ಈ ಐಬೊಮ್ಮ ಅನ್ನುವಂತ ವೆಬ್ಸೈಟ್ ಬಗ್ಗೆ ನಿಮಗೆಲ್ಲ ಗೊತ್ತೇ ಇರುತ್ತೆ ಯಾಕೆಂದ್ರೆ ನೀವು ಕೂಡ ಒಂದಲ್ಲ ಒಂದು ಸಾರಿ ಆ ಒಂದು ವೆಬ್ಸೈಟ್ ಅಲ್ಲಿ ಸಿನಿಮಾನ ನೋಡಿಯೇ ಇರ್ತೀರಾ ಯಾವುದೇ ಹೊಸ ಸಿನಿಮಾ ರಿಲೀಸ್ ಆದ್ರೂ ಕೂಡ ಈ ಒಂದು ವೆಬ್ಸೈಟ್ ಅಲ್ಲಿ ಆ ಒಂದು ಸಿನಿಮಾ ಸಿಗತಾ ಇತ್ತು ಅಂದ್ರೆ ಇದು ಒಂದು ಪೈರಸಿ ವೆಬ್ಸೈಟ್ ಈಗ ಐಬೊಮ್ಮ ಅನ್ನುವಂತ ವೆಬ್ಸೈಟ್ ನ್ನ ನಡೆಸಿದಂತ ರವಿ ಎಂಬ ವ್ಯಕ್ತಿಯನ್ನ ಪೊಲೀಸರು ಬಂದಿಸಿದ್ದಾರೆ ಇವನು ಇಲ್ಲಿವರೆಗೂ ತನ್ನ ಐಬೊಮ್ಮ ವೆಬ್ಸೈಟ್ನ ಮೂಲಕ ಸುಮಾರು 20 ಕೋಟಿ ರೂಪಾಯಿಗಳನ್ನ ಸಂಪಾದನೆ ಮಾಡಿದ್ದಾನೆ ಅಂತ ಸುದ್ದಿ ಇದೆ ಅವನ ಬಳಿ ಈಗಾಗಲೇ 21000 ಫಿಲಿಂಗಳ ಕಾಪೀಸ್ಗಳು ಇದ್ದಾವಂತೆ ಅವನ ಬಳಿ ಸುಮಾರು 1972 ರಿಂದ 2025ರವರೆಗೂ ತೆರೆಕಂಡಂತ ಎಲ್ಲಾ ಸಿನಿಮಾಗಳ ಕಾಪಿಗಳು ಕೂಡ ಅವನ ಬಳಿ ಇದೆ ಈ ಐ ಬೊಮ್ಮ ವೆಬ್ಸೈಟ್ನ್ನ ಬಳಕೆ ಮಾಡದಿದ್ದಂತ ಸುಮಾರು 50 ಲಕ್ಷ ಜನರ ಡೇಟಾ ಅವನ ಬಳಿ ಇದೆ ಅವನಿಗೆ ಅವನದೇ ಆದಂತ 35 ಬ್ಯಾಂಕ್ ಖಾತೆಗಳು ಇದ್ದಾವೆ ಅವನು ಫ್ರಾನ್ಸ್ ನೆದರ್ಲ್ಯಾಂಡ್ಸ್ ದುಬೈ ಯುಎಸ್ಎ ದೇಶಗಳಲ್ಲಿ ವಾಸ ಮಾಡ್ತಾ ವೆಬ್ಸೈಟ್ ಅನ್ನ ನಡೆಸ್ತಾ ಇದ್ದ ನಿಮಗೆ ತಾಕತ್ತು ಅನ್ನೋದು ಇದ್ರೆ ನನ್ನನ್ನ ಹೇಳಿರಿ ಅಂತ ಆತ ನೇರವಾಗಿ ಪೊಲೀಸರಿಗೆನೇ ಸವಾಲ್ ಹಾಕಿದ್ದ ಆದರೆ ಈಗ ಪೊಲೀಸರಿಗೆ ಸಿಕ್ಬೇದಿದ್ದಾನೆ.
ಇದೆಲ್ಲಏನು ಇತ್ತೀಚಿಗೆ ಶುರುವಾದಂತದ್ದಲ್ಲ ಈ ಮೊದಲು ಕೂಡ ಮೂವಿ ರೂಲ್ಸ್ ತಮಿಳ್ ಎಂವಿ ತಮಿಳ್ ರಾಕರ್ಸ್ ಅಂತ ವೆಬ್ಸೈಟ್ ಗಳು ಇದ್ವು ಅವು ಏನ್ ಮಾಡ್ತಾ ಇದ್ವು ಅಂದ್ರೆ ಈ ಓಟಿಟಿ ಅಪ್ಲಿಕೇಶನ್ ಗಳಿಂದ ಸಿನಿಮಾಗಳನ್ನ ಡೌನ್ಲೋಡ್ ಮಾಡಿ ತಮ್ಮ ವೆಬ್ಸೈಟ್ ಗಳಲ್ಲಿ ಅದನ್ನ ಅಪ್ಲೋಡ್ ಮಾಡಿ ಜನರಿಗೆ ಉಚಿತವಾಗಿ ನೋಡೋದಕ್ಕೆ ಅನುಕೂಲವನ್ನ ಮಾಡಿಕೊಳ್ತಾ ಇದ್ವು ಆದರೆ ಈ ವೆಬ್ಸೈಟ್ ಗಳಲ್ಲಿ ಕೆಲವು ಸಮಸ್ಯೆಗಳಿದ್ವು ಫಿಲಿಂಗಳು ನೇರವಾಗಿ ಅವರ ವೆಬ್ಸೈಟ್ ಗಳಲ್ಲಿ ಇರ್ತಾ ಇರಲಿಲ್ಲ ಅವರು ಯಾವುದೋ ಒಂದು ಬಾಹ್ಯ ವೆಬ್ಸೈಟ್ಗೆ ಲಿಂಕನ್ನ ಕೊಡ್ತಿದ್ರು ಆ ಒಂದು ಲಿಂಕನ್ನ ಕ್ಲಿಕ್ ಮಾಡಿ ಬೇರೆ ವೆಬ್ಸೈಟ್ ಗಳಲ್ಲಿ ಫಿಲಿಂ ಗಳನ್ನ ನೋಡಬೇಕಾಗಿತ್ತು. ಅವುಗಳಲ್ಲಿ ಕೆಲವು ಲಿಂಕ್ಗಳು ಕೆಲಸ ಮಾಡ್ತಾ ಇದ್ವು. ಇನ್ನು ಕೆಲವು ಲಿಂಕ್ಗಳು ಕೆಲಸವನ್ನ ಮಾಡ್ತಾ ಇರಲಿಲ್ಲ. ಹೀಗಾಗಿ ಆ ಒಂದು ಲಿಂಕ್ಗಳ ಮೂಲಕ ಸಿನಿಮಾಗಳನ್ನ ನೋಡೋದು ಜನರಿಗೆ ಕಷ್ಟ ಆಗ್ತಿತ್ತು. ಒಂದು ವೇಳೆ ಜನ ಈ ವೆಬ್ಸೈಟ್ ಗಳಿಂದ ಸಿನಿಮಾಗಳನ್ನ ಡೌನ್ಲೋಡ್ ಮಾಡ್ಕೋಬೇಕು ಅಂದ್ರೆ ಅವರು ಟೊರೆಂಟ್ ಲಿಂಕ್ ಗಳನ್ನ ಕೊಡ್ತಾ ಇದ್ರು. ಆದ್ರೆ ಈ ಟೊರೆಂಟ್ ಲಿಂಕ್ಗಳ ಮೂಲಕ ಸಿನಿಮಾಗಳನ್ನ ಡೌನ್ಲೋಡ್ ಮಾಡ್ಕೊಂಡು ನೋಡೋದು ಎಲ್ಲರಿಗೂನು ಗೊತ್ತಿರಲಿಲ್ಲ ಅಥವಾ ಗೊತ್ತಾಗ್ತಾ ಇರ್ಲಿಲ್ಲ. ಆದ್ದರಿಂದ ಈ ಐಬೊಮ್ಮ ರವಿ ಎಂಬ ವ್ಯಕ್ತಿ ಇಲ್ಲಿ ಒಂದು ಬಿಸಿನೆಸ್ ರೂಟ್ ಅನ್ನ ಕಂಡುಕೊಂಡ ಮೂವಿ ರೂಲ್ಸ್ ತಮಿಳ್ ಎಂವಿ ತಮಿಳ್ ರಾಕರ್ಸ್ ನಂತ ವೆಬ್ಸೈಟ್ ಗಳಲ್ಲಿ ಇದ್ದಂತ ಸಮಸ್ಯೆಗಳನ್ನ ಈತ ನೋಡಿದ ಆಗ ಇವನು ಯೋಚನೆ ಮಾಡಿ ಒಂದು ವೆಬ್ಸೈಟ್ ಅನ್ನ ಓಪನ್ ಮಾಡಿದ ಹಾಗಾಗಿನ ಇವನು 2019 ರಲ್ಲಿ ಐ ಬೊಮ್ಮ ಅನ್ನುವಂತ ಒಂದು ವೆಬ್ಸೈಟ್ ಅನ್ನ ಶುರು ಮಾಡ್ತಾನೆ.
ಆ ಒಂದು ವೆಬ್ಸೈಟ್ನ ಇಂಟರ್ಫೇಸ್ ತುಂಬಾ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇತ್ತು ಅದರ ಇಂಟರ್ಫೇಸ್ ನೋಡಿದ್ರೆ ಇದು ಒಂದು ಅಕ್ರಮ ವೆಬ್ಸೈಟ್ ಅಂತ ಯಾರಿಗೂನು ಅನಿಸ್ತಾ ಇರ್ಲಿಲ್ಲ ಅಷ್ಟು ನೀಟಾಗಿ ಅದನ್ನ ಕ್ರಿಯೇಟ್ ಮಾಡಿದ್ದ ಇಲ್ಲಿ ಅವನು ಏನು ಮಾಡಿದ ಅಂದ್ರೆ ಸಿನಿಮಾಗಳನ್ನ ನೇರವಾಗಿ ಅವನ ಆ ಒಂದು ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡ್ತಿದ್ದ ಮೊದಲು ಜನ ಸಿನಿಮಾಗಳಿಗಾಗಿ ಏನೇನೋ ಲಿಂಕ್ಗಳನ್ನ ಕ್ಲಿಕ್ ಮಾಡಿ ನೋಡಬೇಕಾಗಿತ್ತು ಆದರೆ ಐಬೊಮ್ಮ ವೆಬ್ಸೈಟ್ ನಲ್ಲಿ ನೇರವಾಗಿ ಫಿಲಿಂ್ ಪೋಸ್ಟರ್ ಗಳ ಮೇಲೆ ಕ್ಲಿಕ್ ಮಾಡಿದ್ರೆ ಅಲ್ಲೇ ಸಿನಿಮಾ ಡೈರೆಕ್ಟ್ಆಗಿ ಪ್ಲೇ ಆಗ್ತಿತ್ತು ಈಗ ಯೋಚಿಸಿ ನೋಡಿ ಇಲ್ಲಿ ಇವರು ಸಿನಿಮಾಗಳನ್ನ ಈ ರೀತಿ ಉಚಿತವಾಗಿ ಒದಗಿಸೋದು ಒಂದು ವಿಷಯ ಆದರೆ ಎಲ್ಲಾ ಸಿನಿಮಾಗಳನ್ನು ಕೂಡ ಒಂದೇ ವೆಬ್ಸೈಟ್ನಲ್ಲಿ ಅದು ಕೇವಲ ಒಂದು ಚಿಕ್ಕ ಕ್ಲಿಕ್ ನ ಮೂಲಕ ಆನ್ಲೈನ್ ನಲ್ಲಿ ನೋಡೋದು ಎಷ್ಟು ಚೆನ್ನಾಗಿರುತ್ತೆ ಅಲ್ವಾ ಅದಕ್ಕಾಗಿನೇ ಈ ಒಂದು ವೆಬ್ಸೈಟ್ ತೆಲುಗು ರಾಜ್ಯಗಳಲ್ಲಿ ಬಹಳ ಫೇಮಸ್ ಕೂಡ ಆಯ್ತು ಅದಷ್ಟೇ ಅಲ್ಲದೆ ಕರ್ನಾಟಕ ತಮಿಳುನಾಡು ಒರಿಸ್ಸಾ ಈ ರೀತಿ ಹಲವು ರಾಜ್ಯಗಳಲ್ಲೂ ಕೂಡ ಈ ಒಂದು ವೆಬ್ಸೈಟ್ ಪಾಪ್ಯುಲರ್ ಆಯ್ತು ಸಾಮಾನ್ಯವಾಗಿ amazon ಪ್ರೈಮ್ Netflix ಹಾಟ್ ಸ್ಟಾರ್ sonನ ಲೈವ್ ಸನ್ ನೆಕ್ಸ್ಟ್ ಈ ರೀತಿ ಮೊದಲಾದಂತ ಓಟಡಿಗಳನ್ನ ನೀವು ತೆಗೆದುಕೊಳ್ಳೋದಕ್ಕೆ ವರ್ಷಕ್ಕೆ ಸುಮಾರು ಎಲ್ಲ ಸೇರಿ ಒಂದು ರೂಪಾ ಖರ್ಚಾಗುತ್ತೆ ನಾಲ್ಕು ಜನರ ಕುಟುಂಬ ಒಂದು ಥಿಯೇಟರ್ಗೆ ಹೋಗಿ ಆಹಾರ ಪದಾರ್ಥಗಳನ್ನ ಖರೀದಿ ಮಾಡಿ ಸಿನಿಮಾ ನೋಡಬೇಕು ಅಂದ್ರೆ ಕನಿಷ್ಠ ಒರೆಸಾವದಿಂದ 2000 ರೂಪಾಯ ಖರ್ಚಾಗುತ್ತೆ ಆದರೆ ಐಬೊಮ್ಮ ವೆಬ್ಸೈಟ್ನ ಮೂಲಕ ಮನೆಲೇ ಕೂತ್ಕೊಂಡು ಒಂದು ರೂಪಾಯಿನ್ನು ಕೂಡ ಖರ್ಚು ಮಾಡದೆ ಉಚಿತವಾಗಿ ಸಿನಿಮಾ ನೋಡುವಂತ ಅವಕಾಶ ಈ ಒಂದು ವೆಬ್ಸೈಟ್ ನ ಮೂಲಕ ಈ ರವಿ ಅನ್ನೋನು ಕೊಟ್ಟಿದ್ದ 2019 ರಿಂದ ಯಾವುದೇ ಅಡೆತಡೆ ಇಲ್ಲದೆ ಅವನ ವೆಬ್ಸೈಟ್ ಉಚಿತವಾಗಿ ಮುಂದುಡಿತು ತೆಲುಗು ರಾಜ್ಯಗಳಲ್ಲಂತೂ ಇದು ಬಹಳ ಪ್ರಸಿದ್ಧಿ ಆಯ್ತು.
ಹೊಸ ಸಿನಿಮಾಗಳು ಎಲ್ಲಿವೆ ಅಂದ್ರೆ ಅದು ಐ ಬೊಮ್ಮ ವೆಬ್ಸೈಟ್ ನಲ್ಲಿ ಇವೆ ಅನ್ನುವಷ್ಟರ ಮಟ್ಟಿಗೆ ಅದು ಪಾಪುಲರ್ ಆಯ್ತು ಈ ಸಿನಿಮಾಗಳನ್ನ ಈ ರೀತಿ ಫ್ರೀಯಾಗಿ ಒದುಗಿಸಿದ್ರೆ ಈ ಐ ಬೊಮ್ಮಗೆ ಏನು ಲಾಭ ಅಂತ ನೀವು ಯೋಚಿಸಬಹುದು ಅಷ್ಟು ದೊಡ್ಡ ವೆಬ್ಸೈಟ್ ನ್ನ ನಡೆಸೋದಕ್ಕೆ ಬಹಳಷ್ಟು ಹಣ ಖರ್ಚಾಗುತ್ತೆ ಅದರಲ್ಲೂ ಸುಮಾರು 21000 ಸಿನಿಮಾಗಳು ಅಂದ್ರೆ ಸರಾಸರಿ ಒಂದು ಸಿನಿಮಾಗೆ 2 GB ಅಂತ ಅಂದುಕೊಂಡ್ರುನು ಎಲ್ಲಾ ಸಿನಿಮಾ ಸೇರಿ ಏನಿಲ್ಲ ಅಂದ್ರೂನು ಆಲ್ಮೋಸ್ಟ್ 40 60ಸಾಕ್ಕೂ ಹೆಚ್ಚು ಜಿಬಿ ಕ್ರೌಡ್ ನಷ್ಟು ಸ್ಟೋರೇಜ್ ಬೇಕಾಗುತ್ತೆ ಹಾಗೇನೆ ಐಬೊಮ್ಮ ವೆಬ್ಸೈಟ್ಗೆ ದಿನಕ್ಕೆ ಕನಿಷ್ಠ 5 ಲಕ್ಷದಿಂದ 10 ಲಕ್ಷ ಜನರು ವಿಸಿಟ್ ಮಾಡ್ತಾರೆ ಅಷ್ಟು ಸ್ಟೋರೇಜ್ ಅಷ್ಟು ಟ್ರಾಫಿಕ್ ಇರುವಂತ ವೆಬ್ಸೈಟ್ ನಡೆಸೋದಕ್ಕೆ ತಿಂಗಳಿಗೆ ಕನಿಷ್ಠ ಅಂದ್ರೂನು ಒಂದು ಲಕ್ಷದಿಂದಎರಡು ಲಕ್ಷ ಹಣ ಖರ್ಚಾಗುತ್ತೆ ಹಾಗಾದ್ರೆ ಈ ಒಂದು ಹಣವನ್ನ ಹೇಗೆ ಕವರ್ ಮಾಡೋದು ಅದಕ್ಕಾಗಿನೇ ಈ ಐಬೊಮ್ಮ ರವಿ ಜಾಹಿರಾತು ಎಂಬ ಆದಾಯದ ಮೂಲವನ್ನ ಆರಿಸಿಕೊಂಡ ಅದು ಕಾನೂನುಬದ್ದ ವೆಬ್ಸೈಟ್ ಆಗಿದ್ರೆ ಈ ಬ್ರಾಂಡ್ಗಳು ಬಂದು ಜಾಹಿರಾತನ್ನ ತೋರಿಸುದಕ್ಕೆ ಹಣವನ್ನ ಕೊಡ್ತಿದ್ರು ಆದರೆ ಅದೊಂದು ಅಕ್ರಮ ವೆಬ್ಸೈಟ್ ಆದ್ದರಿಂದ ಅಂತ ವೆಬ್ಸೈಟ್ಗಳ ಳಗೆ ಅಕ್ರಮ ಅಪ್ಲಿಕೇಶನ್ಗಳ ಜಾಹಿರಾತೆಗಳೇ ಬರ್ತಾ ಇದ್ವು. YouTube ನಂತ ಕಾನೂನುಬದ್ದ ಅಪ್ಲಿಕೇಶನ್ ಗಳಲ್ಲಿ ಅಕ್ರಮ ಬೆಡ್ಡಿಂಗ್ ಅಪ್ಲಿಕೇಶನ್ಗಳನ್ನ ಪ್ರಚಾರ ಮಾಡೋದಕ್ಕೆ ಅವಕಾಶ ಇರೋದಿಲ್ಲ. ಅದಕ್ಕಾಗಿಯೇ ಬೆಟ್ಟಿಂಗ್ ಅಪ್ಲಿಕೇಶನ್ಗಳು ಅಡ್ವರ್ಟೈಸ್ ಗೆ ಅಂತಾನೆ ಈ ಐಬೊಮ್ಮ ತರಹದ ಅಕ್ರಮ ವೆಬ್ಸೈಟ್ ಗಳನ್ನ ಆಯ್ಕೆ ಮಾಡ್ಕೊಳ್ತಿದ್ವು. ಈ ಐಬೊಮ್ಮ ವೆಬ್ಸೈಟ್ ನಲ್ಲಿ ನೀವು ಯಾವುದೇ ಸಿನಿಮಾ ಪೋಸ್ಟರ್ ಮೇಲೆ ಕ್ಲಿಕ್ ಮಾಡಿದಾಗ ಸಿನಿಮಾದ ಜೊತೆಗೆ ಒಂದು ಹೆಚ್ಚುವರಿ ಟ್ಯಾಬ್ ಕೂಡ ಓಪನ್ ಆಗ್ತಿತ್ತು. ಆ ಒಂದು ಟ್ಯಾಬ್ ನಲ್ಲಿ ಬರಿ ಬೆಟ್ಟಿಂಗ್ಗಳ ಪ್ರಚಾರ ಇರ್ತಾ ಇತ್ತು. ಈ ಐಬೊಮ್ಮ ವೆಬ್ಸೈಟ್ ಗೆ ಸುಮಾರು ದಿನಕ್ಕೆ 20 ಲಕ್ಷ ಜನ ಭೇಟಿಯನ್ನ ಕೊಟ್ಟಿದ್ದಾರೆ ಅಂತ ಅಂದುಕೊಳ್ಳಿ. ಆಗ ಇಂತ ಅಪ್ಲಿಕೇಶನ್ಗಳು ಇವರಿಗೆ ಸುಮಾರು 10 ಲಕ್ಷ ರೂಪಾಯಿಗಳನ್ನ ಕೊಡ್ತಾರೆ.
ಅಂದ್ರೆ ತಿಂಗಳಿಗೆ ಸುಮಾರುಮೂರು ಕೋಟಿ ಅಂದ್ರೆ ವರ್ಷಕ್ಕೆ 35 ಕೋಟಿ ನೋಡಿ ಈ ರೀತಿ ಇತ್ತು ಈ ಐಬೊಮ್ಮ ವೆಬ್ಸೈಟ್ನ ಆದಾಯದ ಮೂಲ ಇಲ್ಲಿ ಅವನ ಖರ್ಚು ಏನಂದ್ರೆ ಕೇವಲ ವೆಬ್ಸೈಟ್ ನಡೆಸುವದು ಮಾತ್ರ ನಮ್ಮಲ್ಲಿ ಓಟಿಟಿ ಅಪ್ಲಿಕೇಶನ್ಗಳು ಸಿನಿಮಾಗಳ ನಿರ್ಮಾಪಕರಿಂದ ಆ ಸಿನಿಮಾಗಳನ್ನ ಹಣವನ್ನು ಕೊಟ್ಟು ಖರೀದಿ ಮಾಡಬೇಕು ಆದರೆ ರವಿಗೆ ಈ ಅವಶ್ಯಕತೆ ಇರಲಿಲ್ಲ ಕೇವಲ ಓಟಿಟಿ ಅಪ್ಲಿಕೇಶನ್ ಗಳಿಂದಲೇ ಡೌನ್ಲೋಡ್ ಮಾಡಿ ಅಪ್ಲೋಡ್ ಮಾಡೋದು ಮಾತ್ರ ಅವನ ಬಿಸಿನೆಸ್ ನಿಮಗೆ ಈಗ ಒಂದು ಅನುಮಾನ ಬರಬಹುದು ನಾವು ಓಟಿಟಿ ಅಪ್ಲಿಕೇಶನ್ ಗಳಲ್ಲಿ ಇರುವಂತ ಸಿನಿಮಾಗಳನ್ನ ಡೌನ್ಲೋಡ್ ಮಾಡೋದಕ್ಕೆ ಸಾಧ್ಯ ಇಲ್ಲ ಸ್ಕ್ರೀನ್ ರೆಕಾರ್ಡಿಂಗ್ ಮಾಡಿದ್ರು ಕೂಡ ಅದು ಕಪ್ಪು ಪರದೆ ಬರುತ್ತೆ ಅಂತದರಲ್ಲಿ ಈ ಪೈರಸಿ ವೆಬ್ಸೈಟ್ ಗಳು ಹೇಗೆ ಅವುಗಳನ್ನ ಸುಲಭವಾಗಿ ಡೌನ್ಲೋಡ್ ಮಾಡೋದಕ್ಕೆ ಸಾಧ್ಯ ಅಂತ ನಿಮ್ಮಲ್ಲಿ ಹಲವರಿಗೆ ಅನುಮಾನ ಬಂದಿರುತ್ತೆ ವಾಸ್ತವವಾಗಿ ಒಂದು ಕಾಲದಲ್ಲಿ ಓಟಿಟಿ ಅಪ್ಲಿಕೇಶನ್ ಗಳಲ್ಲಿ ಸಿನಿಮಾಗಳನ್ನ ಸುಲಭವಾಗಿ ಡೌನ್ಲೋಡ್ ಮಾಡುವಂತ ಅವಕಾಶ ಇತ್ತು ಕೇವಲ ಲಿಂಕನ್ನ ತಗೊಂಡು ಹೋಗಿ ಯಾವುದೋ ಒಂದು ವೆಬ್ಸೈಟ್ಗೆ ಕೊಟ್ಟು ಅವುಗಳನ್ನ ಡೌನ್ಲೋಡ್ ಮಾಡಬಹುದಿತ್ತು ಈ ರೀತಿ ಡೌನ್ಲೋಡ್ ಮಾಡಿ ಪೈರಸಿ ಮಾಡ್ತಿದ್ದಾರೆ ಅಂತ ಓಟಿಡಿ ಅಪ್ಲಿಕೇಶನ್ ಗಳು ಎನ್ಕ್ರಿಪ್ಷನ್ ಎಂಬ ಒಂದು ಹೊಸ ತಂತ್ರಜ್ಞಾನವನ್ನ ತಂದ್ರು ಇದರಿಂದ ಏನಾಗುತ್ತಪ್ಪಾ ಅಂದ್ರೆ ಉದಾಹರಣೆಗೆ Netflix ನಲ್ಲಿ ಒಂದು ಸಿನಿಮಾ ಇದೆ ಅಂದ್ರೆ ಅದನ್ನ Netflix ಅಪ್ಲಿಕೇಶನ್ ಮಾತ್ರ ಡಿಕ್ರಿಪ್ಟ್ ಮಾಡಿ ಆನ್ಲೈನ್ ನಲ್ಲಿ ಪ್ಲೇ ಮಾಡೋದಕ್ಕೆ ಸಾಧ್ಯ ಆಗುತ್ತೆ. ಬೇರೆ ಯಾವ ಸಾಫ್ಟ್ವೇರ್ ಕೂಡ ಆ ಒಂದು ಸಿನಿಮಾವನ್ನ ಪ್ಲೇ ಮಾಡೋದಕ್ಕೆ ಸಾಧ್ಯ ಇಲ್ಲ ಅಂತ ತಂತ್ರಜ್ಞಾನವನ್ನ ಅವರು ತಂದಿದ್ದಾರೆ.
ಪೈರಸಿ ವೆಬ್ಸೈಟ್ ಗಳು ಈ ಓಟಿಟಿ ಪ್ಲಾಟ್ಫಾರ್ಮ್ ಗಳಲ್ಲಿ ಇರುವಂತಹ ಸಿನಿಮಾಗಳನ್ನು ಕೂಡ ಡೆಕ್ರಿಪ್ಟ್ ಮಾಡುವಂತ ಹೊಸ ಸಾಫ್ಟ್ವೇರ್ ಗಳನ್ನ ತಯಾರು ಮಾಡಿಕೊಂಡು ಡೌನ್ಲೋಡ್ ಮಾಡಿ ಆನ್ಲೈನ್ ನಲ್ಲಿ ಜನರಿಗೆ ಫ್ರೀಯಾಗಿ ಕೊಡ್ತಿದ್ದಾರೆ. ಈ ಐಬೊಮ್ಮ ರವಿ ಕೂಡ ಹಾಗೇನೇ ಮಾಡಿದ್ದು ಐಬೊಮ್ಮ ಮಾಡ್ತಿರುವಂತಹ ಈ ಒಂದು ಕೆಲಸದಿಂದ ನಿರ್ಮಾಪಕರಿಗೆ ಬಹಳ ನಷ್ಟ ಆಗ್ತಿದೆ. ಹಾಗಾಗಿ ನಿರ್ಮಾಪಕರು ಕೂಡ ಈ ನಷ್ಟವನ್ನ ಸಹಿಸಲಾಗದೆ ಪೊಲೀಸರ ಸಹಾಯವನ್ನ ಬೇಡಿಕೊಳ್ಳುತ್ತಾರೆ. ಪೊಲೀಸರು ಕೂಡ ತಕ್ಷಣ ಕ್ರಮವನ್ನ ಕೈಗೊಂಡರು. ಈ ಐಬೊಮ್ಮ ವೆಬ್ಸೈಟ್ ಅನ್ನ ಅವರು ನಿರ್ಬಂಧಿಸಿದ್ರು. ಆದರೆ ಈ ಐಬೊಮ್ಮ ಮತ್ತೊಂದು ಹೆಸರಿನೊಂದಿಗೆ ವೆಬ್ಸೈಟ್ ಅನ್ನ ಮತ್ತೆ ಶುರು ಮಾಡ್ತು. ಈ ibomma ಅನ್ನ ನಿರ್ಬಂಧ ಮಾಡಿದ್ರೆ ibomma ಆನ್ಲೈನ್ ಎಂಬ ಹೆಸರಲ್ಲಿ ಅದು ಮತ್ತೆ ಬರ್ತಾ ಇತ್ತು. ಅದನ್ನ ನಿರ್ಬಂಧ ಮಾಡಿದ್ರೆ ibomma ಎಂಬ ಹೆಸರಲ್ಲಿ ಮತ್ತೆ ಬರ್ತಾ ಇತ್ತು. ಅದನ್ನು ಕೂಡ ನಿರ್ಬಂಧಿಸಿದರೆ ibomma. ಎಂಬ ಹೆಸರಲ್ಲಿ ಮತ್ತೆ ಬರ್ತಾ ಇತ್ತು. ಈ ರೀತಿ ವಿಭಿನ್ನ ಹೆಸರುಗಳೊಂದಿಗೆ ಅದು ಬರೋದಕ್ಕೆ ಕಾರಣ ಏನು ಅಂದ್ರೆ ಪೊಲೀಸರು ಕೇವಲ ಅವುಗಳ ಡೊಮೈನ್ ಗಳನ್ನ ಮಾತ್ರ ನಿರ್ಬಂಧ ಮಾಡೋದಕ್ಕೆ ಸಾಧ್ಯ ಆದರೆ ಸಿನಿಮಾಗಳು ಯಾವ ಕ್ಲೌಡ್ ನಲ್ಲಿ ಸ್ಟೋರೇಜ್ ಆಗಿದೆಯೋ ಆ ಒಂದು ವೆಬ್ಸೈಟ್ ಅನ್ನ ಅವರು ನಿರ್ಬಂಧ ಮಾಡೋದಕ್ಕೆ ಸಾಧ್ಯ ಇಲ್ಲ. ಈ ಐಬೊಮ್ಮ ವಿಷಯದಲ್ಲೂ ಕೂಡ ಇದೆ ಆಗಿದ್ದು ಒಂದು ಡೊಮೈನ್ ಅನ್ನ ನಿರ್ಬಂಧ ಮಾಡೋದಕ್ಕೆ ಒಂದು ತಿಂಗಳ ಸಮಯವನ್ನ ತೆಗೆದುಕೊಳ್ಳುತ್ತೆ. ಅದಕ್ಕಾಗಿನ ಐಬೊಮ್ಮ ಆಗಾಗ ತನ್ನ ಹೆಸರುಗಳನ್ನ ಬದಲಿಸ್ತಾ ಇತ್ತು.
ಈ ರವಿ ಎಂಬತನ ಬಳಿ ಸುಮಾರು 110 ಅಂತಹ ವೆಬ್ಸೈಟ್ನ ಡೊಮೈನ್ಗಳು ಇದ್ದಾವೆ. ಹಾಗಾದ್ರೆ ಈ ಡೊಮೈನ್ ಗಳನ್ನ ನಿರ್ಬಂಧ ಮಾಡುವಂತ ಬದಲಿಗೆ ನೇರವಾಗಿ ವೆಬ್ಸೈಟ್ ಮಾಲಿಕ ರವಿಯನ್ನೇ ಹಿಡಿಬಹುದಲ್ಲ ಅಂತ ನೀವು ಕೇಳಿದ್ರೆ ಅದು ಕೂಡ ಅಷ್ಟು ಸುಲಭದ ಕೆಲಸ ಅಲ್ಲ. ಯಾಕೆಂದ್ರೆ ವೆಬ್ಸೈಟ್ ಅನ್ನ ನಡೆಸುವರು ನಮ್ಮ ದೇಶದಲ್ಲಿದ್ದರೆ ಐಪಿ ಅಡ್ರೆಸ್ ಮೂಲಕ ಸುಲಭವಾಗಿ ಹಿಡಿಬಹುದು. ಆದರೆ ಇಂತ ಅಕ್ರಮ ವೆಬ್ಸೈಟ್ ನಡೆಸುವರು ವಿದೇಶದಲ್ಲಿ ವಾಸ ಮಾಡ್ತಾ ಅವುಗಳನ್ನ ನಡೆಸ್ತಿರ್ತಾರೆ. ವಿದೇಶದಲ್ಲಿ ಇರೋರನ್ನ ಬಂದಿಸೋದು ಕಷ್ಟ. ಯಾಕೆಂದ್ರೆ ಆ ದೇಶಗಳು ಅದನ್ನ ಒಪ್ಪಲ್ಲ. ಅದಕ್ಕಾಗಿನೇ ಐಬಮ್ಮ ರವಿ ಕೂಡ ಕೆರಿಬಿಯನ್ ದ್ವೀಪಗಳಲ್ಲಿ ವಾಸ ಮಾಡ್ತಾ ವೆಬ್ಸೈಟ್ಗಳನ್ನ ನಡೆಸ್ತಾ ಇದ್ದ. ಅವನು ಸೆಂಟ್ ಕಿಟ್ಸ್ ಮತ್ತು ನವಿಸ್ ಎಂಬ ದೇಶದಲ್ಲಿ ಪೌರತ್ವವನ್ನು ಕೂಡ ತಗೊಂಡಿದ್ದಾನೆ. 2022 ರಲ್ಲಿ ಭಾರತೀಯ ಪೌರತ್ವವನ್ನು ತಜಿಸಿ ಸೆಂಟ್ ಕಿಟ್ಸ್ ಮತ್ತು ನವಿಸ್ ದೇಶಕ್ಕೆ 80 ಲಕ್ಷ ಪಾವತಿ ಮಾಡಿ ಪೌರತ್ವವನ್ನ ಪಡೆದಿದ್ದಾನೆ. ಈ ಐಬೊಮ್ಮ ರವಿಯನ್ನ ಅವನ ಹೆಂಡತಿನ ಹಿಡಿಕೊಟ್ಟಿದ್ದಾಳೆ ಅಂತ ಹಲವರು ಹೇಳ್ತಿದ್ದಾರೆ. ಯಾಕೆಂದ್ರೆ ಆತ ವಿಚ್ಛೇದನ ಪಡೆಯೋದಕ್ಕೆ ಫ್ರಾನ್ಸ್ನಿಂದ ಭಾರತಕ್ಕೆ ಬಂದಾಗ ಅವನ ಹೆಂಡತಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾಳೆ ಅಂತ ಸುದ್ದಿ ಇದೆ ಆದರೆ ಇದು ನಿಜ ಅಲ್ಲ. ರವಿಗೆ ಐದು ವರ್ಷಗಳ ಹಿಂದೆನೆ ಅವನ ಪತ್ನಿ ಜೊತೆ ವಿಚ್ಛೇದನಾಗಿತ್ತು. ವಾಸ್ತವವಾಗಿ ಅವನು ವಿಶಾಖಪಟ್ಟಣಂ ಮೂಲದವನು ಹೈದರಾಬಾದ್ ಮತ್ತು ವಿಶಾಖಪಟ್ಟಣದಲ್ಲಿ ಇರುವಂತ ತನ್ನ ಆಸ್ತಿಗಳನ್ನ ಮಾರಾಟ ಮಾಡೋದಕ್ಕೆ ಇತ್ತೀಚಿಗೆ ಫ್ರಾನ್ಸ್ ನಿಂದ ಹೈದರಾಬಾದ್ಗೆ ಬಂದಿದ್ದ ಈ ಒಂದು ಮಾಹಿತಿ ಗೊತ್ತಾದಂತ ಪೊಲೀಸರು ಅವನು ವಾಸ ಮಾಡ್ತಂತಹ ಅಪಾರ್ಟ್ಮೆಂಟ್ ನ ಬಳಿ ಹಂಚು ಹಾಕಿ ಅವನು ಬರ್ತಿದ್ದ ಹಾಗೇನೆ ಹಿಡಿದಿದ್ದಾರೆ ಅಲ್ಲ ಇಷ್ಟು ಲಕ್ಷ ಭೇಟಿ ಕೊಡುವಂತ ಈ ಐಬೊಮ್ಮ ವೆಬ್ಸೈಟ್ ನಡೆಸಿ ಕೇವಲ 20 ಕೋಟಿ ರೂಪಾಯಿ ಮಾತ್ರ ಈತ ಸಂಪಾದನೆ ಮಾಡಿದ್ದಾನೆ ಅಂತ ಕೆಲವರು ಕೇಳ್ತಿದ್ದಾರೆ. ಸದ್ಯಕ್ಕೆ ರವಿ ಈ ಒಂದು ಬಿಸಿನೆಸ್ ಇಂದ ಈವರೆಗೂನು 20 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾನೆ ಅಂತ ಹೇಳಲಾಗ್ತಿದೆ. ಆದರೆ ಪೊಲೀಸರು ಅವನ ಬ್ಯಾಂಕ್ ಖಾತೆಗಳಲ್ಲಿ ಇರುವಂತ 3 ಕೋಟಿ ರೂಪಾಯನ್ನ ಮಾತ್ರ ಸೀಸ್ ಮಾಡಿದ್ದಾರೆ. ವಾಸ್ತವಾಗಿ ಅವನು ಇಲ್ಲಿವರೆಗೂನು ಎಷ್ಟು ಸಂಪಾದನೆ ಮಾಡಿದ್ದಾನೆ ಎಂಬುದು ಪೊಲೀಸರ ತನಿಕೆಯಲ್ಲಿ ಹೊರ ಬರಬೇಕಿದೆ.


