Saturday, February 7, 2026
HomeTech Tips and TricksRBI ಹೊಸ ನಿಯಮಗಳು 2026: ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಬದಲಾವಣೆಗಳು?

RBI ಹೊಸ ನಿಯಮಗಳು 2026: ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಬದಲಾವಣೆಗಳು?

ನೀವು ಬ್ಯಾಂಕ್ನಲ್ಲಿ ಅಕೌಂಟ್ ಅನ್ನ ಹೊಂದಿದ್ದೀರಾ ಅಥವಾ ಯಾವುದಾದರೂ ಲೋನ್ ಅನ್ನ ಮಾಡಿದ್ದೀರಾ ಹಾಗಾದ್ರೆ ಆರ್ಬಿಐ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆರು ದೊಡ್ಡ ಬದಲಾವಣೆಯನ್ನ ತಂದಿರುವಂತದ್ದು ಈ ಹೊಸ ನಿಯಮಗಳಿಂದ ಸಾಮಾನ್ಯ ಜನರಿಗೆ ಸಿಕ್ಕಪಟ್ಟೆ ಲಾಭ ಇದೆ ಹಾಗಾದರೆ ಆ ಆರು ಪ್ರಮುಖ ಬದಲಾವಣೆಗಳು ಯಾವುದು ಅಂತ ಗೊತ್ತಾಗಬೇಕು.

ಒಂದು ನಂಬಿಕೆ ಅಲ್ವಾ ಆದರೆ ಅದೇ ಬ್ಯಾಂಕ್ನಲ್ಲಿ ನಮಗೆ ಗೊತ್ತಿಲ್ಲದೆ ಎಷ್ಟೋ ಬಾರಿ ಚಾರ್ಜ್ಗಳು ಕಟ್ ಆಗುತ್ತೆ ಲೋನ್ ತೀರಿಸೋದಕ್ಕೆ ಹೋದರೆ ದಂಡ ಹಾಕ್ತಾರೆ ಅಥವಾ ನಮ್ಮದೇ ಹಣ ಸಿಕ್ಕಾಕೊಂಡಾಗ ಬ್ಯಾಂಕ್ ನಮ್ಮನ್ನ ಸುತ್ತಾಡಿಸ್ತಾರೆ ಅಲ್ವಾ ಆದರೆ ಇನ್ನು ಮುಂದೆ ಬ್ಯಾಂಕುಗಳ ಈ ಒಂದು ಆಟ ನಡೆಯಲ್ಲ ಸ್ನೇಹಿತರೆ 2026ರ ಆರಂಭದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಹಕರಿಗಾಗಿ ಅತ್ಯಂತ ಕ್ರಾಂತಿಕಾರಿ ಅಂತ ಹೇಳಬಹುದು ಆರು ಬದಲಾವಣೆಯನ್ನ ತಂದಿದೆ ಇದು ನಿಮ್ಮ ಜೇಬಿನ ಮೇಲಿನ ಹೊರೆಯನ್ನ ಇಳಿಸೋದು ಅಷ್ಟೇ ಅಲ್ಲ ಬ್ಯಾಂಕ್ ಅಧಿಕಾರಿಗಳು ನಿಮಗೆ ಸರಿಯಾದ ಸೇವೆ ನೀಡುವಂತೆ ಮಾಡಿದೆ ನಿಮ್ಮ ಹಣವನ್ನ ನೀವು ಯಾವ ರೀತಿ ರೀತಿಯಾಗಿ ಉಳಿಸಬಹುದು ಅನ್ನೋದು ನಿಮಗೆ ಅರ್ಥ ಆಗುತ್ತೆ.

ಏನೇನು ಬದಲಾವಣೆ ಆಗಿದೆ ಅಂತ ಪ್ರತಿಯೊಬ್ಬ ನಾಗರಿಕರಿಗೂ ಕೂಡ ಈ ಒಂದು ಮಾಹಿತಿ ಗೊತ್ತಿರಬೇಕು ಸ್ನೇಹಿತರೆ ಸೋ ಸ್ನೇಹಿತರೆ ಈಗ ಮೊದಲನೇ ನಿಯಮದ ಬಗ್ಗೆ ಹೇಳೋದಾದ್ರೆ ವಾರಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ಅಪ್ಡೇಟ್ ಆಗುವಂತದ್ದು ಅಂದ್ರೆ ನಾವು ಸಿಬಿಲ್ ಸ್ಕೋರ್ ಕ್ರೆಡಿಟ್ ಸ್ಕೋರ್ ಅಂತ ಹೇಳ್ತೀವಲ್ವಾ ಸಾಲ ಬೇಕು ಅಂತ ಹೇಳಿದವರಿಗೆ ಮೊದಲು ನೆನಪಾಗೋದು ಏನು ಹೇಳಿ ಸಿಬಿಲ್ ಸ್ಕೋರ್ ಸೋ ಹಿಂದೆ ಏನಾಗಿತ್ತು ಅಂತಂದ್ರೆ ನೀವು ಇವತ್ತು ಲೋನ್ ಅನ್ನ ಕಟ್ಟಿದ್ರೆ ಅದು ನಿಮ್ಮ ಸ್ಕೋರ್ನಲ್ಲಿ ಅಪ್ಡೇಟ್ ಆಗೋದಕ್ಕೆ 30ರಿಂದ 45 ದಿನ ಬೇಕಾಗ್ತಾ ಇತ್ತು ಒಂದು ಎಕ್ಸಾಂಪಲ್ನ ಕೊಡ್ತೀನಿ ನೀವು ಒಂದು ಲೋನ್ಅ ನ್ನ ಪೂರ್ತಿ ತಿರಿಸ್ತೀರಾ ನಿಮಗೆ ಅರ್ಜೆಂಟ್ಆಗಿ ಮತ್ತೊಂದು ಏನೋ ಒಂದು ಹೊಸ ಬಿಸಿನೆಸ್ ಶುರು ಮಾಡೋದಕ್ಕೆ ಲೋನ್ ಬೇಕಾಗಿರುತ್ತೆ ಆದರೆ ಹಳೆ ಸಾಲ ಇನ್ನು ಕ್ಲೋಸ್ ಆಗಿಲ್ಲ ಅಂತ ಸಿಬಿಲ್ನಲ್ಲಿ ತೋರಿಸ್ತಾ ಇರುತ್ತೆ ಇದರಿಂದ ನಿಮಗೆ ಏನಾಗುತ್ತೆ.

ಹೊಸ ಲೋನ್ ಬೇಕು ಅಂತಂದ್ರು ಕೂಡ ಸಿಗಲ್ಲ ಆದರೆ ಇನ್ನು ಮುಂದೆ ಬ್ಯಾಂಕುಗಳು ಪ್ರತಿವಾರ ಅಂದ್ರೆ ತಿಂಗಳಿಗೆ ನಾಲ್ಕು ಬಾರಿ ಮಾಹಿತಿಯನ್ನ ಕ್ರೆಡಿಟ್ ಕಂಪನಿಗಳಿಗೆ ಕೊಡಬೇಕು ತಿಂಗಳಿಗೆ ನಾಲ್ಕು ಬಾರಿ ಅಂತಂದ್ರೆಏ 14 21 28ನೇ ತಾರೀಖು ಬ್ಯಾಂಕಗಳು ನಿಮ್ಮ ಮಾಹಿತಿಯನ್ನ ಅಪ್ಡೇಟ್ ಮಾಡಲೇಬೇಕು ಇದರಿಂದ ನೀವು ಎಮರ್ಜೆನ್ಸಿ ಲೋನ್ ಬೇಕು ಅಂತಅಂದಾಗ ಕಾಯುವಂತ ಅವಶ್ಯಕತೆ ಇರೋದಿಲ್ಲ ಇದು ಮೊದಲನೇ ಒಂದು ಮೇಜರ್ ಅಪ್ಡೇಟ್ ಆಗಿರುತ್ತೆ

ಎರಡನೇ ನಿಯಮದ ಬಗ್ಗೆ ನೋಡೋದಾದ್ರೆ ಲೋನ್ ಕ್ಲೋಸ್ ಮಾಡಿದ್ರೆ ದಂಡ ಇಲ್ಲ ಜೀರೋ ಫೋರ್ ಕ್ಲೋಜರ್ ಫೀಸ್ ಅಂತ ಹೇಳ್ತೀವಿ ನಾವು ಸಾಲ ತೀರಿಸೋಕೆ ಕಷ್ಟಪಡ್ತೀವಿ ಆದರೆ ಕೈಯಲ್ಲಿ ಸ್ವಲ್ಪ ದುಡ್ಡು ಬಂದಾಗ ಸಾಲವನ್ನ ಬೇಗ ತೀರಿಸಿಬಿಡೋಣ ಋಣಮುಕ್ತರಾಗೋಣ ಅಂತ ಅನ್ಕೊಳ್ತೀವಿ ಆದರೆ ಬ್ಯಾಂಕಗಳು ಗಳು ಏನು ಮಾಡ್ತಿದ್ರು ಗೊತ್ತಾ ನೀವು ಅವಧಿಗಿಂತ ಮುಂಚೆ ಸಾಲ ತೀರಿಸಿದ್ರೆ ಅದಕ್ಕೆ 2% ಇಂದ 4% ವರೆಗೆ ಫೋರ್ ಕ್ಲೋಜರ್ ಚಾರ್ಜಸ್ ಅಂತ ದಂಡ ಹಾಕ್ತಾ ಇದ್ರು ಹೌದಾ ಸೋ ಈಗ ಹೊಸ ನಿಯಮ ಏನು ಗೊತ್ತಾ ಜನವರಿ 1 2026 ರಿಂದ ಯಾವುದೇ ಗ್ರಹಸಾಲ ಆಗಿರಬಹುದು ಕಾರ್ ಸಾಲ ಆಗಿರಬಹುದು ವೈಯಕ್ತಿಕ ಸಾಲಗಳು ಫ್ಲೋಟಿಂಗ್ ಬಡ್ಡಿ ದರದಲ್ಲಿದ್ದರೆ ಅವಧಿಗಿಂತ ಮುಂಚೆ ಇನ್ ಕೇಸ್ ನೀವು ತೀರಿಸಿದ್ರೆ ಬ್ಯಾಂಕ್ ಒಂದು ರೂಪಾಯಿ ಕೂಡ ದಂಡ ವಿಧಿಸೋ ಹಾಗಿಲ್ಲ ಬಟ್ ಇಲ್ಲಿ ನೀವು ಗಮನದಲ್ಲಿ ಇಟ್ಕೊಳ್ಳಿ ಇದು ಕೇವಲ ಫ್ಲೋಟಿಂಗ್ ರೇಟ್ ಮಾರುಕಟ್ಟೆಗೆ ತಕ್ಕಂತೆ ಬದಲಾಗುವಂತ ಬಡ್ಡಿ ಸಾಲಗಳಿಗೆ ಮಾತ್ರ ಅನ್ವಯ ಆಗುತ್ತೆ ಸೋ ಫಿಕ್ಸ್ಡ್ ರೇಟ್ ಸಾಲಗಳಿಗೆ ಇದು ಅನ್ವಯ ಆಗೋದಿಲ್ಲ ಇದನ್ನ ಕನ್ಸಿಡರ್ ಆಗಿ ತಗೊಳೋದಿಲ್ಲ.

ಮೂರನೇ ನಿಯಮದ ಬಗ್ಗೆ ಹೇಳ್ತೀನಿ ಇದು ತುಂಬಾ ಇಂಪಾರ್ಟೆಂಟ್ ಸೋ ಫೇಲ್ ಆದಂತ ಟ್ರಾನ್ಸಾಕ್ಷನ್ ಗೆ ದಿನಕ್ಕೆ 100 ರೂಪಾಯಿ ಅಂತೆ ಪರಿಹಾರ ಅಂದ್ರೆ ನೀವು ಎಟಿಎಂ ಗೆ ಹೋಗ್ತೀರಾ 5000 ರೂಪಾಯಿ ವಿಥ್ ಡ್ರಾ ಮಾಡ್ತೀರಾ ಮಿಷಿನ್ ಅಲ್ಲಿ ಹಣ ಬರಲ್ಲ ಆದ್ರೆ ಮೊಬೈಲ್ಗೆ ಹಣ ಕಟ್ ಆಗಿದೆ ಅನ್ನುವಂತ ಒಂದು ಮೆಸೇಜ್ ಬರುತ್ತೆ ಇದು ಸಾಕಷ್ಟು ಜನರಿಗೆ ಆಗಿರುತ್ತೆ ಆಗ ಶುರುವಾಗುತ್ತೆ ನೋಡಿ ತಲೆನೋವು ಬ್ಯಾಂಕ್ಗೆ ಅರ್ಜಿ ಹಾಕ್ತೀರಾ ಕಸ್ಟಮರ್ ಕೇರ್ ಕಾಲ್ ಮಾಡಿ ಸಾಕಾಗಿ ಹೋಗುತ್ತೆ ಸೋ ಈಗ ಹೊಸ ನಿಯಮ ಏನಪ್ಪಾ ಅಂತಂದ್ರೆ ಇಂತಹ ಟೆಕ್ನಿಕಲ್ ಸಮಸ್ಯೆಗಳಿಂದ ಇನ್ ಕೇಸ್ ಹಣ ಕಟ್ಟಾದ್ರೆ ಬ್ಯಾಂಕ್ ಅದನ್ನ ಐದು ಕೆಲಸದ ದಿನಗಳ ಒಳಗೆ ವರ್ಕಿಂಗ್ ಡೇಸ್ ಒಳಗಡೆ ನಿಮ್ಮ ಖಾತೆಗೆ ವಾಪಸ್ ಹಾಕ್ಬೇಕು ಒಂದುವೇಳೆ ಐದು ದಿನ ಮೀರಿದ್ರೆ ಆರನೇ ದಿನದಿಂದ ಬ್ಯಾಂಕ್ ತಾನಾಗಿ ನಿಮ್ಮ ಒಂದು ಖಾತೆಗೆ ಪ್ರತಿದಿನಕ್ಕೆ 100 ರೂಪಾಯಿಂತೆ ದಂಡದ ಹಣವನ್ನ ಜಮಾ ಮಾಡಬೇಕಾಗುತ್ತೆ ಸ್ನೇಹಿತರೆ ನೀವು ಕೇಳದಿದ್ರೂ ಕೂಡ ಬ್ಯಾಂಕ್ ಈ ಹಣವನ್ನ ಕೊಡಲೇಬೇಕು ಇದು ಕೂಡ ಜಾರಿಯಾಗಿರುವಂತದ್ದು ಆರ್ಬಿಐ ನ ಒಂದು ಮೂರನೇ ಅಪ್ಡೇಟ್ ಆಗಿರುತ್ತೆ.

ನಾಲ್ಕನೇ ನಿಯಮದ ಬಗ್ಗೆ ಹೇಳ್ತೀನಿ ಸೋ ಗೋಲ್ಡ್ ಮೆಟಲ್ ಲೋನ್ ಜಿಎಂಎಲ್ ಕಾಲಾವಕಾಶವನ್ನ ಹೆಚ್ಚಳ ಮಾಡಿದ್ದಾರೆ ಅಂದ್ರೆ ಈ ನಿಯಮ ವಿಶೇಷವಾಗಿ ಸಣ್ಣ ಆಗಿರಬಹುದು ದೊಡ್ಡ ಮಟ್ಟದ ಚಿನ್ನದ ವ್ಯಾಪಾರಿಗಳಿಗಆಗಿರಬಹುದು ಅಥವಾ ಯಾರ ಜುವೆಲರಿಸ್ನ ತಯಾರಿಕೆ ಮಾಡ್ತಾರೋ ಅವರು ಚಿನ್ನವನ್ನ ಸಾಲವಾಗಿ ಪಡೆದು ಆಭರಣ ತಯಾರಿಸಿ ಮಾರಾಟ ಮಾಡ್ತಾರಲ್ವಾ ಅವರಿಗೆ ಅಪ್ಲಿಕೇಬಲ್ ಆಗುತ್ತೆ. ಅಂದ್ರೆ ಹಿಂದೆ ಇದಕ್ಕೆ 180 ದಿನಗಳು ಅಂದ್ರೆ ಆರು ತಿಂಗಳ ಗಡುವಿತ್ತು ಆದರೆ ಈಗ ಅದನ್ನ 270 ದಿನಗಳಿಗೆ ಅಂದ್ರೆ ಒಂಬತ್ತು ತಿಂಗಳಿಗೆ ಏರಿಸಲಾಗಿದೆ. ಸೋ ಇದರಿಂದ ಆಭರಣ ತಯಾರಿಕೆಗೆ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳೋದಕ್ಕೆ ಹೆಚ್ಚಿನ ಸಮಯ ಸಿಗುತ್ತೆ. ಇದು ಮಾರುಕಟ್ಟೆಯಲ್ಲಿ ಚಿನ್ನದ ಆಭರಣಗಳ ಬೆಲೆ ಸ್ಥಿರವಾಗಿರೋದಕ್ಕೂ ಕೂಡ ಪರೋಕ್ಷವಾಗಿ ಡೈರೆಕ್ಟಾಗಿ ಇಂಡೈರೆಕ್ಟ್ ಆಗಿ ಸಹಾಯ ಮಾಡುತ್ತೆ ಅಂತಾನೆ ಹೇಳಬಹುದು. ಸೋ ಇದು ನಾಲ್ಕನೇ ಅಪ್ಡೇಟ್ ಆಗಿರುತ್ತೆ. ಇನ್ನು ಐದನೇ ಅಪ್ಡೇಟ್ ಬಗ್ಗೆ ಹೇಳ್ತಾ ಹೋಗ್ತೀನಿ.

ಒಬ್ಬ ಅಕೌಂಟ್ ಹೋಲ್ಡರ್ ಗೆ ನಾಲ್ವರು ನಾಮಿನಿಗಳು ಇಲ್ಲಿವರೆಗೆ ಸಾಮಾನ್ಯವಾಗಿ ಒಂದು ಅಕೌಂಟ್ ಓಪನ್ ಮಾಡುವಾಗ ಒಬ್ಬರನ್ನ ಮಾತ್ರ ನಾಮಿನಿ ಮಾಡ್ತಿದ್ವಿ ಹೌದಾ ಆದರೆ ಮನೆಯ ಯಜಮಾನ ಇನ್ ಕೇಸ್ ತೀರ್ಕೊಂಡಾಗ ಬ್ಯಾಂಕ್ ಖಾತೆಯಲ್ಲಿರೋ ಹಣ ತೆಗಿಬೇಕು ಅಂತಂದ್ರೆ ಫ್ಯಾಮಿಲಿಯವರು ಕೋರ್ಟು ಕಚೇರಿ ಅಂತ ಅಲಿಯೋ ಪರಿಸ್ಥಿತಿ ಇತ್ತು ಯಾಕಂತಂದ್ರೆ ಒಬ್ಬ ನಾಮಿನಿ ಮಾತ್ರ ಇದ್ದಿದ್ದು ಸೋ ಹಾಗಿದ್ದಾಗ ಈಗಿನ ಒಂದು ಹೊಸ ಸೌಲಭ್ಯ ಏನು ಅಂತಂದ್ರೆ ಇನ್ಮುಂದೆ ನೀವು ನಿಮ್ಮ ಸಿಂಗಲ್ ಅಕೌಂಟ್ ಅಥವಾ ಲಾಕರ್ಗೆ ಒಟ್ಟು ನಾಲ್ಕು ಜನರನ್ನ ನಾಮಿನಿ ಮಾಡಬಹುದು ಯಾರಿಗೆ ಎಷ್ಟು ಪರ್ಸೆಂಟ್ ಹಣ ಹೋಗಬೇಕು ಅನ್ನೋದನ್ನ ಇಲ್ಲಿ ನೀವೇ ಡಿಸೈಡ್ ಮಾಡ್ಕೊಳ್ಳಬಹುದು ಒಂದು ಎಕ್ಸಾಂಪಲ್ ನ್ನ ಕೊಡ್ತೀನಿ ಹೆಂಡತಿಗೆ 50% ಮಕ್ಕಳಿಗೆ ತಲ 25% ಹೀಗೆ ಇದರಿಂದ ಭವಿಷ್ಯದಲ್ಲಿ ಆಸ್ತಿ ಹಂಚಿಕೆ ವಿವಾದಗಳು ಇರೋದಿಲ್ಲ ಸ್ನೇಹಿತರೆ ಜೊತೆಗೆ ನಾಮಿನಿ ವಿಚಾರ ಅಂತ ಬಂದಾಗಲೂ ಕೂಡ ಇಲ್ಲಿ ನಾಲ್ಕು ಜನರ ನಾಮಿನಿ ನಾವು ಮಾಡಿರ್ತೀವಿ.

ಸಿಬಿಲ್ ಸ್ಕೋರ್ ಚೆನ್ನಾಗಿದ್ರೆ ಬಡ್ಡಿಯನ್ನ ಕಡಿಮೆ ಮಾಡಿಸಬಹುದು. ಹೌದು ನೀವು ಮೂರು ವರ್ಷದ ಹಿಂದೆ ಲೋನ್ ತಗೊಂಡಾಗ ನಿಮ್ಮ ಒಂದು ಸಿಬಿಲ್ ಸ್ಕೋರ್ 700 ಇತ್ತು ಅಂತ ಅಂಕೊಳ್ಳಿ ಆಗ ಬ್ಯಾಂಕ್ ನಿಮಗೆ 10% ಬಡ್ಡಿ ವಿತ್ಸಿರುತ್ತೆ ನಂತರ ನೀವು ಸರಿಯಾಗಿ ಸಾಲವನ್ನ ಕಟ್ಟಿ ನಿಮ್ಮ ಒಂದು ಸಿಬಿಲ್ ಸ್ಕೋರ್ 800ಕ್ಕೆ ಏರಿದೆ ಅಂತ ಅಂಕೊಳ್ಳಿ ಆದರೆ ನಿಮಗಿದ್ದಂತ ಬಡ್ಡಿ ಕಡಿಮೆ ಆಗಿರೋದಿಲ್ಲ ಸೋ ಈಗ ಹೊಸ ನಿಯಮ ಏನಪ್ಪಾ ಅಂತಂದ್ರೆ ನೀವು ಬ್ಯಾಂಕ್ಗೆ ಹೋಗಿ ನನ್ನ ಒಂದು ಸಿಬಿಲ್ ಸ್ಕೋರ್ ಈಗ ತುಂಬಾ ಚೆನ್ನಾಗಿದೆ ಹಾಗಾಗಿ ನನಗೆ ಬಡ್ಡಿ ತರ ಕಡಿಮೆ ಮಾಡಿ ಅಂತ ರಿಕ್ವೆಸ್ಟ್ ಮಾಡಬಹುದು ಸ್ನೇಹಿತರೆ ಅಂದ್ರೆ ಮೊದಲು ಇದಕ್ಕೆ ಮೂರು ವರ್ಷದ ಕಾಯುವಿಕೆ ಅವಧಿ ಇತ್ತು ಆದರೆ ಈಗ ಲಾಕಿನ್ ಪಿರಿಯಡ್ ಅನ್ನ ತೆಗೆದು ಹಾಕಲಾಗಿದೆ ಸೋ ನಿಮ್ಮ ಒಂದು ಸಿಬಿಲ್ ಸ್ಕೋರ್ ಇಂಪ್ರೂವ್ ಆದ ತಕ್ಷಣ ನೀವು ಬಡ್ಡಿ ದರವನ್ನ ಕಡಿಮೆ ಮಾಡಿಕೊಳ್ಳಬಹುದು ಅದಕ್ಕೆ ಅರ್ಹರಾಗಿರ್ತೀರಾ ಇದರಿಂದ ನಿಮ್ಮ ಒಂದು ಪ್ರತಿ ತಿಂಗಳ ಇಎಂಐ ಏನು ಕಟ್ತಾ ಇದ್ರೆ ಸಾವಿರಾರು ರೂಪಾಯಿ ಉಳಿತಾಯ ಆಗುತ್ತೆ.

ಈ ಒಂದು ಆರು ನಿಯಮಗಳು ಗ್ರಾಹಕರಾದಂತಹ ನಮಗಾಗಿ ಆರ್ಬಿಐ ಮಾಡಿರುವಂತಹ ಒಂದು ದೊಡ್ಡ ಅಸ್ತ್ರ ಅಂತ ಹೇಳಬಹುದು ಬ್ಯಾಂಕುಗಳು ನಮಗೆ ಸರಿಯಾದ ಮಾಹಿತಿ ನೀಡದೆ ಇರಬಹುದು. ಒಬ್ಬ ಜವಾಬ್ದಾರಿಯುತ ಗ್ರಾಹಕನಾಗಿ ಈ ಒಂದು ವಿಚಾರಗಳು ನಮಗೆ ಗೊತ್ತಿರಬೇಕು ಸ್ನೇಹಿತರೆ ಸೋ ಆರ್ಬಿಐ ತಂದಿರೋ ಈ ಆರು ಬದಲಾವಣೆಗಳು ಗ್ರಾಹಕರನ್ನ ರಾಜನನ್ನಾಗಿ ಮಾಡೋದಕ್ಕೆ ಹೊರಟಿದೆ ಸೋ ನಿಮ್ಮ ಒಂದು ಹಕ್ಕುಗಳ ಬಗ್ಗೆ ನಿಮಗೆ ಗೊತ್ತಿದ್ರೆ ಬ್ಯಾಂಕ್ ನಿಮ್ಮನ್ನ ವಂಚಿಸೋದಕ್ಕೆ ಸಾಧ್ಯ ಇಲ್ಲ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments