ಪ್ರತಿಯೊಂದು ಹೊಸ ತಂತ್ರಜ್ಞಾನ ಹೊಸ ಅನುಕೂಲ ಜನರಲ್ಲಿ ಹೊಸ ಅಸಹನೆಯನ್ನ ಹುಟ್ಟುಹಾಕುತ್ತದೆ ಎಲ್ಲರಿಗೂ ಜನ ಸ್ಟೂಡೆಂಟ್ಸ್ ನನ್ನ ಹತ್ರ ಬಂದಿದ್ರು ಅವರೆಲ್ಲರ ಮುಖದಲ್ಲಿ ಒಂದು ರೀತಿ ಟೆನ್ಶನ್ ಕಾಣಿಸ್ತಾ ಇತ್ತು ಮತ್ತು ಅದು ಸಹಜವು ಆಗಿತ್ತು ಯಾಕೆಂದರೆ ಅವರೆಲ್ಲರ ಪ್ರಶ್ನೆ ಇತ್ತೀಚಿಗೆ ಬಹು ಚರ್ಚಿತವಾಗ್ತಾ ಇರುವಂತಹ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಗ್ಗೆ ಆಗಿತ್ತು ಅವರೆಲ್ಲರದು ಒಂದೇ ಪ್ರಶ್ನೆ ಸರ್ ಈ ಎಐ ನಮ್ಮ ಉದ್ಯೋಗವನ್ನ ಕಸಿದುಕೊಳ್ಳುತ್ತಾ ಅಂತ ಈ ಪ್ರಶ್ನೆಗೆ ಉತ್ತರ ಒಂದೇ ಒಂದೇ ವಾಕ್ಯದಲ್ಲಿ ಹೇಳೋದು ಸಾಧ್ಯ ಇರಲಿಲ್ಲ ಯಾಕೆಂದರೆ ಈ ಪ್ರಶ್ನೆ ಇಂದು ನಿನ್ನೆಯದಲ್ಲ ವಿಜ್ಞಾನ ತಂತ್ರಜ್ಞಾನ ಬೆಳವಣಿಗೆ ಅಭಿವೃದ್ಧಿಯ ಪ್ರತಿ ಮೈಲುಗಲ್ಲು ತನ್ನೊಂದಿಗೆ ಕೆಲ ವರ್ಗದವರಿಗೆ ಲಾಭವನ್ನ ಕೆಲವು ವರ್ಗದವರಿಗೆ ನಷ್ಟವನ್ನ ತಂದುಕೊಡುತ್ತದೆ ಸ್ಟೀಮ್ ಇಂಜಿನಿನ ಅವಶ್ಯಕಾರವಾದ ದಾಗ ಅದನ್ನ ದೊಡ್ಡ ಹಡಗುಗಳಿಗೆ ಅಳವಡಿಸಲಾಯಿತು ಅದಕ್ಕೂ ಮುಂಚೆ ಒಂದೊಂದು ಹಡಗಿನಲ್ಲಿ ನೂರಾರು ಜನ ಕಾರ್ಮಿಕರು ಒಳಗಡೆ ಕೂತ್ಕೊಂಡು ಅದಕ್ಕೆ ಹುಟ್ಟು ಹಾಕ್ತಾ ಇದ್ರು ಅವರೆಲ್ಲರೂ ಗುಲಾಮರಾಗಿದ್ರು ಆ ಮಾತು ಬೇರೆ ಆದರೆ ಈ ಬೆಳವಣಿಗೆಯಿಂದ ಸಾವಿರಾರು ಜನ ಉದ್ಯೋಗ ಕಳೆದುಕೊಂಡರು.
ಲಕ್ಷಾಂತರ ಜನ ತಂತ್ರಜ್ಞಾನದ ಇನ್ನೊಂದು ಮಜಲಿನಲ್ಲಿ ಉದ್ಯೋಗವನ್ನ ಪಡೆದುಕೊಂಡರು ಇದೇ ತರದ ಬೆಳವಣಿಗೆಯಲ್ಲಿ ಸಿಎನ್ಸಿ ಮಷೀನ್ಗಳು ಬಂದಾಗ ಲಕ್ಷಾಂತರ ಜನ ಲೇತ ಆಪರೇಟರ್ಗಳು ತಮ್ಮ ಕೆಲಸ ಕಳ್ಕೊಂಡ್ರು ಆಟೋಕ್ಯಾಡ್ ನಂತ ಸಾಫ್ಟ್ವೇರ್ಗಳು ಬಂದಾಗ ಎಷ್ಟೋ ಜನ ಡ್ರಾಫ್ಟ್ಸ್ಮನ್ಗಳು ನಿರುದ್ಯೋಗಿಗಳಾದರು ಫ್ಲೆಕ್ಸ್ ಪ್ರಿಂಟಿಂಗ್ ನಂತ ತಂತ್ರಜ್ಞಾನ ಬಂದಾಗ ಸಾವಿರಾರು ಜನ ಕಲಾವಿದರು ಅತಂತ್ರಗಳಾದರು ಹಾಗಂತ ಇಡೀ ದೇಶ ನಿರುದ್ಯೋಗಿಗಳಿಂದ ತುಂಬಿ ಹೋಯ್ತಾ ಅಂತಂದ್ರೆ ಇಲ್ಲ ಅದೇ ಉದ್ದೇಶದ ಪೂರ್ತಿಗಾಗಿ ತಂತ್ರಜ್ಞಾನದ ಇನ್ನೊಂದು ಕ್ಷೇತ್ರದಲ್ಲಿ ಇನ್ನು ಹೆಚ್ಚು ಜನ ಕೆಲಸವನ್ನ ಕಂಡುಕೊಂಡರು ನಮಗೆಲ್ಲ ಗೊತ್ತಿರುವಂತಹ ಉದಾಹರಣೆ ಕೊಡಬೇಕಾದರೆ.
ಕೆಲ ದಶಕಗಳ ಹಿಂದೆ ನಮ್ಮ ಬ್ಯಾಂಕುಗಳು ತಮ್ಮೆಲ್ಲ ವ್ಯವಹಾರಗಳನ್ನ ಕಂಪ್ಯೂಟರೈಸ್ ಮಾಡಲಿಕ್ಕೆ ತೊಡಗಿದಾಗ ಇಡೀ ದೇಶದ ಎಲ್ಲಾ ಬ್ಯಾಂಕ್ ಮತ್ತು ಇನ್ಶೂರೆನ್ಸ್ ಕಂಪನಿಗಳ ಎಲ್ಲಾ ಟ್ರೇಡ್ ಯೂನಿಯನ್ಗಳು ಕನಿಷ್ಠ ಒಂದು ನಾಲ್ಕೈದು ಬಾರಿ ಇಡೀ ದೇಶವ್ಯಾಪಿ ಮುಷ್ಕರಕ್ಕೆ ಅವರು ಕರೆ ನೀಡಿದರು ಆದರೆ ಸರ್ಕಾರ ಅದಕ್ಕೆಲ್ಲ ಬಗ್ಗದೆ ಹಂತ ಹಂತವಾಗಿ ಕಂಪ್ಯೂಟರಕರಣ ಮಾಡಿ ಇಡೀ ದೇಶದ ಎಲ್ಲಾ ಬ್ಯಾಂಕಿಂಗ್ ವ್ಯವಹಾರಗಳನ್ನ ಕಂಪ್ಯೂಟರೈಸ್ ಮಾಡ್ತು ಈಗ ಹಿಂತುರುಗಿ ನೋಡಿದಾಗ ಏನಾಯ್ತು ಅವರು ಅಂದಾಜಿಸಿದ ತರಹ ಉದ್ಯೋಗ ನಷ್ಟ ಆಯ್ತಾ ಅಂತ ಕೇಳಿದ್ರೆ ಉತ್ತರ ಹೌದು ಮುಂಚೆ ಒಂದು ಚಿಕ್ಕ ಬ್ಯಾಂಕ್ ಬ್ರಾಂಚ್ನಲ್ಲೂ ಸಹ 15 20 ಜನ ಕೆಲಸಗಾರರು ಇರ್ತಾ ಇದ್ರು ಈಗ ದೊಡ್ಡ ದೊಡ್ಡ ಬ್ರಾಂಚ್ಗಳಲ್ಲಿ ಸಹ ಅಷ್ಟೊಂದು ಜನ ಇರೋದಿಲ್ಲ ಆದರೆ ನಮಗೆ ಅದೇ ಬ್ಯಾಂಕಿಂಗ್ ಸೇವೆಯನ್ನ ಒದಗಿಸುವಂತಹ ತಂತ್ರಜ್ಞಾನದ ಕ್ಷೇತ್ರದಲ್ಲಿ ಅದಕ್ಕಿಂತ 10 ಪಟ್ಟು ಹೆಚ್ಚು ಕೆಲಸಗಳು ಸೃಷ್ಟಿಯಾದವು ಸಮಾಜದ ಮೇಲೆ ಇದರ ಒಟ್ಟು ಪರಿಣಾಮ ಏನಾಯಿತು ಬೆರಳ ತುದಿಯಲ್ಲಿ ನಿಮಗೆ ನಿಮ್ಮ ಅಕೌಂಟಿನ ಎಲ್ಲಾ ಮಾಹಿತಿ ಸಿಗಲಿಕ್ಕೆ ಶುರುವಾಯಿತು ಬೇಕೆನಿಸಿದಾಗ ದಿನಸಿ ಅಂಗಡಿಗೆ ಹೋಗಿ ಸಾಮಾನ್ ತರೋತರ ನೀವು ಕ್ಯಾಶ್ ತಗೊಂಡು ಬರಲಿಕ್ಕೆ ಎಟಿಎಂ ಗಳು ಹುಟ್ಟಿಕೊಂಡವು ಒಟ್ಟು ಪರಿಣಾಮವಾಗಿ ಜನರ ಜೀವನ ಇನ್ನಷ್ಟು ಸುಗಮವಾಯಿತು ಎಲ್ಲಾ ಜನರ ಎಫಿಶಿಯನ್ಸಿ ಪ್ರೊಡಕ್ಟಿವಿಟಿ ಇನ್ನಷ್ಟು ಜಾಸ್ತಿ ಆಯಿತು ಪರಿಣಾಮವಾಗಿ ಜನರ ತಲಾದಾಯ ಜಾಸ್ತಿ ಆಯಿತು ದೇಶದ ಸಮೃದ್ಧಿ ಹೆಚ್ಚಾಯಿತು.
ಎಐ ತಂತ್ರಜ್ಞಾನವು ಅಷ್ಟೇ ಅದು ನಿಮ್ಮ ಕ್ಷೇತ್ರದಲ್ಲಿ ಪ್ರವೇಶಿಸಿದೆ ಅಂತಂದ್ರೆ ಆತಂಕ ಪಡೋದಲ್ಲ ಬದಲಿಗೆ ಆ ತಂತ್ರಜ್ಞಾನದ ರೀತಿ ನೀತಿಗಳನ್ನ ಕಲಿತುಕೊಳ್ಳುದು ಆ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಸಂಪಾದಿಸುವುದು ಅಥವಾ ಅದಕ್ಕೆ ಸಮಾನಾಂತರವಾಗಿ ಹುಟ್ಟಿಕೊಂಡಂತಹ ಇನ್ನೊಂದು ಕ್ಷೇತ್ರದಲ್ಲಿ ನಿಮ್ಮ ಅಭಿರುಚಿ ಸಾಮರ್ಥ್ಯಕ್ಕೆ ತಕ್ಕುದಾಗಿ ನೀವು ಒಂದು ನೆಲೆ ಕಂಡುಕೊಳ್ಳೋದು ಕೆಲ ದಿನಗಳ ಹಿಂದೆ ನಾನೊಂದು ಎಟಿಎಂ ಗೆ ಹೋದಾಗ ಅಲ್ಲೊಬ್ಬ ಕಾರ್ಡ್ ಹಾಕಿ ಅಮೌಂಟ್ ಮೆನ್ಷನ್ ಮಾಡಿ ಬಟನ್ ಒತ್ತಿದ ನಂತರ ಒಂದು ನಿಮಿಷ ಆದರೂ ದುಡ್ಡು ಬರದೆ ಇರುವಾಗ ತಾಳ್ಮೆ ಕಳ್ಕೊಂಡು ಅವನು ಆ ಮಷೀನ್ಗೆ ಗುದ್ದ ಉದ್ದಲಿಕ್ಕೆ ಶುರು ಮಾಡಿದ ನೆನಪಿಟ್ಟುಕೊಳ್ಳಿ ಈ ಕಂಪ್ಯೂಟರೈಸೇಶನ್ ಎಟಿಎಂ ಇವೆಲ್ಲ ಬರೋಕು ಮುಂಚೆ ನಾವು ಬ್ಯಾಂಕಿಗೆ ಹೋಗಿ ಚೆಕ್ ಬರೆದು ಟೋಕನ್ ತಗೊಂಡು ಒಂದು ಗಂಟೆ ಕಾಯ್ತಾ ಇದ್ವಿ ಕ್ಯಾಶ್ ತಗೊಳ್ಳಿಕ್ಕಾಗಿ ಈಗಿನ ಈ ಹೊಸ ಜನಾಂಗಕ್ಕೆ ಒಂದು ಗಂಟೆ ಅಲ್ಲ ಒಂದು ನಿಮಿಷ ಸಹ ದುಬಾರಿ ಅವರಿಗೆ ಕೆಲವೇ ಸೆಕೆಂಡ್ಗಳಲ್ಲಿ ಎಲ್ಲ ಕೆಲಸ ಆಗಬೇಕು ನೆನಪಿಟ್ಟುಕೊಳ್ಳಿ ಪ್ರತಿಯೊಂದು ಹೊಸ ತಂತ್ರಜ್ಞಾನ ಹೊಸ ಅನುಕೂಲ ಜನರಲ್ಲಿ ಹೊಸ ಅಸಹನೆಯನ್ನ ಹುಟ್ಟುಹಾಕುತ್ತದೆ.
ಈ ಅಸಹನೆಯೇ ಹೊಸ ಹೊಸ ಉದ್ಯೋಗಗಳ ಸೃಷ್ಟಿಗೆ ಅವಕಾಶವನ್ನು ಒದಗಿಸುತ್ತದೆ. ಜೋಮಾಟೋ, ಬ್ಲಿಂಕಿಟ್ ಇವೆಲ್ಲ ಕೆಲವೊಂದು ಉದಾಹರಣೆಗಳು ಅಷ್ಟೇ. ಇವು ಮತ್ತೆ ಮತ್ತೆ ಹೊಸ ಸೃಷ್ಟಿ ಮಾಡ್ತಾನೆ ಹೋಗ್ತ್ತವೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ನೀವೆಲ್ಲ ತಯಾರಿರಬೇಕಾಗಿರುವುದು ಹೊಸ ಕ್ಷೇತ್ರಗಳ ಉದ್ಯೋಗದ ಅನ್ವೇಷಣೆಗೆ ಮತ್ತು ನಿರಂತರವಾದ ಕಲಿಯುವಿಕೆಗೆ. ಇದೇ ರೀತಿ AI ಕೂಡ ಅನೇಕ ಹೊಸ ಉದ್ಯೋಗಗಳನ್ನು ಹುಟ್ಟುಹಾಕುತ್ತಿದೆ. ಡೇಟಾ, ಸೈಬರ್ ಸುರಕ್ಷತೆ, ಆಟೋಮೇಶನ್ ಮುಂತಾದ ಕ್ಷೇತ್ರಗಳಲ್ಲಿ ಹುದ್ದೆಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ತಂತ್ರಜ್ಞಾನ ಬದಲಾಗುತ್ತಿದ್ದಂತೆ ಅದಕ್ಕೆ ತಕ್ಕ ಕೌಶಲ್ಯಗಳು ಮುಖ್ಯವಾಗುತ್ತವೆ.
ಕಲಿಯಲು ಸಿದ್ಧರಾಗಿದ್ದರೆ AI ಯುಗವು ಭಯವಲ್ಲ, ಬದಲಾಗಿ ಒಂದು ಅವಕಾಶ. ಭವಿಷ್ಯದಲ್ಲಿ ಕೆಲಸದ ಸ್ವರೂಪ ಮಾತ್ರ ಬದಲಾಗುತ್ತದೆ; ಉದ್ಯೋಗಗಳು ನಾಶವಾಗುವುದಿಲ್ಲ, ರೂಪಾಂತರಗೊಳ್ಳುತ್ತವೆ.


