Thursday, November 20, 2025
HomeTech NewsAI ಏರಿಕೆ: ಮಾನವ ಬುದ್ಧಿಗೆ ಸವಾಲೇ?

AI ಏರಿಕೆ: ಮಾನವ ಬುದ್ಧಿಗೆ ಸವಾಲೇ?

ಎಐ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೃತಕ ಬುದ್ಧಿಶಕ್ತಿ ಆಲ್ರೆಡಿ ಭಯಂಕರ ಬುದ್ಧಿವಂತರು ಎನಿಸಿಕೊಂಡ ಕೆಲವರು ಸೇರಿ ಸೃಷ್ಟಿ ಮಾಡಿರೋ ಈ ಎಐ ಸಾಧಾರಣ ಬುದ್ಧಿಶಕ್ತಿಯ ಜನರನ್ನ ಇನ್ನಷ್ಟು ದಡ್ಡರನ್ನಾಗಿ ಮಾಡ್ತಾ ಇದ್ದೀಯಾ ಈಗ ಈ ಪ್ರಶ್ನೆ ಕೇಳಲೇಬೇಕು ಯಾಕಂದ್ರೆ ದಿನಬೆಳಗಾದರೆ ಹೊಸ ಎಐ ಬರ್ತಾ ಇದೆ ಚಾಟ್ ಜಿಪಿಟಿ ಗೂಗಲ್ ನ ಜೆಮಿನಿ ಮೈಕ್ರೋಸಾಫ್ಟ್ ನ ಕೋ ಪೈಲಟ್ ola ದ ಕ್ರೆಟ್ರಿಮ್ ರಿಲಯನ್ಸ್ ನ ಹನುಮಾನ್ ಹೀಗೆ ಲೆಕ್ಕಾನೆ ಇಲ್ಲ ಒಂದಾದ್ಮೇಲೆ ಒಂದು ಬರ್ತಾನೆ ಇದೆ ಈ ಎಐ ಗಳು ಅಪಾಯಕಾರಿನ ಈ ಪ್ರಶ್ನೆಗೆ ಉತ್ತರ ಈ ಕ್ಷಣಕ್ಕೆ ಏನು ಮಾಡ್ತಾ ಇವೆ ಮುಂದೆ ಏನೇನು ಮಾಡ್ತಾವೆ ಅನ್ನೋದರ ಮೇಲೆ ಡಿಪೆಂಡ್ ಆಗುತ್ತೆ ಸದ್ಯಕ್ಕೆ ಎಐ ಗಳು ಹತ್ತಾರು ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಚುಟುಕಾಗಿ ಅದನ್ನ ಸಮ್ಮರಿ ಮಾಡಿ ಕೊಡ್ತಾ ಇವೆ ಅಂದ್ರೆ ಒಬ್ಬ ಉತ್ತಮ ಗುಣಮಟ್ಟ ಬರಹಗಾರ ತನ್ನ ತಲೆಯನ್ನು ಖರ್ಚು ಮಾಡಿ ಹುಡುಕಾಡಿ ಅನಲೈಸ್ ಮಾಡಿ ತನಗಿರೋ ಟೈಮ್ನಲ್ಲಿ ಅತಿ ಮುಖ್ಯವಾದ ಮಾಹಿತಿನ ಮಾತ್ರ ಕ್ವಿಕ್ ಆಗಿ ಕಲೆಹಾಕಿ ಹೇಗೆ ಒಂದು ಸ್ಕ್ರಿಪ್ಟ್ ಮಾಡ್ತಾನೋ ಒಂದು ಸಮ್ಮರಿ ಮಾಡ್ತಾನೋ ಒಂದು ಪ್ರೆಸೆಂಟೇಶನ್ ನ ಪಾಯಿಂಟ್ಸ್ ಮಾಡ್ತಾನೋ ಅದನ್ನ ಕ್ಷಣಗಳಲ್ಲಿ.

ಎಐ ಗಳು ಮಾಡ್ತಿವೆ ಇದರಿಂದ ಏನಾಗುತ್ತೆ ಟೈಮ್ ಉಳಿಯುತ್ತೆ ಅಂತ ನಮಗೆ ಅನಿಸುತ್ತೆ ಆದರೆ ಅವನ ಸ್ವಂತ ಯೋಚಿಸುವ ಶಕ್ತಿ ಗಾನ್ ಅವನ ಕ್ರಿಯೇಟಿವ್ ಪದಬಳಕೆ ಗಾನ್ ಅವನ ಸೆಂಟೆನ್ಸ್ ಮೇಕಿಂಗ್ ಕ್ರಿಯೇಟಿವಿಟಿ ಗಾನ್ ಅವನ ವಿಷಯ ಸಂಗ್ರಹಣೆಯ ಶಕ್ತಿ ಗಾನ್ ಅವನ ವಿಷಯಗಳ ಜೋಡಣೆಯ ಶಕ್ತಿ ಗಾನ್ ಫೈನಲಿ ಒಬ್ಬ ಉತ್ತಮ ಬರಹಗಾರನೇ ಗಾನ್ ಜೊತೆಗೆ ಈ ಎಐ ಗಳ ಬಳಿ ಬಾಯಲ್ಲಿ ಹೇಳಿದರೆ ಸಾಕು ಟೈಪ್ ಮಾಡಿನು ಕೇಳಬೇಕು ಅಂತ ಇಲ್ಲ ಟೈಪ್ ಮಾಡೋ ಕೆಲಸ ಉತ್ತರವನ್ನು ಅವೇ ಮಾಡಿಬಿಡುತ್ತವೆ ಸೋ ಬರವಣಿಗೆಯ ಶಕ್ತಿ ಟೈಪ್ ಮಾಡೋ ಶಕ್ತಿಯು ಗಾನ್ ಹಾಗೆ ಇಂದಿನ ಎಐ ಗಳು ಗ್ರಾಫಿಕ್ ಫೋಟೋಗಳನ್ನ ಕ್ರಿಯೇಟ್ ಮಾಡಿ ಕೊಡ್ತಾ ಇವೆ ವಿಡಿಯೋ ಕ್ರಿಯೇಟ್ ಮಾಡಿಕೊಡ್ತಾ ಇವೆ ಇದರಿಂದ ಯಾರಿಗೆ ಲಾಭ ಆಲ್ರೆಡಿ ಅತಿ ಬುದ್ಧಿವಂತರು ಎನಿಸಿಕೊಂಡ ಮನುಷ್ಯರು ಇದನ್ನ ತಯಾರು ಮಾಡಿದ್ದಾರೆ ಅವರು ಆಲ್ರೆಡಿ ಬುದ್ಧಿವಂತರು ಅದಕ್ಕೆ ಮಾಡಿದ್ದಾರೆ ಇದನ್ನ ಅವರಿಗೆ ಲಾಭ ಇದೆ ಯಾಕಂದ್ರೆ ಅವರು ಆಲ್ರೆಡಿ ಎಐ ತಯಾರು ಮಾಡುವಷ್ಟು ಬುದ್ಧಿವಂತರು ಮತ್ತು ಅವರಿಗೆ ತಯಾರು ಮಾಡಿದ್ದಕ್ಕೂ ದುಡ್ಡು ಸಿಗುತ್ತೆ ಹಾಗೆ ಮತ್ತಷ್ಟು ಅಡ್ವಾನ್ಸ್ಡ್ ವರ್ಷನ್ ತಯಾರಿಸೋಕು ಅವರು ತಮ್ಮ ತಲೆಯನ್ನು ಖರ್ಚು ಮಾಡ್ತಾನೆ ಇರ್ತಾರೆ ಒಬ್ಬ ಆವರೇಜ್ ಗ್ರಾಫಿಕ್ಸ್ ಡಿಸೈನರ್ ಕಥೆ ಏನು ಅವನಿಗೆ ಜಾಬ್ಸ್ ಕಮ್ಮಿ ಆಗಬಹುದು ಒಬ್ಬ ಡಿಸೈನರ್ ದಿನವಿಡಿ ಕೂತು 10 ಪೋಸ್ಟರ್ ಮಾಡಿದ್ರೆ ಎಐ ಆ ಕೆಲಸವನ್ನ 10 ಸೆಕೆಂಡ್ ಗಳಲ್ಲಿ ಮಾಡುತ್ತೆ ಅಂದ್ರೆ ಕಮ್ಮಿ ಡಿಸೈನರ್ ಗಳು ಸಾಕು ಆ ಕಮ್ಮಿ ಡಿಸೈನರ್ ಗಳು ಕೂಡ ತಮ್ಮ ತಲೆಯನ್ನ ಎಐ ಕೈಗೆ ಕೊಟ್ಟುಬಿಡ್ತಾರೆ ಅವರ ಮೆದುಳಿನಲ್ಲಿರೋ ಕಲರ್ನ್ಸ ಅಂಡ್ ಸೆನ್ಸ್ ಗಾನ್ ಅವರ ಮೆದುಳಿನಲ್ಲಿರೋ ಕ್ರಿಯೇಟಿವ್ ಥಿಂಕಿಂಗ್ ಗಾನ್ ಅವರ ಮೆದುಳಿನಲ್ಲಿರೋ ಇಮ್ಯಾಜಿನೇಷನ್ ಗಾನ್ ಯಾಕಂದ್ರೆ ಆ ಎಲ್ಲಾ ಕೆಲಸವನ್ನ ಎಐನೇ ಮಾಡುತ್ತಲ್ಲ.

ಮೆದುಳಿಗೆ ಕೆಲಸನೇ ಇಲ್ಲ ಅಲ್ಲಿ ಸದ್ಯಕ್ಕೆ ಈ ಎರಡು ಕ್ಷೇತ್ರಗಳು ಗಳಲ್ಲಿ ಎಐ ತುಂಬಾ ಫಾಸ್ಟ್ ಆಗಿ ನುಗ್ಗುತ್ತಾ ಇದೆ ಮ್ಯಾಟರ್ ಆಫ್ ಟೈಮ್ ಅಷ್ಟೇ ಎಲ್ಲಾ ಕ್ಷೇತ್ರಗಳಿಗೂ ನುಗ್ಗೆ ನುಗ್ಗುತ್ತೆ ಎಲ್ಲಾ ಕ್ಷೇತ್ರಗಳಲ್ಲೂ ಇದೇ ರೀತಿ ಬಹು ದೊಡ್ಡ ಪ್ರಮಾಣದ ಮನುಷ್ಯರ ಮೆದುಳಿನ ಶಕ್ತಿಗೆ ಏಟ್ ಕೊಟ್ಟೆ ಕೊಡುತ್ತೆ ಹಿಂಗೆ ಕಂಟಿನ್ಯೂ ಆದ್ರೆ ವಿಜ್ಞಾನದ ಪ್ರಕಾರ ಅದು ಯಾವುದೇ ಆಗಿರಲಿ ಅದನ್ನ ಬಳಸದೆ ಇದ್ದರೆ ಅದು ಕಳೆದು ಹೋಗುತ್ತೆ ಕೆಲವೊಂದು ಬೇಗ ಕೆಲವೊಂದು ವರ್ಷಗಳಲ್ಲಿ ಕೆಲವೊಂದು ಶತಮಾನಗಳಲ್ಲಿ ಕೆಲವೊಂದು ಸಹಸ್ರಮಾನಗಳಲ್ಲಿ ಕೆಲವೊಂದು ಲಕ್ಷ ವರ್ಷಗಳಲ್ಲಿ ಕಳೆದು ಹೋಗಬಹುದು ಮನುಷ್ಯನಿಗೆ ಬಾಲ ಇತ್ತು ನಿಧಾನಕ್ಕೆ ಹೋಯ್ತು ಮಂಗಗಳಿಗೆ ಮರಗಳಲ್ಲಿ ಬ್ಯಾಲೆನ್ಸ್ ಮಾಡೋಕೆ ಬಾಲ ಇದೆ ಆದರೆ ಮನುಷ್ಯ ನಾಗರಿಕ ಜೀವನಕ್ಕೆ ಬಂದ ಬಾಲದ ಅಗತ್ಯ ಇಲ್ಲ ಅದರಿಂದ ಅಡಚಣೆನೇ ಜಾಸ್ತಿ ಆಯ್ತು ಸೋ ಬಾಲ ಗಾನ್ ಆದರೆ ಇನ್ನೂನು ಅದರ ಕೊನೆಯ ಗುರುತಾಗಿ ಟೇಲ್ ಬೋನ್ ಮನುಷ್ಯನ ಹಿಂಭಾಗದಲ್ಲಿ ಸಿಗುತ್ತೆ ಬಟ್ಟೆ ಹಾಕೋಕೆ ಮನುಷ್ಯ ಶುರು ಮಾಡಿದ ಮೈಮೇಲೆ ಕೂದಲು ಕಮ್ಮಿ ಆಗ್ತಾ ಬಂತು ಹಿಸ್ಟಾರಿಕಲಿ ತುಂಬಾ ನಡೆಯುವ ನೂರಾರು ಕಿಲೋಮೀಟರ್ ನಡೆಯುವ ಅಗತ್ಯ ಇದ್ದ ಗುಡ್ಡಗಾಡುಗಳ ಮೂಲದ ಜೆನೆಟಿಕ್ಸ್ ಹೊಂದಿರುವವರಿಗೆ ಅಗಲವಾದ ದೊಡ್ಡ ಕಾಲುಗಳಿರುತ್ತವೆ.

ಕೆಲವರು ಬಹಳ ಸಣ್ಣ ಕಾಲುಗಳನ್ನು ಕೂಡ ನೀವು ನೋಡಿರಬಹುದು ಪಾದ ಸೈಜ್ ಇರುತ್ತಲ್ಲ ಫುಟ್ವೇರ್ ಸೈಜ್ ಅನ್ನೋದು ಗೊತ್ತಾಗುತ್ತೆ ಮೊದಲೆಲ್ಲ ಲ್ಯಾಂಡ್ ಫೋನ್ ಇದ್ದಾಗ ಪ್ರತಿಯೊಬ್ಬರಿಗೂ ಮಿನಿಮಮ್ 10-20 ಫೋನ್ ನಂಬರ್ ಗಳು ನೆನಪಿರ್ತಾ ಇದ್ವು ಆದರೆ ಈಗ ಅವರ ಬಳಿ ಇರೋ ಒಂದೊ ಎರಡೋ ನಂಬರ್ ಕೂಡ ಫೋನ್ ನಂಬರ್ ಅವರಿಗೆ ನೆನಪಿರುವುದಿಲ್ಲ ಪೂರ್ತಿಯಾಗಿ ಯಾಕಂದ್ರೆ ಈಗ ಫೋನ್ ನಂಬರ್ ಎಲ್ಲೂ ಬರೆದಿಡ್ತಾ ಇಲ್ಲ ಮತ್ತೆ ಮತ್ತೆ ನೋಡ್ಕೊಂಡು ಅದನ್ನ ಡಯಲ್ ಮಾಡ್ತಾ ಇಲ್ಲ ಒಮ್ಮೆ ಸೇವ್ ಮಾಡಿದ್ರೆ ಮುಗಿತು ಕ್ಲೌಡ್ ಸಿಂಕ್ ಆಗಿ ಜೀವನ ಪರ್ಯಂತ ನಮ್ಮೊಂದಿಗೆ ಇದ್ದುಬಿಡುತ್ತವೆ ಜೊತೆಗೆ ಒಂದು ಕಾಲದಲ್ಲಿ ಜನ ಯಾವುದೇ ರೀತಿಯ ಜಿಪಿ ಇಲ್ಲದೆ ಗೂಗಲ್ ಮ್ಯಾಪ್ಸ್ ಇಲ್ಲದೆ ದೇಶ ದೇಶಗಳಿಗೆ ನಡ್ಕೊಂಡು ವಲಸೆ ಹೋಗ್ತಾ ಇದ್ರು ಕಾಡು ಮೇಡುಗಳಲ್ಲೂ ಕೂಡ ದಿಕ್ಕನ್ನ ನೆನಪಿಟ್ಟುಕೊಂಡು ನಡೆದು ಊರುಗಳನ್ನು ತಲುಪುತ್ತಾ ಇದ್ರು ಬರಿ ಒಂದು ದಿಕ್ಸೂಚಿ ಹಿಡ್ಕೊಂಡು ಸಮುದ್ರಗಳಲ್ಲಿ ನ್ಯಾವಿಗೇಶನ್ ಮಾಡ್ತಾ ಇದ್ರು ಕಂಡ ಖಂಡಗಳನ್ನ ಕಂಡುಹಿಡಿತಾ ಇದ್ರು ಆದರೆ ಈಗ ದಿನವೂ ಹೋದ ರೂಟಲ್ಲೇ ಮತ್ತೆ ಮತ್ತೆ ಹೋದ್ರು ಕೂಡ ಗೂಗಲ್ ಮ್ಯಾಪ್ಸ್ ಕೈ ಕೊಟ್ಟರೆ ಇನ್ನೆಲ್ಲಿಗೋ ಹೋಗಿರುತ್ತಾರೆ ಜನ ಇವಾಗ ಏನಿದ್ರೂ ಕೂಡ ಗಾಡಿ ಹತ್ತು ಗೂಗಲ್ ಮ್ಯಾಪ್ಸ್ ಆನ್ ಮಾಡು ಅದರಲ್ಲಿ ಹೇಳಿದಂಗೆ ಹೋಗ್ತಾ ಇರು ಅಷ್ಟೇ ರೀಸೆಂಟ್ ಆಗಿ ಏನಾಗಿದೆ ಅಂದ್ರೆ ಕೇರಳದಲ್ಲಿ ಸಿಕ್ಕಾಪಟ್ಟೆ ಓದಿದವರು ಅವರು ಕಾರಲ್ಲಿ ಹೋಗಬೇಕಾದರೆ ಅಲ್ಲಿ ಮ್ಯಾಪ್ ಸರಿ ಅಪ್ಡೇಟ್ ಆಗಿರಲಿಲ್ಲವೋ ಏನೋ ಗೊತ್ತಿಲ್ಲ ಸೀದಾ ಮ್ಯಾಪ್ ಅಲ್ಲಿ ಹೋದಂಗೆ ಹೋಗಿದ್ದಾರೆ ಸೀದಾ ಹೊಳೆಗೆ ಇಳಿದುಬಿಟ್ಟು ಸೀದಾ ಕೊಚ್ಚಿಕೊಂಡೆ ಹೋಗಿ ಜೀವನ ಕಳೆದುಕೊಂಡು ಬಿಟ್ಟಿದ್ದಾರೆ.

ಹೀಗಿರಬೇಕಾದರೆ ಎಷ್ಟೊಂದು ಡಿಪೆಂಡ್ ಆಗಿರಬೇಕಾದರೆ ತಗೊಂಡು ಹೋಗಿ ನಟ್ಟ ನಡುವಲ್ಲಿ ಯಾವುದಾದರೂ ಒಂದು ಕಾಡಲ್ಲಿ ಬಿಟ್ಟುಬಿಟ್ರೆ ಮನುಷ್ಯ ಅದರಿಂದ ಹೊರಗೆ ಬರೋಕೆ ಸಾಧ್ಯ ಆಗುತ್ತಾ ಸಡನ್ ಆಗಿ ಗಾಬರಿ ಆಗ್ತಾರೆ ಮನುಷ್ಯರು ಆದರೆ ಒಂದು ಕಾಲದಲ್ಲಿ ಜನ ಥಿಂಕ್ ಮಾಡ್ತಾ ಇದ್ರು ಸೂರ್ಯ ಹುಟ್ಟಿರೋ ದಿಕ್ಕು ಮುಳುಗುತ್ತಿರುವ ದಿಕ್ಕು ಸಮುದ್ರದಲ್ಲಿ ಅಲೆ ಗಾಳಿ ಬೀಸೋ ದಿಕ್ಕು ಆಕಾಶದಲ್ಲಿ ನಕ್ಷತ್ರಗಳ ಪೊಸಿಷನ್ ಚಂದ್ರನ ಪೊಸಿಷನ್ ಇದೆಲ್ಲ ನೋಡ್ಕೊಂಡು ದಿಕ್ಕನ್ನ ಕಂಡು ಹಿಡ್ಕೊಂಡು ತಲೆ ಖರ್ಚು ಮಾಡಿಕೊಂಡು ನ್ಯಾವಿಗೇಟ್ ಮಾಡ್ತಾ ಇದ್ರು ತಲುಪಬೇಕಾದ ಜಾಗಕ್ಕೆ ತಲುಪುತ್ತಾ ಇದ್ರು ಅದೆಲ್ಲ ಯಾಕೆ ಸಿಂಪಲ್ ಆಗಿ ಒಂದು ಕಬ್ಬಿಣದ ಕತ್ತಿ ತಗೊಳ್ಳಿ ಒಂದು ದೊಡ್ಡ ಲಾಂಗ್ ತಲವಾರು ತಗೊಳ್ಳಿ ದಿನ ಯೂಸ್ ಮಾಡ್ತಾ ಇದ್ರೆ ಚೆನ್ನಾಗಿ ಇರುತ್ತೆ ಆಗಾಗ ಶಾರ್ಪ್ ಮಾಡ್ತಿದ್ರೆ ಆಯ್ತು ಆದರೆ ಕಳೆದ 10 ವರ್ಷಗಳಿಂದ ಯೂಸ್ ಮಾಡದ ಒಂದು ಕತ್ತಿಯನ್ನು ತೆಗೆದು ನೋಡಿ ತುಕ್ಕು ಹಿಡಿಯೋಕೆ ಶುರುವಾಗಿರುತ್ತೆ ಈಗ ಹೇನು ನಮ್ಮ ಮೆದುಳಿಗೆ ತುಕ್ಕು ಹಿಡಿಸುತ್ತಾ ಆ ಸಾಧ್ಯತೆ ಕಾಣ್ತಾ ಇದೆ ಹಾಗಂತ ಎಲ್ಲರಿಗೂ ಹಾಗೆ ಆಗುತ್ತೆ ಅಂತ ಅಲ್ಲ ಒಬ್ಬೊಬ್ಬರ ಮೇಲೆ ಒಂದೊಂದು ಪರಿಣಾಮ ಬೀರಬಹುದು ಜಾಣತನದಿಂದ ತನ್ನ ಜಾಣತನವನ್ನ ಜಾಸ್ತಿ ಮಾಡಿಕೊಳ್ಳೋಕೆ ಹಿತಮಿತವಾಗಿ ಮಾತ್ರ ಬಳಸೋವನಿಗೆ ಬುದ್ಧಿಶಕ್ತಿ ಇನ್ನಷ್ಟು ಜಾಸ್ತಿನೂ ಆಗಬಹುದು ಆದರೆ ಅದನ್ನ ಬಳಸೋದೇ ಜೀವನ ಮಾಡ್ಕೊಂಡ್ರೆ ಬೆಳಗ್ಗೆ ಎದ್ದು ಮೊದಲು ಕಮೋಡ್ ಮೇಲೆ ಕೂರೋದ ಅಥವಾ ಕೈಗೆ ಟೂತ್ ಬ್ರಷ್ ತಗೊಳೋದ ಅಂತ ಎಐ ಹತ್ರನೇ ಕೇಳಿ ಮಾಡೋ ರೀತಿ ಗುಲಾಮರಾದರೆ ಸಿಂಪಲ್ ಮೆದುಳಿಗೆ ಕೆಲಸ ಕಮ್ಮಿ ಆಗುತ್ತೆ ಅದರ ಡಿಸಿಷನ್ ಮೇಕಿಂಗ್ ಎಬಿಲಿಟಿ ಬಿದ್ದು ಹೋಗುತ್ತೆ.

ನಿಂಗೇನು ಬಹಳ ಗೊತ್ತಾ ಹೆಂಗೆ ಹೇಳ್ತಿಯಾ ನೀನು ಅಂತ ನೀವು ಕೇಳ್ತಿರಬಹುದು ಕೆಲವರು ಆದರೆ ನೇಚರ್ ಅನ್ನೋ ಸೈನ್ಸ್ ಜರ್ನಲ್ ಹಾಗೂ ಅಮೆರಿಕಾ ಸರ್ಕಾರದ ಎನ್ ಸಿಬಿಐ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ವೆಬ್ಸೈಟ್ ನಲ್ಲೂ ಕೂಡ ಒಂದು ಸ್ಟಡಿ ಮಾಡಿ ರಿಸಲ್ಟ್ ಅನ್ನ ಹಾಕಿದ್ದಾರೆ ಅದರ ಹೆಡರ್ ಏನಿದೆ ಗೊತ್ತಾ ಇಂಪ್ಯಾಕ್ಟ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆನ್ ಹ್ಯೂಮನ್ ಲಾಸ್ ಇನ್ ಡಿಸಿಷನ್ ಮೇಕಿಂಗ್ ಲೇಜಿನೆಸ್ ಅಂಡ್ ಸೇಫ್ಟಿ ಇನ್ ಎಜುಕೇಶನ್ ಅಂದ್ರೆ ಮನುಷ್ಯನ ಡಿಸಿಷನ್ ಮೇಕಿಂಗ್ ಎಬಿಲಿಟಿ ಮೇಲೆ ಸೋಮಾರಿತನದ ಮೇಲೆ ಹಾಗೂ ಸುರಕ್ಷತೆ ಮೇಲೆ ಎಐ ನ ಪರಿಣಾಮಗಳು ಅಂತ ಒಂದು ಸ್ಟಡಿ ಮಾಡಿ ಅದನ್ನ ಪಬ್ಲಿಷ್ ಮಾಡಲಾಗಿದೆ ಈ ಸ್ಟಡಿಯ ರಿಸಲ್ಟ್ ಶಾಕಿಂಗ್ ಇವೆ ಎಐ ಬಳಕೆಯಿಂದ ಇವರು ಅಧ್ಯಯನಕ್ಕೆ ಒಳಪಡಿಸಿದ ವಿದ್ಯಾರ್ಥಿಗಳಲ್ಲಿ 68% ಸೋಂಬೇರಿತನಕ್ಕೆ ಕಾರಣ ಆಗಿದೆ 27% ಡಿಸಿಷನ್ ಮೇಕಿಂಗ್ ಸಾಮರ್ಥ್ಯ ಲಾಸ್ ಆಗಿದೆ ಕಳೆದುಕೊಳ್ಳೋಕೆ ಕಾರಣ ಆಗಿದೆ ಮನುಷ್ಯನ ಮೆದುಳು ಮಾಡಬೇಕಾದ ನಿರ್ಧಾರಗಳನ್ನ ಆಯ್ಕೆಗಳನ್ನ ಚಾಯ್ಸಸ್ ಅನ್ನ ಎಐ ನೇ ನೇ ಮಾಡೋಕೆ ಶುರುಮಾಡಿದೆ ಇದರಿಂದ ವಿದ್ಯಾರ್ಥಿಗಳಲ್ಲಿ ನಿಧಾನಕ್ಕೆ ಸೋಮಾರಿತನ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಡೌನ್ ಆಗಿರೋದು ಪ್ರತಿಷ್ಠಿತ ಸಂಸ್ಥೆ ಪಬ್ಲಿಷ್ ಮಾಡಿರೋ ಸ್ಟಡಿಯಿಂದ ಗೊತ್ತಾಗಿದೆ ಇದರಿಂದ ಏನಾಗುತ್ತೆ ಅಂದ್ರೆ ಕೆಲವೊಮ್ಮೆ ಎಐ ನಿಂದ ಸೂಕ್ತ ಉತ್ತರ ಅಥವಾ ರಿಸಲ್ಟ್ ಸಿಗದಿದ್ದಾಗ ಮತ್ತೆ ಮತ್ತೆ ಅಲ್ಲೇ ಟ್ರೈ ಮಾಡ್ತಾ ಏನಾದರೂ ಮಾಡಿ ಅಲ್ಲೇ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋ ಅಪಾಯ ಇರುತ್ತೆ ಯಾಕಂದ್ರೆ ನಿಮ್ಮ ಮೆದುಳಿಗೆ ನೀವು ಆಲಸ್ಯ ತುಂಬಿಯಾಗಿದೆ ಅದು ಥಿಂಕ್ ಮಾಡೋಕೆ ಬೇರೆ ಸೊಲ್ಯೂಷನ್ ಹುಡುಕೋಕೆ ರಿಫ್ಯೂಸ್ ಮಾಡೋಕೆ ಶುರು ಮಾಡಿರುತ್ತೆ ಏ ಇಲ್ಲೇ ಹುಡುಕ ಬರುತ್ತೆ ನನ್ನನ್ನು ಯಾಕೆ ಕೇಳ್ತಿಯೋ ಅಂತ ನಿಮ್ಮ ಮೆದುಳು ನಿಮಗೆ ಹೇಳೋಕೆ ಶುರು ಮಾಡಿರುತ್ತೆ ಆಗ ನೀವು ಬೇರೆ ಏನು ಥಿಂಕ್ ಮಾಡದೆ ಮೆದುಳಿಗೆ ಕೆಲಸ ಕೊಡದೆ ಎಐ ನಲ್ಲೇ ರಿಸಲ್ಟ್ ತರೋ ಪ್ರಯತ್ನವನ್ನ ಮುಂದುವರಿಸುವ ಅಪಾಯ ಇರುತ್ತೆ.

ನಿಮಗೆ ಕೆಲಸ ಎಫೆಕ್ಟಿವ್ ಆಗಿ ಆಗೋ ಬದಲು ಇನ್ನಷ್ಟು ಹಾಳು ಹಾಳಾಗಿ ಫೈನಲ್ ಔಟ್ಪುಟ್ ಬರಬಹುದು ಟೈಮ್ ಕೂಡ ವೇಸ್ಟ್ ಆಗಬಹುದು ಮತ್ತೊಂದು ಕಡೆ ನಿಮ್ಮ ಪಕ್ಕದಲ್ಲಿರೋ ನಿಮ್ಮ ಮೆದುಳು ಉಪಯೋಗಿಸುವ ನಿಮ್ಮ ಪ್ರತಿಸ್ಪರ್ಧಿ ಕ್ರಿಯೇಟಿವ್ ಆಗಿ ಯೂನಿಕ್ ಆಗಿ ರಿಸಲ್ಟ್ ತರಬಹುದು ಆ ಸನ್ನಿವೇಶಕ್ಕೆ ತಕ್ಕಂತೆ ಆತ ರಿಸಲ್ಟ್ ತರಬಹುದು ನಿಜಕ್ಕೂ ಕೂಡ ಗೊತ್ತಿರುತ್ತೆ ನಿಜವಾಗ್ಲೂ ಎಷ್ಟು ಬೇಕು ರಿಸಲ್ಟ್ ಅಂತ ಅವನಿಗೆ ಗೊತ್ತಿರುತ್ತೆ ಅಷ್ಟು ಮಾತ್ರ ಆತ ಯೋಚನೆ ಮಾಡಿ ಮೆದುಳಲ್ಲಿ ಪ್ಲಾನ್ ಮಾಡಿ ತರಬಹುದು ಎಐ ಗೆ ನಿಜಕ್ಕೂ ನಿಮಗೆ ಎಷ್ಟು ಬೇಕಾಗಿರುತ್ತೆ ನಿಮ್ಮ ಕೈಯಲ್ಲಿರೋ ಕೆಲಸ ಏನು ಅಂತ ಅದು ಗೊತ್ತಿರೋದಿಲ್ಲ ಆದರೆ ಬ್ರೈನ್ ಯೂಸ್ ಮಾಡಿ ಮಾಡ್ತಿರೋ ನಿಮ್ಮ ಪ್ರತಿಸ್ಪರ್ಧಿ ಅದನ್ನೆಲ್ಲ ಪ್ಲಾನ್ ಮಾಡ್ಕೊಂಡು ಮಾಡಬಹುದು ಯಾಕಂದ್ರೆ ಅದು ತನ್ನ ಮೆದುಳನ್ನ ಖರ್ಚು ಮಾಡ್ತಿರ್ತಾನೆ ಅದು ಯೂನಿಕ್ ಆಗಿನೇ ರಿಸಲ್ಟ್ ಕೂಡ ಕೊಡುತ್ತೆ ನೀವು ಎಐ ಹತ್ರ ಕೆಲಸ ಮಾಡಿಸ್ತಾ ಇರ್ತೀರಿ ಅದು ನಿಮ್ಮ ತರ 100 ಜನ ಕೇಳಿದ್ರು ಅದೇ ಈ ರೀತಿ ಉತ್ತರವನ್ನ ಕೊಡ್ತಾ ಇರುತ್ತೆ ಕೆಲಸ ಮಾಡಿ ರಿಸಲ್ಟ್ ಕೊಡ್ತಾ ಇರುತ್ತೆ ಎಐ ಹೇಗೆ ಬಳಸಿದರೆ ಉತ್ತಮ ತೀರಾ ತುರ್ತು ಸಂದರ್ಭಗಳಲ್ಲಿ ಬಳಸಿ ಊಟದಲ್ಲಿ ಉಪ್ಪಿನಕಾಯಿ ಪ್ರಮಾಣದಲ್ಲಿ ಬಳಸಿದರೆ ಅಷ್ಟು ಪ್ರಾಬ್ಲಮ್ ಆಗಲ್ಲ ನೀವು ಬೇರೆ ಏನಾದ್ರು ಕೆಲಸ ಮಾಡ್ತಾ ಇದ್ದೀರಾ ಏನೋ ಎಕ್ಸರ್ಸೈಜ್ ಮಾಡ್ತಾ ಇದ್ದೀರಾ ಏನೋ ಜಾಗಿಂಗ್ ಮಾಡ್ತಾ ಇದ್ದೀರಾ ಸಡನ್ ಆಗಿ ನಿಮಗೆ ಆನ್ ದಿಗೋ ಏನೋ ತಿಳ್ಕೊಬೇಕು ಆಗ ಮೇಲ್ಮೇಲಕ್ಕೆ ಕೇಳಿ ತಿಳ್ಕೊಳೋಕೆಲ್ಲ ಅದನ್ನ ಬಳಸಬಹುದು ಸುಮ್ನೆ ಮೇಲ್ಮಟ್ಟದ ಜ್ಞಾನವನ್ನ ಗಳಿಸೋಕೆ ಎಐ ಬಳಸೋದೇ ನಿಮ್ಮ ಜಾಬ್ ಆಗಿದ್ರೆ ಒಂದು ವೇಳೆ ನಿಮ್ಮ ಜಾಬ್ ನ ಎಸೆನ್ಶಿಯಲ್ ಪಾರ್ಟ್ ಆಗಿದ್ದರೆ ಅವಾಗ ನಿಮ್ಮ ಬುದ್ಧಿಶಕ್ತಿ ಮಂದ ಆಗದಂತೆ ಬ್ರೈನ್ ಗೆ ಚಾಲೆಂಜ್ ಮಾಡೋ ತರ ಮ್ಯಾನುವಲ್ ಆಗಿನೂ ಪ್ರಾಕ್ಟೀಸ್ ಚಾಲ್ತಿಯಲ್ಲಿ ಇಟ್ಟುಕೊಳ್ಳುವುದು ಕಲಿಕೆ ಬರವಣಿಗೆ ಅಥವಾ ಥಿಂಕಿಂಗ್ ಪ್ರೋಸೆಸ್ ಚಾಲ್ತಿಯಲ್ಲಿ ಇಟ್ಟುಕೊಳ್ಳುವುದು ತುಂಬಾ ತುಂಬಾ ಮುಖ್ಯ ಸ್ನೇಹಿತರೆ ಕೆಲವೊಂದು ಸಂದರ್ಭಗಳಲ್ಲಿಬುದ್ಧಿಶಕ್ತಿ ವಿಚಾರದಲ್ಲಿ ಕೆಲವರು ಚಾಲೆಂಜ್ಡ್ ನಮ್ಮ ಸಹಮಾನವರು ಕೂಡ ನಮ್ಮ ಜೊತೆಗೆ ಇರಬಹುದು ಅವರಿಗೆಲ್ಲ ಇದು ವರವಾಗಿನೂ ಪರಿಣಮಿಸಬಹುದು.

ಬುದ್ಧಿಶಕ್ತಿ ಸರಿ ಇರೋರು ಕೂಡ ಇದರ ಮೇಲೆ ಡಿಪೆಂಡ್ ಆಗ್ತಾ ಹೋದ್ರೆ ಅದರಿಂದ ಬುದ್ಧಿಶಕ್ತಿ ಸರಿ ಇರೋದು ಕೂಡ ಮಂದ ಆಗೋ ಅಪಾಯ ಇರುತ್ತೆ ಎಐ ಗಳು ರೋಬೋಗಳು ಎಲ್ಲಾ ಕೆಲಸಗಳಲ್ಲೂ ಕಿತ್ತುಕೊಳ್ಳೋಕೆ ಶುರುಮಾಡಿ ಜಾಬ್ ಗಳನ್ನ ಕಿತ್ತುಕೊಳ್ಳೋಕೆ ಶುರುಮಾಡಿ ತಾನೇ ಮುಂದೊಂದು ದಿನ ಮನುಷ್ಯರನ್ನು ಬದಿಗೆ ಸೇರಿಸಿ ಭೂಮಿಯನ್ನ ರೂಲ್ ಮಾಡೋ ಬಗ್ಗೆ ಕೆಲವರು ಹೆದರಿಕೆ ವ್ಯಕ್ತಪಡಿಸುತ್ತಾರೆ ಇದೇ ಕಾರಣಕ್ಕೆ ಎಐ ಬಗ್ಗೆ ಕೆಲಸ ಮಾಡುವ ಎಲ್ಲಾ ಲ್ಯಾಬ್ ಗಳು ಕಂಪನಿಗಳು ಜಿಪಿಟಿ ಫೋರ್ ಗಿಂತಲೂ ಅಧಿಕ ಸಾಮರ್ಥ್ಯದ ಎಐ ಮಾಡೆಲ್ ಗಳ ಡೆವಲಪ್ಮೆಂಟ್ ಅನ್ನ ಆರು ತಿಂಗಳ ಮಟ್ಟಿಗೆ ತಡೆ ಹಿಡಿದಿದ್ದನ್ನು ಕೂಡ ನೀವು ಕೇಳಿರಬಹುದು ಆದರೆ ಇದೆಲ್ಲ ಸದ್ಯಕ್ಕೆ ದೂರದ ಮಾತು ಅನಿಸಿದ್ರುನು ತುಂಬಾ ದೊಡ್ಡ ಪ್ರಮಾಣದ ಜನರ ಬುದ್ಧಿಶಕ್ತಿ ಮೇಲೆ ಬುದ್ಧಿಶಕ್ತಿಯ ಬೆಳವಣಿಗೆ ಮೇಲೆ ಯೋಚಿಸುವ ಶಕ್ತಿ ಮೇಲೆ ಕಲಿಕೆಯ ಮೇಲೆ ಈ ಎಐ ದೊಡ್ಡ ಪ್ರಮಾಣದ ಪೆಟ್ಟು ಕೊಡ್ತಿರೋದು ಕ್ಲಿಯರಾಗಿ ಕಾಣಿಸ್ತಾ ಇದೆ ಕೆಲವೊಂದು ಮಟ್ಟಿಗೆ ಉದ್ಯೋಗಗಳನ್ನ ಕಿತ್ತುಕೊಳ್ಳುತ್ತಿರುವುದು ಕೂಡ ಕಾಣಿಸ್ತಾ ಇದೆ ನಾವೀಗ ಜಸ್ಟ್ ಇದು ಮನುಷ್ಯನ ಯೋಚಿಸುವ ಶಕ್ತಿ ಮೇಲೆ ಎಲ್ಲರೂ ಅಲ್ಲದೆ ಹೋದ್ರು ಕೂಡ ಒಂದಷ್ಟು ಕೆಟಗರಿಯ ಜನರ ಯೋಚಿಸುವ ಶಕ್ತಿ ಮೇಲೆ ಯಾವ ಸಿನಾರಿಯೋಗಳಲ್ಲಿ ದೊಡ್ಡ ಪೆಟ್ಟು ಕೊಡುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments