ನೀವು ನಾಳೆಯೋ ಅಥವಾ ಇವತ್ತೋ ಎಲ್ಲಾದರೂ ತುರತಾಗಿ ಹೋಗಬೇಕಂತ ಇಂಡಿಗೋ ಫ್ಲೈಟ್ ಅನ್ನ ಬುಕ್ ಮಾಡಿದ್ದೀರಾ ಹಾಗಾದರೆ ಒಂದು ನಿಮಿಷ ನಿಲ್ಲಿ ಈ ಸುದ್ದಿಯನ್ನ ಕೇಳಿ ಭಾರತದ ಆಕಾಶದಲ್ಲಿ ಅತಿ ದೊಡ್ಡ ಸಾಮ್ರಾಜ್ಯವನ್ನೇ ಸೃಷ್ಟಿಸಿರುವ ಇಂಡಿಗೋ ಸಂಸ್ಥೆಗೆ ಗ್ರಹಣ ಹಿಡಿದಿದೆ ಕಳೆದ ಕೆಲವು ವರ್ಷಗಳಲ್ಲಿ ಅತ್ಯಂತ ಗಂಭೀರವಾದ ಕಾರ್ಯಾಚರಣೆಯ ಬಿಕ್ಕಟ್ಟನ್ನ ಎದುರಿಸುತ್ತಾ ಇದೆ ಹೌದು ಒಂದೇ ದಿನದಲ್ಲಿ ಶೇಕಡ 65ರಷ್ಟು ಇಂಡಿಗೋ ವಿಮಾನಗಳು ಸಮಯಕ್ಕೆ ಸರಿಯಾಗಿ ಹಾರಾಟವನ್ನ ನಡೆಸಿಲ್ಲ ಅಂದ್ರೆ ನೀವು ನಂಬುತೀರಾ ನಂಬಲೇಬೇಕು ಬರಬ್ಬರಿ 200ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ ನೂರಾರು ವಿಮಾನಗಳು ಗಂಟೆಗಟ್ಟಲೆ ಲೇಟಾಗಿ ಬಂದಿವೆ ವಿಮಾನ ನಿಲ್ತಾಣಗಳಲ್ಲಿ ಸಾವಿರಾರು ಪ್ರಯಾಣಕರ ಪರದಾಟ ಹಸಿವು ನಿದ್ರೆ ಇಲ್ಲದೆ ಒದ್ದಾಡಿದ್ದಾರೆ ಪೈಲಟ್ಗಳು ಇದ್ದಾರೆ ಆದರೆ ವಿಮಾನ ಹಾರಿಸುವ ಹಾಗಿಲ್ಲ ವಿಮಾನಗಳು ಇವೆ ಆದರೆ ಸಿಬ್ಬಂದಿಯೇ ಇಲ್ಲ ಇದಕ್ಕೆಲ್ಲ ಕಾರಣ ಜಾರಿಗೆ ಬಂದ ಆ ಒಂದು ಹೊಸ ನಿಯಮ ಅಷ್ಟಕ್ಕೂ ನವೆಂಬರ್ ಒಂದರಂದು ಜಾರಿಗೆ ಬಂದ ಆ ಹೊಸ ನಿಯಮ ಇಂಡಿಗೋಗೆ ಕಂಟಕವಾಯ್ತಾ ಏನದು ಹೊಸ ನಿಯಮ ವಿಮಾನಗಳು ರದ್ದಾಗಿದ್ದು ಯಾಕೆ ಇಂಡಿಗೋ ಏರ್ಲೈನ್ಸ್ಗೆ ಆಗಿದ್ದೇನು.
ಕಳೆದ ಮಂಗಳವಾರ ಮತ್ತು ಬುಧವಾರ ಭಾರತದ ವಿಮಾನಯಾನ ಇತಿಹಾಸ ದಲ್ಲಿ ಒಂದು ಕರಾಳ ದಿನವಾಗಿತ್ತು ಅಂದ್ರೆ ತಪ್ಪಾಗಲಾರದು ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಇತೀಚಿನ ವರ್ಷಗಳಲ್ಲೇ ಕಂಡರಿಯದಂತಹ ಬೃಹತ್ ಕಾರ್ಯಾಚರಣೆಯ ವೈಫಲ್ಯವನ್ನ ಎದುರಿಸಿದೆ ಕೇವಲ 48 ಗಂಟೆಗಳಲ್ಲಿ 200ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ ನೂರಾರು ವಿಮಾನಗಳು ಡಿಲೇ ಆಗಿವೆ ಪರಿಣಾಮ ದೇಶದ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಕರು ಅತಂತ್ರರಾಗಿದ್ದಾರೆ ಚೆಕ್ ಇನ್ಕೌಂಟರ್ಗಳ ಮುಂದೆ ಕಿಲೋಮೀಟರ್ ಗಟ್ಟಲೆ ಉದ್ದದ ಸಾಲುಗಳು ಕನೆಕ್ಟಿಂಗ್ ಫ್ಲೈಟ್ ಮಿಸ್ ಮಾಡಿಕೊಂಡವರ ಗೋಳು ಬಿಸಿನೆಸ್ ಮೀಟಿಂಗ್ಗಳಿಗೆ ಹೋಗಲಾದವರ ಸಂಕಟ ಒಟ್ಟನಲ್ಲಿ ಏರ್ಪೋರ್ಟ್ಗಳು ಗೊಂದಲದ ಗೂಡಾಗಿದ್ವು ಇಂಡಿಗೋದ ವೆಬ್ಸೈಟ್ ಪ್ರಕಾರ ಅವರು ದಿನಕ್ಕೆ 2200 ಕ್ಕೂ ಹೆಚ್ಚು ವಿಮಾನಗಳನ್ನ ಆಪರೇಟ್ ಮಾಡ್ತಾರೆ ಆದರೆ ಮಂಗಳವಾರದ ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಇಂಡಿಗೋದ ಆನ್ ಟೈಮ್ ಪರ್ಫಾರ್ಮೆನ್ಸ್ ಕೇವಲ ಶೇಕಡ 35ಕ್ಕೆ ಕುಸಿದಿತ್ತು. ಅಂದ್ರೆ ಆ ಒಂದು ದಿನ ಹಾರಾಟ ನಡೆಸಿದ ಸುಮಾರು 1400 ವಿಮಾನಗಳು ತಡವಾಗಿ ಸಂಚರಿಸಿವೆ ಅಂದರ್ಥ ಡಿಜಿಸಿಎ ವರದಿಯ ಪ್ರಕಾರ ನವೆಂಬರ್ ತಿಂಗಳೊಂದರಲ್ಲೇ ಒಟ್ಟು 1232 ವಿಮಾನಗಳು ರದ್ದಾಗಿವೆ ಹಾಗಾದರೆ ಇಷ್ಟು ದೊಡ್ಡ ಮಟ್ಟದ ಕುಸಿತಕ್ಕೆ ಕಾರಣವೇನು ಕೇವಲ ಮಂಜುಕವಿದ ವಾತಾವರಣವೇ ಸಾಧ್ಯವೇ ಇಲ್ಲ ಇದರ ಹಿಂದೆ ನಾಲ್ಕು ಪ್ರಮುಖ ಮತ್ತು ಗಂಭೀರ ಕಾರಣಗಳಿವೆ ಅವುಗಳನ್ನ ನೋಡ್ತಾ ಹೋಗೋಣ ಅವ್ಯವಸ್ಥೆಗೆ ಕಾರಣಗಳೇನು
ಈ ಅವಾಂತರಕ್ಕೆ ಮೇಲ್ನೋಟಕ್ಕೆ ಕಾಣ ಕಾರಣಗಳಿಗಿಂತ ಒಳನೋಟದ ಕಾರಣಗಳು ಬಹಳ ಸಂಕೀರ್ಣವಾಗಿವೆ ಪ್ರಮುಖವಾಗಿ ನಾಲ್ಕು ಕಾರಣಗಳು ಇಂಡಿಗೋ ಸಂಸ್ಥೆಯನ್ನ ಇಕ್ಕಟ್ಟಿಗೆ ಸಿಲುಕಿಸಿವೆ ಒಂದೊಂದಾಗಿ ನೋಡ್ತಾ ಹೋಗೋಣ ಪೈಲಟ್ ಮತ್ತು ಸಿಬ್ಬಂದಿಯ ತೀವ್ರ ಕೊರತೆ ಇದು ಕೇಳಲು ವಿಚಿತ್ರ ಅನಿಸಬಹುದು ಅಷ್ಟೊಂದು ಪೈಲಟ್ಗಳನ್ನ ಹೊಂದಿರುವ ಸಂಸ್ಥೆಯಲ್ಲಿ ಕೊರತೆ ಹೇಗೆ ಬಂತು ಉತ್ತರ ಇರುವುದು ಹೊಸ ನಿಯಮಗಳಲ್ಲಿ ನವೆಂಬರ್ ಒಂದರಿಂದ ಪೈಲಟ್ಗಳ ಕೆಲಸದ ಅವಧಿಯ ಬಗ್ಗೆ ಹೊಸ ನಿಯಮಗಳು ಜಾರಿಗೆ ಬಂದಿವೆ ಈ ನಿಯಮಗಳಿಂದಾಗಿ ರೋಸ್ಟರ್ ನಲ್ಲಿ ಹೆಸರಿದ್ದಂತಹ ಪೈಲಟ್ ಳ ಕೂಡ ವಿಮಾನ ಹಾರಿಸಲು ಕಾನೂನುಬದ್ಧವಾಗಿ ಅನಹರರಾದರು ವಿಮಾನ ರೆಡಿ ಇದೆ ಪ್ರಯಾಣಿಕರು ರೆಡಿ ಇದ್ದಾರೆ ಆದರೆ ಕಾಕ್ಪಿಟ್ನಲ್ಲಿ ಕೂರಲು ಪೈಲಟ್ಗೆ ಅನುಮತಿ ಇಲ್ಲ ಹೀಗಾಗಿ ಎಷ್ಟೋ ವಿಮಾನಗಳು ಟೇಕ್ ಆಫ್ ಆಗಲೇ ಇಲ್ಲ ಹೊಸ ರೋಸ್ಟರ್ ನಿಯಮಗಳು ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಶನ್ ಎಂಬ ಹೊಸ ನಿಯಮಾವಳಿಗಳು ಇಂಡಿಗೋ ಸಂಸ್ಥೆಯ ಲೆಕ್ಕಾಚಾರವನ್ನೇ ತೆಲೆಕೆಳಗಾಗಿಸಿವೆ ಈ ಬಗ್ಗೆ ನಾವು ಮುಂದಿನ ಭಾಗದಲ್ಲಿ ವಿವರವಾಗಿ ನೋಡೋಣ ಆದರೆ ಸರಳವಾಗಿ ಹೇಳಬೇಕಂದ್ರೆ ಇಂಡಿಗೋದ ಹಳೆಯ ಸಾಫ್ಟ್ವೇರ್ ಮತ್ತು ಪ್ಲಾನಿಂಗ್ ಈ ಹೊಸ ನಿಯಮಗಳಿಗೆ ಹೊಂದಿಕೊಳ್ಳಲು ವಿಫಲವಾಯಿತು ರಾತ್ರಿಯ ಪಾಳೆಯ ವಿಮಾನಗಳು ಮತ್ತು ವಾರದ ರಜೆಗಳ ಚಾರ್ಟ್ನ್ನ ಮರುಹೊಂದಿಸುವಲ್ಲಿ ಸಂಸ್ಥೆ ಎಡವಿತು ಅಂತ ಹೇಳಲಾಗುತಿದೆ.
ಟೆಕ್ನಿಕಲ್ ಗ್ಲಿಚ್ ಅಥವಾ ತಾಂತ್ರಿಕ ದೋಷ ಕಾಯದ ಮೇಲೆ ಬರೆ ಎಳೆದಂತೆ ಮಂಗಳವಾರದಂದು ದೆಹಲಿ ಮತ್ತು ಪುಣೆ ಸೇರಿದಂತೆ ಪ್ರಮುಖ ವಿಮಾನ ನಿಲ್ಧಾಣಗಳಲ್ಲಿ ಚೆಕ್ ಮತ್ತು ಡಿಪಾರ್ಚರ್ ಕಂಟ್ರೋಲ್ ಸಿಸ್ಟಮಗಳು ಕೈಕೊಟ್ಟವು ಇದರಿಂದಾಗಿ ಬೋರ್ಡಿಂಗ್ ಪಾಸ್ ಕೊಡುವುದು ಲಗೇಜ್ ಚೆಕ್ ಮಾಡುವುದು ಎಲ್ಲವೂ ನಿಧಾನವಾಯಿತು ಒಂದು ವಿಮಾನ ತಡವಾದರೆ ಅದು ಸರಪಳಿಯಂತೆ ದಿನದ ಉಳಿದ ಎಲ್ಲಾ ವಿಮಾನಗಳ ಮೇಲು ಪರಿಣಾಮವನ್ನ ಬೀರತು ಚಳಿಗಾಲದ ದಟ್ಟಣೆ ಮತ್ತು ಮಂಜು ಈಗಾಗಲೇ ವ್ಯವಸ್ಥೆ ಹದಗಟ್ಟಿರುವಾಗ ಚಳಿಗಾಲದ ಮಂಜು ಮತ್ತು ಪೀಕ್ ಸೀಸನ್ನ ಪ್ರಯಾಣಕರ ದಟ್ಟಣೆ ಉರಿಯುವ ಬೆಂಕಿಗೆ ತುಪ್ಪವನ್ನು ಸುರಿಯಿತು ಮಂಜಿನಿಂದಾಗಿ ವಿಮಾನಗಳು ಲ್ಯಾಂಡ್ ಆಗಲು ತಡವಾದವು ಇದರಿಂದ ಕ್ರೂಗಳ ಕೆಲಸದ ಸಮಯ ಮುಗಿದು ಹೋಯಿತು ಮತ್ತೆ ಪೈಲಟ್ ಕೊರತೆ ಎದುರಾಯಿತು ಏನಿದು ಹೊಸ ನಿಯಮ ಈಗ ಎಲ್ಲರ ಬಾಯಲೂ ಕೇಳಿ ಬರುತ್ತಿರುವಂತಹ ಆ ಹೊಸ ರೂಲ್ಸ್ ಯಾವುದು ಗೊತ್ತಾ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪೈಲಟ್ಗಳ ಆಯಾಸವನ್ನ ಕಡಿಮೆ ಮಾಡಲು ಸುರಕ್ಷತೆಯನ್ನ ಹೆಚ್ಚಿಸಲು ತಂದಿರುವಂತಹ ಕಠಿಣ ನಿಯಮಗಳು ಇದರಲ್ಲಿರುವಂತಹ ಪ್ರಮುಖ ಬದಲಾವಣೆಗಳು ಇಲ್ಲಿವೆ ರಾತ್ರಿ ಲ್ಯಾಂಡಿಂಗ್ಗಳ ಮೇಲೆ ಮಿತಿ ಅಂದರೆ ಹಿಂದೆ ಒಬ್ಬ ಪೈಲಟ್ ರಾತ್ರಿವೇಳೆ ಆರು ಲ್ಯಾಂಡಿಂಗ್ಗಳನ್ನ ಮಾಡಬಹುದಿತ್ತು ಆದರೆ ಈಗ ಅದನ್ನ ಕೇವಲ ಎರಡಕ್ಕೆ ಎಳಿಸಲಾಗಿದೆ ಇದು ರಾತ್ರಿ ವೇಳೆ ಹೆಚ್ಚು ವಿಮಾನ ಓಡಿಸುವ ಇಂಡಿಗೋಗೆ ದೊಡ್ಡ ಪೆಟ್ಟು ನೀಡಿದೆ ಹೆಚ್ಚಿನ ವಿಶ್ರಾಂತಿ ಅಂದರೆ ಅವರು ಹೆಚ್ಚು ಸಮಯ ಮನೆಯಲ್ಲಿ ಇರಬೇಕು ಇನ್ನು ಕೆಲಸದ ಅವಧಿ ಕಡಿತ ಅಂದರೆ ಪೈಲಟ್ ಒಬ್ಬರು ದಿನಕ್ಕೆಎು ಗಂಟೆ ವಾರಕ್ಕೆ 35 ಗಂಟೆ ತಿಂಗಳಿಗೆ 125 ಗಂಟೆ ಮತ್ತು ವರ್ಷಕ್ಕೆ ಸಾವಿರ ಗಂಟೆ ಮಾತ್ರ ವಿಮಾನ ಹಾರಿಸಬಹುದು.
ವಿಶ್ರಾಂತಿ ನಿಯಮ ಕರ್ತವ್ಯ ಮುಗಿದ ನಂತರ ಪೈಲಟ್ಗಳು ತಾವು ಕೆಲಸ ಮಾಡಿದ ಅವಧಿಯ ಎರಡರಷ್ಟು ಸಮಯ ವಿಶ್ರಾಂತಿಯನ್ನ ಪಡೆಯಲೇಬೇಕು ಈ ನಿಯಮಗಳು ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಅತ್ಯುತ್ತಮ ಪೈಲಟ್ ನಿತ್ತೆಯ ಮುಂಪರಿನಲ್ಲಿ ಇರಬಾರದು ಎಂಬುದು ಇದರ ಮೂಲ ಉದ್ದೇಶ ಆದರೆ ಕಡಿಮೆ ಪೈಲಟ್ಗಳನ್ನ ಇಟ್ಟುಕೊಂಡು ಹೆಚ್ಚು ಲಾಭ ಮಾಡ್ತಾ ಇದ್ದಂತಹ ಏರ್ಲೈನ್ಸ್ ಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಒಂದೇ ವಿಮಾನವನ್ನ ಹಾರಿಸಲು ಈಗ ಹಿಂದೆಂದಿಗಿಂತಲೂ ಕೂಡ ಹೆಚ್ಚು ಪೈಲಟ್ಗಳು ಬೇಕಾಗಿದ್ದಾರೆ ಇಂಡಿಗೋಗೆ ಯಾಕೆ ಇಷ್ಟು ಸಮಸ್ಯೆ ಉಳಿದವರಿಗೆ ಇಲ್ಲವೇ ಇಲ್ಲಿ ಒಂದು ಪ್ರಶ್ನೆ ಮೂಡುವುದು ಸಹಜ ನಿಮಗೂ ಅಷ್ಟೇ ನನಗೂ ಅಷ್ಟೇ ಈ ನಿಯಮ ಏರ್ ಇಂಡಿಯಾ ವಿಸ್ತಾರ ಆಕಾಶ ಏರ್ಲೈನ್ಸ್ಗೂ ಅನ್ವಯಿಸುತ್ತೆ ಅಲ್ವಾ ಹಾಗಿದ್ರೆ ಇಂಡಿಗೋ ಮಾತ್ರ ಒದ್ದಾಡುತ್ತಿರೋದು ಯಾಕೆ ಇದಕ್ಕೆ ಕಾರಣ ಇಂಡಿಗೋದ ಬೃಹತ್ ಗಾತ್ರ ಮತ್ತು ಅವರ ಬಿಸಿನೆಸ್ ಮಾಡೆಲ್ ಅಸಲಿ ಕಾರಣ ಸ್ಕೇಲ್ ಮತ್ತು ಫ್ರಿಕ್ವೆನ್ಸಿ ಅಂದರೆ ಇಂಡಿಗೋ ಭಾರತದ ದೇಶೀಯ ವಿಮಾನಯಾನದ ಬಹುಪಾಲರನ್ನ ಆಕ್ರಮಿಸಿಕೊಂಡಿದೆ ದಿನಕ್ಕೆ 2200 ವಿಮಾನ ಅಂದ್ರೆ ತಮಾಷೆ ಅಲ್ಲ ಇಷ್ಟು ದೊಡ್ಡ ನೆಟ್ವರ್ಕ್ ಇರುವಾಗ ಸಣ್ಣ ಎಡವಟ್ಟು ಕೂಡ ಇಡೀ ದೇಶಾದಂತ ದೊಡ್ಡದಾಗಿ ಕಾಣುತ್ತೆ ಇನ್ನು ರಾತ್ರಿ ಸಾಮ್ರಾಜ್ಯ ಅಂದ್ರೆ ಏರ್ ಇಂಡಿಯಾ ಅಥವಾ ವಿಸ್ತಾರಗೆ ಹೋಲಿಸಿದರೆ ಇಂಡಿಗೋ ರಾತ್ರಿ ವೇಳೆ ಅತಿ ಹೆಚ್ಚು ವಿಮಾನಗಳನ್ನ ಆಪರೇಟ್ ಮಾಡುತ್ತೆ.
ಹೊಸ ನಿಯಮದ ಪ್ರಕಾರ ರಾತ್ರಿ ಲ್ಯಾಂಡಿಂಗ್ ಮಿತಿ ಎರಡಕ್ಕೆ ಹಿಡಿದಿದ್ದರಿಂದ ಇಂಡಿಗೋದ ರಾತ್ರಿ ಹಾರಾಟದ ಪ್ಲಾನ್ ಸಂಪೂರ್ಣ ಬದಲಾಗಿದೆ ಟೈಟ್ ಕ್ರೂ ಮಾಡೆಲ್ ಇಂಡಿಗೋ ತನ್ನ ಸಿಬ್ಬಂದಿಯನ್ನ ಮತ್ತು ವಿಮಾನಗಳನ್ನ ಬಿಡುವಿಲ್ಲದೆ ದುಡಿಸಿಕೊಳ್ಳುವುದರಲ್ಲಿ ಎತ್ತಿದ ಕೈ ಈಗ ಡ್ಯೂಟಿ ಸಮಯ ಕಡಿಮೆ ಆಗಿದ್ದರಿಂದ ಆ ಗ್ಯಾಪ್ ತುಂಬಲು ಅವರ ಬಳಿ ತಕ್ಷಣಕ್ಕೆ ಬದಲಿ ಪೈಲಟ್ಗಳು ಇಲ್ಲದಂತೆ ಆಗಿದೆ. ಫ್ಲೆಕ್ಸಿಬಿಲಿಟಿ ಇಲ್ಲ. ಅಂದ್ರೆ ಸಣ್ಣ ಪುಟ್ಟ ಏರ್ಲೈನ್ಸ್ ಗಳು ತಮ್ಮ ವೇಳಾಪಟ್ಟಿಯನ್ನ ಬೇಗ ಬದಲಾಯಿಸಿಕೊಳ್ಳಬಹುದು. ಆದರೆ ಇಂಡಿಗೋದಂತಹ ದೈತ್ಯ ಸಂಸ್ಥೆಗೆ ಸಾವಿರಾರು ಕನೆಕ್ಷನ್ಗಳನ್ನ ಒಂದೇ ರಾತ್ರಿಯಲ್ಲಿ ಬದಲಾಯಿಸುವುದು ಅಸಾಧ್ಯದ ಮಾತು. ಸತ್ಯದ ಪರಿಸ್ಥಿತಿ ಮತ್ತು ಪರಿಹಾರವೇನು? ಈಗಾಗಲೇ ಆಗಿದ್ದು ಆಗಿ ಹೋಗಿದೆ. ಪ್ರಯಾಣಿಕರು ಪಡಬಾರದ ಪಾಡುಪಟ್ಟಿದ್ದಾರೆ. ಆದರೆ ಮುಂದೇನು? ಇಂಡಿಗೋ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯನ್ನ ಯಾಚಿಸಿದೆ. ನಾವು ಪರಿಸ್ಥಿತಿಯನ್ನ ನಿಯಂತ್ರಿಸಲು ಹಗಲಿರಳು ಶ್ರಮಿಸ್ತಾ ಇದ್ದೇವೆ ನಮಗೆ 48 ಗಂಟೆಗಳ ಕಾಲಾವಕಾಶವನ್ನ ಕೊಡಿ ಅಂತ ಕೇಳಿಕೊಂಡಿದೆ. ಹೈ ಡೆನ್ಸಿಟಿ ರೂಟ್ಗಳಲ್ಲಿ ಸಿಬ್ಬಂದಿಯನ್ನ ಮರುಹಂಚಿಕೆ ಮಾಡಲಾಗ್ತಿದೆ. ರಾತ್ರಿ ವೇಳಾಪಟ್ಟಿಗಳನ್ನ ಬದಲಾಯಿಸಲಾಗ್ತಾ ಇದೆ. ಕೊನೆಯ ಗಡಿಗೆಯಲ್ಲಿ ರದ್ದು ಮಾಡುವ ಬದಲು ಮುಂಚಿತವಾಗಿಯೇ ಕೆಲವು ವಿಮಾನಗಳನ್ನ ರದ್ದು ಮಾಡಿ ಪ್ರಯಾಣಿಕರಿಗೆ ತಿಳಿಸಲಾಗ್ತಾ ಇದೆ. ಆದರೆ ತಜ್ಞರ ಪ್ರಕಾರ ಈ ಹೊಸ ರೋಸ್ಟರ್ಗೆ ಹೊಂದಿಕೊಳ್ಳಲು ಸಂಸ್ಥೆಗೆ ಇನ್ನು ಕೆಲವು ದಿನಗಳು ಅಥವಾ ವಾರಗಳೇ ಬೇಕಾಗಬಹುದು ಅಂತ ಹೇಳಿದ್ದಾರೆ. ಒಟ್ಟನಲ್ಲಿ ಆಕಾಶದಲ್ಲಿ ಹಾರುವಾಗ ಸುರಕ್ಷತೆ ಎಷ್ಟು ಮುಖ್ಯ ಎಂಬುದು ಸ್ಪಷ್ಟವೋ ಅಷ್ಟೇ ಭೂಮಿಯ ಮೇಲಿನ ಪ್ಲಾನಿಂಗ್ ಕೂಡ ಅಷ್ಟೇ ಮುಖ್ಯವಾಗುತ್ತೆ. ಸುರಕ್ಷಿತಗಾಗಿ ತಂದಂತಹ ಹೊಸ ನಿಯಮಗಳನ್ನ ಜಾರಿ ಮಾಡುವಲ್ಲಿ ಆದ ವಿಳಂಬ ಮತ್ತು ಪೂರ್ವ ಸಿದ್ಧತೆಯ ಕೊರತೆ ಇಂದು ಸಾವಿರಾರು ಜನರನ್ನ ಸಂಕಷ್ಟಕ್ಕೆ ನೂಕಿದೆ ಬೆಂಗಳೂರು ಸೇರಿ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಒದ್ದಾಟವನ್ನ ಮುಂದುವರಿಸಿದ್ದು ಆಕ್ರೋಶವನ್ನು ಕೂಡ ಹೊರಹಾಕಿದ್ದಾರೆ ಈಗಾಗಲೇ ಇಂಡಿಗೋ ಕ್ಷಮೆ ಯಾಚಿಸಿದೆ ಆದರೆ ಈಗ ಇಲ್ಲಿ ಎದ್ದಿರುವಂತಹ ಸಮಸ್ಯೆಯನ್ನ ಯಾವ ರೀತಿ ಮುಂದೆ ಸಾಲ್ವ್ ಮಾಡುತ್ತೆ ಅನ್ನೋದು ಕೂಡ ಇಲ್ಲಿ ಕುತುಹಲ ಅದಷ್ಟು ಬೇಗ ಬಿಕ್ಕಟ್ಟನ್ನ ಪರಿಹರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಎಲ್ಲಾ ಪ್ರಯಾಣಿಕರ ಆಶಯ.


