ಸ್ವಿಸ್ ಬ್ಯಾಂಕ್ ಈ ಒಂದು ಹೆಸರನ್ನ ಯಾರು ತಾನೇ ಕೇಳಿಲ್ಲ ಹೇಳಿ ಜಗತ್ತಿನ ಶ್ರೀಮಂತರು ಶಕ್ತಿಶಾಲಿ ವ್ಯಕ್ತಿಗಳು ತಮ್ಮ ಹಣ ಬೆಲೆ ಬಳುವಂತ ವಸ್ತುಗಳು ಮತ್ತೆ ಕಪ್ಪು ಹಣವನ್ನ ಸರ್ಕಾರದಿಂದ ಮತ್ತು ಜಗತ್ತಿನ ಕಣ್ಣಿಂದ ಮರೆಮಾಚಿ ಇಲ್ಲಿ ಸುರಕ್ಷಿತವಾಗಿ ಇಟ್ಟಿದ್ದಾರೆ ಈ ಸ್ವಿಸ್ ಬ್ಯಾಂಕ್ ಹೇಗೆ ತನ್ನ ಗ್ರಾಹಕರ ವಿವರವನ್ನ ಗೌಪ್ಯಾಗಿ ಇಡುತ್ತೆ ಸಾಮಾನ್ಯ ಜನರು ಕೂಡ ಈ ಸ್ವಿಸ್ ಬ್ಯಾಂಕ್ ಅಲ್ಲಿ ಖಾತೆಯನ್ನ ತೆರಿಬಹುದಾ ಯಾಕೆ ಈ ಜಗತ್ತಲ್ಲಿರುವಂತ ಕಳ್ಳ ಕಾಕುರು ಮತ್ತೆ ಬ್ಲಾಕ್ ಮನಿ ಮನೆಯನ್ನ ಇಟ್ಟಿರೋರು ಇದೇ ಒಂದು ಬ್ಯಾಂಕಲ್ಲಿ ಹಣವನ್ನ ಇಡ್ತಾರೆ ಅಷ್ಟಕ್ಕೂ ಈ ಒಂದು ಬ್ಯಾಂಕ್ ಎಲ್ಲಾ ರಹಸ್ಯಗಳನ್ನು ಕೂಡ ಹೇಗೆ ಕಾಪಾಡಿಕೊಳ್ಳುತ್ತೆ. ಈ ಎಲ್ಲದರ ಬಗ್ಗೆ ಸಂಪೂರ್ಣವಾಗಿ ಈ ಮುಂದೆ ತಿಳಿತಾ ಹೋಗೋಣ 1713 ರಲ್ಲಿ ಸ್ವಿಟ್ಜರ್ಲ್ಯಾಂಡ್ನ ಸರ್ಕಾರ ಯಾವುದೇ ಬ್ಯಾಂಕ್ ಆಗಲಿ ತಮ್ಮ ಗ್ರಾಹಕರ ವಿವರವನ್ನ ಯಾರೊಂದಿಗೂ ಹಂಚಿಕೊಳ್ಳಬಾರದು ಮತ್ತೆ ಅದನ್ನ ಗೌಪ್ಯವಾಗಿ ಇಡಬೇಕು ಎಂಬ ನಿಯಮವನ್ನ ಜಾರಿ ಮಾಡುತ್ತೆ ಈ ಒಂದು ನಿಯಮ ಜಾರಿಯಾದಕೂ ಕೂಡಲೇ ಸ್ವಿಟ್ಜರ್ಲ್ಯಾಂಡ್ನ ರಾಜಧಾನಿ ಜೆನಿವಾ ಫ್ರಾನ್ಸ್ ಮತ್ತೆ ಇತರ ಯುರೋಪಿನ ದೇಶಗಳಲ್ಲಿದ್ದಂತ ಶ್ರೀಮಂತರು ಮತ್ತು ಅಧಿಕಾರಿಗಳು ಗಳು ತಮ್ಮ ಹಣವನ್ನ ಸ್ವಿ್ಜರ್ಲ್ಯಾಂಡ್ ನ ಬ್ಯಾಂಕ್ನಲ್ಲಿ ಇಡೋದಕ್ಕೆ ಶುರು ಮಾಡ್ತಾರೆ.
ಈ ಸ್ವಿಸ್ ಬ್ಯಾಂಕ್ ಗಳಲ್ಲಿ ಗೌಪ್ಯತೆ ಎಂಬ ಹೊಸ ಪದ್ಧತಿ ಶುರುವಾಗುತ್ತೆ. ಈ ಒಂದು ನಿಯಮ ಜಾರಿಯಾದ ನಂತರ ಹೊರ ದೇಶದಿಂದ ಬರ್ತಿದ್ದಂತ ಹಣ ಸ್ವಿ್ಜರ್ಲ್ಯಾಂಡ್ ನ ಸರ್ಕಾರಕ್ಕೆ ತುಂಬಾ ಸಹಕಾರಿ ಆಯಿತು. ನಂತರ 1934 ರಲ್ಲಿ ಸ್ವಿಟ್ಜರ್ಲ್ಯಾಂಡ್ ನ ಸರ್ಕಾರ ಮತ್ತೊಂದು ಕಾನೂನನ್ನ ಜಾರಿ ಮಾಡುತ್ತೆ. ಆ ಒಂದು ಕಾನೂನು ಯಾವುದಪ್ಪಾ ಅಂದ್ರೆ ಬ್ಯಾಂಕಿಂಗ್ ಆಕ್ಟ್ 1934 ಇದರ ಆರ್ಟಿಕಲ್ 47ರ ಪ್ರಕಾರ ಸ್ವಿಟ್ಜರ್ಲ್ಯಾಂಡ್ನ ಯಾವುದೇ ಬ್ಯಾಂಕ್ ತನ್ನ ಗ್ರಾಹಕರ ವಿವರಗಳನ್ನ ಜಗತ್ತಿನ ಯಾವ ಸರ್ಕಾರಕ್ಕಾದರೂ ಅಥವಾ ಟ್ಯಾಕ್ಸ್ ಏಜೆನ್ಸಿಗಳಿಗೆ ಏನಾದ್ರೂ ಹಂಚಿಕೊಂಡರೆ ಅದನ್ನ ಪನಿಷಬಲ್ ಅಫೆನ್ಸ್ ಅಂತ ಪರಿಗಣಿಸಲಾಗುತ್ತೆ ಮತ್ತೆ ಆ ಮಾಹಿತಿ ಯಾವುದೇ ಕ್ರಿಮಿನಲ್ ವ್ಯಕ್ತಿಯಾದರೂ ಸರಿ ಅವನು ಏನೇ ಕೆಲಸಗಳನ್ನ ಮಾಡಿದ್ರು ಸರಿ ಯಾವುದೇ ಕಾರಣಕ್ಕೂ ಅದನ್ನ ಹೊರಗಡೆ ಹಂಚಿಕೊಳ್ಳುವಂತಿಲ್ಲ ಯಾರಾದರೂ ಈ ಒಂದು ನಿಯಮವನ್ನ ಉಲ್ಲಂಘನೆ ಮಾಡಿದ್ರೆ ಅವರಿಗೆ ಐದು ವರ್ಷದವರೆಗೂು ಜೈಲು ಶಿಕ್ಷೆಯನ್ನ ವಿಧಿಸಲಾಗುತ್ತೆ ಇಂತ ಒಂದು ಕಾನೂನ ಅಲ್ಲಿ ಜಾರಿಯಾಯಿತು ಆ ಒಂದು ಕಾನೂನು ಆ ಕಾಲದಲ್ಲಿ ವಿಶ್ವದ ಅತ್ಯಂತ ಕಠಿಣ ಬ್ಯಾಂಕಿಂಗ್ ಲಾ ಆಗಿತ್ತು ಮತ್ತೆ ಇವತ್ತಿಗೂನು ಆ ಒಂದು ಕಾನೂನು ಜಾರಿಯಲ್ಲಿದೆ ಈ ಒಂದು ಕಾರಣದಿಂದಲೇ ಜಗತ್ತಿನ ಶ್ರೀಮಂತ ಮತ್ತು ಶಕ್ತಿಶಾಲಿ ಜನರಿಗೆ ಸ್ವಿಟ್ಜರ್ಲ್ಯಾಂಡ್ನ ಬ್ಯಾಂಕ್ ಒಂದು ಆಕರ್ಷಕ ಸ್ಥಳವಾಗಿ ಮಾರ್ಪಟ್ತು ಯಾಕೆಂದ್ರೆ ತಮ್ಮ ಬ್ಲಾಕ್ ಮನಿ ಅಥವಾ ಅಪಾರ ಸಂಪತ್ತಿನ ಉತ್ತರವನ್ನು ಕೊಡಬೇಕಾದಂತ ಅವಶ್ಯಕತೆ ಯಾರಿಗೂನು ಇರೋದಿಲ್ಲ ಅದು ತಮ್ಮ ದೇಶದ ಸರ್ಕಾರಕ್ಕಾದರೂ ಸರಿ ತಮ್ಮ ಸಂಪತ್ತಿನ ಮಾಹಿತಿಯನ್ನ ಈ ಮೂಲಕ ಗೌಪಿಯಾಗಿ ಇಡಬಹುದು ಒಸಾಮಾ ಬೆನ್ಲಾಡನ್ ಕೂಡ ಸ್ವಿಸ್ ಬ್ಯಾಂಕ್ ಅನ್ನ ಬಳಸ್ತಾ ಇದ್ದ.
ಈ ಸ್ವಿಟ್ಜರ್ಲ್ಯಾಂಡ್ ದೇಶ ರಾಜಕೀಯವಾಗಿ ತಟಸ್ಥವಾಗಿರೋದೇ ಅದರ ದೊಡ್ಡ ವಿಶೇಷತೆ ಉದಾಹರಣೆಗೆ ಪಾಕಿಸ್ತಾನದಲ್ಲಿ ಇಂತ ಬ್ಯಾಂಕ್ ಇದ್ದರೆ ಭಾರತೀಯರು ಅಲ್ಲಿ ಹಣವನ್ನ ಇಡ್ತಾ ಇರಲಿಲ್ಲ ಬ್ಯಾಂಕ್ ಎಷ್ಟೇ ಉತ್ತಮವಾಗಿದ್ರೂ ಕೂಡ ಜನರು ಅದರ ಮೇಲೆ ವಿಶ್ವಾಸವನ್ನ ಇಡ್ತಾ ಇರಲಿಲ್ಲ ಆದರೆ ಈ ಸ್ವಿಟ್ಜರ್ಲ್ಯಾಂಡ್ ದೇಶ ಯಾವ ದೇಶದೊಂದಿಗೂ ಕೂಡ ಶತ್ರುತ್ವವನ್ನ ಇಟ್ಟಕೊಂಡಿಲ್ಲ ಜೊತೆಗೆ ಯಾರ ಪರ ಮತ್ತು ವಿರೋಧವಾಗಿ ಅದು ಮಾತನಾಡೋದಿಲ್ಲ ಸ್ವಿಟ್ಜರ್ಲ್ಯಾಂಡ್ 1501 ರಿಂದ ಇವತ್ತಿನವರೆಗೂ ಯಾವುದೇ ಯುದ್ಧವನ್ನ ಮಾಡಿಲ್ಲ ಅಂದ್ರೆ ಸುಮಾರು 500 ವರ್ಷ ಕಳೆದರು ಕೂಡ ಅದು ಇವತ್ತಿನವರೆಗೂ ಯಾವುದೇ ದೇಶದೊಂದಿಗೆ ಯುದ್ಧವನ್ನ ಮಾಡಿಲ್ಲ ಈ ಒಂದು ವಿಚಾರ ಸ್ವಿ್ಜರ್ಲ್ಯಾಂಡ್ಗೆ ದೊಡ್ಡ ಲಾಭದಾಯಕವಾಗಿದೆ. ಈ ಒಂದು ಕಾರಣದಿಂದ ಅನೇಕರು ಬೇರೆ ಬೇರೆ ದೇಶದಿಂದ ಸ್ವಿ್ಜರ್ಲ್ಯಾಂಡ್ಗೆ ಹಣವನ್ನು ತಂದು ಬ್ಯಾಂಕ್ನಲ್ಲಿ ಇಡೋದಕ್ಕೆ ಶುರು ಮಾಡ್ತಾರೆ. 1944 ರಲ್ಲಿ ಜರ್ಮನಿಯ ಇಂಟೀರಿಯರ್ ಮಿನಿಸ್ಟರ್ ಹೈನ್ರಿಚ್ ಹಿಮ್ಲರ್ ಕೂಡ ಸ್ವಿ್ಜರ್ಲ್ಯಾಂಡ್ ನಲ್ಲಿ ಸ್ಪೆಷಲ್ ಅಕೌಂಟ್ ಅನ್ನ ಹೊಂದಿದ್ರು ಅಂತ ಇತ್ತೀಚಿಗೆ ಹೊರ ಬಂದಂತ ಡಾಕ್ಯುಮೆಂಟರಿ ಒಂದರ ಮೂಲಕ ಗೊತ್ತಾಗಿದೆ. ಈ ಸ್ವಿಸ್ ಬ್ಯಾಂಕ್ ನಲ್ಲಿ ಬ್ಲಾಕ್ ಮನಿ ಇರೋರು ಅಥವಾ ಶ್ರೀಮಂತರು ಮತ್ತೆ ಶಕ್ತಿಶಾಲಿ ವ್ಯಕ್ತಿಗಳು ಮಾತ್ರ ಹಣವನ್ನ ಇಡೋದಿಲ್ಲ. ಜನ ತಮ್ಮ ಪ್ರೈವೆಸಿಯನ್ನ ಹೊರತುಪಡಿಸಿ ನಾನ ಕಾರಣದಿಂದನೂ ಕೂಡ ಸ್ವಿಸ್ ಬ್ಯಾಂಕ್ ನಲ್ಲಿ ಹಣವನ್ನ ಇಡೋದಕ್ಕೆ ಇಚ್ಚಿಸುತ್ತಾರೆ ಅಥವಾ ಅಲ್ಲಿನ ಬ್ಯಾಂಕ್ ವಿಶ್ವಾಸಾರ್ಹ ಆಗಿರಲ್ವೋ ಅಂತ ದೇಶದ ಜನರು ಕೂಡ ಸ್ವಿಸ್ ಬ್ಯಾಂಕ್ ನಲ್ಲಿ ಹಣವನ್ನ ಇಡುವುದಕ್ಕೆ ಇಷ್ಟ ಪಡ್ತಾರೆ. ಈ ಸ್ವಿ್ಜರ್ಲ್ಯಾಂಡ್ ನ ಕರೆನ್ಸಿ ಆಗಿರುವಂತ ಸ್ವಿಸ್ ಫ್ರಾಂಕ್ ಪ್ರಪಂಚದ ಪ್ರೀಮಿಯಂ ಕರೆನ್ಸಿಗಳಲ್ಲಿ ಒಂದಾಗಿದೆ. ಇವೆಲ್ಲಾ ಕಾರಣಗಳಿಂದ ಜನರಿಗೆ ಬೇರೆ ದೇಶದ ಬ್ಯಾಂಕ್ಗಳಿಗಿಂತನೂ ಕೂಡ ಸ್ವಿಸ್ ಬ್ಯಾಂಕ್ ಮೇಲೆ ಅತಿಯಾದಂತ ನಂಬಿಕೆ.
ಈ ಜಿ 20 ಕಂಟ್ರೀಸ್ ಮತ್ತು ಓಈಸಿಡಿ ಕಂಟ್ರೀಸ್ ನ ಗ್ರೂಪ್ ಸ್ವಿ್ಜರ್ಲ್ಯಾಂಡ್ ಗೆ ತಮ್ಮ ನಿಯಮವನ್ನ ಸ್ವಲ್ಪ ಸಡಿಲ ಮಾಡುವಂತೆ ಸಾಕಷ್ಟು ಬಾರಿ ಒತ್ತಡವನ್ನ ಹಾಕಿದ್ರು. ಆದರೆ ಸ್ವಿಟ್ಜರ್ಲ್ಯಾಂಡ್ ಇವರೆಲ್ಲರ ಮಾತನ್ನ ಸೀರಿಯಸ್ ಆಗಿ ತೆಗೆದುಕೊಳ್ಳದೆ ಮತ್ತಷ್ಟು ಕಠಿಣ ಕಾನೂನನ್ನ ಜಾರಿ ಮಾಡುತ್ತೆ. ಯಾರಾದರೂ ಬ್ಯಾಂಕ್ ಆಫೀಷಿಯಲ್ಸ್ ಯಾವುದಾದರೂ ಮಾಹಿತಿಯನ್ನ ಹೊರಗಡೆ ಕೊಟ್ಟರೆ ಅದನ್ನ ಪನಿಷೇಬಲ್ ಅಫೆನ್ಸ್ ಅಂತ ಪರಿಗಣಿಸಲಾಗುತ್ತೆ. ಇದನ್ನೆಲ್ಲ ಕೇಳಿದ ಮೇಲೆ ನಿಮಗೆ ಒಂದು ಅನುಮಾನ ಮೂಡಬಹುದು. ಈ ಸ್ವಿಸ್ ಬ್ಯಾಂಕ್ ನಲ್ಲಿ ಹೇಗೆ ಅಕೌಂಟ್ ಅನ್ನ ಓಪನ್ ಮಾಡೋದು ಎಂಬ ಪ್ರಶ್ನೆ ಕೇವಲ ಶ್ರೀಮಂತರು ಮಾತ್ರ ಅಲ್ಲದೆ ನೀವು ನಾವು ಕೂಡ ಈ ಸ್ವಿಸ್ ಬ್ಯಾಂಕ್ ನಲ್ಲಿ ಅಕೌಂಟ್ ಅನ್ನ ಓಪನ್ ಮಾಡಬಹುದು ಅದು ಹೇಗೆ ಅಂತ ಈಗ ನೋಡೋಣ ನೀವು ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ರೂ ಕೂಡ ಯಾವುದೇ ದೇಶದ ಪ್ರಜೆ ಆಗಿದ್ರೂ ಕೂಡ ಮನೆಯಲ್ಲಿ ಕೂತು ಸ್ವಿಸ್ ಬ್ಯಾಂಕ್ ನಲ್ಲಿ ಅಕೌಂಟ್ ಅನ್ನ ಓಪನ್ ಮಾಡಬಹುದು ಆದರೆ ಇಲ್ಲಿ ಕೆಲವು ಕಂಡೀಷನ್ ಗಳಿದ್ದಾವೆ ನಿಮ್ಮ ಬಳಿ ಕನಿಷ್ಠ ಒಂದು ಮಿಲಿಯನ್ ಸ್ವಿಸ್ ಪ್ರಾಂಕ್ ಇರಬೇಕು ಅಂದ್ರೆ ಸ್ವಿ್ಜರ್ಲ್ಯಾಂಡ್ನ ಒಂದು ಮಿಲಿಯನ್ ಕರೆನ್ಸಿ ಇರಬೇಕು ಆದರೆ ಮ್ಯಾಕ್ಸಿಮಮ್ ಎಷ್ಟು ಬೇಕಾದರೂ ಇರಬಹುದು ಆದ್ರೆ ಮಿನಿಮಂ ಒಂದು ಮಿಲಿಯನ್ ಆ ದೇಶದ ಕರೆನ್ಸಿ ಇರಲೇಬೇಕು ಇನ್ನು ಸ್ವಿಸ್ ಬ್ಯಾಂಕ್ ನಲ್ಲಿ ಅಕೌಂಟ್ನ್ನ ಓಪನ್ ಮಾಡೋದಕ್ಕೆ ನಿಮ್ಮ ಮಿನಿಮಮ್ ಏಜ್ 18 ವರ್ಷ ಆಗಿರಲೇಬೇಕು ಜೊತೆಗೆ ಆರು ತಿಂಗಳು ವ್ಯಾಲಿಡಿಟಿ ಇರುವಂತ ವ್ಯಾಲಿಡ್ ಪಾಸ್ಪೋರ್ಟ್ ಇರಲೇಬೇಕು ಇದರ ಜೊತೆಗೆ ನಿಮ್ಮ ರೆಸ್ಯೂಮನ್ನು ಕೂಡ ಕಳಿಸಬೇಕು.
ಆ ಒಂದು ರೆಸ್ಯೂಮ್ನಲ್ಲಿ ನಿಮ್ಮ ಸ್ಕಿಲ್ಸ್ ನೀವು ಏನು ಕೆಲಸ ಮಾಡ್ತೀರಾ ಮತ್ತೆ ಯಾವ ಯಾವ ಕಂಪನಿಗಳಲ್ಲಿ ಅಥವಾ ಎಲ್ಲೆಲ್ಲಿ ಕೆಲಸ ಮಾಡ್ತಿದ್ದೀರಾ ಎಂಬುದರ ಎಲ್ಲ ಡೀಟೇಲ್ಸ್ ಅದರಲ್ಲಿ ಸ್ಪಷ್ಟವಾಗಿ ಬರೆದಿರಬೇಕು ನೀವು ಸಬ್ಮಿಟ್ ಮಾಡೋದಕ್ಕೆ ಹೊರಟಿರುವಂತ ಆ ಒಂದು ಫಂಡ್ ನಿಮ್ಮ ಬಳಿ ಹೇಗೆ ಬಂತು ಅದರ ಮೂಲ ಏನು ಎಂಬುದರ ವಿವರವನ್ನು ಕೂಡ ನೀವು ಕೊಡಬೇಕು ಬೇಕಾಗುತ್ತೆ ನೀವು ಯಾವುದೇ ಸಮಯದಲ್ಲಿ ಮತ್ತೆ ಯಾವ ಭಾಷೆಯಲ್ಲೂ ಕೂಡ ನೀವು ಅವರೊಂದಿಗೆ ಸಂಪರ್ಕವನ್ನ ಮಾಡಬಹುದು ಇಂಟರ್ನ್ಯಾಷನಲ್ ಕಸ್ಟಮರ್ ಗಳಿಗೆ ಎಲ್ಲಾ ರೀತಿಯಾದಂತ ಸೌಲತುಗಳು ಕೂಡ ಅವರಲ್ಲಿ ಲಭ್ಯ ಇರುತ್ತೆ ಮೊದಲು ಸ್ವಿಸ್ ಬ್ಯಾಂಕ್ ನಲ್ಲಿ ಅಕೌಂಟ್ನ್ನ ತೆರೆಯೋದು ತುಂಬಾ ಸುಲಭವಾಗಿತ್ತು ಆದರೆ ಸ್ವಿಟ್ಜರ್ಲ್ಯಾಂಡ್ ನ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚಾಯಿತು ಜೊತೆಗೆ ಹೊಸ ಹೊಸ ಮನಿ ಲ್ಯಾಂಡಿಂಗ್ ಕಾನೂನುಗಳು ಕೂಡ ಬಂದ್ವು ಹೀಗಾಗಿ ಸ್ವಿಸ್ ಬ್ಯಾಂಕ್ ನಲ್ಲಿ ಅಕೌಂಟ್ನ್ನ ತೆರೆಯೋದು ಮತ್ತು ಹಣವನ್ನ ಜಮಾ ಮಾಡೋದು ಸ್ವಲ್ಪ ಕಷ್ಟ ಆಗಿದೆ ಇಷ್ಟೆಲ್ಲ ಕಠಿಣ ನಿಯಮಗಳು ಇದ್ದರೂ ಕೂಡ ಕೋವಿಡ್ ಆದ ನಂತರ ಸ್ವಿಸ್ ಬ್ಯಾಂಕ್ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇರೆ ಬೇರೆ ದೇಶಗಳಿಂದ ಹಣ ಬಂದು ಸೇರಿತ್ತು ಯುಕ್ರೇನ್ ಮತ್ತು ರಷ್ಯಾ ಯುದ್ಧ ನಡೆತಿರುವಾಗ ಈ ಎರಡು ದೇಶದ ಜನರು ತಮ್ಮ ಹಣವನ್ನ ಸುರಕ್ಷಿತವಾದಂತ ಜಾಗದಲ್ಲಿ ಇಡೋದಕ್ಕೆ ಸ್ವಿಸ್ ಬ್ಯಾಂಕ್ ಅನ್ನೇ ಅದಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿನೇ ಸ್ವಿಸ್ ಬ್ಯಾಂಕ್ ನ ಡಿಮ್ಯಾಂಡ್ ಇನ್ನು ಕೂಡ ಹೆಚ್ಚಾಗಿದೆ.
ಜಗತ್ತಿನ ಎಲ್ಲಾ ಕಡೆ ಡಿಜಿಟಲೈಜೇಶನ್ ನಡೀತಿರುವಾಗ ಸ್ವಿಸ್ ಬ್ಯಾಂಕ್ ಕೂಡ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಅನ್ನ ಬಳಸೋದಕ್ಕೆ ಶುರು ಮಾಡ್ತು. ಮತ್ತೆ ಬಳಕೆದಾರನ ಮೊಬೈಲ್ ಪೇಮೆಂಟ್ ಸಿಸ್ಟಮ್ ಕನೆಕ್ಟ್ ಮಾಡುವಂತ ಪ್ರಯತ್ನ ಕೂಡ ಅದು 2020ರ ಸ್ವಿಸ್ ಪೇಮೆಂಟ್ ಸರ್ವೆ ಪ್ರಕಾರ ಸ್ವಿ್ಜರ್ಲ್ಯಾಂಡ್ ನಲ್ಲಿ ಜನ ಕ್ಯಾಶ್ ಗಿಂತನೂ ಕೂಡ ಮೊಬೈಲ್ ಪೇಮೆಂಟ್ ಸಿಸ್ಟಮ್ ಅನ್ನ ಹೆಚ್ಚಾಗಿ ಬಳಸ್ತಿದ್ದಾರೆ. ಸ್ವಿಸ್ ಬ್ಯಾಂಕ್ ನ ಸಾಮಾನ್ಯ ಅಕೌಂಟ್ ಅನ್ನ ಮನೆಯಲ್ಲೇ ಕೂತು ಯಾರು ಬೇಕಾದ್ರು ಓಪನ್ ಮಾಡಬಹುದು ಆದರೆ ಸ್ವಿಸ್ ಬ್ಯಾಂಕ್ ತನ್ನ ನಂಬರ್ಡ್ ಅಕೌಂಟ್ ನಿಂದ ಪ್ರಸಿದ್ಧಿಯಾಗಿದೆ. ಈ ಒಂದು ಅಕೌಂಟ್ ನಲ್ಲಿ ಶಕ್ತಿಶಾಲಿ ಮತ್ತು ಶ್ರೀಮಂತ ಜನ ತಮ್ಮ ಹಣವನ್ನ ಇಡ್ತಾರೆ. ಈ ನಂಬರ್ಡ್ ಅಕೌಂಟ್ನ್ನ ತೆರೆಯುವುದು ಅಷ್ಟು ಸುಲಭದ ಕೆಲಸ ಅಲ್ಲ. ಈ ಒಂದು ಅಕೌಂಟ್ನ್ನ ತೆರೆಯವರು ಸ್ವಿಟ್ಜರ್ಲ್ಯಾಂಡ್ಗೆ ಹೋಗಿ ಬ್ಯಾಂಕನ್ನ ಭೇಟಿ ಮಾಡಲೇಬೇಕು.ಇನ್ನ ಈ ನಂಬರ್ ಎಟ್ ಅಕೌಂಟ್ನಲ್ಲಿ ನಿಮ್ಮ ಪ್ರೈವಸಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತೆ. ಜಗತ್ತಿನ ಯಾವ ಶಕ್ತಿಶಾಲಿ ಸರ್ಕಾರಕ್ಕೂ ಟ್ಯಾಕ್ಸ್ ಸಂಬಂಧ ಮಾಹಿತಿ ವಿನಿಮಯದ ಒಪ್ಪಂದ ಸ್ವಿಟ್ಜರ್ಲ್ಯಾಂಡ್ ನ ಜೊತೆ ಇಲ್ಲದೆ ಇದ್ದರೆ ಸ್ವಿಸ್ ಬ್ಯಾಂಕ್ ನಿಮ್ಮ ಯಾವುದೇ ವಿವರವನ್ನ ಎಂತ ಪರಿಸ್ಥಿತಿ ಬಂದ್ರು ಕೂಡ ಅದು ಕೊಡೋದಿಲ್ಲ. ಈ ನಂಬರ್ ಎಡ್ ಅಕೌಂಟ್ನ ವಿಶೇಷತೆ ಏನು ಅಂದ್ರೆ ನಿಮ್ಮ ಹೆಸರಿನ ಜಾಗಕ್ಕೆ ಒಂದು ಕೋಡನ್ನ ಕೊಡಲಾಗುತ್ತೆ. ಬ್ಯಾಂಕ್ನ ಕೆಲವೇ ಕೆಲ ಆಯುಧ ಸಿಬ್ಬಂದಿಯನ್ನ ಹೊರತುಪಡಿಸಿ ಈ ಒಂದು ಅಕೌಂಟ್ ಗಳಲ್ಲಿ ಏನು ನಡೆದಿದೆ ಅಂತ ಯಾರಿಗೂನು ಗೊತ್ತಾಗೋದೇ ಇಲ್ಲ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಯಾರಿಗಾದ್ರೂ ಹಣವನ್ನ ಕಳಿಸಬೇಕು ಅಂದ್ರೆ ಹೆಸರು, ಅಕೌಂಟ್ ಸಂಖ್ಯೆ, ಐಎಫ್ಎಸ್ಸಿ ಕೋಡ್, ಬ್ರಾಂಚ್ ಇದೆಲ್ಲ ವಿವರವನ್ನ ಕೊಡಬೇಕಾಗುತ್ತೆ. ಆದರೆ ಸ್ವಿಸ್ ಬ್ಯಾಂಕ್ ನ ನಂಬರ್ಡ್ ಅಕೌಂಟ್ ನಲ್ಲಿ ಕೇವಲ ನಂಬರ್ ಅನ್ನ ಶೇರ್ ಮಾಡಿದ್ರೆ ಸಾಕು ಟ್ರಾನ್ಸಾಕ್ಷನ್ ಯಾವುದೇ ಮಾಹಿತಿ ಇಲ್ಲದೆ ಗೋಪಯೋಗಿ ನಡೆದು ಹೋಗುತ್ತೆ.
ಈ ನಂಬರ್ಡ್ ಅಕೌಂಟ್ ನಲ್ಲಿ ನಿಯಂತ್ರಣ ಕಾಯ್ದೆಗಳು ತಡೆ ಕಾಯ್ದೆಗಳು ಮತ್ತೆ ಬಾಧ್ಯತೆಗಳು ಇವೆಲ್ಲವನ್ನು ಕೂಡ ಪರಿಶೀಲಿಸಲ್ಪಡುತ್ತವೆ. ಇವೆಲ್ಲವೂ ಕೂಡ ಮುಗಿದು ನಿಮ್ಮ ಅಕೌಂಟ್ ಸ್ವಿಸ್ ಬ್ಯಾಂಕ್ ನಲ್ಲಿ ಓಪನ್ ಆದಮೇಲೆ ಕಸ್ಟಮರ್ ಐಡೆಂಟಿಟಿಯನ್ನ ಉಳಿಸೋದು ಸ್ವಿಸ್ ಬ್ಯಾಂಕ್ ಗೆ ಬಹಳ ಮುಖ್ಯವಾದಂತ ಆದ್ಯತೆ ಆಗಿರುತ್ತೆ. ಈ ನಂಬರ್ಡ್ ಅಕೌಂಟ್ ನಲ್ಲಿ ಸ್ವಿಸ್ ಬ್ಯಾಂಕ್ ಕಂಪ್ಯೂಟರ್ನಲ್ಲಿ ಕಸ್ಟಮರ್ ಹೆಸರನ್ನು ಕೂಡ ತೋರಿಸೋದಿಲ್ಲ. ಆ ಬ್ಯಾಂಕ್ ನ ಯಾವುದೇ ಉದ್ಯೋಗಿಯೂ ಕೂಡ ನಿಮ್ಮ ಐಡೆಂಟಿಟಿಯನ್ನ ನೋಡೋದಕ್ಕೆ ಸಾಧ್ಯ ಆಗೋದಿಲ್ಲ. ಯಾವುದೇ ಸೈಬರ್ ಕ್ರೈಮ್ ನಡೆದ್ರು ಕೂಡ ನಿಮ್ಮ ಹೆಸರು ಹೊರ ಬರೋದಿಲ್ಲ. ಬ್ಯಾಂಕ್ ಸ್ಟೇಟ್ಮೆಂಟ್ ನಲ್ಲೂ ಕೂಡ ಅಕೌಂಟ್ ಹೋಲ್ಡರ್ ಹೆಸರು ಇರೋದಿಲ್ಲ. ಕೇವಲ ಒಂದು ನಂಬರ್ ಮಾತ್ರ ಇರುತ್ತೆ ಅದು ಸಂಪೂರ್ಣ ಅಕೌಂಟ್ ನ ಆಧಾರವಾಗಿರುತ್ತೆ. ಆ ನಂಬರ್ಡ್ ಅಕೌಂಟ್ ಅನ್ನ ಮೇಂಟೈನ್ ಮಾಡೋದಕ್ಕೆ ಬಹಳ ಖರ್ಚಾಗುತ್ತೆ. ಅಂದ್ರೆ ಒಂದು ವರ್ಷಕ್ಕೆ ಸುಮಾರು 300 ಡಾಲರ್ ಅಂದ್ರೆ 24,000 ದಿಂದ 25,000 ರೂಪಾಯ ಖರ್ಚಾಗುತ್ತೆ. ನೀವು ಸ್ವಿಟ್ಜರ್ಲ್ಯಾಂಡ್ ನ ಹೊರಗಡೆ ವಾಸ ಮಾಡ್ತಿದ್ರೆ ಬ್ಯಾಂಕ್ ನಾನ್ ರೆಸಿಡೆನ್ಸಿಯಲ್ ಫೀಸ್ ಕೂಡ ತೆಗೆದುಕೊಳ್ಳುತ್ತೆ. ಇನ್ನು ಈ ಸ್ವಿಟ್ಜರ್ಲ್ಯಾಂಡ್ ಮತ್ತೊಂದು ಸೌಲಭ್ಯವನ್ನ ಕೊಡುತ್ತೆ. ಅದೇನಪ್ಪಾ ಅಂದ್ರೆ ನೀವೇನಾದ್ರೂ ಬಯಸಿದ್ರೆ ನಿಮ್ಮ ದೇಶಕ್ಕೆ ಬ್ಯಾಂಕ್ ಸ್ಟೇಟ್ಮೆಂಟ್ ಹೋಗದಂತೆ ಮಾಡಬಹುದು. ಯಾಕೆಂದ್ರೆ ಸ್ಟೇಟ್ಮೆಂಟ್ನ ಮೂಲಕ ಸರ್ಕಾರಕ್ಕೆ ಮಾಹಿತಿ ಹೋಗಬಹುದು. ಆದರೆ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನ ಕಳಿಸಿದಂತೆ ಮಾಡೋದಕ್ಕೆ ಫೀಸ್ ಅನ್ನ ಕೊಡಬೇಕಾಗುತ್ತೆ. ಇತರ ಬ್ಯಾಂಕ್ಗಳಲ್ಲಿ ಸ್ಟೇಟ್ಮೆಂಟ್ ಕಳಿಸೋದಕ್ಕೆ ಎಕ್ಸ್ಟ್ರಾ ಫೀಸ್ ಇರುತ್ತೆ. ಆದರೆ ಇಲ್ಲಿ ಕಳಿಸಬಾರದು ಅನ್ನೋದಕ್ಕೆ ಎಕ್ಸ್ಟ್ರಾ ಅಮೌಂಟ್ ಅನ್ನ ಕಟ್ಟಬೇಕಾಗುತ್ತೆ. ನೀವು ಸ್ವಿಸ್ ಬ್ಯಾಂಕ್ ಅಲ್ಲಿ ನಂಬರ್ಡ್ ಅಕೌಂಟ್ ಅನ್ನ ಓಪನ್ ಮಾಡಿದ್ರೆ ಚೆಕ್ ಬುಕ್ ಅನ್ನು ಕೂಡ ಕೊಡೋದಿಲ್ಲ. ಏಕೆಂದ್ರೆ ಇದರಿಂದ ಅಕೌಂಟ್ ನ ಸಂಪೂರ್ಣ ಟ್ರಾನ್ಸಾಕ್ಷನ್ಗಳ ವಿವರ ಲೀಕ್ ಆಗಬಹುದು. ಹೀಗಾಗಿ ಸ್ವಿಸ್ ಬ್ಯಾಂಕ್ ಟ್ರಾವೆಲರ್ ಚೆಕ್ ಅನ್ನ ಕೊಡುತ್ತೆ. ಅದನ್ನ ಸ್ವಿಸ್ ಬ್ಯಾಂಕ್ ಇಶ್ಯೂ ಮಾಡುತ್ತೆ. ಅದರಲ್ಲಿನ ಅಮೌಂಟ್ ಮೊದಲು ಮೆನ್ಷನ್ ಆಗಿರುತ್ತೆ. ನಂತರ ಉಳಿದಂತ ವಿವರಗಳನ್ನ ಮೆನ್ಷನ್ ಮಾಡಲಾಗಿರುತ್ತೆ. ನೀವು ಅದನ್ನ ಕೇವಲ ಕರೆನ್ಸಿ ರೂಪದಲ್ಲಿ ಬಳಸಬಹುದು. ಕೆಲವೊಮ್ಮೆ ನೀವು ನ್ಯೂಸ್ ಗಳಲ್ಲೂ ಕೂಡ ಕೇಳಿರಬಹುದು.
ಯಾರಾದರೂ ಸೆಲೆಬ್ರಿಟಿಗಳ ತನಿಕೆಯನ್ನ ಮಾಡಿದಾಗ ಅವರ ಸ್ವಿಸ್ ಬ್ಯಾಂಕ್ ಟ್ರಾವೆಲ್ ಚೆಕ್ ಪತ್ತೆ ಆಗಿತ್ತು ಎಂಬ ನ್ಯೂಸ್ ಅನ್ನ ನೀವು ಕೇಳಿರ್ತೀರಾ. ಈ ಟ್ರಾವೆಲ್ ಚೆಕ್ಕುನು ಬ್ಯಾಂಕ್ 1% ಕಮಿಷನ್ ಅನ್ನ ಪ್ರತ್ಯೇಕವಾಗಿ ವಸೂಲಿ ಮಾಡುತ್ತೆ. ಇಲ್ಲಿ ಜನ ಗೋಲ್ಡ್ ಡೈಮಂಡ್ಸ್ ಮತ್ತೆ ಬೆಲೆ ಬಡುವಂತ ವಸ್ತುಗಳನ್ನ ವಿಶ್ವದ ಕಣ್ಣಿಂದ ಮರೆಮಾಚಿ ಇಡಬಹುದು. ಅಂದ್ರೆ ನೀವು ಇದನ್ನೆಲ್ಲ ಇಡೋದಕ್ಕೆ ಸುಮಾರು ಐ ಲಕ್ಷ ರೂಪಾಯ ರೆಂಟನ್ನ ಕಟ್ಟಬೇಕಾಗುತ್ತೆ. ಅಲ್ಲ ಬರಿ ಬಾಡಿಗೆನೆ ಇಷ್ಟೊಂದು ದುಬಾರಿ ಇದ್ದರೆ ಇನ್ನು ಅವರು ಬ್ಯಾಂಕ್ನ ಒಳಗೆ ಇಟ್ಟಿರುವಂತ ಆ ವಸ್ತುವಿನ ಮೌಲ್ಯ ಎಷ್ಟಿರಬಹುದು ಅಂತ ನೀವು ಲೆಕ್ಕ ಹಾಕಿ ನೋಡಿ 2008ರ ಆರ್ಥಿಕ ಬಿಕ್ಕಟ್ಟಿನ ನಂತರ ಜನರಿಗೆ ಕರೆನ್ಸಿ ಮೇಲಿನ ನಂಬಿಕೆ ಕಡಿಮೆಯಾಗಿತ್ತು. ಹೀಗಾಗಿ ಜನ ಗೋಲ್ಡ್ ಡೈಮಂಡ್ಸ್ ಮತ್ತೆ ಇತರ ಬೆಲೆ ಬಡುವಂತ ವಸ್ತುಗಳನ್ನ ಖರೀದಿ ಮಾಡಿ ಸ್ವಿಸ್ ಬ್ಯಾಂಕ್ ನಲ್ಲಿ ಸುರಕ್ಷಿತವಾಗಿ ಇಟ್ಟಿದ್ದಾರೆ. ಮತ್ತೆ ಒಂದೊಂದು ಕೋಡ್ನ ಮೂಲಕ ಆ ವಸ್ತುಗಳನ್ನ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಸ್ವಿಸ್ ಬ್ಯಾಂಕ್ ತನ್ನ ಗ್ರಾಹಕರ ಮಾಹಿತಿಯನ್ನ ವಿದೇಶಿ ಸರ್ಕಾರಗಳಿಗೆ ಕೊಟ್ಟಿರಬಹುದು ಅದು ಕೂಡ ಕೇವಲ ಬಹಳ ದೊಡ್ಡ ಅಪರಾಧದ ಆರೋಪ ಇದ್ದಂತ ಸಂದರ್ಭಗಳಲ್ಲಿ ಮಾತ್ರ ಮತ್ತೆ ಟ್ಯಾಕ್ಸ್ಗೆ ಸಂಬಂಧಪಟ್ಟಂತೆ ಅಥವಾ ಕೆಲವು ಮೈನರ್ ಇಶ್ಯೂಗಳು ಇದ್ದರೆ ಅವರು ಇಂತ ಮಾಹಿತಿಯನ್ನ ಯಾವುದೇ ಕಾರಣಕ್ಕೂ ಯಾವುದೇ ದೇಶದ ಸರ್ಕಾರಕ್ಕೆ ಕೊಡೋದಿಲ್ಲ ಆದರೆ ಈ ಸ್ವಿಸ್ ಬ್ಯಾಂಕರ್ ಅಸೋಸಿಯೇಷನ್ ವೆಬ್ಸೈಟ್ ನ ಪ್ರಕಾರ ಮನಿ ಲ್ಯಾಂಡ್ರಿಂಗ್ ಕ್ರಿಮಿನಲ್ ಆರ್ಗನೈಜೇಷನ್ ಬ್ಲಾಕ್ ಮೈಲಿಂಗ್ ಮತ್ತು ಇತರ ಗಂಭೀರ ಪ್ರಕರಣಗಳಲ್ಲಿ ಮಾಹಿತಿಯನ್ನ ಹಂಚಿಕೊಳ್ಳಬಹುದು. ಆದರೆ ಕೇವಲ ಮಾಹಿತಿಯನ್ನ ಮಾತ್ರ ಕೊಡಲಾಗುತ್ತೆ. ಹಣವನ್ನ ಹಿಂದಿರುಗಿಸೋದಿಲ್ಲ. ವೀಕ್ಷಕರೇ ಈ ಸ್ವಿಸ್ ಬ್ಯಾಂಕ್ ಫೈನಾನ್ಸಿಯಲ್ ಸೆಕ್ಯೂರಿಟಿ ಪ್ರೈವಸಿ ಮತ್ತು ಸ್ಥಿರತೆಯ ಸಂಕೇತವಾಗಿದೆ ಮತ್ತೆ ಇವತ್ತಿಗೂನು ವಿಶ್ವದ ಬ್ಯಾಂಕ್ ಸಿಸ್ಟಮ್ ನಲ್ಲಿ ಹೈಲಿ ಟ್ರಸ್ಟೆಡ್ ಬ್ಯಾಂಕ್ ಅಂದ್ರೆ ಅದು ಸ್ವಿಸ್ ಬ್ಯಾಂಕ್ ಅನ್ನೋದು ಕೂಡ ಈ ಜಗತ್ತಿಗೆ ನಂಬಿಕೆ ಬರುವಂತ ರೀತಿ ಅದು ತನ್ನ ವ್ಯವಹಾರವನ್ನ ನಡೆಸುತ್ತಾ ಇದೆ.


