ಈಗ ಹೆಚ್ಚು ಕಡಿಮೆ ಎಲ್ಲರ ಫೋನ್ನಲ್ಲೂಫೋನ್ಪೇ, Google ಅಂತ ಯುಪಿಐ ಆಪ್ ಇದ್ದೆ ಇರುತ್ತೆ. ನಿಮ್ಮ ಫೋನ್ ನಲ್ಲಿರುವ ಈ ಆಪ್ ಕೇವಲ ಹಣ ಕಳುಹಿಸಲು ಅಥವಾ ಅಂಗಡಿಯಲ್ಲಿ ಬಿಲ್ ಪಾವತಿಸಲು ಮಾತ್ರ ಸೀಮಿತ ಅಲ್ಲ. ಇನ್ಮುಂದೆ ನಿಮ್ಮ ಇದೇ ಯುಪಿಐ ಆಪ್ ಹಲವು ರೀತಿಯಲ್ಲಿ ನಿಮಗೆ ಸಹಾಯ ಮಾಡಲಿದೆ. ಹೌದು ನೀವು ಕೇಳಿದ್ದು ನಿಜ ಯುಪಿಐ ಬಳಕೆದಾರರಿಗೆ ಈಗ ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಭರ್ಜರಿ ಸಿಹಿ ಸುದ್ದಿಗಳಿದೆ. ಆ ಧಮಾಕಾಗಳು ಯಾವುವು ಅಂತ ವಿವರವಾಗಿ ನೋಡೋಣ. ಅತಿ ದೊಡ್ಡ ಧಮಾಕ ಪಿನ್ ಇಲ್ಲದೆ ಯುಪಿಐ ಪಾವತಿ ನಮ್ಮ ಲಿಸ್ಟ್ನಲ್ಲಿರುವ ಮೊದಲನೇ ಮತ್ತು ಅತಿ ದೊಡ್ಡ ಧಮಾಕ ಏನಂದ್ರೆ ಇನ್ಮುಂದೆ ಯುಪಿಐ ಪೇಮೆಂಟ್ ಮಾಡೋದಕ್ಕೆ ನಾಲ್ಕು ಅಥವಾ ಆರು ಅಂಕಿಯ ಪಿನ್ ಹಾಕುವ ಅಗತ್ಯವೇ ಇಲ್ಲ ಹೌದುಎನ್ಪಿಸಿಐ ಇದೀಗ ಬಯೋಮೆಟ್ರಿಕ್ ವ್ಯವಸ್ಥೆಯನ್ನ ಜಾರಿಗೆ ತಂದಿದೆ ಅಂದ್ರೆ ಇನ್ಮುಂದೆ ನಿಮ್ಮ ಬೆರಳಚ್ಚು ಅಂದ್ರೆ ಫಿಂಗರ್ ಪ್ರಿಂಟ್ ಅಥವಾ ನಿಮ್ಮ ಮುಖವನ್ನ ಬಳಸಿ ಅಂದ್ರೆ ಫೇಸ್ ಆಥೆಂಟಿಫಿಕೇಶನ್ ಬಳಸಿ ನೀವು ಅತ್ಯಂತ ಸುರಕ್ಷಿತ ಚಿತವಾಗಿ ಮತ್ತು ವೇಗವಾಗಿ ಹಣ ಪಾವತಿ ಮಾಡಬಹುದು ಪಿನ್ ಮರೆತು ಹೋಗುವ ಅಥವಾ ಯಾರಾದರೂ ಕದಿಯುವ ಟೆನ್ಶನ್ ಇನ್ನಿರೋದಿಲ್ಲ ಆರ್ಬಿಐ ಕೂಡ ಪಿನ್ ಸಂಬಂಧಿತ ವಂಚನೆಗಳನ್ನ ತಡೆಯಲು ಈ ಕ್ರಮವನ್ನ ಪ್ರೋತ್ಸಾಹಿಸತ್ತಾ ಇದೆ.
ಹೊಸ ಬಳಕೆದಾರರಿಗೆ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರಿಗೆ ಇದು ಬಹಳ ಅನುಕೂಲಕರ ಯಾಕಂದ್ರೆ ಡೆಬಿಟ್ ಕಾರ್ಡ್ ವಿವರಗಳಿಲ್ಲದೆಯೂ ಆಧಾರ್ ಆಧಾರಿತ ಫೇಸ್ ಅಥೆಂಟಿಫಿಕೇಶನ್ ಮೂಲಕ ಅವರು ಸುಲಭವಾಗಿ ಯುಪಿಐ ಗೆ ನೋಂದಣಿ ಮಾಡಿಕೊಳ್ಳಬಹುದು ಇದು ಕಡ್ಡಾಯ ಏನಲ್ಲ ನಿಮಗೆ ಇಷ್ಟ ಇದ್ದರೆ ಮಾತ್ರ ಈ ಬಯೋಮೆಟ್ರಿಕ್ ಸೌಲಭ್ಯವನ್ನ ಆರಿಸಿಕೊಳ್ಳಬಹುದು ಎರಡನೇ ಧಮಾಕ ಇನ್ಸ್ಟಂಟ್ ಗೋಲ್ಡ್ ಲೋನ್ ನಮ್ಮ ಎರಡನೇ ಧಮಾಕ ಇನ್ಸ್ಟೆಂಟ್ ಗೋಲ್ಡ್ ಲೋನ್ ಚಿನ್ನದ ಮೇಲೆ ಸಾಲ ಪಡೆಯುವುದು ಈಗ ರಾಕೆಟ್ ವೇಗದಲ್ಲಿ ನಡೆಯಲಿದೆ. ಹಿಂದೆಲ್ಲ ಚಿನ್ನದ ಮೇಲೆ ಸಾಲ ಬೇಕು ಅಂದ್ರೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಹೋಗಿ ನಿಮ್ಮ ಚಿನ್ನವನ್ನು ಕೊಟ್ಟು ದಾಖಲೆಗಳನ್ನ ಪರಿಶೀಲಿಸಿ ಹಣ ನಿಮ್ಮ ಕೈ ಸೇರೋದಕ್ಕೆ ಗಂಟೆಗಟ್ಟಲೆ ಅಥವಾ ಕೆಲವೊಮ್ಮೆ ದಿನಗಟ್ಟಲೆ ಕಾಯಬೇಕಿತ್ತು ಆದರೆ ಈಗ ಯುಪಿಐ ಇರೋದ್ರಿಂದ ಇವೆಲ್ಲ ಪ್ರಕ್ರಿಯೆ ಬಹುತೇಕ ಆಟೋಮ್ಯಾಟಿಕ್ ಆಗಿದೆ ನೀವು ಮಾಡಬೇಕಾಗಿದ್ದು ಇಷ್ಟೇ ನಿಮ್ಮ ಚಿನ್ನವನ್ನು ಹತ್ತಿರದ ಬ್ಯಾಂಕ್ ಶಾಖೆಗೆ ತೆಗೆದುಕೊಂಡು ಹೋಗಿ ಅದರ ಮೌಲ್ಯಮಾಪನ ಮಾಡಿಸಬೇಕು ನಂತರ ಬ್ಯಾಂಕ್ ನವರು ನಿಮ್ಮ ಯುಪಿಐ ಐಡಿ ಮೇಲೆನೆ ಒಂದು ಲೋನ್ ಅಕೌಂಟ್ ತೆರಿತಾರೆ. ಸಾಲಕ್ಕೆ ಅನುಮೋದನೆ ಸಿಕ್ಕಿದ ತಕ್ಷಣ ಕೆಲವೇ ನಿಮಿಷಗಳಲ್ಲಿ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಯುಪಿಐ ಮೂಲಕ ಜಮೆಯಾಗುತ್ತೆ. ಇದರ ಅತಿ ದೊಡ್ಡ ಪ್ರಯೋಜನವೇ ವೇಗ. ಜೊತೆಗೆ ಪ್ರತಿಯೊಂದು ಹಂತದಲ್ಲೂ ನಿಮಗೆ ಯುಪಿಐ ಮೂಲಕ ಸಂದೇಶ ಬರೋದರಿಂದ ಸಂಪೂರ್ಣ ಪಾರದರ್ಶಕತೆ ಇರುತ್ತೆ.
ಗ್ರಾಮೀಣ ಭಾಗದ ಜನರಿಗೆ ಇದು ಬಹಳ ಅನುಕೂಲಕರ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಖಾಸಗಿ ಬ್ಯಾಂಕಗಳು ಹಣಕಾಸು ಸಂಸ್ಥೆಗಳು ನಿಮ್ಮ ಮನೆ ಬಾಗಿಲಿಗೆ ಬಂದು ಸಾಲವು ನೀಡಬಹುದು. ಆದರೆ ಒಂದು ವಿಷಯ ನೆನಪಿಡಿ ಸಾಲ ಪಡೆಯುವ ಮುನ್ನ ಬಡ್ಡಿ ದರ ನಿಮ್ಮ ಚಿನ್ನದ ಮೌಲ್ಯಕ್ಕೆ ಎಷ್ಟು ಸಾಲ ಸಿಗುತ್ತೆ ಅಂದ್ರೆ ಲೋನ್ ಟು ವ್ಯಾಲ್ಯೂ ರೇಶಿಯೋ ಎಷ್ಟು ಮತ್ತು ಮರುಪಾವತಿ ದಿನಾಂಕಗಳನ್ನ ಸರಿಯಾಗಿ ಪರಿಶೀಲಿಸಿಕೊಳ್ಳಿ. ಮೂರನೇ ಧಮಾಕ ಯುಪಿಐ ಪಾವತಿಗಳಿಗೆ ಇಎಂಐ ಸೌಲಭ್ಯ. ಇನ್ನು ನಮ್ಮ ಮೂರನೇ ಧಮಾಕ ಇದು ಶಾಪಿಂಗ್ ಪ್ರಿಯರಿಗೆ ಖುಷಿ ಕೊಡುತ್ತೆ. ಇನ್ಮುಂದೆ ಯುಪಿಐ ಪಾವತಿಗಳನ್ನ ಇಎಂಐ ಆಗಿ ಪರಿವರ್ತಿಸಬಹುದು. ಹೇಗೆ ನಾವು ಕ್ರೆಡಿಟ್ ಕಾರ್ಡ್ ಬಳಸಿ ದೊಡ್ಡ ಮೊತ್ತದ ಪಾವತಿಯನ್ನು ಸುಲಭ ಕಂತುಗಳಾಗಿ ಪರಿವರ್ತಿಸುತ್ತಿವೋ ಅದೇ ರೀತಿ ಶೀಘ್ರದಲ್ಲೇ ನೀವು ಅಂಗಡಿಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಸುವಾಗ ಪೇ ಇನ್ ಇಎಂಐ ಅಂದ್ರೆ ಇಎಂಐ ನಲ್ಲಿ ಪಾವತಿಸಿ ಅನ್ನೋ ಆಯ್ಕೆ ಸಿಗಲಿದೆ ಎನ್ಪಿಸಿಐ ಅಂದ್ರೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಯುಪಿಐ ಮೂಲಕ ಕ್ರೆಡಿಟ್ ಸೇವೆಗಳನ್ನ ವಿಸ್ತರಿಸಲು ಈ ಹೊಸ ಸೌಲಭ್ಯವನ್ನ ತರ್ತಾ ಇದೆ ಇದರಿಂದ ಕ್ರೆಡಿಟ್ ಕಾರ್ಡ್ ಇಲ್ಲದ ಲಕ್ಷಾಂತರ ಜನರಿಗೂ ಸುಲಭವಾಗಿ ಈಎಂಐ ಸೌಲಭ್ಯ ಸಿಗಲಿದೆ ಈಗಾಗಲೇ ಕಿವಿ ಎಂಬ ಫಿನ್ಟೆಕ್ ಕಂಪನಿ ಒಂದು ಹೆಜ್ಜೆ ಮುಂದೆ ಹೋಗಿ ಯುಪಿಐ ಇಎಂಐ ಮೇಲೆ ಇಂಟರೆಸ್ಟ್ ಬ್ಯಾಕ್ ಆಫರ್ ನೀಡ್ತಾ ಇದೆ ಅಂದ್ರೆ ನೀವು ಕಟ್ಟುವ ಬಡ್ಡಿಯ ಹಣ ನಿಮಗೆ ಕ್ಯಾಶ್ ಬ್ಯಾಕ್ ರೂಪದಲ್ಲಿ ವಾಪಸ್ ಸಿಗುತ್ತೆ.
ಉದಾಹರಣೆಗೆ ಮೂರು ತಿಂಗಳ ಇಎಂಐ ಆಯ್ಕೆ ಮಾಡಿದ್ರೆ 100% ಬಡ್ಡಿ ವಾಪಸ್ ಇದು ನಿಜಕ್ಕೂ ಅದ್ಭುತ ಅಲ್ವಾ ನಾಲ್ಕನೇ ಧಮಾಕ ಫಾಸ್ಟ್ ಟ್ಯಾಗ್ ಇಲ್ಲದಿದ್ರೂ ಟೋಲ್ನಲ್ಲಿ ರಿಯಾಯಿತಿ ಕೊನೆಯದಾಗಿ ನಾಲ್ಕನೇ ಧಮಾಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಇದರಿಂದ ಅನುಕೂಲ ಆಗಲಿದೆ. ನಿಮಗೆ ಗೊತ್ತಿರೋ ಹಾಗೆ ನಿಮ್ಮ ವಾಹನಕ್ಕೆ ಫಾಸ್ಟ್ ಟ್ಯಾಗ್ ಇಲ್ಲದೆ ಇದ್ದರೆ ಅಥವಾ ಅದು ಕೆಲಸ ಮಾಡದಿದ್ರೆ ಟೋಲ್ ಪ್ಲಾಜಾದಲ್ಲಿ ನೀವು ದುಪ್ಪಟ್ಟು ಶುಲ್ಕ ಅಂದ್ರೆ ಎರಡು ಪಟ್ಟು ಹಣವನ್ನ ನಗದಿನಲ್ಲಿ ಪಾವತಿಸಬೇಕು. ಆದರೆ ನವೆಂಬರ್ 15 ರಿಂದ ಒಂದು ಹೊಸ ನಿಯಮ ಜಾರಿಗೆ ಬರಲಿದೆ. ಒಂದುವೇಳೆ ನಿಮ್ಮ ಬಳಿ ಫಾಸ್ಟ್ ಟ್ಯಾಗ್ ಇಲ್ಲದಿದ್ರೆ ನೀವು ನಗದು ಕೊಡುವ ಬದಲು ಯುಪಿಐ ಮೂಲಕ ಹಣ ಪಾವತಿಸಬಹುದು ಆಗ ನಿಮಗೆ ಕೇವಲ ಒಂದು ಕಾಲು ಪಟ್ಟು ಶುಲ್ಕವನ್ನ ವಿಧಿಸಲಾಗುತ್ತೆ. ಅಂದ್ರೆ ಯುಪಿಐ ಬಳಸಿದ್ರೆ ದುಪ್ಪಟ್ಟು ದಂಡದ ಬದಲು ಕಡಿಮೆ ದಂಡ ಬೀಳುತ್ತೆ.
ಡಿಜಿಟಲ್ ಪಾವತಿಗಳನ್ನು ಪ್ರೋತ್ಸಾಹಿಸಲು ಸರ್ಕಾರ ಈ ಮಹತ್ವದ ಕ್ರಮ ತೆಗೆದುಕೊಂಡಿದೆ. ಹಾಗಾದರೆ ನೋಡಿದ್ರಲ್ಲ ಯುಪಿಐ ಕೇವಲ ಹಣ ವರ್ಗಾವಣೆ ಮಾಡುವ ವ್ಯವಸ್ಥೆಯಾಗಿ ಉಳಿದಿಲ್ಲ. ಇದು ಬಯೋಮೆಟ್ರಿಕ್ ಸುರಕ್ಷತೆ ಗೋಲ್ಡ್ ಲೋನ್ ಇಎಂಐ ಮತ್ತು ಟೋಲ್ ಪಾವತಿಯಂತ ಸೇವೆಗಳೊಂದಿಗೆ ಒಂದು ಸಂಪೂರ್ಣ ಹಣಕಾಸು ವ್ಯವಸ್ಥೆಯಾಗಿ ಬೆಳಿತಿದೆ. ಈ ಸೌಲಭ್ಯಗಳು ನಮ್ಮ ದೈನಂದಿನ ಆರ್ಥಿಕ ವ್ಯವಹಾರಗಳನ್ನು ಇನ್ನಷ್ಟು ಸುಲಭ ಮತ್ತು ಸುರಕ್ಷಿತವಾಗಿಸಲಿದೆ.


