ಬೆಂಗಳೂರು ಎರಡನೇ ಇಂಟರ್ನ್ಯಾಷನಲ್ ಏರ್ಪೋರ್ಟ್ ಕನಕಪುರಕ್ಕೆ ಮಣೆ ನೆಲಮಂಗಲ ರೇಸ್ನಿಂದ ಔಟ್ ಬೆಂಗಳೂರು ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಬಿಗ್ ಅಪ್ಡೇಟ್ ಒಂದು ಬಂದಿದೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ವರದಿ ಬೆನ್ನಲೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು ಸ್ಥಳವನ್ನ ಫೈನಲ್ ಮಾಡಿದೆ ರಾಜ್ಯ ಸರ್ಕಾರದ ನೆಡೆ ಹಿಂದೆ ಹೊಸೂರಿನಲ್ಲಿ ನಿರ್ಮಾಣವಾಗುತ್ತಿರುವ ತಮಿಳುನಾಡಿನ ಏರ್ಪೋರ್ಟ್ಗೆ ಸೆಡ್ಡು ಹೊಡೆಯುವ ತಂತ್ರ ಕ್ಲಿಯರ್ ಆಗಿ ಕಾಣಿಸ್ತಾ ಇದೆ. ಶಾರ್ಟ್ ಲಿಸ್ಟ್ ಆಗಿದ್ದ ಮೂರು ಸ್ಥಳಗಳ ಪೈಕಿ ನೆಲಮಂಗಲ ಕುಣಿಗಲ್ ರಸ್ತೆ ಔಟ್ ಆಗಿದ್ದು ಹೊಸ ಇಂಟರ್ನ್ಯಾಷನಲ್ ಏರ್ಪೋರ್ಟ್ ಬೆಂಗಳೂರು ದಕ್ಷಿಣದಲ್ಲಿಯೇ ನಿರ್ಮಾಣವಾಗಲಿದೆ. ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಅಪ್ಡೇಟ್ ಅನ್ನ ನೀಡಿದ್ದು ಹೊಸ ವಿಮಾನ ನಿಲ್ದಾಣ ಬೆಂಗಳೂರು ದಕ್ಷಿಣ ಭಾಗದಲ್ಲಿಯೇ ನಿರ್ಮಾಣ ಆಗಲಿದ್ದು ಐಟಿಬಿಟಿ ಜನರಿಗೆ ಭಾರಿ ಅನುಕೂಲ ಆಗಲಿದೆ ಅಂತ ಹೇಳಲಾಗ್ತಿದೆ.
ಹಾಗಾದ್ರೆ ಎಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ತಮಿಳುನಾಡಿನ ಹೊಸೂರು ಏರ್ಪೋರ್ಟ್ಗೆ ಹೇಗೆ ಈ ವಿಮಾನ ನಿಲ್ದಾಣ ಸವಾಲ್ ಹಾಕಲಿದೆ ಈ ಮೆಗಾ ಪ್ರಾಜೆಕ್ಟ್ಗೆ ಎದುರಾಗಿರುವ ಸವಾಲುಗಳು ಏನು ಎಂಬುದನ್ನ ಡೀಟೇಲ್ ಆಗಿ ನೋಡೋಣ ಬೆಂಗಳೂರು ಟೆಕ್ ಸಮಿತ್ 2025ರಲ್ಲಿ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರು ನಗರದ ಎರಡನೇ ವಿಮಾನ ನಿಲ್ದಾಣವನ್ನ ಬೆಂಗಳೂರು ದಕ್ಷಿಣದಲ್ಲೇ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ ಅಂತ ಸ್ಪಷ್ಟಪಡಿಸಿದ್ದಾರೆ ಕೆಲ ದಿನಗಳ ಹಿಂದಷ್ಟೇ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಮೂರು ಸ್ಥಳಗಳ ಬಗ್ಗೆ ಸರ್ಕಾರ ವರದಿಯನ್ನ ನೀಡಿತ್ತು ಇದರ ಬೆನ್ನಲೆ ಸರ್ಕಾರ ಈ ನಿರ್ಧಾರವನ್ನ ತೆಗೆದುಕೊಂಡಿದೆ ಈ ಮೂಲಕ ಮೂರು ಸ್ಥಳಗಳ ಪೈಕಿ ನೆಲಮಂಗಲ ಬಳಿಯ ಸ್ಥಳ ರೇಸ್ನಿಂದ ಔಟ್ ಆಗಿದ್ದು ಕನಕಪುರ ರಸ್ತೆಯಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣ ಖಚಿತವಾಗಿದೆ ಬೆಂಗಳೂರಿನಲ್ಲಿ ದಿನೇ ದಿನೆ ಹೆಚ್ಚುತ್ತಿರುವ ವಾಯುಸಂಚಾರ ದಟ್ಟಣೆ ಮತ್ತು ಮೂಲ ಸೌಕರ್ಯದ ಬೇಡಿಕೆಗಳನ್ನ ಪೂರಿಸಲು ಈ ನಿರ್ಧಾರ ಅನಿವಾರ್ಯವಾಗಿದೆ ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಬೃಹತ್ ಮೂಲ ಸೌಕರ್ಯ ಯೋಜನೆಯ ಭಾಗವಾಗಿ ವಾಗಿ ಈ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗ್ತಾ ಇದ್ದು ನಗರದ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡುವುದು ಮತ್ತು ಪ್ರಾದೇಶಿಕ ಬೆಳವಣಿಗೆಗೆ ಒತ್ತು ನೀಡುವುದು.
ಇದರ ಮುಖ್ಯ ಉದ್ದೇಶ ಯಾವೆಲ್ಲಾ ಜಾಗಗಳು ಶಾರ್ಟ್ ಲಿಸ್ಟ್ ಆಗಿದ್ವು ಬಂಡೆ ಗುಡ್ಡಗಳೆ ಏರ್ಪೋರ್ಟ್ಗೆ ಸವಾಲು ಸರ್ಕಾರ ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಸರ್ಕಾರ ಮೂರು ಸ್ಥಳಗಳನ್ನ ಶಾರ್ಟ್ ಲಿಸ್ಟ್ ಮಾಡಿತ್ತು ಇವುಗಳಲ್ಲಿ ಎರಡು ಸ್ಥಳಗಳು ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಕನಕಪುರ ರಸ್ತೆಯಲ್ಲಿವೆ ಒಂದು ಕಗ್ಗಲಿಪುರ ಸಮೀಪ ಮತ್ತು ಇನ್ನೊಂದು ಹಾರೋಹಳ್ಳಿ ಬಳಿ ಗುರುತಿಸಲಾಗಿದೆ ಮತ್ತೊಂದು ಸ್ಥಳವು ಕುಣಿಗಲ್ ರಸ್ತೆಯ ನೆಲಮಂಗಲದ ಬಳಿ ಇದೆ ಈ ಮೂರು ಸ್ಥಳಗಳನ್ನ ಎಎಐ ಅಧ್ಯಯನ ನಡೆಸಿತ್ತು ಅದಾಗಿ ಹಲವು ತಿಂಗಳುಗಳ ಬಳಿಕ ಮೊನ್ನೆ ಮೊನ್ನೆ ಅಷ್ಟೇ ಸರ್ಕಾರಕ್ಕೆ ವರದಿಯನ್ನು ಕೂಡ ಸಲ್ಲಿಸಿತ್ತು ವರದಿಯಲ್ಲಿ ಯಾವುದೇ ಸ್ಥಳವನ್ನ ಎಎಐ ಫೈನಲ್ ಮಾಡಿದ್ದಿಲ್ಲ ಬದಲಾಗಿ ಮೂರು ಸ್ಥಳಗಳಲ್ಲಿರುವ ಸವಾಲುಗಳನ್ನ ವರದಿಯಲ್ಲಿ ಹುಲುಕಿಸಲಾಗಿತ್ತು ಮೂರು ಸ್ಥಳಗಳು ನಗರದ ಕೇಂದ್ರ ಭಾಗದಿಂದ ಸುಮಾರು 30ರಿಂದ 35 ಕಿಲೋಮ ದೂರದಲ್ಲಿದ್ದು ಪ್ರತಿಯೊಂದು ಒಂದು ಸ್ಥಳವು ಸುಮಾರು 4530 ರಿಂದ 5200 ಎಕರೆ ವಿಸ್ತೀರ್ಣವನ್ನ ಹೊಂದಿದೆ ಪ್ರಮುಖವಾಗಿ ನೆಲಮಂಗಲ ಭಾಗದಲ್ಲಿ ಕಲ್ಲಿನ ಗುಡ್ಡಗಳಿದ್ದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ನೆಲವನ್ನ ಸಮತಟ್ಟು ಮಾಡಲು ಭಾರಿ ಪ್ರಮಾಣದ ಖರ್ಚು ಮಾಡಬೇಕಾಗುತ್ತೆ ಅಲ್ಲದೆ ಅಸ್ತಿತ್ವದಲ್ಲಿರುವಂತಹ ಇತರೆ ವಿಮಾನ ನಿಲ್ದಾಣಗಳ ವಾಯು ಪ್ರದೇಶದ ಮಿತಿಗಳು ಇಲ್ಲಿ ಅಡ್ಡಿಯಾಗುವ ಸಾಧ್ಯತೆ ಇದೆ. ಇನ್ನು ಕನಕಪುರ ರಸ್ತೆಯ ಚೂಡಹಳ್ಳಿ ಮತ್ತು ಸೋಮನಹಳ್ಳಿ ಭಾಗದಲ್ಲೂ ಕೂಡ ಕಲ್ಲಿನ ಭೂಪ್ರದೇಶ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಾಮಿಪ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇಲ್ಲಿನ ಬೆಟ್ಟಗಳು ವಿಮಾನಗಳ ಲ್ಂಗ್ ಮತ್ತು ಟೇಕ್ಆಫ್ ಗೆ ಅಡ್ಡಿಯಾಗಬಹುದು ಅಂತ ಹೇಳಲಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಪರಿಸರ ಇಲಾಖೆಯ ಅನುಮತಿ ಪಡೆಯುವುದು ಮತ್ತು ರಕ್ಷಣಾ ಇಲಾಖೆಯ ವಾಯು ಪ್ರದೇಶದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಸವಾಲುಗಳ ನಡುವೆಯೇ ರಾಜ್ಯ ಸರ್ಕಾರ ತನ್ನ ನಿಲುವನ್ನ ಸ್ಪಷ್ಟಪಡಿಸಿದ್ದು ಬೆಂಗಳೂರು ದಕ್ಷಿಣದ ಕನಕಪುರ ರಸ್ತೆಯಲ್ಲಿ ಹೊಸ ವಿಮಾನ ನಿಲ್ದಾಣವನ್ನ ನಿರ್ಮಿಸಲು ಮುಂದಾಗಿದೆ. ಏರ್ಪೋರ್ಟ್ಗೆ ಬೆಂಗಳೂರು ದಕ್ಷಿಣವೇ ಯಾಕೆ ಫೈನಲ್. ಹೊಸೂರು ಏರ್ಪೋರ್ಟ್ಗೆ ಸರ್ಕಾರದ ಚೆಕ್ಮೇಟ್ ಈಗಾಗಲೇ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ದಕ್ಷಿಣದಿಂದ ಹೋಗಲು ಇರುವ ದೀರ್ಘ ಪ್ರಯಾಣದ ಸಮಯವನ್ನು ತಪ್ಪಿಸಲು ಈ ಭಾಗವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಸರ್ಕಾರ ಬೆಂಗಳೂರು ದಕ್ಷಿಣದ ಮೇಲೆ ಕಣ್ಣಿಡಲು ಮತ್ತೊಂದು ಪ್ರಬಲ ಕಾರಣವಿದೆ ಅದೇನಪ್ಪಾ ಅಂತಂದ್ರೆ ನೆರೆಯ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಯೋಜನೆಯನ್ನು ರೂಪಿಸುತ್ತಾ ಇದೆ ಅದು ನಮಕಿಂತ ಸ್ಪೀಡ್ ಆಗಿ ಕಾರ್ಯರೂಪಕ್ಕೆ ಬರ್ತಾ ಇದೆ ಒಂದು ವೇಳೆ ಹೊಸೂರಿನಲ್ಲಿ ಏರ್ಪೋರ್ಟ್ ಆದರೆ ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಎಲೆಕ್ಟ್ರಾನ್ ಸಿಟಿ ಸರ್ಜಾಪುರ ಬೊಮ್ಮನಳ್ಳಿ ಭಾಗದ ಜನರು ದೇವನಳ್ಳಿಗೆ ಹೋಗುವ ಬದಲು ಹತ್ತಿರದ ಹೊಸೂರು ಏರ್ಪೋರ್ಟ್ಗೆ ಹೋಗಲು ಆರಂಭಿಸುತ್ತಾರೆ ಇದರಿಂದ ಕರ್ನಾಟಕಕ್ಕೆ ಆರ್ಥಿಕವಾಗಿ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿರುತ್ತೆ ಈ ಸವಾಲ ನ್ನ ಎದುರಿಸಲು ಮತ್ತು ಬೆಂಗಳೂರು ದಕ್ಷಿಣದ ಪ್ರಯಾಣಿಕರನ್ನ ಉಳಿಸಿಕೊಳ್ಳಲು ಕರ್ನಾಟಕ ಸರ್ಕಾರ ಈ ಹೊಸ ಏರ್ಪೋರ್ಟ್ ಅನ್ನ ದಕ್ಷಿಣ ಭಾಗದಲ್ಲೇ ನಿರ್ಮಿಸಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಈಗಿರುವ ಏರ್ಪೋರ್ಟ್ಗೆ ತೊಂದರೆಯಾಗದಂತೆ ಹಾಗೂ ಪ್ರಯಾಣಿಕರ ಅನುಕೂಲಕ್ಕೆ ಕನಕಪುರ ರಸ್ತೆಯನ್ನೇ ಸರ್ಕಾರ ಫೈನಲ್ ಮಾಡಿದೆ ಇನ್ನು ಕನಕಪುರ ರಸ್ತೆಯಲ್ಲಿನ ಸ್ಥಳಗಳು ನೈಸ್ ರಸ್ತೆಯಿಂದ ಕೇವಲ 10 ಕಿಲೋಮೀಟ ದೂರದಲ್ಲಿವೆ. ಗ್ರೀನ್ ಲೈನ್ ಕೊನೆಯ ಮೆಟ್ರೋ ನಿಲ್ದಾಣ ಸಹ 5 km ವ್ಯಾಪ್ತಿಯಲ್ಲಿದೆ. ಈ ಮೂಲಕ ತುಮಕೂರು ಭಾಗದಿಂದ ಬರುವ ಹಾಗೂ ಬೆಂಗಳೂರು ಸೇರಿ ಮೈಸೂರು ಕಡೆಯಿಂದ ಬರುವ ಪ್ರಯಾಣಿಕರಿಗೂ ಸಹ ಅನುಕೂಲವಾಗುವಂತೆ ಸ್ಥಳ ಫೈನಲ್ ಮಾಡಲಾಗಿದೆ. ಟೆಕ್ನೋ ಎಕನಾಮಿಕ್ ಸ್ಟಡಿ ರಿಪೋರ್ಟ್ ಬಾಕಿ. ಕೊನೆಗೂ ಗೆದ್ದ ಡಿಸಿಎಂ ಡಿಕೆ ಶಿವಕುಮಾರ್ ಹಠ. ಹೊಸ ಏರ್ಪೋರ್ಟ್ ರೇಸ್ನಿಂದ ನೆಲಮಂಗಲ ಹಾಗೂ ಕುಣಿಗಲ್ ರಸ್ತೆ ಬಳಿಯ ಸ್ಥಳ ಔಟ್ ಆಗಿದ್ದು ಕನಕಪುರ ರಸ್ತೆಯ ಎರಡು ಸೈಟ್ಗಳಲ್ಲಿ ಮುಂದೆ ಟೆಕ್ನೋ ಎಕನಾಮಿಕ್ ಫಿಸಿಬಿಲಿಟಿ ಸ್ಟಡಿಯನ್ನ ನಡೆಸಲಾಗಿದೆ. ಈಗಾಗಲೇ ಇದನ್ನ ಒಂದು ಸಂಸ್ಥೆ ನಡೆಸ್ತಾ ಇದ್ದು ಶೀಘ್ರದಲ್ಲಿ ವರದೆ ರೆಡಿಯಾಗಿ ಡಿಪಿಆರ್ ಕೂಡ ತಯಾರಾಗಲಿದೆ. ಇನ್ನು ಈ ಯೋಜನೆಗೆ ಅಂದಾಜು 10ಸಾ ಕೋಟಿ ರೂಪಾಯಿ ವೆಚ್ಚವಾಗಲಿದ್ದು 2033ರ ವೇಳಿಗೆ ಹೊಸ ವಿಮಾನ ನಿಲ್ದಾಣವನ್ನ ಕಾರ್ಯಾಚರಣೆಗೆ ತರುವ ಗುರಿಯನ್ನ ಸರ್ಕಾರ ಹೊಂದಿದೆ.
ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವರ್ಷಕ್ಕೆ 10 ಕೋಟಿ ಜನರನ್ನ ನಿರ್ವಹಿಸಲಿದೆ ಅಂತ ಹೇಳಲಾಗ್ತಿದೆ. ಇದರ ಜೊತೆ ಬೆಂಗಳೂರು ದಕ್ಷಿಣ ಅದರಲ್ಲೂ ಕನಕಪುರ ರಸ್ತೆಯಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣವಾಗ್ತಾ ಇರುವುದರಿಂದ ಮತ್ತೊಂದು ಬಿಗ್ ಯೋಜನೆಯನ್ನ ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಮ್ಮ ಕ್ಷೇತ್ರಕ್ಕೆ ವರ್ಗಾಯಿಸಿಕೊಂಡಂತಾಗಿದೆ. ತುಮಕೂರು ಕಡೆ ಬೇಕು ಅಂತ ಗೃಹ ಸಚಿವ ಜಿ ಪರಮೇಶ್ವರ ಹಾಗೂ ಉತ್ತರ ಕರ್ನಾಟಕದ ಹಲವು ಸಚಿವರ ಸರ್ಕಾರದ ಮುಂದೆ ಬೇಡಿಕೆಯನ್ನ ಇಟ್ಟಿದ್ರು ಆದರೆ ಕೊನೆಗೂ ಡಿಕೆ ಶಿವಕುಮಾರ್ ಅವರ ಹಟ ಗೆದ್ದಿದ್ದು ಬೆಂಗಳೂರು ದಕ್ಷಿಣದಲ್ಲಿಯೇ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ನೆಲಮಂಗಲವನ್ನ ಬಿಟ್ಟಿದ್ದು ಯಾಕೆ ಸರ್ಕಾರ ಇಲ್ಲಿ ಏರ್ಪೋರ್ಟ್ ಇದ್ದರೆ ಏನೆಲ್ಲ ಆಗ್ತಿತ್ತು ಪ್ರಮುಖವಾಗಿ ನೆಲಮಂಗಲ ಕುಣಿಗಲ್ ರಸ್ತೆಯಲ್ಲಿ ಏರ್ಪೋರ್ಟ್ ಅನ್ನ ಸರ್ಕಾರ ಯಾಕೆ ಬಿಟ್ಟಿದೆ ಎಂಬುದನ್ನ ಗಮನಿಸಿದರೆ ನೆಲಮಂಗಲ ಭಾಗದಲ್ಲಿ ಕಲ್ಲಿನ ಗುಡ್ಡಗಳಿದ್ದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ನೆಲವನ್ನ ಸಮತಟ್ಟು ಮಾಡಲು ಬಾರಿ ಪ್ರಮಾಣದ ಖರ್ಚು ಮಾಡಬೇಕಾಗುತ್ತೆ ಅಲ್ಲದೆ ಅಸ್ತಿತ್ವದಲ್ಲಿರುವ ಇತರೆ ವಿಮಾನ ನಿಲ್ದಾಣಗಳ ವಾಯು ಪ್ರದೇಶದ ಮಿತಿಗಳು ಇಲ್ಲಿ ಅಡ್ಡಿಯಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತಿದೆ ಆದರೆ ಸೋಲೂರು ಬಳಿ ಏರ್ಪೋರ್ಟ್ ನಿರ್ಮಾಣವಾಗಿದ್ದರೆ ಬೆಂಗಳೂರು ಮಾತ್ರವಲ್ಲದೆ ನೆರ ಜಿಲ್ಲೆಗಳಿಗೂ ವಿಮಾನ ಭಾಗ್ಯ ಸಿಕ್ಕಂತ ಆಗ್ತಾ ಇತ್ತು.
ಸಂಚಾರ ದಟ್ಟಣೆ ವಿಚಾರದಲ್ಲಿ ಬಿಡದಿ ಹಾರೋಹಳ್ಳಿಗಿಂತ ಉತ್ತಮ ಆಗಿದ್ದು ಕರಾವಳಿ ಉತ್ತರ ಕರ್ನಾಟಕದ ಜನರಿಗೆ ಬಾರಿ ಅನುಕೂಲ ಐಟಿ ವಲೆಯುವು ತುಮಕೂರು ಮತ್ತು ನೆಲಮಂಗಲ ಭಾಗಕ್ಕೂ ವಿಸ್ತರಣೆ ಅಭಿವೃದ್ಧಿಗೆ ಇತರ ವಾಣಿಜ್ಯ ಚಟುವಟಿಕೆ ವಿಸ್ತರಣೆಗೆ ಬಾರಿ ಅವಕಾಶ ಆಮೇಲೆ ಪುಣೆ ಬೆಂಗಳೂರು ಹೆದ್ದಾರಿ ಚೆನ್ನೈ ಇಂಡಸ್ಟ್ರಿಯಲ್ ಕಾರ್ಡರ್ಗೆ ಸಮೀಪ ಇದ್ದು ಜನರಿಗೆ ಅನುಕೂಲ ಆಗ್ತಾ ಇತ್ತು ಅಂತ ಹೇಳಲಾಗ್ತಿದೆ ಒಟ್ಟನಲ್ಲಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗು ಬಹುತೇಕ ಕಚಿತವಾಗಿದೆ ಆದರೆ ಸ್ಥಳ ಯಾವುದು ಎಂಬುದು ತಾಂತ್ರಿಕ ವರದಿ ಬಂದ ನಂತರವೇ ನಿರ್ಧಾರವಾಗಲಿದೆ. ರಾಜಕೀಯ ಹಿತಾಸಕ್ತಿಕಿಂತ ತಾಂತ್ರಿಕ ಮತ್ತು ಆರ್ಥಿಕ ಅಂಶಗಳ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ. ಸದ್ಯದ ಕೆಂಪೇಗೌಡ ವಿಮಾನ ನಿಲ್ಧಾಣದಲ್ಲಿ ಪ್ರಯಾಣಕರ ಸಂಖ್ಯೆ ಮುಂದಿನ ದಶಕದಲ್ಲಿ ಇಮ್ಮಡಿಯಾಗುವ ನಿರೀಕ್ಷೆ ಇದ್ದು ಎರಡನೇ ಏರ್ಪೋರ್ಟ್ ಅನಿವಾರ್ಯವಾಗಿದೆ. ಬನ್ನೇರು ಕಟ್ಟದ ಪರಿಸರ ಕಾಳಜಿ ವಾಯುಪಡೆಯ ಅನುಮತಿ ಮತ್ತು ಭೂಸ್ವಾಧೀನದಂತಹ ಸವಾಲುಗಳನ್ನ ಮೀರಿ 2033ರ ವೇಳೆಗೆ ಬೆಂಗಳೂರಿಗರು ದಕ್ಷಿಣ ಭಾಗದಿಂದಲೇ ವಿಮಾನ ಹಾರುತ್ತದೆಯ ಎಂಬುದನ್ನ ಕಾದು ನೋಡಬೇಕು.


