Tuesday, September 30, 2025
HomeTech NewsMobile Phonesಸರಳ ಫೋನ್, ಪ್ರೊ ಫೋಟೋ! | ಮೊಬೈಲ್ ಫೋಟೋಗ್ರಫಿ ಸುಳಿವು

ಸರಳ ಫೋನ್, ಪ್ರೊ ಫೋಟೋ! | ಮೊಬೈಲ್ ಫೋಟೋಗ್ರಫಿ ಸುಳಿವು

ನಮ್ಮ ದೇಶದಲ್ಲಿ ನಮ್ಮ ಸೊಸೈಟಿಯಲ್ಲಿ ಅದರ ನಡುವೆ ದೊಡ್ಡ ಸಮಸ್ಯೆ ಇನ್ನೊಂದು ಯಾವುದು ಗೊತ್ತಾ ಫೋಟೋ ಚೆನ್ನಾಗಿ ತೆಗೆಯೋದು ಹೆಂಗೆ ಅಂತ ಒಳ್ಳೆ ಫೋನೇ ಇದೆ ನನ್ನ ಹತ್ರ ಆದರೂ ಒಳ್ಳೆ ಫೋಟೋಸ್ ತೆಗಿಲಿಕ್ಕೆ ಬರ್ತಾ ಇಲ್ಲ ಅನ್ನೋ ಕೊರಗು ತುಂಬಾ ಜನಕ್ಕೆ ಕಾಡ್ತಾ ಇರುತ್ತೆ ಏನೋ ಕೆಲವರ ಹತ್ರ ನಾರ್ಮಲ್ ಫೋನ್ ಇರುತ್ತೆ ಅದರಲ್ಲೇ ಒಳ್ಳೆ ಫೋಟೋ ತೆಗೆಯೋದು ಹೇಗೆ ಅಂತ ಹೇಳಿ ಟ್ರೈ ಮಾಡ್ತಿರ್ತಾರೆ ಸ್ನೇಹಿತರೆ ಇವತ್ತು ಪ್ರತಿಕ್ಷಣ ಟಿಕ್ ಟಿಕ್ ಅನ್ನೋ ಪ್ರತಿಕ್ಷಣಕ್ಕೂ ಕೂಡ ಒಂದೊಂದು ಸೆಕೆಂಡ್ಗೂ ಕೂಡ 50ರಿಂದ 60 ಸಾವಿರ ಫೋಟೋಸ್ ಕ್ಲಿಕ್ ಆಗ್ತಿದ್ದಾವೆ ಸ್ಮಾರ್ಟ್ ಫೋನ್ ನಲ್ಲಿ ಕ್ಯಾಪ್ಚರ್ ಆಗ್ತಿದ್ದಾವೆ ಮೊಬೈಲ್ ಇರೋ ಪ್ರತಿಯೊಬ್ಬರು ಕೂಡ ಫೋಟೋಸ್ ತೆಗಿತಾನೆ ಇರ್ತಾರೆ ಅವರದು ಅವರಿಗೆ ಬೇಕಾದವರದು ಅವರ ತಾತಂದು ಅವರ ಮಕ್ಕಳದು ಅವರ ಮಕ್ಕಳದು ಅವರದು ಗೆಳೆಯಂದು ಗೆಳತಿದು ಗಂಡಂದು ಹೆಂಡತಿದು ಈ ನಾಯಿಮರಿದು ಏನಾದ್ರೂ ಒಂದು ಫೋಟೋ ತೆಗಿತಾನೆ ಇರ್ತಾರೆ ಗಿಡದ್ದು ಅಲ್ವಾ? ಬ್ಯೂಟಿಫುಲ್ ಸೀನರಿ ಕಂಡ್ರೆ ಫೋಟೋ ತೆಗಿ. ಕೆಲವರಂತೂ ಅಪಘಾತ ಆದ್ರೂ ಕೂಡ ಫೋಟೋ ತೆಗಿತಾನೆ ನಿಂತ್ಕೊಂಡಿರ್ತಾರೆ. ಅಪಘಾತ ಆಗ್ಬೇಕಾದ್ರೆ ಫೋಟೋ ತೆಗಿತ ಕೂತ್ಕೊಳ್ಳಿ ಅಂತ ಹೇಳಲ್ಲ. ಫಸ್ಟ್ ಹೆಲ್ಪ್ ಮಾಡಿ ನೀವು. ಆದ್ರೆ ಸ್ನೇಹಿತರೆ ಕ್ಯಾಮೆರಾವನ್ನ ಯೂಸ್ ಮಾಡೋಕೆ ಕಲಿಯೋದು ತುಂಬಾ ಇಂಪಾರ್ಟೆಂಟ್. ಅಟ್ಲೀಸ್ಟ್ ಸ್ಮಾರ್ಟ್ ಫೋನ್ ಗೆ ಬೇಕಾದಷ್ಟು ಒಂದು ಬೇಸಿಕ್ ಕ್ಯಾಮೆರಾ ಸೆನ್ಸ್ ಅನ್ನ ಕಲಿಯೋದು. ಕ್ಯಾಪ್ಚರ್ ಮಾಡಬೇಕಾದ್ರೆ ಒಂದಷ್ಟು ಸ್ಕಿಲ್ಸ್ ಅನ್ನ ತಿಳ್ಕೊಂಡಿರೋದು ತುಂಬಾ ಇಂಪಾರ್ಟೆಂಟ್. ಯಾಕಂದ್ರೆ ಆಗಲೇ ಹೇಳಿದ ಹಾಗೆ ಕೆಲವರು iPhone 17 ಅಥವಾ 18 ವಾಟೆವರ್ ಪ್ರೊ ಮ್ಯಾಕ್ಸ್ Samsung ಅಲ್ಟ್ರಾ ಉಲ್ಟ್ರಾ ಗ್ಯಾಲಕ್ಸಿ ಈ ತರದೆಲ್ಲ ಬೇರೆ ಬೇರೆ ಇರ್ತಾವಲ್ಲ ಅಂತ ಫೋನ್ಗಳನ್ನ ಹಿಡ್ಕೊಂಡ್ರು ಕೂಡ ಆ ಫೋನ್ಗಳೇ ಜಿಗುಪ್ಸೆ ಬಂದು ಶಟ್ ಡೌನ್ ಆಗಬಿಡಬೇಕು ನಾನು ಬದುಕೋದೇ ಇಲ್ಲ ಅಂತ ಹೇಳಿ ಆ ರೀತಿ ಕೆಟ್ಟ ಫೋಟೋಸ್ ಅನ್ನ ಕೆಲವರು ತೆಗಿತಾರೆ ಆದ್ರೆ ಇನ್ನು ಕೆಲವರು ಮಾಮೂಲಿ ಫೋನ್ ನಲ್ಲು ಕೂಡ ಬಹಳ ಚೆನ್ನಾಗಿ ಗುಡ್ ಲುಕಿಂಗ್ ಫೋಟೋಸ್ ಅನ್ನ ತೆಗಿತಾರೆ ಹಾಗಿದ್ರೆ ಅದಕ್ಕೆ ಏನು ಕಾರಣ ಫೋನ್ ನಲ್ಲಿ ಹೈ ಕ್ವಾಲಿಟಿ ಫೋಟೋ ತೆಗೆಯೋದು ಹೇಗೆ ಫ್ರೇಮ್ ಕಾಂಪೋಸಿಷನ್ ಇಂದ ಐಎಸ್ ಸೆಟ್ಟಿಂಗ್ಸ್ ವರೆಗೆ ಕ್ಯಾಮೆರಾದಲ್ಲಿ ಏನೆಲ್ಲ ಗೊತ್ತಿರಬೇಕು ಬನ್ನಿ ಈ ವರದಿಯಲ್ಲಿ ಫೋಟೋ ತೆಗೆಯುವಾಗ ಫಾಲೋ ಮಾಡಬೇಕಾದ ಕೆಲ ಬೇಸಿಕ್ ಮತ್ತು ಸಿಂಪಲ್ ರೂಲ್ಸ್ ಬಗ್ಗೆ ಹೇಳ್ತೀವಿ ಇದರಿಂದ ಯಾವ ಫೋನ್ ನಲ್ಲಿ ಬೇಕಾದರೂ ನೀವು ಒಳ್ಳೆ ಫೋಟೋವನ್ನ ತೆಗಿಬಹುದು.

ಇದು ಫೋಟೋಗ್ರಫಿಯ ಗೋಲ್ಡನ್ ರೂಲ್ ದ ರೂಲ್ ಆಫ್ ಥರ್ಡ್ಸ್ ಅಂತ ಕರೀತಾರೆ ಇದರ ಅರ್ಥ ಫೋಟೋ ತೆಗೆಯುವಾಗ ನಿಮ್ಮ ಫ್ರೇಮ್ ನ ಯಾವಾಗಲೂ ಒಂಬತ್ತು ಚೌಕವಾಗಿ ಡಿವೈಡ್ ಮಾಡ್ಕೋಬೇಕು ಹೇಗೆ ಅಂತ ಕನ್ಫ್ಯೂಸ್ ಆಗ್ಬೇಡಿ ಈಗೆಲ್ಲ ಫೋನ್ ನಲ್ಲಿ ಆಪ್ಷನ್ಸ್ ಬರುತ್ತೆ ನಿಮ್ಮ ಕ್ಯಾಮೆರಾದ ಸೆಟ್ಟಿಂಗ್ಸ್ ನಲ್ಲಿ ಗ್ರಿಡ್ ಲೈನ್ಸ್ ಅಂತ ಇರುತ್ತೆ ಅದನ್ನ ಆನ್ ಮಾಡ್ಕೊಂಡ್ರೆ ಆಯ್ತು ಆಗ ಫ್ರೇಮ್ ನೀವಈಗ ಸ್ಕ್ರೀನ್ ಮೇಲೆ ನೋಡ್ತಿದ್ದೀರಲ್ಲ ಈ ತರ ಅಡ್ಡ ಎರಡು ಲಂಬ ಗೆರೆಗಳಿಂದ ಡಿವೈಡ್ ಆಗುತ್ತೆ ಈಗ ಈ ಗೆರೆಗಳು ಸೇರ್ತಿದಾವಲ್ಲ ಈ ನಾಲ್ಕು ಇಂಟರ್ಸೆಕ್ಷನ್ ಪಾಯಿಂಟ್ಸ್ ಈ ಪಾಯಿಂಟ್ಸ್ ನಲ್ಲಿ ನೀವು ಕ್ಲಿಕ್ಕಿಸ್ತಾ ಇರೋ ಆ ವ್ಯಕ್ತಿ ಅಥವಾ ಆ ವಸ್ತು ಆಬ್ಜೆಕ್ಟ್ ಆ ಸಬ್ಜೆಕ್ಟ್ ಬರಬೇಕು ಉದಾಹರಣೆಗೆ ನೀವು ವ್ಯಕ್ತಿ ಒಬ್ಬರ ಪೋರ್ಟ್ರೇಟ್ ಫೋಟೋ ತೆಗಿತಾ ಇದ್ರೆ ಅವರ ಕಣ್ಣುಗಳು ಟಾಪ್ ನಲ್ಲಿ ಬರಬೇಕು ಟವರ್ ಅಥವಾ ಕಂಬದ ಫೋಟೋ ತೆಗಿತಾ ಇದ್ರೆ ಆ ಕಂಬ ಎಡಗಡೆ ಅಥವಾ ಬಲಗಡೆ ಲೈನ್ನಲ್ಲಿ ಬರಬೇಕು ಔಟ್ಡೋರ್ ಫೋಟೋ ತೆಗೆಯುವಾಗ ಹೊರೈಜಾನ್ ಅಥವಾ ದಿಗಂತ ಕಾಣ್ತಾ ಇದ್ರೆ ಆ ಹೊರೈಜಾನ್ ಮೇಲಿನ ಅಥವಾ ಕೆಳಗಿನ ಲೈನ್ಗೆ ಹೊಂದಿಕೊಂಡಂತ ಇರಬೇಕು ಇದರಿಂದ ನಿಮ್ಮ ಫೋಟೋ ನ್ಯಾಚುರಲ್ ಆಗಿ ಬ್ಯಾಲೆನ್ಸ್ಡ್ ಆಗಿ ಅಂದವಾಗಿ ಕಾಣುತ್ತೆ ಕೆಲವರಿಗೆ ಇದೆಲ್ಲ ಮೆಂಟಲಿ ಆ ಸ್ಕಿಲ್ಸ್ ಇರುತ್ತೆ ಅವರು ಇದನ್ನೆಲ್ಲ ಕಲ್ತಿರೋದಿಲ್ಲ ಆದ್ರೂ ಚೆನ್ನಾಗಿ ಫೋಟೋಸ್ ತೆಗಿತಿರ್ತಾರೆ ಕೆಲವರಿಗೆ ಹೇಳಿದ್ರು ಅರ್ಥ ಆಗೋದಿಲ್ಲ ಅವರು ಇದನ್ನ ಸ್ವಲ್ಪ ಪ್ರಾಕ್ಟೀಸ್ ಮಾಡ್ಕೋಬೇಕಾಗುತ್ತೆ ಯಾಕಂದ್ರೆ ಎಲ್ಲರಿಗೂ ನೋಡಿದ ತಕ್ಷಣ ಹಿಂಗೆ ಆಂಗಲ್ ಇಡೋಣ ಅಂತ ಹೇಳಿ ಗೊತ್ತಾಗಲ್ಲ ಆದ್ರೆ ನೀವು ಗ್ರಿಡ್ ಲೈನ್ಸ್ ಅನ್ನ ಆನ್ ಮಾಡ್ಕೊಂಡಾಗ ಸ್ವಲ್ಪ ನೀಟಾಗಿ ಒಳ್ಳೆ ಫ್ರೇಮ್ಸ್ ನ ಫೋಟೋಸ್ ನ್ನ ತೆಗಿಲಿಕ್ಕೆ ಆಗುತ್ತೆ ಇಲ್ಲ ಅಂದ್ರೆ ಕೆಟ್ಟ ಉದಾಹರಣೆ ತೋರಿಸ್ತೀವಿ ನೋಡಿ ಸ್ಕ್ರೀನ್ ಮೇಲೆ ಕೆಟ್ಟ ಫ್ರೇಮ್ ಸೆಲೆಕ್ಷನ್ ನೀವು ತೆಗಿಬೇಕಾಗಿರೋ ಆಬ್ಜೆಕ್ಟ್ ಅಥವಾ ಸಬ್ಜೆಕ್ಟ್ ಎಲ್ಲ ಇರುತ್ತೆ ಫೋಟೋ ಇನ್ನೆಂಗೋ ಬಂದಿರುತ್ತೆ ಯಾವುದರೂ ಫೋಟೋ ತೆಗೆದಿದ್ದಾರೆ ಅಂತನೆ ಗೊತ್ತಾಗೋದಿಲ್ಲ ಕೆಲವೊಂದು ಸಲಿ ವಕ್ರ ಪಕ್ರವಾಗಿಲ್ಲ ತೆಗೆದಿರ್ತಾರೆ ನೋಡಿದಾಗ ಅದೊಂದು ಚೆನ್ನಾಗಿರೋ ಫೋಟೋ ಅಂತ ಅನ್ಸೋದೇ ಇಲ್ಲ ಬ್ಯಾಲೆನ್ಸ್ಡ್ ಆಗಿರೋದಿಲ್ಲ ಚೆನ್ನಾಗಿರೋವರು ಕೂಡ ಕೆಟ್ಟದಾಗಿ ಕಾಣೋತಾರೆ ಕೆಲವರು ಫೋಟೋ ತೆಗಿತಾರೆ ಆದ್ರೆ ಗ್ರಿಡ್ ಲೈನ್ಸ್ ಯೂಸ್ ಮಾಡಿದಾಗ ಒಂದಿಷ್ಟು ಬೇಸಿಕ್ಸ್ ಅನ್ನ ಕರೆಕ್ಟ್ ಆಗಿ ಫಾಲೋ ಮಾಡಬಹುದು. ಅದರಲ್ಲೇ ಮಾರ್ಕಿಂಗ್ ಎಲ್ಲ ಬಂದುಬಿಡುತ್ತೆ. ಲೀಡಿಂಗ್ ಲೈನ್ಸ್ ಸ್ನೇಹಿತರೆ ಸಾಮಾನ್ಯವಾಗಿ ಔಟ್ಡೋರ್ ನಲ್ಲಿ ಫೋಟೋ ತೆಗಿತಾ ಇದ್ರೆ ಅಲ್ಲಿ ರಸ್ತೆ, ಕಟ್ಟಡ, ರೈಲ್ವೆ, ನದಿ, ಸೇತುವೆ, ಲೈಟ್ ಕಂಬ ಹೀಗೆ ಗೆರೆ ಹಾಗೆ ಕಾಣೋ ಆಕಾರಗಳ ಇರ್ತವೆ.

ಸಾಮಾನ್ಯವಾಗಿ ನಮ್ಮ ಕಣ್ಣು ಈ ಲೈನ್ಸ್ ಯಾವ ಕಡೆಗೆ ಹೋಗ್ತಿರುತ್ತೋ ಆ ಕಡೆಗೆ ಫೋಕಸ್ ಮಾಡ್ತಿರುತ್ತೆ. ಹೀಗಾಗಿ ಇವುಗಳನ್ನ ಲೀಡಿಂಗ್ ಲೈನ್ಸ್ ಅಂತ ಕರೀತಾರೆ. ಸೋ ಫೋಟೋ ತೆಗೆಯುವಾಗ ಈ ಲೈನ್ಸ್ ಬಳಸ್ಕೊಬೇಕು. ಈ ಗೆರೆಗಳು ನಿಮ್ಮ ಸಬ್ಜೆಕ್ಟ್ ಕಡೆಗೆ ಮುಖ ಮಾಡೋ ಹಾಗೆ ಫೋಟೋ ತೆಗಿಬೇಕು. ಉದಾಹರಣೆಗೆ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ನಿಂತಿರೋ ಫೋಟೋ ತೆಗಿತಾ ಇದ್ದರೆ ರಸ್ತೆಯ ಎರಡು ಅಂಚು ನಿಮ್ಮ ಸಬ್ಜೆಕ್ಟ್ ಕಡೆಗೆ ಹೋಗ್ತಿರುವಂತೆ ಫ್ರೇಮ್ ಸೆಟ್ ಮಾಡಬೇಕು ಇದರಿಂದ ಫೋಟೋದಲ್ಲಿ ನಮ್ಮ ಅಟೆನ್ಶನ್ ನೇರ ಸಬ್ಜೆಕ್ಟ್ ಮೇಲೆ ಹೋಗುತ್ತೆ ಅಲ್ದೆ ನಿಮ್ಮ ಫೋಟೋಗೆ 3ರಡಿ ಟಚ್ ಸಿಗುತ್ತೆ ಡೆಪ್ತ್ ಇದೆ ಅನ್ನೋ ರೀತಿ ಕಾಣುತ್ತೆ ಫ್ರೇಮ್ ಒಳಗೆ ಫ್ರೇಮ್ ಹೆಸರೇ ಹೇಳೋ ಹಾಗೆ ಫ್ರೇಮ್ ನಲ್ಲಿ ಫ್ರೇಮ್ ಹುಡುಕೋದು ಉದಾಹರಣೆಗೆ ನಿಮ್ಮ ಕ್ಯಾಮೆರಾದ ದೃಶ್ಯದಲ್ಲಿ ಯಾವುದಾದರೂ ಬಾಗಿಲು ಕಿಟಕಿ ಆರ್ಚ್ ಈತರ ಚೌಕಟ್ಟಿನ ಹಾಗೆ ಕಾಣೋ ವಸ್ತುಗಳಿದ್ರೆ ಅದನ್ನ ನೀವು ಫ್ರೇಮ್ ಆಗಿ ಅಥವಾ ಬಾರ್ಡರ್ ಆಗಿ ಯೂಸ್ ಮಾಡ್ಕೋಬಹುದು. ನೀವು ಫೋಟೋ ತೆಗಿತಿರುವಂತ ವ್ಯಕ್ತಿಗೆ ಆ ಬಾಗಿಲು ಅಥವಾ ಆ ಕಿಟಕಿ ಅಥವಾ ಆಯತಾಕಾರದ ಆ ಒಂದು ಶೇಪ್ ನ ಮಧ್ಯಕ್ಕೆ ಬಂದು ನಿಲ್ಲುವಂತೆ ನೀವು ಕೇಳಬಹುದು. ಇದರಿಂದ ಕೂಡ ಫೋಟೋ ನೋಡ್ತಿರೋ ವ್ಯಕ್ತಿಯ ಅಟೆನ್ಶನ್ ನೇರವಾಗಿ ಅಲ್ಲಿ ನಿಂತಿರೋ ವ್ಯಕ್ತಿ ಅಥವಾ ಅಲ್ಲಿ ಇಟ್ಟಿರೋ ವಸ್ತುವಿನ ಮೇಲಕ್ಕೆ ಹೋಗುತ್ತೆ. ಫೋಟೋ ಚೆನ್ನಾಗಿ ಕಾಣುತ್ತೆ. ಸಿಮಿಟ್ರಿ ಇದು ಕೂಡ ಸಿಂಪಲ್ ರೂಲ್ ತುಂಬಾ ಜನಕ್ಕೆ ಗೊತ್ತಿರಬಹುದು. ಫೋಟೋ ತೆಗೆಯುವಾಗ ಯಾವುದಾದ್ರೂ ಸಿಮಿಟ್ರಿಕಲ್ ಆಗಿ ಕಾಣುವ ವಸ್ತು ಇದ್ರೆ ಅಂದ್ರೆ ಲೆಫ್ಟ್ ರೈಟ್ ಅಥವಾ ಮೇಲೆ ಕೆಳಗೆ ಮಿರರ್ ಇಮೇಜ್ ಆಗೋ ಹಾಗೆ ಇದ್ರೆ ಅದನ್ನ ಫ್ರೇಮ್ ನ ಎರಡು ಬದಿಗೆ ಈಕ್ವಲ್ ಹಾಫ್ ಬರೋ ಹಾಗೆ ಫೋಟೋ ತೆಗೆಯೋದು.

ಉದಾಹರಣೆಗೆ ಯಾವುದಾದರೂ ಪುರಾತನ ಸ್ಮಾರಕ ಅಥವಾ ಕಟ್ಟಡ ಇದ್ರೆ ಈತರ ಫೋಟೋ ತೆಗಿಬಹುದು ಇದರಿಂದ ಫೋಟೋ ಬ್ಯೂಟಿಫುಲ್ ಆಗಿ ಕಾಣುತ್ತೆ ಐ ಲೆವೆಲ್ ಯಾವುದಾದರೂ ವ್ಯಕ್ತಿ ಅಥವಾ ಪ್ರಾಣಿಯ ಪೋರ್ಟ್ರೇಟ್ ಫೋಟೋ ತೆಗೆಯುವಾಗ ಈ ನಿಯಮವನ್ನ ಫಾಲೋ ಮಾಡಬೇಕು ಕ್ಯಾಮೆರಾವನ್ನ ನಮ್ಮ ಅನುಕೂಲಕ್ಕೆ ತಕ್ಕಂತೆ ಹಿಡಿಯೋದಕ್ಕಿಂತ ತೋಚಿದ ಹಾಗೆ ಹಿಡಿಯೋದಕ್ಕಿಂತ ಎದುರುಗಡೆ ಇರೋ ಸಬ್ಜೆಕ್ಟ್ನ ಕಣ್ಣುಗಳ ಮಟ್ಟಕ್ಕೆ ಹಿಡಿದು ಕ್ಲಿಕ್ ಮಾಡಬೇಕು ಅದಕ್ಕಾಗಿ ಫೋನ್ ಬಗ್ಗಿಸ್ತೀರೋ ಅಥವಾ ನೀವೇ ಮಲ್ಕೊಳ್ತೀರೋ ಹೇಳಕಆಗಲ್ಲ ಆದ್ರೆ ಐ ಲೆವೆಲ್ ಗೆ ನಮ್ಮ ಕ್ಯಾಮೆರಾ ಇರಬೇಕು ಆಗ ಫೋಟೋ ನೋಡ್ತಿರೋರಿಗೆ ಆ ವ್ಯಕ್ತಿಯ ಮುಖಭಾವ ಎಕ್ಸ್ಪ್ರೆಷನ್ ಕನೆಕ್ಟ್ ಆಗುತ್ತೆ ಫೋಟೋ ಇಷ್ಟ ಆಗುತ್ತೆ ಹಾಗಂತ ಎಲ್ಲಾ ಸಲಿ ಕೂಡ ಇದೇ ನಿಯಮ ಅನ್ವಯ ಆಗುತ್ತೆ ಅಂತಿಲ್ಲ ಉದಾಹರಣೆಗೆ ಒಂದು ಸಿಂಪಲ್ ಎಕ್ಸಾಂಪಲ್ ಹೇಳಬೇಕು ಅಂದ್ರೆ ನೀವು ಚಿಕ್ಕಬಳ್ಳಾಪುರದಲ್ಲೋ ಅಥವಾ ತಮಿಳುನಾಡಿನಲ್ಲೋ ಆದಿಯೋಗಿ ಮೂರ್ತಿ ಇದೆಯಲ್ಲ ದೊಡ್ಡದು ಅಲ್ಲಿಗೆ ನೀವು ನೋಡಕೆ ಹೋಗ್ತೀರಾ ಅಂತ ಅಂಕೊಳ್ಳಿ ಯಾವಾಗ್ಲೂ ರಶ್ ಇರುತ್ತೆ ಸಾವಿರಾರು ಜನ ಇರ್ತಾರೆ ಆ ಜನ ಬರಬಾರದು ನೀವು ಮತ್ತೆ ಆದಿಯೋಗಿ ಮಾತ್ರ ಕಾಣಬೇಕು ಅವಾಗ ಫೋಟೋ ತೆಗೆಯೋದು ಹೇಗೆ ಉದಾಹರಣೆಗೆ ಈ ಫೋಟೋ ನೋಡಿ ಇಲ್ಲಿರೋ ಈ ಬಾಲಕನ ಜಾಗದಿಂದ ಆ ಆದಿಯೋಗಿ ಇರುವಂತಹ ಜಾಗದ ನಡುವೆ ಸಾವಿರಾರು ಜನ ಇದ್ದಾರೆ ಸಾವಿರಾರು ಜನ ಆದರೆ ಯಾರು ಕೂಡ ಕಂಡಿಲ್ಲ ಯಾಕೆ ಆದರೆ ತುಂಬಾ ಜನ ಹೆಂಗೆ ತೆಗಿತಾರೆ ಗೊತ್ತಾ ನೋಡಿ ಈ ತರ ತೆಗಿತಾರೆ ಈ ಫೋಟೋಗೂ ಈ ಫೋಟೋಗೂ ವ್ಯತ್ಯಾಸ ನೋಡಿ ಒಂದರಲ್ಲಿ ಸಬ್ಜೆಕ್ಟ್ ಹಿಂದೆ ಆದಿಯೋಗಿ ಮಧ್ಯದಲ್ಲಿ ಸಾವಿರಾರು ಜನ ಇನ್ನೊಂದರಲ್ಲಿ ಆದಿಯೋಗಿ ಮತ್ತೆ ಸಬ್ಜೆಕ್ಟ್ ಮಾತ್ರ ಅಥವಾ ಆಬ್ಜೆಕ್ಟ್ ಮಾತ್ರ ಇದರ ಮ್ಯಾಜಿಕ್ ಏನು ಹಾಗಾದ್ರೆ ಸಿಂಪಲ್ ಆಂಗಲ್ ಕರೆಕ್ಟ್ ಆಗಿರೋ ಆಂಗಲ್ ಹಿಡಿಬೇಕು ನೀವು ಜೊತೆಗೆ ಆದಿಯೋಗಿ ತಲೆ ಮೇಲೆ ಸೂರ್ಯ ಇದೆ ನೋಡಿ ಸೂರ್ಯ ಇನ್ನು ಸ್ಪಷ್ಟವಾಗಿ ಕಾಣೋ ರೀತಿ ಕ್ಯಾಮೆರಾದಲ್ಲಿ ನೀವು ಆಂಗಲ್ ಹಿಡ್ಕೊಂಡ್ರೆ ನೀವು ತೆಗಿತಿರೋ ಫೋಟೋಗ್ರಾಫ್ ಆ ಬಾಲಕಂದು ಅದರ ಹಿಂದೆ ಆದಿಯೋಗಿನು ಬರಬೇಕು ಅದರ ಹಿಂದೆ ಸೂರ್ಯ ಇದ್ರೆ ಅದು ತುಂಬಾ ಕಾಣಿಸ್ತಾ ಇದ್ರೆ ರೆ ಸೂರ್ಯನ ಬೆಳಕಿಗೆ ಎಲ್ಲ ಫೋಟೋ ಹಾಳಾಗಿಬಿಡುತ್ತೆ.

ಕ್ಯಾಮೆರಾದ ಎದುರಾಗಿ ಸೂರ್ಯ ಇದ್ದಾಗ ಫೋಟೋ ಹಾಳಾಗಿಬಿಡುತ್ತೆ ನಿಮಗೆ ಯಾರನ್ನ ತೆಗಿಬೇಕು ಅಂತ ಅನ್ಕೊಂಡಿದ್ದೀರೋ ಅವರು ಚೆನ್ನಾಗಿ ಕಾಣೋದಿಲ್ಲ ಸೂರ್ಯ ಲೈಟಆಗಿ ಕಾಣಬೇಕು ಬಟ್ ಜಾಸ್ತಿ ಫೋಟೋವನ್ನ ಡಾಮಿನೇಟ್ ಮಾಡಬಾರದು ಅಂದ್ರೆ ಅದಕ್ಕೊಂದು ಪರ್ಟಿಕ್ಯುಲರ್ ಆಂಗಲ್ ನಲ್ಲಿ ಫೋಟೋ ತೆಗಿಬೇಕಾಗುತ್ತೆ ಉದಾಹರಣೆಗೆ ಈ ಫೋಟೋವನ್ನ ಕೆಳಗಿನಿಂದ ತೆಗೆಯಲಾಗಿದೆ ಸ್ವಲ್ಪ ಆ ಬಾಲಕನಿಗಿಂತ ಕೆಳಗಿನ ಹೈಟ್ನಲ್ಲಿ ಕುಳಿತು ಆ ಫೋಟೋವನ್ನ ತೆಗೆಯಲಾಗಿದೆ ಜೊತೆಗೆ ಆಂಗಲ್ ಸೆಟ್ ಮಾಡುವಾಗ ಬಾಲಕನ್ನ ನಿಲ್ಲಿಸಿಕೊಳ್ಳುವಾಗಲೂ ಕೂಡ ಸೂರ್ಯ ಶಿವನ ತಲೆಯ ಮೇಲೆ ಸ್ವಲ್ಪವಷ್ಟೇ ಕಾಣೋ ರೀತಿಯಲ್ಲಿ ಆಂಗಲ್ ಸೆಟ್ ಮಾಡಿಕೊಂಡು ತೆಗೆಯಲಾಗಿದೆ ಹಾಗಾಗಿ ಫೋಟೋ ಆ ಸೂರ್ಯನ ಬೆಳಕು ಬೀಳ್ತಿದ್ರೂ ಕೂಡ ಇಷ್ಟು ನೀಟಾಗಿ ಬಂದಿದೆ ಬೆಸ ಸಂಖ್ಯೆ ವಸ್ತುಗಳಿರಲಿ ಎಸ್ ಸ್ನೇಹಿತರೆ ನೀವೇನಾದ್ರೂ ಹಲವು ವಸ್ತುಗಳಿರೋ ಫೋಟೋ ತೆಗಿತಾ ಇದ್ರೆ ಉದಾಹರಣೆಗೆ ಹೂವುಗಳ ಫೋಟೋ ತೆಗಿತಾ ಇದ್ರೆ ಅಲ್ಲಿ ಸರಿ ಸಂಖ್ಯೆಯ ಹೂವುಗಳ ಬದಲು ಬೆಸ ಸಂಖ್ಯೆಯಲ್ಲಿ ಇರಬೇಕು ಎರಡು ನಾಲ್ಕು ಆರರ ಬದಲು ಒಂದು ಮೂರು ಐದು ಈತರ ಆಡ್ ನಂಬರ್ ನಲ್ಲಿ ಇರಬೇಕು ಹೀಗಾಗಿ ಇದನ್ನ ರೂಲ್ ಆಫ್ ಆಡ್ಸ್ ಅಂತ ಕೂಡ ಕರೀತಾರೆ ಇದರಿಂದ ಫೋಟೋ ಇನ್ನಷ್ಟು ಅಂದವಾಗಿ ಕಾಣುತ್ತೆ ಯಾಕಂದ್ರೆ ಸರಿ ಸಂಖ್ಯೆಯಲ್ಲಿ ಸಬ್ಜೆಕ್ಟ್ಸ್ ಇದ್ರೆ ಉದಾಹರಣೆಗೆ ಎರಡು ಹೂಗಳಿದ್ರೆ ನಮ್ಮ ಕಣ್ಣು ಎರಡಕ್ಕೂ ಈಕ್ವಲ್ ಅಟೆನ್ಶನ್ ಕೊಡಬೇಕು ಅಂತ ಥಿಂಕ್ ಮಾಡುತ್ತೆ ಆದರೆ ಮೂರು ಐದು ಇದ್ರೆ ಸೆಂಟರ್ ಆಫ್ ಅಟೆನ್ಶನ್ ಯಾವುದಾದರೂ ಒಂದು ಹೂವಿನ ಮೇಲೆ ಫೋಕಸ್ ಮಾಡುತ್ತೆ ಆಡ್ ನಂಬರ್ ನ ನಮ್ಮ ಮೆದುಳು ಇಂಟರೆಸ್ಟಿಂಗ್ ಆಗಿ ನೋಡುತ್ತೆ ಫೋಕಸ್ ಮತ್ತು ಕ್ಲಾರಿಟಿ ಯಾವಾಗಲೂ ಕ್ಯಾಮೆರಾದಲ್ಲಿ ನಿಮ್ಮ ಸಬ್ಜೆಕ್ಟ್ ಮೇಲೆ ಟ್ಯಾಪ್ ಮಾಡಿ ಇದರಿಂದ ಫೋನ್ ಆ ವ್ಯಕ್ತಿ ಅಥವಾ ಕಟ್ಟಡವನ್ನಷ್ಟೇ ಶಾರ್ಪ್ ಆಗಿ ತೋರಿಸುತ್ತೆ ಪೋರ್ಟ್ರೇಟ್ಸ್ ಫೋಟೋ ತೆಗಿತಾ ಇದ್ರೆ ಕಣ್ಣಿನ ಮೇಲೆ ಟ್ಯಾಪ್ ಮಾಡಿ.

ಹಾಗೆ ಫೋಟೋ ತೆಗೆಯುವಾಗ ಬ್ಯಾಗ್ರೌಂಡ್ ಕ್ಲಿಯರ್ ಆಗಿರಲಿ ಬ್ಯಾಕ್ಗ್ರೌಂಡ್ ನಲ್ಲಿ ಸಿಕ್ಕಾಪಟ್ಟೆ ವಸ್ತು ಇದ್ರೆ ಫೋಟೋ ನೋಡೋರಿಗೆ ಅದರಲ್ಲಿ ಏನ್ು ನೋಡಬೇಕು ಅಂತ ಕನ್ಫ್ಯೂಸ್ ಆಗುತ್ತೆ ಬ್ಯಾಕ್ಗ್ರೌಂಡ್ ಪ್ಲೇನ್ ಆಗಿದ್ರೆ ನೇರ ಸಬ್ಜೆಕ್ಟ್ ಗಳಿಗೆ ಫೋಕಸ್ ಮಾಡಬಹುದು ಲೈಟಿಂಗ್ ಮುಖ್ಯ ಎಸ್ ಸ್ನೇಹಿತರೆ ಇದು ತುಂಬಾ ಇಂಪಾರ್ಟೆಂಟ್ ಇನ್ಫ್ಯಾಕ್ಟ್ ಫೋಟೋಗ್ರಫಿಯ ಮೊಟ್ಟಮೊದಲ ರೂಲ್ ಇದು ಬೆಳಕು ಯಾವುದೇ ಫೋಟೋದ ಆತ್ಮ ಹೀಗಾಗಿ ಬೆಳಕನ್ನ ಸರಿಯಾಗಿ ಬಳಸೋದು ಗೊತ್ತಿರಬೇಕು ಆದಷ್ಟು ನ್ಯಾಚುರಲ್ ಲೈಟ್ ಅಲ್ಲೇ ಫೋಟೋ ತೆಗೆಯೋಕೆ ಟ್ರೈ ಮಾಡಬೇಕು ಇದರಿಂದ ಫೋಟೋ ಫ್ರೆಶ್ ಆಗಿ ಕಾಣಿಸುತ್ತೆ 12 ಗಂಟೆ ಬಿಸಿ ಬಿಸಿ ಮಧ್ಯಾಹ್ನ ಫೋಟೋಗ್ರಫಿಯನ್ನ ಅವಾಯ್ಡ್ ಮಾಡಬೇಕು ಯಾಕಂದ್ರೆ ಆಗ ಹಾರ್ಶ್ ಶಾಡೋಸ್ ಇರುತ್ತೆ ಟಾಪ್ ಲೈಟ್ ಅಂತ ಕೂಡ ಹೇಳ್ತಾರೆ ಮೇಲಿಂದ ಸೂರ್ಯನ ಬೆಳಕು ಬೀಳ್ತಾ ಇರುತ್ತೆ ಎಲ್ಲೆಲ್ಲಿ ಬೆಳಕು ಬೀಳುತ್ತೋ ಆ ಏರಿಯಾ ಎಲ್ಲ ಬ್ಲೀಚ್ ಔಟ್ ಆಗ್ತಾ ಇರುತ್ತೆ ಕ್ಯಾಮೆರಾದಲ್ಲಿ ಸರಿಯಾಗಿ ಕ್ಯಾಪ್ಚರ್ ಆಗ್ತಿರೋದಿಲ್ಲ ಬೆಳಗ್ಗಿನ ಜಾವ ಸೂರ್ಯ ಹುಟ್ಟೋ ಸಮಯ ಹುಟ್ಟಿ ಮೊದಲ ಒಂದಎರಡು ಮೂರು ಗಂಟೆ ಅಥವಾ ಸಂಜೆನಾಲ್ಕು ಗಂಟೆಯ ನಂತರ ಫೋಟೋ ತೆಗಿಲಿಕ್ಕೆ ತುಂಬಾ ಬ್ಯೂಟಿಫುಲ್ ಆಗಿರುತ್ತೆ ಯಾಕಂದ್ರೆ ವಾರ್ಮ್ ಲೈಟ್ ಇರುತ್ತೆ ನಿಮ್ಮ ಫೋಟೋಗೆ ಹೊಂಬಣ್ಣದ ಟಚ್ ಸಿಗುತ್ತೆ ಕ್ಯಾಮೆರಾ ಬೇಸಿಕ್ ಸೆಟ್ಟಿಂಗ್ಸ್ ಸಾಮಾನ್ಯವಾಗಿ ನಾವು ಕ್ಯಾಮೆರಾ ಆನ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ಒಳ್ಳೆ ಫೋಟೋ ಬರಬೇಕು ಅಂತ ಎಕ್ಸ್ಪೆಕ್ಟ್ ಮಾಡ್ತೀವಿ ಆದರೆ ಸ್ನೇಹಿತರೆ ಫೋಟೋಗ್ರಾಫಿ ಅನ್ನೋದು ಬೆಳಕಿನೊಂದಿಗೆ ಆಡೋ ಆಟ ಬೆಳಕನ್ನ ಚೇಂಜ್ ಮಾಡಿದಾಗಲೇ ಚೆನ್ನಾಗಿರೋ ಫೋಟೋ ಬರೋಕೆ ಸಾಧ್ಯ. ಈ ಬೆಳಕಿನ ಆಟ ಆಡೋಕಾಗಿ ಕ್ಯಾಮೆರಾದಲ್ಲೇ ಸೆಟ್ಟಿಂಗ್ಸ್ ಇರುತ್ತೆ. ಆದ್ರೆ ಯಾವತ್ತೂ ಕೂಡ ಅಷ್ಟು ಕೇರ್ ಮಾಡಿರೋದಿಲ್ಲ.

ಹೀಗಾಗಿ ಒಳ್ಳೆ ಫೋಟೋ ತೆಗೆಯೋಕ್ಕೆ ಬೇಸಿಕ್ ಸೆಟ್ಟಿಂಗ್ಸ್ ಬಗ್ಗೆ ಗೊತ್ತಿರಬೇಕು. ಯಾವುದೇ ಕ್ಯಾಮೆರಾದಲ್ಲಿ ಮುಖ್ಯವಾಗಿ ಮೂರು ಸೆಟ್ಟಿಂಗ್ಸ್ ಇರುತ್ತೆ. ಐಎಸ್ಓ ಶಟರ್ ಸ್ಪೀಡ್ ಮತ್ತು ಅಪರ್ಚರ್ ಒಂದೊಂದಾಗಿ ನಿಮಗೆ ಕ್ವಿಕ್ ಆಗಿ ಎಕ್ಸ್ಪ್ಲೈನ್ ಮಾಡ್ತೀವಿ. ಮೊದಲನೇದಾಗಿ ಶಟರ್ ಸ್ಪೀಡ್. ಇದೊಂತರ ನಮ್ಮ ಕಣ್ಣಿನ ರಪ್ಪೆ ಇದ್ದ ಹಾಗೆ ಒಂದು ಸಲ ಕ್ಲಿಕ್ ಮಾಡಿದ ತಕ್ಷಣ ಫೋಟೋ ತೆಗೆಯೋಕ್ಕೆ ಎಷ್ಟು ಹೊತ್ತು ನಿಮ್ಮ ಕ್ಯಾಮೆರಾದ ಶಟರ್ ಓಪನ್ ಇರಬೇಕು ಅನ್ನೋದು ಬೆಳಕು ಮತ್ತು ಮೋಷನ್ನ ಕಂಟ್ರೋಲ್ ಮಾಡೋಕೆ ಈ ಶಟರ್ ಸ್ಪೀಡ್ ನ ಬಳಸ್ತಾರೆ. ಶಟರ್ ಸ್ಪೀಡ್ ಫಾಸ್ಟ್ ಇದ್ದಷ್ಟು ಎಕ್ಸ್ಪೋಶರ್ ವೈಟ್ ಆಗ್ತಾ ಹೋಗುತ್ತೆ. ನೀವಿಲ್ಲಿ ನೋಡ್ತಿರಬಹುದು ನಾರ್ಮಲ್ ಆಗಿದ್ದಾಗ ಶಟರ್ ಸ್ಪೀಡ್ 1/30 ಎಲ್ಲ ಇರುತ್ತೆ ಆದ್ರೆ 1 / 100, 200, 1000 ಹೀಗೆ ಮೂವ್ ಮಾಡಿದಷ್ಟು ಸೀನ್ ಬ್ಲಾಕ್ ಆಗ್ತಾ ಹೋಗುತ್ತೆ. ಸೊ ನೀವು ಫೋಟೋ ತೆಗಿತಿರೋ ವಾತಾವರಣಕ್ಕೆ ತಕ್ಕ ಹಾಗೆ ಬೆಳಕನ್ನ ಅಡ್ಜಸ್ಟ್ ಮಾಡ್ಕೋಬಹುದು. ಆದ್ರೆ ಶಟರ್ ಸ್ಪೀಡ್ ನ ಮುಖ್ಯ ಕೆಲಸ ಇದಲ್ಲ. ಶಟರ್ ಸ್ಪೀಡ್ ಮೋಷನ್ ಕ್ಯಾಪ್ಚರ್ ಮಾಡೋಕೆ ಇರೋದು. ಉದಾಹರಣೆಗೆ ಟ್ರೈನ್ ಹೋಗ್ತಿರೋ ದೃಶ್ಯ ಹಾರ್ತಿರೋ ದೃಶ್ಯ ನಾರ್ಮಲ್ ಸೆಟ್ಟಿಂಗ್ಸ್ ನಲ್ಲಿ ತೆಗೆದಾಗ ಬ್ಲರ್ ಆಗುತ್ತೆ. ಾದ್ರೆ ಶಟರ್ ಸ್ಪೀಡ್ನ ಫಾಸ್ಟ್ ಮಾಡಿದ್ರೆ ರೆಕ್ಕೆ ಬಳಿತಿರುವಂತಹ ದೃಶ್ಯ ಕ್ಯಾಪ್ಚರ್ ಆಗುತ್ತೆ ಹೀಗಾಗಿ ಆಕ್ಷನ್ ಫಾಸ್ಟ್ ಇದ್ದಷ್ಟು ನಾವು ನಮ್ಮ ಶಟರ್ ಸ್ಪೀಡ್ ನ ಕೂಡ ಜಾಸ್ತಿ ಮಾಡಬೇಕು. ಸ್ಪೋರ್ಟ್ಸ್ ಇವೆಂಟ್ಸ್ ವಿಮಾನದ ಫೋಟೋ ತೆಗೆಯುವಾಗ ಶಟರ್ ಸ್ಪೀಡ್ 1/500 1/2000 ಸೆಕೆಂಡ್ ಈ ತರದೆಲ್ಲ ಇಟ್ಕೊಳ್ತಾರೆ. ಐಎಸ್ಓ ಇದು ಬೆಳಕಿಗೆ ನಿಮ್ಮ ಕ್ಯಾಮೆರಾ ಎಷ್ಟು ಸೆನ್ಸಿಟಿವ್ ಇದೆ ಅಂತ ತಿಳಿಸೋ ನಂಬರ್ ಐಎಸ್o ಸೆನ್ಸಿಟಿವಿಟಿ ಜಾಸ್ತಿ ಇದ್ದಷ್ಟು ವೈಟ್ ಎಕ್ಸ್ಪೋಷರ್ ಜಾಸ್ತಿ ಇರುತ್ತೆ. ನಿಮ್ಮ ಫೋಟೋ ಬ್ರೈಟ್ ಆಗಿ ಕಾಣುತ್ತೆ.

ಹೀಗಾಗಿನೇ ಇಂಡೋರ್ನಲ್ಲಿ ಮನೆಯೊಳಗೆ ಬೆಳಕು ಕಮ್ಮಿ ಇರೋ ಜಾಗದಲ್ಲಿ ಫೋಟೋ ತೆಗೆಯುವಾಗ ಐಎಸ್o ನ ಜಾಸ್ತಿ ಮಾಡ್ಕೋಬಹುದು. ಅದೇ ರೀತಿ ಆಚೆ ಫೋಟೋ ತೆಗೆಯುವಾಗ ಐಎಸ್ ನ ಕಮ್ಮಿ ಕೂಡ ಮಾಡ್ಕೋಬಹುದು. ಆದ್ರೆ ಐಎಸ್ಓ ಜಾಸ್ತಿ ಮಾಡಿದಾಗ ಕೆಲವೊಮ್ಮೆ ಫೋಟೋದ ಕ್ವಾಲಿಟಿ ಕಮ್ಮಿಯಾಗಿ ಚುಕ್ಕೆ ಚುಕ್ಕೆ ಡಾಟ್ಸ್ ಈ ರೀತಿಯಲ್ಲ ನಾಯ್ಸ್ ಅಥವಾ ಗ್ರೈನ್ಸ್ ಜಾಸ್ತಿ ಬರೋ ಸಾಧ್ಯತೆ ಇರುತ್ತೆ ಫೋಟೋದಲ್ಲಿ. ಇನ್ನು ಅಪರ್ಚರ್ ಫೋನ್ ನಲ್ಲಿ ಫಿಕ್ಸ್ ಇರುತ್ತೆ ಹಾಗಾಗಿ ಜಾಸ್ತಿ ತಲೆ ಕೆಡಿಸಿಕೊಳ್ಳೋದು ಬೇಡ ಆದ್ರೆ ಐಎಸ್ಓ ಮತ್ತು ಶಟರ್ ಸ್ಪೀಡ್ ನಲ್ಲಿ ಒಂದಷ್ಟು ಆಟಗಳನ್ನ ಆಡಬಹುದು ಆದ್ರೆ ನಿಮ್ಮ ಗಮನಕ್ಕೆ ಇರಲಿ ಇತ್ತೀಚಿನ ಎಲ್ಲಾ ಫೋನ್ಗಳಲ್ಲೂ ಕೂಡ ಹೆಚ್ಚಿನವರು ಆಟೋ ಮೋಡ್ನಲ್ಲೇ ಫೋಟೋಗ್ರಫಿ ಮಾಡ್ತಾರೆ ಸ್ಮಾರ್ಟ್ ಫೋನ್ ನಲ್ಲಿ ಆಟೋಮ್ಯಾಟಿಕ್ ಮೋಡ್ ಇಟ್ಟಿರ್ತಾರೆ ಮ್ಯಾನ್ಯುವಲ್ ಮೋಡ್ ನ್ನ ಇವರು ಆನ್ ಮಾಡ್ಕೊಂಡು ಇದೆಲ್ಲ ಸೆಟ್ಟಿಂಗ್ಸ್ ಗೆ ಹೋಗಿ ಚೆಕ್ ಮಾಡೋಕ್ಕೆ ಹೋಗೋದಿಲ್ಲ ಆಟೋ ಮೋಡ್ನಲ್ಲೇ ತುಂಬಾ ಚೆನ್ನಾಗಿ ನಾರ್ಮಲ್ ಮೋಡ್ ತೆಗೆದೆ ಕ್ಲಿಕ್ ಮಾಡಿದ್ರೆ ಚೆನ್ನಾಗಿ ಬರಬೇಕು ಅಂತ ಹೇಳಿದ್ರೆ ಎರಡು ವಿಚಾರ ಒಂದು ಹೈ ಎಂಡ್ ಫೋನ್ ಆಗಿರಬೇಕು ಸೆಟ್ಟಿಂಗ್ಸ್ ನಲ್ಲಿ ಆಟೋಮಯಾಟಿಕಲಿ ಕ್ವಿಕ್ ಆಗಿ ಹ್ಯಾಂಡಲ್ ಮಾಡೋಕೆ ಮತ್ತೆ ಪ್ರೊಸೆಸಿಂಗ್ ಪವರ್ ಕೂಡ ತುಂಬಾ ಚೆನ್ನಾಗಿರಬೇಕು ಅದರಲ್ಲಿ ಸ್ವಲ್ಪ ಹೈ ಎಂಡ್ ಫೋನ್ನಲ್ಲಿ ತೆಗಿತಾವೆ. ಆದರೆ ಸ್ನೇಹಿತರೆ ಇದರ ಮೊದಲ ಭಾಗದಲ್ಲಿ ಹೇಳಿದ್ವಲ್ಲ ಆಂಗಲ್ ಫ್ರೇಮಿಂಗ್ ಆ ಶಾರ್ಟ್ ಕಾಂಪೋಸಿಷನ್ ಅದೆಲ್ಲ ನಮ್ಮ ಬ್ರೈನ್ ನಲ್ಲೇ ಮಾಡೋಕೆ ಸಾಧ್ಯ ಆಗೋದು. ಅದೆಲ್ಲ ಇತ್ತು ಅಂತ ಹೇಳಿದ್ರೆ ಶಾರ್ಟ್ ಕಾಂಪೋಸಿಷನ್ ಮಾಡೋ ಬ್ರೈನ್ ಇತ್ತು ಆ ಮೆಂಟಲ್ ಸ್ಕಿಲ್ಸ್ ಇತ್ತು ಆ ಫ್ರೇಮ್ ಸೆಟ್ ಮಾಡೋಕೆ ಅಂತ ಹೇಳಿದ್ರೆ ಅಂತವರ ಹತ್ರ ಹೈ ಎಂಡ್ ಫೋನ್ ಇತ್ತು ಅಂತ ಹೇಳಿದ್ರೆ ಈ ಐಎಸ್ಓ ಅಥವಾ ಶಟರ್ ಸ್ಪೀಡ್ ಅದರ ಬಗ್ಗೆ ಜಾಸ್ತಿ ತಲ ಕೆಡಿಸಿಕೊಳ್ಳದೆ ಅವರು ಚೆನ್ನಾಗಿರೋ ಫೋಟೋಸ್ ತೆಗಿಬಹುದು. ಆದ್ರೆ ಮೂವಿಂಗ್ ಆಬ್ಜೆಕ್ಟ್ಸ್ ದೆಲ್ಲ ತೆಗಿಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments