Thursday, January 15, 2026
HomeTech Newsಡ್ರಾಪ್ ಶಿಪ್ಪಿಂಗ್ ಮೂಲಕ ಹಣಗಳಿಸುವುದು ಹೇಗೆ? ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ

ಡ್ರಾಪ್ ಶಿಪ್ಪಿಂಗ್ ಮೂಲಕ ಹಣಗಳಿಸುವುದು ಹೇಗೆ? ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ

ಡ್ರಾಪ್ ಶಿಪ್ಪಿಂಗ್ ಮೂಲಕ ಹಣ ಗಳಿಸಲು ದೊಡ್ಡ ಬಂಡವಾಳ ಅಥವಾ ಶಾಪ್ ಅಗತ್ಯವಿಲ್ಲ. ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್ ಇದ್ದರೆ ಸಾಕು, ಮನೆಯಲ್ಲೇ ಕೂತು ಹಣ ಸಂಪಾದಿಸಬಹುದು. ಇಂತಹ ಅನೇಕ ಆನ್‌ಲೈನ್ ಆದಾಯ ಮಾರ್ಗಗಳಲ್ಲಿ ಡ್ರಾಪ್‌ಶಿಪ್ಪಿಂಗ್ (Dropshipping) ಹೊಸಬರಿಗೆ ಸುಲಭವಾದ ಬಿಸಿನೆಸ್ ಆಗಿದೆ .

ಈ ಲೇಖನದಲ್ಲಿ ಡ್ರಾಪ್‌ಶಿಪ್ಪಿಂಗ್ ಎಂದರೇನು, ಅದು ಹೇಗೆ ಕೆಲಸ ಮಾಡುತ್ತದೆ, ಹೇಗೆ ಆರಂಭಿಸಬೇಕು, ಎಷ್ಟು ಹಣ ಗಳಿಸಬಹುದು, ಹೊಸಬರು ಮಾಡುವ ತಪ್ಪುಗಳು ಹೇಗೇ ಎನ್ನುವದನ್ನು ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದೇನೆ, ತಾಳ್ಮೆಯಿಂದ ಓದಿ ಹಾಗೆ ನಮ್ಮ whatsapp ಗ್ರೂಪ್ ಗೆ ಜಾಯಿನ್ ಆಗಿ.

ಡ್ರಾಪ್‌ಶಿಪ್ಪಿಂಗ್ ಎಂದರೇನು?

ಡ್ರಾಪ್‌ಶಿಪ್ಪಿಂಗ್ ಎಂದರೆ ನೀವು ಪ್ರಾಡಕ್ಟ್ ಖರೀದಿ ಮಾಡದೆ , ಹಾಗೆ ಯಾವದೇ ಶಾಪ್ ಓಪನ್ ಮಾಡದೆನೆ ಆನ್‌ಲೈನ್ ಮೂಲಕ ವೆಬ್ಸೈಟ್ ಇಂದ ಮಾರಾಟ ಮಾಡುವ ವ್ಯಾಪಾರ ಒಂದು ಬಿಸಿನೆಸ್ ಆಗಿದೆ .

1) ಗ್ರಾಹಕರು ನಿಮ್ಮ ವೆಬ್‌ಸೈಟ್‌ನಲ್ಲಿ ಆರ್ಡರ್ ಮಾಡುತ್ತಾರೆ
2 ನೀವು ಆ ಆರ್ಡರ್ ಅನ್ನು ಸಪ್ಲೈಯರ್‌ಗೆ ಕಳುಹಿಸುತ್ತೀರಿ
3) ಸಪ್ಲೈಯರ್ ನೇರವಾಗಿ ಗ್ರಾಹಕರಿಗೆ ಪ್ರಾಡಕ್ಟ್ ನ್ನು ಡೆಲಿವರಿ ಮಾಡುತ್ತಾರೆ

  • ಶಾಪ್ ಅಲ್ಲಿ ಯಾವದೇ ಪ್ರಾಡಕ್ಟ್ ಸ್ಟಾಕ್ ಇರಿಸುವ ಅಗತ್ಯವಿಲ್ಲ
  • ಪ್ಯಾಕಿಂಗ್ ಮತ್ತು ಡೆಲಿವರಿ ಟೆನ್ಶನ್ ಇಲ್ಲ
  • ಅದಕ್ಕಾಗಿ ಡ್ರಾಪ್‌ಶಿಪ್ಪಿಂಗ್ ಹೊಸಬರಿಗೆ ಅತ್ಯಂತ ಸೂಕ್ತ.

ಡ್ರಾಪ್‌ಶಿಪ್ಪಿಂಗ್ ಭಾರತದಲ್ಲಿ ಲೀಗಲ್‌ ಆಗಿದೆ ಹಾಗೆನೇ ನೀವು ದೊಡ್ಡ ಮಟ್ಟದಲ್ಲಿ ಡ್ರಾಪ್‌ಶಿಪ್ಪಿಂಗ್ ಬಿಸಿನೆಸ್ ಮಾಡಬೇಕು ಅಂದರೆ ಬ್ಯಾಂಕ್ ಎಕೌಂಟ್, ಪೇಮೆಂಟ್ ಗೇಟ್‌ವೇ, ಅಗತ್ಯವಿದ್ದರೆ GST, ನೀವು ಇನ್ನೂ ಬಿಸಿನೆಸ್ ಅನ್ನು ಈವಾಗ ಆರಂಬಿಸಿದ್ದರೆ GST ಮಾಡಿಸುವುದು ಬೇಕಾಗಿರವುದಿಲ್ಲ

ಡ್ರಾಪ್‌ಶಿಪ್ಪಿಂಗ್ ಹೇಗೆ ಕೆಲಸ ಮಾಡುತ್ತದೆ ಎನ್ನುವದನ್ನು ತಿಳಿಯೊಣ ಬನ್ನಿ

ನೀವು ಒಂದು ಆನ್‌ಲೈನ್ ವೆಬ್ಸೈಟ್ ಸ್ಟೋರ್ ಕ್ರಿಯೇಟ್ ಮಾಡಬೇಕಾಗುತ್ತದೆ ಹಾಗೆ ನಿಮಗೆ ಕೋಡಿಂಗ್ ನಾಲೆಡ್ಜ್ ಇಲ್ಲದೆ ಇದ್ದರೂ ಕೂಡ ವೆಬ್ಸೈಟ್ ಕ್ರಿಯೇಟ್ ಮಾಡಬಹುದು ಸುಲಭವಾಗಿ, ಹಾಗೆನೇ ವೆಬ್ಸೈಟ್ ಅಲ್ಲಿ ಪ್ರಾಡಕ್ಟ್ ಅನ್ನು ಲಿಸ್ಟ್ ಮಾಡಬೇಕಾಗುತ್ತದೆ, ಆಮೇಲೆ ಗ್ರಾಹಕರು ಪ್ರಾಡಕ್ಟ್ ಅನ್ನು ಆರ್ಡರ್ ಮಾಡುತ್ತಾರೆ, ಅದಾದಮೇಲೆ ಆರ್ಡರ್ ಸಪ್ಲೈಯರ್‌ಗೆ ಹೋಗುತ್ತದೆ, ಸಪ್ಲೈಯರ್ ಪ್ರಾಡಕ್ಟ್ ನ್ನು ಗ್ರಾಹಕರಿಗೆ ಕಳುಹಿಸುತ್ತಾರೆ, ಆವಾಗ ನೀವು ಲಾಭವನ್ನು ಗಳಿಸುತ್ತೀರಿ. ಇದೆ ಒಂದು ಸುಲಭವಾದ ಬಿಸಿನೆಸ್ ಆಗಿದೆ.

ಡ್ರಾಪ್‌ಶಿಪ್ಪಿಂಗ್ ಬಿಸಿನೆಸ್ ಆರಂಭಿಸಲು ಬೇಕಾಗುವ ವಸ್ತುಗಳು

1) ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್

2)ಇಂಟರ್ನೆಟ್

3)ಬ್ಯಾಂಕ್ ಅಕೌಂಟ್

4)ಕಲಿಯುವದಕ್ಕೆ ಬೇಕಾಗಿರುವುದು ಮನಸ್ಸು ಮತ್ತು ಸಹನೆ

ಡ್ರಾಪ್‌ಶಿಪ್ಪಿಂಗ್ ಅಲ್ಲಿ ಪ್ರಾಡಕ್ಟ್ ಅನ್ನು ಆಯ್ಕೆ ಹೇಗೆ ಮಾಡಬೇಕು? ಹಾಗೇನೇ ಬೆಸ್ಟ್ ಪ್ರಾಡಕ್ಟ್ ಯಾವದು ಅಂತ ತಿಳಿಯೊಣ ಬನ್ನಿ

1)ಪ್ರತಿನಿತ್ಯ ನಾವು ಬಳಸುವ ವಸ್ತುಗಳು

2)ಪ್ರೊಡಕ್ಟ್ ನ ತೂಕ ಕಡಿಮೆ ಇದ್ದರೆ ಸುಲಭವಾಗಿ ಗ್ರಾಹಕರಿಗೆ ಡೆಲಿವರಿ ಕೊಡಬಹುದು

3)ಹೆಚ್ಚಿನ ಲಾಭದ ಮಾರುಜಿನ್ ಸಿಗುತ್ತದೆ

ಶ್ವಾಸಾರ್ಹ ಸಪ್ಲೈಯರ್ ಹೇಗೆ ಹುಡುಕಬೇಕು?

ಉತ್ತಮ ಸಪ್ಲೈಯರ್ ಇಲ್ಲದೆ ಡ್ರಾಪ್‌ಶಿಪ್ಪಿಂಗ್ ಯಶಸ್ಸು ಸಾಧ್ಯವಿಲ್ಲ.

ಡ್ರಾಪ್‌ಶಿಪ್ಪಿಂಗ್ ಬಿಸಿನೆಸ್ ಮಾಡುವಾಗ ವಿಶ್ವಾಸಾರ್ಹ ಸಪ್ಲೈಯರ್ ಹೇಗೆ ಹುಡುಕಬೇಕೆಂದು ತಿಳಿಯೊಣ ಬನ್ನಿ

  • ಸರಿಯಾದ ಸಮಯಕ್ಕೆ ಡೆಲಿವರಿ ಮಾಡಬೇಕು, ಇಲ್ಲಾಂದೆರೆ ನಂಬಿಕೆ ಕೊರತೆ ಆಗುತ್ತದೆ ಬಿಸಿನೆಸ್ ಹಾಳಾಗುವುದಕ್ಕೆ ಇದು ಒಂದು ವಿಷಯ ಆಗಬಹುದು.
  • ಗುಣಮಟ್ಟದ ಪ್ರಾಡಕ್ಟ್ ನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕಾಗತ್ತದೆ
  • ರಿಟರ್ನ್ ಪಾಲಿಸಿ ಸರಿಯಾಗಿ ವೆಬ್ಸೈಟ್ ಅಲ್ಲಿ ಕೊಡಬೇಕಾಗುತ್ತದೆ
  • ಉತ್ತಮ ಕಸ್ಟಮರ್ ಸಪೋರ್ಟ್ ಕೊಡಬೇಕಾಗುತ್ತದೆ.

ಡ್ರಾಪ್‌ಶಿಪ್ಪಿಂಗ್‌ನಲ್ಲಿ ಎಷ್ಟು ಹಣ ಗಳಿಸಬಹುದು ಅಂತ ಎಲ್ಲರಿಗೂ ಒಂದು ಕೂತಹಲ ಇದ್ದೇ ಇರುತ್ತದೆ ಇಲ್ಲಿದೆ ಎಲ್ಲಾ ಮಾಹಿತಿ

  • ಆರಂಭದಲ್ಲಿ: ₹5000 – ₹10,000 ಪ್ರತಿದಿನ
  • 5–6 ತಿಂಗಳಲ್ಲಿ: ₹50,000 – ₹70,000 ಪ್ರತಿದಿನ
  • ಅನುಭವ ಬಂದ ನಂತರ: ತಿಂಗಳಿಗೆ ಲಕ್ಷ ರೂಪಾಯಿ ಕೂಡ ಸಾಧ್ಯ

ಡ್ರಾಪ್‌ಶಿಪ್ಪಿಂಗ್‌ನಲ್ಲಿ ಹೊಸಬರು ಮಾಡುವ ಸಾಮಾನ್ಯ ತಪ್ಪುಗಳು ಇಲ್ಲಿದೆ ಮಿಸ್ ಮಾಡದೆ ಓದಬೇಕು ನೀವೆಲ್ಲಾ

ಬಹುತೇಕ ಜನರು ಈ ತಪ್ಪುಗಳ ಕಾರಣದಿಂದ ವಿಫಲರಾಗುತ್ತಾರೆ

1) ತಕ್ಷಣ ಶ್ರೀಮಂತರಾಗಬೇಕು ಎಂದು ಯೋಚಿಸುವುದು
2) ಸಂಶೋಧನೆ ಇಲ್ಲದೆ ಪ್ರಾಡಕ್ಟ್ ನ ಆಯ್ಕೆ ಮಾಡುವದರಿಂದ
3)ಒಂದೇ ದಿನದಲ್ಲಿ ರಿಸಲ್ಟ್ ಸಿಗುವುದಿಲ್ಲ
4) ಮಾರ್ಕೆಟಿಂಗ್ ಕಲಿಯದೇ ಡ್ರಾಪ್‌ಶಿಪ್ಪಿಂಗ್‌ ವೆಬ್ಸೈಟ್ ಆರಂಬಿಸಿ ಹಣವನ್ನು ವ್ಯರ್ಥ ಮಾಡುವುದು.

ಈ ತಪ್ಪುಗಳನ್ನು ತಿಡ್ಡಿಕೊಂಡರೆ ಯಶಸ್ಸು ಸಿಗುತ್ತದೆ .

ಡ್ರಾಪ್‌ಶಿಪ್ಪಿಂಗ್‌ನಲ್ಲಿ ಯಶಸ್ಸಿನ ಗುಟ್ಟು ಇದೆ ಇದನ್ನು ಮೊದಲು ತಿಳಿಯಬೇಕಾಗುತ್ತದೆ

  • ಪ್ರತಿದಿನ ಅಭ್ಯಾಸ ಮಾಡಬೇಕಾಗುತ್ತದೆ ಹಾಗೆನೇ ಪ್ರಾಡಕ್ಟ್ ಗೆ ಸರಿಯಾದ ಗ್ರಾಹಕರನ್ನು
  • 2026 ಅಲ್ಲಿ ಟ್ರೆಂಡ್ಸ್ ಪ್ರಾಡೆಕ್ಟ್ಸ್ ಗಮನಿಸಿ ಬೇಕಾಗುತ್ತದೆ.
  • ಗ್ರಾಹಕರಿಗೆ ಮೌಲ್ಯ ಕೊಡಬೇಕಾಗುತ್ತದೆ
  • ತಾಳ್ಮೆ ಮತ್ತು ಶಿಸ್ತು ಇರಲಿ ಮೊದಲು ಇರಬಕಾಗುತ್ತದೆ.

ನೀವು ಸುಲಭವಾಗಿ ಹಣ ಗಳಿಸುವ ಮಾರ್ಗ ಹುಡುಕುತ್ತಿದ್ದರೆ, ಡ್ರಾಪ್‌ಶಿಪ್ಪಿಂಗ್ ಒಂದು ಉತ್ತಮ ಆಯ್ಕೆ ಆಗಿರುತ್ತದೆ.
ಇದು ಕಡಿಮೆ ಹೂಡಿಕೆಯಲ್ಲಿ ಆರಂಭಿಸಿ, ದೊಡ್ಡ ಆದಾಯಕ್ಕೆ ಬೆಳೆಯುವ ಸಾಧ್ಯತೆ ಇರುವ ಬಿಸಿನೆಸ್ ಆಗಿದೆ.

ಇವತ್ತೇ ಕಲಿಯಲು ಆರಂಭಿಸಿ. ಇಂದೇ ಮೊದಲ ಹೆಜ್ಜೆ ಇಡಿ.
ಭವಿಷ್ಯದಲ್ಲಿ ನಿಮಗೆ ಧನ್ಯವಾದ ಹೇಳುವ ದಿನ ಖಂಡಿತ ಬರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments