12000 ಉದ್ಯೋಗ ಕಡಿತ 11000 ಸಿಬ್ಬಂದಿ ವಜಾ 13000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಸದ್ಯ ಐಟಿ ಯಲ್ಲಿ ಕೇಳಿ ಬರ್ತಾ ಇರೋದೇ ಇದೊಂದೇ ಮಾತು ಆಫ್ ಉದ್ಯೋಗ ಕಡಿತ ಅನ್ನೋದು ಈಗ ಜಾಗತಿಕ ಟೆಕ್ ಜಗತ್ತಿನಲ್ಲಿ ಹೊಸ ಟ್ರೆಂಡ್ ಆಗಿ ಬದಲಾಗಿದೆ ಒಂದೆಡೆ ಸಾಲು ಸಾಲು ಉದ್ಯೋಗ ಕಡಿತ ಇನ್ನೊಂದೆಡೆ ವೀಸಾ ನಿಯಮಗಳ ಹೊಡಿತ ಈ ಸರಣಿ ಬೆಳವಣಿಗೆಗಳಿಂದ ಐಟಿ ಉದ್ಯೋಗಿಗಳು ಅಕ್ಷರಶಹ ತತ್ತರಿಸಿ ಹೋಗಿದ್ದಾರೆ ಏನಿದು ಟೆಕ್ ಜಗತ್ತಿನಲ್ಲಿ ನಡೀತಾ ಇರೋ ಬೆಳವಣಿಗೆ ಸಾವಿರಾರು ಟಿಕ್ಕಿಗಳು ಯಾಕೆ ಬೀದಿ ಪಾಲಾಗ್ತಾ ಇದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಈಗ ಡಬಲ್ ಶಾಕ್ ಅನುಭವಿಸುತ್ತಿದ್ದಾರೆ. ಜಾಗತಿಕ ಕಂಪನಿಗಳಾದ Google, Accenture, TCS ಇತ್ತೀಚೆಗೆ ಬೃಹತ್ ಲೇಔಟ್ಸ್ ಘೋಷಿಸಿರುವುದರಿಂದ ಸಾವಿರಾರು IT ಉದ್ಯೋಗಿಗಳು ತಮ್ಮ ಕೆಲಸದ ಭವಿಷ್ಯವನ್ನು ಕಳಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಈ layoffs ಭಾರತದ IT ಉದ್ಯೋಗಿಗಳ ಮೇಲೆ ಮಾತ್ರ ಅಲ್ಲ, ವಿದೇಶಗಳಲ್ಲಿ ಕೆಲಸ ಮಾಡುವ ಭಾರತೀಯ ತಂತ್ರಜ್ಞಾನ ವೃತ್ತಿಪರರ ಮೇಲೂ ನೇರ ಪ್ರಭಾವ ಬೀರುತ್ತಿವೆ.
ಇದರ ಜೊತೆಗೆ ವೀಸಾ ಸಮಸ್ಯೆಗಳೂ ಉದ್ಯೋಗಿಗಳಿಗೆ ಹೊಸ ಸಂಕಷ್ಟವನ್ನು ಸೃಷ್ಟಿಸುತ್ತಿವೆ. ಅಮೆರಿಕ, ಯೂರೋಪ್ ಮತ್ತು ಇತರ ದೇಶಗಳಲ್ಲಿ ಕೆಲಸ ಮಾಡುವ IT ವೃತ್ತಿಪರರು, ಕಂಪನಿಯ layoffs ನಿಂದ ವೀಸಾ ಶ್ರೇಣಿಯಲ್ಲಿನ ಅಸಮರ್ಥನೆ ಮತ್ತು ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಇದರಿಂದ ಉದ್ಯೋಗಿಗಳು ಹೊಸ ಅವಕಾಶಗಳನ್ನು ಹುಡುಕಬೇಕಾಗಿ ಬರುತ್ತಿದ್ದಾರೆ ಮತ್ತು ತನ್ನ ಕುಟುಂಬದ ಭದ್ರತೆಗೆ ಆತಂಕವು ಹೆಚ್ಚುತ್ತಿದೆ. ತಂತ್ರಜ್ಞಾನ ಉದ್ಯೋಗಿಗಳ ಸುರಕ್ಷತೆ ಮತ್ತು ಭವಿಷ್ಯವನ್ನು ಕಾಯ್ದುಕೊಳ್ಳಲು ಈಗ ಸ್ಥಿರ ನೀತಿ ಮತ್ತು ಸರ್ಕಾರ-ಕಂಪನಿ ಸಹಕಾರ ಅತ್ಯವಶ್ಯಕವಾಗಿದೆ.
ಇತ್ತೀಚಿಗೆ ಜಾಗತಿಕ ಐಟಿ ದೈತ್ಯ ಸಂಸ್ಥೆ ಆಕ್ಸೆಂಚರ್ ಕೇವಲ ಮೂರು ತಿಂಗಳಲ್ಲಿ 11000 ಉದ್ಯೋಗಿಗಳನ್ನ ವಜಾಗೊಳಿಸಿದೆ. ಈ ಮೂಲಕ ಐಟಿ ಉದ್ಯೋಗಿಗಳಿಗೆ ದೊಡ್ಡ ಶಾಕ್ ನೀಡಿದೆ. ಇದಕ್ಕೆ ಅವರು ಕೊಟ್ಟ ಕಾರಣ ಎರಡು ಒಂದು ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗ್ತಾ ಇದೆ. ಮತ್ತೊಂದು ಅತಿ ಮುಖ್ಯವಾದ ಕಾರಣ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಕ್ಷಿಪ್ರ ಬೆಳವಣಿಗೆ ಆಕ್ಸೆಂಜರ್ ಸಿಇಓ ಜೂಲಿ ಸ್ವೀಟ್ ಹೇಳಿದ ಮಾತು ಪ್ರತಿಯೊಬ್ಬ ಉದ್ಯೋಗಿಯು ಗಮನಿಸಲೇಬೇಕಿದೆ ನಮಗೆ ಬೇಕಾದ ಹೊಸ ಕೌಶಲ್ಯಕ್ಕೆ ತಕ್ಕಂತೆ ಹಳೆ ಉದ್ಯೋಗಿಗಳಿಗೆ ತರಬೇತಿ ನೀಡಲು ನಮ್ಮ ಬಳಿ ಸಮಯ ಇಲ್ಲ ಹಾಗಾಗಿ ಅಂತವರನ್ನ ನಾವು ಕೈಬಿಡ್ತಾ ಇದ್ದೀವಿ ಅಂತ ಅವರು ಸ್ಪಷ್ಟವಾಗಿ ಹೇಳಿದ್ದಾರೆ ಇದರ ಅರ್ಥ ಇಷ್ಟೇ ಕಂಪನಿಗಳಿಗೆ ಈಗ ಎಐ ತಿಳಿದಿರುವ ಹೊಸಬರನ್ನ ನೇಮಿಸಿಕೊಳ್ಳೋದು ಹಳೆಯ ಹಳೆಯ ಉದ್ಯೋಗಿಗಳಿಗೆ ತರಬೇತಿ ನೀಡೋದಕ್ಕಿಂತ ಸುಲಭ ಹಾಗೂ ಲಾಭದಾಯಕ ಅನಿಸ್ತಾ ಇದೆ ವಿಪರ್ಯಾಸ ಅಂದ್ರೆ ಇಷ್ಟೆಲ್ಲ ಉದ್ಯೋಗ ಕಡಿತದ ನಡುವೆಯು ಆಕ್ಸೆಂಜರ್ ಕಂಪನಿಯ ಆದಾಯ 7% ಹೆಚ್ಚಾಗಿದೆ ಅಂದ್ರೆ ಕಂಪನಿ ಲಾಭದಲ್ಲಿದ್ದರೂ ನಿಮ್ಮ ಕೆಲಸ ಸುರಕ್ಷಿತ ಅಂತ ಹೇಳೋಕೆ ಆಗ್ತಿಲ್ಲ ಇದು ಕೇವಲ ಒಂದು ಕಂಪನಿಯ ಕಥೆಯಲ್ಲ ಈ ಸಮಸ್ಯೆ ಕೇವಲ ಆಕ್ಸೆಂಚರ್ಗೆ ಸೀಮಿತ ಆಗಿಲ್ಲ ಇದು ಇಡೀ ಉದ್ಯಮವನ್ನ ವ್ಯಾಪಿಸ್ತಾ ಇದೆ.
ಈ ಸಾಲಿಗೆ ಈಗ ಮತ್ತೊಂದು ದೊಡ್ಡ ಹೆಸರು ಸೇರ್ಪಡೆಯಾಗಿದೆ. ಅದುವೇ ಗೂಗಲ್ ಎಲ್ಲರೂ ಅಂದುಕೊಂಡಿದ್ರು ಗೂಗಲ್ ನಲ್ಲಿ ಕೆಲಸ ಸಿಕ್ರೆ ಲೈಫ್ ಸೆಟಲ್ ಅಂತ. ಆದರೆ ಗೂಗಲ್ ಕೂಡ ತನ್ನ ಕ್ಲೌಡ್ ವಿಭಾಗದಲ್ಲಿನೂರಕ್ಕೂ ಹೆಚ್ಚು ಉದ್ಯೋಗಿಗಳನ್ನ ವಜಾಗೊಳಿಸಿದೆ. ಅಚ್ಚರಿ ಸಂಗತಿ ಅಂದ್ರೆಗೂಗಲ್ ಕ್ಲೌಡ್ ವಿಭಾಗ ಈ ವರ್ಷ ದಾಖಲೆಯ 13.6 6 ಬಿಲಿಯನ್ ಡಾಲರ್ ಆದಾಯ ಗಳಿಸಿದೆ ಅಂದ್ರೆ ಶೇಕಡ 32ರಷ್ಟು ಲಾಭ ಹೆಚ್ಚಾಗಿದ್ರು ಕಂಪನಿ ಉದ್ಯೋಗಿಗಳನ್ನ ಮನೆಗೆ ಕಳುಹಿಸುತ್ತಿದೆ ಇದಕ್ಕೆ ಮತ್ತದೇ ಕಾರಣ ಕೃತಕ ಬುದ್ಧಿಮತ್ತೆ ಅಂದ್ರೆಎಐ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ಮತ್ತು ಕಂಪನಿಯನ್ನ ಇನ್ನಷ್ಟು ದಕ್ಷತೆ ತರಲು ಗೂಗಲ್ ಮುಂದಾಗಿದೆ ಇದಕ್ಕಾಗಿ ಈ ಉದ್ಯೋಗ ಕಡಿತಕ್ಕೆ ಕೈ ಹಾಕಿದೆ ಇದು ವಿದೇಶಿ ಕಂಪನಿಗಳ ಳ ಕಥೆಯಾದರೆ ಇನ್ನು ನಮ್ಮದೇ ದೇಶದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸುಮಾರು 12000ಕ್ಕೂ ಹೆಚ್ಚು ಉದ್ಯೋಗಿಗಳನ್ನ ತೆಗೆದು ಹಾಕಿದೆ. ಅಷ್ಟೇ ಅಲ್ಲ ಪ್ರಾಜೆಕ್ಟ್ ಇಲ್ಲದೆ ಬೆಂಚ್ ಮೇಲೆ 35 ದಿನಗಳಿಗಿಂತ ಹೆಚ್ಚು ಕಾಲ ಇರುವ ಉದ್ಯೋಗಿಗಳನ್ನು ಕೂಡ ರಾಜೀನಾಮೆ ನೀಡುವಂತೆ ಒತ್ತಾಯಿಸ್ತಾ ಇದೆ ಅನ್ನೋ ಗಂಭೀರ ಆರೋಪಗಳಿವೆ.
11 ವರ್ಷ ಕೆಲಸ ಮಾಡಿದ ಅನುಭವಿ ಇರಲಿ ಅಥವಾ ನಿನ್ನೆ ಮೊನ್ನೆ ಸೇರಿದ ಹೊಸಬರಿರಲಿ ಯಾರನ್ನು ಬಿಡ್ತಾ ಇಲ್ಲ. ಇದು ಬರಿ ಐಟಿ ಕಥೆಯಲ್ಲ ಜರ್ಮನಿಯ ಆಟೋಮೊಬೈಲ್ ಬಿಡಿಭಾಗಗಳ ದೈತ್ಯ ಕಂಪನಿ ಬಾಶ್ ಕೂಡ 2030ರ ಒಳಗೆ 13000 ಉದ್ಯೋಗಗಳನ್ನ ಕಡಿತಗೊಳಿಸುದಾಗಿ ಹೇಳಿದೆ ಅಲ್ಲಿ ಕೂಡ ಕಾರಣ ಇದೆ ಬದಲಾಗ್ತಾ ಇರೋ ಮಾರುಕಟ್ಟೆ ಮತ್ತು ತಂತ್ರಜ್ಞಾನ ಗಾಯದ ಮೇಲೆ ಬರೆ ಎಳಿದಹಚ್ ಒನ್ಬಿ ವೀಸಾ ಭಾರತೀಯ ಟೆಕ್ಕಿಗಳಿಗೆ ಒಂದೆಡೆ ಕೆಲಸ ಹೋಗುವ ಭಯ ಆದರೆ ಇನ್ನೊಂದೆಡೆ ಅಮೆರಿಕಾದ ಕನಸಿಗೆ ದೊಡ್ಡ ಪೆಟ್ಟು ಬಿದ್ದಿದ ಅಮೆರಿಕಾ ಸರ್ಕಾರ ಒಬಿ ವೀಸಾ ನಿಯಮಗಳನ್ನ ಅತ್ಯಂತ ಕಠಿಣಗೊಳಿಸಿದೆ ಹೊಸದಾಗಿ ವೀಸಾಗೆ ಅರ್ಜಿ ಸಲ್ಲಿಸುವರಿಗೆ ಬರುಬ್ಬರಿ ಒ ಲಕ್ಷ ಡಾಲರ್ ಅಂದ್ರೆ ಸರಿಸುಮಾರು 88 ಲಕ್ಷ ರೂಪಾಯಿ ಶುಲ್ಕ ವಿಧಿಸಲು ಶುರು ಮಾಡಿದೆ ತಮಾಷೆ ಅಂದ್ರೆ ಅಮೆರಿಕಾದಲ್ಲಿ ಹೊಸದಾಗಿ HOB ವೀಸಾದ ಮೇಲೆ ಕೆಲಸಕ್ಕೆ ಸೇರಿರುವವರ ಸರಾಸರಿ ವಾರ್ಷಿಕ ಸಂಬಳವೇ 94,000 ಡಾಲರ್ ಅಂದ್ರೆ ಒಂದು ವರ್ಷದ ಸಂಬಳಕ್ಕಿಂತ ಹೆಚ್ಚು ವೀಸಾ ಶುಲ್ಕವನ್ನೇ ಕಟ್ಟಬೇಕು. ಇದು ಬಹುತೇಕ ಅಸಾಧ್ಯ. ಇದರಿಂದ ಏನಾಗುತ್ತೆ ಭಾರತದ ಟೆಕ್ಕಿಗಳಿಗೆ ಅಮೆರಿಕಾದ ಬಾಗಿಲು ಸಂಪೂರ್ಣ ಬಂದಾಗಲಿದೆ. ಈಗಾಗಲೇ ಅಮೆರಿಕಾದಲ್ಲಿಗೂಗಲ್ ಮೈಕ್ರೋಸಾಫ್ಟ್ ನಂತ ಕಂಪನಿಗಳನ್ನ ಭಾರತೀಯರೇ ಮುನ್ನಡೆಸುತ್ತಾ ಇದ್ದಾರೆ. ಅಲ್ಲಿನ ವೈದ್ಯಕೀಯ ಕ್ಷೇತ್ರದ ಶೇಕಡ ಆರರಷ್ಟು ವೈದ್ಯರು ಭಾರತೀಯರೇ ಹೀಗಾಗಿ ಈ ನಿರ್ಧಾರದಿಂದ ಅಮೆರಿಕಾದ ಆರ್ಥಿಕತೆ ಮತ್ತು ಆವಿಷ್ಕಾರಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಆದರೆ ಅವರ ಕಥೆ ಏನಾಗುತ್ತೋ ಗೊತ್ತಿಲ್ಲ.
ಅಮೆರಿಕಾದಲ್ಲಿ ಉದ್ಯೋಗ ಗಿಟ್ಟಿಸುವ ಕನಸು ಕಾಣ್ತಾ ಇದ್ದ ಲಕ್ಷಾಂತರ ಭಾರತೀಯರಿಗೆ ಇದು ದೊಡ್ಡ ಆಘಾತ ಹಾಗಿದ್ರೆ ನಾವೇನು ಮಾಡಬೇಕು ಇಲ್ಲಿವೇ ಐದು ಪ್ರಮುಖ ಪಾಠಗಳು ಎಲ್ಲ ಬೆಳವಣಿಗೆಗಳು ನಿಮ್ಮನ್ನ ಭಯಪಡಿಸಬಹುದು ಆದರೆ ಭಯಪಡೋದಕ್ಕಿಂತ ಭವಿಷ್ಯಕ್ಕೆ ಸಿದ್ಧರಾಗೋದು ಜಾಣತನ ಈ ಪರಿಸ್ಥಿತಿಯಿಂದ ನೀವು ಕಲಿಬೇಕಾದ ಐದು ಪ್ರಮುಖ ಪಾಠಗಳು ಇಲ್ಲಿದೆ ಒಂದು ಅಡಾಪ್ಟಬಿಲಿಟಿ ಅಂದ್ರೆ ಹೊಂದಿಕೊಳ್ಳುವಿಕೆ ತಂತ್ರಜ್ಞಾನ ಕ್ಷಣ ಕ್ಷಣಕ್ಕೂ ಬದಲಾಗ್ತಾ ಇದೆ ಹೀಗಾಗಿ ಕಂಪನಿಗಳು ನಮಗೆ ತರಬೇತಿ ಕೊಡ್ತವೆ ಅಂತ ಕಾಯ್ತಾ ಕೂರಬೇಡಿ ಹೊಸ ತಂತ್ರಜ್ಞಾನಗಳನ್ನ ನೀವೇ ವೇಗವಾಗಿ ಕಲಿತುಕೊಳ್ಳಿ ಎರಡು ಎಐ ಕೌಶಲ್ಯಗಳ ಮೇಲೆ ಹಿಡಿತ ಎಐ ಈಗ ಆಯ್ಕೆಯಲ್ಲ ಅದು ಅನಿವಾರ್ಯ ಆಗಿಹೋಗಿದೆ ಎಐನ ಹೊಸ ಹೊಸ ಕೌಶಲ್ಯಗಳನ್ನ ಕಲಿಯುದರಿಂದ ಉದ್ಯೋಗದಲ್ಲಿ ನೀವು ಉಳಿಕೊಳ್ಳಬಹುದು ಮೂರು ಪ್ರೊ ಆಕ್ಟಿವ್ ಲರ್ನಿಂಗ್ ಅಥವಾ ಸ್ವಯಂ ಕಲಿಕೆ ನಿಮ್ಮ ವೃತ್ತಿ ಜೀವನದ ಜವಾಬ್ದಾರಿ ನಿಮ್ಮದೇ. ಕಂಪನಿಗಳ ಮೇಲೆ ಅವಲಂಬಿತರಾಗದೆ, ಆನ್ಲೈನ್ ಕೋರ್ಸ್ ಗಳ ಮೂಲಕ ನಿಮ್ಮ ಕೌಶಲ್ಯಗಳನ್ನ ನೀವೇ ನಿರಂತರವಾಗಿ ಹೆಚ್ಚಿಸಿಕೊಳ್ಳಿ.
ನಾಲ್ಕು ಆರ್ಥಿಕ ಪರಿಸ್ಥಿತಿಗಳ ಅರಿವು. ಕಂಪನಿಗಳು ಯಾಕೆ ಆಫ್ ಮಾಡ್ತಾ ಇವೆ ಅವುಗಳ ಆರ್ಥಿಕ ಸ್ಥಿತಿ ಹೇಗಿದೆ ಅನ್ನೋದರ ಬಗ್ಗೆ ಅರಿವಿರಲಿ ಇದು ನಿಮಗೆ ವೃತ್ತಿ ಜೀವನದ ನಿರ್ಧಾರವನ್ನ ತೆಗೆದುಕೊಳ್ಳಲು ಸಹಾಯ ಮಾಡಲಿದೆ. ಐದನೆಯದ್ದು ಮಾನಸಿಕ ಸ್ಥೈರ್ಯ. ನೆನಪಿಡಿ ಗೂಗಲ್ ನಂತ ಲಾಭದಲ್ಲಿರುವ ಕಂಪನಿಗಳಲ್ಲೂ ಈಗ ಉದ್ಯೋಗ ಭದ್ರತೆ ಇಲ್ಲ ಯಾವುದೇ ಪರಿಸ್ಥಿತಿಯನ್ನ ಎದುರಿಸಲು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸಿದ್ಧರಾಗಿರಿ ಕನಿಷ್ಠ ಆರು ತಿಂಗಳಿಗಾಗುವಷ್ಟು ತುರ್ತು ನಿಧಿಯನ್ನ ಇಟ್ಟುಕೊಳ್ಳಿ ಕಾಲ ಬದಲಾಗಿದೆ ಐಟಿ ಜಗತ್ತು ಒಂದು ದೊಡ್ಡ ಪಲ್ಲಟಕ್ಕೆ ಸಾಕ್ಷಿಯಾಗ್ತಾ ಇದೆ ಯಾರು ಈ ಬದಲಾವಣೆಗೆ ತಕ್ಕಂತೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಾರೋ ಅವರು ಮಾತ್ರ ಈ ಸ್ಪರ್ಧೆಯಲ್ಲಿ ಉಳಿಯಲಿದ್ದಾರೆ ಇದಕ್ಕೆ ಎಕ್ಸೆಂಜರ್ ಗೂಗಲ್ ಕಥೆಗಳೇ ಸಾಕ್ಷಿ.


