ಮೂರು ಲಕ್ಷ ದಾಟಿದ ಬೆಳ್ಳಿ ಚಿನ್ನ ಕೂಡ ನಕ್ಷತ್ರ ಆಕಾಶದಲ್ಲಿರುವ ಬೆಳ್ಳಿ ಬಲೆ ಇಳಿಯುತ್ತ 1980ರ ಹಂಟ್ ಬ್ರದರ್ಸ್ ಮತ್ತೆ ಬರ್ತಾರ ನಿಮ್ಮ ಮನೆಯಲ್ಲಿ ಮದುವೆ ಇದೆಯಾ ಅಥವಾ ನೀವು ಚಿನ್ನ ಬೆಳ್ಳಿ ಕೊಳ್ಳುವ ಪ್ಲಾನ್ ಮಾಡ್ತಿದ್ದೀರಾ ಹಾಗಿದ್ರೆ ಈ ಸುದ್ದಿಯನ್ನ ಕೇಳಿ ನಿಮಗೆ ಎದೆಬಡಿತ ಹೆಚ್ಚಾಗೋದು ಗ್ಯಾರಂಟಿ ಯಾಕಂದ್ರೆ ಬಂಗಾರ ಮತ್ತು ಬೆಳ್ಳಿಯ ದರ ಈಗ ಯಾರು ಊಹಿಸದ ಮಟ್ಟಕ್ಕೆ ಏರಿಕೆಯಾಗಿದೆ ಸೋಮವಾರ ವಸ್ಟೆ ಚಿನ್ನದ ಬೆಲೆ 10ಗ್ರಾಂ ಗೆ ಬರಬ್ಬರಿ 1,48,000 ರೂಪಾಯ ದಾಟಿದರೆ ಬೆಳ್ಳಿ ಬೆಲೆ ಕೆಜಿಗೆ 3 ಲಕ್ಷ ರೂಪಾಯಿ ಮುಟ್ಟಿದೆ.
2026ರ ಆರಂಭದಲ್ಲೇ ಇಂತಹದೊಂದು ಬೆಲೆ ಏರಿಕೆಗೆ ಕಾರಣವಾಗ್ತಾ ಇರೋದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೌದು ಗ್ರೀನ್ ಲ್ಯಾಂಡ್ ಖರೀದಿ ವಿಚಾರವಾಗಿ ಟ್ರಂಪ್ ಮತ್ತು ಯುರೋಪ್ ದೇಶಗಳ ನಡುವೆ ಶುರುವಾಗಿರೋ ಜಗಳ ಈಗ ಜಾಗತಿಕ ಮಾರುಕಟ್ಟಿಗೆ ಬುಡಮೇಲು ಮಾಡಿದೆ. ಶೇರು ಪೇಟೆಗಳಲ್ಲಿ ಬ್ಲಡ್ ಬಾತ್ ಆಗ್ತಾ ಇದ್ರೆ ಹೂಡಿಕೆದಾರರೆಲ್ಲರೂ ಕೂಡ ಚಿನ್ನ ಬೆಳ್ಳಿ ಕಡೆ ಮುಖವನ್ನ ಮಾಡ್ತಿದ್ದಾರೆ. ಅಷ್ಟಕ್ಕೂ ಟ್ರಂಪ್ ತೆಗೆದುಕೊಂಡ ಆ ನಿರ್ಧಾರವೇನು ಎಂಟು ಯುರೋಪಿಯನ್ ದೇಶಗಳಿಗೆ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದೇಕೆ ಇದರಿಂದ ಭಾರತದ ಮಾರುಕಟ್ಟೆ ಮೇಲಾಗುವ ಎಫೆಕ್ಟ್ ಏನು 1980ರ ಹಂಟ್ ಬ್ರದರ್ಸ್ ಸಿಚುವೇಶನ್ ಮತ್ತೆ ಬರುತ್ತಾ ಡೀಟೇಲ್ ಆಗಿ ನೋಡ್ಕೊಂಡು ಬರೋಣ ಗ್ರೀನ್ಲ್ಯಾಂಡ್ ಬೇಕು ಅಂತ ಟ್ರಂಪ್ ಹಟ ಎಂಟು ದೇಶಗಳ ಮೇಲೆ ಬಿತ್ತು ಟ್ಯಾರಿಫ್ ಬರೆ ಹೌದು ಚಿನ್ನ ಹಾಗೂ ಬೆಳ್ಳಿ ಬೆಲೆ ಹೇಗೆ ಏರ್ತಾ ಇದೆ ಅಂದ್ರೆ ನಿಮಗೆ ಊಹೆ ಮಾಡಕ್ಕೂ ಆಗ್ತಾ ಇಲ್ಲ ಅಷ್ಟರ ಮಟ್ಟಿಗೆ ರಾಕೆಟ್ ವೇಗದಲ್ಲಿ ಏರಿಕೆ ಆಗ್ತಾ ಇದೆ.
ಒಂದೇ ದಿನ ಬೆಳ್ಳಿ ಬೆಲೆ 13000ಕ್ಕೂ ಹೆಚ್ಚು ಏರಿದ್ದು 3 ಲಕ್ಷದ ಗಡಿ ದಾಟಿದೆ ಇದಕ್ಕೆ ಪ್ರಮುಖ ಕಾರಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಮಾಡಿದ ಆ ಮಹತ್ವದ ಘೋಷಣೆ ಅಮೆರಿಕಕ್ಕೆ ಗ್ರೀನ್ ಲ್ಯಾಂಡ್ ಅನ್ನ ಬಿಟ್ಟುಕೊಡಲು ವಿರೋಧಿಸುತ್ತಿರುವ ಎಂಟು ಯುರೋಪಿಯನ್ ದೇಶಗಳ ಮೇಲೆ ಭಾರಿ ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಡೆನ್ಮಾರ್ಕ್ ನಾರ್ವೆ ಸ್ವೀಡನ್ ಫ್ರಾನ್ಸ್ ಜರ್ಮನಿ ಯುಕೆ ನೆದರ್ಲ್ಯಾಂಡ್ಸ್ ಮತ್ತು ಫಿನ್ಲ್ಯಾಂಡ್ ಈ ಎಂಟು ದೇಶಗಳಿಂದ ಬರುವ ಸರಕುಗಳ ಮೇಲೆ ಫೆಬ್ರವರಿ ಒಂದರಿಂದಲೇ ಶೇಕಡ 10ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಣೆಯನ್ನ ಮಾಡಿದ್ದಾರೆ. ಅಷ್ಟೇ ಅಲ್ಲ ಜೂನ್ ತಿಂಗಳ ಒಳಗಾಗಿ ಗ್ರೀನ್ಲ್ಯಾಂಡ್ ಕುರಿತ ಒಪ್ಪಂದಕ್ಕೆ ಬರೆದಿದ್ದರೆ ಈ ಸುಂಖವನ್ನ ಶೇಕಡ 25ಕ್ಕೆ ಏರಿಸುವುದಾಗಿ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾರೆ. ಟ್ರಂಪ್ ಅವರ ಈ ನಡೆ ಅಕ್ಷರಶಹ ಜಾಗತಿಕ ವಾಣಿಜ್ಯ ಯುದ್ಧಕ್ಕೆ ನಾಂದಿ ಹಾಡಿದೆ.
ಪ್ರತ್ಯುತ್ತರವಾಗಿ ಯುರೋಪಿಯನ್ ಒಕ್ಕೂಟ ಕೂಡ ಅಮೆರಿಕದ ಆಮದುಗಳ ಮೇಲೆ ಸುಮಾರು 80 ಬಿಲಿಯನ್ ಫೌಂಡ್ ಮೌಲ್ಯದ ಸುಂಕ ವಿಧಿಸಲು ಚಿಂತನೆಯನ್ನ ನಡೆಸಿದೆ ಅಂತ ಹೇಳಲಾಗುತಿದೆ ಈ ಜಿಯೋ ಪೊಲಿಟಿಕಲ್ ಟೆನ್ಶನ್ ಅಥವಾ ರಾಜಕೀಯ ಉದ್ವಿಜ್ಞತೆಯೇ ಈಗ ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಇರಲು ಮುಖ್ಯ ಕಾರಣವಾಗಿದೆ 10 ಗ್ರಾಂ ಚಿನ್ನಕ್ಕೆ 1481 ರೂಪಾಯಿ ಒಂದುಕೆಜಿ ಬೆಳ್ಳಿಗೆ 3 ಲಕ್ಷ ರೂಪಾಯಿ ಯುದ್ಧ ಅಥವಾ ರಾಜಕೀಯ ಅಸ್ಥಿರತೆ ಉಂಟಾದಾಗ ಹೂಡಿಕೆದಾರರು ಶೇರು ಮಾರುಕಟ್ಟೆಯ ಮೇಲಿನ ನಂಬಿಕೆಯನ್ನ ಕಳೆದುಕೊಂಡು ಅತ್ಯಂತ ಸುರಕ್ಷಿತ ಅಂತ ಭಾವಿಸುವ ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡ್ತಾರೆ ಇದನ್ನೇ ಸೇಫ್ ಹೆವೆನ್ ಅಸೆಟ್ ಎನ್ನಲಾಗುತ್ತಿದೆ ನಡೆದದ್ದು ಕೂಡ ಇದೆ ಅಮೆರಿಕ ಮತ್ತು ಯುರೋಪ್ ನಡುವಿನ ತಿಕ್ಕಾಟದಿಂದ ಭಯಗೊಂಡ ಹೂಡಿಕೆದಾರರು ಚಿನ್ನದ ಮೇಲೆ ಮುಗಿಬಿದ್ದಿದ್ದಾರೆ ಪರಿಣಾಮ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಒಂದು ಔನ್ಸ್ಗೆ 4689.39ಡಾಲ ಆಗಿದೆ ಇತ್ತ ಬೆಳ್ಳಿ ಬೆಲೆ ಕೂಡ ಔನ್ಸ್ಗೆ 94.08ಡಾಲ 8 ಡಾಲಗೆ ಜಿಗಿದಿದೆ.
ಭಾರತದ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಬೆಳ್ಳಿ ಫ್ಯೂಚರ್ಸ್ ಬೆಲೆ ಮೊಟ್ಟಮೊದಲ ಬಾರಿಗೆ ಕೆಜಿಗೆ 3 ಲಕ್ಷ ರೂಪಾಯಿ ಗಡಿದಾಟಿದೆ ಸೋಮವಾರ ಒಂದೇ ದಿನ ಬೆಳ್ಳಿ ಬೆಲೆಯಲ್ಲಿ 13553 ರೂಪಾಯ ಏರಿಕೆಯಾಗಿದ್ದು ಕೆಜಿಗೆ 3315 ರೂಪಾಯ ದಾಖಲೆಯ ದರವನ್ನ ಮುಟ್ಟಿದೆ ಇತ್ತ ಸ್ಥಳೀಯ ಬುಲಿಯನ್ ಮಾರುಕಟ್ಟೆಯಲ್ಲಿ 10ಗ್ರಾಂ ಚಿನ್ನದ ಬೆಲೆ 1900 ರೂಪಾಯ ಏರಿಕೆಯಾಗಿ ತೆರಿಗೆ ಸೇರಿ ಬರೊಬ್ಬರಿ 148000 100 ರೂಪಾಯಿಗೆ ಬಂದು ತಲುಪಿದೆ ಕಾರು ಟೆಕ್ ಕಂಪನಿಗಳ ಶೇರು ಧೂಳಿಪಟ ಯುರೋಪ್ ಮಾರುಕಟ್ಟೆಯಲ್ಲಿ ಆಹಾಕಾರ ಒಂದೆಡೆ ಚಿನ್ನದ ಬೆಲೆ ಏರ್ತಾ ಇದ್ದರೆ ಇನ್ನೊಂದೆಡೆ ಶೇರುಪೇಟೆ ಪಾತಾಳಕ್ಕೆ ಕುಸಿತಾ ಇದೆ ಟ್ರಂಪ್ ಅವರ ಟ್ಯಾರಿಫ್ ಬೆದರಿಕೆಯಿಂದಾಗಿ ಯುರೋಪ್ನ ಪ್ರಮುಖ ಶೇರು ಮಾರುಕಟ್ಟೆಗಳು ಸೋಮವಾರ ಭಾರಿ ನಷ್ಟವನ್ನ ಅನುಭವಿಸಿವೆ ಲಂಡನ್ನ ಎಫ್ಟಿಎಸ್ಇ 100 ಸೂಚಂಕ ಶೇಕಡ 0.4 ರಷ್ಟು ಕುಸಿದರೆ ದೇಶೀಯ ಕಂಪನಿಗಳನ್ನೇ ಹೆಚ್ಚಾಗಿ ಹೊಂದಿರುವಎಫ್ಟಿಎಸ್ 250 ಶೇಕಡ 0.8 ರಷ್ಟು ಕುಸಿತವನ್ನ ಕಂಡಿದೆ ಅದರಲ್ಲೂ ಕಾರು ತಯಾರಿಕ ಕಂಪನಿಗಳು ಟೆಕ್ನಾಲಜಿ ಮತ್ತು ಐಶರಾಮಿ ವಸ್ತುಗಳನ್ನ ತಯಾರಿಸುವ ಕಂಪನಿಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ.
ಜರ್ಮನಿಯಲ್ಲಿಬಿ ಮಸಡಿಸ್ಬೆಂಚ್ ಮತ್ತು ವರ್ಕ್ಸ್ವಗನ್ ನಂತಹ ದೈತ್ಯ ಕಂಪನಿಗಳ ಶೇರ್ಗಳು ಶೇಕಡ ಮೂರರಿಂದ ನಾಲ್ಕರಷ್ಟು ಕುಸಿದಿವೆ. ಫ್ರಾನ್ಸ್ನಲ್ಲಿ ಐಶರಾಮಿ ಬ್ರಾಂಡ್ಗಳಾದ ಎಲ್ಬಿಎಂಚ್ ಮತ್ತು ಹರ್ಮಸ್ ಶೇರ್ಗಳು ನೆಲಕಚ್ಚಿವೆ. ಆದರೆ ಕುತುಹಲಕಾರಿ ಸಂಗತಿ ಅಂದರೆ ಯುದ್ಧದ ಭೀತಿ ಇರುವುದರಿಂದ ರಕ್ಷಣಾ ವಲೆಯದ ಶೇರುಗಳು ಏರಿಕೆ ಕಂಡಿವೆ. ಜರ್ಮನಿಯ ರೈನ್ ಮೆಟಾಲ್ ಮತ್ತು ಫ್ರಾನ್ಸ್ನ ತೇಲ್ಸ್ ಕಂಪನಿಗಳ ಶೇರುಗಳು ಲಾಭವನ್ನ ಗಳಿಸಿವೆ. ಇತ ಲಂಡನ್ ಮಾರುಕಟ್ಟೆಯಲ್ಲಿ ಚಿನ್ನದ ಗಣಿಗಾರಿಕೆ ಮಾಡುವ ಫ್ರೆಸ್ನಿಲ್ಲೋ ಮತ್ತು ಎಂಡಿವರ್ ಮೈನಿಂಗ್ ಕಂಪನಿಗಳ ಶೇರುಗಳು ಕೂಡ ಚಿನ್ನದ ದರದ ಜೊತೆಯಲ್ಲೇ ಏರಿಕೆಯನ್ನ ಕಂಡಿವೆ. ಬೆಳ್ಳಿಗೆ ಯಾಕೆ ಇಷ್ಟೊಂದು ಡಿಮ್ಯಾಂಡ್ ಕೇವಲ ಆಭರಣ ಅಲ್ಲ ಇದು ಗ್ರೀನ್ ಮೆಟಲ್ ಚಿನ್ನದ ಕಥೆ ಒಂದಾದರೆ ಬೆಳ್ಳಿಯ ಕಥೆ ಇನ್ನೊಂದು ಕಳೆದ ಒಂದು ವರ್ಷದಲ್ಲಿ ಅಂದ್ರೆ 2025ರ ಅವಧಿಯಲ್ಲಿ ಚಿನ್ನಕ್ಕಿಂತ ಬೆಳ್ಳಿ ಹೆಚ್ಚು ಲಾಭವನ್ನ ತಂದುಕೊಟ್ಟಿದೆ 2025ರಲ್ಲಿ ಚಿನ್ನದ ಬೆಲೆ ಶೇಕಡ 75ರಷ್ಟು ಏರಿದರೆ ಬೆಳ್ಳಿ ಬರಬ್ಬರಿ ಶೇಕಡ 167 ರಷ್ಟು ಏರಿಕೆಯನ್ನ ಕಂಡಿದೆ ಇದಕ್ಕೆ ಕೇವಲ ರಾಜಕೀಯ ಕಾರಣ ಮಾತ್ರವಲ್ಲ ಕೈಗಾರಿಕ ಬೇಡಿಕೆಯು ಕೂಡ ಮುಖ್ಯ ಕಾರಣ ಬೆಳ್ಳಿಯನ್ನ ಈಗ ಕೇವಲ ಕಾಲು ಚೈನು ಅಥವಾ ಪೂಜ ಸಾಮಗ್ರಿಗಳಿಗೆ ಮಾತ್ರ ಬಳಸ್ತಾ ಇಲ್ಲ.
ಸೋಲಾರ್ ಪ್ಯಾನೆಲ್ ತಯಾರಿಕೆಯಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ 5ಜಿ ತಂತ್ರಜ್ಞಾನದಲ್ಲಿ ಮತ್ತು ಎಲೆಕ್ಟ್ರಾನಿಕ್ಸ್ ಚಿಪ್ಗಳಲ್ಲಿ ಬೆಳ್ಳಿ ಅತ್ಯಗತ್ಯ ವಸ್ತು ಹಾಕಿದೆ ಇದನ್ನ ಈಗ ಗ್ರೀನ್ ಮೆಟಲ್ ಅಂತ ಕರೆಯಲಾಗ್ತಾ ಇದೆ ಪ್ರತಿ ಸೋಲಾರ್ ಪ್ಯಾನೆಲ್ಗೆ ಸುಮಾರು 20 ಗ್ರಾಂ ಬೆಳ್ಳಿ ಬೇಕಾಗುತ್ತೆ ಜಗತ್ತು ಈಗ ಗ್ರೀನ್ ಎನರ್ಜಿ ಕಡೆಗೆ ಬಾಲುತಾ ಇರುವುದರಿಂದ ಬೆಳ್ಳಿಗೆ ಎಲ್ಲಿದ ಡಿಮ್ಯಾಂಡ್ ಬಂದಿದೆ ಜೊತೆಗೆ ಚೀನಾ ಬೆಳ್ಳಿ ರಪ್ತಿನ ಮೇಲೆ ನಿರ್ಬಂಧ ಹೇರಿರುವುದು ಕೂಡ ಬೆಲೆ ಏರಿಕೆಗೆ ತುಪ್ಪ ಸುರಿದಿದೆ ಅಮೆರಿಕದ ಕಂಪನಿಗಳು ಟ್ರಂಪ್ ಅವರ ಟ್ಯಾರಿ ಭಯದಿಂದ ಮುಂಚಿತವಾಗಿಯೇ ಬೆಳ್ಳಿಯನ್ನ ಖರದಿಸಿ ಸ್ಟಾಕ್ ಮಾಡಿಕೊಳ್ಳುತ್ತಾ ಇವೆ ಇದರಿಂದ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗಿ ಬೆಲೆ ಗಗನಕ್ಕೆ ಏರ್ತಾ ಇದೆ. ಹೂಡಿಕೆದಾರರೇ ನೀವು ಹುಷರಾಗಿರಿ. ಈಗಲೇ ಚಿನ್ನ ಬೆಳ್ಳಿ ಕೊಳ್ಳಬಹುದಾ? ಈಗಿರುವ ಪ್ರಶ್ನೆ ಏನೆಂದ್ರೆ ಬೆಲೆ ಇಷ್ಟೊಂದು ಏರ್ತಾ ಇದೆ ಅಂತ ಈಗಲೇ ಹೋಗಿ ಚಿನ್ನ ಬೆಳ್ಳಿಯನ್ನ ಕರಿಸಬಹುದೇ ಎಂಬುದು. ತಜ್ಞರು ಹೇಳುವ ಪ್ರಕಾರ ಸ್ವಲ್ಪ ವೇಟ್ ಮಾಡಿ ಈ ಏರಿಕೆ ತುಂಬಾ ವೇಗವಾಗಿ ಆಗಿರುವುದರಿಂದ ಅಷ್ಟೇ ವೇಗವಾಗಿ ಕೆಳಗೆ ಬೀಳುವ ಸಾಧ್ಯತೆಯು ಕೂಡ ಇರುತ್ತೆ.
ಇಕ್ವಿಟಿ ಮಾಸ್ಟರ್ ತಜ್ಞರ ಪ್ರಕಾರ ಬೆಳ್ಳಿ ಬೆಲೆ ಸತತವಾಗಿ ಏರುತ್ತಲೇ ಇರುವುದಿಲ್ಲ. ಬಡ್ಡಿ ದರಗಳ ಕಡಿತದ ನಿರೀಕ್ಷೆ ರಾಜಕೀಯ ಉದ್ವಿಜ್ಞತೆ ಮತ್ತು ಕೈಗಾರಿಕ ಬೇಡಿಕೆ ಈ ಮೂರು ಕಾರಣಗಳಿಂದ ಬೆಲೆ ಏರ್ತಾ ಇದೆ ಆದರೆ ಈ ಅಂಶಗಳಲ್ಲಿ ಸಣ್ಣ ಬದಲಾವಣೆ ಆದರೂ ಕೂಡ ಬೆಲೆ ದಿಡೀರ್ ಕುಸಿಯಬಹುದು ಎಜೆ ಬೆಲ್ನ ಡ್ಯಾನ್ ಕೋಡ್ಸ್ ವರ್ತ್ ಹೇಳುವಂತೆ ಇದು ಪ್ಯಾನಿಕ್ ಆಗುವ ಸಮಯವಲ್ಲ ಆದರೆ ಮಾರುಕಟ್ಟೆಯನ್ನ ಸೂಕ್ಷ್ಮವಾಗಿ ಗಮನಿಸಬೇಕು ಈಗಾಗಲೇ ಬೆಲೆಗಳು ದಾಖಲೆಯ ಮಟ್ಟದಲ್ಲಿ ಇರುವುದರಿಂದ ಈಗ ಹೂಡಿಕೆ ಮಾಡುವುದು ರಿಸ್ಕಿ ಆಗಬಹುದು ದೀರ್ಘಕಾಲೀನ ಹೂಡಿಕೆದಾರರಿಗೆ ಲಾಭವಾಗಿದ್ದರೂ ಕೂಡ ಈಗ ಹೊಸದಾಗಿ ಹಣ ಹಾಕುವವರು ಎಚ್ಚರದಿಂದ ಇರಬೇಕು ಬೆಲೆಗಳ ಸ್ವಲ್ಪ ಕರೆಕ್ಷನ್ ಆದಾಗ ಬೆಳ್ಳಿ ಖರದಿಸುವುದು ಬುದ್ಧಿವಂತಿಕೆ ಅಂತ ಮಾರುಕಟ್ಟೆ ಪಂಡಿತರು ಹೇಳುತ್ತಿದ್ದಾರೆ 2026ರಲ್ಲಿ ಏನಾಗಲಿದೆ ಬೆಳ್ಳಿ ಇಳಿಯುತ್ತಾ ಮುಂದೆ ಇದೆ ಇನ್ನು ಕಠಿಣ ಸಮಯ ಇನ್ನು ಇದಿನ್ನು 2026ರ ಆರಂಭ ಬೆಳ್ಳಿ ಬೆಲೆ ಈಗಲೇ 3 ಲಕ್ಷ ಮುಟ್ಟಿದೆ ಮುಂದೆ ಬೆಳ್ಳಿ ಬೆಲೆ ಔನ್ಸ್ಗೆ 100 ಡಾಲರ್ ಮುಟ್ಟುವ ಸಾಧ್ಯತೆ ಇದೆ ಅಂತ ಸಿಟಿ ಗ್ರೂಪ್ ನಂತಹ ಸಂಸ್ಥೆಗಳು ಭವಿಷ್ಯವನ್ನ ನೋಡಿದೇವೆ ಅಂದರೆ ಬೆಳ್ಳಿ ಬೆಲೆ 3 ಲಕ್ಷ20 ಸಾವಿರ ದಾಟಿ ಮುನ್ನುಗ್ಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.
ಬೆಳ್ಳಿ ಮಾರುಕಟ್ಟೆಯಲ್ಲಿ ಸ್ಪೆಕ್ಯುಲೇಷನ್ ಹೆಚ್ಚಾಗಿದೆ ಈ ಹಿನ್ನಲೆ ಎಚ್ಚರಿಕೆ ಅಗತ್ಯ. ಈ ಹಿಂದೆ 1980 ರಲ್ಲಿ ಹಂಟ್ ಬ್ರದರ್ಸ್ ಬೆಳ್ಳಿಗೆ ಹೊಡತವನ್ನ ಕೊಟ್ಟಿದ್ದು 2011 ರಲ್ಲಿ ಬೆಳ್ಳಿ ಬೆಲೆ ಒಮ್ಮೆಲೆ ಏರಿ ನಂತರ ಪಾತಾಳಕ್ಕೆ ಕುಸಿದ ಇತಿಹಾಸವಿದೆ. ಪ್ರಸ್ತುತ ಟ್ರಂಪ್ ಅವರ ನೀತಿಗಳು ಮತ್ತು ಯುರೋಪ್ ಜೊತೆಗಿನ ಸಂಘರ್ಷ ಎಲ್ಲಿಗೆ ಹೋಗಿ ಮುಟ್ಟುತ್ತೆ ಎಂಬುದರ ಮೇಲೆ ಮುಂದಿನ ದಿನಗಳ ಮಾರುಕಟ್ಟೆ ನಿರ್ಧಾರವಾಗಲಿದೆ. ಸೋಮವಾರ ಅಮೆರಿಕದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಡೇ ರಜೆ ಇದ್ದಿದ್ದರಿಂದ ವಾರ್ ಸ್ಟ್ರೀಟ್ ಬಂದಾಗಿತ್ತು. ಮಂಗಳವಾರ ಅಮೆರಿಕಾ ಮಾರುಕಟ್ಟೆ ತೆರೆದ ನಂತರ ಪರಿಸ್ಥಿತಿ ಇನ್ನಷ್ಟು ಸ್ಪಷ್ಟವಾಗಲಿದೆ. ಒಟ್ಟನಲ್ಲಿ ಡೊನಾಲ್ಡ್ ಟ್ರಂಪ್ ಅವರ ಗ್ರೀನ್ಲ್ಯಾಂಡ್ ಆಸೆ ಮತ್ತು ಟ್ಯಾರಿಫ್ ಪಾಲಿಟಿಕ್ಸ್ ಜಾಗತಿಕ ಆರ್ಥಿಕತೆಯನ್ನೇ ತಲ್ಲಣಗೊಳಿಸಿದೆ. ಒಂದು ಕಡೆ ಯುದ್ಧದ ಭೀತಿ ಇನ್ನೊಂದು ಕಡೆ ವ್ಯಾಪಾರ ಸಮರದ ಆತಂಕ ಇವೆರಡರ ನಡುವೆ ಸುರಕ್ಷಿತ ತಾಣವಾಗಿ ಚಿನ್ನ ಮತ್ತು ಬೆಳ್ಳಿ ಹೂಡಿಕೆದಾರರ ಪಾಲಿಗೆ ಸಂಜೀವನಿಯಾಗಿದೆ. ಆದರೆ ಸಾಮಾನ್ಯ ಜನರಿಗೆ ಆಭರಣ ಕೊಳ್ಳುವುದು ಇನ್ನು ಮುಂದೆ ಕನಸಿನ ಮಾತಾಗುವ ಹಂತಕ್ಕೆ ಬಂದು ತಲುಪಿದೆ.


