ಬೆಳಗಾವಿ ಸಹೋದರರ ಹೊಸ ಅವಿಷ್ಕಾರ ಡೆಡ್ಲಿ ಲೇಸರ್ ಕಂಡುಹಿಡಿದ ಅಂತ ಬಾಸ್ ಶತ್ರುಗಳ ಡ್ರೋನ್ ಕ್ಷಣಾರ್ಥದಲ್ಲಿ ಹಾಲಿವುಡ್ನ ಸೈನ್ಸ್ ಫಿಕ್ಷನ್ ಸಿನಿಮಾಗಳಲ್ಲಿ ನೀವು ನೋಡಿರ್ತೀರಿ ಶತ್ರುಗಳ ವಿಮಾನ ಅಥವಾ ಕ್ಷಿಪಣಿಗಳು ಕ್ಷಣಾರ್ಧದಲ್ಲಿ ಕೇವಲ ಒಂದು ಬೆಳಕಿನ ಕಿರಣಕ್ಕೆ ಭಸ್ಮವಾಗಿ ಹೋಗುತ್ತೆ ಯಾವುದೇ ಗುಂಡುಗಳ ಸದ್ದಿಲ್ಲ ಯಾವುದೇ ಹೊಗೆ ಇಲ್ಲ ಯಾವುದೇ ಒಂದು ಲೇಸರ್ ಕಿರಣ ಇಡೀ ಯುದ್ಧದ ದಿಕ್ಕನ್ನೇ ಬದಲಿಸಿಬಿಡುತ್ತೆ ಇಷ್ಟು ದಿನ ಇದು ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತ ಎಂದುಕೊಂಡಿದ್ದ ನಮಗೆ ಈಗ ಅಚ್ಚರಿಯ ಜೊತೆಗೆ ಖುಷಿಯ ಸುದ್ದಿ ಹೊರಬಿದ್ದೆ ಹೌದು ಸ್ಟಾರ್ ವಾರ್ಸ್ ಮಾದರಿಯ ಅತ್ಯಾಧುನಿಕ ಲೇಸರ್ ಅಸ್ತ್ರ ಈಗ ನಮ್ಮ ಕರ್ನಾಟಕದ ಮಣ್ಣಿನಲ್ಲಿ ಸಿದ್ಧವಾ ವಾಗಿದೆ ಕುಂದಾನಗರಿ ಬೆಳಗಾವಿಯ ಸ್ಟಾರ್ಟಪ್ ಕಂಪನಿಯೊಂದು ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದೆ.
ಸರ್ಕಾರಿ ಸಂಸ್ಥೆಗಳಿಗೂ ಸವಾಲು ಹಾಕುವಂತೆ ಖಾಸಿಗೆ ವಲಯದಲ್ಲಿ ಮೊದಲ ಬಾರಿಗೆ ಇಂತಹ ಡೆಡ್ಲಿ ಲೇಸರ್ ವೆಪನ್ ಸಿದ್ಧಪಡಿಸಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಈ ರೋಚಕ ಸಾಧನೆಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ಬೆಳಗಾವಿಯ ನೆಲದಲ್ಲಿ ರಕ್ಷಣಾ ಕ್ರಾಂತಿ ವಿಶ್ವದ ಬಲಿಷ್ಠ ದೇಶಗಳಾದ ಅಮೆರಿಕಾ ಇಸ್ರೇಲ್ ಮತ್ತು ಚೀನಾಗಳು ಈಗ ಡೈರೆಕ್ಟ್ ವೆಟ್ ಎನರ್ಜಿ ವೆಪನ್ಸ್ ಅಂದರೆ ಲೇಸರ್ ಅಸ್ತ್ರಗಳ ಬಳಕೆಗೆ ಹೆಚ್ಚು ಒತ್ತು ನೀಡುತ್ತಿವೆ. ಇಂತಹ ಕಾಲಘಟ್ಟದಲ್ಲಿ ಭಾರತದ ಒಂದು ಸಣ್ಣ ನಗರದಿಂದ ಇಡೀ ದೇಶವೇ ಬೆರಗಾಗುವಂತ ಸುದ್ದಿ ಬಂದಿದೆ. ಬೆಳಗಾವಿ ಮೂಲದ ಕಾರ್ಬೈನ್ ಸಿಸ್ಟಮ್ಸ್ ಎಂಬ ಏರೋಸ್ಪೇಸ್ ಮತ್ತು ಡಿಫೆನ್ಸ್ ಸ್ಟಾರ್ಟಪ್ ಹಾಲಿವುಡ್ ಶೈಲಿಯ ಲೇಸರ್ ಅಸ್ತ್ರವನ್ನ ಅಭಿವೃದ್ಧಿ ಪಡಿಸಿದೆ. ಇದರ ಹೆಸರು ಹರ ಎಂಕೆಒನ್ ಸಹೋದರರ ಕೈಯಲ್ಲಿ ಅರಳಿದ ಅಸ್ತ್ರ ಈ ಅದ್ಭುತ ಸಾಧನೆಯ ಹಿಂದೆ ಇರುವುದು ಬೆಳಗಾವಿಯ ಇಬ್ಬರು ಸಹೋದರರು ಗಿರೀಶ್ ಜೋಶಿ ಮತ್ತು ಕೇದರ್ ಜೋಶಿ ಗಿರೀಶ್ ರವರು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಪದವಿಧರರಾದರೆ ಕೇದರ್ ರವರು ಎನ್ಐಟಿಕೆ ಸುರತ್ಕಲ್ನ ಬೌತ ವಿಜ್ಞಾನಿ 2023ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ ಇವರು ಕೇವಲ ಮೂರು ವರ್ಷಗಳ ಅವಧಿಯಲ್ಲಿ ಭಾರತದ ರಕ್ಷಣಾ ಇತಿಹಾಸದಲ್ಲಿ ಯಾರು ಮಾಡದ ಸಾಧನೆ ಮಾಡಿದ್ದಾರೆ.
ರಕ್ಷಣಾ ಸಂಶೋಧನೆ ಎಂದರೆ ಕೇವಲ ಡಿಆರ್ಡಿಓ ಮಾತ್ರ ಎಂಬ ನಂಬಿಕೆಯನ್ನ ಈ ಯುವಕರು ಬದಿಗೊತ್ತಿದ್ದಾರೆ ಏನಿದು ಹೊರ ಎಂಕೆ ಒನ್ ಪ್ಲೇಸರ್ ಅಸ್ತ್ರ ಕ್ಷಣಾರ್ಥದಲ್ಲಿ ಡ್ರೋನ್ಗಳು ಬಸ್ಮ ಇದು ನೋಡಲು ಒಂದು ಟೇಬಲ್ ಮೇಲೆ ಇಡಬಹುದಾದ ಸಣ್ಣ ಉಪಕರಣದಂತೆ ಕಂಡರೂ ಇದರ ತಾಕತ್ತು ಮಾತ್ರ ಭೀಕರವಾಗಿದೆ ಇದು 10 ಕಿಲೋವಾಟ್ ಸಾಮರ್ಥ್ಯದ ಲೇಸರ್ ಕಿರಣಗಳನ್ನ ಹೊರಹೊಮ್ಮಿಸುತ್ತದೆ ಇದು ಹೇಗೆ ಕೆಲಸ ಮಾಡುತ್ತದೆ ಎಂದರೆ ಹತ್ತಾರು ಸಣ್ಣ ಲೇಸರ್ ಕಿರಣಗಳನ್ನ ಒಂದೆಡೆ ಸೇರಿಸಿ ಒಂದು ಪ್ರಬಲವಾದ ಬೀಮನ್ನ ಸೃಷ್ಟಿಸಲಾಗುತ್ತದೆ ಈ ಬೆಳಕಿನ ಕಿರಣವು ಶತ್ರುಗಳ ಡ್ರೋನ್ ಅಥವಾ ಕ್ಷಿಪಣಿಯ ಮೇಲೆ ಬಿದ್ದಾಗ ಅಲ್ಲಿ ಅತೀವವಾದ ಉಷ್ಣತೆ ಸೃಷ್ಟಿಯಾಗಿ ಆ ಕ್ಷಿಪಣಿ ಅಥವಾ ಡ್ರೋನ್ ಗಾಳಿಯಲ್ಲಿ ಕರಗಿ ಹೋಗುತ್ತದೆ ಅಥವಾ ಸ್ಪೋಟಗೊಳ್ಳುತ್ತದೆ ಇದರಲ್ಲಿ ಕೋಹೆರೆಂಟ್ ಬೀಮ್ ಕಂಬೈನಿಂಗ್ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನ ಬಳಸಲಾಗಿದೆ.
ಈ ಅಸ್ತ್ರವು ಒಂದರಿಂದಎರಡು ಕಿಲೋಮೀಟ ದೂರದಲ್ಲಿರುವ ಯಾವುದೇ ಹಾರುವ ವಸ್ತುವನ್ನ ಕ್ಷಣಾರ್ಥದಲ್ಲಿ ಹೊಡೆದುಳಿಸಬಲ್ಲದು ಅತಿ ದೊಡ್ಡ ವಿಶೇಷವೆಂದರೆ ಇದಕ್ಕೆ ಸಾಂಪ್ರದಾಯಿಕ ಗುಂಡುಗಳು ಅಥವಾ ಮದ್ದು ಗುಂಡುಗಳ ಅಗತ್ಯವಿಲ್ಲ ಕೇವಲ ವಿದ್ಯುತ್ ಶಕ್ತಿಯಿಂದ ಇದು ಕೆಲಸ ಮಾಡುತ್ತದೆ. ಹರ ಎಂಕೆಒನ್ ಯಶಸ್ವಿ ಕಾರ್ಯಚರಣೆ ಯಾಕೆ ಈ ಅಸ್ತ್ರ ಭಾರತಕ್ಕೆ ಮುಖ್ಯ ಇತ್ತೀಚಿಗೆ ಈ ತಂಡವು ಹರ ಎಂಕೆಒ ನ ಪ್ರಾಯೋಗಿಕ ಪರೀಕ್ಷೆಯನ್ನ ಬೆಳಗಾವಿಯಲ್ಲಿ ಯಶಸ್ವಿಯಾಗಿ ನಡೆಸಿವೆ ಒಳಾಂಗಣದಲ್ಲಿ ನಡೆದ ಈ ಪರೀಕ್ಷೆಯಲ್ಲಿ ಲೇಸರ್ ಕಿರಣದ ಸ್ಥಿರತೆ ಗುರಿಯನ್ನ ತಲುಪುವ ವೇಗ ಮತ್ತು ಉಷ್ಣತೆಯನ್ನ ಅಳೆಯಲಾಯಿತು ಈ ಪರೀಕ್ಷೆಯಲ್ಲಿ ಹರಎಂಕೆಒ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದೆಎಐ ಚಾಲಿತ ಬಿ ಮಾನಿಟರಿಂಗ್ ಸಿಸ್ಟಂ ಮೂಲಕ ಲೇಸರ್ ಅನ್ನ ಅತ್ಯಂತ ನಿಖರವಾಗಿ ಗುರಿಯತ್ತ ಹಾರಿಸುವುದು ಈ ಅಸ್ತ್ರದ ಹೆಗ್ಗಳಿಕೆ 2025ರ ಬೆಳಿಗ್ಗೆ ಡ್ರೋನ್ ದಾಳಿಗಳ ಭೀತಿ ಜಗತ್ತಿನ ಅದ್ಯಂತ ಹೆಚ್ಚಾಗಿತ್ತು ಸಣ್ಣ ಸಣ್ಣ ಡ್ರೋನ್ಗಳನ್ನ ಹೊಡೆದುಳಿಸಲು ಕೋಟಿಗಟ್ಟಲೆ ಬೆಲೆಯ ಕ್ಷಿಪಣಿಗಳನ್ನ ಬಳಸುವುದು.
ಆರ್ಥಿಕವಾಗಿ ನಷ್ಟ ಆದರೆ ಈ ಲೇಸರ್ ಅಸ್ತ್ರವು ಕೇವಲ ಕೆಲವೇ ರೂಪಾಯಿಗಳ ವೆಚ್ಚದಲ್ಲಿ ಶತ್ರುಗಳ ಡ್ರೋನ್ ಪಡೆಯನ್ನ ನಾಶಪಡಿಸಬಹುದು ಜೋಷಿ ಸಹೋದರರು ಈ ಅಗತ್ಯವನ್ನ ಮನಗಂಡು ಯಾವುದೇ ದೊಡ್ಡ ಫಂಡಿಂಗ್ ಇಲ್ಲದೆ ಸ್ವಂತ ಬಲದ ಮೇಲೆ ಬೂಟ್ ಸ್ಟ್ರಾಪ್ ಇಂಜಿನಿಯರಿಂಗ್ ಮೂಲಕ ಇದನ್ನ ಸಿದ್ಧಪಡಿಸಿದ್ದಾರೆ ಬೆಳಗಾವಿಯಲ್ಲಿ ಭಾರತದ ಹೊಸ ಡಿಫೆನ್ಸ್ ಹಬ್ ಇಷ್ಟು ದಿನ ಬೆಳಗಾವಿ ಅಂದರೆ ಕೈಗಾರಿಕೆಗಳಿಗೆ ಪ್ರಸಿದ್ಧವಾಗಿತ್ತು ಆದರೆ ಕಾರ್ಬನ್ ಸಿಸ್ಟಮ್ಸ್ ಸಾಧನೆಯಿಂದ ಬೆಳಗಾವಿ ಈಗ ದೇಶದ ರಕ್ಷಣಾ ತಂತ್ರಜ್ಞಾನದ ನಕ್ಷೆಯಲ್ಲಿ ಸ್ಥಾನ ಪಡೆದಿದೆ ಸಂಸ್ಥೆಯು ಈಗ ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಲೇಸರ್ ಸಂಶೋಧನ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ ಇದು ಕೇವಲ ರಕ್ಷಣತಂತ್ರಕ್ಕೆ ಮಾತ್ರವಲ್ಲದೆ ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಅಣುಶಕ್ತಿ ಸಂಶೋಧನೆಯನ್ನ ಬಳಕೆಯಾಗುವ ಮೆಗಾಬಿಟ್ ಸಾಮರ್ಥ್ಯದ ಲೇಸರ್ ಸೃಷ್ಟಿಸುವ ಗುರಿ ಹೊಂದಿದೆ ಇನ್ನು ಇವರ ಮುಂದಿನ ಗುರಿ ಏನು ಅನ್ನೋದನ್ನ ನೋಡೋದಾದರೆ ಜೋಶಿ ಸಹೋದರರ ಕನಸು ಇಲ್ಲಿಗೆ ನಿಂತಿಲ್ಲ ಅವರು ಈಗ ಮೆಗಾವೆಟ್ ಸಾಮರ್ಥ್ಯದ ಲೇಜರ್ ಸಿಸ್ಟಮಗಳು ಮತ್ತು ಸೂಪರ್ ಕಂಟಿನ್ಯೂ ಫ್ರೀ ಎಲೆಕ್ಟ್ರಾನ್ ಎಲೇಸರ್ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ.
ಇದು ಭಾರತದ ಮುಂದಿನ ತಲೆಮಾರಿನ ರಕ್ಷಣ ವ್ಯವಸ್ಥೆಗೆ ಬೆನ್ನೆಲುಬಾಗಲಿದೆ. ನಾವು ಕೇವಲ ಪ್ರಸ್ತಾವನೆಗಳನ್ನ ಬರೆಯುವ ಸಮಯ ಮುಗಿದಿದೆ. ಈಗ ಏನನ್ನಾದರೂ ಕಟ್ಟಿ ತೋರಿಸುವ ಸಮಯ ಬಂದಿದೆ ಎಂಬ ಈ ಸಹೋದರರ ಮಾತು ಇಂದಿನ ಯುವ ಸ್ಟಾರ್ಟಪ್ ಸ್ಥಾಪಕರಿಗೆ ದೊಡ್ಡ ಸ್ಪೂರ್ತಿಯಾಗಿದೆ. ಒಟ್ಟರೆಯಾಗಿ ಹೇಳುವುದಾದರೆ ಬೆಳಗಾವಿಯ ಜೋಷಿ ಸಹೋದರರ ಈ ಸಾದನೆ ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಗಿದೆ ಹಾಲಿವುಡ್ ಸಿನಿಮಾದಲ್ಲಿ ಮಾತ್ರ ಕಾಣುತ್ತಿದ್ದ ಅತ್ಯಾಧುನಿಕ ಲೇಸರ್ ತಂತ್ರಜ್ಞಾನವನ್ನ ನಮ್ಮದೆ ಮಣ್ಣಿನಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಿರುವುದು ಆತ್ಮನಿರ್ಭರ ಭಾರತದ ಸಂಕಲ್ಪಕ್ಕೆ ತಂದ ದೊಡ್ಡ ಜಯ ಇದು ಕೇವಲ ಒಂದು ಸ್ಟಾರ್ಟಪ್ನ ಯಶಸ್ಸಲ್ಲ ಬದಲಿಗೆ ಭಾರತೀಯ ಯುವಕರ ಪ್ರತಿಭೆ ಜಾಗತಿಕ ಮಟ್ಟದ ತಂತ್ರಜ್ಞಾನಕ್ಕೆ ಸೆಡ್ಡು ಹೊಡೆಯಬಲ್ಲದು ಎಂಬುದಕ್ಕೆ ಸಾಕ್ಷಿ ಶತ್ರುಗಳ ಡ್ರೋನ್ ದಾಳಿಗಳಿಗೆ ಪ್ರಬಲ ಉತ್ತರ ನೀಡಬಲ್ಲ ಈ ಹರ ಎಂಕೆಒನ್ ಭವಿಷ್ಯದ ಯುದ್ಧದ ತಂತ್ರವನ್ನೇ ಬದಲಿಸುವ ಶಕ್ತಿ ಹೊಂದಿದೆ ಕುಂದಾನಗರಿಯ ಈ ಲೇಸರ್ ಕ್ರಾಂತಿ ದೇಶದ ಸುರಕ್ಷತೆಗೆ ಹೊಸ ಭರವಸೆ ನೀಡಿದ್ರು ಹತ್ತಾರು ನವ ಉದ್ಯಮಿಗಳಿಗೆ ಸ್ಪೂರ್ತಿಯಾಗಿದೆ ಇದಾಗಿತ್ತು.


