ತಿಂಗಳಿಗೆ ಬರಿ 593 ನೀವು ಡೆಡಿಕೇಟ್ ಮಾಡಿದ್ರೆ ಸಾಕು ನಿಮ್ಮ ಜೇಬಿನಲ್ಲಿ ಒಂದು ಲಕ್ಷ ರೂಪಾಯಿ ಇರುತ್ತೆ ಈ ಸ್ಕೀಮ್ ಅನ್ನ ಜಾರಿಗೆ ತಂದಿರುವುದು ಬೇರೆ ಇನ್ಯಾವುದೋ ಪ್ಲಾಟ್ಫಾರ್ಮ್ ಅಲ್ಲ sbi ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ sbi ಅಂದ್ರೆ ನಂಬಿಕೆ ಆ ಕಾರಣಕ್ಕಾಗಿ ಈ ಬ್ಯಾಂಕ್ ಹೊರತಂದಿರುವ ಹರ್ ಘರ್ ಲಕ್ಷಾಧಿಪತಿ ಸ್ಕೀಮ್ ನ ಕುರಿತಾಗಿ ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡ್ತೀನಿ ಬರಿ ಒಂದು ಲಕ್ಷ ಮಾತ್ರ ಅಲ್ಲ ಎರಡು ಲಕ್ಷ ಮೂರು ಲಕ್ಷ ನಾಲ್ಕು ಲಕ್ಷ ಹೀಗೆ ನೀವು ಪ್ಲಾನ್ ಮಾಡ್ತಾ ಹೋಗಬಹುದು ತಿಂಗಳಿಗೆ ನೀವು ಎಷ್ಟು ಲಕ್ಷ ಟಾರ್ಗೆಟ್ ಇಟ್ಕೊಂಡಿದ್ದೀರಿ ಅದರ ಮೇಲೆ ಇಂತಿಷ್ಟು ಹಣವನ್ನು ನೀವು ಸೇರಿಸುತ್ತಾ ಹೋಗಬೇಕಾಗುತ್ತೆ ಸೋ ನಿಮ್ಮ ಲಕ್ಷಾಧಿಪತಿ ಆಗುವ ಕನಸನ್ನ ಪೂರೈಸಿಕೊಳ್ಳುವುದು ಹೇಗೆ ಈ ಸ್ಕೀಮ್ ನಲ್ಲಿ ಯಾವೆಲ್ಲಾ ನಿಯಮಗಳಿದ್ದಾವೆ ಒಂದು ವೇಳೆ ನಾನು ಕಟ್ಟೋದಕ್ಕೆ ಆಗ್ಲಿಲ್ಲಪ್ಪ ಅರ್ಧದಲ್ಲೇ ಬಿಟ್ಬಿಟ್ಟೆ ಫೈನ್ ಎಷ್ಟಿರುತ್ತೆ ಈ ಎಲ್ಲದರ ಬಗ್ಗೆ ಡೀಟೇಲ್ ಆಗಿ ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡ್ತೀನಿ ನಮಸ್ಕಾರ ನಾನು ಅಭಿಷೇಕ್ ರಾಮಪ್ಪ 2025ರ ವರ್ಷದ ಮೊದಲ ತಿಂಗಳಲ್ಲೇ sbi ಒಂದು ಸ್ಕೀಮ್ ಅನ್ನ ಅನೌನ್ಸ್ ಮಾಡಿದೆ ಹರ್ ಘರ್ ಲಕ್ಪತಿ ಅನ್ನೋದು ಈ ಸ್ಕೀಮ್ ನ ಹೆಸರು ಸಾಮಾನ್ಯ ವರ್ಗದವರು ಅಥವಾ ತೀರಾ ಕಮ್ಮಿ ದುಡಿಯುವಂತವರು ತಿಂಗಳಿಗೆ ನಾನು 1000ನೋ 2000 ರೂಪಾಯಿನೋ ಹೂಡಿಕೆ ಮಾಡೋದಕ್ಕೂ ಆಗಲ್ಲ ನನ್ನ ಕೈಯಲ್ಲಿ ಯಾವುದೇ ತರ ರಿಸ್ಕ್ ನನಗೆ ಬೇಕಾಗಿಲ್ಲ ನನ್ನ ಹಣ ಬಹಳ ಸೇಫ್ ಆಗಿ ಬೆಳಿಬೇಕು.
ಲಕ್ಷಾಧಿಪತಿ ಆಗಬೇಕು ಅಟ್ಲೀಸ್ಟ್ ಲೈಫ್ ಅಲ್ಲಿ ಒಂದು ಸತಿ ಲಕ್ಷ ನೋಡಬೇಕು ಅನ್ನೋ ತರ ಕನಸು ಕಾಣುವರು ಹಲವರು ಇರ್ತಾರೆ ಹಾಗಂತ ಅವರ ದುಡಿಮೆ ಬಹಳ ಕಡಿಮೆ ಇರುತ್ತೆ ಅಂತ ಅಲ್ಲ ಹೂಡಿಕೆಯಲ್ಲಿನ ಶಿಸ್ತು ಒಂದು ಸವಾಲ್ ಆಗ್ಬಿಟ್ಟಿರುತ್ತೆ ಅವರಿಗೆ ಯಾವುದೋ ಶಾರ್ಟ್ ಕಟ್ ನಲ್ಲಿ ಹಾಕಿಬಿಟ್ಟಿರುತ್ತಾರೆ ಯಾವುದೋ ರಿಸ್ಕಿ ಇನ್ವೆಸ್ಟ್ಮೆಂಟ್ ನಲ್ಲಿ ಹಾಕಿಬಿಟ್ಟಿರುತ್ತೆ ಅವರ ಹಣನ ಕಳೆದುಕೊಂಡು ಬಿಟ್ಟಿರುತ್ತಾರೆ ಸೋ ಆ ತರದ ರಿಸ್ಕ್ ಅನ್ನ ದೂರ ಸರಿಸೋದಕ್ಕೆ sbi ನ ಈ ಸ್ಕೀಮ್ ತುಂಬಾನೇ ಸಹಕಾರಿ ನನಗೆ ಸ್ವಲ್ಪನು ರಿಸ್ಕ್ ಬೇಡ ಅನ್ನೋರು ಮಾತ್ರ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಬೇಕು ಈ ಹರ್ ಘರ್ ಲಕ್ಪತಿ ಅನ್ನೋ ಸ್ಕೀಮ್ ಹೇಗೆ ಕೆಲಸ ಮಾಡುತ್ತೆ ಅನ್ನೋದರ ಡೀಟೇಲ್ಸ್ ಬಗ್ಗೆ ತಿಳ್ಕೊಳ್ತಾ ಹೋಗೋಣ ನನಗೆ ಸ್ವಲ್ಪನು ರಿಸ್ಕ್ ಬೇಡ ಜೀರೋ ರಿಸ್ಕ್ ನಲ್ಲಿ ಹಣ ಬೆಳಿಬೇಕು ಅನ್ನೋ ಕಂಡೀಶನ್ ಅಲ್ಲಿ ಇರೋರು ಮಾತ್ರ ಇಂತಹ ಸ್ಕೀಮ್ ನಲ್ಲಿ ಹಣವನ್ನು ತೊಡಗಿಸಿ ಯಾಕೆ ಅಂದ್ರೆ ರಿಸ್ಕ್ ಇರುವ ಸ್ಕೀಮ್ ಗಳಲ್ಲಿ ಇದಕ್ಕಿಂತ ಹೆಚ್ಚು ದುಡಿಯೋದಕ್ಕೂ ಅವಕಾಶ ಇರುತ್ತೆ ಸೋ ಮೊದಲಿಗೆ ಈ ಸ್ಕೀಮ್ ನ ಬಗ್ಗೆ ತಿಳಿದುಕೊಳ್ಳೋಣ ಇದು ಒಂದು ಆರ್ ಡಿ ಸ್ಕೀಮ್ ರೆಕರಿಂಗ್ ಡೆಪಾಸಿಟ್ ಅಂದ್ರೆ ಪ್ರತಿ ತಿಂಗಳು ಇಂತಿಷ್ಟು ತಾರೀಕಿಗೆ ಇಂತಿಷ್ಟು ಹಣವನ್ನು ನೀವು ಹಾಕ್ತಾ ಹೋಗ್ತೀರಿ.
ಎಸ್ ಐ ಪಿ ಕೂಡ ಒಂದು ರೀತಿ ಆರ್ ಡಿ ನೇ ನೀವು ಪೋಸ್ಟ್ ಆಫೀಸ್ ಆರ್ ಡಿ ಕೇಳೆ ಇರ್ತೀರಿ ಅಲ್ವಾ ಒಂದನೇ ತಾರೀಕು ಪ್ರತಿ ತಿಂಗಳು ನಾನು 500 ಹಾಕೊಂಡು ಹೋಗ್ತೀನಿ 1000 ಹಾಕೊಂಡು ಹೋಗ್ತೀನಿ ಐದು ವರ್ಷ ಆದ್ಮೇಲೆ ನಾನು ಅದನ್ನ ವಿತ್ ಡ್ರಾ ಮಾಡ್ಕೊಳ್ತೀನಿ ಇದೇ ತರದ ಸ್ಕೀಮ್ sbi ಹರ್ಗರ್ ಲಕ್ಪತಿ ಇದು ಒಂದು ರೆಕರಿಂಗ್ ಡೆಪಾಸಿಟ್ ಸ್ಕೀಮ್ ನೀವು ಇದರಲ್ಲಿ ಹೂಡಿಕೆ ಮಾಡಬೇಕು ಅಂದ್ರೆ ಮಿನಿ ಮಿನಿಮಮ್ ಮೂರು ವರ್ಷ ಹೂಡಿಕೆ ಮಾಡಬೇಕಾಗುತ್ತೆ ಮ್ಯಾಕ್ಸಿಮಮ್ ಅಂತ ನೋಡ್ಕೊಂಡ್ರೆ 10 ವರ್ಷದವರೆಗೆ ನೀವು ಹೂಡಿಕೆ ಮಾಡಬಹುದು ನೀವು ಎಷ್ಟು ವರ್ಷದ ಸ್ಕೀಮ್ ಅನ್ನಾದರೂ ಆಯ್ದುಕೊಳ್ಳಿ ಮೂರು ವರ್ಷ ನಾಲ್ಕು ವರ್ಷ ಐದು ವರ್ಷ ಅಥವಾ ಎಂಟು ಹತ್ತು ವರ್ಷ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಿ ನೀವು ಲಕ್ಷವನ್ನು ನೋಡೋದು ನಿಶ್ಚಿತ ಸೋ ನೀವು 10 ವರ್ಷದ ಸ್ಕೀಮ್ ಅನ್ನ ಆಯ್ಕೆ ಮಾಡಿಕೊಂಡರೆ ಕಡಿಮೆ ದುಡ್ಡನ್ನ ಹಾಕ್ತಾ ಹೋದ್ರುನು ಒಂದು ಲಕ್ಷ ರೀಚ್ ಆಗುತ್ತೆ ನೀವು ತಿಂಗಳ ತಿಂಗಳ ಜಾಸ್ತಿ ದುಡ್ಡನ್ನ ಹಾಕಿದ್ರೆ ಎರಡು ಲಕ್ಷ ಮೂರು ಲಕ್ಷ ಐದು ಲಕ್ಷ ಹೀಗೆ ನೀವು ಪ್ಲಾನ್ ಮಾಡಿಕೊಳ್ಳಬಹುದು ಈ ಸ್ಕೀಮಿಗೆ ಯಾರ್ಯಾರು ಸಬ್ಸ್ಕ್ರೈಬ್ ಆಗಬಹುದು ಎಲ್ಲಾ ರೆಸಿಡೆಂಟ್ ಇಂಡಿವಿಜುವಲ್ಸ್ ಆಫ್ ಇಂಡಿಯಾ ಭಾರತೀಯ ಪ್ರಜೆಗಳು ಯಾರೇ ಆದ್ರೂನು ಇಲ್ಲಿ ನೆಲೆಸಿರುವಂತಹ ಭಾರತೀಯ ಪ್ರಜೆಗಳು ಈ ಸ್ಕೀಮ್ ನಲ್ಲಿ ಅಕೌಂಟ್ ಅನ್ನ ಓಪನ್ ಮಾಡೋದಕ್ಕೆ ಸಾಧ್ಯ 10 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮೈನರ್ಸ್ ಕೂಡ ಅಂದ್ರೆ ಸರಿಯಾಗಿ ಸೈನ್ ಮಾಡೋದಕ್ಕೆ ಅವರಿಗೆ ಬರಬೇಕು ಅಂತವರು ಇಂಡಿವಿಜುವಲ್ ಆಗಿ ಈ ಅಕೌಂಟ್ ಅನ್ನ ಓಪನ್ ಮಾಡಬಹುದು ಇಲ್ಲ ಅವರಿಗೆ ಸೈನ್ ಮಾಡೋದಕ್ಕೂ ಬರೋದಿಲ್ಲ ಅನ್ನೋ ತರ ಆದ್ರೆ ಲೀಗಲ್ ಗಾರ್ಡಿಯನ್ ಅವರ ಸಿಗ್ನೇಚರ್ ಅನ್ನ ಬಳಸಿಕೊಂಡು ಮೈನರ್ಸ್ ಕೂಡ ಈ ಅಕೌಂಟ್ ಅನ್ನ ಓಪನ್ ಮಾಡಬಹುದು.
ಒಂದು ಲಕ್ಷ ನಾನು ಆಗಬೇಕು ಅನ್ನೋದಾದ್ರೆ ಎಷ್ಟು ಇನ್ವೆಸ್ಟ್ ಮಾಡಬೇಕು ಕಡಿಮೆ ಅಂದ್ರೆ ಎಷ್ಟು ನಾನು ಜಾಸ್ತಿ ಇನ್ವೆಸ್ಟ್ ಮಾಡ್ತೀನಿ ಬೇಗ ನನಗೆ ಲಕ್ಷ ಸಿಗಬೇಕು ಅಂದ್ರೆ ಇರುವ ಆಯ್ಕೆ ಏನು sbi ತನ್ನ ವೆಬ್ಸೈಟ್ ನಲ್ಲಿ ಶೇರ್ ಮಾಡಿಕೊಂಡಿರುವ ಈ ಇನ್ವೆಸ್ಟ್ಮೆಂಟ್ ಟೇಬಲ್ನ ಪ್ರಕಾರ ನಾನು ನಿಮಗೆ ಎಕ್ಸ್ಪ್ಲೈನ್ ಮಾಡ್ತಾ ಹೋಗ್ತೀನಿ ನೋಡಿ ಈ ಟೇಬಲ್ನಲ್ಲಿ ಮೂರರಿಂದ ಹತ್ತರವರೆಗೆ ಮೆನ್ಷನ್ ಮಾಡಿರೋದು ವರ್ಷಗಳು ಒಂದು ವೇಳೆ ನೀವು ಮೂರು ವರ್ಷದಲ್ಲಿ ಒಂದು ಲಕ್ಷವನ್ನ ನೀವು ರೆಕರಿಂಗ್ ಡೆಪಾಸಿಟ್ ಅಕೌಂಟ್ ನಲ್ಲಿ ಉಳಿಸಬೇಕು ಅನ್ನೋದಾದ್ರೆ 2502 ಪ್ರತಿ ತಿಂಗಳು ನೀವು ಡೆಡಿಕೇಟ್ ಮಾಡಬೇಕಾಗುತ್ತೆ ಅಂದ್ರೆ ಇನ್ವೆಸ್ಟ್ ಮಾಡಬೇಕಾಗುತ್ತೆ ಅದೇ ನೀವು ಇಲ್ಲ ನನಗೆ ಟೈಮ್ ಇದೆ ನನಗೆ 10 ವರ್ಷದಲ್ಲಿ ಒಂದು ಲಕ್ಷ ಸಿಕ್ರು ಪರವಾಗಿಲ್ಲ ನನ್ನ ಕೈಯಲ್ಲಿ ಹೂಡಿಕೆ ಮಾಡೋಕೆ ಹೋಗೋದು ಬಹಳ ಕಡಿಮೆ ಅಮೌಂಟ್ ಅಂತದಕ್ಕೆ ಹೇಳಿ ಅಂದ್ರೆ ಇದೇ ಸಾಲಿನಲ್ಲಿ ಕೊನೆಗೆ ನೋಡಿ 593 ರೂಪಾಯಿ ನೀವು ಪ್ರತಿ ತಿಂಗಳು ಇನ್ವೆಸ್ಟ್ ಮಾಡಿದ್ರೆ 10 ವರ್ಷದಲ್ಲಿ ನಿಮ್ಮ ಕೈಯಲ್ಲಿ ಒಂದು ಲಕ್ಷ ರೂಪಾಯಿ ಇರುತ್ತೆ ಸೋ ಮಿಕ್ಕ ನಾಲ್ಕು ಐದು ಆರು ಏಳು ವರ್ಷಗಳಲ್ಲಿ ಎಷ್ಟು ಹೂಡಿಕೆ ಮಾಡಬೇಕು ಅದನ್ನ ನೋಡ್ತಾ ಹೋಗೋಣ ನಾಲ್ಕು ವರ್ಷದಲ್ಲಿ ನಿಮಗೊಂದು ಲಕ್ಷ ಬೇಕು ಅಂದ್ರೆ ಜನರಲ್ ಪಬ್ಲಿಕ್ 1812 ಹೂಡಿಕೆ ಮಾಡಬೇಕು ಪ್ರತಿ ತಿಂಗಳು ಐದು ವರ್ಷದಲ್ಲಿ ಒಂದು ಲಕ್ಷ ರೀಚ್ ಆಗ್ಬೇಕು ಅಂದ್ರೆ 1409 ನೀವು ಇನ್ವೆಸ್ಟ್ ಮಾಡಬೇಕಾಗುತ್ತೆ ಆರು ವರ್ಷದಲ್ಲಿ ಒಂದು ಲಕ್ಷ ಬೇಕು ಅಂದ್ರೆ 1135 ಏಳು ವರ್ಷದಲ್ಲಿ ಅನ್ನೋದಾದ್ರೆ 940 ಎಂಟು ವರ್ಷದಲ್ಲಿ ಅನ್ನೋದಾದ್ರೆ 795 ಒಂಬತ್ತು ವರ್ಷದಲ್ಲಿ ಅನ್ನೋದಾದ್ರೆ 682 ನೀವು ಇನ್ವೆಸ್ಟ್ ಮಾಡಬೇಕಾಗುತ್ತೆ.
ಒಂದು ವೇಳೆ ನೀವು ಸೀನಿಯರ್ ಸಿಟಿಜನ್ ಆದ್ರೆ 60 ವರ್ಷ ವಯಸ್ಸಿನ ಮೇಲ್ಪಟ್ಟವರಾದರೆ ಮೂರೇ ವರ್ಷದಲ್ಲಿ ನಿಮಗೊಂದು ಲಕ್ಷ ಬೇಕಂದ್ರೆ 2482 ನಾಲ್ಕು ವರ್ಷದಲ್ಲಿ ಅನ್ನೋದಾದ್ರೆ 1793 ಐದು ವರ್ಷದಲ್ಲಿ 1300 91 ಆರು ವರ್ಷದಲ್ಲಿ ಅನ್ನೋದಾದ್ರೆ 1117 ಏಳು ವರ್ಷದಲ್ಲಿ ಅನ್ನೋದಾದ್ರೆ 923 ಎಂಟು ವರ್ಷದಲ್ಲಿ 778 ಒಂಬತ್ತು ವರ್ಷದಲ್ಲಿ ಅನ್ನೋದಾದ್ರೆ 665 10 ವರ್ಷದಲ್ಲಿ ಒಬ್ಬ ಸೀನಿಯರ್ ಸಿಟಿಜನ್ ಒಂದು ಲಕ್ಷವನ್ನ ಸೇವ್ ಮಾಡಬೇಕು ಅನ್ನೋದಾದ್ರೆ 576 ಅವರು ಇನ್ವೆಸ್ಟ್ ಮಾಡಬೇಕಾಗುತ್ತೆ ಒಂದು ವೇಳೆ ನೀವು sbi ನ ಸ್ಟಾಫ್ ಆದ್ರೆ ಅಲ್ಲೇ ಕೆಲಸ ಮಾಡ್ತಿರೋ ವ್ಯಕ್ತಿ ಆದ್ರೆ ಮೂರು ವರ್ಷಕ್ಕೆ ನೀವು 2463 ಹೂಡಿಕೆ ಮಾಡಿದ್ರೆ ಸಾಕು ನಾಲ್ಕು ವರ್ಷಕ್ಕೆ 1775 ಐದು ವರ್ಷಕ್ಕೆ 1373 ಆರು ವರ್ಷಕ್ಕೆ 1100 ಏಳು ವರ್ಷದಲ್ಲಿ 906 ಎಂಟು ವರ್ಷದಲ್ಲಿ ಅನ್ನೋದಾದ್ರೆ 762 ಒಂಬತ್ತು ವರ್ಷದಲ್ಲಿ 650 10 ವರ್ಷದಲ್ಲಿ ಅನ್ನೋದಾದ್ರೆ ಜಸ್ಟ್ 562 ನೀವು ಹೂಡಿಕೆ ಮಾಡಿದ್ರೆ ಒಂದು ಲಕ್ಷ ರೂಪಾಯಿ ಮೆಚುರಿಟಿ ಟೈಮಿಗೆ ನಿಮ್ಮ ಕೈಗೆ ಸಿಗುತ್ತೆ ಒಂದು ವೇಳೆ ನೀವು ಸ್ಟಾಫ್ ಸೀನಿಯರ್ ಸಿಟಿಜನ್ ಆದ್ರೆ sbi ಬ್ಯಾಂಕ್ ನ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದೀರಿ ನೀವು ಸೀನಿಯರ್ ಸಿಟಿಜನ್ ಅಂತವರು ಮೂರು ವರ್ಷದಲ್ಲಿ ಒಂದು ಲಕ್ಷ ಬೇಕು ಅನ್ನೋದಾದ್ರೆ 244 ರೂಪಾಯಿ ಹೂಡಿಕೆ ಮಾಡಬೇಕಾಗುತ್ತೆ ಪ್ರತಿ ತಿಂಗಳು ನಾಲ್ಕು ವರ್ಷಕ್ಕೆ ಒಂದು ಲಕ್ಷ ಬೇಕು ಅಂದ್ರೆ 1756 ಐದು ವರ್ಷದಲ್ಲಿ ಒಂದು ಲಕ್ಷ ಅಂದ್ರೆ 1355 ಆರು ವರ್ಷದಲ್ಲಿ ಅಂದ್ರೆ 1082 ಏಳು ವರ್ಷದಲ್ಲಿ ಅಂದ್ರೆ 889 ಎಂಟು ವರ್ಷದಲ್ಲಿ 745 ಒಂಬತ್ತು ವರ್ಷದಲ್ಲಿ ಅನ್ನೋದಾದ್ರೆ 634 10 ವರ್ಷದಲ್ಲಿ ನಿಮಗೆ ಒಂದು ಲಕ್ಷ ಬೇಕು ಅಂದ್ರೆ 546 ನೀವು ಹೂಡಿಕೆ ಮಾಡಿದ್ರೆ ಸಾಕು 10 ವರ್ಷದ ಕೊನೆಯಲ್ಲಿ ನಿಮಗೆ ಒಂದು ಲಕ್ಷ ರೂಪಾಯಿ ಸಿಗುತ್ತೆ ಮೆಚುರಿಟಿ ಅಮೌಂಟ್ ಈಗ ನಿಮ್ಮನ್ನ ಕಾಡ್ತಿದಿರುವ ಬಹಳ ಇಂಪಾರ್ಟೆಂಟ್ ಪ್ರಶ್ನೆ ಏನು ಗೊತ್ತಾ ಎಷ್ಟು ಪರ್ಸೆಂಟ್ ಇಂಟರೆಸ್ಟ್ ರೇಟ್ ಕೊಡ್ತಿದ್ದಾರೆ.
593 ರೂಪಾಯಿ ಪ್ರತಿ ತಿಂಗಳು ಹಾಕಿದ್ರೆ 10 ವರ್ಷದಲ್ಲಿ ಒಂದು ಲಕ್ಷ ಆಗುತ್ತೆ ಅಂದ್ರೆ ನನಗೆ ಸಿಕ್ತಿರೋ ರಿಟರ್ನ್ಸ್ ಎಷ್ಟು ಇದೇ ಕಾರಣಕ್ಕೆ ನಾನು ನಿಮಗೆ ಆಗಲೇ ಹೇಳಿದ್ದು ನನಗೆ ರಿಸ್ಕೇ ಬೇಡಪ್ಪ ಅನ್ನೋರು ಮಾತ್ರ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ ಅಂತ ಯಾಕೆ ಅಂದ್ರೆ ನಿಮಗೆ ಇಲ್ಲಿ ಮ್ಯಾಕ್ಸಿಮಮ್ ಜನರಲ್ ಪಬ್ಲಿಕ್ ಅಂತ ನೋಡ್ಕೊಂಡ್ರೆ ನಿಮಗೆ ಸಿಗುವ ಬಡ್ಡಿ ಆರು ಮುಕ್ಕಾಲು ಪರ್ಸೆಂಟ್ ಮ್ಯಾಕ್ಸಿಮಮ್ ಅಂದ್ರೆ ಮಿನಿಮಮ್ 6 1/2 ಪರ್ಸೆಂಟ್ ಒಂದು ವೇಳೆ ನೀವು ಸೀನಿಯರ್ ಸಿಟಿಜನ್ ಜನರಲ್ ಪಬ್ಲಿಕ್ ಕ್ಯಾಟಗರಿಯ ಸೀನಿಯರ್ ಸಿಟಿಜನ್ ಆದ್ರೆ ಮ್ಯಾಕ್ಸಿಮಮ್ 7 1/4% ನಿಮಗೆ ಸಿಗುತ್ತೆ ಮಿನಿಮಮ್ 7% ರಿಟರ್ನ್ಸ್ ನಿಮಗೆ ಸಿಗುತ್ತೆ ಇಂಟರೆಸ್ಟ್ ರೇಟ್ ಅಂತ ನೋಡ್ಕೊಂಡ್ರೆ ಅದೇ ಸ್ಟಾಫ್ ಆದ್ರೆ sbi ನ ಸ್ಟಾಫ್ ಆದ್ರೆ ನಿಮಗೆ ಮ್ಯಾಕ್ಸಿಮಮ್ 7 3/4% ಸಿಗುತ್ತೆ ಮಿನಿಮಮ್ 7 1/2% ಇಂಟರೆಸ್ಟ್ ರೇಟ್ ಸಿಗುತ್ತೆ ಸ್ಟಾಫ್ ಸೀನಿಯರ್ ಸಿಟಿಜನ್ ಆದ್ರೆ 8/4% ವರೆಗೆ ನಿಮಗೆ ರಿಟರ್ನ್ಸ್ ಅನ್ನೋದು ಸಿಗುತ್ತೆ ಮಿನಿಮಮ್ 8% ವರೆಗೆ ನಿಮಗೆ ರಿಟರ್ನ್ಸ್ ಸಿಗೋದಕ್ಕೆ ಸಾಧ್ಯ ಸೋ ಇದು ಇದನ್ನ ಕಂಪೇರ್ ಮಾಡಿಕೊಂಡಾಗ ನಿಮಗೆ ಸಿಂಗಲ್ ಡಿಜಿಟ್ ಗ್ರೋಥ್ ಗೋಸ್ಕರ ನಾನು sbi ಹರ್ ಘರ್ ಲಕ್ಪತಿ ಸ್ಕೀಮ್ ನಲ್ಲಿ ಇನ್ವೆಸ್ಟ್ ಮಾಡಬೇಕಾ ಅನ್ನೋದು ನಿಮ್ಮ ಪ್ರಶ್ನೆ ಆದ್ರೆ ನೋಡಿ ನೀವೀಗ ರಿಟೈರ್ಮೆಂಟ್ ಏಜ್ ಗೆ ಹತ್ತಿರದಲ್ಲಿ ಇದ್ದೀರಿ ಅಥವಾ ರಿಟೈರ್ಮೆಂಟ್ ಕಾರ್ಪಸ್ ಒಂದಷ್ಟು ಹಣ ಬಂದಿದೆ ಅಥವಾ ಮನೆ ಬಾಡಿಗೆ ಬರ್ತಾ ಇದೆ ಆ ಹಣ ವೇಸ್ಟ್ ಆಗಬಾರದು ಅಥವಾ ಇನ್ನೆಲ್ಲೋ ಖರ್ಚು ಆಗ್ಬಿಡುತ್ತೆ ಲೆಕ್ಕಕ್ಕೆ ಸಿಗೋದಿಲ್ಲ ಅದನ್ನ ಇನ್ನೊಂದು ಸ್ಕೀಮ್ ನಲ್ಲಿ ಹಾಕಿ ನಾನು ಇನ್ಫ್ಲೇಶನ್ ಗಿಂತ ಜಾಸ್ತಿ ಬೆಳೆದರೆ ಸಾಕಪ್ಪ ಅನ್ನೋ ತರದ್ದು ನಿಮ್ಮ ಆಲೋಚನೆ ಆದ್ರೆ ನನ್ನ ದುಡ್ಡು ಕರಗಬಾರದು ಅಷ್ಟೇ ನನ್ನ ಪ್ರಿನ್ಸಿಪಲ್ ಹಾಗೆ ಸೇಫ್ ಆಗಿರಬೇಕು ಬೇಕು ಅನ್ನೋದು ನಿಮ್ಮ ಉದ್ದೇಶ ಆದ್ರೆ ಇಂತಹ ಸ್ಕೀಮ್ ನಲ್ಲಿ ನೀವು ಹೂಡಿಕೆ ಮಾಡಬಹುದು ಯಾಕೆಂದರೆ ನಿಮಗೆ ಸ್ಟಾಕ್ ಮಾರ್ಕೆಟ್ ಮ್ಯೂಚುವಲ್ ಫಂಡ್ಸ್ ನಲ್ಲೋ ಹೂಡಿಕೆ ಮಾಡಿದ್ದೆ ಆದ್ರೆ ನಿಮಗೆ 10 ರಿಂದ 12% ನವರೆಗೆ ಲಾಂಗ್ ರನ್ ಅಲ್ಲಿ ನೀವು ರಿಟರ್ನ್ಸ್ ಅನ್ನ ಎಕ್ಸ್ಪೆಕ್ಟ್ ಮಾಡೋದಕ್ಕೆ ಸಾಧ್ಯ.
ನವೆಂಬರ್ ಡಿಸೆಂಬರ್ ಜನವರಿ ಅಂದ್ರೆ ನವೆಂಬರ್ ಡಿಸೆಂಬರ್ 2024 ಮತ್ತು ಜನವರಿ 2025 ಅಂತ ನೋಡ್ಕೊಂಡ್ರೆ ಮಾರ್ಕೆಟ್ ಎಷ್ಟು ಅನ್ಸರ್ಟೈನ್ ಆಗಿದೆ ಅನ್ನೋದನ್ನ ನೀವು ನೋಡ್ತಾ ಇದ್ದೀರಿ ನನ್ನ ಪೋರ್ಟ್ ಫೋಲಿಯೋ 20% 30% ಬಿದ್ದಾಗ ನನಗೆ ತುಂಬಾ ಕಷ್ಟ ಆಗುತ್ತೆ ನೋಡಕ್ಕೆ ಆಗೋದಿಲ್ಲಪ್ಪ ಅನ್ನುವಂತವರು ಬೇಡ ನನಗೆ ಯಾವುದೋ ತುಂಬಾ ಇಂಪಾರ್ಟೆಂಟ್ ಕನಸಿದೆ ಮಗಳ ಮದುವೆ ಖರ್ಚಿಗೆ ಅಂತ 10 ವರ್ಷ ಆದ್ಮೇಲೆ ನನಗೆ 10 ಲಕ್ಷ ಸಿಕ್ರೆ ಸಾಕು ಅಂತ ಪ್ಲಾನ್ ಮಾಡ್ತಿದ್ದೀನಿ ನನಗೆ ರಿಸ್ಕ್ ಬೇಡಪ್ಪ ಈ ತರ ಯೋಚನೆ ಮಾಡುವರು ಈ ಸ್ಕೀಮ್ ನಲ್ಲಿ ಹಾಕಬಹುದು ಪ್ರಿಮೆಚೂರ್ ಕ್ಲೋಜರ್ ಗೆ ಈ ಸ್ಕೀಮ್ ನಲ್ಲಿ ಅವಕಾಶ ಇದೆಯಾ ಖಂಡಿತ ಇದೆ ಏನಪ್ಪಾ ಅಂದ್ರೆ ನೀವು ಹೂಡಿಕೆ ಮಾಡಿರುವ ಹಣ ಅಂದ್ರೆ ಇಂಟರೆಸ್ಟ್ ರೇಟ್ ಅನ್ನ ಪಕ್ಕಕ್ಕೆ ಸೇರಿಸಿ ನಿಮ್ಮ ಹಣ ಐದು ಲಕ್ಷ ರೂಪಾಯಿ ವರೆಗೂ ಇದ್ರೆ ಐದು ಲಕ್ಷ ರೂಪಾಯಿಗಿಂತ ಕಡಿಮೆ ಇದ್ರೆ ಅರ್ಧ ಪರ್ಸೆಂಟ್ ವರೆಗೆ ನೀವು ಪ್ರಿಮೆಚೂರ್ ವಿಥ್ ಡ್ರಾಲ್ ಗೆ ಪೆನಾಲ್ಟಿ ಕಟ್ಟಬೇಕಾಗುತ್ತೆ ಅರ್ಧ ಪ್ರತಿಶತ ಒಂದು ವೇಳೆ ವೇಳೆ ಐದು ಲಕ್ಷ ರೂಪಾಯಿಗಿಂತ ಜಾಸ್ತಿ ಪ್ರಿನ್ಸಿಪಲ್ ಇದ್ರೆ ಅಂದ್ರೆ ನೀವು ಹೂಡಿಕೆ ಮಾಡಿರೋದು ಆರು ಲಕ್ಷ ರೂಪಾಯಿ ನಿಮಗೆ ಎಲ್ಲಾ ಸೇರಿ ಒಂದು ಏಳು ಏಳುವರೆ ಲಕ್ಷ ರೂಪಾಯಿ ವರೆಗೂ ವಾಪಸ್ ಬರಬೇಕು ಈಗ ಸೋ ನೀವು ಅದನ್ನ ಪ್ರಿಮೆಚೂರ್ ವಿಥ್ ಡ್ರಾಲ್ ಮಾಡ್ಕೋಬೇಕು ಅಂತ ಅನ್ಕೊಂಡಿದ್ದೀರಿ 10 ವರ್ಷಕ್ಕೆ ಓಪನ್ ಮಾಡಿದ್ರಿ ಆರು ವರ್ಷ ಆದ್ಮೇಲೆ ನಾನು ವಾಪಸ್ ತಕ್ಕೊಳ್ಬೇಕು ಅಂದುಕೊಂಡಿದೀನಿ ಅಂತಹ ಟೈಮ್ನಲ್ಲಿ ನೀವು ಡೆಫಿನೇಟ್ಲಿ ತೆಗೆದುಕೊಳ್ಳಬಹುದು.
ಐದು ಲಕ್ಷ ರೂಪಾಯಿಗಿಂತ ಜಾಸ್ತಿ ಬಂಡವಾಳ ಇದ್ರೆ 1% ನವರೆಗೆ ನೀವು ಪೆನಾಲ್ಟಿ ಕಟ್ಟಬೇಕಾಗುತ್ತೆ ಸೋ ಇದು ಪ್ರಿಮೆಚೂರ್ ವಿಥ್ ಡ್ರಾಲ್ ಗೆ ಇರುವಂತಹ ಅವಕಾಶ ಒಂದು ವೇಳೆ ನೀವು ಪೇಮೆಂಟ್ ಅನ್ನ ಮಾಡಿಲ್ಲ ಅಂತಂದ್ರೆ ಅಕೌಂಟ್ ಇನ್ ಡಿಫಾಲ್ಟ್ ಅನ್ನೋ ಒಂದು ಆಪ್ಷನ್ ಇದೆ ಅದೇನಪ್ಪಾ ಅಂತ ಅಂದ್ರೆ ನಾನು ಇವಾಗ ಪ್ರತಿ ತಿಂಗಳು ಐದನೇ ತಾರೀಕು ಆರ್ ಡಿ ಕಟ್ತೀನಿ ಅಂತ ಓಪನ್ ಮಾಡಿದೀನಿ ಐದನೇ ತಾರೀಕು ನಾನು ಕಟ್ಟಿಲ್ಲ ಅವಾಗ ಏನಾಗುತ್ತೆ ಒಂದು ವೇಳೆ ನೀವು ಆ ರೀತಿ ಕಟ್ಟಿಲ್ಲ ಅಂತಂದ್ರೆ ಐದು ವರ್ಷಕ್ಕಿಂತ ಕಡಿಮೆ ಅವಧಿಗೆ ಆರ್ ಡಿ ನೀವು ಓಪನ್ ಮಾಡಿದ್ರೆ ಪ್ರತಿ 100 ರೂಪಾಯಿಗೆ ಒಂದುವರೆ ರೂಪಾಯಿಯನ್ನ ಪ್ರತಿ ತಿಂಗಳಿಗೆ ನೀವು ಪೆನಾಲ್ಟಿ ಕಟ್ಟಬೇಕಾಗುತ್ತೆ ಸಿಂಪ್ಲಿ ಹೇಳ್ಬೇಕಂದ್ರೆ ಒಂದುವರೆ ಪರ್ಸೆಂಟ್ ಐದು ವರ್ಷಕ್ಕಿಂತ ಹೆಚ್ಚಿನ ಟೆನ್ಯೂರ್ ಗೆ ನೀವು ಆರ್ ಡಿ ಅನ್ನ ಓಪನ್ ಮಾಡಿದ್ರೆ 2% ಇರುತ್ತೆ ಪ್ರತಿ 100 ರೂಪಾಯಿಗೆ ಎರಡು ಪ್ರತಿ ತಿಂಗಳು ನೀವು ಪೆನಾಲ್ಟಿಯಾಗಿ ಕಟ್ಟಬೇಕಾಗುತ್ತೆ ಒಂದು ವೇಳೆ ನಾನು ಅರ್ಧಕ್ಕೆ ಬಿಟ್ಟೆ ಬಿಟ್ಟೆ ನಾನು ಕಟ್ಟುತ್ತಾನೆ ಇಲ್ಲ ಅನ್ನೋ ತರ ಆದ್ರೆ ಒಂದು ವೇಳೆ ಆರು ತಿಂಗಳು ನೀವು ಆರ್ ಡಿ ಅನ್ನ ಕಟ್ಟೆ ಇಲ್ಲ ಅಂತಂದ್ರೆ ಅಕೌಂಟ್ ಕ್ಲೋಸ್ ಆಗುತ್ತೆ ಅದನ್ನ ಕ್ಲೋಸ್ ಮಾಡಿ ಪೆನಾಲ್ಟಿ ಡಿಡಕ್ಟ್ ಮಾಡ್ಕೊಂಡು ಮಿಕ್ಕಿದ ಅಮೌಂಟ್ ಅನ್ನ ನಿಮ್ಮ ಯಾವ ಅಕೌಂಟ್ ಲಿಂಕ್ ಆಗಿರುತ್ತಲ್ಲ ಆ ಅಕೌಂಟಿಗೆ ಟ್ರಾನ್ಸ್ಫರ್ ಮಾಡ್ತಾರೆ ಈ ಸ್ಕೀಮ್ ನಲ್ಲಿ ನೀವು ಹೂಡಿಕೆ ಮಾಡಬೇಕು.
ನಿಮ್ಮ ಹತ್ರ sbi ಅಕೌಂಟ್ ಮ್ಯಾಂಡೇಟರಿ ಆಗಿರಬೇಕು ಯಾಕಂದ್ರೆ ಇದು ಆ ಬ್ಯಾಂಕ್ ನ ಅಕೌಂಟ್ ಹೋಲ್ಡರ್ಸ್ ಗೆ ಅಂತಲೇ ಅವರು ತರುತ್ತಿರುವಂತಹ ಸ್ಕೀಮ್ ಸೋ ಅಕೌಂಟ್ ಅಕೌಂಟ್ ಅನ್ನೋದು ಮ್ಯಾಂಡೇಟರಿ ಈ ಸ್ಕೀಮ್ ನಲ್ಲಿ ನಾವು ಹಾಕೋ ಹಣಕ್ಕೆ ಬರೋ ರಿಟರ್ನ್ಸ್ ಗೆ ನಾನು ಟ್ಯಾಕ್ಸ್ ಕಟ್ಟಬೇಕಾಗುತ್ತಾ ಹೌದು ಟಿಡಿಎಸ್ ಅಪ್ಲಿಕೇಬಲ್ ಆಗುತ್ತೆ ಟ್ಯಾಕ್ಸ್ ಡಿಡಕ್ಷನ್ ಅಟ್ ಸೋರ್ಸ್ ಅಂದ್ರೆ ನಿಮಗೆ ಕೊಡಬೇಕಾದರೆ ಒಂದಷ್ಟು ಟ್ಯಾಕ್ಸ್ ಅನ್ನ ಅವರು ಮುರ್ಕೊಳ್ತಾರೆ ಒಂದು ವೇಳೆ ನೀವು ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ನ ಒಳಗಡೆ ಬರೋದಿಲ್ಲ ಅಂತ ಆದ್ರೆ ಅದನ್ನ ನೀವು ಕ್ಲೈಮ್ ಮಾಡಿಕೊಳ್ಳಬಹುದು ನಿಮಗೆ ಐಟಿ ಆರ್ ಫೈಲ್ ಮಾಡುವಾಗ ವಾಪಸ್ ಬರುತ್ತೆ ಸೊ ಹೀಗೆ ನೀವು ಪ್ಲಾನ್ ಮಾಡಿಕೊಳ್ಳಬಹುದು ಇದು sbi ನ ಹರ್ ಘರ್ ಲಕ್ಷಾಧಿಪತಿ ಸ್ಕೀಮ್ ಪ್ರತಿ ಮನೆಯಲ್ಲೂ ಲಕ್ಷಾಧಿಪತಿ ಇರಬೇಕು ಅನ್ನೋ ಕಾರಣಕ್ಕಾಗಿ sbi ಹೊರತಂದಿರುವ ಸ್ಕೀಮ್ ನಿಮಗೆ ಸೇಫ್ ರಿಟರ್ನ್ಸ್ ಬೇಕು ಅನ್ನೋದಾದ್ರೆ ಈ ಸ್ಕೀಮ್ ಅಲ್ಲಿ ನೀವು ರೆಕರಿಂಗ್ ಡೆಪಾಸಿಟ್ ಅಕೌಂಟ್ ಅನ್ನ ಓಪನ್ ಮಾಡಿ ಈ ಮಾಹಿತಿ ನಿಮಗೆ ಇಷ್ಟ ಆಗಿದ್ರೆ ಲೈಕ್ ಮಾಡಿ ಯಾರಿಗೆ ಇದರ ಅವಶ್ಯಕತೆ ಇದೆ ಅಂತವರಿಗೆ ವಿಡಿಯೋದ ಲಿಂಕ್ ಅನ್ನ ತಪ್ಪದೆ ಫಾರ್ವರ್ಡ್ ಮಾಡಿ ಹಾಗೇನೇ ನಾನು ಇನ್ನಷ್ಟು ಕಲಿತುಕೊಳ್ಳಬೇಕು ಸ್ಟಾಕ್ ಮಾರ್ಕೆಟ್ ಬಗ್ಗೆ ಬಿಸಿನೆಸ್ ಬಗ್ಗೆ ಫಾರ್ಮಿಂಗ್ ಬಗ್ಗೆ ತಿಳಿದುಕೊಳ್ಳಬೇಕು ಅನ್ನೋದಾದ್ರೆ ಎಕ್ಸ್ಪರ್ಟ್ ಗಳು ಕಲಿಸಿಕೊಟ್ಟಿರುವ ಡೀಟೇಲ್ಡ್ ಕೋರ್ಸ್ ಗಳು ಬಾಸ್ ವಾಲ ಅಪ್ಲಿಕೇಶನ್ ಅಲ್ಲಿ ಲಭ್ಯ ಇದೆ.


