7000mAh ಬ್ಯಾಟರಿ, ಅಪ್‌ಗ್ರೇಡ್ ವೈಶಿಷ್ಟ್ಯಗಳೊಂದಿಗೆ ರಿಯಲ್‌ಮಿ 15T

0
21

ರಿಯಲ್‌ಮಿ ತನ್ನ ಹೊಸ ಸ್ಮಾರ್ಟ್‌ಫೋನ್ Realme 15T ಅನ್ನು ಸೆಪ್ಟೆಂಬರ್ 2 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಬಿಡುಗಡೆಗೂ ಮುನ್ನವೇ ಈ ಫೋನ್‌ನ ಬೆಲೆ ಬಹಿರಂಗಗೊಂಡಿದ್ದು, 7000mAh ಬ್ಯಾಟರಿ, 12GB RAM ವೈಶಿಷ್ಟ್ಯಗಳನ್ನು ಹೊಂದಿದೆ.

ನವದೆಹಲಿ: ಸೆಪ್ಟೆಂಬರ್ 2 ರಂದು ಭಾರತದಲ್ಲಿ ಬಿಡುಗಡೆಯಾಗಲಿರುವ ರಿಯಲ್‌ಮಿ 15T ಈ ಚೀನಾದ ಕಂಪನಿಯ ಹೊಸ ಸ್ಮಾರ್ಟ್‌ಫೋನ್ ಬೃಹತ್ 7000mAh ಬ್ಯಾಟರಿ, ಜಲನಿರೋಧಕ ವಿನ್ಯಾಸ ಮತ್ತು ಹಲವಾರು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಹೊಂದಿದೆ. ಅಧಿಕೃತ ಬಿಡುಗಡೆಗೂ ಮುನ್ನವೇ, ಇದರ ಅಂದಾಜು ಬೆಲೆ ಹಾಗೂ ಕಂಪನಿಯೇ ದೃಢಪಡಿಸಿರುವ ಪ್ರಮುಖ ವೈಶಿಷ್ಟ್ಯಗಳ ಮಾಹಿತಿ ಬಹಿರಂಗವಾಗಿದೆ.

ಭಾರತದಲ್ಲಿ ರಿಯಲ್‌ಮಿ 15T ನ ಪ್ರಾರಂಭಿಕ ಬೆಲೆಯನ್ನು ರೂ. 20,999 ಕ್ಕೆ ನಿಗದಿಪಡಿಸಲಾಗಿದೆ. 12GB RAM ಮತ್ತು 256GB ವರೆಗೆ ಸಂಗ್ರಹಣೆಯೊಂದಿಗೆ ಈ ಫೋನ್ ಬರುವುದರಿಂದ, ಇದು ಮಧ್ಯಮ ದರದ ಪ್ರೀಮಿಯಂ ಫೋನ್‌ಗಳ ಪಟ್ಟಿಗೆ ಸೇರುತ್ತದೆ. ಬಿಡುಗಡೆ ಸಂದರ್ಭದಲ್ಲಿ ಪ್ರಾರಂಭಿಕ ಆಫರ್‌ಗಳ ಮೂಲಕ ಬೆಲೆ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಗಳೂ ಇವೆ.

ಫೋನ್‌ನ್ನು ಖರೀದಿಸಲು ಅಮೆಜಾನ್, ಫ್ಲಿಪ್‌ಕಾರ್ಟ್ ಹಾಗೂ ರಿಯಲ್‌ಮಿ ಅಧಿಕೃತ ವೆಬ್‌ಸೈಟ್ ಮೂಲಕ ಆರ್ಡರ್ ಮಾಡಬಹುದಾಗಿದೆ. ಜೊತೆಗೆ, ಪ್ರಾರಂಭಿಕ ಆಫರ್‌ಗಳಡಿ ಬ್ಯಾಂಕ್ ಡಿಸ್ಕೌಂಟ್ ಮತ್ತು ವಿನಿಮಯ ಆಫರ್‌ಗಳು ಲಭ್ಯವಿರುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here