ಕಾರ್ಮಿಕ ವಲಯದಲ್ಲಿ ಮೋದಿ ಸರ್ಕಾರದ ಕ್ರಾಂತಿ. ಬಂತು ನಾಲ್ಕು ಹೊಸ ನೀತಿ ವರ್ಷಕ್ಕೆ ಸಿಗಲಿದೆ ಗ್ರಾಜುಟಿ ನೀವು ಖಾಸಕಿ ಉದ್ಯೋಗಿಯೇ ಅಥವಾ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೀರಾ ಹಾಗಿದ್ದರೆ ಇವತ್ತಿನ ಈ ಸುದ್ದಿ ನಿಮ್ಮ ಬದುಕನ್ನೇ ಬದಲಾಯಿಸಲಿದೆ ಭಾರತದ ಇತಿಹಾಸದಲ್ಲಿ ಕಾರ್ಮಿಕ ಕ್ಷೇತ್ರದಲ್ಲಿ ಅತಿ ದೊಡ್ಡ ಕ್ರಾಂತಿ ನಡೆದಿದ್ದು 40 ಕೋಟಿಗೂ ಹೆಚ್ಚು ಕಾರ್ಮಿಕರಿಗೆ ಮೋದಿ ಸರ್ಕಾರ ಸಿಹಿಸುದ್ದಿಯನ್ನ ನೀಡಿದೆ ಸ್ವಾತಂತ್ರ್ಯ ಬಂದು ಇಷ್ಟು ಎಷ್ಟು ವರ್ಷಗಳಾದರೂ ಹಳೆ ಕಾನೂನುಗಳ ಅಡಿಯಲ್ಲಿ ನಲುಗುತ್ತಿದ್ದ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ನಾಲ್ಕು ಪ್ರಮುಖ ಕಾರ್ಮಿಕ ಸಂಹಿತೆಗಳನ್ನ ಜಾರಿಗೆ ತಂದಿದೆ ಇದು ದಶಕಗಳಷ್ಟು ಹಳೆಯದಾದ ಕಾರ್ಮಿಕ ಕಾನೂನುಗಳ ಆಧುನೀಕರಣ ಎಂದು ಸರ್ಕಾರ ಹೇಳಿದೆ ಐದು ವರ್ಷ ಕೆಲಸ ಮಾಡಿದರೆ ಮಾತ್ರ ಸಿಗುತ್ತಿದ್ದ ಗ್ರಾಜುಯಿಟಿ ನಿಯಮಗಳು ಬದಲಾಗಿವೆ ಮಹಿಳೆರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನಿಯಮಗಳಲ್ಲೂ ಬದಲಾವಣೆಗಳಾಗಿದ್ದು ಗಿಕ್ ವರ್ಕರ್ಸ್ ಗಳಿಗೆ ಬಂಪರ್ ಘೋಷಣೆಗಳು ಹೊರಬಿದ್ದಿವೆ ಹಾಗಾದರೆ ಏನಿದು ನಾಲ್ಕು ಕಾರ್ಮಿಕ ಸಮಿತಿಗಳು ಈ ಹೊಸ ನಿಯಮಗಳು ನಿಮ್ಮ ಸಂಬಳ ನಿಮ್ಮ ಆರೋಗ್ಯ ಮತ್ತು ನಿಮ್ಮ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರಲಿವೆ.
ದೇಶದ ಕಾರ್ಮಿಕ ಕಾನೂನುಗಳಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನ ಮೋದಿ ಸರ್ಕಾರ ತೆಗೆದುಕೊಂಡು ಬಂದಿದೆ ವಿವಿಧ ವಲಯಗಳಿಗೆ ಸಂಬಂಧಿಸಿದ 29 ಕಾರ್ಮಿಕ ಕಾನೂನುಗಳನ್ನ ಒಗ್ಗೂಡಿಸಿ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನ ಶುಕ್ರವಾರದಿಂದ ಜಾರಿಗೆ ತಂದಿದೆ ಹೊಸ ನಾಲ್ಕು ಕಾರ್ಮಿಕ ಸಂಹಿತೆಗಳು ವೇತನ ಸಂಹಿತೆ 2019 ಕೈಗಾರಿಕ ಸಂಬಂಧಗಳ ಸಮಿತೆ 2020 ಸಾಮಾಜಿಕ ಭದ್ರತಾ ಸಮಿತೆ 2020 ವೃತ್ತಿ ಸುರಕ್ಷತೆ ಆರೋಗ್ಯ ಮತ್ತು ಕಾರ್ಯ ನಿರ್ವಹಣೆ ಸ್ಥಿತಿ ಸಮಿತಿ 2020 ಶುಕ್ರವಾರದಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ ಈ ನಾಲ್ಕು ಸ್ತಂಭಗಳ ಮೇಲೆ ಇನ್ಮುಂದೆ ಭಾರತದ ಉದ್ಯೋಗ ಕ್ಷೇತ್ರ ನಿಲ್ಲಲಿದೆ ಎಲ್ಲಾ ಉದ್ಯೋಗದಾತರು ಕಡ್ಡಾಯವಾಗಿನೇಮ ನೇಮಕಾತಿ ಪತ್ರಗಳನ್ನ ನೀಡಬೇಕು ಪ್ರತಿ ತಿಂಗಳು ಏಳನೇ ತಾರೀಕಿನ ಒಳಗೆ ವೇತನ ಪಾವತಿಯಾಗಬೇಕು ಯಾವುದೇ ಉದ್ಯೋಗವಾದರೂ ಮಹಿಳೆರಿಗೆ ರಾತ್ರಿ ಪಾಳಿ ಕೆಲಸಗಳಿಗೆ ಅವಕಾಶ ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಮಹಿಳೆರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು 40 ವರ್ಷ ಮೇಲ್ಪಟ್ಟ ವಯೋಮಾನದ ಎಲ್ಲಾ ಕೆಲಸಗಾರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ ಮಾಡಿಸಬೇಕು ಎನ್ನುವುದು ಹೊಸ ಕಾರ್ಮಿಕ ಸಂಹಿತೆಗಳ ಪ್ರಮುಖ ಸಂಗತಿಗಳಾಗಿವೆ ದೇಶದ ಬಹುತೇಕ ಕಾರ್ಮಿಕ ಕಾನೂನುಗಳನ್ನ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರ ಆರಂಭದಲ್ಲಿ ಅಂದರೆ 1930 ರಿಂದ 1950ರ ದಶಕದಲ್ಲಿ ರಚಿಸಲಾಗಿದೆ ಆ ಸಮಯದಲ್ಲಿ ಆರ್ಥಿಕತೆ ಮತ್ತು ಕೆಲಸದ ಸ್ವರೂಪಗಳು ಮೂಲಭೂತವಾಗಿ ವಿಭಿನ್ನವಾಗಿದ್ದವು ಈಗಿನ ಅಗತ್ಯತೆಗೆ ಅನುಗುಣವಾಗಿ ಕಾರ್ಮಿಕ ನಿಯಮಗಳನ್ನ ಬರುರೂಪಿಸಲಾಗಿವೆ.
ಈ ಸಮಿತೆಗಳನ್ನ ಸ್ವಾವಲಂಬಿ ರಾಷ್ಟ್ರಕ್ಕೆ ಅಗತ್ಯವಿರುವ ಬಲಿಷ್ಠ ಕಾರ್ಯಪಡೆಯನ್ನ ರೂಪಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲದೆ ಈ ಹೊಸ ಕಾರ್ಮಿಕ ಸುಧಾರಣೆಗಳು ಸ್ವಾವಲಂಬಿ ಭಾರತದತ್ತ ಒಂದು ಮಹತ್ವದ ಹೆಜ್ಜಿಯಾಗಿದ್ದು 2047ರ ಬೆಳಗ್ಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಗೆ ಹೊಸ ವೇಗವನ್ನು ನೀಡಲಿವೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮಂಸು ಮಾಂಡವ್ಯ ಹೇಳಿದ್ದಾರೆ ಅಂದರೆ ಈ ಬದಲಾವಣೆಗಳು ಕೇವಲ ಇಂದಿನ ಅಗತ್ಯವಷ್ಟೇ ಅಲ್ಲ ಮುಂದಿನ 25 ವರ್ಷಗಳ ಭಾರತದ ಅಭಿವೃದ್ಧಿಯ ದೃಷ್ಟಿಕೋನವನ್ನ ಒಳಗೊಂಡಿವೆ. ಹೊಸ ಕಾರ್ಮಿಕ ಕಾನೂನಿನಿಂದ ಏನೆಲ್ಲ ಸಿಗುತ್ತೆ ವಿವಿಧ ವಲಯದ ಕಾರ್ಮಿಕರಿಗೆ 10 ಗ್ಯಾರಂಟಿಗಳು ಇನ್ನು ಈ ಹೊಸ ಸಮಿತಿಗಳು ಕಾರ್ಮಿಕರಿಗೆ ನೀಡುತ್ತಿರುವ ಗ್ಯಾರಂಟಿಗಳೇನು ಎಂಬುದನ್ನ ಗಮನಿಸಿದರೆ ಎಲ್ಲಾ ಕಾರ್ಮಿಕರಿಗೂ ಸಕಾಲದಲ್ಲಿ ಕನಿಷ್ಠ ವೇತನ ಪಾವತಿಯ ಗ್ಯಾರೆಂಟಿ ಉದ್ಯೋಗಕ್ಕೆ ಸೇರುವ ಯುವಕರಿಗೆ ಕಡ್ಡಾಯವಾಗಿ ನೇಮಕಾತಿ ಪತ್ರ ಅಂದ್ರೆ ಅಪಾಯಿಂಟ್ಮೆಂಟ್ ಲೆಟರ್ ನೀಡಬೇಕು ಮಹಿಳೆರಿಗೆ ಸಮಾನ ವೇತನ ಮತ್ತು ಗೌರವ ಬರೊಬ್ಬರಿ 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನಿಗದಿತ ಅವಧಿಯ ನೌಕರರಿಗೆ ಕೇವಲ ಒಂದು ವರ್ಷದ ನಂತರವೇ ಗ್ರಾಜುಟಿ 40 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ಓವರ್ಟೈಮ್ ಅಥವಾ ಹೆಚ್ಚುವರಿ ಕೆಲಸಕ್ಕೆ ದುಪ್ಪಟ್ಟು ವೇತನ ಅಪಾಯಕಾರಿ ವಲಯಗಳಲ್ಲಿ ಕೆಲಸ ಮಾಡುವವರಿಗೆ ಶೇಕಡ ನೂರರಷ್ಟು ಆರೋಗ್ಯ ಸುರಕ್ಷತೆ ನೀಡುವುದು ಮತ್ತು ಅಂತರಾಷ್ಟ್ರೀಯ ಮಟ್ಟದ ಸಾಮಾಜಿಕ ನ್ಯಾಯದ ಭರವಸೆಯನ್ನ ಹಾಗೂ ಇದೇ ಮೊದಲ ಬಾರಿಗೆ ಗಿಗ್ ಪ್ಲಾಟ್ಫಾರ್ಮ್ ಕಾರ್ಮಿಕರ ಬಗ್ಗೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದ್ದು.
ಅನೇಕ ಕೊಡುಗೆಗಳನ್ನ ಈ ಹೊಸ ಕಾರ್ಮಿಕ ಸಮಿತಿಗಳು ನೀಡುತ್ತವೆ ಕೇಂದ್ರದಿಂದ ಉದ್ಯೋಗದ ಔಪಚಾರಿಕ ಕಾರಣಕ್ಕೆ ಒತ್ತು ಕನಿಷ್ಠ ವೇತನ ಕಡ್ಡಾಯ ಸಕಾಲದಲ್ಲಿ ಪಾವತಿಗೆ ನಿಯಮ ಹೊಸ ಕಾರ್ಮಿಕ ನೀತಿಗಳು ಪ್ರಮುಖವಾಗಿ ಉದ್ಯೋಗದ ಔಪಚಾರಿಕರಣಕ್ಕೆ ಒತ್ತು ನೀಡಿವೆ ಇಲ್ಲಿಯವರೆಗೆ ಎಷ್ಟೋ ಕಡೆ ಕೆಲಸಕ್ಕೆ ಸೇರಿದರು ಯಾವುದೇ ದಾಖಲೆ ಇರ್ತಾ ಇರಲಿಲ್ಲ ಆದರೆ ಇನ್ಮುಂದೆ ಹಾಗಲ್ಲ ಪ್ರತಿಯೊಬ್ಬ ಕಾರ್ಮಿಕನಿಗೂ ನೇಮಕಾತಿ ಪತ್ರ ಅಥವಾ ಅಪಾಯಿಂಟ್ಮೆಂಟ್ ಲೆಟರ್ ನೀಡುವುದು ಕಡ್ಡಾಯವಾಗಿದೆ ಈ ಲಿಖಿತ ದಾಖಲೆಯು ಪಾರದರ್ಶಕತೆಯನ್ನ ತರುವುದಲ್ಲದೆ ಉದ್ಯೋಗ ಭದ್ರತೆಯನ್ನ ಖಾತ್ರಿಪಡಿಸುತ್ತದೆ ಎರಡನೆದಾಗಿ ಕನಿಷ್ಠ ವೇತನ ವೇತನ ಸಂಹಿತೆ 2019ರ ಅಡಿಯಲ್ಲಿ ಎಲ್ಲಾ ಕಾರ್ಮಿಕರಿಗೂ ಕನಿಷ್ಠ ವೇತನವನ್ನ ಪಡೆಯುವ ಶಾಸನ ಬದ್ದ ಹಕ್ಕನ್ನ ನೀಡಲಾಗಿದೆ ಅಂದರೆ ಇನ್ಮುಂದೆ ಯಾವುದೇ ಮಾಲಿಕರು ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಕಡಿಮೆ ಸಂಬಳ ನೀಡುವಂತಿಲ್ಲ ಅಷ್ಟೇ ಅಲ್ಲ ಆ ಸಂಬಳವನ್ನ ಸಮಯಕ್ಕೆ ಸರಿಯಾಗಿ ನೀಡಲೇಬೇಕು ಸಕಾಲದಲ್ಲಿ ವೇತನ ನೀಡುವುದರಿಂದ ನೌಕರರ ಆರ್ಥಿಕ ಸ್ಥಿರತೆ ಹೆಚ್ಚುತ್ತದೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ ಮತ್ತು ಒಟ್ಟಾರೆ ನೈತಿಕ ಸ್ಥೈರ್ಯ ವೃದ್ಧಿಯಾಗುತ್ತದೆ ಎಂದು ಸರ್ಕಾರ ಹೇಳಿದೆ ಡೆಲಿವರಿ ಬಾಯ್ಗಳಿಗೆ ಕೇಂದ್ರದಿಂದ ಬಿಗ್ ನ್ಯೂಸ್ ಮಹಿಳೆರಿಗೆ ಸಮಾನ ವೇತನ ಮತ್ತು ಗೌರವ ಫಿಕ್ಸ್ ಬಹುಶಃ ಇದು ಸುಧಾರಣೆಯ ಅತ್ಯಂತ ಮಾನವೀಯ ಮುಖ ಎನ್ನಬಹುದು ಸಾಮಾಜಿಕ ಭದ್ರತಾ ಸಮಿತೆ 2020ರ ಅಡಿಯಲ್ಲಿ ಇದೇ ಮೊದಲ ಬಾರಿಗೆ ಗಿಗ್ ಮತ್ತು ಪ್ಲಾಟ್ಫಾರ್ಮ್ ಕೆಲಸಗಾರರನ್ನ ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತರಲಾಗಿದೆ ಸ್ವಿಗ್ಗಿ ಜೊಮಾಟೋ ಉಬರ್ ಓಲ ಅಥವಾ ಇನ್ನಿತರ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಕೆಲಸ ಮಾಡುವ ಲಕ್ಷ ಲಕ್ಷಾಂತರ ಬಂದಿಗೆ ಇನ್ಮುಂದೆ ಪಿಎಫ್ ಈಎಸ್ಐ ವಿಮೆ ಮತ್ತು ಇತರ ಸೌಲಭ್ಯಗಳು ಸಿಗಲಿವೆ.
ಈ ಎಸ್ಐಸಿ ವ್ಯಾಪ್ತಿಯನ್ನ ಈಗ ಪ್ಯಾನ್ ಇಂಡಿಯಾ ಅಂದರೆ ಇಡೀ ದೇಶಕ್ಕೆ ವಿಸ್ತರಿಸಲಾಗಿದೆಹತಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಇದು ಸ್ವಯಂ ಪ್ರೇರಿತವಾಗಿದ್ದರೆ ಅಪಾಯಕಾರಿ ಪ್ರಕ್ರಿಯೆಗಳಲ್ಲಿ ತೊಡಗಿರುವ ಸಂಸ್ಥೆಗಳಲ್ಲಿ ಒಬ್ಬರೇ ಒಬ್ಬ ಉದ್ಯೋಗಿ ಇದ್ದರೂ ಈಎಸ್ಐಸಿ ಕಡ್ಡಾಯವಾಗಿರುತ್ತದೆ. ಇನ್ನು ಮಹಿಳಾ ಸಬಲೀಕರಣದ ದೃಷ್ಟಿಯಿಂದ ಇದೊಂದು ಕ್ರಾಂತಿಕಾರಿ ಬದಲಾವಣೆ. ಮಹಿಳೆಯರು ಈಗ ರಾತ್ರಿ ಪಾಳೆಯದಲ್ಲಿಯೂ ಕೆಲಸ ಮಾಡಬಹುದು. ಹೌದು ಎಲ್ಲಾ ರೀತಿಯ ಸಂಸ್ಥೆಗಳಲ್ಲಿ ಎಲ್ಲಾ ರೀತಿಯ ಕೆಲಸಗಳಲ್ಲಿ ರಾತ್ರಿ ವೇಳೆ ಕೆಲಸ ಮಾಡಲು ಮಹಿಳೆಯರಿಗೆ ಅನುಮತಿ ನೀಡಲಾಗಿದೆ. ಆದರೆ ಇದಕ್ಕೆ ಎರಡು ಶರತ್ತುಗಳಿವೆ. ಒಂದು ಮಹಿಳಾ ಉದ್ಯೋಗಿಯ ಒಪ್ಪಿಗೆ ಇರಬೇಕು ಮತ್ತು ಎರಡು ಆ ಸಂಸ್ಥೆಯು ಅಗತ್ಯ ಸುರಕ್ಷತಾ ಕ್ರಮಗಳನ್ನ ಕೈಗೊಂಡಿರಬೇಕು. ಇದರಿಂದಾಗಿ ಮಹಿಳೆಯರಿಗೆ ಹೆಚ್ಚಿನ ಆದಾಯ ಗಳಿಸುವ ಉದ್ಯೋಗಗಳಲ್ಲಿ ಸಮಾನ ಅವಕಾಶಗಳು ದೊರೆಯಲಿವೆ ಅಲ್ಲದೆ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ಸಮಾನ ವೇತನ ಮತ್ತು ಗೌರವವನ್ನ ಈ ಹೊಸ ನಿಯಮಗಳು ಖಾತ್ರಿಪಡಿಸುತ್ತವೆ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗೆ ಆಧ್ಯತೆ ಉದ್ಯಮಗಳಿಗೂ ಅನುಕೂಲ ರಾಜಿ ಇಲ್ಲ ಇನ್ನು ಆರೋಗ್ಯವೇ ಭಾಗ್ಯ ಎಂಬ ಮಾತಿದೆ ಇದನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಉದ್ಯೋಗದಾತರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ 40 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆಯನ್ನ ಒದಗಿಸುವುದು ಕಡ್ಡಾಯವಾಗಿದೆ. ಇದು ರೋಗಗಳು ಬರುವ ಮುನ್ನವೇ ತಡೆಗಟ್ಟುವ ಸಂಸ್ಕೃತಿಯನ್ನ ಉತ್ತೇಜಿಸುತ್ತದೆ.
ಅಲ್ಲದೆ ವಲಯಗಳಾದ್ಯಂತಹ ಸುರಕ್ಷತೆ ಮತ್ತು ಆರೋಗ್ಯ ಮಾನದಂಡವನ್ನ ಏಕರೂಪಗೊಳಿಸಲು ರಾಷ್ಟ್ರೀಯ ಓಎಸ್ಎಚ್ ಮಂಡಳಿಯನ್ನ ಸ್ಥಾಪಿಸಲಾಗುವುದು 500ಕ್ಕೂ ಹೆಚ್ಚು ಕಾರ್ಮಿಕರಿರುವ ಸಂಸ್ಥೆಗಳಲ್ಲಿ ಸುರಕ್ಷತಾ ಸಮಿತಿಗಳನ್ನ ರಚಿಸುವುದು ಕಡ್ಡಾಯವಾಗಿದೆ. ಇದು ಕೆಲಸದ ಸ್ಥಳಗಳಲ್ಲಿ ಜವಾಬ್ದಾರಿಯನ್ನ ಹೆಚ್ಚಿಸುತ್ತದೆ. ಕಾರ್ಮಿಕರಿಗೆ ಇಷ್ಟೆಲ್ಲ ಸೌಲಭ್ಯ ನೀಡಿದ ಸರ್ಕಾರ ಉದ್ಯೋಗದಾತರ ಮೇಲಿನ ಹೊರೆಯನ್ನ ಕಡಿಮೆ ಮಾಡಿದೆ. ಅನುಸರಣ ಹೊರೆ ತಗ್ಗಿಸಲು ಸರಳೀಕೃತ ಪ್ರಕ್ರಿಯೆಗಳನ್ನ ಜಾರಿಗೆ ತರಲಾಗಿದೆ. ಸಿಂಗಲ್ ರಿಜಿಸ್ಟ್ರೇಷನ್ ಪ್ಯಾನ್ ಇಂಡಿಯಾ ಸಿಂಗಲ್ ಲೈಸೆನ್ಸ್ ಸಿಂಗಲ್ ರಿಟರ್ನ್ಸ್ ಪ್ರಕ್ರಿಯೆಯನ್ನು ಕೂಡ ತರಲಾಗಿದೆ. ಸಣ್ಣ ಘಟಕಗಳಿಗೆ ನಿಯಂತ್ರಿತ ಹೊರೆಯನ್ನ ಕಡಿಮೆ ಮಾಡಲು ಹೆಚ್ಚಿನ ಫ್ಯಾಕ್ಟರಿ ಅನ್ವಯಿಸುವ ಮಿತಿಗಳನ್ನ ನಿಗದಿ ಪಡಿಸಲಾಗಿದೆ. ಆದರೆ ಕಾರ್ಮಿಕರ ಸುರಕ್ಷಿತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಗ್ರಾಚುಟಿ ನಿಯಮಗಳಲ್ಲಿ ಬ್ರೇಕಿಂಗ್ ಬದಲಾವಣೆ ಐದು ವರ್ಷದ ರೂಲ್ಸ್ ಹೋಯ್ತು ಒಂದೇ ವರ್ಷಕ್ಕೆ ಗ್ರಾಚುಟಿ ಈಗ ನಾವು ಈ ಸಮಿತೆಗಳ ಅತ್ಯಂತ ಪ್ರಮುಖ ಭಾಗದತ್ತ ಬರೋಣ ಅದುವೇ ಗ್ರಾಚುಟಿ ಇದು ಲಕ್ಷಾಂತರ ಉದ್ಯೋಗಗಳ ಮೇಲೆ ಪರಿಣಾಮ ಬೀರುವ ಬದಲಾವಣೆಯಾಗಿದೆ.
ನಿಮಗೆ ಈಗಾಗಲೇ ಗ್ರಾಚುಟಿ ಬಗ್ಗೆ ಗೊತ್ತೇ ಇರುತ್ತೆ ಈ ಹಿಂದೆ ಪೇಮೆಂಟ್ ಆಫ್ ಗ್ರಾಚುಟಿ ಆಕ್ಟ್ ಅಡಿಯಲ್ಲಿ ನಿಗದಿತ ಅವಧಿಯ ಉದ್ಯೋಗಗಳು ಅಥವಾ ಪಿಕ್ಸೆಟ್ ಟರ್ಮ್ ಎಂಪ್ಲಾಯಿಸ್ ಗ್ರಾಜುಯಿಟಿಗೆ ಅರ್ಹರಾಗಲು ಒಂದು ಸಂಸ್ಥೆಯಲ್ಲಿ ಸತತವಾಗಿ ಐದು ವರ್ಷಗಳ ಸೇವೆಯನ್ನ ಪೂರ್ಣಗೊಳಿಸಬೇಕಿತ್ತು ಐದು ವರ್ಷ ಪೂರೈಸದಿದ್ದರೆ ನಯಾಪೇಸೆ ಗ್ರಾಜುಟಿ ಸಿಗುತ್ತಿರಲಿಲ್ಲ ಆದರೆ ಶುಕ್ರವಾರದಿಂದ ಜಾರಿಗೆ ಬಂದಿರುವ ಹೊಸ ಕಾರ್ಮಿಕ ಸಮಿತೆಗಳೊಂದಿಗೆ ಈ ಅವಧಿಯ ಅಗತ್ಯವನ್ನ ಸಡಿಲಿಸಲಾಗಿದೆ ನಿಗದಿತ ಅವಧಿಯ ನೌಕರರು ಈಗ ಕೇವಲ ಒಂದು ವರ್ಷದ ಸೇವೆಯನ್ನ ಪೂರ್ಣಗೊಳಿಸಿದರು ಸಾಕು ಗ್ರಾಜುಟಿಗೆ ಅರ್ಹರಾಗುತ್ತಾರೆ ಹೌದು ನೀವುೇ ಕೇಳುತ್ತಿರುವುದು ನಿಜ ಐದು ವರ್ಷ ಕಾಯುವ ಅಗತ್ಯವಿಲ್ಲ ಹೊಸ ನಿಯಮಗಳ ಅಡಿಯಲ್ಲಿ ಫಿಕ್ಸೆಡ್ ಟರ್ಮ್ ಎಂಪ್ಲಾಯಿಸ್ ಗೆ ರೆಗ್ಯುಲರ್ ಎಂಪ್ಲಾಯಿಗಳ ರೀತಿ ಸಮಾನ ವೇತನ ರಚನೆ ರಜೆ ಸೌಲಭ್ಯಗಳು ವೈದ್ಯಕೀಯ ಪ್ರಯೋಜನಗಳು ಮತ್ತು ಸಾಮಾಜಿಕ ಭದ್ರತಾ ಕ್ರಮಗಳು ಸಿಗಲಿವೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ನಾಲ್ಕು ಹೊಸ ಕಾರ್ಮಿಕ ಸಮಿತಿಗಳು ಭಾರತದ ಉದ್ಯೋಗ ವ್ಯವಸ್ಥೆಯನ್ನ ಜಾಗತಿಕ ಮಾನದಂಡಗಳಿಗೆ ತಕ್ಕಂತೆ ರೂಪಾಂತರಿಸಲಿವೆ ಇದು ಕೇವಲ ಕಾನೂನಿನ ಬದಲಾವಣೆಯಲ್ಲ ಬದಲಾಗಿ ಕಾರ್ಮಿಕರ ಬದುಕಿನ ಗುಣಮಟ್ಟವನ್ನ ಹೆಚ್ಚಿಸುವ ಪ್ರಯತ್ನವಾಗಿದೆ ಮಹಿಳೆಯರಿಗೆ ಸಮಾನತೆ ಗಿಗ್ ವರ್ಕರ್ಗಳಿಗೆ ರಕ್ಷಣೆ ಫಿಕ್ಸೆಡ್ ಟರ್ಮ್ ನೌಕರರಿಗೆ ಗ್ರಾಜುಟಿ ಮತ್ತು ಎಲ್ಲರಿಗೂ ಆರೋಗ್ಯ ಸುರಕ್ಷತೆ ಇವು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಭದ್ರ ಪುನಾದಿಯಾಗುತ್ತೆ.


