ನಿಮ್ಮ ಹತ್ತಿರ ಇನ್ನು ಹಳೆ ಕಲದ ಪುಸ್ತಕದಂತಹ ಆರ್ಸಿ ಇದೆಯಾ ಅಥವಾ ಪೇಪರ್ನಲ್ಲಿ ಫ್ರಿಂಟ್ ಆಗಿರುವ ಲೈಸೆನ್ಸ್ ಇಟ್ಕೊಂಡು ಓಡಾಡುತಿದ್ದೀರಾ ಮಳೆ ಬಂದರೆ ನೆನೆಯುತ್ತೆ ಜೇಬಲ್ಲಿ ಇಟ್ಟಕೊಂಡರೆ ಹರಿಯುತ್ತೆ ಅನ್ನೋ ಟೆನ್ಶನ್ ಇನ್ನ ಮುಂದೆ ಬೇಡ ಯಾಕೆಂದ್ರೆ ಕರ್ನಾಟಕ ಸಾರಿಗೆ ಇಲಾಖೆ ಈಗ ಹೈಟೆಕ್ ಆಗಿದೆ ಡಿಸೆಂಬರ್ ಒಂರಿಂದ ರಾಜ್ಯಾದ್ಯಂತ ಹೊಸ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತಂದಿದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಒನ್ ನೇಷನ್ ಒನ್ ಕಾರ್ಡ್ ಅಂದರೆ ಒಂದು ದೇಶ ಒಂದು ಕಾರ್ಡ್ ಯೋಜನೆ ಅಡಿ ಕರ್ನಾಟಕದಲ್ಲಿ ಇನ್ಮುಂದೆ ವಾಹನ ನೊಂದಣಿ ಪ್ರಮಾಣಪತ್ರ ಅಂದರೆ ಆರ್ ಸಿ ಮತ್ತು ಡ್ರೈವಿಂಗ್ ಲೈಸೆನ್ಸ್ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಸಿಗಲಿ ದೆ ಇಟಲಿಯಿಂದ ತರಿಸಲಾದ ಅತ್ಯಾಧುನಿಕ ಮೆಷೀನ್ಗಳು ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ವಾಟರ್ ಪ್ರೂಫ್ ಬಾಡಿ ಹೀಗೆಹತ ಹಲವು ಫೀಚರ್ ಗಳಿರುವ ಈ ಕಾರ್ಡ್ ಭಾರಿ ಕುತುಹಲಕ್ಕೆ ಕಾರಣವಾಗಿದೆ ಅದನ್ನ ಇಲ್ಲಿ ನೋಡೋಣ ಇದರ ಜೊತೆ ಅರ್ಜಿ ಸಲ್ಲಿಸುವುದು ಹೇಗೆ ಹಳೆಯ ಆರ್ಸಿಡಿಎಲ್ ಹೊಂದಿರುವವರು ಕೂಡ ಈ ಕಾರ್ಡ್ ಪಡಿಬಹುದಾ.
ಕರ್ನಾಟಕದ ಸಾರಿಗೆ ಇಲಾಖೆ ಹೊಸ ಸ್ಮಾರ್ಟ್ ಕಾರ್ಡನ್ನ ಪರಿಚಯಿಸಿದೆ ಆರ್ಸಿ ಮತ್ತು ಡಿಯರ್ ಸ್ಮಾರ್ಟ್ ಕಾರ್ಡನ್ನ ಮುಂದಿನ ಐದು ವರ್ಷಗಳ ಅವಧಿಗೆ ಜಾರಿಗೆ ಬರುವಂತೆ ಪ್ರಾರಂಭಿಸಲಾಗಿದೆ ಮೊದಲಿಗೆ ಈ ಕಾರ್ಡ್ಗಳನ್ನ ಪ್ರಿಂಟ್ ಮಾಡುತ್ತಿರೋ ಟೆಕ್ನಾಲಜಿ ಬಗ್ಗೆ ತಿಳ್ಕೊಳ್ಳೋಣ ಕರ್ನಾಟಕ ಸಾರಿಗೆ ಇಲಾಖೆಯು ಈ ಸ್ಮಾರ್ಟ್ ಕಾರ್ಡ್ಗಳನ್ನ ಮುದ್ರಿಸಲು ಇಟಲಿಯಿಂದ ಎರಡು ಬಾರಿ ಸಾಮರ್ಥ್ಯದಎಸ್ 7000 ಪ್ರಿಂಟಿಂಗ್ ಮಿಷಿನ್ಗಳನ್ನ ಆಮದು ದು ಮಾಡಿಕೊಂಡಿದೆ. ಇದು ಸಾಮಾನ್ಯ ಮಷೀನ್ ಅಲ್ಲ. ಪ್ರತಿಯೊಂದು ಮಷೀನ್ ಗಂಟೆಗೆ ಬರೋಬ್ಬರಿ 500 ರಿಂದ 600 ಕಾರ್ಡ್ಗಳನ್ನ ಪ್ರಿಂಟ್ ಮಾಡುವ ಕೆಪ್ಯಾಸಿಟಿ ಹೊಂದಿದೆ. ಅಂದರೆ ದಿನಕ್ಕೆ ಒಟ್ಟು 16000 ಕಾರ್ಡ್ಗಳನ್ನ ಮುದ್ರಿಸಬಹುದು. ಇಷ್ಟು ದೊಡ್ಡ ಮಟ್ಟದ ಹೈಟೆಕ್ ಕಾರ್ಡ್ ಮುದ್ರಣ ಸಾಮರ್ಥ್ಯ ಹೊಂದಿರುವ ಭಾರತದ ಮೊದಲ ಸಾರಿಗೆ ಸೌಲಭ್ಯ ಎಂಬ ಹೆಗ್ಗಳಿಗೆ ನಮ್ಮ ಕರ್ನಾಟಕ ಪಾತ್ರವಾಗಿದೆ. ಸದ್ಯ ಬೆಂಗಳೂರಿನ ಶಾಂತಿನಗರದ ಕೇಂದ್ರ ಕಚೇರಿಯಿಂದಲೇ ಈ ಕಾರ್ಡ್ಗಳ ವಿತರಣೆ ಮತ್ತು ನಿರ್ವಹಣೆ ನಡೆಯಲಿದೆ. ಕ್ಯೂಆರ್ ಕೋಡ್ ಮೈಕ್ರೋ ಚಿಪ್ ಸ್ಪೆಷಾಲಿಟಿ.
ಪೊಲೀಸರ ಮುಂದೆ ಇನ್ನು ತಡಕಾಡಬೇಕಿಲ್ಲ. ಈ ಹೊಸ ಸ್ಮಾರ್ಟ್ ಕಾರ್ಡ್ಗಳ ಅತಿ ದೊಡ್ಡ ಸ್ಪೆಷಾಲಿಟಿ ಅಂದ್ರೆ ಇದರಲ್ಲಿರುವ ಕ್ಯೂಆರ್ ಕೋಡ್ ಮತ್ತು ಎಂಬೆಡೆಡ್ ಮೈಕ್ರೋ ಚಿಪ್ ಹೌದು ಈ ಕಾರ್ಡ್ಗಳ ಮೇಲೆ ಒಂದು ಕ್ಯೂಆರ್ ಕೋಡ್ ಇರುತ್ತೆ ಜೊತೆಗೆ 64 ಸಾಮರ್ಥ್ಯದ ಮೈಕ್ರೋ ಚಿಪ್ ಅಳವಡಿಸಲಾಗುತ್ತೆ ರಸ್ತೆಯಲ್ಲಿ ಪೊಲೀಸರು ಅಡ್ಡ ಹಾಕಿದ್ದಾಗ ಅಥವಾ ಆರ್ಟಿಓ ಅಧಿಕಾರಿಗಳು ತಪಾಸಣೆ ಮಾಡುವಾಗ ಗಂಟೆಗಟ್ಟಲೆ ಪೇಪರ್ ಹುಡುಕೋದು ಬೇಕಿಲ್ಲ ಅಧಿಕಾರಿಗಳು ತಮ್ಮ ಡಿವೈಸ್ ಮೂಲಕ ಆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ನಿಮ್ಮ ವಾಹನದ ಡೀಟೇಲ್ಸ್ ಮಾಲಿಕರ ಹೆಸರು ವಿಳಾಸ ಬ್ಲಡ್ ಗ್ರೂಪ್ ಎಲ್ಲವೂ ಸ್ಕ್ರೀನ್ ಮೇಲೆ ಬರುತ್ತೆ ಇದು ಡಿಜಿಟಲ್ ವೆರಿಫಿಕೇಶನ್ಗೆ ತುಂಬಾನೇ ಹೆಲ್ಪ್ ಆಗಲಿದೆ ಅಷ್ಟೇ ಅಲ್ಲ ಈ ಕಾರ್ಡ್ಗಳನ್ನ ಪಾಲಿಕಾರ್ಬೋನೇಟ್ ಎಂಬ ಗಟ್ಟಿ ಮುಟ್ಟಾದ ಮೆಟೀರಿಯಲ್ ನಿಂದ ಮಾಡಲಾಗಿದೆ ಇದು ವಾಟರ್ ರೆಸಿಸ್ಟೆಂಟ್ ಅಂದ್ರೆ ನೀರು ಬಿದ್ದರು ಹಾಳಾಗಲ್ಲ ಬೇಗ ಮುರಿಯಲ್ಲ ಮತ್ತು ಲೇಸರ್ ಇಂಜಿನಿಯರಿಂಗ್ ಬಳಸಿರುದರಿಂದ ಅಕ್ಷರಗಳು ಅಳಿಸಿ ಹೋಗಲ್ಲ ಹಳೆ ಪೇಪರ್ ಆರ್ಸಿ ಬುಕ್ ಹೊಲಿಸಿದರೆ ಇದು ಬಾಳಿಕೆ ಬರೋದರಲ್ಲಿ ನಂಬರ್ ಒನ್ ಹಳಬರಿಗೂ ಸಿಗುತ್ತಾ ಹೊಸ ಕಾರ್ಡ್ ಸ್ಮಾರ್ಟ್ ಕಾರ್ಡ್ಗೆ 200 ರೂಪಾಯಿ ಈಗ ಎಲ್ಲರ ಮನಸ್ಸಿನಲ್ಲಿರು ಪ್ರಶ್ನೆ ಅಂದ್ರೆ ಅದು ನಮ್ಮ ಹತ್ತರ ಈಗಾಗಲೇ ಹಳೆ ಆರ್ಸಿ ಇದೆ ನಾವೇನು ಮಾಡಬೇಕು ಅಂತ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಕ್ಲಿಯರ್ ಆಗಿ ಹೇಳಿದ್ದಾರೆ ಯಾರು ಡಿಸೆಂಬರ್ 1 2025ರ ನಂತರ ಹೊಸ ವಾಹನ ತೆಗೆದುಕೊಳ್ತಾರೋ ಅವರ ಹೊಸ ಲೈಸೆನ್ಸ್ಗೆ ಅಪ್ಲೈ ಮಾಡ್ತಾರೋ ಅವರಿಗೆ ಆಟೋಮೆಟಿಕ್ ಆಗಿ ಈ ಸ್ಮಾರ್ಟ್ ಕಾರ್ಡ್ ಸಿಗುತ್ತೆ.
ಈಗಾಗಲೇ ಹಳೆಯ ಡಿಎಲ್ ಅಥವಾ ಆರ್ಸಿ ಹೊಂದಿರುವವರು ಕಡ್ಡಾಯವಾಗಿ ಬದಲಿಸಲೇಬೇಕು ಅಂತೇನಿಲ್ಲ ಹಳೆ ಡಾಕ್ಯುಮೆಂಟ್ಗಳು ಕೂಡ ಉರ್ಜಿತದಲ್ಲಿ ಇರುತ್ತವೆ ಆದರೆ ನಿಮಗೂ ಈ ಹೈಟೆಕ್ ಸ್ಮಾರ್ಟ್ ಕಾರ್ಡ್ ಬೇಕು ಅಂದ್ರೆ ನೀವು ಅಪ್ಗ್ರೇಡ್ ಮಾಡಿಸಬಹುದು ಇದಕ್ಕೆ ಸರ್ಕಾರ ನಿಗದಿ ಮಾಡಿರುವ ಫೀಸ್ ಕೇವಲ 200 ರೂಪಾಯಿ ಮಾತ್ರ ಈ 200 ರೂಪಾಯಿಯಲ್ಲಿ 135 ರೂಪಾಯಿ ಸರ್ಕಾರದ ಪೊಕ್ಕಸಕ್ಕೆ ಹೋದರೆ 64 46 ರೂಪಾಯಿ ಸೇವೆ ನೀಡುವ ಸಂಸ್ಥೆಗೆ ಹೋಗುತ್ತೆ ನೀವು ಸ್ಮಾರ್ಟ್ ಕಾರ್ಡ್ ಪಡೆಯುದು ಹೇಗೆ ಡಿಸೆಂಬರ್ 15 ರಿಂದ ಸ್ಮಾರ್ಟ್ ಕಾರ್ಡ್ ವಿತರಣೆ ಈ ಹೊಸ ಸ್ಮಾರ್ಟ್ ಕಾರ್ಡ್ ಪಡೆಯಲು ಪ್ರೋಸೆಸ್ ತುಂಬಾನೇ ಸಿಂಪಲ್ ಆಗಿದೆ ಅದೇನಂದ್ರೆ ಮೊದಲನೆದಾಗಿ ನೀವು ನಿಮ್ಮ ಹತ್ತಿರದ ಆರ್ಟಿಓ ಕಚೇರಿಗೆ ಭೇಟಿ ನೀಡಬೇಕು ಎರಡನೆದಾಗಿ ಅಲ್ಲಿ ಸ್ಮಾರ್ಟ್ ಕಾರ್ಡ್ ಅಪ್ಲಿಕೇಶನ್ ಫಾರ್ಮ್ ಅನ್ನ ಭರ್ತಿ ಮಾಡಿಕೊಡಿ ಮೂರನೆದಾಗಿ ಅಗತ್ಯದಾ ದಾಖಲೆಗಳ ಅಂದರೆ ವಾಹನದ ಮಾಲಿಕತ್ವದ ಪತ್ರ ಆಧಾರ್ ಕಾರ್ಡ್ ಹಳೆ ಆರ್ಸಿ ಫೋಟೋ ಇತ್ಯಾದಿಗಳನ್ನ ಸಲ್ಲಿಸಬೇಕು ಕೊನೆದಾಗಿ ನಿಗದಿತ 200 ರೂಪಾಯಿ ಶುಲ್ಕವನ್ನ ಕೌಂಟರ್ನಲ್ಲೋ ಅಥವಾ ಆನ್ಲೈನ್ ಮೂಲಕವೂ ಪಾವತಿ ಮಾಡಬಹುದು ಒಮ್ಮೆ ನಿಮ್ಮ ಅರ್ಜಿ ಅಪ್ರೂವ್ ಆದಮೇಲೆ ಬೆಂಗಳೂರಿನಂತಹ ಸಿಟಿಗಳಲ್ಲಿ ಕೇವಲ 48 ಗಂಟೆಯೊಳಗೆ ಕಾರ್ಡ್ ರೆಡಿ ಆಗುತ್ತೆ ನಂತರ ಅಂಚೆ ಮೂಲಕವೋ ಅಥವಾ ನೇರವಾಗಿ ಕಚೇರಿಯಲ್ಲೂ ಕಾರ್ಡ್ ನಿಮಗೆ ಸಿಗುತ್ತೆ ಡಿಸೆಂಬರ್ 15 2025ರಿಂದ ಡಿಎಲ್ ಸ್ಮಾರ್ಟ್ ಕಾರ್ಡ್ಗಳ ವಿತರಣೆ ಅಧಿಕೃತವಾಗಿ ಆರಂಭವಾಗಲಿದೆ.
ಇದನ್ನ ಡುಪ್ಲಿಕೇಟ್ ಮಾಡೋಕೆ ಚಾನ್ಸ ಇಲ್ಲ ಸುರಕ್ಷತೆಯಲ್ಲಿ ರಾಜಿಯಾಗದ ಸಾರಿಗೆ ಇಲಾಖೆ ಈ ಸ್ಮಾರ್ಟ್ ಕಾರ್ಡ್ ಸಿಸ್ಟಮ್ ತಂದಿರೋ ಮುಖ್ಯ ಉದ್ದೇಶವೇ ಸುರಕ್ಷತೆ ಹಳೆ ಆರ್ಸಿ ಬುಕ್ಗಳನ್ನ ಸುಲಭವಾಗಿ ತಿದ್ದಬಹುದು ಅಥವಾ ಡ್ಯೂಪ್ಲಿಕೇಟ್ ಮಾಡಬಹುದಿತ್ತು ಆದರೆ ಈ ಹೊಸ ಸ್ಮಾರ್ಟ್ ಕಾರ್ಡ್ಗಳಲ್ಲಿ ಹೈ ಸೆಕ್ಯೂರಿಟಿ ಫೀಚರ್ಸ್ ಇರೋದರಿಂದ ಇದನ್ನ ಟ್ಯಾಂಪರ್ ಮಾಡೋದು ಅಥವಾ ಡ್ಯೂಪ್ಲಿಕೇಟ್ ಮಾಡೋದು ಅಸಾಧ್ಯ. ಇದರಿಂದ ಕಳ್ಳತನದ ವಾಹನಗಳ ಪತ್ತೆ ಮತ್ತು ಡ್ಯೂಪ್ಲಿಕೇಟ್ ಅಥವಾ ಫೇಕ್ ಲೈಸೆನ್ಸ್ ಗಳ ಹಾವಳಿಗೆ ಬ್ರೇಕ್ ಬೀಳಲಿದೆ. ಇಡೀ ದೇಶದಾದ್ಯಂತ ಒಂದೇ ಮಾದರಿಯ ಕಾರ್ಡ್ ಇರೋದ್ರಿಂದ ನೀವು ಬೇರೆ ರಾಜ್ಯಕ್ಕೆ ಹೋದ್ರು ಪೊಲೀಸರಿಗೆ ತಪಾಸಣೆ ಮಾಡೋಕೆ ಈಸಿ ಆಗುತ್ತೆ. ಒಟ್ಟಿನಲ್ಲಿ ಕರ್ನಾಟಕ ಸಾರಿಗೆ ಇಲಾಖೆಯ ಈನಡಿ ನಿಜಕ್ಕೂ ಒಂದು ದೊಡ್ಡ ಕೆಲಸನೆ ಅಂತಾನೆ ಹೇಳಬಹುದು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಸಾರಿಗೆ ದಾಖಲತಿ ವ್ಯವಸ್ಥೆಯಲ್ಲಿ ಇದೊಂದು ಕ್ರಾಂತಿಕಾರಿ ಬದಲಾವಣೆ ಅನುಕೂಲ ಭದ್ರತೆ ಮತ್ತು ಬಾಳಿಕೆ ಈ ಮೂರನ್ನ ಒಂದೇ ಕಾರ್ಡಿನಲ್ಲಿ ತರಲಾಗಿದೆ ಬೃಹತ್ ಪ್ರಿಂಟಿಂಗ್ ಕೆಪ್ಯಾಸಿಟಿ ಮತ್ತು ಸ್ಮಾರ್ಟ್ ಟೆಕ್ನಾಲಜಿ ಮೂಲಕ ಕರ್ನಾಟಕವು ಈಗ ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ ಇನ್ನು ಮುಂದೆ ನಿಮ್ಮ ಆರ್ಸಿ ನಿಮ್ಮ ಡಿಎಲ್ ಹರಿಯುವ ಚಿಂತೆಯೇ ಇಲ್ಲ ಮಳೆ ಬಂದ್ರೆ ನೆನೆಯು ಭಯನೇ ಇಲ್ಲ ಜೇಬಲ್ಲಿ ಒಂದು ಸ್ಮಾರ್ಟ್ ಕಾರ್ಡ್ ಇದ್ದರೆ ಸಾಕು ನಿಮ್ಮ ಗಾಡಿ ಡಾಕ್ಯುಮೆಂಟ್ಸ್ ಸೇಫ್ ಅಂಡ್ ಸೆಕ್ಯೂರ್ ಅಷ್ಟೇ ಮತ್ತಯಾಕೆ ತಡ ಸ್ಮಾರ್ಟ್ ಕಾರ್ಡ್ಗೆ ಅಪ್ಲೈ ಮಾಡಿ ನೀವು ಕೂಡ ಪಡೆದುಕೊಳ್ಳಿ.


