ಭಾರತದ ಸಮಯ ಪಾಲಕನಿಗೆ ಕೊನೆಯ ಮೊಳೆ ಹಚ್ಎಂಟಿ ವಾಚಸ್ ಸ್ಟ್ರೈಕ್ ಆಫ್ ಅರ್ಜಿಸಲ್ಲಿಕೆ ಆರು ದಶಕಗಳ ಹೆಚ್ಎಂಟಿ ಭವ್ಯ ಪಯಣಕ್ಕೆ ದಿ ಎಂಡ್ ಅದೊಂದು ಕಾಲವಿತ್ತು ಭಾರತದಲ್ಲಿ ದಲ್ಲಿ ಯಾರ ಕೈಯಲ್ಲಿ ನೋಡಿದರು ಕೂಡ ಹೆಚ್ಎಂಟಿ ವಾಚ್ ಮಾತ್ರ ಇರ್ತಾ ಇತ್ತು ಮದುವೆ ಇರಲಿ ಪದವಿ ಪ್ರಧಾನ ಇರಲಿ ಅಥವಾ ಮೊದಲ ಸಂಬಳ ಬಂದ ಖುಷಿ ಇರಲಿ ಪ್ರತಿಯೊಬ್ಬ ಇಂಡಿಯನ್ಸ್ನ ಫಸ್ಟ್ ಚಾಯ್ಸ್ ಹೆಚ್ಎಂಟಿ ವಾಚ್ ಆಗಿತ್ತು ದೇಶದ ಸಮಯ ಪಾಲಕ ಅಂತನೆ ಕರೆಸಿಕೊಳ್ಳುತ್ತಿದ್ದಂತಹ ಈ ಹೆಮ್ಮೆಯ ಸಂಸ್ಥೆ ಈಗ ಸಂಪೂರ್ಣವಾಗಿ ಇತಿಹಾಸದ ಪುಟ ಸೇರಲು ರೆಡಿಯಾಗಿದೆ ಸುಮಾರು ಆರು ದಶಕಗಳ ಕಾಲ ಭಾರತೀಯರ ಸಮಯವನ್ನ ಮಾಪನ ಮಾಡಿದ ಹಚ್ಎಂಟಿ ವಾಚಸ್ ಲಿಮಿಟೆಡ್ ಈಗ ಕಾನೂನಾತ್ಮಕವಾಗಿ ತನ್ನ ಅಸ್ತಿತ್ವವನ್ನೇ ಕಳೆದ ಇದೆ ಕೆಲ ದಿನಗಳ ಹಿಂದಷ್ಟೇ ಗಂಡ ಭೇರುಂಡ ವಾಚ್ ಅನ್ನ ರಿಲೀಸ್ ಮಾಡಿದ ಹೆಚ್ಎಂಟಿ ಈಗ ಸ್ಟ್ರೈಕ್ ಆಫ್ಗಾಗಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಅರ್ಜಿ ಒಂದನ್ನ ಸಲ್ಲಿಸಿದೆ ಅಂದರೆ ಎಲ್ಲಾ ದಾಖಲೆಗಳಿಂದ ಹೆಚ್ಎಂಟಿ ಯನ್ನ ತೆಗೆದು ಹಾಕಲು ಕೇಂದ್ರದ ಮುಂದೆ ಅರ್ಜಿಯನ್ನ ಹಾಕಿದ್ದು ಇನ್ನುಮುಂದೆ ಪೇಪರ್ನಲ್ಲೂ ಕೂಡ ಈ ಕಂಪನಿ ಅಸ್ತಿತ್ವದಲ್ಲಿ ಇರಲ್ಲ ಹಸಿರಿಗೆ ಈ ನಿರ್ಧಾರವನ್ನ ತೆಗೆದುಕೊಂಡಿದ್ದು ಯಾಕೆ ದಶಕಗಳ ಕಾಲ ಮಾರುಕಟ್ಟೆ ಆಳಿದ ಈ ಸಂಸ್ಥೆ ಇಷ್ಟು ದಯನೀಯ ಸ್ಥಿತಿಗೆ ತಲುಪಿದ್ದು ಹೇಗೆ ನೆಹರು ಅವರ ಕಾಲದ ಈ ಕನಸಿನ ಕಂಪನಿಯ ಏಳು ಬೀಳುಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಐತಿಹಾಸಿಕ ಕಂಪನಿಗೆ ಫೈನಲ್ ವಿಧಾಯ. ದಾಖಲೆಗಳಿಂದ ಹೆಸರು ಡಿಲೀಟ್ ಗೆ ಅರ್ಜಿ ಹೌದು ದೇಶದ ಟೈಮ್ ಕೀಪರ್ ಆಗಿದ್ದ ಹೆಚ್ಎಂಟಿ ವಾಚಸ್ ಲಿಮಿಟೆಡ್ ಗೆ ಅಂತಿಮ ಮಳೆ ಹೊಡೆಯಲಾಗಿದೆ. ಶೇರ್ ಮಾರ್ಕೆಟ್ಗೆ ಹಚ್ಎಂಟಿ ಲಿಮಿಟೆಡ್ ಮಾಹಿತಿಯನ್ನ ನೀಡಿದ್ದು ತನ್ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದಹೆಚ್ಎಂಟಿ ವಾಚಸ್ ಲಿಮಿಟೆಡ್ ಅನ್ನ ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 248ರ ಅಡಿಯಲ್ಲಿ ವಿಸರ್ಜನೆಯನ್ನ ಮಾಡಲು ಅರ್ಜಿ ಸಲ್ಲಿಸಲಾಗಿದೆ ಅಂತ ಮಾಹಿತಿಯನ್ನ ತಿಳಿಸಿದೆ. ಈ ಸ್ಟ್ರೈಕ್ ಆಫ್ ಪ್ರಕ್ರಿಯೆಯ ಅರ್ಥ ಬಹಳ ಸಿಂಪಲ್ ರಿಜಿಸ್ಟರ್ ಆಫ್ ಕಂಪನಿಸ್ ತನ್ನ ಅಧಿಕೃತ ದಾಖಲೆಗಳಿಂದ ಕಂಪನಿಯ ಹೆಸರನ್ನ ಕಿತ್ತು ಹಾಕುತ್ತೆ. ಇದು ಕಂಪನಿಯ ಕಾನೂನು ಅಸ್ತಿತ್ವಕ್ಕೆ ಹಾಕುವ ಫೈನಲ್ ನೆಲ್ 10 ವರ್ಷಗಳಿಂದ ಚಿಟುವಟಿಕೆ ಇಲ್ಲದೆ ನಿಂತಿದ್ದ ಈ ಸಂಸ್ಥೆಗೆ ಈಗ ಅಧಿಕೃತವಾಗಿ ಮುಕ್ತಿಯನ್ನ ನೀಡಲಾಗುತ್ತಿದೆ. 2016ರಲ್ಲಿ ಈ ಕಂಪನಿಯನ್ನ ಮುಚ್ಚಲು ಕೇಂದ್ರದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಅನುಮೋದನೆಯನ್ನ ನೀಡಿತ್ತು. ಈಗ ಆ ಪ್ರಕ್ರಿಯೆಯ ಕೊನೆಯ ಹಂತ ಪೂರ್ಣಗೊಂಡಿದೆ. 1961 ರಲ್ಲಿ ಶುರುವಾಯಿತು ಭಾರತದ ವಾಚ್ ಕ್ರಾಂತಿ. ಜಪಾನನ ಸಿಟಿಜನ್ ಜೊತೆ ಕೈಜೋಡಿಸಿದ್ದ ಹೆಚ್ಎಂಟಿ ಇನ್ನು ಹೆಚ್ಎಂಟಿ ವಾಚಸ್ನ ಇತಿಹಾಸವನ್ನ ಕೆದಕಿದರೆ ನಾವು 1961 ಕ್ಕೆ ಹೋಗ್ತ್ತೇವೆ ಆಗ ತಾನೇ ಸ್ವತಂತ್ರ ಭಾರತ ಕೈಗಾರಿಕ ಕ್ಷೇತ್ರದಲ್ಲಿ ದಾಪುಗಾಲನ್ನ ಹಾಕ್ತಾ ಇತ್ತು ಆಗಿನ ಪ್ರಧಾನಿ ನೆಹರು ಅವರ ಕನಸಿನಂತೆ ಭಾರತೀಯರಿಗೆ ಕೈಗಟ್ಟುಕುವ ದರದಲ್ಲಿ ಗುಣಮಟ್ಟದ ಕೈಗಡಿಯಾರಗಳನ್ನ ನೀಡುವ ಉದ್ದೇಶದೊಂದಿಗೆ ಹೆಚ್ಎಂಟಿ ವಾಚಸ್ ಜನ್ಮವನ್ನ ತಾಳ್ತು. ಇದಕ್ಕಾಗಿ ಹೆಚ್ಎಂಟಿ ಜಪಾನ್ನ ಖ್ಯಾತ ಸಿಟಿಜನ್ ವಾಚ್ ಕಂಪನಿ ಜೊತೆ ಟೆಕ್ನಿಕಲ್ ಪಾರ್ಟ್ನರ್ಶಿಪ್ ಮಾಡಿಕೊಂಡಿತ್ತು.
ಬೆಂಗಳೂರಿನಲ್ಲಿ ಭಾರತದ ಮೊದಲ ಮಣಿಕಟ್ಟು ಗಡಿಯಾರ ತಯಾರಿಕ ಘಟಕವನ್ನ ಸ್ಥಾಪನೆ ಮಾಡಲಾಯಿತು ಅಂದ್ರೆ ರಿಸ್ಟ್ ವಾಚ್ ಪ್ರೊಡಕ್ಷನ್ ಯೂನಿಟ್ ನಮ್ಮ ಬೆಂಗಳೂರಲ್ಲೇ ಶುರುವಾಯಿತು. 1963 ರಲ್ಲಿ ಪ್ರಧಾನಿ ನೆಹರು ಅವರು ಮೊದಲ ಬ್ಯಾಚ್ನ ಗಡಿಯಾರಗಳನ್ನ ಬಿಡುಗಡೆ ಮಾಡಿದಾಗ ಅದು ಭಾರತೀಯ ಉತ್ಪಾದನಾ ವಲಯದಲ್ಲಿ ಹೊಸ ಮೈಲಿಗಲಾಗಿತ್ತು. ಮೈಕ್ರೋ ಇಂಜಿನಿಯರಿಂಗ್ ಅಂದ್ರೆ ಏನು ಅಂತಲೇ ಗೊತ್ತಿಲ್ಲದ ಕಾಲದಲ್ಲಿ ಕೂದಲಿನ ಎಳೆಯಂತ ಸ್ಪ್ರಿಂಗ್ಗಳನ್ನ ತಯಾರಿಸುವ ತಂತ್ರಜ್ಞಾನವನ್ನ ಹೆಚ್ಎಂಟಿ ಭಾರತಕ್ಕೆ ತಂದಿತ್ತು ಪೈಲಟ್ ಜನತಾ ಸುಜಾತ ಮರೆಯಲಾಗದ ಮಾಡೆಲ್ಗಳು ಸೈನಿಕರಿಂದ ಹಿಡಿದು ಸಾಮಾನ್ಯರವರೆಗೆ ಹೆಚ್ಎಂಟಿ ಫೇವರೆಟ್ ಹೆಚ್ಎಂಟಿ ತಯಾರಿಸಿದ ಗಡಿಯಾರಗಳು ಕೇವಲ ಸಮಯ ತೋರಿಸುವ ಯಂತ್ರಗಳು ಆಗಿರಲಿಲ್ಲ ಅವು ಪ್ಯೂರ್ ಎಮೋಷನ್ ಗಳಾಗಿದ್ವು 1965 ರಲ್ಲಿ ರಿಲೀಸ್ ಆದ ಪೈಲಟ್ ಎಂಬ ಮಾಡೆಲ್ ವಾಯುಪಡೆಯ ಅಧಿಕಾರಿಗಳು ಹಾಗು ಸಾಹಸಿಗಳ ನೆಚ್ಚಿನ ಗಡಿಯಾರವಾಗಿತ್ತು ಇದಲ್ಲದೆ ಜನತಾ ಎಂಬ ವಾಚ್ ದೇಶದ ಗಮನವನ್ನ ಸೆಳೆದಿತ್ತು ಹೆಸರೇ ಸೂಚಿಸುವಂತೆ ಇದು ಸಾಮಾನ್ಯ ಜನರ ವಾಚ್ ಆಗಿತ್ತು ಅತ್ಯಂತ ಸರಳ ಮತ್ತು ಗಟ್ಟಿಮುಟ್ಟಾದ ಮೆಕಾನಿಕಲ್ ಮೂಮೆಂಟ್ ಇದರ ಸ್ಪೆಷಾಲಿಟಿ ಇನ್ನು ಸುಜಾತ ಎಂಬ ಗಡಿಯಾರ ಮಹಿಳೆಯರಿಗಾಗಿ ತಯಾರಿಸಲಾಗಿತ್ತು.
ನೆಹರು ಅವರ ಮೊದಲ ಬ್ಯಾಚ್ನಲ್ಲಿ ಬಿಡುಗಡೆಯಾದ ಸುಂದರ ಮಾಡೆಲ್ 1974 ರಲ್ಲಿ ಬಂದ ರಜತ್ ಎಂಬ ಭಾರತದ ಮೊದಲ ಆಟೋಮೆಟಿಕ್ ಗಡಿಯಾರ ದೇಶದ ಜನರನ್ನ ಆಕರ್ಷಣೆ ಮಾಡಿತ್ತು ಇವಷ್ಟೇ ಅಲ್ಲ ಕನಕ ಕೋಹಿನೂರು ಸೋನಾ ಹೀಗೆ ನೂರಾರು ಮಾಡೆಲ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. 1970 ಮತ್ತು 80ರ ದಶಕದಲ್ಲಿ ಹೆಚ್ಎಂಟಿ ವಾಚಸ್ ನೂರಕ್ಕೂ ಹೆಚ್ಚು ದೇಶಗಳಿಗೆ ರಪ್ತ ಆಗ್ತಾ ಇತ್ತು. ಬೆಂಗಳೂರು ತುಮಕೂರು ಶ್ರೀನಗರ ಮತ್ತು ಉತ್ತರಾಖಾಂಡದ ರಾಣಿಬಾಗ್ನಲ್ಲಿ ಬೃಹತ್ ಕಾರ್ಖಾನೆಗಳು ಕೂಡ ತೆಲೆ ಎತ್ತಿದವು. ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ರಾಜ್ಯ ಲಾಂಚನ ಗಂಡ ಬೇರುಂಡ ಮಾಡೆಲ್ನ ಅಚ್ಚ ಕನ್ನಡದ ಗಡಿಯಾರವನ್ನು ಕೂಡ ಹೆಚ್ಎಂಟಿ ರಿಲೀಸ್ ಮಾಡಿತ್ತು. ಆದರೆ ಈಗ ಎಲ್ಲವೂ ನೆನಪು ಮಾತ್ರ ಹೇಗಿತ್ತು ಗೊತ್ತಾ ಎಚ್ ಎಂಟಿ ವಾಚರ್ಸ್ ಪ್ರಭಾವ ದೇಶದ ಉತ್ಪಾದನಾ ನೀತಿಯನ್ನೇ ಬದಲಿಸಿದ್ದ ಸಂಸ್ಥೆ ಇನ್ನು ಎಚ್ ಎಂಟಿ ಕೇವಲ ಒಂದು ಕಂಪನಿ ಆಗಿರಲಿಲ್ಲ ಅದು ಭಾರತದ ಸ್ವಾವಲಂಬನೆಯ ಸಂಕೇತವಾಗಿತ್ತು ನೆಹರು ಅವರ ಆಮದು ಪರ್ಯಾಯ ನೀತಿಯಡಿ ವಿದೇಶಿ ವಾಚ್ಗಳ ಮೇಲಿನ ಅವಲಂಬನೆ ತಪ್ಪಿಸಲು ಈ ಸಂಸ್ಥೆಗೆ ಸಂಪೂರ್ಣ ಬೆಂಬಲವನ್ನು ನೀಡಲಾಗಿತ್ತು ಮೆಕಾನಿಕಲ್ ಗಡಿಯಾರಗಳ ತಯಾರಿಕೆಯಲ್ಲಿ ಬೇಕಾಗುವ ಮೇನ್ ಸ್ಟ್ರಿಂಗ್ ಹೇರ್ ಸ್ಟ್ರಿಂಗ್ ಮತ್ತು ಶಾಕ್ ಅಬ್ಸಾರ್ಬರ್ ಗಳನ್ನ 1975ರ ವೇಳೆಗೆ ಹೆಚ್ಎಂಟಿ ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸಲು ಶುರು ಮಾಡಿತ್ತು. ಇದು ಭಾರತದ ರಕ್ಷಣೆ ಮತ್ತು ರೈಲ್ವೆ ಕ್ಷೇತ್ರಗಳಿಗೆ ಬೇಕಾದ ನಿಖರ ಇಂಜಿನಿಯರಿಂಗ್ ಕೌಶಲ್ಯವನ್ನ ಬೆಳೆಸಲು ನೆರವಾಯಿತು ದೇಶಾಧ್ಯಂತ ಕಾರ್ಖಾನೆಗಳನ್ನ ಹರಡುವ ಮೂಲಕ ಪ್ರಾದೇಶಿಕ ಅಭಿವೃದ್ಧಿಗೂ ಈ ಸಂಸ್ಥೆ ಕಾರಣವಾಗಿತ್ತು. 2500 ಕೋಟಿ ರೂಪಾಯಿ ನಷ್ಟ ಸ್ಪರ್ಧೆಗೆ ತತ್ತರಿಸಿದ ಸಂಸ್ಥೆ.
2016 ರಲ್ಲಿ ಉತ್ಪಾದನಾ ಘಟಕಗಳ ಬಾಗಿಲು ಕ್ಲೋಸ್. ಆದರೆ 1991ರ ನಂತರ ಭಾರತದ ಆರ್ಥಿಕ ನೀತಿ ಸಂಪೂರ್ಣ ಬದಲಾಯಿತು. ಮಾರುಕಟ್ಟೆ ಲಿಬರಲ್ ಆಯ್ತು ವಿದೇಶಿ ಬ್ರಾಂಡ್ಗಳು ಮತ್ತು ಆಧುನಿಕ ಕ್ವಾಟ್ಸ್ ವಾಚ್ಗಳು ಭಾರತಕ್ಕೆ ಲಗ್ಗೆ ಇಟ್ಟವು. ಬದಲಾದ ಕಾಲಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನ ಮತ್ತು ಮಾರ್ಕೆಟಿಂಗ್ ಅಳವಡಿಸಿಕೊಳ್ಳುವಲ್ಲಿ ಹೆಚ್ಎಂಟಿ ಎಡವಿತು. ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದರಿಂದ ನಿರ್ಧಾರಗಳನ್ನ ತೆಗೆದುಕೊಳ್ಳುವಲ್ಲಿ ವಿಳಂಬವಾಯಿತು ಪರಿಣಾಮ ಸಂಸ್ಥೆಯ ನಷ್ಟ ಏರುತ್ತಲೆ ಹೋಯಿತು. ಸುಮಾರು 2500 ಕೋಟಿ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದ ಹೆಚ್ಎಂಟಿ ವಾಚಸ್ ಅನ್ನ ಮುಚ್ಚಲು 2016 ರಲ್ಲಿ ಕೇಂದ್ರ ಸರ್ಕಾರ ತೀರ್ಮಾನಿಸಿತು. ಬೆಂಗಳೂರು ತುಮಕೂರು ರಾಣಿಬಾಗ್ ಮತ್ತು ಶ್ರೀನಗರದ ಘಟಕಗಳು ಕಾರ್ಯಾಚರಣೆಯನ್ನು ಕೂಡ ನಿಲ್ಲಿಸಿದ್ದವು. ಉದ್ಯೋಗಿಗಳಿಗೆ ವಿಆರ್ಎಸ್ ರಾಣಿಬಾಗ್ನಲ್ಲಿ ಯಂತ್ರಗಳ ಮೌನ 427 ಕೋಟಿ ರೂಪಾಯಿ ಪರಿಹಾರ ನೀಡಿ ಕೈ ತೆಳೆದುಕೊಂಡ ಸರ್ಕಾರ ಕಂಪನಿ ಮುಚ್ಚುವ ನಿರ್ಧಾರ ಬಂದಾಗ ಸುಮಾರು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ರು ಸರ್ಕಾರ 427 ಕೋಟಿ ರೂಪಾಯಿ ಸಹಾಯದಾನವನ್ನ ನೀಡಿ ಅವರಿಗೆ ಸ್ವಯಂ ನಿವೃತ್ತಿ ಯೋಜನೆಯನ್ನ ಘೋಷಣೆ ಮಾಡಿತು ಸುಮಾರು 40ರಿಂದ 65 ತಿಂಗಳ ಸಂಬಳವನ್ನ ಪರಿಹಾರವಾಗಿ ನೀಡಿ ಉದ್ಯೋಗಿಗಳನ್ನ ಬೀಳಿಕೊಡಲಾಯಿತು ಉತ್ತರಾಖಂಡದ ರಾಣಿಬಾ ಘಟಕವು 2016ರ ಅಂತ್ಯದವರೆಗೆ ಹೋರಾಡಿ ಕೊನೆಗೆ ಸೈಲೆಂಟ್ ಆಯಿತು ಅಲ್ಲಿನ ಉದ್ಯೋಗಿಗಳು ಸಂಬಳಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ರು ನಂತರ 2019ರ ವೇಳೆಗೆ ಎಲ್ಲರಿಗೂ ಬಾಕಿ ಹಣವನ್ನ ಪಾವತಿಸಿ ಪ್ರಕ್ರಿಯೆಯನ್ನ ಮುಗಿಸಲಾಯಿತು.
ಆ ಕಾರ್ಖಾನೆಗಳು ಪಾಳು ಬಿದ್ದಿವೆ ಅಥವಾ ಬೇರೆ ಉದ್ದೇಶಗಳಿಗೆ ಬಳಕೆಯಾಗ್ತಿವೆ ಇನ್ನು ಹೆಚ್ ಎಂಟಿ ಕಾಲ ನೆನಪು ಮಾತ್ರ ಮ್ಯೂಸಿಯಂನಲ್ಲಿ ಮಾತ್ರ ಕಾಣಲಿದೆ ಟೈಮ್ ಕೀಪರ್ ಈಗ 2026 ರಲ್ಲಿ ನಡೆದಿರುವ ಈ ಸ್ಟ್ರೈಕ್ ಆಫ್ ಪ್ರಕ್ರಿಯೆಯು ಕೇವಲ ಒಂದು ಫಾರ್ಮಾಲಿಟಿ ಮಾತ್ರ ಕಂಪನಿ ಈಗಾಗಲೇ 10 ವರ್ಷಗಳ ಹಿಂದೆಯೇ ನಿಷ್ಕ್ರಿಯವಾಗಿತ್ತು ಇಂದು ಬೆಂಗಳೂರಿನಲ್ಲಿ ಕೇವಲ ಒಂದು ರಿಟೇಲ್ ಔಟ್ಲೆಟ್ ಮತ್ತು ಒಂದು ಹೆರಿಟೇಜ್ ಮ್ಯೂಸಿಯಂ ಮಾತ್ರ ಹೆಚ್ಎಂಟಿಯ ಕಥೆಯನ್ನ ಹೇಳಲು ಬಾಕಿ ಇವೆ ಹಳೆ ಮಾಡೆಲ್ಗಳು ಇನ್ನು ಕಲೆಕ್ಟರ್ಗಳ ಬಳಿ ಇವೆ ವಿಂಟೇಜ್ ಹೆಚ್ಎಂಟಿ ವಾಚ್ಗಳಿಗೆ ಇಂದಿಗೂ ಭಾರಿ ಬೇಡಿಕೆ ಇದೆ ಆದರೆ ಹೊಸದಾಗಿ ಗಡಿಯಾರ ತಯಾರಿಸುವ ಘಟಕಗಳು ಇನ್ನು ಮರಿಚಿಕ್ಕೆ ಮಾತ್ರ ಹಚ್ಎಂಟಿ ಲಿಮಿಟೆಡ್ ತನ್ನ ಇತರ ಘಟಕಗಳ ಮೂಲಕ ಡಿಫೆನ್ಸ್ ಮತ್ತು ಇಂಡಸ್ಟ್ರಿಯಲ್ ಮಷೀನ್ ಟೂಲ್ಸ್ ತಯಾರಿಕೆಯನ್ನ ಮುಂದುವರಿಸಲಿದೆ ಆದರೆ ವಾಚಸ್ ಎಂಬ ಅಧ್ಯಾಯ ಮಾತ್ರ ಈಗ ಅಧಿಕೃತವಾಗಿ ಇತಿಹಾಸದ ಪುಟವನ್ನ ಸೇರಿದೆ 1953 ರಲ್ಲಿ ಶುರುವಾಗಿತ್ತು ಹಚ್ಎಂಟಿ ಲಿಮಿಟೆಡ್ ವಾಚಸ್ ಟ್ರ್ಾಕ್ಟರ್ ಪ್ರಿಂಟರ್ ಬೇರಿಂಗ್ ತಯಾರಿಕೆ ಇನ್ನು ಹಚ್ಎಂಟಿ ವಾಚಸ್ ಕಂಪನಿಯ ಮಾತೃ ಸಂಸ್ಥೆ ಹಿಂದುಸ್ತಾನ್ ಮಷೀನ್ ಟೂಲ್ಸ್ ಭಾರತದ ಕೈಗಾರಿಕ ವಲಯದ ಮಾತೃ ಯಂತ್ರಗಳ ತಯಾರಕ ಅಂತಾನೆ ಹೆಸರಾಗಿತ್ತು 1953 ರಲ್ಲಿ ಬೆಂಗಳೂರಿನಲ್ಲಿ ತನ್ನ ಪ್ರಯಾಣ ಆರಂಭಿಸಿತು.
ದೇಶದ ಸ್ವಾತಂತ್ರೋತ್ತರ ಕೈಗಾರಿಕ ಬೆಳವಣಿಗೆಗೆ ಶಕ್ತಿ ತುಂಬುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಸಂಸ್ಥೆಯನ್ನ ಸ್ಥಾಪನೆ ಮಾಡ್ತು. ಆರಂಭದಲ್ಲಿ ಕೇವಲ ಯಂತ್ರೋಪಕರಣಗಳಿಗೆ ಸೀಮಿತವಾಗಿದ ಹೆಚ್ಎಂಟಿ 1960ರ ದಶಕದಲ್ಲಿ ವಾಚಸ್ ಟ್ರ್ಯಾಕ್ಟರ್ಗಳು ಮುದ್ರಣ ಯಂತ್ರಗಳು ಮತ್ತು ಬೇರಿಂಗ್ಗಳ ತಯಾರಿಕೆಗೆ ವಿಸ್ತರಿಸಿತು. ಆದರೆ ಖಾಸಗಿ ಕಂಪನಿಗಳ ಪೈಪೋಟಿಯ ಕಾರಣಕ್ಕೆ ಹೆಚ್ಎಂಟಿ ಲಿಮಿಟೆಡ್ ತನ್ನ ಪ್ರಾಮುಖ್ಯತೆಯನ್ನ ಕಳೆದುಕೊಳ್ಳುತ್ತಾ ಬರ್ತಾ ಇದೆ. ಪ್ರಸ್ತುತ ಹಚ್ಎಂಟಿ ಲಿಮಿಟೆಡ್ ತನ್ನ ಗತ ವೈಭವಕ್ಕೆ ಮರಳಲು ಯತ್ನಿಸುತ್ತಾ ಇದೆ. ಈಗ ಇದು ಮುಖ್ಯವಾಗಿ ಆಹಾರ ಸಂಸ್ಕರಣ ಯಂತ್ರಗಳು ರಕ್ಷಣಾ ವಲಯಕ್ಕೆ ಅಗತ್ಯವಾದ ಇಂಜಿನಿಯರಿಂಗ್ ಉಪಕರಣಗಳು ಮತ್ತು ರಪ್ತು ವ್ಯವಹಾರದ ಮೇಲೆ ಗಮನವನ್ನ ಹರಿಸಿದೆ. ಹಚ್ಎಂಟಿ ಮಷೀನ್ ಟೂಲ್ಸ್ ಮತ್ತು ಹೆಚ್ಎಂಟಿ ಇಂಟರ್ನ್ಯಾಷನಲ್ ಸಧ್ಯ ಕಾರ್ಯವನ್ನ ನಿರ್ವಹಿಸುತ್ತಿರುವ ಪ್ರಮುಖ ಅಂಗ ಸಂಸ್ಥೆಗಳು ಆಗಿವೆ. ಒಟ್ಟನಲ್ಲಿ ಟೈಮ್ ತಕ್ಕಂತೆ ಬದಲಾಗದಿದ್ದರೆ ಎಂತಹ ಬೃಹತ್ ಸಂಸ್ಥೆ ಕೂಡ ಮಣ್ಣು ಪಾಲಾಗುತ್ತೆ ಎಂಬುದಕ್ಕೆ ಹೆಚ್ಎಂಟಿ ಒಂದು ದೊಡ್ಡ ಎಕ್ಸಾಂಪಲ್ ಒಂದು ಕಾಲದಲ್ಲಿ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯಾಗಿದ್ದ ಜನತಾ ಮತ್ತು ಪೈಲಟ್ ವಾಚ್ಗಳು ಈಗ ಕೇವಲ ನೆನಪಾಗಿ ಉಳಿಯಲಿವೆ.


