Thursday, November 20, 2025
HomeTech Newsಬೆಂಗಳೂರುದಲ್ಲಿ ಕಸ ಸಂಗ್ರಹಕ್ಕೆ ಹೊಸ ರೋಬೋ ಗಾಡಿ ಪರಿಚಯ

ಬೆಂಗಳೂರುದಲ್ಲಿ ಕಸ ಸಂಗ್ರಹಕ್ಕೆ ಹೊಸ ರೋಬೋ ಗಾಡಿ ಪರಿಚಯ

ರಾಜ್ಯ ಸರ್ಕಾರ ಮತ್ತೊಂದು ವಿವಾದಿತ ಕೆಲಸಕ್ಕೆ ಕೈ ಹಾಕಿದೆ ಕಸದಿಂದ ನಾರ್ತಾ ಇಂದ ಬೆಂಗಳೂರನ್ನ ಸ್ವಚ್ಛ ಮಾಡ್ತೀವಿ ಅಂತ ಹೇಳಿದ್ದ ಸರ್ಕಾರ ಸಿಕ್ಕ ಸಿಕ್ಕಲ್ಲಿ ಕಸ ಸುರಿಯೋವರ ಮನೆ ಮುಂದೆ ಕಸ ವಾಪಸ್ ತಂದು ಅವರ ಮನೆ ಮುಂದೆನೆ ಹಾಕಿ ದಂಡ ಹಾಕಿ ಬಿಸಿ ಮುಡಿಸಿ ತುಂಬಾ ಒಳ್ಳೆ ಕೆಲಸವನ್ನ ಮಾಡಿತ್ತು ಈಗ ದೊಡ್ಡ ದೊಡ್ಡ ಮಷೀನ್ಗಳನ್ನ ತರ್ತೀವಿ ಕಸವನ್ನ ಅದು ಅದು ಬಾಚಿಕೊಂಡು ಹೋಗುತ್ತೆ ಅಂತ ಹೇಳ್ತಿದ್ದಾರೆ. ಆದರೆ ಇದು ತೀವ್ರ ವಿವಾದಕ್ಕೆ ಕಾರಣ ಆಗಿದೆ. ಈ ಕಸದ ಜೊತೆಗೆ ಜನರ ತೆರಿಗೆಯ ದುಡ್ಡನ್ನ ಕೂಡ ಗುಡಿಸಲಾಗುತ್ತಾ ಇಲ್ಲಿ ಅನ್ನೋ ಟೀಕೆ ವ್ಯಕ್ತವಾಗ್ತಿದೆ. 106 ಕೋಟಿ ವೆಚ್ಚದಲ್ಲಿ ಕಸಗುಡಿಸೋ ಮಷೀನ್ ಬಾಡಿಗೆಗೆ ಪಡಿತಾ ಇದ್ದು ಪರ್ಚೇಸ್ ಮಾಡಬಹುದಾಗಿತ್ತಲ್ರಿ ಏನ್ರಿ ಬಾಡಿಗೆಗೆ ಇದು ಅಂತ ಹೇಳಿ ತಲೆ ಕೆಡಿಸಿಕೊಳ್ತಾ ಇದ್ದಾರೆ ಅದರ ಬಾಡಿಗೆ ರೇಟು ಮತ್ತೆ ಅದನ್ನ ಖರೀದಿನೆ ಮಾಡ್ಬಿಟ್ಟಿದ್ರೆ ಯಾವ ರೇಟಿಗೆ ಬರ್ತಾ ಇತ್ತು ಅದನ್ನ ನೋಡಿದಾಗ ಓವರಾಲ್ ಈ 600 ಕೋಟಿಯ ಈ ಪ್ಲಾನ್ ಜನರನ್ನ ದಿಗ್ಭ್ರಮೆಗೊಳಿಸ್ತಾ ಇದೆ ಅದಕ್ಕಿಂತ ಇಂಪಾರ್ಟೆಂಟ್ ಆಗಿ ಇದನ್ನ ಜಾರಿಗೊಳಿಸುತ್ತಿರೋ ವಿಧಾನ ಟೆಂಡರ್ ವಿಚಾರದಲ್ಲಿರೋ ಅನುಮಾನಗಳು ಬಹಳ ಕುತುಹಲಕ್ಕೆ ಕಾರಣ ಆಗ್ತಿದ್ದಾವೆ ಅನುಮಾನಗಳಿಗೆ ಕಾರಣ ಆಗ್ತಾ ಇದಾವೆ.

ಮೆಕಾನಿಕಲ್ ಸ್ವೀಪಿಂಗ್ ಮಷೀನ್ಗಳನ್ನ 106 ಕೋಟಿ ಕೊಟ್ಟು ಬಾಡಿಗೆಗೆ ಪಡೆಯೋಕೆ ಮುಂದಾಗಿದ್ದಾರೆ ಏಳು ವರ್ಷ ಅಂದ್ರೆ 84 ತಿಂಗಳ ಅವಧಿಗೆ 46 ಮಷೀನ್ಗಳನ್ನ ಬಾಡಿಗೆಗೆ ಪಡೆಯೋಕೆ ನಿರ್ಧಾರ ಆಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಎಷ್ಟು ದುಡ್ಡು ಕೊಡುತ್ತೆ ಗೊತ್ತಾ 613 ಕೋಟಿ ರೂಪಾಯಿ ಖರ್ಚು ಮಾಡೋಕೆ ಪ್ಲಾನ್. ಇಲ್ಲಿ ಬಾಡಿಗೆಗೆ ಪಡೆಯೋಕೆಏನೋ ನಿರ್ಧಾರ ಆಗಿದೆ ಅದರಲ್ಲಿ ಹಲವು ಮುಖ್ಯ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಯಾವ ಕಂಪನಿಗಳಿಂದ ಈ ಮಷೀನ್ ಅನ್ನ ಬಾಡಿಗೆಗೆ ಪಡೆಯಲಾಗುತ್ತೆ ಮಷೀನ್ಗಳ ಸಾಮರ್ಥ್ಯ ಎಷ್ಟು ಯಾವ ಕಂಪನಿಯ ಮಷೀನ್ಗಳು ಇದರ ಜವಾಬ್ದಾರಿ ಯಾರದು ಕೆಟ್ಟು ನಿಂತರೆ ಸರ್ಕಾರ ರಿಪೇರಿ ಮಾಡಿಸಬೇಕಾ ಅಥವಾ ಬಾಡಿಗೆ ಕೊಟ್ಟ ಕಂಪನಿ ಮಾಡಿಸುತ್ತಾ ಹೀಗೆಹತ್ತು ಹಲವು ಗೊಂದಲಗಳಿಗೆ ಉತ್ತರ ಇನ್ನಷ್ಟೇ ಕೊಡಬೇಕು ಇದನ್ನ ಸರ್ಕಾರ ಆಮೇಲೆ ಹೇಳುತ್ತೆ ಅಂತ ಅನ್ಕೋಬಹುದು ಆದರೆ ಈ ಬಗ್ಗೆ ಒಂದು ಸಮಿತಿ ಕೊಟ್ಟ ವರದಿಯನ್ನ ಕೂಡ ಸರ್ಕಾರ ಪರಿಗಣನೆಗೆ ತಗೊಂಡಿಲ್ಲ ಅನ್ನೋದು ಗೊತ್ತಾಗಿದೆ ಮಾಹಿತಿ ಪ್ರಕಾರ ಈ ಮೊದಲು 59 ಹೊಸ ಮಷೀನ್ ಬಾಡಿಗೆಗೆ ಪಡೆಯೋಕ್ಕೆ ಸರ್ಕಾರ ಮುಂದಾಗಿತ್ತು.

ಅರ್ಬನ್ ಡೆವಲಪ್ಮೆಂಟ್ ಡಿಪಾರ್ಟ್ಮೆಂಟ್ ಯುಡಿಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮುನ್ನ ಸ್ವೀಪರ್ಗಳ ಸಂಖ್ಯೆಯನ್ನ 46ಕ್ಕೆ ಇಳಿಸಿ ಪ್ರತಿ ಸ್ವೀಪರ್ ಗೆಮ ಕೋಟಿ ರೂಪಾಯಿ ಮೇಲೆ 10 ಲಕ್ಷ ರೂಪಾಯಿ ಏರಿಸಿ ಸರ್ಕಾರಕ್ಕೆ ಪ್ರಪೋಸಲ್ ಸಲ್ಲಿಸಿತ್ತು ಏಪ್ರಿಲ್ ನಿಂದಲೇ ಸ್ವೀಪರ್ಗಳನ್ನ ಖರೀದಿ ಮಾಡಬೇಕಾ ಅಥವಾ ಬಾಡಿಗೆ ಪಡೆಬೇಕಾ ಅಂತ ಚರ್ಚೆ ಶುರುವಾಗಿತ್ತು. ಈ ಗೊಂದಲ ಬಗೆಹರಿಸುವಕ್ಕೆ ಮೊದಲು ಟೆಕ್ನಿಕಲ್ ಕಮಿಟಿಯೊಂದನ್ನ ರಚಿಸಿ ಗೊಂದಲ ಬಗೆಹರಿಸು ಜವಾಬ್ದಾರಿ ಕೊಡಲಾಗಿತ್ತು. ಕರ್ನಾಟಕ ಅರ್ಬನ್ ಡೆವಲಪ್ಮೆಂಟ್ ಅಂಡ್ ಫೈನಾನ್ಸ್ ಕಾರ್ಪೊರೇಷನ್ ಕೆಯುಐಡಿಎಫ್ಸಿ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆರ್ ಸೆಲ್ವಮಣೆಗೆ ಕಮಿಟಿಯ ನೇತೃತ್ವ ಕೊಡಲಾಗಿತ್ತು. ಈ ಸಮಿತಿ ಏನ ಹೇಳಿತು ಗೊತ್ತಾ ಮಷೀನ್ಗಳನ್ನ ಬಾಡಿಗೆಗೆ ತಗೋಬೇಡಿ ಖರೀದಿನೇ ಮಾಡಬೇಡಿ ಬಳಿಕ ಮಷೀನ್ಗಳನ್ನ ಆಪರೇಟ್ ಮಾಡೋಕೆ ಮತ್ತು ಮೇಂಟೆನೆನ್ಸ್ ಗೆ ಬೇರೆ ಟೆಂಡರ್ ಕರೆಯಿರಿ ಆ ಕೆಲಸಕ್ಕೆ ಮಾತ್ರ ಕಮ್ಮಿಗಾಗುತ್ತೆ ಅನ್ನೋ ಸಲಹೆ ಕೊಟ್ಟಿತ್ತು. ಆದರೆ ಗ್ರೇಟರ್ ಬೆಂಗಳೂರು ಅಥಾರಿಟಿ ಅಂದ್ರೆ ಜಿಬಿಎ ನ ತಾಂತ್ರಿಕ ಸಮಿತಿ ಈ ಸಲಹೆ ಬೇಡ ಅಂತ ಇದನ್ನು ಒಪ್ಪಲಿಲ್ಲ ಪಾಲಿಕೆ ತನ್ನ ಅಧಿಕಾರಿಗಳನ್ನ ಒಳಗೊಂಡ ಮತ್ತೊಂದು ಸಮಿತಿ ಮಾಡಿ ಮತ್ತೆ ಆ ಕಮಿಟಿಗೆ ಇದೇ ಟಾಸ್ಕ್ ಕೊಟ್ಟಿತ್ತು. ಈ ಜಿಬಿ ಅಧಿಕಾರಿಗಳ ಸಮಿತಿಗೆ ಮತ್ತು ರೈಟ್ಸ್ ಲಿಮಿಟೆಡ್ ಹಾಗೂ ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಸಿದ್ದರಾಮಯ್ಯ ಸರ್ಕಾರದ ಫೇವರೆಟ್ ಕಂಪನಿ ಬಿಸಿಜಿ ಈ ಕಂಪನಿಗಳಿಗೆ ಗೊಂದಲ ಪರಿಹರಿಸೋ ಸಾಲ್ವ್ ಮಾಡೋ ಟಾಸ್ಕ್ ಕೊಡಲಾಯಿತು. ಆದರೆ ಎರಡು ಪ್ರೈವೇಟ್ ಕಂಪನಿಗಳು ಎರಡು ರೀತಿಯ ವರದಿ ಕೊಟ್ಟರು.

ಒಂದು ಕಂಪನಿ ಪ್ರತಿ ಮಷೀನ್ಗೆ 3 ಕೋಟಿ ರೂಪಾಯಿ ತನಕ ಖರ್ಚಾಗುತ್ತೆ. ಹೀಗಾಗಿ ಬಾಡಿಗೆ ಪಡೆಯೋದು ಉತ್ತಮ ಅಂತ ಹೇಳಿದ್ವು. 40% ಹಣವನ್ನ ಅಂದ್ರೆ 252 ಕೋಟಿ ಹಣವನ್ನ ಮೊದಲು ಅಪ್ ಫ್ರಂಟ್ ಪೇಮೆಂಟ್ ಮಾಡಿ ಬಾಡಿಗೆ ಪಡೆಯೋ ಕಂಪನಿಗೆ ಕೊಡಬೇಕು ಅಂತ ಹೇಳಿತ್ತು. ಈ ಅಪ್ ಫ್ರಂಟ್ ಹಣ ಅನ್ನೋದನ್ನ ಸ್ವಲ್ಪ ಗಮನ ಕೊಟ್ಟು ಕೇಳಿ ಸ್ನೇಹಿತರೆ ಇದರ ಬಗ್ಗೆ ಮುಂದೆ ಹೇಳ್ತೇವೆ. ಇದಾದಮೇಲೆ ಉಳಿದ ಹಣವನ್ನ ಪ್ರತಿ ಕಿಲೋಮೀಟರ್ ರಸ್ತೆ ಕ್ಲೀನ್ ಮಾಡಿದ ಆಧಾರದ ಮೇಲೆ ಕೊಡಬೇಕು ಅಂತ ಸಲಹೆ ಕೊಟ್ರು. ಆದರೆ ಇನ್ನೊಂದು ಕನ್ಸಲ್ಟಿಂಗ್ ಕಂಪನಿ ವರದಿ ಪ್ರಕಾರ ಮಷೀನ್ ಬಾಡಿಗೆಗೆ ಪಡೆದರೆ ಪ್ರತಿ ಮಷೀನ್ ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ಖರ್ಚಾಗುತ್ತೆ. ಖರೀದಿ ಮಾಡೋದ್ರಿಂದ ಕಮ್ಮಿ ಆಗುತ್ತೆ ಅಂತ ಹೇಳಿ ಇದೊಂದು ತದ್ವಿರುದ್ಧ ರೀತಿ ರಿಪೋರ್ಟ್ ನ್ನ ಕೊಟ್ರು. ಆದರೆ ರಾಜ್ಯ ಸರ್ಕಾರ ಒಂದೇ ಬಾರಿಗೆ ಇಷ್ಟೊಂದು ಇನ್ವೆಸ್ಟ್ ಮಾಡೋಕೆ ಆಗಲ್ಲ ತುಂಬಾ ಹೆವಿ ಆಗುತ್ತೆ ಅಂತ ಹೇಳಿ ಸ್ವೀಪರ್ ಮಷೀನ್ ಗಳನ್ನ ಬಾಡಿಗೆಗೆ ಪಡೆಯೋಣ ಅಂತ ನಿರ್ಧಾರ ಮಾಡಿದೆಯಂತೆ ಆದರೆ ಇಷ್ಟು ದೊಡ್ಡ ಮೊತ್ತವನ್ನ ಬಾಡಿಗೆ ಕೊಡೋದು ಎಷ್ಟು ಸೂಕ್ತ ಅನ್ನೋದಕ್ಕೆ ಸಮರ್ಥನೆ ಕೊಟ್ಟಿಲ್ಲ ಏಳು ವರ್ಷಕ್ಕೆ ಒಂದು ಸ್ವೀಪಿಂಗ್ ಮಷೀನ್ಗೆ 13 ಕೋಟಿ ಬಾಡಿಗೆ ಕೊಡಬೇಕಾಗುತ್ತೆ ಆದರೆ ಪ್ರತಿವರ್ಷ ಮಷೀನ್ಗೆಎರಡು ಕೋಟಿ ತನಕ ಬಾಡಿಗೆ ಆಗುತ್ತೆ ಒಂದು ದಿನಕ್ಕೆ ಎಲ್ಲಾ ಮಷೀನ್ಗಳಿಗೆ ಲೆಕ್ಕ ಹಾಕಿದ್ರೆ 24 ಲಕ್ಷ ತನಕ ಬರಿ ಬಾಡಿಗೆಗೆ ಹೋಗುತ್ತೆ ಇದು ಒಂದು ಮಷೀನ್ ಬಾಡಿಗೆ ಪಡೆದರೆ ಆಗು ಖರ್ಚು ಆದರೆ ನಾವು ಒಂದು ಸ್ವೀಪರ್ ಯಂತ್ರ ಖರೀದಿ ಮಾಡಿದ್ರೆ ಎಷ್ಟಾಗುತ್ತೆ ಅಂತ ಕೂಡ ಲೆಕ್ಕ ಹಾಕಬೇಕು. ಸದ್ಯಕ್ಕೆ ಬೆಂಗಳೂರಲ್ಲಿ 25 ರಿಂದ 26 ಸ್ವೀಪಿಂಗ್ ಮಷೀನ್ಗಳನ್ನ ಜಿಬಿಎ ಯೂಸ್ ಮಾಡುತ್ತೆ.

ಒಂದೇ ಮಾದರಿಯ ಮಷೀನ್ಸ್ ಅಲ್ಲ 2017 18ರಲ್ಲಿ ಸರ್ಕಾರ 17 ಮಷೀನ್ಗಳನ್ನ ಖರೀದಿನೇ ಮಾಡಿತ್ತು ಬಾಡಿಗೆಗಲ್ಲ ಖರೀದಿ ಆಗ ಅವುಗಳ ಬೆಲೆ 1.35 35 ಕೋಟಿ ರೂಪಾಯಿ ಇತ್ತು ಪ್ರತಿ ಮಷೀನ್ಗೆ ಜೊತೆಗೆ ಉಳಿದವು ಟ್ರಕ್ ಮೌಂಟೆಡ್ ಸ್ವೀಪರ್ಗಳು ಒದು ಕೋಟಿ ರೂಪಾಯವರೆಗೂ ಕೂಡ ಬೆಲೆ ಬಾಳ್ತವೆ ಇದರ ಜೊತೆಗೆಜಿಬಿಎ ಹೊಸ ಟೆಕ್ನಾಲಜಿಯ ಸಿಟಿ ಕ್ಯಾಟ್ vಿ20 ಅನ್ನೋ ಮಷೀನ್ಗಳನ್ನ ಕೂಡ ಯೂಸ್ ಮಾಡುತ್ತೆ ಈ ಸಿಟಿ ಕ್ಯಾಟ್ ಮಷೀನ್ಗಳನ್ನ ಸ್ವೀಡನ್ನ ಬಶರ್ ಅನ್ನೋ ಕಂಪನಿ ನಿರ್ಮಾಣ ಮಾಡುತ್ತೆ ಬೆಂಗಳೂರಲ್ಲಿ ಸಿಟಿ ಕ್ಯಾಟ್ ಸ್ವೀಪರ್ಗಳ ಸಂಖ್ಯೆ ಎಷ್ಟಿದೆ ಕರೆಕ್ಟಾಗಿ ಮಾಹಿತಿ ಕೊಟ್ಟಿಲ್ಲ ಯಾಕಂದ್ರೆ ಬೆಂಗಳೂರಲ್ಲಿ ಸಿಟಿ ಕ್ಯಾಟ್ ಸ್ವೀಪರ್ ಗಳನ್ನ ಪೈಲಟ್ ಅಂದ್ರೆ ಪ್ರಾಯೋಗಿಕ ಯೋಜನೆಯಾಗಿ ಬಳಕೆ ಮಾಡಿರೋದು ಈ ಸಿಟಿ ಕ್ಯಾಟ್ ಸ್ವೀಪರ್ಗಳುಮೂರು ಕೋಟಿ ತನಕ ಕಾಸ್ಟ್ ಆಗ್ತವೆ. ಜೊತೆಗೆ ಸಿಟಿ ಕ್ಯಾಟ್ ಕಂಪನಿ ಸ್ವೀಪರ್ಗಳು ಅತ್ಯಾಧುನಿಕ ಸಣ್ಣ ಧೂಳಿನ ಕಣಗಳನ್ನ ಅಪ್ ಟು pಿಎಂ 2.5 ಪಾರ್ಟಿಕಲ್ಸ್ ತನಕವು ಎಲ್ಲ ಬಳಕೊಂಡು ಹೋಗೋ ಸಾಮರ್ಥ್ಯವನ್ನ ಹೊಂದಿವೆ ನಾವು ಮಷೀನ್ ಖರೀದಿ ಲೆಕ್ಕ ಹಾಕಬೇಕು ಅಂದ್ರೆ ಸಣ್ಣ ಮಷೀನ್ ಬೇಡ ಈ ಅತ್ಯಾಧುನಿಕ ಹಾಗೂ ಬೆಂಗಳೂರಲ್ಲಿ ಯೂಸ್ ಮಾಡ್ತಿರೋ ಸಿಟಿ ಕ್ಯಾಡ್ ತರಹದ 46 ಮಷೀನ್ಗಳನ್ನೇ ಖರೀದಿ ಮಾಡ್ತೀವಿ ಅಂದ್ರು ಕೂಡ ಖರ್ಚು ಕಡಿಮೆ ಆಗುತ್ತೆ 3 ಕೋಟಿ ಮೌಲ್ಯದ 46 ಮಷೀನ್ಗಳಿಗೆ 138 ಕೋಟಿ ರೂಪಾಯಿ ಖರ್ಚಾಗುತ್ತೆ ಇಂಕ್ಲೂಡಿಂಗ್ ಇಂಪೋರ್ಟ್ ಖರೀದಿ ಖರ್ಚನ್ನ ರೌಂಡ್ ಫಿಗರ್ ನಲ್ಲಿ 150 ಕೋಟಿ ಅಂತ ಅನ್ಕೊಳ್ಳೋಣ ಬೆಲೆ ಏರಿಕೆಯಲ್ಲ ಸೇರಿಸಿ ಒಂದು 200 ಕೋಟಿ ಅಂತನೆ ಬೇಕಾದರೆ ಅಂಕೊಳ್ಳೋಣ ಏನು ಈ ಮಷೀನ್ಗಳ ಸರ್ವಿಸ್ ಕಾಸ್ಟ್ ಫಿಕ್ಸ್ ಇರಲ್ಲ ಯಾಕಂದ್ರೆ ಸ್ವೀಪರ್ ಎಷ್ಟು ಯೂಸ್ ಆಗಿದೆ ಅನ್ನೋದರ ಮೇಲೆ ಮೇಂಟೆನೆನ್ಸ್ ಕಾಸ್ಟ್ ನಿರ್ಧಾರ ಆಗುತ್ತೆ.

ಮೂವಿಂಗ್ ಪಾರ್ಟ್ಸ್ ಇರುತ್ತೆ ರಿಪೇರಿಂಗ್ ಬರುತ್ತೆ ರಿಪ್ಲೇಸ್ಮೆಂಟ್ಸ್ ಎಲ್ಲ ಬರುತ್ತೆ ಪಾರ್ಟ್ಸ್ ಬೆಂಗಳೂರಿನಲ್ಲಿ ಎಲ್ಲಾ ಕಡೆ ಮಷೀನ್ಗಳನ್ನ ಯೂಸ್ ಮಾಡಲ್ಲ ಆಯುಧ ಹಾಗೂ ಪ್ರಮುಖ ರಸ್ತೆಗಳಲ್ಲಿ ಅಷ್ಟೇ ಯೂಸ್ ಮಾಡೋದು ಈ ಹಿಂದೆ ಇದ್ದ ಸ್ವೀಪರ್ ಗಳಿಗೆ ಪ್ರತಿ ವರ್ಷಕ್ಕೆ ಎಂಟರಿಂದ 10 ಲಕ್ಷ ರೂಪಾಯಿ ಮೇಂಟೆನೆನ್ಸ್ ಖರ್ಚಿತ್ತು ಅನ್ನೋ ಮಾಹಿತಿ ಇದೆ ಅಂದ್ರೆ ಹೊಸ ಮಷೀನ್ಗಳ ಮೇಂಟೆನೆನ್ಸ್ ವರ್ಷಕ್ಕೆ 20 ಲಕ್ಷ ಹಿಡಿದ್ರು ಕೂಡ ಎಲ್ಲ 46 ಮಷೀನ್ಗಳನ್ನ ಮೇಂಟೈನ್ ಮಾಡೋಕೆ ವರ್ಷಕ್ಕೆ ಒಂಬತ್ತರಿಂದ 10 ಕೋಟಿ ರೂಪಾಯ ಆಗಬಹುದು ಏಳು ವರ್ಷಕ್ಕೆ 70 ರಿಂದ 75 ಕೋಟಿ ರೂಪಾಯಿ ಖರ್ಚಾಗಬಹುದು ಈಗ 150 ಕೋಟಿ ಹಣ ಹೊಸ ಮಷೀನ್ ಖರೀದಿ ಮಾಡೋಕೆ ಹಾಗೂ 75 ಕೋಟಿ ರೂಪಾಯಿ ದುಡ್ಡು ಏಳು ವರ್ಷಕ್ಕೆ ಮೇಂಟೆನೆನ್ಸ್ ಕಾಸ್ಟ್ ಅಂತ ನಾವು ಅಂದಾಜು ಮಾಡಿದ್ರು ಕೂಡ 225 250 ಕೋಟಿ ರೂಪಾಯಿ ಆದರೆ ಆಸುಪಾಸು ಅಂತ ಅನ್ಕೊಳ್ಳೋಣ ಅಂದ್ರೆ ಕನ್ಸಲ್ಟಿಂಗ್ ಕಂಪನಿ ಏನು 40% ಅಪ್ಫ್ರಂಟ್ ಬಾಡಿಗೆ ಕೊಡಬೇಕು ಅಂತ ಹೇಳಿತ್ತಲ್ಲ 250 ಕೋಟಿ ಅದಕ್ಕಿಂತ ಒಳಗೆನೆ ಆಗುತ್ತೆ ಜೊತೆಗೆ 46 ಮಷೀನ್ ಬಲ್ಕ್ ಆರ್ಡರ್ ಮಾಡಿದಾಗ ಡಿಸ್ಕೌಂಟ್ಗೂ ಬಾ ಯಾರಿಗೆ ಏನ್ ಮಾಡಬಹುದು ಟೆಂಡರ್ ಕರಿಬೇಕಲ್ವಾ ಯಾರು ಚೀಪ್ ಕೊಡ್ತಾರೋ ತಗೊಂಡ್ರೆ.

ನೀವು ಟೆಂಡರ್ ಅಲ್ಲಿ ಹೇಳ್ಬೇಕು ನಮಗೆ ಇಂತ ಇಷ್ಟು ಮಷೀನ್ ಬೇಕು ಈ ತರ ಕ್ವಾಲಿಟಿ ಬೇಕು ಯಾರು ಕಮ್ಮಿ ಕೊಡ್ತೀರೋ ಕೊಡಿ ಅಂತ ಹೇಳಿ ಅವಾಗ ಬಿಗ್ ಡೀಲ್ ಬೇಕು ಅಂತ ಹೇಳೋರು ಕಮ್ಮಿ ಪ್ರೈಸ್ಗೆ ಬರಬಹುದು ಬಿಡಿ ನಾವು ಆ ಲೆಕ್ಕ ಎಲ್ಲ ಕೌಂಟ್ ಮಾಡಿಲ್ಲ ಜೊತಗೆ ಇವುಗಳು ಫಿಕ್ಸಡ್ ಅಸೆಟ್ ಆಗಿ ಜಿಬಿಳೆ ಉಳಿಕೊಳ್ತಾವಲ್ಲ ಆಸ್ತಿಯಾಗಿ ಉಳಿಕೊಳ್ತಾವಲ್ಲ ಏನಿಲ್ಲ ಅಂದ್ರೂ ಕೂಡ ಒಂದು 15 20 ವರ್ಷ ಕೆಲಸ ಮಾಡ್ತಾವ ಅದಾದಮೇಲೂ ಕೂಡ ಪೂರ್ತಿ ಹಾಳಾಗಿವೆ ಅಂದ್ರು ಕೂಡ ಗೊಜರಿಗೆ ಹಾಕಿದ್ರುನು ಅಲ್ಲೂ ದುಡ್ಡು ಬರುತ್ತೆ ಒಂದು ಚೂರು ಲಾಭ ನಷ್ಟದ ಲೆಕ್ಕಾಚಾರ ಹಾಕಿದ್ರೆ ಮಷೀನ್ಗಳನ್ನ ಖರೀದಿ ಮಾಡೋದೇ ಉತ್ತಮ ಅಂತ ಈ ಕ್ಯಾಲ್ಕುಲೇಷನ್ ನೋಡಿದಾಗ ಅನ್ಸುತ್ತೆ ಹೀಗಾಗಿ ಸರ್ಕಾರ ಇದರ ಬಗ್ಗೆ ಕ್ಲಾರಿಟಿ ಕೊಡಬೇಕು ಈ ಪ್ರೈಸ್ ಯಾಕೆ ಅನ್ನೋದರ ಬಗ್ಗೆ ಕಂಪ್ಲೀಟ್ ಬ್ರೇಕ್ ಡೌನ್ ಕೊಡಬೇಕು ಜನರ ತೆರಿಗೆ ದುಡ್ಡಲ್ಲಿ ಹೋಗ್ತಿರೋದ್ರಿಂದ ಕ್ಲಾರಿಟಿ ಕೊಡಬೇಕು ಟೆಂಡರ್ ಬಗ್ಗೆ ಕಂಪ್ಲೀಟ್ ಟ್ರಾನ್ಸ್ಪರೆನ್ಸಿ ಯನ್ನ ಮೈಂಟೈನ್ ಮಾಡಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments