ಲವೇ ತಿಂಗಳುಗಳಲ್ಲಿ ನಿಮ್ಮ ಫೋನ್ ಬಿಲ್ ಮತ್ತೆ 20% ಏರಿಕೆ ಆಗಲಿದೆ ಹೌದು ಎರಡು ವರ್ಷದ ಹಿಂದೆ ಅಷ್ಟೇ ಅಂದ್ರೆ 2024ರ ಜುಲೈನಲ್ಲಿ ತಾನೇ ರೇಟ್ ಜಾಸ್ತಿ ಆಗಿತ್ತು ಇನ್ನೇನು ಸ್ವಲ್ಪ ದಿನ ನೆಮ್ಮದಿಯಾಗಿದ್ವಿ ಆದರೆ ಅಷ್ಟರಲ್ಲೇ ಈಗ ಮತ್ತೆ ಮತ್ತೆ ಟೆಲಿಕಾಂ ಕಂಪನಿಗಳು ನಮ್ಮ ಜೇಬಿಗೆ ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ರೆಡಿಯಾಗಿವೆ ಜಗತ್ತಿನ ಅತ್ಯಂತ ಪವರ್ಫುಲ್ ಹಣಕಾಸು ಸಂಸ್ಥೆ ಅಮೆರಿಕಾದ ಮಾರ್ಗನ್ ಸ್ಟ್ಯಾನ್ಲಿ ಒಂದು ಸ್ಪೋಟಕ ರಿಪೋರ್ಟ್ ಬಿಡುಗಡೆ ಮಾಡಿದೆ ಆ ರಿಪೋರ್ಟ್ ಪ್ರಕಾರ ಭಾರತದಲ್ಲಿ ಮತ್ತೆ ಮೊಬೈಲ್ ರೀಚಾರ್ಜ್ ರೇಟ್ ಗಗನಕ್ಕೆ ಏರಲಿದೆ ಬರಿ ರೀಚಾರ್ಜ್ ಅಷ್ಟೇ ಅಲ್ಲ ಇದರ ಜೊತೆಗೆ ಇನ್ನೊಂದು ಶಾಕ್ ಇದೆ ಅದೇನಂದ್ರೆ 2026 ರಲ್ಲಿ ನೀವು ಹೊಸ ಫೋನ್ ತಗೋಬೇಕು ಅಂದ್ರೆ ಕಿಡ್ನಿ ಮಾರೋ ಪರಿಸ್ಥಿತಿ ಬಂದ್ರು ಆಶ್ಚರ್ಯ ಇಲ್ಲ ಯಾಕಂದ್ರೆ ಸ್ಮಾರ್ಟ್ ಸ್ಮಾರ್ಟ್ ಫೋನ್ ಬೆಲೆ ಕೂಡ ಏರಿಕೆ ಆಗಲಿದೆ ಅಸಲಿಗೆ ಏನಿದು ಮಾರ್ಗನ್ ಸ್ಟಾನ್ಲಿ ರಿಪೋರ್ಟ್ ಮುಂದಿನ ಬೆಲೆ ಏರಿಕೆ ಯಾವಾಗ ಯಾವ ತಿಂಗಳಲ್ಲಿ ಆಗುತ್ತೆ ಎಷ್ಟು ರೂಪಾಯಿ ಎಕ್ಸ್ಟ್ರಾ ಕಟ್ಟಬೇಕಾಗುತ್ತೆ.
2026 ರಲ್ಲಿ ಮೊಬೈಲ್ ಬಿಲ್ ಬ್ಲಾಸ್ಟ್ ಈ ರಿಪೋರ್ಟ್ ಏನ್ ಹೇಳ್ತಿದೆ ಅನ್ನೋದನ್ನ ಕ್ಲಿಯರ್ ಆಗಿ ಅರ್ಥ ಮಾಡಿಕೊಳ್ಳೋಣ ಮಾರ್ಗನ್ ಸ್ಟಾನ್ಲಿ ಅನ್ನೋದು ಗ್ಲೋಬಲ್ ಲೆವೆಲ್ ನಲ್ಲಿ ಇನ್ವೆಸ್ಟ್ಮೆಂಟ್ ಮತ್ತು ಫೈನಾನ್ಸ್ ಅನಾಲಿಸಿಸ್ ಮಾಡೋ ದಿಗ್ಗಜ ಸಂಸ್ಥೆ ಅವರು ಇಂಡಿಯನ್ ಟೆಲಿಕಾಂ ಸೆಕ್ಟರ್ ಬಗ್ಗೆ ಅಂದ್ರೆ ನಮ್ಮ ಏರ್ಟೆಲ್ ಜಿಯೋ ವೋಡಾಫೋನ್ ಐಡಿಯಾ ಫ್ಯೂಚರ್ ಬಗ್ಗೆ ಒಂದು ಸ್ಟಡಿ ಮಾಡಿದ್ದಾರೆ ಅವರ ಪ್ರಕಾರ ಮುಂದಿನ ದಿನಗಳಲ್ಲಿ ಮೊಬೈಲ್ ಟಾರಿಫ್ ಅಥವಾ ರೀಚಾರ್ಜ್ ಪ್ಲಾನ್ಗಳ ಬೆಲೆ ಬರೋಬರಿ ಶೇಕಡ 16ರಿಂದ ಶೇಕಡ 20% ರಷ್ಟು ಹೆಚ್ಚಾಗಲಿದೆ. ಕೇಳಿಸಿಕೊಳ್ತಾ ಇದ್ದೀರಾ 16 ಟು 20% ಉದಾಹರಣೆಗೆ ಲೆಕ್ಕ ಹಾಕೋದಾದ್ರೆ ನೀವೀಗ ಒಂದು ತಿಂಗಳಿಗೆ 300 ರೂಪಾಯ ರಿಚಾರ್ಜ್ ಮಾಡ್ತಿದ್ದೀರಾ ಅಂಕೊಳ್ಳಿ ಅದಕ್ಕೆ ಶೇಕಡ 20 ಅಂದ್ರೆ ಸುಮಾರು 60 ರೂಪಾಯ ಜಾಸ್ತಿ ಆಗುತ್ತೆ ಅಲ್ಲಿಗೆ ಅದೇ ಪ್ಲಾನ್ಗೆ ನೀವು 360 ರೂಪಾಯ ಕೊಡಬೇಕಾಗುತ್ತೆ ಇದು ಒಂದು ತಿಂಗಳ ಲೆಕ್ಕ ಆಯ್ತು ಅದೇ ನೀವು ವರ್ಷದ ಪ್ಲಾನ್ ಅಂದ್ರೆ 3000 ರೂಪಾಯ ಪ್ಲಾನ್ ಹಾಕಿಸೋರಾದ್ರೆ ಒಂದೇ ಏಟಿಗೆ 500 ರಿಂದ 600 ರೂಪಾಯ ಎಕ್ಸ್ಟ್ರಾ ಪೇ ಮಾಡಬೇಕಾಗುತ್ತೆ ಸರಿ ಹಾಗಾದ್ರೆ ಈ ಬೆಲೆ ಏರಿಕೆ ಯಾವಾಗ ಆಗುತ್ತೆ ನಾಳೆ ಆಗುತ್ತಾ ಅಥವಾ ಮುಂದಿನ ತಿಂಗಳ ಇಲ್ಲ ಮಾರ್ಗನ್ ಸ್ಟಾನ್ಲಿ ಡೇಟ್ ಕೂಡ ಫಿಕ್ಸ್ ಮಾಡಿದೆ ಅವರ ಅಂದಾಜಿನ ಪ್ರಕಾರ ಈ ಬೆಲೆಯರಿಕೆ 2026ರ ಏಪ್ರಿಲ್ ನಿಂದ ಜೂನ್ ತಿಂಗಳ ಒಳಗೆ ಆಗುತ್ತೆ ಟೆಕ್ನಿಕಲ್ ಭಾಷೆಯಲ್ಲಿ ಹೇಳೋದಾದ್ರೆ Q1 FY27 ಅಂದ್ರೆ 2027ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂದ್ರೆ ನಮ್ಮ ಹತ್ರ ಇನ್ನು ನಾಲ್ಕೈದು ತಿಂಗಳು ಟೈಮ್ ಇದೆ.
ಆ ಟೈಮ್ ಬರುವಷ್ಟರಲ್ಲಿ ನಮ್ಮ ಜೇಬು ಖಾಲಿಯಾಗೋದು ಗ್ಯಾರೆಂಟಿ ಅಂತ ಅಂತ ಈ ರಿಪೋರ್ಟ್ ವಾರ್ನಿಂಗ್ ಕೊಡ್ತಿದೆ. ಇದು ಬರಿ ಪ್ರಿಪೇಡ್ ಗ್ರಾಹಕರಿಗೆ ಮಾತ್ರ ಅಲ್ಲ ಪೋಸ್ಟ್ ಪೇಡ್ ಬಿಲ್ ಕಟ್ಟೋವರಿಗೂ ಸೇರಿಸಿ ಬೀಳೋ ಏಟು ಇದು ಕಂಪನಿಗಳಿಗೆ ಸಾಲ್ತಿಲ್ವಾ ನಿಮ್ಮ ದುಡ್ಡು ಈಗ ನಿಮಗೆ ಸಹಜವಾಗಿ ಕೋಪ ಬರುತ್ತೆ ಅಲ್ವಾ ರೀ ಈಗಾಗಲೇ ಎಷ್ಟೊಂದು ದುಡ್ಡು ಕಿತ್ಕೊಳ್ತಿದ್ದಾರೆ ಸಾಲಲ್ವಾ ಇವರಿಗೆ ಯಾಕೆ ಮತ್ತೆ ರೇಟ್ ಜಾಸ್ತಿ ಮಾಡ್ತಿದ್ದಾರೆ ಅಂತ ಇದಕ್ಕೆ ಉತ್ತರ ಬೇಕು ಅಂದ್ರೆ ನಾವು ಎಆರ್ಪಿಯು ಅಂದ್ರೆ ಏನು ಅಂತ ತಿಳ್ಕೊಬೇಕು ಎಆರ್ಪಿಯು ಅಂದ್ರೆ ಆವರೇಜ್ ರೆವೆನ್ಯೂ ಪರ್ ಯೂಸರ್ ಅಂದ್ರೆ ಒಬ್ಬ ಗ್ರಾಹಕನಿಂದ ಕಂಪನಿಗೆ ಒಂದು ತಿಂಗಳಿಗೆ ಸರಾಸರಿ ಎಷ್ಟು ಆದಾಯ ಬರ್ತಿದೆ ಅನ್ನ ಅನ್ನೋ ಲೆಕ್ಕ ಟೆಲಿಕಾಂ ಬಿಸಿನೆಸ್ ನಿಂತಿರೋದೇ ಈ ಎಆರ್ಪಿಯು ಮೇಲೆ ಪ್ರಸ್ತುತ ಅಂದ್ರೆ ಲೇಟೆಸ್ಟ್ ರಿಪೋರ್ಟ್ ಪ್ರಕಾರ ಇರೋ ಲೆಕ್ಕ ನೋಡಿರಿಲಯನ್ಸ್ ಜಯo ಗೆ ಒಬ್ಬ ಗ್ರಾಹಕನಿಂದ ತಿಂಗಳಿಗೆ ಬರ್ತಿರೋದು ಕೇವಲ 211 ರೂಪಾಯಿ ಭಾರತಿ ಏರ್ಟೆಲ್ ಗೆ ಬರ್ತಿರೋದು 256 ರೂಪಾಯಿ ಇನ್ನು ವಡಾಫೋನ್ ಐಡಿಯಾ ಕಥೆ ಕೇಳಲೇಬೇಡಿ ಅದು ಬರಿ 180 ರೂಪಾಯಿ ಆಸುಪಾಸ್ನಲ್ಲಿದೆ ಆದರೆ ಕಂಪನಿಗಳಿಗೆ ಇದು ಸಾಲ್ತಾ ಇಲ್ಲ ಟೆಲಿಕಾಂ ಕಂಪನಿಗಳ ಟಾರ್ಗೆಟ್ ಏನಿದೆ ಗೊತ್ತಾ ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಒಬ್ಬ ಗ್ರಾಹಕರಿಂದ ಬರೋ ಆದಾಯವನ್ನ 300 ರೂಪಾಯಿಗಿಂತ ಹೆಚ್ಚು ಮಾಡಬೇಕು ಅನ್ನೋದು ಹೌದು 300 ಪ್ಲಸ್ ಇಸ್ ದ ಗೋಲ್ ಇದನ್ನ ನಾನು ಹೇಳ್ತಿಲ್ಲ ಸ್ವತಹಏಟೆಲ್ ಮುಖ್ಯಸ್ಥ ಸುನಿಲ್ ಮಿತ್ತಲ್ ಅವರೇ ಎಷ್ಟೋ ಸಲ ಹೇಳಿದ್ದಾರೆ.
ಈ ರೇಟ್ನಲ್ಲಿ ಬಿಸಿನೆಸ್ ನಡೆಸೋದು ಕಷ್ಟ ರೇಟ್ ಜಾಸ್ತಿ ಮಾಡಲೇಬೇಕು ಅಂತ ಯಾಕೆ ಅಂದ್ರೆ ಒಂದು ಕಡೆ 5ಜಿ ಮಾನಿಟೈಸೇಶನ್ ಅಂದ್ರೆ 5ಜಿ ನೆಟ್ವರ್ಕ್ ಕೊಡೋಕೆ ಈ ಕಂಪನಿಗಳು ಸ್ಪೆಕ್ಟ್ರಮ ಹರಾಜಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಸುರಿದಿವೆ 2022 ರಿಂದ 2024ರವರೆಗೆ ಬರಿ ಇನ್ವೆಸ್ಟ್ಮೆಂಟ್ ಆಗಿದೆ ಈಗ ಆ ಹಾಕಿರೋ ಬಂಡವಾಳವನ್ನ ವಾಪಸ್ ತೆಗಿಬೇಕು ಲಾಭ ಮಾಡಬೇಕು ಅಂದ್ರೆ ಹಳೆ ರೇಟ್ ಇಟ್ಕೊಂಡು ಕೂತ್ರೆ ಆಗಲ್ಲ ಇಲ್ಲಿವರೆಗೂ ವೆಲ್ಕಮ್ ಆಫರ್ ಅಂತ 5ಜಿ ಫ್ರೀ ಕೊಟ್ರು ಆದರೆ ಇನ್ಮುಂದೆ ಅದಕ್ಕೆ ದುಡ್ಡು ವಸೂಲಿ ಮಾಡೋ ಟೈಮ್ ಬಂದಿದೆ ಹಾಗಾಗಿ ಟೆಲಿಕಾಂ ಇಂಡಸ್ಟ್ರಿ ಬದುಕಬೇಕು ಅಂದ್ರೆ ಬೆಲೆ ಏರಿಕೆ ಅನಿವಾರ್ಯ ಅನ್ನೋದು ಮಾರ್ಗನ್ ಸ್ಟಾನ್ಲಿ ವಿಶ್ಲೇಷಣೆ ಫೋನ್ ರೇಟ್ ಕೂಡ ಹೈಕ್ ಆಗುತ್ತೆ ಸ್ನೇಹಿತರೆ ಇಷ್ಟೇ ಆಗಿದ್ರೆ ಪರವಾಗಿಲ್ಲ ಅಂತ ಅನಿಸ್ತಿತ್ತೇನೋ ಆದರೆ ಗಾಯದ ಮೇಲೆ ಬರೆ ಎಳೆಯೋಕೆ ಇನ್ನೊಂದು ವಿಷಯ ಇದೆ ಅದೇ ಸ್ಮಾರ್ಟ್ ಫೋನ್ ಬೆಲೆ ಏರಿಕೆ ಮಾರ್ಗನ್ ಸ್ಟ್ಯಾನ್ಲಿ ರಿಪೋರ್ಟ್ ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ 2026 ರಲ್ಲಿ ಕೇವಲ ರೀಚಾರ್ಜ್ ಅಷ್ಟೇ ಅಲ್ಲ ಸ್ಮಾರ್ಟ್ ಫೋನ್ಗಳ ಬೆಲೆ ಕೂಡ ಸರಾಸರಿ ಶೇಕಡ ಏಳರಿಂದ ಎಂಟರಷ್ಟು ಹೆಚ್ಚಾಗುತ್ತೆ ಯಾಕೆ ಗೊತ್ತಾ ಕಾರಣ ಇಷ್ಟೇ ಎಎo ಮತ್ತು ಮೆಮೊರಿ ಚಿಪ್ ಶಾರ್ಟೇಜ್ ಈಗ ಪ್ರಪಂಚದಾದ್ಯಂತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಎಐ ಹವಾ ನಡತಿದೆ ದೊಡ್ಡ ದೊಡ್ಡ ಎಎಐ ಸರ್ವರ್ ಗಳಿಗೆ ಡೇಟಾ ಸೆಂಟರ್ಗಳಿಗೆ ಹೈ ಕ್ವಾಲಿಟಿ ಮೆಮೊರಿ ಚಿಪ್ಗಳು ಬೇಕು ಈ ಚಿಪ್ ತಯಾರು ಮಾಡೋ ಕಂಪನಿಗಳು ಮೊಬೈಲ್ಗೆ ಚಿಪ್ ಕೊಡೋದನ್ನ ಬಿಟ್ಟು ಎಐ ಕಂಪನಿಗಳಿಗೆ ಸಪ್ಲೈ ಮಾಡೋಕೆ ಆದ್ಯತೆ ಕೊಡ್ತಿದ್ದಾವೆ ಯಾಕೆ ಅಂದ್ರೆ ಅಲ್ಲಿ ಹೆಚ್ಚು ಲಾಭ ಸಿಗುತ್ತೆ ಇದರಿಂದ ಏನಾಗುತ್ತೆ ಮೊಬೈಲ್ ತಯಾರು ಮಾಡೋಕೆ ಬೇಕಾದ ಚಿಪ್ ಗಳ ಕೊರತೆ ಉಂಟಾಗುತ್ತೆ ಸಪ್ಲೈ ಕಮ್ಮಿ ಆದರೆ ಡಿಮ್ಯಾಂಡ್ ಜಾಸ್ತಿ ಆಗುತ್ತೆ.
ಆಗ ಆಟೋಮ್ಯಾಟಿಕ್ ಆಗಿ ಬೆಲೆ ಏರುತ್ತೆ ಇದನ್ನ ಬಿಓಎಂ ಅಥವಾ ಬಿಲ್ ಆಫ್ ಮೆಟೀರಿಯಲ್ಸ್ ಅಂತಾರೆ ಒಂದು ಫೋನ್ ರೆಡಿ ಮಾಡೋಕೆ ಬೇಕಾದ ಕಚ್ಚ ವಸ್ತುಗಳ ಬೆಲೆಯಲಿ ಶೇಕಡ 10ರಿಂದ ಶೇಕಡ 25ರವರೆಗೂ ಜಾಸ್ತಿ ಆಗೋ ಸಾಧ್ಯತೆ ಇದೆ ಸೋ ಕಂಪನಿಗಳು ಆ ನಷ್ಟವನ್ನ ತಮ್ಮ ತಲೆ ಮೇಲೆ ಹಾಕೊಳ್ಳಲ್ಲ ಅದನ್ನ ಗ್ರಾಹಕರ ತಲೆಗೆ ಕಟ್ತಾರೆ ಅಂದ್ರೆ 2026 ರಲ್ಲಿ ನೀವು ಒಂದು ಹೊಸ ಫೋನ್ ತಗೊಂಡು ಅದಕ್ಕೆ ಸಿಮ್ ಹಾಕಿ ಮೇಂಟೈನ್ ಮಾಡಬೇಕು ಅಂದ್ರೆ ಖಂಡಿತವಾಗಲೂ ಜೇಬು ಗಟ್ಟಿ ಇರಲೇಬೇಕು ದಿನೇ ದಿನೆ ಎಲ್ಲದರ ಬೆಲೆ ಏರ್ತಿದೆ ಅಂತ ತಲೆ ಕೆಡಿಸಕೊಬೇಡಿ .
ಟೆಲಿಕಾಂ ಇತಿಹಾಸ ನೋಡಿದ್ರೆ ಒಂದು ಪ್ಯಾಟರ್ನ್ ಕಾಣಿಸುತ್ತೆ ಇದನ್ನ ನಾವು ದ ಟೂ ಇಯರ್ ಸೈಕಲ್ ಅನ್ನಬಹುದು ಸ್ವಲ್ಪ ಹಿಂದಕ್ಕೆ ಹೋಗೋಣ 2016 ರಲ್ಲಿಜಿಯೋ ಬಂದು ಡೇಟಾ ಕ್ರಾಂತಿ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ ವಾಯ್ಸ್ ಕಾಲ್ ಫ್ರೀ ಡೇಟಾ ಫ್ರೀ ಅಂತ ಶುರುವಾಗಿ ಮಾರ್ಕೆಟ್ ಪೂರ್ತಿ ಜಿಯೋಮಯ ಆಗೋವರೆಗೂ ನಾವು ಹನಿಮೂನ್ ಪಿರಿಯಡ್ ನಲ್ಲಿ ಇದ್ವಿ ಆದರೆ ಆ ಪಾರ್ಟಿ ಮುಗಿದಿದ್ದು 2019 ರಲ್ಲಿ ಡಿಸೆಂಬರ್ 2019 ದಿ ಫಸ್ಟ್ ಬಿಗ್ ಶಾಕ್ ಮೂರು ವರ್ಷ ಫ್ರೀ ಅಥವಾ ಕಮ್ಮಿ ರೇಟ್ ಕೊಟ್ಟು ಮಾರ್ಕೆಟ್ ಪೂರ್ತಿ ತಮ್ಮದಾದಮೇಲೆ ಕಂಪನಿಗಳು ಅಸಲಿ ಆಟ ಶುರು ಮಾಡಿದ್ವು. ಇದನ್ನೇ ಸ್ಟ್ರಕ್ಚರಲ್ ಹೈಕ್ ಅಂತ ಕರೆಯೋದು. ಅವತ್ತು ಒಂದೇ ಏಟಿಗೆ ಬರೋಬರಿ 30 ರಿಂದ 40% ರೇಟ್ ಜಾಸ್ತಿ ಮಾಡಿದ್ರು ನೆನಪಿಸಿಕೊಳ್ಳಿ. ಅಲ್ಲಿವರೆಗೂ 150 ರೂಪಾಯಿಗೆ ಸಿಗ್ತಿದ್ದ ಪ್ಲಾನ್ ಅವತ್ತೇ 200ರ ಗಡಿ ದಾಟಿತ್ತು. ಅಲ್ಲಿಂದ ಮುಂದೆ ಶುರುವಾಯಿತು ನೋಡಿ ಸೈಕಲ್. ನವೆಂಬರ್ 2021 ಸರಿಯಾಗಿ ಎರಡು ವರ್ಷಕ್ಕೆ ಮತ್ತೆ ಬೆಲೆಯರಿಕೆ. ಈ ಬಾರಿ ಸುಮಾರು ಶೇಕಡ 20 ರಿಂದ ಶೇಕಡ 25ರಷ್ಟು ರೇಟ್ ಜಾಸ್ತಿ ಮಾಡಿದ್ರು. ಜುಲೈ 2024 ಮತ್ತೆ ಸುಮಾರು ಎರಡೂವರೆ ವರ್ಷದ ಗ್ಯಾಪ್ ನಂತರ ಮೂರನೇ ಶಾಪ್ ಜಿಯೋ,ಏಟೆಲ್, Vodaಫೋನ್ ಎಲ್ಲರೂ ಸೇರಿ 15% ನಿಂದ 25% ರೇಟ್ ಏರಿಸಿದ್ರು. ಇದು 5G ಮೊನೆಟೈಸೇಶನ್ ಅಥವಾ 5ಜಿ ಹೆಸರಲ್ಲಿ ದುಡ್ಡು ಮಾಡೋ ಪರ್ವದ ಆರಂಭ ಆಗಿತ್ತು. ಈಗ ಲೆಕ್ಕ ಹಾಕಿ 2019, 2021 2024 ಈ ಸೀರೀಸ್ ಪ್ರಕಾರ ನೆಕ್ಸ್ಟ್ ಸ್ಟಾಪ್ ಯಾವುದು ಅದೇ 2026 ಸೋ ಮಾರ್ಗನ್ ಸ್ಟಾನ್ಲಿ ಹೇಳ್ತಿರೋ ಟೈಮ್ ಲೈನ್ ಪರ್ಫೆಕ್ಟ್ಆಗಿ ಮ್ಯಾಚ್ ಆಗ್ತಿದೆ ಕಂಪನಿಗಳು ಒಂದು ಸ್ಟ್ರಾಟಜಿ ಫಾಲೋ ಮಾಡ್ತಿವೆ ಮೊದಲು ಜನರಿಗೆ ಇಂಟರ್ನೆಟ್ ಅಭ್ಯಾಸ ಮಾಡಿಸೋದು ಆಮೇಲೆ ಮೆಲ್ಲಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಲೆ ಏರಿಸೋದು ಈಗ ಡೇಟಾ ಅನ್ನೋದು ಒಂದು ಅಡಿಕ್ಷನ್ ಆಗ್ಬಿಟ್ಟಿದೆ ರೇಟ್ ಎಷ್ಟೇ ಆದ್ರೂ ಜನ ಕೊಡಲೇಬೇಕು ಅನ್ನೋ ಕಾನ್ಫಿಡೆನ್ಸ್ ಅವರಿಗಿದೆ.
ಲಾಭ ಯಾರಿಗೆ ನಷ್ಟ ಯಾರಿಗೆ ಈಗ ಈಗ ಅಸಲಿ ಪ್ರಶ್ನೆ ಈ ಬೆಲೆ ಏರಿಕೆ ಆಟದಲ್ಲಿ ಗೆಲ್ಲೋರು ಯಾರು ಸೋಲೋರು ಯಾರು ಉತ್ತರ ತುಂಬಾ ಸಿಂಪಲ್ ಗೆದ್ದವನೇ ಬಾಚಿಕೊಳ್ಳೋ ಆಟ ಇದು ಇದರಲ್ಲಿ ಅತಿ ಹೆಚ್ಚು ಲಾಭ ಮಾಡಿಕೊಳ್ಳೋದು ಭಾರತಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಆದ್ರೆ ಮಾರ್ಗನ್ ಸ್ಟ್ಯಾನ್ಲಿ ರಿಪೋರ್ಟ್ ಪ್ರಕಾರ ಈ ರೇಸ್ ನ ನಂಬರ್ ವನ್ ಫಲಾನುಭವಿ ಅಂದ್ರೆ ಅದು ಏರ್ಟೆಲ್ ಯಾಕಂದ್ರೆ ಏರ್ಟೆಲ್ ಕಸ್ಟಮರ್ಸ್ ಹೆಚ್ಚಾಗಿ ಪ್ರೀಮಿಯಂ ಯೂಸರ್ಸ್ ಅವರಿಗೆ ಕ್ವಾಲಿಟಿ ಮುಖ್ಯ ರೇಟ್ ಎಷ್ಟೇ ಜಾಸ್ತಿಯಾದರೂ ಅವರು ಏರ್ಟೆಲ್ ಬಿಟ್ಟು ಹೋಗಲ್ಲ ಅನ್ನೋ ನಂಬಿಕೆ ಕಂಪನಿಗಿದೆ ಅದೇ ಕಾರಣಕ್ಕೆ 2027ರ ವೇಳೆಗೆಏಟೆಲ್ ಬರೋಬರಿ 8 ಬಿಲಿಯನ್ ಡಾಲರ್ ಅಂದ್ರೆ ಸುಮಾರು 65,000 ಕೋಟಿ ರೂಪಾಯಿ ಫ್ರೀ ಕ್ಯಾಶ್ ಫ್ಲೋ ಹೊಂದಲಿದೆ. ಇನ್ನೊಂದು ಕಡೆ ಅಂಬಾನಿ ಅವರ ಜಿಯೋ ಟ್ರೈ ಲೆಕ್ಕದ ಪ್ರಕಾರ ಜಿಯೋ ಒಂದರ ಬಳಿಯೇ ಬರೋಬರಿ 51 ಕೋಟಿಗೂ ಹೆಚ್ಚು ಗ್ರಾಹಕರಿದ್ದಾರೆ ಅಂದರೆ ಅರ್ಧ ಭಾರತ ಜಿಯೋ ಕೈಲಿದೆ. ಸಣ್ಣ ದರ ಏರಿಕೆ ಮಾಡಿದ್ರು ಇವರಿಗೆ ಸಿಗೋದು ಕೋಟಿ ಕೋಟಿ ಲಾಭ. ಇದರ ಜೊತೆಗೆ ಇನ್ನೊಂದು ಇನ್ಸೈಡ್ ಮ್ಯಾಟರ್ ಇದೆ. ರಿಲಯನ್ಸ್ Jio ಸದ್ಯದಲ್ಲೇ ಐಪಿಓ ಲಾಂಚ್ ಮಾಡೋಕೆ ಎದುರು ನೋಡ್ತಿದೆ. ಶೇರು ಮಾರುಕಟ್ಟೆಗೆ ಬರೋದಕ್ಕೂ ಮುಂಚೆ ನಮ್ಮ ಕಂಪನಿ ನೋಡಿ ಎಷ್ಟು ಪ್ರಾಫಿಟ್ ಮಾಡ್ತಿದೆ ಅಂತ ತೋರಿಸ್ಕೊಬೇಕು ಅಂದ್ರೆ ಅವರು ಬೆಲೆ ಏರಿಕೆ ಮಾಡಲೇಬೇಕಾದ ಅನಿವಾರ್ಯತೆ ಇದೆ. ಆದರೆ ಪಾಪ ಈ ರೇಸ್ನಲ್ಲಿ ಉಸಿರಾಡೋಕು ಕಷ್ಟ ಪಡ್ತಿರೋದು ವೋಡಾಫೋನ್ ಐಡಿಯಾ. ಇವರ ಪರಿಸ್ಥಿತಿ ಹೇಗಿದೆ ಅಂದ್ರೆ ಮುಂದೆ ಹೋದರೆ ಹಳ್ಳ ಹಿಂದೆ ಬಂದ್ರೆ ಕೊಳ್ಳ.
ಒಂದು ಕಡೆ ಸುಪ್ರೀಂ ಕೋರ್ಟ್ ಮತ್ತು ಎಜಿಆರ್ ಟೆನ್ಶನ್ ಇನ್ನೊಂದು ಕಡೆ ಕಸ್ಟಮರ್ಸ್ ಕೊರತೆ ದರ ಏರಿಕೆ ಮಾಡಿದ್ರೆ ಇರೋ ಕಸ್ಟಮರ್ಸ್ ಬಿಟ್ಟು ಹೋಗ್ತಾರೆ ದರ ಏರಿಕೆ ಮಾಡಿಲ್ಲ ಅಂದ್ರೆ ನೆಟ್ವರ್ಕ್ ಮೈಂಟೈನ್ ಮಾಡೋಕೆ ದುಡ್ಡಿರಲ್ಲ ಅಂಕಿ ಅಂಶಗಳೇ ಸತ್ಯ ಹೇಳ್ತೀವೆ ನೋಡಿಜಿಯೋ ಹತ್ರ 51 ಕೋಟಿ ಗ್ರಾಹಕರಿದ್ರೆ ಏರ್ಟೆಲ್ ಹತ್ರ 31 ಕೋಟಿ ಜನರಿದ್ದಾರೆ ಆದರೆವಿಐ ಬಳಿ ಉಳಿದಿರೋದು ಬರಿ 12 ಕೋಟಿ ಗ್ರಾಹಕರು ಮಾತ್ರ ಸೋ ಈ ಬೆಲೆ ಏರಿಕೆಯಿಂದಜಿಯೋ ಏಟೆಲ್ ಖಜಾನೆ ತುಂಬಿದ್ರೆವಿಐ ಮತ್ತು ಜನಸಾಮಾನ್ಯರ ಜೇವಿಗೆ ತೂತು ಬೀಳೋದು ಗ್ಯಾರಂಟಿ. ಬಿಎಸ್ಎನ್ಎಲ್ ಗೆ ಪೋರ್ಟ್ ಆಗಬಹುದಾ? ಇದೆಲ್ಲಾ ಕೇಳಿದ ಮೇಲೆ ನಿಮಗೊಂದು ಪ್ರಶ್ನೆ ಬರಬಹುದು ಪ್ರೈವೇಟ್ ಕಂಪನಿಗಳು ಹೀಗೆ ಮಾಡಿದ್ರೆ ನಾವು ಬಿಎಸ್ಎನ್ಎಲ್ ಗೆ ಪೋರ್ಟ್ ಆಗ್ತೀವಿ ಅಲ್ವಾ ಅಂತ ನಿಜ. ಜುಲೈ 24 ರಲ್ಲಿ ಬೆಲೆ ಏರಿಕೆ ಆದಾಗ ಆಗಿದ್ದು ಅದೇ. ಆಗ ಒಂದೇ ತಿಂಗಳಲ್ಲಿ ಸುಮಾರು 35 ರಿಂದ 40 ಲಕ್ಷ ಜನ ಜಿಯೋ, ಏರ್ಟೆಲ್ ಬಿಟ್ಟು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ರು. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ಸರ್ಕಾರಿ ಉಳಿಸಿ ದೇಶ ಉಳಿಸಿ ಅಂತ. ಆದರೆ ಆ ಟ್ರೆಂಡ್ ಹೆಚ್ಚು ದಿನ ಉಳಿಲಿಲ್ಲ. ನವೆಂಬರ್ 2024 ರ ನಂತರ ಏನಾಯ್ತು ಗೊತ್ತಾ ಆ ಹೋದವರೆಲ್ಲ ವಾಪಸ್ ಬರೋಕೆ ಶುರು ಮಾಡಿದ್ರು. ಡೇಟಾ ಪ್ರಕಾರ ನವೆಂಬರ್ ನಂತರ ಬಿಎಸ್ಎನ್ಎಲ್ ಮತ್ತೆ ಗ್ರಾಹಕರನ್ನ ಕಳೆದುಕೊಳ್ಳೋಕೆ ಶುರು ಮಾಡಿದೆ. ಕಾರಣ ತುಂಬಾ ಸಿಂಪಲ್ ನೆಟ್ವರ್ಕ್ ಕ್ವಾಲಿಟಿ ಇವತ್ತಿನ ಕಾಲದಲ್ಲಿ ಜನಕ್ಕೆ ಕನೆಕ್ಟಿವಿಟಿ ಮುಖ್ಯ. ಕಡಿಮೆ ದುಡ್ಡು ಅಂತ ಕಾಲ್ ಕಟ್ ಆಗೋದು, ಇಂಟರ್ನೆಟ್ ಸ್ಲೋ ಆಗೋದನ್ನ ಜನ ಸಹಿಸಲ್ಲ.
ಟ್ಯಾರಿಫ್ ಶಾಕ್ ಮೈಗ್ರೇಶನ್ ಇಸ್ ಟೆಂಪರರಿ ಅಂತಾರೆ. ಅಂದ್ರೆ ಬೆಲೆ ಏರಿದಾಗ ಕೋಪಕ್ಕೆ ಬೇರೆ ಕಡೆ ಹೋಗ್ತಾರೆ ಆದರೆ ಕ್ವಾಲಿಟಿ ಸಿಗದೆ ಇದ್ದಾಗ ಮತ್ತೆ ದುಡ್ಡು ಜಾಸ್ತಿ ಆದರೂ ಪರವಾಗಿಲ್ಲ ಅಂತ ಹಳೆ ಕಂಪನಿಗೆ ವಾಪಸ್ ಬರ್ತಾರೆ ಒಟ್ಟಲಿ ಸದ್ಯದ ಪರಿಸ್ಥಿತಿ ನೋಡ್ತಿದ್ರೆ ಒಂದು ಮಾತು ಕ್ಲಿಯರ್ ಭಾರತದ ಟೆಲಿಕಾಂ ರಂಗ ಈಗ ಹೈ ಇನ್ವೆಸ್ಟ್ಮೆಂಟ್ ಹೈ ಟ್ಯಾರಿಫ್ ಯುಗಕ್ಕೆ ಕಾಲಿಟ್ಟಿದೆ ಅಂದ್ರೆ ಹೆಚ್ಚು ಬಂಡುವಾಳ ಹಾಕ್ತಾರೆ ಅದಕ್ಕೆ ತಕ್ಕ ಹಾಗೆ ನಮ್ಮಿಂದ ಹೆಚ್ಚು ವಸೂಲಿ ಮಾಡ್ತಾರೆ ಹಿಂದಿನ ತರಹ 100ರಿಂದ 200 ರೂಪಾಯಿಗೆ ತಿಂಗಳು ಪೂರ್ತಿ ಅನ್ಲಿಮಿಟೆಡ್ ಮಜಾ ಮಾಡೋ ಕಾಲ ಮುಗಿತು ಮುಂದೆ 300 ರೂಪಾಯಿ ಎಆರ್ಪಿಯು ಅನ್ನೋದು ನ್ಯೂ ನಾರ್ಮಲ್ ಆಗಲಿದೆ ನೀವು ಒಂದು ಕಾಲದಲ್ಲಿ ನೀರು ಕರೆಂಟ್ ಬಿಲ್ ಬಗ್ಗೆ ಹೇಗೆ ಯೋಚನೆ ಮಾಡ್ತಿದ್ರೋ ಇನ್ ಮುಂದೆ ಮೊಬೈಲ್ ಡೇಟಾ ಬಗ್ಗೆಯೂ ಹಾಗೆ ಯೋಚನೆ ಮಾಡಬೇಕು ಇಟ್ಸ್ ನೋ ಮೋರ್ ಎ ಲಕ್ಸರಿ ಇಟ್ಸ್ ಅ ಯುಟಿಲಿಟಿ ಸೋ ಫ್ರೆಂಡ್ಸ್ ಇದಿಷ್ಟು ಮಾರ್ಗನ್ ಸ್ಟಾನ್ಲಿ ರಿಪೋರ್ಟ್ನ ಕಂಪ್ಲೀಟ್ ಅನಾಲಿಸಿಸ್ ಈ ಬೆಲೆ ಏರಿಕೆ ಬಗ್ಗೆ ನಿಮಗೆ ಏನ ಅನ್ಸುತ್ತೆ 2026 ರಲ್ಲಿ ರೇಟ್ ಜಾಸ್ತಿ ಆದರೆ ನೀವು ಫೋನ್ ಬಳಸುದನ್ನ ಕಡಿಮೆ ಮಾಡ್ತೀರಾ ಅಥವಾ ಅನಿವಾರ್ಯ ಅಂತ ಸುಮ್ನಾಗ್ತೀರಾ.


