉಡುಪಿ ಮಾತ್ರವಲ್ಲದೆ ಇಡೀ ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ಹೊಸ ದಿಕ್ಕು ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ ಪ್ರಧಾನಿ ಮೋದಿಯವರ ಭೇಟಿ ಈ ಯೋಜನೆಗೆ ಯಾವ ರೀತಿಯ ತಿರುವನ್ನ ನೀಡಲಿದೆ ಎಂಬುದನ್ನು ಕೂಡ ಕಾದು ನೋಡಬೇಕು ನಾವು ಈ ವಿಡಿಯೋವನ್ನ ನೀವು ಸಂಪೂರ್ಣವಾಗಿ ನೋಡಿದ್ರೆ ಇಲ್ಲಿದೆ ನಿಮಗೊಂದು ಪ್ರಶ್ನೆ ಉಡುಪಿ ಜಿಲ್ಲೆಯ ಯಾವ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಮನವಿಯನ್ನ ಸಲ್ಲಿಸಲಾಗಿದೆ.


