ನೀವು ಸಾಫ್ಟ್ವೇರ್ ಇಂಜಿನಿಯರ್ ಆಗೋ ಕನಸು ಕಾಣ್ತಾ ಇದ್ದೀರಾ ಅಥವಾ ಈಗಾಗಲೇ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದೀರಾ? ಹಾಗಿದ್ರೆ ಈ ನೋಡಿ ನಿಮ್ಮ ಎದೆಬಡಿತ ಜೋರಾಗೋದು ಗ್ಯಾರಂಟಿ. ನೆನ್ನೆ ಮೊನ್ನೆ ಅಷ್ಟೇ ಕಂಪ್ಯೂಟರ್ ಸೈನ್ಸ್ ತಗೊಂಡ್ರೆ ಲೈಫ್ ಸೆಟಲ್ ಲಕ್ಷ ಲಕ್ಷ ಸಂಬಳ ಅಂತ ಹೇಳ್ತಾ ಇದ್ರು ಆದರೀಗ ಕಾಲ ಬದಲಾಗಿದೆ. ಐಟಿ ಪ್ರಪಂಚದಲ್ಲಿ ಈಗ ಉಲ್ಟಾ ಆಟ ಶುರುವಾಗಿದೆ. ಕೋಡಿಂಗ್ ಕಲಿಯೋದು ವೇಸ್ಟ್ ಇನ್ಮುಂದೆ ಸಾಫ್ಟ್ವೇರ್ ಇಂಜಿನಿಯರ್ಗಳೇ ಬೇಕಾಗಿಲ್ಲ ಅನ್ನೋ ಮಟ್ಟಕ್ಕೆ ಟೆಕ್ನಾಲಜಿ ಬೆಳೆದು ನಿಂತಿದೆ.
ಭಾರತದ ದಿಗ್ಗಜ ಐಟಿ ಕಂಪನಿಗಳು ನೇಮಕಾತಿಯನ್ನೇ ನಿಲ್ಲಿಸಿದೆ. ಅಮೆರಿಕಾದಲ್ಲಿ ಸಾಫ್ಟ್ವೇರ್ ಕಲ್ತವರು ಹೋಟೆಲ್ನಲ್ಲಿ ಕೆಲಸ ಮಾಡ್ತಿದ್ದಾರೆ. ಬಿಲ್ ಗೇಟ್ಸ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ ಟೆಕ್ಕಿಗಳಿಗೆ ಬಂದಿರೋ ಆ ಕಷ್ಟ ಏನು ಭಾರತದ ಟಾಪ್ ಕಂಪನಿಗಳಾದ ಟಿಸಿಎಸ್ ಇನ್ಫೋಸಿಸ್ ನಲ್ಲಿ ಏನಾಗ್ತಾ ಇದೆ ಕೋಡಿಂಗ್ ಬದಲಿಗೆ ಬಂದಿರೋ ಈ ವೈಬ್ ಕೋಡಿಂಗ್ ಅಂದ್ರೆ ಏನು ಎಲ್ಲಾ ಶಾಕಿಂಗ್ ಡೀಟೇಲ್ಸ್ ಅನ್ನ ಇವತ್ತಿನಎಳೆ ಎಳೆಯಾಗಿ ನೋಡ್ತಾ ಹೋಗೋಣ ನಮ್ಮ ಮನೆಯ ಅಂಗಳದ ಸುದ್ದಿ ಅಂದ್ರೆ ಭಾರತದ ಐಟಿ ಕಂಪನಿಗಳ ಕಥೆ ನೋಡೋಣ 2026ನೇ ಆರ್ಥಿಕ ವರ್ಷದಲ್ಲಿ ಐಟಿ ಕಂಪನಿಗಳ ಹೈರಿಂಗ್ ಟ್ರೆಂಡ್ ಫುಲ್ ಡಲ್ ಆಗಿದೆ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಟಾಪ್ ಫೈವ್ ಐಟಿ ಕಂಪನಿಗಳ ನೇಮಕಾತಿ ಪ್ರಮಾಣ ಬರೊಬ್ಬರಿ ಶೇಕಡ 105ರಷ್ಟು ಕುಸಿತ ಕಂಡಿದೆ ಅದರಲ್ಲೂ ದೇಶದ ಅತಿ ದೊಡ್ಡ ಕಂಪನಿ ಟಿಸಿಎಸ್ ಕಥೆ ಕೇಳಿದ್ರೆ ಶಾಕ್ ಆಗ್ತೀರಾ ಕಳೆದಒ ಒಂಬತ್ತು ತಿಂಗಳಲ್ಲಿ ಟಿಸಿಎಸ್ ಬರುಬರಿ 25,000 ಉದ್ಯೋಗಿಗಳನ್ನ ಕಡಿಮೆ ಮಾಡಿದೆ. ಹೌದು ನೀವು ಕೇಳ್ತಿರೋದು ನಿಜ.
ಜಾಗತಿಕ ಮಟ್ಟದಲ್ಲಿ ಶೇಕಡ ಎರಡರಷ್ಟು ಉದ್ಯೋಗ ಕಡಿತ ಮಾಡೋ ಪ್ಲಾನ್ ನಲ್ಲಿ ಟಿಸಿಎಸ್ ಇದೆ. ಇನ್ನು ಇನ್ಫೋಸಿಸ್ ವಿಪ್ರೋ ಮತ್ತು ಹೆಚ್ಸಿಎಲ್ ಟೆಕ್ ಅಲ್ಪ ಸ್ವಲ್ಪ ಜನರನ್ನ ನೇಮಕಾತಿ ಮಾಡಿಕೊಂಡರು ಕೂಡ ಒಟ್ಟಾರೆ ಐಟಿ ವಲಯದಲ್ಲಿ ಉದ್ಯೋಗ ನೇಮಕಾತಿ ಸಂಖ್ಯೆ ಕಳೆದ ಒಂಬತ್ತು ತಿಂಗಳಲ್ಲಿ ಇಳಿಕೆಯಾಗಿದೆ. ಹಾಗಾದ್ರೆ ಕೆಲಸಾನೇ ಸಿಗಲ್ವಾ? ಏನಿದು ಹೊಸ ಕಂಡೀಷನ್? ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಅಂದ್ರೆ ಕಂಪನಿಗಳು ಸಾಮಾನ್ಯ ಇಂಜಿನಿಯರ್ ಗಳನ್ನ ಕೇಳ್ತಾ ಇಲ್ಲ, ಅವರಿಗೆ ಬೇಕಿರೋದು ಈಗ ಎಐ ಎಕ್ಸ್ಪರ್ಟ್ಸ್ ಈಗಾಗಲೇ ಎಐ ಅಥವಾ ಕೃತಕ ಬುದ್ದಿಮತ್ತೆ ಜಗತ್ತನ್ನ ಆಳ್ತಾ ಇದೆ. ಟಿಸಿಎಸ್,ಇನ್ಫೋಸಿಸ್, ಹೆಚ್ಸಿಎಲ್ ಟೆಕ್ ಕಂಪನಿಗಳು ಈಗ ಕೇವಲ ಎಐ ಗೊತ್ತಿರೋ ಸ್ಪೆಷಲೈಸ್ಡ್ ಸ್ಕಿಲ್ಸ್ ಇರೋ ಫ್ರೆಶರ್ಸ್ ಗೆ ಮಣೆ ಹಾಕ್ತಾ ಇವೆ. ಹೆಚ್ಸಿಎಲ್ ಟೆಕ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ಎಐ ಮತ್ತು ಡೇಟಾ ಸೈನ್ಸ್ ಗೊತ್ತಿರೋ ಫ್ರೆಶರ್ ಗಳಿಗೆ ಬರುಬರಿ 18 ರಿಂದ 22 ಲಕ್ಷ ರೂಪಾಯಿ ಪ್ಯಾಕೇಜ್ ಕೊಡ್ತಿದೆ ಇವರನ್ನ ಕಂಪನಿ ಎಲೈಟ್ ಕೇಡರ್ ಅಂತ ಕರೀತಾ ಇದೆ ಅಂದ್ರೆ ಸಾಫ್ಟ್ವೇರ್ ಇಂಜಿನಿಯರಿಂಗ್ ಈಗ ಕ್ವಾಂಟಿಟಿ ಮೇಲೆ ಅಲ್ಲ ಕ್ವಾಲಿಟಿ ಮೇಲೆ ನಿಂತಿದೆ ನೀವು ಬರೀ ಕೋಡಿಂಗ್ ಕಲಿತಿದ್ರೆ ಕೆಲಸ ಸಿಗುವುದು ಕಷ್ಟ.
ಆದ್ರೆ ಎ ಐ ಕಲ್ತಿದ್ರೆ ರಾಜ ಮರ್ಯಾದೆ ಶಾಕಿಂಗ್ ವಾರ್ನಿಂಗ್ ನೀಡಿದ ಬಿಲ್ ಗೇಟ್ಸ್ ಮತ್ತು ಆಂತ್ರೋಪಿಕ್ಸ್ ಸಿಇಓ ಇದು ಬರೀ ಭಾರತದ ಕಥೆಯಲ್ಲ ಜಗತ್ತಿನ ಶ್ರೀಮಂತ ಬಿಲ್ ಗೇಟ್ಸ್ ಕೂಡ ಒಂದು ದೊಡ್ಡ ಬಾಂಬ್ ಸಿಡಿಸಿದ್ದಾರೆ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಬಿಲ್ ಗೇಟ್ಸ್ ಮುಂದಿನ ನಾಲ್ಕರಿಂದ ಐದು ವರ್ಷಗಳಲ್ಲಿ ವೈಟ್ ಕಾಲರ್ ಜಾಬ್ಗಳು ಅಂದ್ರೆ ಆಫೀಸ್ನಲ್ಲಿ ಕೂತು ಮಾಡೋ ಕೆಲಸಗಳು ಸಂಕಷ್ಟಕ್ಕೆ ಸಿಲುಕಲಿವೆ ಅಂತ ಎಚ್ಚರಿಸಿದ್ದಾರೆ ಎಐ ಬರ್ತಾ ಇರೋ ವೇಗ ನೋಡಿದರೆ ಸರ್ಕಾರಗಳು ಮತ್ತು ಜನ ಇದಕ್ಕೆ ಇನ್ನು ತಯಾರಾಗಿಲ್ಲ ಅನ್ನೋದು ಅವರ ಮಾತು ಇದು ಸಾಲದು ಅಂತ ಖ್ಯಾತ ಎಐ ಕಂಪನಿ ಆಂತ್ರೋಪಿಕ್ ಸಿಇಓ ಡಾರಿಯೋ ಅಮೋಡೆ ಇನ್ನು ಭಯಾನಕ ಭವಿಷ್ಯ ನುಡಿದಿದ್ದಾರೆ ಅವರ ಪ್ರಕಾರ ಮುಂದಿನ ಆರರಿಂದ 12 ತಿಂಗಳಲ್ಲಿ ಸಾಫ್ಟ್ವೇರ್ ಕೋಡಿಂಗ್ ಕೆಲಸವನ್ನ ಎಐ ಪೂರ್ತಿಯಾಗಿ ಆವರಿಸಿಕೊಳ್ಳುತ್ತೆ ಅಂದ್ರೆ ಇನ್ಮುಂದೆ ಇಂಜಿನಿಯರ್ಗಳು ಕೂತು ಲೈನ್ ಬೈ ಲೈನ್ ಕೋಡ್ ಬರೆಯೋ ಅಗತ್ಯ ಇಲ್ಲಎಐ ಟೂಲ್ಗಳೇ ಕೋಡ್ ಬರೆದು ಚೆಕ್ ಮಾಡಿ ರನ್ ಕೂಡ ಮಾಡ್ತಾವೆ.
ಈಗಾಗಲೇ ಗೂಗಲ್ ನಲ್ಲಿ ಬರೆಯಲಾಗುವ ಕೋಡ್ಗಳಲ್ಲಿ ಶೇಕಡ 25ಕ್ಕೂ ಹೆಚ್ಚು ಭಾಗವನ್ನಎಐ ಐ ಬರೀತಾ ಇದೆ ಇದು ನಂಬೋಕೆ ಕಷ್ಟ ಆದರೂ ನಿಜ ಈಗ ಒಂದು ರಿಯಲ್ ಸ್ಟೋರಿ ಹೇಳ್ತೀವಿ ಕೇಳಿ ಅಮೆರಿಕದಲ್ಲಿ ಮಾನಸಿ ಮಿಶ್ರಾ ಅನ್ನೋ ಹುಡುಗಿ ಕಂಪ್ಯೂಟರ್ ಸೈನ್ಸ್ ಪದವಿ ಪಡ್ಕೊಂಡಳು ಒಳ್ಳೆ ಕೆಲಸ ಸಿಗುತ್ತೆ ಅಂತ ಕನಸು ಕಂಡಿದ್ಳು ಆದರೆ ಆಗಿದ್ದೆ ಬೇರೆ ಸಾವಿರಾರು ಕಡೆ ಅಪ್ಲೈ ಮಾಡಿದ್ರು ಸಾಫ್ಟ್ವೇರ್ ಕೆಲಸ ಸಿಗಲೇ ಇಲ್ಲ ಕೊನೆಗೆ ಬೇರೆ ದಾರಿ ಇಲ್ಲದೆ ಆಕೆ ಶಿಫೋಟಲ್ ಅನ್ನೋ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಬೇಕಾಯಿತು ಇದು ಉಗ್ರ ಕಥೆಯಲ್ಲ ಅಮೆರಿಕದಲ್ಲಿ ಈಗ ಕಂಪ್ಯೂಟರ್ ಸೈನ್ಸ್ ಓದಿದವರ ನಿರುದ್ಯೋ ಉದ್ಯೋಗದ ಪ್ರಮಾಣ ಶೇಕಡ 6.1ರಷ್ಟಿದೆ ಒಂದರಷ್ಟಿದೆ ಬಯಾಲಜಿ ಅಥವಾ ಆರ್ಟ್ಸ್ ಓದಿದವರಿಗಿಂತ ಇವರ ಪರಿಸ್ಥಿತಿ ಕೆಟ್ಟದಾಗಿದೆ ಕಾರಣ ಇಷ್ಟೇ ಎಂಟ್ರಿ ಲೆವೆಲ್ ಕೋಡಿಂಗ್ ಕೆಲಸಗಳನ್ನ ಈಗ ಎಐ ಆರಾಮಾಗಿ ಮಾಡ್ತಾ ಇದೆ ಹಾಗಾಗಿ ಕಂಪನಿಗಳು ಜೂನಿಯರ್ ಇಂಜಿನಿಯರ್ಗಳನ್ನ ತಗೊಳೋಕೆ ಹಿಂದೆಟ್ಟು ಹಾಕ್ತಾ ಇವೆ ಟೆಕ್ಕಿಗಳೇ ಬೇಡ ಏನಿದು ವೈಬ್ ಕೋಡಿಂಗ್ಇ.
ದೆಲ್ಲದರ ಮಧ್ಯೆ ಹೊಸದೊಂದು ಟ್ರೆಂಡ್ ಹುಟ್ಟುಕೊಂಡಿದೆ ಅದೇ ವೈಬ್ ಕೋಡಿಂಗ್ ಹಿಂದೆಲ್ಲ ಆಪ್ ಅಥವಾ ವೆಬ್ಸೈಟ್ ಮಾಡಬೇಕು ಅಂದ್ರೆ ಪೈತಾನ್ ಜಾವ ಅಂತೆಲ್ಲ ಕೋಡಿಂಗ್ ಭಾಷೆ ಕಲಿಬೇಕಿತ್ತು ಆದರೆ ಈಗ ಹಾಗಿಲ್ಲ ನಿಮಗೆ ಕೋಡಿಂಗ್ ಬರದೆ ಇದ್ರೂ ಪರವಾಗಿಲ್ಲ ಜಸ್ಟ್ ನಿಮಗೆ ಏನು ಬೇಕು ಅಂತ ಇಂಗ್ಲಿಷ್ನಲ್ಲಿ ಟೈಪ್ ಮಾಡಿದ್ರೆ ಸಾಕು ಎಐ ನಿಮಗಾಗಿ ಆಪ್ ರೆಡಿ ಮಾಡುತ್ತೆ ಕರ್ಸರ್ ರೆಪ್ಲಿಟ್ ಬೋಲ್ಟ್ ಅಂತ ಟೂಲ್ಗಳು ಈಗ ಸಾಮಾನ್ಯ ಜನರಿಗೂ ಸಾಫ್ಟ್ವೇರ್ ಬಿಲ್ಡ್ ಮಾಡೋ ಶಕ್ತಿ ಕೊಟ್ಟಿವೆ ಇದನ್ನೇ ವೈಬ್ ಕೋಡಿಂಗ್ ಅಂತ ಕರೀತಾರೆ ಪತ್ರಕರ್ತರು ಟೀಚರ್ಗಳು ಅಷ್ಟೇ ಯಾಕೆ ಯಾರು ಬೇಕಾದರೂ ತಮಗಏನು ಬೇಕು ಆ ಸಾಫ್ಟ್ವೇರ್ ನ್ನ ತಾವೇ ಮಾಡಿಕೊಳ್ಳುತಿದ್ದಾರೆ. ಒಂದು ಕಡೆ ಇದು ಖುಷಿ ಸುದ್ದಿಯಾದರೆ ವರ್ಷಘಟ್ಟಲೆ ಕೋಡಿಂಗ್ ಕಲಿತ ಇಂಜಿನಿಯರ್ಗಳಿಗೆ ಇದು ದೊಡ್ಡ ಹೊಡೆತ ನೀಡಿದೆ. ಸೋ ಫ್ರೆಂಡ್ಸ್ ಪರಿಸ್ಥಿತಿ ಹೀಗಿದೆ.
26 ಮತ್ತು ಅದರ ನಂತರದ ವರ್ಷಗಳಲ್ಲಿ ಬರಿ ಡಿಗ್ರಿ ಸರ್ಟಿಫಿಕೇಟ್ ಇದ್ದರೆ ಕೆಲಸ ಸಿಗೋದು ಡೌಟ್ ಎಐ ಟೂಲ್ಗಳನ್ನ ಹೇಗೆ ಬಳಸೋದು ಎಐ ಜೊತೆಗೆ ಹೇಗೆ ಕೆಲಸ ಮಾಡೋದು ಅಂತ ಕಲಿಲೇಬೇಕು ಇಲ್ಲಂದ್ರೆ ಬಿಲ್ ಗೇಟ್ಸ್ ಹೇಳಿದ ಹಾಗೆ ವೈಟ್ ಕಾಲರ್ ಜಾಬ್ಗಳು ಮಾಯವಾಗುವುದು ಖಂಡಿತ ಈಎಐ ಕ್ರಾಂತಿ ಬಗ್ಗೆ ನಿಮಗೇನ ಅನ್ಸುತ್ತೆ ನಿಜವಾಗಲೂ ಸಾಫ್ಟ್ವೇರ್ ಇಂಜಿನಿಯರ್ಗಳ ಕೆಲಸಕ್ಕೆ ಕುತ್ತು ಬರುತ್ತಾ ಅಥವಾ ಇದೆಲ್ಲ ಸುಮ್ನೆ ಗಾಳಿಸು ದಿನ.


