Thursday, January 15, 2026
HomeTech Newsರಸ್ತೆ ಅಪಘಾತವನ್ನು ತಡೆಗಟ್ಟಲು ಕಾರುಗಳೇ ಸಂದೇಶ ಕಳುಹಿಸುತ್ತವೆ! V2V ತಂತ್ರಜ್ಞಾನ ಬರುತ್ತಿದೆ

ರಸ್ತೆ ಅಪಘಾತವನ್ನು ತಡೆಗಟ್ಟಲು ಕಾರುಗಳೇ ಸಂದೇಶ ಕಳುಹಿಸುತ್ತವೆ! V2V ತಂತ್ರಜ್ಞಾನ ಬರುತ್ತಿದೆ

ರಸ್ತೆ ಅಪಘಾತಕ್ಕೆ ಬೀಳಲಿದೆ ಬ್ರೇಕ್ ಭಾರತದಲ್ಲೇ ರೆಡಿಯಾಗ್ತಾ ಇದೆ ವಿಟುವಿ ತಂತ್ರಜ್ಞಾನ ಇನ್ಮುಂದೆ ಕಾರುಗಳು ಪರಸ್ಪರ ಮಾತನಾಡಲಿವೆ ಭಾರತದ ರಸ್ತೆಗಳಅಂದ್ರೆ ಅದು ಕೇವಲ ಸಂಚಾರದ ಹಾದಿಯಲ್ಲ ಅನೇಕ ಬಾರಿ ಅದು ಸಾವಿನ ಹಾದಿಯು ಆಗಿಬಿಡುತ್ತೆ ಬೆಳಗಾದರೆ ಸಾಕು ಅಲ್ಲಿ ಆಕ್ಸಿಡೆಂಟ್ ಆಯ್ತು ಇಲ್ಲಿ ಆಕ್ಸಿಡೆಂಟ್ ಆಯ್ತು ಇಷ್ಟು ಜನ ಸತ್ರು ಒಂದೇ ಕುಟುಂಬದವರ ಸಾವು ಹೀಗೆಲ್ಲ ಸಾವಿನ ಸುದ್ದಿ ಕೇಳ್ತಾನೆ ಇರ್ತೀವಿ ಆದರೆ ಯಾಕೆ ಅಪಘಾತಗಳು ಆಗ್ತವೆ ರಸ್ತೆ ಸರಿ ಇರಲ್ವಾ ಎದುರುಗಡೆ ಬರುವಂತಹ ವಾಹನ ಸರಿ ಇರಲ್ವಾ ಅಪಘಾತಗಳನ್ನ ತಡೆಗಟ್ಟಲು ಏನು ಕ್ರಮ ಈತರದ್ದು ಪ್ರಶ್ನೆಗಳೆಲ್ಲ ತಲೆಯಲ್ಲಿ ಓಡ್ತಾನೆ ಇರುತ್ತವೆ ಇದಕ್ಕೆಲ್ಲ ಉತ್ತರ ಸಿಗುವ ಕಾಲ ಈಗ ಹತ್ತಿರ ಬಂದಿದೆ ಹೌದು ಇನ್ಮುಂದೆ ಭಾರತದ ರಸ್ತೆಗಳಲ್ಲಿ ಇಂತಹ ದುರಂತಗಳು ಸಂಭವಿಸುವುದಿಲ್ಲ ನಿಮ್ಮ ಕಾರುಗಳು ಇನ್ಮುಂದೆ ಕೇವಲ ಯಂತ್ರಗಳಲ್ಲ ಅವು ಪರಸ್ಪರ ಮಾತನಾಡಲಿವೆ ನಿಮ್ಮ ಕಾರು ಮತ್ತೊಂದು ಕಾರನ ಜೊತೆಗೆ ಅಂದ್ರೆ ಪಕ್ಕದಲ್ಲಿರುವ ಕಾರು ಮುಂದುಗಡೆ ಹೋಗುವ ಕಾರು ಹಿಂದಗಡೆ ಬರುವಂತಹ ವಾಹನಗಳ ಜೊತೆ ನಿಮ್ಮ ಕಾರು ಮಾತನಾಡುತ್ತೆ.

ಒಂದು ಟೆಕ್ನಾಲಜಿ ಭಾರತದಲ್ಲಿ ರೆಡಿ ಆಗ್ತಾ ಇದೆ ರಸ್ತೆ ಅಪಘಾತಗಳಿಗೆ ಶಾಶ್ವತ ಬ್ರೇಕ್ ಹಾಕಲು ಕೇಂದ್ರ ಸಚಿವ ನಿತಿನ್ ಗಡ್ಡಕರಿ ಅವರು ಮಾಸ್ಟರ್ ಪ್ಲಾನ್ ಒಂದನ್ನ ಸಿದ್ಧಪಡಿಸಿದ್ದಾರೆ ಅದೇ ವಿಟುವಿ ತಂತ್ರಜ್ಞಾನ ಹಾಗಾದ್ರೆ ಏನಿದು ವಿಟುವಿ ತಂತ್ರಜ್ಞಾನ ಇದು ಹೇಗೆ ಕೆಲಸ ಮಾಡುತ್ತೆ ನಮ್ಮ ಜೀವಗಳನ್ನ ಹೇಗೆ ಉಳಿಸುತ್ತೆ ಎಲ್ಲಿ ತಯಾರಾಗ್ತಾ ಇದೆ ಒಂದು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ಎಸ್ ವೀಕ್ಷಕರೇ ಭಾರತದಲ್ಲಿ ಪ್ರತಿವರ್ಷ ಸಂಭವಿಸುವ ರಸ್ತೆ ಅಪಘಾತಗಳ ಅಂಕಿ ಅಂಶಗಳನ್ನ ನೋಡಿದರೆ ಎಂಥವರು ಕೂಡ ಬೆಚ್ಚಿಬೇಳ ಹೇಳ್ತಾರೆ ಇತ್ತೀಚಿನ ವರದಿಗಳ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಸುಮಾರು 5 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಮತ್ತು ಇದರಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಇದರರ್ಥ ನಮ್ಮ ದೇಶದಲ್ಲಿ ಪ್ರತಿ ಗಂಟೆಗೆ ಸುಮಾರು 18 ಜನರು ರಸ್ತೆ ಅಪಘಾತದಲ್ಲಿ ಬಲಿಯಾಗ್ತಾ ಇದ್ದಾರೆ.

ವಿಶ್ವದ ಒಟ್ಟು ವಾಹನಗಳಲ್ಲಿ ಭಾರತದ ಪಾಲು ಕೇವಲ ಶೇಕಡ ಒಂದರಷ್ಟು ಆಗಿದ್ರೂ ಕೂಡ ಜಗತ್ತಿನ ಒಟ್ಟು ರಸ್ತೆ ಅಪಘಾತಗಳ ಸಾವಿನಲ್ಲಿ ಭಾರತದ ಪಾಲು ಬರಬ್ಬರಿ ಶೇಕಡ 11ರಷ್ಟಿದೆ ಇದು ಅತ್ಯಂತ ಅತ್ಯಂತ ಗಂಭೀರವಾದ ವಿಚಾರ ಅತಿವೇಗ ಅಜಾಗರಕತೆ ದಟ್ಟವಾದ ಮಂಜು ಮತ್ತು ರಸ್ತೆ ಬದಿಯಲ್ಲಿ ಅಕ್ರಮವಾಗಿ ನಿಲ್ಲಿಸಲಾದ ವಾಹನಗಳು ಈ ಸಾವುಗಳಿಗೆ ಪ್ರಮುಖ ಕಾರಣ ಅಂತ ಹೇಳಲಾಗುತಿದೆ ಇಂತಹ ರಕ್ತಸಿಕ್ತ ಅಂಕಿ ಅಂಶಗಳಿಗೆ ಇತಿಶ್ರೀ ಹಾಡಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಕೇಂದ್ರ ಸರ್ಕಾರ ಈಗ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ ಈ ಕರಾಳ ಅಂಕಿ ಅಂಶಗಳನ್ನ ಬದಲಿಸಲೆಂದೆ ವಿಟುವಿ ಎಂಬ ಮೃತ್ಯುಂಜಯ ತಂತ್ರಜ್ಞಾನ ಭಾರತಕ್ಕೆ ಕಾಲಿಡುತ್ತಾ ಇದೆ ವಿಟುವಿ ತಂತ್ರಜ್ಞಾನ ಅಂದರೆ ಏನು ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತೆ ಈಗ ಎಲ್ಲರಲ್ಲೂ ಕುತುಹಲ ಮೂಡಿಸಿರುವ ಪ್ರಶ್ನೆ ಅಂದ್ರೆ ವಾಹನಗಳು ಪರಸ್ಪರ ಮಾತನಾಡುವುದು ಅಂದ್ರೆ ಏನು ಇದನ್ನ ವೆಹಿಕಲ್ ಟು ವೆಹಿಕಲ್ ಕಮ್ಯುನಿಕೇಶನ್ ಅಂತ ಕರೆಯಲಾಗುತ್ತೆ.

ವಿ ಟುವಿ ಇದು ಕೇವಲ ವೈಜ್ಞಾನಿಕ ಸಿನಿಮಾದ ಕಲ್ಪನೆ ಅಲ್ಲ ನಿಜವಾಗಿ ನಡೆಯಲಿರುವಂತಹ ಬದಲಾವಣೆ ಇದು ಈ ವ್ಯವಸ್ಥೆಯಲ್ಲಿ ಪ್ರತಿ ವಾಹನದಲ್ಲೂ ಒಂದು ಸಣ್ಣ ಡಿವೈಸ್ ಅನ್ನ ಅಳವಡಿಸಲಾಗುತ್ತೆ ಇದು ನೋಡಲು ನಾವು ಮೊಬೈಲ್ ನಲ್ಲಿ ಬಳಸುವಂತಹ ಸಿಮ್ ಕಾರ್ಡ್ ಇದೆಯಲ್ಲ ಆ ರೀತಿ ಇರುತ್ತೆ ಈ ಡಿವೈಸ್ ನ ವಿಶೇಷತೆ ಏನಂದ್ರೆ ಇದು ಕಾರ್ಯವನ್ನ ನಿರ್ವಹಿಸಲು ಯಾವುದೇ ಹೊರಗಿನ ಮೊಬೈಲ್ ನೆಟ್ವರ್ಕ್ ಅಥವಾ ಇಂಟರ್ನೆಟ್ ಅವಶ್ಯಕತೆ ಇರಲ್ಲ ವಾಹನಗಳು ತಾವಾಗಿಯೇ ರೇಡಿಯೋ ಸಿಗ್ನಲ್ ಗಳ ಮೂಲಕ ಪರಸ್ಪರ ಸಮೂಹವನ್ನ ನಡೆಸುತ್ತವೆ ಅಂದ್ರೆ ಪರಸ್ಪರ ಮಾತನಾಡುತ್ತವೆ ಉದಾಹರಣೆಗೆ ನಿಮ್ಮ ವಾಹನದ ಮುಂದೆ ಅಥವಾ ಹಿಂದೆ ಬರುವಂತಹ ವಾಹನ ಎಷ್ಟು ವೇಗದಲ್ಲಿದೆ ಅದು ನಿಮಕಿಂತ ಎಷ್ಟು ದೂರದಲ್ಲಿದೆ ಎಂಬ ಮಾಹಿತಿಯನ್ನ ಈ ಡಿವೈಸ್ ಪ್ರತಿ ಸೆಕೆಂಡ್ಗೆ ಸಾವಿರಾರು ಬಾರಿ ಅಪ್ಡೇಟ್ ಅನ್ನ ಮಾಡ್ತಾನೆ ಇರುತ್ತೆ ನಿಮ್ಮ ವಾಹನದ ಸುತ್ತ 360 ಡಿಗ್ರಿ ಕೋನದಲ್ಲಿ ಅಂದ್ರೆ ನಾಲ್ಕು ದಿಕ್ಕುಗಳಿಂದ ಬರುವಂತಹ ವಾಹನಗಳ ಚಲನವಲದ ಮೇಲೆ ಇದು ಕಣ್ಣನ್ನ ಇಟ್ಟಿರುತ್ತೆ ಒಂದು ವೇಳೆ ಯಾವುದಾದರೂ ವಾಹನ ಅಪಾಯಕಾರಿ ಎನಿಸುವಷ್ಟು ಹತ್ತಿರ ಬಂದರೆ ತಕ್ಷಣವೇ ನಿಮ್ಮ ಕಾರಿನ ಡ್ಯಾಶ್ಬೋರ್ಡ್ನಲ್ಲಿ ಅಲರ್ಟ್ ಮೆಸೇಜ್ ಅನ್ನ ಕಳಿಸುತ್ತೆ ಅಥವಾ ಶಬ್ದದ ಮೂಲಕ ನಿಮ್ಮನ್ನ ಎಚ್ಚರಿಸುತ್ತೆ ಇದು ಮಾನವನ ಕಣ್ಣುಗಳಿಗೆ ಕಾಣದಂತಹ ಅಪಾಯವನ್ನು ಕೂಡ ಮೊದಲೇ ಗುರುತಿಸಿ ಚಾಲಕನಿಗೆ ತಿಳಿಸುವಂತಹ ಡಿಜಿಟಲ್ ಕವಚದಂತೆ ಕೆಲಸವನ್ನ ಮಾಡುತ್ತೆ ನಿಂತಿರುವ ವಾಹನದ ಬಗ್ಗೆಯೂ ಎಚ್ಚರಿಕೆ ಹೆದ್ದಾರಿಯಲ್ಲಿ ತಕ್ಷಣ ಕೊಡುತ್ತೆ.

ಸಿಗ್ನಲ್ ಈ ತಂತ್ರಜ್ಞಾನದ ಅತಿ ದೊಡ್ಡ ಲಾಭ ಸಿಗುವುದು ಚಳಿಗಾಲದ ಸಮಯದಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ಮತ್ತು ದಕ್ಷಿಣ ಮಲೆನಾಡು ಭಾಗಗಳಲ್ಲಿ ದಟ್ಟವಾದ ಮಂಜು ಕವಿದಾಗ ರಸ್ತೆಗಳು ಕಾಣಿಸುವುದೇ ಇಲ್ಲ ಈ ಅನುಭವ ನಿಮಗೂ ಆಗಿರುತ್ತೆ ಅಂತಹ ಸಮಯದಲ್ಲಿ ಮಂಚಿನಳೆಗೆ ಮರೆಯಾಗಿರುವ ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿ ಸರಣಿ ಅಪಘಾತಗಳು ಸಂಭವಿಸುತ್ತವೆ ಸಾವಿರಾರು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಇಂತಹ ಸನ್ನಿವೇಶದಲ್ಲಿ ಈ ವಿಟುವಿ ತಂತ್ರಜ್ಞಾನ ಜೀವದಾತನಾಗಲಿದೆ ಕಣ್ಣಿಗೆ ಮುಂದಿನ ವಾಹನ ಕಾಣಿಸದಿದ್ದರೂ ಕೂಡ ನಿಮ್ಮ ಕಾರಿನ ಸಿಸ್ಟಮ್ ಮುಂದೆ 50 ಮೀಟರ್ ದೂರದಲ್ಲಿ ವಾಹನವಿದೆ ವೇಗ ಕಡಿಮೆ ಮಾಡಿ ಅಂತ ಮುನ್ನೆಚ್ಚರಿಕೆಯನ್ನ ನೀಡ್ತಾ ಇರುತ್ತೆ ಮತ್ತೊಂದು ಪ್ರಮುಖ ಸನ್ನಿವೇಶ ಏನಂದ್ರೆ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿರುವ ಅಥವಾ ಪಾರ್ಕ್ ಮಾಡಲಾದ ವಾಹನಗಳು ರಾತ್ರಿ ವೇಳೆಯಲ್ಲಿ ಹೆದ್ದಾರಿ ಪಕ್ಕದಲ್ಲಿ ಲಾರಿಗಳನ್ನ ನಿಲ್ಿಸಿರುತ್ತಾರೆ ವೇಗವಾಗಿ ಬರುವ ಕಾರುಗಳಿಗೆ ಈ ನಿಂತಿರುವ ಲಾರಿಗಳು ಕಾಣಿಸದೆ ನೇರವಾಗಿ ಡಿಕ್ಕಿಯನ್ನ ಹೊಡಿತಾರೆ ಇಂತಹ ಸಂದರ್ಭದಲ್ಲಿನಿ ನಿಂತಿರುವ ಲಾರಿಯಲ್ಲಿರುವ ಬಿ ಟುವಿ ಡಿವೈಸ್ ಸಿಗ್ನಲ್ ಅನ್ನ ಕಳಿಸಿಬಿಡುತ್ತೆ. ನೀವು ಆ ಲಾರಿಯ ಸಮೀಪಕ್ಕೆ ಬರ್ತಾ ಇದ್ದಂತೆಯೇ ನಿಮ್ಮ ಕಾರು ನಿಮಗೆ ಅಲರ್ಟ್ ಅನ್ನ ಮಾಡುತ್ತೆ. ಇಷ್ಟೇ ಅಲ್ಲದೆ ಅಡ್ಡ ರಸ್ತೆಯಿಂದ ಅಥವಾ ಬ್ಲೈಂಡ್ ಸ್ಪಾಟ್ ನಿಂದ ಹಟಾತನೆ ಬರುವ ವಾಹನಗಳ ಬಗ್ಗೆಯೂ ಕೂಡ ಇದು ಮುನ್ಸೂಚನೆಯನ್ನ ಕೊಡುತ್ತೆ.

ಇದರಿಂದಾಗಿ ತಿರುವುಗಳಲ್ಲಿ ಅದರ ಕ್ರಾಸ್ಗಳಲ್ಲಿ ಸಂಭವಿಸುವ ಮುಖಾಮುಖಿ ಡಿಕೆಗಳನ್ನು ಕೂಡ ಸಂಪೂರ್ಣವಾಗಿ ತಳೆಯಬಹುದು 5000ರ ಕೋಟಿ ವೆಚ್ಚದಲ್ಲಿ ಯೋಜನೆ ಇನ್ನು ಒಂದೇ ವರ್ಷದಲ್ಲಿ ಕಾರ್ಯರೂಪಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇತೀಚಿಗೆ ನಡೆದ ರಾಜ್ಯ ರಸ್ತೆ ಸಾರಿಗೆ ಸಚಿವರ ವಾರ್ಷಿಕ ಸಭೆಯಲ್ಲಿ ಈ ಯೋಜನೆಯ ನೀಲಿ ನಕ್ಷೆಯನ್ನ ಬಿಡುಗಡೆ ಮಾಡಿದ್ದಾರೆ ರಸ್ತೆ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಅಂತ ಅವರು ಖಡಕ್ಕಾಗಿ ಹೇಳಿದ್ದಾರೆ ಈ ಯೋಜನೆಯನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ಸುಮಾರು 5000 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನ ಮೀಸಲಿಟ್ಟಿದೆ. ಸಚಿವರ ಪ್ರಕಾರ 2026ರ ಅಂತ್ಯದ ವೇಳೆಗೆ ಈ ತಂತ್ರಜ್ಞಾನವನ್ನ ಅಧಿಕೃತವಾಗಿ ಜಾರಿಗೆ ತರಲು ಸರ್ಕಾರ ಸಿದ್ಧತೆಯನ್ನ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಉತ್ಪಾದನೆಯಾಗುವ ಎಲ್ಲಾ ಹೊಸ ವಾಹನಗಳಲ್ಲಿ ಅಂದರೆ ಕಾರುಗಳಲ್ಲಿ ಈ ವಿಟುವಿ ವ್ಯವಸ್ಥೆಯನ್ನ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಇದು ಕೇವಲ ಐಶರಾಮಿ ಕಾರುಗಳಿಗೆ ಮಾತ್ರ ಸೀಮಿತವಾಗಿದೆ.

ಸಾಮಾನ್ಯ ಜನರ ವಾಹನಗಳಿಗೂ ಕೂಡ ಅನ್ವಯವಾಗುವಂತೆ ನಿಯಮವನ್ನ ರೂಪಿಸಲಾಗ್ತಾ ಇದೆ. ಸರ್ಕಾರವು ಈ ತಂತ್ರಜ್ಞಾನವನ್ನ ಈಗಿರುವ ಎಡಿಎಸ್ ವ್ಯವಸ್ಥೆಯೊಂದಿಗೆ ಜೋಡಿಸಲು ಯೋಜನೆಯನ್ನು ಹಾಕಿಕೊಂಡಿದೆ. ಇದರಿಂದ ಭಾರತದ ಸಂಚಾರ ವ್ಯವಸ್ಥೆ ವಿಶ್ವದ ಮುಂದುವರೆದ ದೇಶಗಳ ಸಾಲಿಗೆ ಸೇರಲಿದೆ ಬಸ್ಗಳಲ್ಲೂ ಬರಲಿದೆ ತಂತ್ರಜ್ಞಾನ. ಚಾಲಕನಿಗೆ ನಿತ್ಯ ಮಾಡಲು ಬಿಡಲ್ಲ ಅಲಾರಾಮ್ ಈ ಯೋಜನೆಯಲ್ಲಿ ಕೇವಲ ಸಣ್ಣ ವಾಹನಗಳಷ್ಟೇ ಅಲ್ಲ ಸಾರ್ವಜನಿಕ ಸಾರಿಗೆಯ ಬೆನ್ನುಲಬಾದಂತಹ ಬಸ್ಗಳಿಗೂ ಕೂಡ ಹೆಚ್ಚಿನ ಆಧ್ಯತೆಯನ್ನ ನೀಡಲಾಗಿದೆ. ಸಚಿವ ಗಡ್ಕರಿ ಯವರು ಕಳಪೆ ಬಸ್ ವಿನ್ಯಾಸದ ಬಗ್ಗೆ ಕಳವಳವನ್ನ ವ್ಯಕ್ತಪಡಿಸಿದ್ದಾರೆ ಕೇವಲ ಆರು ಅಪಘಾತಗಳಲ್ಲಿ 135 ಜನರು ಸಾವನಪ್ಪಿರುವುದು ಸರ್ಕಾರದ ಕಣ್ಣು ಕೆಂಪಾಗುವಂತೆ ಮಾಡಿದೆ. ಇದಕ್ಕಾಗಿ ಬಸ್ ಬಾಡಿ ಕೋಡನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲಾಗ್ತಾ ಇದೆ. ಇನ್ಮುಂದೆ ಬಸ್ಗಳಲ್ಲಿ ಕೇವಲ ಎಮರ್ಜೆನ್ಸಿ ಹ್ಯಾಮರ್ ಇದ್ದರೆ ಸಾಲದು ಅಲ್ಲಿ ಡ್ರೈವರ್ ಡ್ರೌಸಿನೆಸ್ ಡಿಟೆಕ್ಷನ್ ಸಿಸ್ಟಮ್ ಇರಲಿದೆ. ಅಂದ್ರೆ ಚಾಲಕನಿಗೆ ನಿದ್ರೆ ಬರ್ತಾ ಇದ್ದರೆ ಅಥವಾ ಆತ ಆಕಳಿಸ್ತಾ ಇದ್ದರೆ ಈ ಸಿಸ್ಟಮ್ ತಕ್ಷಣವೇ ಪತ್ತೆ ಹೆಚ್ಚಿ ಅಲರಾಮನ್ನ ಬಾರಿಸುತ್ತೆ. ಇದು ಚಾಲಕನನ್ನ ಎಚ್ಚರಿಸುವುದಲ್ಲದೆ ಪ್ರಯಾಣಿಕರ ಜೀವವನ್ನು ಕೂಡ ಉಳಿಸುತ್ತೆ. ಬಸ್ಗಳ ಸುರಕ್ಷತಾ ಗುಣಮಟ್ಟವನ್ನ ಹೆಚ್ಚಿಸುವುದು ಈ ಯೋಜನೆಯ ಅಭಿಜ್ಯ ಅಂಗವಾಗಿದೆ ಒಟ್ಟಾರೆಯಾಗಿ ಹೇಳುವುದಾದರೆ 2026ರ ಭಾರತದ ಸಾರಿಗೆ ಇತಿಹಾಸದಲ್ಲಿ ಒಂದು ಮೈಲಿಗಲಂತು ಸ್ಥಾಪನೆಯಾಗುತ್ತೆ.

ವಿಟುವಿ ತಂತ್ರಜ್ಞಾನವು ಕೇವಲ ಒಂದು ಉಪಕರಣವಲ್ಲ ಅದು ರಸ್ತೆಯ ಮೇಲೆ ಪ್ರಯಾಣಿಕರನ್ನ ರಕ್ಷಿಸುವ ಅದೃಶ್ಯ ಅಂಗರಕ್ಷಕ ಈ ತಂತ್ರಜ್ಞಾನ ಜಾರಿಗೆ ಬಂದ ನಂತರ ಭಾರತದ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಗಿ ಇಳಿಕೆಯಾಗಲಿದೆ ಇದು ತಜ್ಞರ ಅಭಿಪ್ರಾಯ ತಂತ್ರಜ್ಞಾನ ಎಷ್ಟು ಮುಂದುವರೆದರು ಚಾಲಕನ ಜಾಗರೂಕತೆ ಮತ್ತು ರಸ್ತೆ ನಿಯಮಗಳ ಪಾಲನೆ ಅತಿ ಮುಖ್ಯ ಆಗುತ್ತೆ ಸರ್ಕಾರ 5000 ಕೋಟಿ ಖರ್ಚು ಮಾಡಿ ಸುರಕ್ಷಿತ ವ್ಯವಸ್ಥೆಯನ್ನ ರೂಪಿಸುತ್ತಾ ಇದೆ ಅದನ್ನ ಗೌರವಿಸುವುದು ಮತ್ತು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಹೇಗೆ ಕೆಲಸ ಮಾಡಲಿದೆ ಕಾದು ನೋಡೋಣ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments