ಮುಗೀತು ಇಲ್ಲಿಗೆ ಮುಗೀತು ಇನ್ಮುಂದೆ ನೀವು ಅಂಗಡಿಯಲ್ಲಿ ಹೊಸ ಮಿಕ್ಚರ್ ತೆಗೆದುಕೊಂಡಾಗ ಯಾಕಪ್ಪ ಇಷ್ಟು ರೇಟು ಅಂತ ಕೇಳಿದಾಗ ಅಂಗಡಿಯವರು ಜಿಎಸ್ಟಿ ಜಾಸ್ತಿ ಕಟ್ ಆಗುತ್ತೆ ಸರ್ ಅಂತ ಹೇಳಲ್ಲ ನೀವು ಹೊಸ ಬೈಕ್ ತೆಗೆದುಕೊಳ್ಳಬೇಕು ಅಂದ್ರೆ ಜಿಎಸ್ಟಿಯ ರೇಟ್ ಸಂಬಂಧ ಸಣ್ಣ ಬೈಕ್ನಲ್ಲೇ ತೃಪ್ತಿ ಪಟ್ಟಕೊಳ್ಳುವುದು ನಿಲ್ಲಿಸಿಬಿಡಿ ಹೊರಗಿನಿಂದ ಬ್ರೆಡ್ ಪನ್ನೀರ್ ೀ ತರುಹಾಗಿಲ್ಲ ಏನಪ್ಪಾ ಇದು ತಿನ್ನೋ ಐಟಂ ನಲ್ಲೂ ಇಷ್ಟೊಂದು ಜಿಎಸ್ಟಿ ಕಟ್ ಆಗುತ್ತಲ್ಲಪ್ಪ ಅಂತ ತಲೆ ಕೆಡಿಸಿಕೊಳ್ಳೋ ಹಾಗಿಲ್ಲ ಹೊಸ ಇನ್ಶೂರೆನ್ಸ್ ಮಾಡಿಸಬೇಕು ಅಂದ್ರು ಅದಕ್ಕೂ ಜಿಎಸ್ಟಿ ಕಟ್ಟಬೇಕಾಗಿಲ್ಲ ಯಾಕಂದ್ರೆ ಇನ್ನ ಮುಂದೆ ಎಲ್ಲ ಚೇಂಜ್ ಆಗ್ತಿದೆ ಹೌದು ಏನು ಜಿಎಸ್ಟಿ ಯಲ್ಲಿ ಚೇಂಜ್ ಆಗ್ತಿದೆಯಾ ಅಂತ ಆಶ್ಚರ್ಯ ಪಡಬೇಡಿ ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅಂತಿಂತ ಸುದ್ದಿ ಕೊಟ್ಟಿಲ್ಲ ದಸರಾ ದೀಪಾವಳಿಗೆ ಮಧ್ಯಮ ವರ್ಗದವರಿಗೆ ಮಾತ್ರವಲ್ಲ ಇಡೀ ಭಾರತವರ್ಷದ ಜನರಿಗೆ ಸಿಹಿ ಸುದ್ದಿಯನ್ನೇ ನೀಡುತಿದ್ದಾರೆ. ಸ್ನೇಹಿತರೆ ನಿಮಗೆಲ್ಲ ಗೊತ್ತಿರಬಹುದು ಬಜೆಟ್ ಮಂಡನೆಯ ಸಂದರ್ಭದಲ್ಲಿ ನಿರ್ಮಲ ಸೀತಾರಾಮನವರನ್ನ ಎಷ್ಟೆಲ್ಲ ಟ್ರೋಲ್ ಮಾಡ್ತಾ ಇದ್ರು ಅನ್ನೋದು ನಿಮಗೆಲ್ಲ ಗೊತ್ತೇ ಇದೆ ಆಯಮ್ಮನಿಗೆ ಬರಿ ತೆಗೆದುಕೊಂಡು ಮಾತ್ರ ಗೊತ್ತು ದೇಶ ಕಂಡಂತ ಅತ್ಯಂತ ಕಠಿಣ ವಿತ್ತ ಸಚಿವೆ ಅಂತೆಲ್ಲ ಬೈದಾಟ ಮಾಡ್ತಾ ಇದ್ರು ಮತ್ತದು ತಪ್ಪು ಕೂಡ ಅಲ್ಲ ಯಾಕಂದರೆ ಪ್ರತಿವರ್ಷ ಬಜೆಟ್ ಆದಾಗ ಆದಾಯ ತೆರಿಗೆಯಲ್ಲಿ ಸ್ವಲ್ಪ ಸಡಿಲ ಮಾಡೋದು ಬಿಟ್ಟರೆ ಶ್ರೀ ಸಾಮಾನ್ಯ ಹಾರಾಡಿಕೊಂಡು ಹಬ್ಬ ಮಾಡುವ ಯಾವ ಘೋಷಣೆಯು ಕೂಡ ಇರತ ಇರ್ಲಿಲ್ಲ ಕೆಲವೊಂದು ದೂರದೃಷ್ಟಿ ಯೋಜನೆಗಳು ಇರ್ತಾ ಇದ್ದರೂ ಸಹ ಸಾಮಾನ್ಯ ನಾಗರಿಕರಿಗೆ ತಕ್ಷಣಕ್ಕೆ ಖುಷಿ ಮಾಡುವಂತಹ ಸುದ್ದಿಗಳಇರುತಿದ್ದು ತುಂಬಾನೇ ಕಡಿಮೆ ಪ್ರತಿಬಾರಿನು ಶ್ರೀ ಸಾಮಾನ್ಯ ಇಷ್ಟೆಲ್ಲ ರೇಟ್ ಜಾಸ್ತಿ ಆಗ್ತಿದೆ ಹೇಗಪ್ಪ ಅಂತ ತಲೆ ಕೆಡಿಸಿಕೊಂಡು ಕೈ ಹೊತ್ತು ಕೂರುತಿದ್ದ ಎಲ್ಲಿ ನೋಡಿದ್ರು ಬೆಲೆ ಏರಿಕೆಯದ್ದೆ ಸುದ್ದಿ ಇದ್ವು ಆದರೆ ಈಗ ಕೊನೆಗೂ ಜನರ ಈ ಹಿಡಿಶಾಪಕ್ಕೆ ಮುಕ್ತಿ ನೀಡುವ ಕಾಲ ಬಂದಿದೆ ಕೇಂದ್ರ ಸರ್ಕಾರ ಕೊನೆಗೂ ದೇಶದ ಮಧ್ಯಮ ವರ್ಗದ ಮತ್ತು ಬಡಜನರ ಆರ್ತನಾದಕ್ಕೆ ಕಿವಿ ಸೋತಿದ್ದು ಜಿಎಸ್ಟಿ ಸ್ಲ್ಯಾಬ್ ಗಳಲ್ಲಿ ಅಮೋಲಾಗ್ರ ಬದಲಾವಣೆಗಳನ್ನ ತರೋದಕ್ಕೆ ಮುಂದಾಗಿದೆ. ಹೌದು ಸ್ನೇಹಿತರೆ ಸೆಪ್ಟೆಂಬರ್ ಮೂರು ಮತ್ತು ನಾಲ್ಕರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ಕೊನೆಗೂ ಅಧಿಕೃತವಾಗಿ ಹೊರಬಿದ್ದಿದ್ದು ದೇಶದ ಜನರು ನೆಮ್ಮದಿಯಿಂದ ನಿಟ್ಟಿಸರು ಬಿಡುವ ಹಾಗಾಗಿದೆ. ಹಾಗೆ ನೋಡಿದರೆ ಈ ಸುದ್ದಿಯನ್ನ ಮೊದಲು ಕೊಟ್ಟಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ತಿಂಗಳು 79ನೇ ಸ್ವತಂತ್ರೋತ್ಸವದ ದಿನ ಕೆಂಪುಕೋಟೆಯಲ್ಲಿ ಭಾಷಣ ಮಾಡುವಾಗ ನಾವು ಈ ಸಲ ಜಿಎಸ್ಟಿಯಲ್ಲಿ ಬದಲಾವಣೆ ಮಾಡುತ್ತೇವೆ ಮತ್ತು ಆಮೂಲಕ ದೀಪಾವಳಿಗೂ ಮೊದಲೇ ದೇಶದ ಜನರಿಗೆ ಶುಭಸುದ್ದಿ ನೀಡಲು ಸರ್ಕಾರ ತೀರ್ಮಾನ ಮಾಡಿದ.
ಅಂತ ಘೋಷಣೆ ಮಾಡಿದ್ರು ಆವಾಗಲೇ ಜನರಿಗೆ ಈ ಬಗ್ಗೆ ಒಂದು ರೀತಿಯಲ್ಲಿ ಆಶಾಭಾವನೆ ಮೂಡಿತ್ತು ಆದರೆ ಇಷ್ಟು ದೊಡ್ಡ ಬದಲಾವಣೆ ಆಗುತ್ತೆ ಅಂತ ಯಾರು ಕೂಡ ಊಹಿಸಿರಲಿಲ್ಲ ಅನ್ಸುತ್ತೆ ಹಾಗಾದರೆ ಬದಲಾಗಿರೋದು ಏನು ಅಂತ ಒಂದು ಸಲ ನೋಡ್ಕೊಂಡು ಬಂದುಬಿಡೋಣ ಸೆಪ್ಟೆಂಬರ್ ಮೂರು ಮತ್ತು ನಾಲ್ಕನೇ ತಾರೀಕು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ 56ನೇ ಜಿಎಸ್ಟಿ ಕೌನ್ಸಿಲ್ ಸಭೆ ನಡೀತು ಅದರಲ್ಲಿ ಮೊದಲಿದ್ದ 5% 12% 18% ಮತ್ತು 28% ಜಿಎಸ್ಟಿ ತೆರಿಗೆ ಸ್ಲ್ಾಬ್ಗಳನ್ನ ಬದಲಾವಣೆ ಮಾಡಿ ಕೇವಲ 5% 18% ಎರಡೇ ಸ್ಲ್ಯಾಬ್ಗಳನ್ನ ಇಟ್ಟಕೊಳ್ಳುವುದಕ್ಕೆ ತೀರ್ಮಾನ ಮಾಡಿದ್ದಾರೆ ಈ ಹೊಸ ನೀತಿ ಸೆಪ್ಟೆಂಬರ್ 22 ರಿಂದ ಜಾರಿಗೆ ಬರುತ್ತೆ ಹಾಗಾಗಿಯೇ ಹೇಳಿದ್ದು ಇದು ದೇಶದ ಜನರಿಗೆ ದಸರಾ ಮತ್ತು ದೀಪಾವಳಿ ಹಬ್ಬದ ಗಿಫ್ಟ್ ಖಂಡಿತ ಆಗುತ್ತೆ ಅಂತ ಯಾಕಂದ್ರೆ ಈ ಕ್ರಾಂತಿಕಾರಕ ನಿರ್ಧಾರದಿಂದ ಕೋಟ್ಯಂತರ ಭಾರತೀಯರಿಗೆ ಖುಷಿಯಾಗಿದೆ ಅದರಲ್ಲೂ ಕರ್ನಾಟಕದ ಜನತೆಗೆ ಈ ಕಡೆ ಬೆಲೆ ಏರಿಕೆ ತೆರಿಗೆ ಹಾವಳಿಯಿಂದ ಬಸವಳಿದು ಹೋಗಿದ್ದ ಜನರಿಗೆ ತುಂಬಾನೇ ರಿಲೀಫ್ ಸಿಕ್ಕಂತಾಗಿದೆ ಹಾಗಾದರೆ ಯಾವ್ಯಾವುದಕ್ಕೆ ತೆರಿಗೆನೆ ತೆಗೆಯಲಾಗಿದೆ ಏನೇನು ಎಷ್ಟೆಷ್ಟು ಕಡಿಮೆಯಾಗಿದೆ ಮತ್ತು ಜಾಸ್ತಿ ಆಗಿದೆ ಎಲ್ಲವನ್ನ ಮುಂದೆ ಹೇಳ್ತಾ ಹೋಗ್ತೀವಿ ನೋಡಿ ಮೊದಲು 5% ಮತ್ತು 12% ಸ್ಲ್ಯಾಬ್ ನಲ್ಲಿದ್ದ ಪನ್ನೀರ್ ಬ್ರೆಡ್ ಚಪಾತಿ ಬೇಬಿ ಮಿಲ್ಕ್ ಮಿಲ್ಕ್ ಪೌಡರ್ ಶಿಕ್ಷಣಕ್ಕೆ ಸಂಬಂಧಪಟ್ಟ ನಕ್ಷೆಗಳು ಚಾರ್ಟ್ಗಳ ಮೇಲೆ ಇನ್ಮುಂದೆ ಯಾವ ಜಿಎಸ್ಟಿ ತೆರಿಗೆಯೂ ಕೂಡ ಇರೋದಿಲ್ಲ ಜೊತೆಗೆ ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಯ ಔಷಧದ ಮೇಲು ಕೂಡ ಯಾವುದೇ ತೆರಿಗೆ ಇರೋದಿಲ್ಲ ಅಲ್ಲದೆ ಭಾರಿ ಚರ್ಚೆಗೆ ಮತ್ತು ಟೀಕೆಗೆ ಕಾರಣವಾಗಿದ್ದ ಟರ್ಮ್ ಲೈಫ್ ಮತ್ತು ಹೆಲ್ತ್ ಇನ್ಶೂರೆನ್ಸ್ ಗಳನ್ನ ಕೂಡ ಶೇಕಡ 18ರ ಸ್ಲ್ಯಾಬ್ ನಿಂದ ಶೂನ್ಯ ತೆರಿಗೆಯ ಸ್ಲ್ಯಾಬ್ಗೆ ತಂದು ಜನರ ಆರೋಗ್ಯ ಮುಖ್ಯ ಅನ್ನುವುದನ್ನ ನಿರೂಪಿಸಲಾಗಿದೆ ಇನ್ನು ಈ ಹಿಂದೆ 15% ಮತ್ತು 18% ಸ್ಲ್ಾಬ್ ನಲ್ಲಿದ್ದ ಅನೇಕ ವಸ್ತು ಮತ್ತು ಸೇವೆಗಳನ್ನ ಶೇಕಡ ಐದರ ಸುಲಭ ಸ್ಲ್ಯಾಬ್ಗೆ ತಂದಿದ್ದಾರೆ ದಿನನಿತ್ಯ ಬಳಕೆಯ ವಸ್ತುಗಳಾದ ಹೇರ್ ಆಯಿಲ್ ಶಾಂಪೂ ಸೋಪು ಟೂತ್ ಬ್ರಷ್ ಟೂತ್ಪೇಸ್ಟ್ ಬೆಣ್ಣೆ ತುಪ್ಪ ಉಪ್ಪು ಅಡುಗೆ ಎಣ್ಣೆ ಪಾತ್ರೆಗಳು ಹೊಲಿಗೆ ಯಂತ್ರ ಮತ್ತು ಸಾಮಾನುಗಳು ಹ್ಯಾಂಡಿಕ್ರಾಫ್ಟ್ಗಳು ಸೈಕಲ್ ಅಗರಬತ್ತಿ ಟೀ ಕಾಫಿ ಎಲ್ಪಿಜಿ ಸಿಲಿಂಡರ್ ಮುಂತಾದ ಅತ್ಯವಶ್ಯ ವಸ್ತುಗಳನ್ನ ಶೇಕಡ ಐದರ ವ್ಯಾಪ್ತಿಗೆ ತರಲಾಗಿದೆ ಅಲ್ಲದೆ 500 ರೂಪಾಯಿಗೂ ಕಡಿಮೆ ಬೆಲೆಯ ಚಪ್ಪಲಿ ಶೂಗಳುಸರೂಪಾ ಕಡಿಮೆ ಬೆಲೆಯ ಬಟ್ಟೆ ಆಭರಣಗಳು ಕೂಡ ಅಗ್ಗವಾಗಲಿದೆ. ಇನ್ನು ಶೇಕಡ 28ರ ಸ್ಲ್ಾಬ್ ನಲ್ಲಿದ್ದ ಅನೇಕ ವಸ್ತುಗಳನ್ನ ಶೇಕಡ 18ಕ್ಕೆ ಇಳಿಸಿದ್ದಾರೆ. ಏರ್ ಕಂಡೀಷನ್, ಎಲ್ಲಾ ಸೈಜ್ನ ಟಿವಿ, ವಾಷಿಂಗ್ ಮಿಷಿನ್, ಕಂಪ್ಯೂಟರ್ಗಳು, ಸಣ್ಣ ಕಾರ್ಗಳು, ಆಟೋಮೊಬೈಲ್, ಬಿಡಿಭಾಗಗಳು, ಸಿಮೆಂಟ್ ಮುಂತಾದ ವಸ್ತುಗಳು ಇನ್ಮುಂದೆ ಕಡಿಮೆ ಬೆಲೆಗೆ ಸಿಗಲಿವೆ. ಹಾಗಾದರೆ ಎಲ್ಲವನ್ನ ಕಡಿಮೆ ಮಾಡೋದಕ್ಕೆ ಮಾತ್ರ ತೀರ್ಮಾನ ಮಾಡಿದ್ದಾರ ಯಾವುದು ಕೂಡ ಜಾಸ್ತಿ ಆಗೆ ಇಲ್ವಾ ಹಾಗಂತ ತಿಳ್ಕೊಂಡ್ರೆ ಅದು ನಿಮ್ಮ ತಪ್ಪು ಸ್ನೇಹಿತರೆ ಯಾಕಂದ್ರೆ ಇಲ್ಲಿ ಕೆಲವೊಂದು ವಸ್ತುಗಳ ಬೆಲೆ ಹೆಚ್ಚು ಕೂಡ ಆಗಿದೆ ಶೇಕಡ 40ರಷ್ಟು ತೆರಿಗೆಯ ಹೊಸ ಸ್ಲ್ಯಾಬ್ ಒಂದನ್ನ ಸೃಷ್ಟಿ ಮಾಡಿದ್ದಾರೆ ಅದರಲ್ಲಿ ಸಿನ್ ಗೂಡ್ಸ್ ಅಂದ್ರೆ ಜನರ ಆರೋಗ್ಯಕ್ಕೆ ಹಾನಿಕಾರಕ ಅನ್ನಬಹುದಾದ ಪದಾರ್ಥಗಳು ಮತ್ತು ಲಕ್ಸರಿ ವಸ್ತುಗಳನ್ನ ಸೇರಿಸಲಾಗಿದೆ ಅವು ಯಾವುವು ಅಂತ ನೋಡೋದಾದರೆ ಪಾನ್ ಮಸಾಲಾ ಸಿಗರೆಟ್ ಗುಡಕ ತಂಬಾಕು ಬೀಡಿ ಇದೆಲ್ಲ ಸೇರಿದೆ ಜೊತೆಗೆ ಕಾರ್ಬೊನೇಟೆಡ್ ಬೆವರೇಜಸ್ ಅಂದರೆ ಹೆಚ್ಚಿನ ಕೋಲ್ಡ್ ಡ್ರಿಂಕ್ಸ್ ಮತ್ತು ಇತರೆ ಆಲ್ಕೋಹಾಲ್ ರಹಿತ ಪಾನೀಯಗಳ ಬೆಲೆಯು ಹೆಚ್ಚಾಗಿದೆ ಇದರೊಂದಿಗೆ 350 ಸಿಸಿ ಅಧಿಕ ಇಂಜಿನ್ ನಂತಹ ಬೈಕ್ಗಳು ವಯಕ್ತಿಕ ಉಪಯೋಗಕ್ಕೆ ಬಳಸಲಾಗುವ ಏರ್ ಕ್ರಾಫ್ಟ್ಗಳು ಶೇಕಡ 40ರ ಸ್ಲ್ಯಾಬ್ಗೆ ಬಂದು ಬೀಳಲಿವೆ ಇದರಿಂದ ಶೇಕಡ 90ಕ್ಕೂ ಹೆಚ್ಚಿನ ವಸ್ತುಗಳ ಬೆಲೆ ಇಳಿದಂತಾಗಿದೆ ಆದರೆ ಚಿನ್ನ ಬೆಳ್ಳಿ ಎಲೆಕ್ಟ್ರಿಕ್ ವಾಹನದಂತಹ ವಸ್ತು ವಸ್ತುಗಳ ಮೇಲಿನ ಜಿಎಸ್ಟಿ ಯಲ್ಲಿ ಯಾವುದೇ ಬದಲಾವಣೆ ಇಲ್ಲ ಹಾಗಾದರೆ ಇದರಿಂದ ಏನಾಗಲಿವೆ ಉತ್ತರ ಸರಳ ಬೆಲೆ ಇಳಿಕೆ ಅಂದರೆ ಜನಸಾಮಾನ್ಯನ ಮನೆಯ ದಿನಬಳಕೆಯ ಪದಾರ್ಥ ಮತ್ತು ಅಪ್ಲಯನ್ಸಸ್ ಮೇಲಿನ ಖರ್ಚಿನಲ್ಲಿ ಶೇಕಡ ಐದರಿಂದ 10ರವರೆಗೆ ಖರ್ಚು ಕಡಿಮೆ ಆಗಬಹುದು ಆದರೆ ಈ ಸೀನ್ ಗೂಡ್ಸ್ ಅಂದರೆ ಮಧ್ಯ ಸಿಗರೆಟ್ ಬೀಡಿ ಮುಂತಾದ ವಸ್ತುಗಳ ಬೆಲೆ ಶೇಕಡ 10ರಿಂದ 20ರವರೆಗೆ ಹೆಚ್ಚಾಗಲಿದೆ ಹೌದು ಏಕಾಏಕಿ ಈಗ ಜಿಎಸ್ಟಿ ಹೊರೆಯನ್ನ ಕೇಂದ್ರ ಸರ್ಕಾರ ಕಡಿಮೆ ಮಾಡಿರೋದರಿಂದ ಕೇಂದ್ರ ಸರ್ಕಾರಕ್ಕೆ ಹೊರೆ ಬೀಳೋದಿಲ್ವಾ ಖಂಡಿತ ಬೀಳುತ್ತೆ ಇದರಿಂದ ಪ್ರತಿವರ್ಷ ಸುಮಾರು 48ಸಾವಿರ ಕೋಟಿ ರೂಪಾಯಿವರೆಗೂ ನಷ್ಟ ಆಗುತ್ತೆ ಅಂತ ಒಂದು ಅಂದಾಜಇದೆ ಆದರೆ ಕೇಂದ್ರ ಸರ್ಕಾರ ಲಾಂಗ್ ಟರ್ಮ್ ಗೋಲ್ ಮೇಲೆ ಕಣ್ಣಿಟ್ಟಂತಿದೆ ಅದೇನಂದ್ರೆ ಇತ್ತೀಚಿಗೆ ಜನಸಾಮಾನ್ಯ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾನೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ ಪ್ರತಿಸಲ ಟಿವಿ ಅವರು ಜನರ ಮಧ್ಯೆ ಹೋಗಿ ಮೈಕ್ ಹಿಡಿದಾಗಲೂ ಆತ ಮೊದಲು ಹೇಳುತ್ತಿದ್ದಿದ್ದ ಬೆಲೆ ಜಾಸ್ತಿಯಾಗಿದೆ ಅನ್ನೋದು ಅದೇ ಕಾರಣಕ್ಕೆ ಮತ್ತೆ ಪ್ರತಿಸಲ ಬಜೆಟ್ನಲ್ಲೂ ಮಧ್ಯಮ ವರ್ಗದ ಜನರಿಗೆ ಆದಾಯ ತೆರಿಗೆಯಲ್ಲಿ ಮಿತಿ ಸಡಿಲ ಮಾಡಿರೋದು ಬಿಟ್ಟರೆ ಬೇರೆಏನು ಕೊಡ್ತಿಲ್ಲ ಅಂತಾನು ಜನರು ಬಿಜೆಪಿಯಿಗೆ ಕೊಂಚ ಕೋಪ ತೋರಿಸಿದ್ರು ಅದಕ್ಕೆ 2023ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೀಟುಗಳ ಸಂಖ್ಯೆ 240ಕ್ಕೆ ಕುಸಿದಿತ್ತು ಹಾಗಾಗಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಂದ್ರಬಾಬು ನಾಯಡು ಅವರ ಟಿಡಿಪಿ ಪಕ್ಷಗಳ ನೆರವಿನಿಂದ ಸರ್ಕಾರ ರಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿ ಆಗಿನಿಂದಲೇ ಇನ್ಮುಂದೆ ಬಿಜೆಪಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಗಿಫ್ಟ್ ಕೊಡ್ತಾರೆ ಕೊಡ್ತಾರೆ ಅಂತಾನೆ ಇಲ್ಲಿವರೆಗೂ ದುಡ್ಡಕೊಂಡು ಬಂದರು ಆದರೆ ಅದು ಕೊನೆಗೂ ಈಗ ಈಡೇರಿತು ಎನ್ನಬಹುದು ಹಾಗಾದರೆ ಇದನ್ನ ಎಲ್ಲರೂ ಒಪ್ಪಿಕೊಂಡೆ ಬಿಟ್ರ ನಮ್ಮದು ಪ್ರಜಾಪ್ರಭುತ್ವ ದೇಶ ಇಲ್ಲಿ ವಾಕ್ ಸ್ವಾತಂತ್ರ್ಯ ಅನ್ನೋದು ತುಸು ಹೆಚ್ಚಾಗಿ ಇದೆ ಯಾರು ಏನು ಬೇಕಾದರೂ ಮಾತಾಡಿ ದಕ್ಕಿಸಿಕೊಳ್ಳಬಹುದು ಅನ್ನುವಷ್ಟರ ಮಟ್ಟಿಗೆ ಅದೇ ಕಾರಣಕ್ಕೆ ವಿರೋಧ ಪಕ್ಷವಾದ ಕಾಂಗ್ರೆಸ್ ಸೂಕ್ಷ್ಮವಾಗಿ ಇದನ್ನ ಸ್ವಾಗತ ತಿಸಿದ್ರು ಈಗಾಗಲೇ ಸಣ್ಣದಾಗಿ ಖ್ಯಾತೆ ತೆಗೆದಿದೆ ನಾವು 2017 ರಲ್ಲಿ ಜಿಎಸ್ಟಿ ಆರಂಭವಾದಾಗಲೇ ಈ ಅಂಶಗಳನ್ನ ಕೇಂದ್ರ ಸರ್ಕಾರ ಕೇಳಿದ್ವಿ ಆದರೆ ಆಗ ಯಾರು ಕೂಡ ತಲೆ ಕೆಡಿಸಿಕೊಳ್ಳಲಿಲ್ಲ ಮತ್ತು ಬಡವರ ಬಗ್ಗೆ ಚಿಂತೆ ಮಾಡಲಿಲ್ಲ ಈಗ ಬಿಹಾರ ಚುನಾವಣೆ ಬಂದಿದೆ ಅನ್ನುವ ಕಾರಣಕ್ಕಾಗಿ ಈ ತಂತ್ರವನ್ನ ಹೆಣೆದಿದೆ ಅಂತಾನು ಕಾಂಗ್ರೆಸ್ ಆರೋಪ ಮಾಡಿದೆ ಹೇಳಿ ಕೇಳಿ ಬಿಹಾರ ಬಡರಾಜ್ಯ ಅಲ್ಲಿನ ಜನರು ಬಡತನ ತಾಳಲಾರದೆ ಬೇರೆ ರಾಜ್ಯಗಳಿಗೆ ದುಡಿಯೋದಕ್ಕೆ ಹೋಗಿದ್ದಾರೆ.
ಈಗ ಜಿಎಸ್ಟಿ ಇಳಿಸುವುದರ ಮೂಲಕ ಕೇಂದ್ರ ಸರ್ಕಾರ ಅವರನ್ನ ಓಲಯಿಸುವುದಕ್ಕೆ ನೋಡ್ತಿದೆ ಅಂತ ಕೇಂದ್ರೀಯ ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ ಈ ರೀತಿ ಯಾವುದಾದರೂ ಹೊಸ ಯೋಜನೆಗಳು ಬಂದಾಗ ರಾಜಕೀಯವಾಗಿ ಚರ್ಚೆ ಆಗೋದು ಅದು ಇದ್ದೆ ಇರುತ್ತೆ ಅದು ಬೇರೆ ವಿಚಾರ ಸದ್ಯದ ಮಟ್ಟಿಗಂತೂ ಕೇಂದ್ರ ಸರ್ಕಾರ ಚುನಾವಣೆ ದೃಷ್ಟಿಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೆಯೋ ಅದೇನು ಗೊತ್ತಿಲ್ಲ ಆದರೆ ಖಂಡಿತವಾಗಿಯೂ ಜನರಿಗಂತೂ ಇದರಿಂದ ಲಾಭ ಆಗುತ್ತೆ ಇನ್ನು ಕೆಲವರು ಇದನ್ನ ಟ್ರಂಪ್ ಎಫೆಕ್ಟ್ ಅಂತನು ಕರೀತಿದ್ದಾರೆ ಟ್ರಂಪರ ಶೇಕಡ 50ರಷ್ಟು ಟ್ಯಾರಿಫ್ನ ಕಾರಣದಿಂದಾಗಿ ಜನರಲ್ಲಿ ಪರ್ಚೇಸಿಂಗ್ ಪ್ಯಾರಿಟಿ ಅಂದ್ರೆ ಕೊಳ್ಳುವ ಶಕ್ತಿಯನ್ನ ಹೆಚ್ಚು ಮಾಡೋದಕ್ಕೋಸ್ಕರ ಇದನ್ನ ಘೋಷಣೆ ಮಾಡಿದೆ ಅನ್ನುವ ಮಾತುಗಳು ಕೂಡ ಕೇಳಿ ಬರ್ತಿದೆ. ಅಲ್ಲದೆ ಹೆಚ್ಚು ಟ್ಯಾರಿಫ್ನ ಕಾರಣದಿಂದಾಗಿ ಹೆಚ್ಚು ಗೂಡ್ಸ್ ಅಮೆರಿಕಾಗೆ ರಫ್ತ ಆಗುವುದು ಅನುಮಾನ. ಹಾಗಾಗಿ ಭಾರತ ಬದಲಿ ಮಾರ್ಗಗಳನ್ನ ಹುಡುಕಿಕೊಳ್ಳುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಮಧ್ಯಪ್ರಾಚ್ಯ ದೇಶಗಳು ಆಸ್ಟ್ರೇಲಿಯಾದಂತಹ ದೇಶಗಳು ಒಂದು ಕಡೆ ಆದರೆ ಉತ್ಪಾದನೆಯಾಗುವ ಉತ್ಪನ್ನವನ್ನ ನಮ್ಮ ದೇಶಗಳಲ್ಲೇ ಮಾರುಕಟ್ಟೆ ಒದಗಿಸಿ ಇಲ್ಲೇ ಖರೀದಿಯಾಗುವ ಪ್ಲಾನ್ ಇದು ಅಂತ ಹೇಳ್ತಾರೆ ಆದರೆ ಇದು ಇಷ್ಟಕ್ಕೆ ಖಚಿತ ಆಗಬೇಕಾಗಿದೆ. ಆದರೆ ಇದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಹೆಚ್ಚು ಚೇತರಿಕೆ ಕಾಣಲಿವೆ. ಅಲ್ಲದೆ ಬೆಲೆ ಕಡಿಮೆಯಾಗುವುದರಿಂದ ಗ್ರಾಹಕನ ಕೊಳ್ಳುವ ಸಾಮರ್ಥ್ಯವು ಹೆಚ್ಚಾಗಲಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಹಣ ಚಲಾವಣೆ ಆಗುತ್ತೆ ಮತ್ತು ಕೈಗಾರಿಕ ಕ್ಷೇತ್ರಕ್ಕೂ ಹೆಚ್ಚು ಅನುಕೂಲ ಆಗುತ್ತೆ ಅನ್ನೋದಂತೂ ಸುಳ್ಳಲ್ಲ. ಒಟ್ಟನಲ್ಲಿ ಅದೇನೇ ಇರಲಿ ಜನಸಾಮಾನ್ಯ ವರ್ಷಗಳಿಂದ ಕೇಳ್ತಿದ್ದ ಜಿಎಸ್ಟಿ ಹೊರೆ ಕಡಿಮೆ ಮಾಡುವ ಕ್ರಮಕ್ಕೆ ಕೇಂದ್ರ ಸರ್ಕಾರ ಕೊನೆಗೂ ಮುಂದಾಗಿದ್ದು ಇದು ಗ್ರಾಹಕರು ಮತ್ತು ಉದ್ಯಮಿಗಳು ಇಬ್ಬರಿಗೂ ನೆರವಾಗಲಿದೆ ಆದರೆ ಕೇಂದ್ರಕ್ಕೆ ಕೊರತೆಯಾಗುವ ಆ 48ಸಾವಿರ ಕೋಟಿ ರೂಪಾಯಿಯನ್ನ ಸರ್ಕಾರ ಮತ್ತೆ ಇನ್ನೊಂದು ರೂಪದಲ್ಲಿ ಜನರಿಂದಲೇ ವಸೂಲಿ ಮಾಡದೆ ಇದ್ದರೆ ಅಷ್ಟೇ ಸಾಕು.