Monday, December 8, 2025
HomeStartups and Businessವೀಸಾ ಸಿಕ್ಕಿಲ್ಲ ಅಂದರೆ ಲೈಫ್ ಸ್ಟಾಪ್ ಆಗಲ್ಲ! ವಿದ್ಯಾರ್ಥಿಗಳಿಗೆ ಪ್ರಮುಖ ಸಲಹೆ

ವೀಸಾ ಸಿಕ್ಕಿಲ್ಲ ಅಂದರೆ ಲೈಫ್ ಸ್ಟಾಪ್ ಆಗಲ್ಲ! ವಿದ್ಯಾರ್ಥಿಗಳಿಗೆ ಪ್ರಮುಖ ಸಲಹೆ

ಯುಎಸ್ ಗೆ ಹೋಗೋಕೆ ಬೇಕಾದ ವೀಸಾ ರಿಜೆಕ್ಟ್ ಆಯ್ತು ಅನ್ನೋ ಒಂದೇ ಕಾರಣಕ್ಕೆ ಹೈದರಾಬಾದ್ನಲ್ಲಿ ಡಾಕ್ಟರ್ ತಮ್ಮ ಪ್ರಾಣವನ್ನೇ ತೆಗೆದುಕೊಂಡರು ಗುಂಟೂರು ಮೂಲದವರಾದ ಡಾಕ್ಟರ್ ರೋಹಿಣಿ ರಷ್ಯಾದಲ್ಲಿ ಮೆಡಿಕಲ್ ಡಿಗ್ರಿ ಮುಗಿಸಿದ್ದರು ಸುಮಾರು ಎಂಟು ವರ್ಷಗಳಿಂದ ಹೈದರಾಬಾದ್ನಲ್ಲಿ ಪ್ರಾಕ್ಟೀಸ್ ಮಾಡ್ತಿದ್ದ ಅವರು ಯುಎಸ್ ನಲ್ಲಿ ಹೈಯರ್ ಸ್ಟಡೀಸ್ ಮಾಡೋಕೆ ಮನಸು ಮಾಡಿ ಓದಿನ ಜೊತೆಗೆ ಅಲ್ಲಿಯೇ ರೆಸಿಡೆನ್ಸಿ ಪ್ರೋಗ್ರಾಮ್ ಮೂಲಕ ಕೆಲಸನು ಮಾಡೋಕೆ ಪ್ಲಾನ್ ಮಾಡಿಕೊಂಡು ಜೇವನ್ ವೀಸಾಗೆ ಅಪ್ಲೈ ಮಾಡ್ತಿದ್ರು ಆದರೆ ಅವರ ಅರ್ಜಿ ರಿಜೆಕ್ಟ್ ಆಯಿತು ಕನಸುಗಳೆಲ್ಲ ಒಂದೇ ಸಲಕ್ಕೆ ಮೊಸುಕಾಗಿ ಹೋಯಿತು ಇನ್ನು ಯಾವತ್ತಿಗೂ ನನಗೆ ಅಮೆರಿಕಕ್ಕೆ ಹೋಗೋಕೆ ಆಗಲ್ಲ ಅನ್ನೋ ಭಾವನೆಯಲ್ಲಿ ಓವರ್ಡೋಸ್ ನಿದ್ರೆ ಮಾತ್ರೆ ನುಗಿ ಶಾಶ್ವತವಾಗಿ ಕಣ್ಣುಮುಚ್ಚಿದ್ರು ವೀಸಾ ರಿಜೆಕ್ಟ್ ಆಯ್ತು ಅನ್ನೋ ಒಂದೇ ಒಂದು ಕಾರಣಕ್ಕೆ ಇಂತಹ ಕ್ರಮ ಕೈಗೊಂಡಿದ್ದು ಯಾಕೆ ಅಂದಹಾಗೆ ಒಮ್ಮೆ ವೀಸಾ ರಿಜೆಕ್ಟ್ ಆದರೆ ಇಡೀ ಲೈಫ್ ಟೈಮ್ ನಲ್ಲೇ ಯುಎಸ್ ಪ್ರಯಾಣ ಮಾಡೋ ದಾರಿ ಮುಚ್ಚಿದಂತೆ ಅಲ್ಲ ಅಷ್ಟಕ್ಕೂ ಜೆಒನ್ ವೀಸಾ ಯಾರಿಗೆ ಸಿಗುತ್ತೆ ಎಷ್ಟು ಸಮಯ ಅವಕಾಶ ಇರುತ್ತೆ ಸಾಮಾನ್ಯವಾಗಿ ಈ ವೀಸಾ ಅರ್ಜಿ ರಿಜೆಕ್ಟ್ ಆಗೋಕೆ ಏನು ಕಾರಣ ಇದೆಲ್ಲದರ ಬಗ್ಗೆ ವಿವರ ಇಲ್ಲಿದೆ ಏನಿದು ಯುಎಸ್ ನ ಜೇ ಒನ್ ವೀಸಾ ಈ ವೀಸಾಗೆ ಏನೆಲ್ಲ ಅರ್ಹತೆ ಬೇಕು ಅಮೆರಿಕಕ್ಕೆ ಹೋಗಿ ಅಲ್ಲಿ ಉನ್ನತ ವ್ಯಾಸಂಗ ತರಬೇತಿ ಇಂಟರ್ನ್ಶಿಪ್ ಅಥವಾ ರಿಸರ್ಚ್ ಮಾಡಬೇಕು.

ಹಾಗೆ ಕೆಲಸ ಮಾಡೋಕು ಅವಕಾಶ ಸಿಗಬೇಕಂದ್ರೆ ಜೆಒನ್ ವೀಸಾ ನಿಮಗೆ ಸೂಕ್ತ ಆಯ್ಕೆ ಅಮೆರಿಕದ ವೀಸಾಗಳಲ್ಲಿ ಜೆಒನ್ ವೀಸಾ ತುಂಬಾ ವಿಶಿಷ್ಟವಾದದ್ದು ಇದು ಕೇವಲ ಓದೋಕೆ ಮಾತ್ರ ಅಲ್ಲ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯಕ್ಕಾಗಿರುವ ವೀಸಾ ಯಾರೆಲ್ಲ ಇದಕ್ಕೆ ಅರ್ಜಿ ಹಾಕಬಹುದು ಇದಕ್ಕೆ ಬೇಕಾದ ಪ್ರಮುಖ ದಾಖಲೆಗಳೇನು ಮತ್ತು ಮುಖ್ಯವಾಗಿ ಭಾರತೀಯರು ಅದರಲ್ಲೂ ನಮ್ಮ ಡಾಕ್ಟರ್ಗಳು ಅರ್ಜಿ ಹಾಕುವಾಗ ವೀಸಾ ಯಾಕೆ ರಿಜೆಕ್ಟ್ ಆಗುತ್ತೆ ಅದನ್ನ ತಡೆಯೋದು ಹೇಗೆ ಅನ್ನೋದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ಮೊದಲಿಗೆ ಜೆಒನ್ ವೀಸಾ ಅಂದ್ರೆ ಏನು ಅಂತ ಸರಳವಾಗಿ ಅರ್ಥ ಮಾಡಿಕೊಳ್ಳು ಜೆಒನ್ ವೀಸಾ ಅಮೆರಿಕದ ಎಕ್ಸ್ಚೇಂಜ್ ವಿಸಿಟರ್ ವೀಸಾ ಅಂದ್ರೆ ನೀವು ಅಮೆರಿಕಕ್ಕೆ ತಾತ್ಕಾಲಿಕವಾಗಿ ಹೋಗಿ ಅಲ್ಲಿನ ಅನುಮೋದಿತ ಪ್ರೋಗ್ರಾಮ್ಗಳಲ್ಲಿ ಭಾಗವಹಿಸಲು ನೀಡುವ ಅನುಮತಿ ಇದು ಇಮಿಗ್ರೇಷನ್ ವೀಸಾ ಅಲ್ಲ ಅಂದ್ರೆ ನೀವು ಅಮೆರಿಕದಲ್ಲಿ ಕಾಯಮಾಗಿ ನಿಲಿಸಲು ಅಥವಾ ಗ್ರೀನ್ ಕಾರ್ಡ್ ಪಡೆಯಲು ಈ ವೀಸಾ ಬಳಸುವಂತಿಲ್ಲ. ನಿಮ್ಮ ಪ್ರೋಗ್ರಾಮ್ ಮುಗಿದ ಮೇಲೆ ತಕ್ಷಣ ನೀವು ದೇಶಕ್ಕೆ ವಾಪಸ್ ಬರಬೇಕು. ಅದೇ ಈ ವೀಸಾದ ಮುಖ್ಯ ನಿಯಮ. ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಅನುಮೋದಿಸಿದ ಕಾರ್ಯಕ್ರಮಗಳ ಮೂಲಕ ಜ್ಞಾನ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಈ ವೀಸಾ ಬಳಕೆಯಾಗ್ತಿದೆ ಆದರೆ ಯಾರೆಲ್ಲ ಈ ವೀಸಾಗೆ ಅರ್ಹರು ಅನ್ನೋದನ್ನ ಮುಖ್ಯವಾದ ಪ್ರಶ್ನೆ ಜೇವನ್ ವೀಸಾದಲ್ಲಿ ಹಲವು ಕೆಟಗರಿಗಳಿವೆ ಪ್ರತಿಯೊಂದಕ್ಕೂ ಅದರದ್ದೆ ಆದ ನಿಯಮಗಳಿರುತ್ತೆ ಅವುಗಳಲ್ಲಿ ಪ್ರಮುಖ ವರ್ಗಗಳು ಉನ್ನತ ವ್ಯಾಸಂಗ ಅಥವಾ ಇಂಟರ್ನ್ಶಿಪ್ ಮಾಡುವವರು ಮೆಡಿಕಲ್ ರೆಸಿಡೆನ್ಸಿ ಅಥವಾ ಫೆಲೋಶಿಪ್ ಮಾಡಲು ಹೋಗುವ ಡಾಕ್ಟರ್ಗಳು ಸಂಶೋಧನೆ ಅಥವಾ ಪಾಠ ಮಾಡಲು ಹೋಗುವವರು ವೃತ್ತಿಪರ ತರಬೇತಿ ಪಡೆಯುವವರು ಬೇಸಿಗೆ ಶಿಬಿರಗಳಲ್ಲಿ ಕೆಲಸ ಮಾಡುವವರು ಅಥವಾ ಮಕ್ಕಳ ಆರೈಕೆ ಮಾಡುವವರು.

ಈ ವೀಸದಲ್ಲಿ ಹೋಗಬಹುದು ಜೆಒನ್ ವೀಸಾ ಪಡೆಯಲು ನೀವು ಬೇಸಿಕ್ ಅರ್ಹತೆಗಳಇರಬೇಕು ಮುಖ್ಯವಾಗಿ ನಿಮಗೆ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತವಿರಬೇಕು ನೀವು ಆಯ್ಕೆ ಮಾಡಿಕೊಂಡಿರುವ ಕೆಟಗರಿಗೆ ತಕ್ಕಂತೆ ವಿದ್ಯಹರತೆ ಅಥವಾ ಅನುಭವ ಇರಬೇಕು ಅಮೆರಿಕದಲ್ಲಿ ಇರುವಷ್ಟು ದಿನ ನಿಮ್ಮ ಖರ್ಚು ವೆಚ್ಚಗಳನ್ನ ನಿಭಾಯಿಸಲು ನಿಮ್ಮ ಬಳಿ ಅಥವಾ ನಿಮ್ಮ ಸ್ಪಾನ್ಸರ್ ಬಳಿ ಹಣವಿದೆ ಎಂದು ಸಾಬಿತು ಪಡಿಸಬೇಕು ಹಾಗೆ ಜೇವನ್ ನಿಯಮದ ಪ್ರಕಾರ ನಿಗದಿತ ಕವರೇಜ್ ಇರುವ ಹೆಲ್ತ್ ಇನ್ಸೂರೆನ್ಸ್ ಕಡ್ಡಾಯ ನಿಮ್ಮ ನಿಗದಿತ ಪ್ರೋಗ್ರಾಮ್ ಮುಗಿದಮೇಲೆ ಖಂಡಿತ ವಾಪಸ್ ಭಾರತಕ್ಕೆ ಬರುತ್ತೇನೆ ಅನ್ನೋದನ್ನ ಕಾನ್ಸುಲೇಟ್ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು ಅದಕ್ಕೆ ಸೂಕ್ತ ಸಾಕ್ಷ್ಯವನ್ನ ಒದಗಿಸಬೇಕಾಗುತ್ತದೆ ದಾಖಲೆ ಸರಿ ಇದ್ರು ವೀಸಾ ರಿಸಲ್ಟ್ ಸಂದರ್ಶನದಲ್ಲಿ ಸುಳ್ಳು ಹೇಳಲೇಬೇಡಿ ಇನ್ನು ವೀಸಾ ಇಂಟರ್ವ್ಯೂಗೆ ಹೋಗುವದಕ್ಕೂ ಮುಂಚೆ ಒಂದಷ್ಟು ದಾಖಲೆಗಳನ್ನ ರೆಡಿ ಮಾಡಿಟ್ಕೊಂಡಿರುತ್ತೆ ವ್ಯಾಲಿಡಿಟಿ ಇರುವ ಪಾಸ್ಪೋರ್ಟ್ ಹಾಗೂ ಫಾರಂ ಡಿಎಸ್ 2019 ಇದನ್ನ ಸರ್ಟಿಫಿಕೇಟ್ ಆಫ್ಎಲಿಜಿಬಿಲಿಟಿ ಅಂತಾರೆ ಇದು ನಿಮ್ಮ ಸ್ಪಾನ್ಸರ್ ನಿಮಗೆ ಕಳಿಸಿಕೊಡುವ ಅತ್ಯಂತ ಪ್ರಮುಖ ಡಾಕ್ಯುಮೆಂಟ್ ಇದು ಇಲ್ಲದೆ ವೀಸಾ ಸಿಗೋದೇ ಇಲ್ಲಎಸ್ 160 ಆನ್ಲೈನ್ ವೀಸಾ ಅರ್ಜಿಯ ರಷೀದಿ ಸೆವಿಸ್ಗೆ ನೀವು ಕಟ್ಟಿರುವ ಫೀಸ್ ರಶೀದಿ ಬ್ಯಾಂಕ್ ಸ್ಟೇಟ್ಮೆಂಟ್ ಸ್ಕಾಲರ್ಶಿಪ್ ಲೆಟರ್ ಅಥವಾ ಕೆಲಸಕ್ಕೆ ಸಂಬಂಧಿಸಿದಂತೆ ಲೆಟರ್ ಇರಬೇಕು ನಿಮಗೆ ಮತ್ತು ನಿಮ್ಮ ಜೊತೆ ಬರುವ ಡಿಪೆಂಡೆಂಟ್ಸ್ಗೆ ಸರಿಯಾದ ಇನ್ಸೂರೆನ್ಸ್ ಪಾಲಿಸಿ ಇರಬೇಕು.

ನೀವು ಭಾರತಕ್ಕೆ ವಾಪಸ್ ಬರ್ತೀರಾ ಅನ್ನೋದಕ್ಕೆ ಸಾಕ್ಷಿಯಾಗಿ ಆಸ್ತಿಪತ್ರ ಭಾರತದಲ್ಲಿರುವ ಉದ್ಯೋಗದ ಆಫರ್ ಕುಟುಂಬದ ವಿವರ ಸಲ್ಲಿಸಬೇಕಾಗುತ್ತೆ ಎಲ್ಲ ದಾಖಲೆ ಸರಿ ಇದ್ರೂ ಕೆಲವೊಮ್ಮೆ ವೀಸಾ ರಿಜೆಕ್ಟ್ ಆಗುತ್ತೆ ಯಾಕೆ ವೀಸಾ ರಿಜೆಕ್ಟ್ ಆಗುತ್ತೆ ಅನ್ನೋದರ ಬಗ್ಗೆ ಒಂದಿಷ್ಟು ಕಾರಣಗಳು ಇಲ್ಲಿವೆ ಮೊದಲನೆದು ವೀಸಾಗೆ ಅರ್ಜಿ ಹಾಕಿರೋರು ಅಮೆರಿಕಕ್ಕೆ ಹೋದರೆ ಅಲ್ಲಿಯೇ ಸೆಟಲ್ ಆಗಿರುತ್ತಾರೆ ಮತ್ತೆ ವಾಪಸ್ ಬರಲ್ಲ ಅಂತ ಡೌಟ್ ಬಂದರೆ ವೀಸಾ ಆಫೀಸರ್ ಅರ್ಜಿಯನ್ನ ರಿಜೆಕ್ಟ್ ಮಾಡ್ತಾರೆ ನಿಮಗೆ ಭಾರತದಲ್ಲಿ ಆಸ್ತಿ ಇಲ್ಲದಿದ್ದರೆ ಕುಟುಂಬದ ನಂಟು ಇಲ್ಲದಿದ್ದರೆ ಅಥವಾ ಇಲ್ಲಿ ಕೆಲಸ ಇಲ್ಲದಿದ್ದರೆ ಈ ಸಮಸ್ಯೆ ಎದುರಾಗಬಹುದು ಅಮೆರಿಕದಲ್ಲಿ ಬದುಕಲು ಬೇಕಾದಷ್ಟು ಹಣ ನಿಮ್ಮ ಖಾತೆಯಲ್ಲಿ ಇಲ್ಲದಿದ್ದರೆ ಡಾಕ್ಟರ್ ಡಾಕ್ಮೆಂಟ್ ನಲ್ಲಿ ನಕಲಿ ಅಂತ ಅನುಮಾನ ಬಂದರೆ ವೀಸಾ ಸಿಗಲ್ಲ ಡಿಎಸ್ 2019 ಫಾರ್ಮ್ ಅಲ್ಲಿ ತಪ್ಪುಗಳಿದ್ದರೆ ಅಥವಾ ನೀವು ಸ್ಪಾನ್ಸರ್ ನಿಯಮಗಳನ್ನ ಪಾಲಿಸದಿದ್ದರೆ ರಿಜೆಕ್ಟ್ ಆಗುತ್ತೆಡಿಎಸ್ 160 ಫಾರ್ಮ್ ನಲ್ಲಿ ತಪ್ಪು ಮಾಹಿತಿ ನೀಡುವುದು ದಿನಾಂಕ ತಪ್ಪಾಗಿರುವುದು ಅಥವಾ ಇಂಟರ್ವ್ಯೂನಲ್ಲಿ ಸುಳ್ಳು ಹೇಳುವುದು ನಿಮ್ಮನ್ನ ಇಕ್ಕಟ್ಟಿಗೆ ಸಿಲುಕಿಸಬಹುದು ಈಗ ನಮ್ಮ ಭಾರತೀಯ ಡಾಕ್ಟರ್ ವಿಷಯಕ್ಕೆ ಬರೋಣ ಅಮೆರಿಕದಲ್ಲಿ ರೆಸಿಡೆನ್ಸಿ ಅಥವಾ ಫೆಲೋಶಿಪ್ ಗಾಗಿ ಹೋಗುವ ವೈದ್ಯರಿಗೆ ಜೆಒನ್ ವೀಸಾ ತುಂಬಾ ಮುಖ್ಯ ಆದರೆ ಇಲ್ಲಿ ಕೆಲವೊಂದು ನಿರ್ದಿಷ್ಟ ಕಾರಣಗಳಿಗೆ ವೀಸಾ ರಿಜೆಕ್ಟ್ ಆಗುತ್ತೆ ವೀಸಾ ಆಫೀಸರ್ಗಳಿಗೆ ಗೊತ್ತಿದೆ ಅಮೆರಿಕದಲ್ಲಿ ಭಾರತ ಸೇರಿದಂತೆ ವಿದೇಶಿ ವೈದ್ಯರಿಗೆ ಡಿಮ್ಯಾಂಡ್ ಇದೆ ಹಾಗೆ ಅದಕ್ಕೆ ತಕ್ಕ ಸಂಬಳವು ಇದೆ ಅಂತ ಹಾಗಾಗಿ ನೀವು ಟ್ರೈನಿಂಗ್ ಮುಗಿಸಿ ವಾಪಸ್ ಭಾರತಕ್ಕೆ ಬಂದು ಸೇವೆ ಸಲ್ಲಿಸತೀರಾ ಅಂತ ನಂಬೋದು ಅವರಿಗೆ ಕಷ್ಟ ಆಗಬಹುದು ನಾನು ಅಲ್ಲೇ ಸೆಟಲ್ ಆಗ್ತ್ತೇನೆ ಅಲ್ಲೇ ಹಾಸ್ಪಿಟಲ್ನಲ್ಲಿ ಕೆಲಸ ಸೇರುತ್ತೇನೆ ಸ್ವಂತ ಕ್ಲಿನಿಕ್ ಓಪನ್ ಮಾಡ್ತೇನೆ ಇಲ್ಲವೇ.

ಭಾರತದಲ್ಲಿ ನಿಮ್ಮ ಫ್ಯೂಚರ್ ಪ್ಲಾನ್ ಬಗ್ಗೆ ಸರಿಯಾಗಿ ಹೇಳದಿದ್ರೆ ವೀಸಾ ಸಿಗೋದು ಕಷ್ಟ ಹೈದರಾಬಾದ್ನಲ್ಲಿ ವೀಸ ಸಿಗಲಿಲ್ಲ ಅಂತ ಸಾವಿಗಿಡಾದ ವೈದ್ಯಯು ಇದೇ ತಪ್ಪನ್ನ ಮಾಡಿರುವ ಸಾಧ್ಯತೆ ಯಾಕೆಂದ್ರೆ ಅವರಿಗೆ ಯುಎಸ್ ನಲ್ಲಿ ಕ್ಲಿನಿಕ್ ಓಪನ್ ಮಾಡೋ ಪ್ಲಾನ್ ಇತ್ತು ಅನ್ನೋದು ಕೆಲವು ವರದಿಗಳಿಂದ ಗೊತ್ತಾಗಿದೆ ಇನ್ನು ಜೆಒನ್ ವೀಸಾದಲ್ಲಿ ಯುಎಸ್ ಗೆ ಹೋಗಿ ಅಲ್ಲಿ ಹೈಯರ್ ಎಜುಕೇಶನ್ ಜೊತೆಗೆ ರೆಸಿಡೆನ್ಸಿ ಕೆಲಸನು ಮಾಡುವಾಗ ನಿಮಗೆ ಸ್ಟೇ ಸ್ಟೇ ಫಂಡ್ ಸಿಗುತ್ತದೆ ಆದರೆ ನಿಮ್ಮ ಜೊತೆ ಸಂಗಾತಿ ಮಕ್ಕಳು ಜೆ2 ವೀಸಾದಲ್ಲಿ ಬರೋದಾದರೆ ಆ ಸಂಬಳ ಇಡೀ ಕುಟುಂಬಕ್ಕೆ ಸಾಕಾಗುತ್ತಾ ಅನ್ನೋ ಪ್ರಶ್ನೆ ಬರುತ್ತೆ. ಅದಕ್ಕೆ ಬೇಕಾದ ಹೆಚ್ಚುವರಿ ಸೇವಿಂಗ್ಸ್ ತೋರಿಸಬೇಕಾಗುತ್ತೆ. ಒಟ್ಟನಲ್ಲಿ ಯುಎಸ್ ನ ವೀಸಾಗೆ ಅರ್ಜಿ ಹಾಕುವವರು ತನ್ನ ಪ್ರೋಗ್ರಾಮ್ ಮುಗಿಯುತ್ತಿದ್ದಂತೆ ಭಾರತಕ್ಕೆ ವಾಪಸ್ ಬರ್ತೀನಿ ಅನ್ನೋದನ್ನ ನೂರಕ್ಕೆ ನೂರರಷ್ಟು ಖಚಿತವಾಗಿ ತಿಳಿಸಬೇಕು. ಹಾಗೆ ಇಂಟರ್ವ್ಯೂನಲ್ಲಿ ಭಯಪಡದೆ ಸತ್ಯವನ್ನೇ ಮಾತನಾಡಬೇಕು ಅಕಸ್ಮಾತ್ ಹಿಂದೆಯೂ ಹಲವು ಬಾರಿ ನಿಮ್ಮ ವೀಸಾ ರಿಜೆಕ್ಟ್ ಆಗಿದ್ದರೆ ಇಮ್ಮಿಗ್ರೇಷನ್ ಎಕ್ಸ್ಪರ್ಟ್ ಅಥವಾ ವಕೀಲರ ಸಲಹೆ ಪಡೆಯೋದು ಒಳ್ಳೆಯದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments